Psalms · chapter 59 · verse 13
Psalm 59:13 in Kannada
ಕೋಪದಿಂದ ಅವ ರನ್ನು ದಹಿಸಿಬಿಡು, ಅವರು ಇಲ್ಲದಂತೆ ಸಂಹರಿಸು; ಆಗ ದೇವರು ಯಾಕೋಬನಲ್ಲಿ ಭೂಮಿಯ ಕೊನೆ ಗಳವರೆಗೆ ಆಳುವಾತನಾಗಿದ್ದಾನೆಂದು ತಿಳುಕೊಳ್ಳು ವರು. ಸೆಲಾ.
Kopadinda ava rannu dahisibidu, avaru illadante sanharisu; aaga devaru yaakobanalli bhoomiya kone galavarege aaluvaatanaagiddaanendu tilukollu varu. Selaa.
Psalm 59:13 in English
- King James Version (KJV)
- Consume [them] in wrath, consume [them], that they [may] not [be:] and let them know that God ruleth in Jacob unto the ends of the earth. Selah.
- World English Bible (WEB)
- Consume them in wrath. Consume them, and they will be no more. Let them know that God rules in Jacob, to the ends of the earth. Selah.
- American Standard Version (ASV)
- Consume them in wrath, consume them, so that they shall be no more: And let them know that God ruleth in Jacob, Unto the ends of the earth. [Selah
- Bible in Basic English (BBE)
- Put an end to them in your wrath, put an end to them, so that they may not be seen again; let them see that God is ruling in Jacob and to the ends of the earth. (Selah.)
- Darby Translation (DBY)
- Make an end in wrath, make an end, that they may be no more; that they may know that God ruleth in Jacob, unto the ends of the earth. Selah.
- Webster's Bible (WBS)
- Consume [them] in wrath, consume [them] , that they [may] not [be] : and let them know that God ruleth in Jacob to the ends of the earth. Selah.
- Young's Literal Translation (YLT)
- Consume in fury, consume and they are not, And they know that God is ruling in Jacob, To the ends of the earth. Selah.
Read in context
- 11ನನ್ನ ಜನರು ಮರೆತುಬಿಡದ ಹಾಗೆ ಅವರನ್ನು ಕೊಲ್ಲಬೇಡ; ನಿನ್ನ ಪರಾಕ್ರಮದಿಂದ ಅವರನ್ನು ಚದರಿಸಿ, ನಮ್ಮ ಗುರಾಣಿಯಾದ ಓ ಕರ್ತನೇ, ಅವರನ್ನು ಕೆಡವಿಹಾಕು.
- 12ಅವರ ಬಾಯಿಂದ ಬರುವ ಪಾಪಕ್ಕೂ ಅವರ ತುಟಿಗಳ ಮಾತಿಗೂ ಅವರು ನುಡಿಯುವ ಶಾಪಕ್ಕೋಸ್ಕರವೂ ಸುಳ್ಳುಗಳಿಗೋಸ್ಕರವೂ ಅವರ ಅಹಂಕಾರದಲ್ಲಿ ಸಿಕ್ಕಿಬೀಳಲಿ.
- 13ಕೋಪದಿಂದ ಅವ ರನ್ನು ದಹಿಸಿಬಿಡು, ಅವರು ಇಲ್ಲದಂತೆ ಸಂಹರಿಸು; ಆಗ ದೇವರು ಯಾಕೋಬನಲ್ಲಿ ಭೂಮಿಯ ಕೊನೆ ಗಳವರೆಗೆ ಆಳುವಾತನಾಗಿದ್ದಾನೆಂದು ತಿಳುಕೊಳ್ಳು ವರು. ಸೆಲಾ.
- 14ಸಂಜೆಗೆ ಅವರು ಹಿಂತಿರುಗುವರು; ನಾಯಿಯ ಹಾಗೆ ಬೊಗಳುವರು; ಪಟ್ಟಣವನ್ನು ಸುತ್ತು ವರು.
- 15ಅವರು ಊಟಕ್ಕಾಗಿ ಅಲೆದಾಡಲಿ; ತೃಪ್ತಿ ಯಾಗದೆ ಗುಣಗುಟ್ಟಲಿ.
Cross references
- Psalm 83:18 ಕೀರ್ತನೆಗಳು 83:18ನೀನು ಮಾತ್ರ ಯೆಹೋವ ನೆಂಬ ಹೆಸರುಳ್ಳ ನೀನು ಸಮಸ್ತ ಭೂಮಿಯ ಮೇಲೆ ಮಹೋನ್ನತನಾಗಿದ್ದೀ ಎಂದು ತಿಳುಕೊಳ್ಳಲಿ.
- Ezekiel 39:7 ಯೆಹೆಜ್ಕೇಲನು 39:7ಹೀಗೆ ನನ್ನ ಜನರಾದ ಇಸ್ರಾಯೇಲಿನ ಮಧ್ಯದಲ್ಲಿ ನಾನು ನನ್ನ ಪರಿಶುದ್ಧವಾದ ಹೆಸರನ್ನು ವ್ಯಕ್ತಪಡಿಸುತ್ತೇನೆ; ಅವರು ಇನ್ನೆಂದಿಗೂ ನನ್ನ ಪರಿಶುದ್ಧ ಹೆಸರನ್ನು ಅಪವಿತ್ರವಾಗದ ಹಾಗೆ ನಾನು ಮಾಡುತ್ತೇನೆ. ಅನ್ಯಜನರು ಇಸ್ರಾಯೇಲ್ಯರಲ್ಲಿ ಒಬ್ಬ ಪರಿಶುದ್ಧನಾದ ಕರ್ತನು ನಾನೇ ಎಂದು ತಿಳಿಯುವರು.
- Psalm 7:9 ಕೀರ್ತನೆಗಳು 7:9ದುಷ್ಟರ ದುಷ್ಟತನವು ಮುಗಿದು ಹೋಗಲಿ, ಆದರೆ ನೀತಿವಂತನನ್ನು ದೃಢಪಡಿಸು. ನೀತಿಯುಳ್ಳ ದೇವರು ಹೃದಯವನ್ನೂ ಅಂತರಿಂದ್ರಿ ಯಗಳನ್ನೂ ಶೋಧಿಸುತ್ತಾನಲ್ಲಾ.
- Psalm 59:11 ಕೀರ್ತನೆಗಳು 59:11ನನ್ನ ಜನರು ಮರೆತುಬಿಡದ ಹಾಗೆ ಅವರನ್ನು ಕೊಲ್ಲಬೇಡ; ನಿನ್ನ ಪರಾಕ್ರಮದಿಂದ ಅವರನ್ನು ಚದರಿಸಿ, ನಮ್ಮ ಗುರಾಣಿಯಾದ ಓ ಕರ್ತನೇ, ಅವರನ್ನು ಕೆಡವಿಹಾಕು.
- 1 Samuel 17:46–47 1 ಸಮುವೇಲನು 17:46–47ಕರ್ತನು ನಿನ್ನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಡುವನು; ನಾನು ನಿನ್ನನ್ನು ಹೊಡೆದುಬಿಟ್ಟು ನಿನ್ನ ತಲೆಯನ್ನು ತೆಗೆದು ಫಿಲಿಷ್ಟಿಯರ ದಂಡಿನ ಹೆಣಗಳನ್ನು ಈ ದಿನ ಆಕಾಶದ ಪಕ್ಷಿಗಳಿಗೂ ಅಡವಿಯ ಮೃಗಗಳಿಗೂ ಆಹಾರವಾಗಿ ಕೊಡುವೆನು. ಈ ದಿನ ಇಸ್ರಾಯೇಲ್ಯರೊಳಗೆ ದೇವರು ಇದ್ದಾನೆಂದು ಭೂಲೋಕದವರೆಲ್ಲರೂ ತಿಳಿ ಯುವರು. ಕರ್ತನು ಕತ್ತಿಯಿಂದಲೂ ಈಟಿಯಿಂದಲೂ ರಕ್ಷಿಸುವದಿಲ್ಲ ಎಂದು ಈ ಸಭೆಯೆಲ್ಲಾ ತಿಳಿದುಕೊಳ್ಳು ವದು; ಯಾಕಂದರೆ ಯುದ್ಧವು ಕರ್ತನದು; ಆತನು ನಿಮ್ಮನ್ನು ನಮ್ಮ ಕೈಯಲ್ಲಿ ಒಪ್ಪಿಸಿಕೊಡುವನು ಅಂದನು.
- Numbers 14:34–35 ಅರಣ್ಯಕಾಂಡ 14:34–35ನೀವು ಆ ದೇಶವನ್ನು ಪರೀಕ್ಷಿಸಿದ ನಾಲ್ವತ್ತು ದಿವಸಗಳ ಪ್ರಕಾರ ಒಂದು ದಿನಕ್ಕೆ ಒಂದು ವರುಷವಾಗಿ ಈ ಪ್ರಕಾರ ನಾಲ್ವತ್ತು ವರುಷ ನಿಮ್ಮ ಅಪರಾಧಗಳನ್ನು ಹೊತ್ತು ನನ್ನ ವಾಗ್ದಾನವನ್ನು ಭಂಗಪಡಿಸಿದ ಫಲವನ್ನು ನೀವು ಅನುಭವಿಸುವಿರಿ. ಕರ್ತನಾದ ನಾನು ಇದನ್ನು ಮಾತನಾಡಿದ್ದೇನೆ. ನನಗೆ ವಿರೋಧವಾಗಿ ಕೂಡಿ ಕೊಂಡಿರುವ ಈ ಕೆಟ್ಟ ಸಮೂಹಕ್ಕೆಲ್ಲಾ ಇದನ್ನು ನಿಶ್ಚಯವಾಗಿ ಮಾಡುವೆನು. ಈ ಅರಣ್ಯದಲ್ಲಿ ಅವರು ಕ್ಷೀಣವಾಗಿ ಅದರಲ್ಲೇ ಸಾಯುವರು.
- Psalm 135:5–6 ಕೀರ್ತನೆಗಳು 135:5–6ಕರ್ತನು ದೊಡ್ಡವನು; ನಮ್ಮ ಕರ್ತನು ಎಲ್ಲಾ ದೇವರುಗಳಿ ಗಿಂತ ದೊಡ್ಡವನೆಂದು ನಾನು ತಿಳಿದಿದ್ದೇನೆ. ಕರ್ತನು ಆಕಾಶದಲ್ಲಿಯೂ ಭೂಮಿಯಲ್ಲಿಯೂ ಸಮುದ್ರದ ಲ್ಲಿಯೂ ಎಲ್ಲಾ ಅಗಾಧಗಳಲ್ಲಿಯೂ ತಾನು ಅಪೇಕ್ಷಿಸು ವದನ್ನೆಲ್ಲಾ ಮಾಡುತ್ತಾನೆ.
- 1 Kings 18:36–37 1 ಅರಸುಗಳು 18:36–37ಸಾಯಂಕಾಲದ ಬಲಿಯನ್ನು ಅರ್ಪಿಸುವ ವೇಳೆ ಯಲ್ಲಿ ಪ್ರವಾದಿಯಾದ ಎಲೀಯನು ಸವಿಾಪಕ್ಕೆ ಬಂದು--ಅಬ್ರಹಾಮನಿಗೂ ಇಸಾಕನಿಗೂ ಇಸ್ರಾ ಯೇಲಿಗೂ ದೇವರಾದ ಕರ್ತನೇ, ಇಸ್ರಾಯೇಲಿನಲ್ಲಿ ನೀನು ದೇವರೆಂದೂ ನಾನು ನಿನ್ನ ಸೇವಕನೆಂದೂ ನಾನು ಈ ಕಾರ್ಯಗಳನ್ನೆಲ್ಲಾ ನಿನ್ನ ಮಾತಿನ ಹಾಗೆಯೇ ಮಾಡಿದೆನೆಂದೂ ಇಂದು ತಿಳಿಯಲ್ಪಡಲಿ. ನೀನು ದೇವರಾದ ಕರ್ತನೆಂದೂ ನೀನು ಅವರ ಹೃದಯವನ್ನು ಮರಳಿ ತಿರಿಗಿಸುತ್ತಿ ಎಂದೂ ಈ ಜನವು ತಿಳಿಯುವ ಹಾಗೆ ನನಗೆ ಉತ್ತರಕೊಡು, ಓ ಕರ್ತನೇ, ನನಗೆ ಉತ್ತರಕೊಡು ಎಂದು ಬೇಡಿದನು.
- Daniel 4:25 ದಾನಿಯೇಲನು 4:25ಅವರು ನಿನ್ನನ್ನು ಮನುಷ್ಯರೊಳಗಿಂದ ತಳ್ಳಿ ಬಿಡುವರು; ನಿನ್ನ ನಿವಾಸವು ಕಾಡುಮೃಗಗಳ ಸಂಗಡ ಇರುವದು; ನಿನಗೆ ಎತ್ತುಗಳ ಸಂಗಡ ಹುಲ್ಲನ್ನು ಮೇಯಿಸುವರು. ಆಕಾಶದ ಮಂಜಿನಿಂದ ನಿನ್ನನ್ನು ತೇವ ಮಾಡುವರು. ಮಹೋನ್ನತನು ಮನುಷ್ಯರ ರಾಜ್ಯವನ್ನು ಆಳುವನೆಂದೂ ತನ್ನ ಮನಸ್ಸಿಗೆ ಸರಿಬಂದ ವರಿಗೆ ಅದನ್ನು ಕೊಡುತ್ತಾನೆಂದೂ ನೀನು ತಿಳಿಯುವ ವರೆಗೂ ಆ ಏಳು ಕಾಲಗಳು ಕಳೆದು ಹೋಗುವವು.
- Ezekiel 38:23 ಯೆಹೆಜ್ಕೇಲನು 38:23ಹೀಗೆ ನನ್ನೊಂದಿಗೆ ನಾನೇ ಹೆಚ್ಚಿಸಿಕೊಂಡು ಮತ್ತು ನನಗೆ ನಾನೇ ಪರಿಶುದ್ಧಪಡಿಸಿಕೊಂಡು ಅನೇಕ ಜನಾಂಗಗಳ ಕಣ್ಣುಗಳ ಮುಂದೆ ನಾನು ತಿಳಿಯಪಡಿಸಿಕೊಳ್ಳುತ್ತೇನೆ. ಅವರು ನಾನೇ ಕರ್ತನೆಂದು ತಿಳಿದುಕೊಳ್ಳುವರು.
- Deuteronomy 2:14–16 ಧರ್ಮೋಪದೇಶಕಾಂಡ 2:14–16ನಾವು ಕಾದೇಶ್ಬರ್ನೆಯವನ್ನು ಬಿಟ್ಟಂದಿನಿಂದ ಜೆರೆದ್ ಹಳ್ಳ ವನ್ನು ದಾಟಿದ ವರೆಗೆ ಹೋದ ಕಾಲವು ಮೂವ ತ್ತೆಂಟು ವರುಷ; ಕರ್ತನು ಅವರಿಗೆ ಪ್ರಮಾಣಮಾಡಿದ ಪ್ರಕಾರ ಯುದ್ಧಸ್ಥರ ಸಂತತಿ ಎಲ್ಲಾ ಸೈನ್ಯದೊಳಗಿಂದ ಮುಗಿದುಹೋಗುವ ವರೆಗೆ ತಡವಾಯಿತು. ಅವರು ಮುಗಿದುಹೋಗುವ ವರೆಗೆ ಅವರನ್ನು ಸೈನ್ಯದೊಳ ಗಿಂದ ನಿರ್ಮೂಲ ಮಾಡುವದಕ್ಕೆ ಕರ್ತನ ಹಸ್ತವು ಅವರ ಮೇಲಿತ್ತು. ಜನರೊಳಗಿಂದ ಸೈನಿಕರೆಲ್ಲರೂ ಸತ್ತುಹೋದ ನಂತರ
- Psalm 46:10–11 ಕೀರ್ತನೆಗಳು 46:10–11ಶಾಂತ ವಾಗಿರ್ರಿ, ನಾನೇ ದೇವರಾಗಿದ್ದೇನೆಂದು ತಿಳುಕೊಳ್ಳಿರಿ; ಜನಾಂಗಗಳಲ್ಲಿ ಉನ್ನತನಾಗಿರುವೆನು; ಭೂಮಿಯಲ್ಲಿ ನಾನು ಹೆಚ್ಚಿಸಲ್ಪಡುವೆನು.ಸೈನ್ಯಗಳ ಕರ್ತನು ನಮ್ಮ ಸಂಗಡ ಇದ್ದಾನೆ; ಯಾಕೋಬನ ದೇವರು ನಮಗೆ ಆಶ್ರಯವಾಗಿದ್ದಾನೆ. ಸೆಲಾ. ಸೈನ್ಯಗಳ ಕರ್ತನು ನಮ್ಮ ಸಂಗಡ ಇದ್ದಾನೆ; ಯಾಕೋಬನ ದೇವರು ನಮಗೆ ಆಶ್ರಯವಾಗಿದ್ದಾನೆ. ಸೆಲಾ.