Psalms · chapter 60 · verse 9
Psalm 60:9 in Kannada
ಬಲವುಳ್ಳ ಪಟ್ಟಣಕ್ಕೆ ನನ್ನನ್ನು ಕರತರುವವನಾರು? ಎದೋಮಿನೊಳಗೆ ನನ್ನನ್ನು ನಡಿಸುವವನಾರು?
Balavulla pattanakke nannannu karataruvavanaaru? Edominolage nannannu nadisuvavanaaru?
Psalm 60:9 in English
- King James Version (KJV)
- Who will bring me [into] the strong city? who will lead me into Edom?
- World English Bible (WEB)
- Who will bring me into the strong city? Who has led me to Edom?
- American Standard Version (ASV)
- Who will bring me into the strong city? Who hath led me unto Edom?
- Bible in Basic English (BBE)
- Who will take me into the strong town? who will be my guide into Edom?
- Darby Translation (DBY)
- Who will bring me into the strong city? who will lead me unto Edom?
- Webster's Bible (WBS)
- Who will bring me [into] the strong city? who will lead me into Edom?
- Young's Literal Translation (YLT)
- Who doth bring me [to] a city of bulwarks? Who hath led me unto Edom?
Read in context
- 7ಗಿಲ್ಯಾದ್ ಮನಸ್ಸೆ ನನ್ನದು; ಎಫ್ರಾಯಾಮ್ ನನ್ನ ತಲೆಯ ಬಲವಾಗಿದೆ; ಯೆಹೂದನು ನನಗೆ ನ್ಯಾಯ ಕೊಡುವವನು;
- 8ಮೋವಾಬ್ ನನ್ನನ್ನು ತೊಳೆಯುವ ಪಾತ್ರೆಯು; ಎದೋಮಿನ ಮೇಲೆ ನನ್ನ ಕೆರವನ್ನು ಎಸೆಯುವೆನು; ಫಿಲಿಷ್ಟಿಯವೇ, ನನ್ನ ನಿಮಿತ್ತ ಜಯಧ್ವನಿ ಮಾಡು.
- 9ಬಲವುಳ್ಳ ಪಟ್ಟಣಕ್ಕೆ ನನ್ನನ್ನು ಕರತರುವವನಾರು? ಎದೋಮಿನೊಳಗೆ ನನ್ನನ್ನು ನಡಿಸುವವನಾರು?
- 10ಓ ದೇವರೇ, ನಮ್ಮನ್ನು ತಳ್ಳಿಬಿಟ್ಟು ನಮ್ಮ ಸೈನ್ಯಗಳ ಸಂಗಡ ಹೊರಟು ಹೋಗದೆ ಇದ್ದ ದೇವರು ನೀನ ಲ್ಲವೋ?
- 11ಇಕ್ಕಟ್ಟಿನಲ್ಲಿ ನಮಗೆ ಸಹಾಯ ಮಾಡು; ಮನುಷ್ಯನ ಸಹಾಯವು ವ್ಯರ್ಥವಾಗಿದೆ.ದೇವ ರಿಂದ ಪರಾಕ್ರಮ ಕಾರ್ಯಗಳನ್ನು ಮಾಡುವೆವು; ಆತನೇ ನಮ್ಮ ವೈರಿಗಳನ್ನು ತುಳಿದುಬಿಡುವನು.
Cross references
- 2 Samuel 12:26–31 2 ಸಮುವೇಲನು 12:26–31ಯೋವಾಬನು ಅಮ್ಮೋನನ ಮಕ್ಕಳ ರಬ್ಬದ ಮೇಲೆ ಯುದ್ಧಮಾಡಿ ರಾಜ್ಯದ ಪಟ್ಟಣವನ್ನು ಹಿಡಿದನು. ಯೋವಾಬನು ದಾವೀದನಿಗೆ--ನಾನು ರಬ್ಬದ ಮೇಲೆ ಯುದ್ಧಮಾಡಿ ನೀರುಗಳ ಪಟ್ಟಣವನ್ನು ಹಿಡಿದಿದ್ದೇನೆ. ಈಗ ನಾನು ಪಟ್ಟಣವನ್ನು ಹಿಡಿದು ಅದು ನನ್ನ ಹೆಸರಿನಿಂದ ಕರೆಯಲ್ಪಡದ ಹಾಗೆ ನೀನು ಜನರನ್ನು ಕೂಡಿಸಿಕೊಂಡು, ಬಂದು ಪಟ್ಟಣವನ್ನು ಮುತ್ತಿಗೆ ಹಾಕಿ ಹಿಡಿ ಎಂದು ಹೇಳಿ ದೂತರನ್ನು ಕಳುಹಿಸಿದನು. ಹಾಗೆಯೇ ದಾವೀದನು ಜನ ರೆಲ್ಲರನ್ನು ಕೂಡಿಸಿಕೊಂಡು ರಬ್ಬಕ್ಕೆ ಹೋಗಿ ಅದರ ಮೇಲೆ ಯುದ್ಧಮಾಡಿ ಅದನ್ನು ತೆಗೆದುಕೊಂಡನು. ಅದರ ಅರಸನ ತಲೆಯಮೇಲೆ ಇದ್ದ ಕಿರೀಟವನ್ನು ತೆಗೆದುಕೊಂಡನು. ಅದು ಬಂಗಾರದ್ದಾಗಿ ಒಂದು ತಲಾಂತಿನ ತೂಕವಾಗಿತ್ತು; ರತ್ನಗಳಿಂದ ಕೆತ್ತಲ್ಪಟ್ಟಿತ್ತು. ಅದು ದಾವೀದನ ತಲೆಯ ಮೇಲೆ ಇರಿಸಲ್ಪಟ್ಟಿತು. ಇದಲ್ಲದೆ ಅವನು ಆ ಪಟ್ಟಣದಿಂದ ಬಹು ಅಧಿಕವಾಗಿ ಕೊಳ್ಳೆಯನ್ನು ತಂದನು.ಆದರೆ ಅದರಲ್ಲಿದ್ದ ಜನರನ್ನು ಅವನು ಹೊರಗೆ ತಂದು ಅವರನ್ನು ಗರಗಸ ಸಲಿಕೆ ಕೊಡ್ಲಿಯ ಕೆಲಸಕ್ಕೂ ಇಟ್ಟಿಗೆ ಭಟ್ಟಿಯ ಕೆಲಸಕ್ಕೂ ಇಟ್ಟನು. ಈ ಪ್ರಕಾರವೇ ಅಮ್ಮೊನನ ಮಕ್ಕಳ ಎಲ್ಲಾ ಪಟ್ಟಣಗಳಿಗೂ ಮಾಡಿ ದಾವೀದನೂ ಜನರೆಲ್ಲರೂ ಯೆರೂಸಲೇಮಿಗೆ ತಿರಿಗಿ ಬಂದರು. ಆದರೆ ಅದರಲ್ಲಿದ್ದ ಜನರನ್ನು ಅವನು ಹೊರಗೆ ತಂದು ಅವರನ್ನು ಗರಗಸ ಸಲಿಕೆ ಕೊಡ್ಲಿಯ ಕೆಲಸಕ್ಕೂ ಇಟ್ಟಿಗೆ ಭಟ್ಟಿಯ ಕೆಲಸಕ್ಕೂ ಇಟ್ಟನು. ಈ ಪ್ರಕಾರವೇ ಅಮ್ಮೊನನ ಮಕ್ಕಳ ಎಲ್ಲಾ ಪಟ್ಟಣಗಳಿಗೂ ಮಾಡಿ ದಾವೀದನೂ ಜನರೆಲ್ಲರೂ ಯೆರೂಸಲೇಮಿಗೆ ತಿರಿಗಿ ಬಂದರು.
- 2 Samuel 11:1 2 ಸಮುವೇಲನು 11:1ಒಂದು ವರುಷ ಕಳೆದ ತರುವಾಯ ಅರಸುಗಳು ಯುದ್ಧಕ್ಕೆ ಹೊರಡುವಾಗ ದಾವೀದನು ಯೋವಾಬನನ್ನೂ ಅವನ ಸಂಗಡವಿದ್ದ ಅವನ ಸೇವಕರನ್ನೂ ಎಲ್ಲಾ ಇಸ್ರಾಯೇಲ್ಯರನ್ನೂ ಕಳುಹಿಸಿದನು; ಅವರು ಅಮ್ಮೋನನ ಮಕ್ಕಳನ್ನು ಸಂಹ ರಿಸಿ ರಬ್ಬಕ್ಕೆ ಮುತ್ತಿಗೆ ಹಾಕಿದರು. ಆದರೆ ದಾವೀದನು ಇನ್ನೂ ಯೆರೂಸಲೇಮಿನಲ್ಲೇ ಕಾದಿದ್ದನು.
- 1 Chronicles 11:17–19 1 ಪೂರ್ವಕಾಲವೃತ್ತಾಂತ 11:17–19ಆಗ ದಾವೀದನು ಬೇತ್ಲೆಹೇಮಿನ ಬಾಗಲ ಬಳಿಯಲ್ಲಿರುವ ಬಾವಿಯ ನೀರನ್ನು ತನಗೆ ಕುಡಿಯಲು ಕೊಡುವವನಾರೆಂದು ಆಶೆಪಟ್ಟು ಹೇಳಿದನು. ಆಗ ಆ ಮೂವರು ಫಿಲಿಷ್ಟಿಯರ ದಂಡಿನಲ್ಲಿ ನುಗ್ಗಿಹೋಗಿ ಬೇತ್ಲೆಹೇಮಿನ ಬಾಗಲ ಬಳಿಯಲ್ಲಿರುವ ಬಾವಿಯ ನೀರನ್ನು ಸೇದಿ ದಾವೀದನಿಗೆ ತೆಗೆದುಕೊಂಡು ಬಂದರು. ಆದರೆ ದಾವೀದನು ಅದನ್ನು ಕುಡಿಯಲೊಲ್ಲದೆ ಕರ್ತನಿಗೆ ಹೊಯ್ದು--ನನ್ನ ದೇವರು ಇಂಥಾ ಕಾರ್ಯವನ್ನು ನನಗೆ ದೂರವಾಗ ಮಾಡಲಿ; ನಾನು ಈ ಮನುಷ್ಯರ ಪ್ರಾಣ ರಕ್ತವನ್ನು ಕುಡಿಯಬಹುದೇ? ತಮ್ಮ ಪ್ರಾಣ ಗಳಿಂದ ಅದನ್ನು ತಂದರಲ್ಲಾ ಎಂದು ಹೇಳಿ ಕುಡಿಯ ಲೊಲ್ಲದೆ ಇದ್ದನು. ಈ ಕಾರ್ಯಗಳನ್ನು ಮುಖ್ಯಸ್ಥರಾದ ಮೂರು ಮಂದಿ ಪರಾಕ್ರಮಶಾಲಿಗಳು ಮಾಡಿದರು.
- 1 Chronicles 11:6 1 ಪೂರ್ವಕಾಲವೃತ್ತಾಂತ 11:6ಯಾವನಾದರೂ ಮೊದಲು ಯೆಬೂಸಿಯರನ್ನು ಹೊಡೆದರೆ ಅವನೇ ಮುಖ್ಯಸ್ಥ ನಾಗಿಯೂ ಪ್ರಧಾನನಾಗಿಯೂ ಇರುವನೆಂದು ದಾವೀ ದನು ಹೇಳಿದ್ದನು. ಹಾಗೆಯೇ ಚೆರೂಯಳ ಮಗನಾದ ಯೋವಾಬನು ಮೊದಲು ಹೋಗಿ ಮುಖ್ಯಸ್ಥನಾದನು.
- Judges 1:12 ನ್ಯಾಯಸ್ಥಾಪಕರು 1:12ಕಾಲೇಬನು--ಕಿರ್ಯತೆಸೇಫೆರನ್ನು ಹೊಡೆದು ತೆಗೆದುಕೊಳ್ಳುವವನಿಗೆ ನನ್ನ ಕುಮಾರ್ತೆಯಾದ ಅಕ್ಷಾ ಳನ್ನು ಹೆಂಡತಿಯಾಗಿ ಕೊಡುವೆನು ಎಂದು ಹೇಳಿದ್ದನು.
- Judges 1:24–25 ನ್ಯಾಯಸ್ಥಾಪಕರು 1:24–25ಪಾಳತಿಯವರು ಪಟ್ಟಣದೊಳಗಿಂದ ಬರುವ ಒಬ್ಬ ಮನುಷ್ಯನನ್ನು ಕಂಡು ಅವನಿಗೆ--ದಯಮಾಡಿ ಪಟ್ಟಣದಲ್ಲಿ ಪ್ರವೇಶಿಸುವ ಮಾರ್ಗವನ್ನು ನಮಗೆ ತೋರಿಸು; ನಾವು ನಿನಗೆ ಕರುಣೆ ತೋರಿಸುವೆವು ಅಂದರು. ಅವನು ಪಟ್ಟಣದಲ್ಲಿ ಪ್ರವೇಶಿಸುವ ಮಾರ್ಗವನ್ನು ಅವರಿಗೆ ತೋರಿಸಿದಾಗ ಅವರು ಬಂದು ಪಟ್ಟಣವನ್ನು ಕತ್ತಿಯಿಂದ ಹೊಡೆದು ಆ ಮನುಷ್ಯನನ್ನೂ ಅವನ ಸಮಸ್ತ ಕುಟುಂಬವನ್ನೂ ಕಳುಹಿಸಿಬಿಟ್ಟರು.