Psalms · chapter 63 · verse 2
Psalm 63:2 in Kannada
ಹೀಗೆ ನಿನ್ನ ಬಲವನ್ನೂ ಘನವನ್ನೂ ನೋಡಿ ಪರಿಶುದ್ಧ ಸ್ಥಳ ದಲ್ಲಿ ನಾನು ನಿನ್ನನ್ನು ನೋಡಿದ್ದೇನೆ.
Heege ninna balavannoo ghanavannoo nodi parishuddha sthala dalli naanu ninnannu nodiddene.
Psalm 63:2 in English
- King James Version (KJV)
- To see thy power and thy glory, so [as] I have seen thee in the sanctuary.
- World English Bible (WEB)
- So I have seen you in the sanctuary, watching your power and your glory.
- American Standard Version (ASV)
- So have I looked upon thee in the sanctuary, To see thy power and thy glory.
- Bible in Basic English (BBE)
- To see your power and your glory, as I have seen you in the holy place.
- Darby Translation (DBY)
- To see thy power and thy glory, as I have beheld thee in the sanctuary;
- Webster's Bible (WBS)
- To see thy power and thy glory, so [as] I have seen thee in the sanctuary.
- Young's Literal Translation (YLT)
- So in the sanctuary I have seen Thee, To behold Thy strength and Thine honour.
Read in context
- 1ಓ ದೇವರೇ, ನೀನೇ ನನ್ನ ದೇವರು ಹೊತ್ತಾರೆ ನಿನ್ನನ್ನು ಹುಡುಕುತ್ತೇನೆ; ನೀರಿಲ್ಲದೆ ಒಣಗಿದ ಭೂಮಿಯಲ್ಲಿದ್ದವನು ನೀರಿ ಗಾಗಿಯೋ ಎಂಬಂತೆ ನನ್ನ ಆತ್ಮವು ನಿನಗಾಗಿ ಆತುರ ಗೊಳ್ಳುತ್ತದೆ; ಶರೀರವು ಕಂದಿಹೋಗುತ್ತದೆ.
- 2ಹೀಗೆ ನಿನ್ನ ಬಲವನ್ನೂ ಘನವನ್ನೂ ನೋಡಿ ಪರಿಶುದ್ಧ ಸ್ಥಳ ದಲ್ಲಿ ನಾನು ನಿನ್ನನ್ನು ನೋಡಿದ್ದೇನೆ.
- 3ನಿನ್ನ ಪ್ರೀತಿ ಕರುಣೆಯು ಜೀವಕ್ಕಿಂತ ಶ್ರೇಷ್ಠ ವಾದದ್ದು; ನನ್ನ ತುಟಿಗಳು ನಿನ್ನನ್ನು ಹೊಗಳುವವು.
- 4ನನ್ನ ಜೀವಮಾನದಲ್ಲೆಲ್ಲಾ ಹೀಗೆಯೇ ನಿನ್ನನ್ನು ಹಾಡಿಹರಸುತ್ತಾ ನಿನ್ನ ಹೆಸರೆತ್ತಿ ಕೈಮುಗಿಯುವೆನು.
Cross references
- Psalm 27:4 ಕೀರ್ತನೆಗಳು 27:4ಒಂದ ನ್ನೇ ಕರ್ತನಿಂದ ಬಯಸಿದೆನು, ಅದನ್ನೇ ಹುಡುಕುವೆನು; ಕರ್ತನ ರಮ್ಯತೆಯನ್ನು ದೃಷ್ಟಿಸುವದೂ ಆತನ ಮಂದಿರ ದಲ್ಲಿ ವಿಚಾರಿಸುವದೂ ನನ್ನ ಜೀವನದ ದಿನಗಳಲ್ಲೆಲ್ಲಾ ಕರ್ತನ ಆಲಯದಲ್ಲಿ ವಾಸಮಾಡುವದೂ ಆಗಿದೆ.
- Psalm 105:4 ಕೀರ್ತನೆಗಳು 105:4ಕರ್ತನನ್ನೂ ಆತನ ಬಲವನ್ನೂ ಹುಡುಕಿರಿ. ಆತನ ಮುಖ ವನ್ನು ಯಾವಾಗಲೂ ಹುಡುಕಿರಿ.
- Psalm 84:2–11 ಕೀರ್ತನೆಗಳು 84:2–11ಕರ್ತನ ಅಂಗಳ ಗಳಿಗಾಗಿ ನನ್ನ ಪ್ರಾಣವು ಬಯಸಿ, ಹೌದು, ಅದು ಕುಂದುತ್ತದೆ; ನನ್ನ ಹೃದಯವೂ ಶರೀರವೂ ಜೀವ ವುಳ್ಳ ದೇವರಿಗಾಗಿ ಕೂಗಿಕೊಳ್ಳುತ್ತದೆ. ಸೈನ್ಯಗಳ ಓ ಕರ್ತನೇ, ನನ್ನ ಅರಸನೇ, ನನ್ನ ದೇವರೇ, ಹೌದು ಗುಬ್ಬಿಯು ಮನೆಯನ್ನೂ ಬಾನಕ್ಕೀಯು ತನ್ನ ಮರಿಗ ಳನ್ನಿಡುವ ಗೂಡನ್ನೂ ನಿನ್ನ ಬಲಿಪೀಠಗಳ ಬಳಿಯಲ್ಲಿ ಕಂಡುಕೊಂಡವೆ. ನಿನ್ನ ಆಲಯದಲ್ಲಿ ವಾಸವಾಗಿ ರುವವರು ಭಾಗ್ಯವಂತರು; ಇನ್ನೂ ನಿನ್ನನ್ನು ಅವರು ಸ್ತುತಿಸುವರು ಸೆಲಾ. ಯಾರಿಗೆ ನೀನು ಬಲವಾಗಿ ದ್ದೀಯೋ ಆ ಮನುಷ್ಯನು ಭಾಗ್ಯವಂತನು; ಯಾರಲ್ಲಿ ಆತನ ಮಾರ್ಗಗಳು ಇವೆಯೋ ಅವನೇ ಧನ್ಯನು. ಬಾಕಾ ತಗ್ಗನ್ನು ದಾಟುವಾಗ ಅದನ್ನು ಬುಗ್ಗೆಯಾಗಿ ಮಾಡುತ್ತಾರೆ; ಮಳೆಯು ಕೊಳಗಳನ್ನು ತುಂಬುತ್ತದೆ. ಅವರು ಬಲದಿಂದ ಬಲಕ್ಕೆ ಹೋಗಿ, ಚೀಯೋನಿನಲ್ಲಿ ದೇವರ ಮುಂದೆ ಕಾಣಿಸಿಕೊಳ್ಳುತ್ತಾರೆ. ಸೈನ್ಯಗಳ ದೇವರಾದ ಓ ಕರ್ತನೇ, ನನ್ನ ಪ್ರಾರ್ಥನೆ ಯನ್ನು ಕೇಳು; ಯಾಕೋಬನ ಓ ದೇವರೇ, ಕಿವಿ ಗೊಡು ಸೆಲಾ. ನಮ್ಮ ಗುರಾಣಿಯಾಗಿರುವ ಓ ದೇವರೇ, ನೋಡು; ನಿನ್ನ ಅಭಿಷಿಕ್ತನ ಮುಖವನ್ನು ದೃಷ್ಟಿಸು. ಸಾವಿರ ದಿವಸಗಳಿಗಿಂತ ನಿನ್ನ ಅಂಗಳಗ ಳಲ್ಲಿ ಇರುವ ಒಂದು ದಿನವು ಒಳ್ಳೇದಾಗಿದೆ; ದುಷ್ಟರ ಗುಡಾರಗಳಲ್ಲಿ ವಾಸಮಾಡುವದಕ್ಕಿಂತ ನನ್ನ ದೇವರ ಆಲಯದ ಬಾಗಿಲನ್ನು ಕಾಯುವವನಾಗಿರುವದು ನನಗೆ ಒಳ್ಳೆಯದು. ದೇವರಾದ ಕರ್ತನು ಸೂರ್ಯ ನೂ ಗುರಾಣಿಯೂ ಆಗಿದ್ದಾನೆ; ಕರ್ತನು ಕೃಪೆಯನ್ನೂ ಮಹಿಮೆಯನ್ನೂ ಕೊಡುತ್ತಾನೆ; ಸಂಪೂರ್ಣವಾಗಿ ನಡೆದುಕೊಳ್ಳುವವರಿಗೆ ಆತನು ಯಾವ ಒಳ್ಳೇದನ್ನು ಹಿಂದೆಗೆಯುವದಿಲ್ಲ.ಸೈನ್ಯಗಳ ಓ ಕರ್ತನೇ, ನಿನ್ನಲ್ಲಿ ಭರವಸವಿಡುವ ಮನುಷ್ಯನು ಧನ್ಯನು.
- Psalm 96:6 ಕೀರ್ತನೆಗಳು 96:6ಘನವೂ ಪ್ರಭೆಯೂ ಆತನ ಮುಂದೆ ಅವೆ; ಬಲವೂ ಸೌಂದರ್ಯವೂ ಆತನ ಪರಿಶುದ್ಧ ಸ್ಥಳದಲ್ಲಿ ಅವೆ.
- 2 Corinthians 4:4–6 2 ಕೊರಿಂಥದವರಿಗೆ 4:4–6ದೇವರ ಪ್ರತಿರೂಪವಾಗಿರುವ ಕ್ರಿಸ್ತನ ಪ್ರಭಾವವನ್ನು ತೋರಿಸುವ ಮಹಿಮೆಯ ಸುವಾರ್ತೆಯು ಇವರಲ್ಲಿ ಪ್ರಕಾಶಿಸಬಾರದೆಂದು ಈ ಪ್ರಪಂಚದ ದೇವರು ನಂಬಿಕೆಯಿಲ್ಲದವರ ಮನಸ್ಸನ್ನು ಮಂಕುಮಾಡಿದ್ದಾನೆ. ನಮ್ಮನ್ನು ನಾವೇ ಅಲ್ಲ, ಆದರೆ ನಮ್ಮನ್ನು ಯೇಸುವಿನ ನಿಮಿತ್ತ ನಿಮ್ಮ ಸೇವಕರೆಂದು ಕರ್ತನಾದ ಕ್ರಿಸ್ತ ಯೇಸುವನ್ನೇ ಸಾರುತ್ತೇವೆ. ಕತ್ತಲೆ ಯೊಳಗಿಂದ ಬೆಳಕು ಹೊಳೆಯಲಿ ಎಂದು ಆಜ್ಞಾಪಿಸಿದ ದೇವರು ತಾನೇ ಯೇಸು ಕ್ರಿಸ್ತನ ಮುಖದಲ್ಲಿ ತೋರುವ ದೇವಪ್ರಭಾವ ಜ್ಞಾನವೆಂಬ ಪ್ರಕಾಶವನ್ನು ಕೊಡುವದಕ್ಕಾಗಿ ನಮ್ಮ ಹೃದಯಗಳಲ್ಲಿ ಹೊಳೆದನು.
- 1 Chronicles 16:11 1 ಪೂರ್ವಕಾಲವೃತ್ತಾಂತ 16:11ಕರ್ತನನ್ನೂ ಆತನ ಬಲ ವನ್ನೂ ಆಶ್ರಯಿಸಿರಿ. ಆತನ ಮುಖವನ್ನು ಯಾವಾ ಗಲೂ ಹುಡುಕಿರಿ.
- Psalm 145:11 ಕೀರ್ತನೆಗಳು 145:11ನಿನ್ನ ರಾಜ್ಯದ ಘನವನ್ನು ಹೇಳುವರು; ನಿನ್ನ ಪರಾಕ್ರಮವನ್ನು ನುಡಿಯುವರು.
- 1 Samuel 4:21–22 1 ಸಮುವೇಲನು 4:21–22ಆದರೆ ಅವಳು ಅದಕ್ಕೆ ಪ್ರತ್ಯುತ್ತರವಾಗಿ ಅದರ ಮೇಲೆ ಲಕ್ಷ್ಯವಿಡದೆ ದೇವರ ಮಂಜೂಷವು ಶತ್ರುವಶ ವಾಯಿತೆಂದೂ ತನ್ನ ಮಾವನೂ ತನ್ನ ಗಂಡನೂ ಸತ್ತುಹೋದದರಿಂದಲೂ ಮಹಿಮೆಯು ಇಸ್ರಾಯೇ ಲನ್ನು ಬಿಟ್ಟುಹೋಯಿತು ಎಂದು ಹೇಳಿ ಆ ಕೂಸಿಗೆ ಈಕಾಬೋದ್ ಎಂದು ಹೆಸರಿಟ್ಟಳು.ದೇವರ ಮಂಜೂಷವು ಶತ್ರುವಶವಾಗಿ ಹೋದದರಿಂದ ಮಹಿ ಮೆಯು ಇಸ್ರಾಯೇಲ್ಯರನ್ನು ಬಿಟ್ಟುಹೋಯಿತೆಂದು ಹೇಳಿದಳು. ದೇವರ ಮಂಜೂಷವು ಶತ್ರುವಶವಾಗಿ ಹೋದದರಿಂದ ಮಹಿ ಮೆಯು ಇಸ್ರಾಯೇಲ್ಯರನ್ನು ಬಿಟ್ಟುಹೋಯಿತೆಂದು ಹೇಳಿದಳು.
- Exodus 33:18–19 ವಿಮೋಚನಕಾಂಡ 33:18–19ಅವನು--ನಿನ್ನ ಮಹಿಮೆಯನ್ನು ನನಗೆ ತೋರಿಸು ಎಂದು ನಾನು ನಿನ್ನನ್ನು ಬೇಡುತ್ತೇನೆ ಅಂದನು. ಅದಕ್ಕೆ ಆತನು--ನಾನು ನನ್ನ ಸರ್ವೋತ್ತಮತ್ವವನ್ನು ನಿನ್ನೆದುರಿಗೆ ಹಾದು ಹೋಗಗೊಡಿಸಿ ಕರ್ತನ ಹೆಸರನ್ನು ನಿನ್ನ ಮುಂದೆ ಪ್ರಕಟಮಾಡಿ ನಾನು ಯಾರಿಗೆ ಕೃಪೆಯುಳ್ಳವ ನಾಗಿರಬೇಕೋ ಅವರಿಗೆ ಕೃಪೆಯುಳ್ಳವನಾಗಿರುವೆನು; ನಾನು ಯಾರಿಗೆ ಕರುಣೆಯನ್ನು ತೋರಿಸಬೇಕೋ ಅವರಿಗೆ ಕರುಣೆಯನ್ನು ತೋರಿಸುವೆನು ಅಂದನು.
- Psalm 77:13–14 ಕೀರ್ತನೆಗಳು 77:13–14ಓ ದೇವರೇ, ನಿನ್ನ ಮಾರ್ಗವು ಪರಿಶುದ್ಧ ಆಲಯದಲ್ಲಿದೆ; ನಮ್ಮ ದೇವರಂತೆ ದೊಡ್ಡ ದೇವರು ಯಾರು? ಅದ್ಭುತಗಳನ್ನು ನಡಿಸುವ ದೇವರು ನೀನೇ; ನಿನ್ನ ಬಲವನ್ನು ಜನರಲ್ಲಿ ತೋರಿಸಿದ್ದೀ.
- Psalm 134:2 ಕೀರ್ತನೆಗಳು 134:2ನಿಮ್ಮ ಕೈಗಳನ್ನು ಪರಿಶುದ್ಧ ಸ್ಥಳದಲ್ಲಿ ಎತ್ತಿ ಕರ್ತನನ್ನು ಸ್ತುತಿಸಿರಿ.ಆಕಾಶವನ್ನೂ ಭೂಮಿಯನ್ನೂ ಉಂಟು ಮಾಡಿದ ಕರ್ತನು ಚೀಯೋನಿನೊಳಗಿಂದ ನಿನ್ನನ್ನು ಆಶೀರ್ವದಿಸಲಿ.
- Isaiah 60:13 ಯೆಶಾಯ 60:13ಲೆಬನೋ ನಿನ ವೈಭವವು ಸುರಗಿ, ದಿಂಡುಗ, ಹೊನ್ನೆ ಮರಗಳು ಕೂಡ ನನ್ನ ಪರಿಶುದ್ಧ ಸ್ಥಳವನ್ನು ಶೃಂಗರಿಸುವದಕ್ಕೆ ನಿನ್ನ ಬಳಿಗೆ ಬರುವವು; ನನ್ನ ಪಾದಗಳ ಸ್ಥಳವನ್ನು ನಾನು ಗೌರವವುಳ್ಳದ್ದಾಗಿ ಮಾಡುವೆನು.