Psalms · chapter 65 · verse 1
Psalm 65:1 in Kannada
ದೇವರೇ, ಚೀಯೋನಿನಲ್ಲಿ ನಿನಗೋಸ್ಕರ ಸ್ತೋತ್ರವು ಕಾದಿದೆ. ನಿನಗೆ ಅಲ್ಲಿ ಪ್ರಮಾ ಣವು ಸಲ್ಲಿಸಲ್ಪಡುವದು.
Devare, cheeyoninalli ninagoskara stotravu kaadide. Ninage alli pramaa navu sallisalpaduvadu.
Psalm 65:1 in English
- King James Version (KJV)
- To the chief Musician, A Psalm [and] Song of David. Praise waiteth for thee, O God, in Sion: and unto thee shall the vow be performed.
- World English Bible (WEB)
- For the Chief Musician. A Psalm by David. A song. Praise waits for you, God, in Zion. Vows shall be performed to you.
- American Standard Version (ASV)
- For the Chief Musician. A Psalm. A Song of David. Praise waiteth for thee, O God, in Zion; And unto thee shall the vow be performed.
- Bible in Basic English (BBE)
- To the chief music-maker. A Psalm. Of David. A Song. It is right for you, O God, to have praise in Zion: to you let the offering be made.
- Darby Translation (DBY)
- To the chief Musician. A Psalm of David: a Song. Praise waiteth for thee in silence, O God, in Zion; and unto thee shall the vow be performed.
- Webster's Bible (WBS)
- To the chief Musician, A Psalm [and] Song of David. Praise waiteth for thee, O God, in Zion: and to thee shall the vow be performed.
- Young's Literal Translation (YLT)
- To the Overseer. — A Psalm of David. A Song. To Thee, silence — praise, O God, [is] in Zion, And to Thee is a vow completed.
Read in context
- 1ದೇವರೇ, ಚೀಯೋನಿನಲ್ಲಿ ನಿನಗೋಸ್ಕರ ಸ್ತೋತ್ರವು ಕಾದಿದೆ. ನಿನಗೆ ಅಲ್ಲಿ ಪ್ರಮಾ ಣವು ಸಲ್ಲಿಸಲ್ಪಡುವದು.
- 2ಪ್ರಾರ್ಥನೆಯನ್ನು ಕೇಳು ವಾತನೇ, ನಿನ್ನ ಬಳಿಗೆ ಎಲ್ಲಾ ಜನರು ಬರುವರು.
- 3ಅಕ್ರಮಗಳು ನನಗೆ ವಿರೋಧವಾಗಿ ಬಲಗೊಂಡಿವೆ; ನಮ್ಮ ದ್ರೋಹಗಳನ್ನಾದರೋ ನೀನು ತೊಳೆದು ಬಿಡುವಿ.
Cross references
- Psalm 62:1 ಕೀರ್ತನೆಗಳು 62:1ನಿಜವಾಗಿ ನನ್ನ ಪ್ರಾಣವು ದೇವರಿಗಾಗಿ ಕಾಯುತ್ತದೆ; ನನ್ನ ರಕ್ಷಣೆಯು ಆತ ನಿಂದಲೇ.
- Psalm 76:11 ಕೀರ್ತನೆಗಳು 76:11ನಿಮ್ಮ ದೇವರಾದ ಕರ್ತನಿಗೆ ಪ್ರಮಾಣಮಾಡಿ ಸಲ್ಲಿಸಿರಿ; ಆತನ ಸುತ್ತಲಿರುವವ ರೆಲ್ಲರು ಭಯಪಡಿಸುವಾತನಿಗೆ ಕಾಣಿಕೆಗಳನ್ನು ತರಲಿ.ಆತನು ಪ್ರಧಾನರ ಪ್ರಾಣವನ್ನು ತೆಗೆದು ಹಾಕು ತ್ತಾನೆ; ಭೂಮಿಯ ಅರಸುಗಳಿಗೆ ಭಯಂಕರ ನಾಗಿದ್ದಾನೆ.
- Psalm 116:17–18 ಕೀರ್ತನೆಗಳು 116:17–18ನಾನು ನಿನಗೆ ಸ್ತೋತ್ರದ ಬಲಿಯನ್ನು ಅರ್ಪಿಸುವೆನು; ಕರ್ತನ ಹೆಸರನ್ನು ಕರೆಯುವೆನು. ಓ ಯೆರೂಸಲೇಮೇ, ನನ್ನ ಪ್ರಮಾಣಗಳನ್ನು ಆತನ ಜನರೆಲ್ಲರ ಮುಂದೆಯೇ,ಅಂದರೆ ಕರ್ತನ ಆಲ ಯದ ಅಂಗಳಗಳ ಮಧ್ಯದಲ್ಲಿಯೇ ನಿನಗೆ ಸಲ್ಲಿಸು ವೆನು. ಕರ್ತನನ್ನು ಸ್ತುತಿಸಿರಿ.
- Psalm 21:13 ಕೀರ್ತನೆಗಳು 21:13ಕರ್ತನೇ, ನಿನ್ನ ಸ್ವಂತ ಬಲದಿಂದ ನೀನು ಘನ ಹೊಂದಿದವನಾಗು; ಹೀಗೆ ನಾವು ನಿನ್ನ ಪರಾಕ್ರಮ ವನ್ನು ಹಾಡಿ ಕೀರ್ತಿಸುವೆವು.
- 1 Chronicles 25:1–31 1 ಪೂರ್ವಕಾಲವೃತ್ತಾಂತ 25:1–31ಇದಲ್ಲದೆ ದಾವೀದನೂ ಸೈನ್ಯಾಧಿಪತಿಗಳೂ ಆಸಾಫ್ ಹೇಮಾನ್ ಯೆದುತೂನ್ ಇವರ ಕುಮಾರರಲ್ಲಿ ಕಿನ್ನರಿ ವೀಣೆ ತಾಳಗಳಿಂದ ಪ್ರವಾದಿಸಲು ತಕ್ಕವರನ್ನು ಸೇವೆಗೆ ಪ್ರತ್ಯೇಕಿಸಿದರು. ಮತ್ತು ಕೆಲಸದವರ ಲೆಕ್ಕವು ಅವರ ಸೇವೆಯ ಪ್ರಕಾರ ವಾಗಿತ್ತು. ಅವರು ಯಾರಂದರೆ, ಆಸಾಫನ ಕುಮಾರ ರಲ್ಲಿ ಜಕ್ಕೂರನು ಯೋಸೇಫನು ನೆತನ್ಯನು ಅಶರೇ ಲನು; ಇವರು ಆಸಾಫನ ಕುಮಾರರು; ಅರಸ ಆಜ್ಞೆಯ ಪ್ರಕಾರ ಆಸಾಫನ ಕೈಕೆಳಗೆ ಪ್ರವಾದಿಸಿದವರು. ಯೆದುತೂನನ ಕುಮಾರರಲ್ಲಿ ಗೆದಲ್ಯನು, ಚೆರೀಯು, ಯೆಶಾಯನು, ಹಷಬ್ಯನು, ಮತ್ತಿತ್ಯನು ಈ ಆರು ಮಂದಿಯು; ತಮ್ಮ ತಂದೆಯಾದ ಯೆದುತೂನನ ಕೈಕೆಳಗೆ ಕಿನ್ನರಿಗಳಿಂದ ಕರ್ತನನ್ನು ಕೊಂಡಾಡುವದಕ್ಕೂ ಸ್ತುತಿಸುವದಕ್ಕೂ ಪ್ರವಾದಿಸಿದವರು. ಹೆಮಾನನ ಕುಮಾರರಲ್ಲಿ ಬುಕ್ಕೀಯನು, ಮತ್ತನ್ಯನು, ಉಜ್ಜಿಯೇ ಲನು, ಶೆಬೂವೇಲನು, ಯೆರೀಮೋತನು, ಹನನ್ಯನು, ಹನಾನೀಯು, ಎಲೀಯಾತನು, ಗಿದ್ದಲ್ತಿಯು, ರೋಮ ಮ್ತಿಯೆಜರನು, ಯೊಷ್ಬೆಕಾಷನು, ಮಲ್ಲೋತೀಯು, ಹೋತೀರನು, ಮಹಜೀಯೋತನು. ಇವರೆಲ್ಲರು ದೇವರ ಕಾರ್ಯಗಳಲ್ಲಿ ಕೊಂಬು ಊದುವ ಅರಸನ ದರ್ಶಿಯಾದ ಹೆಮಾನನ ಕುಮಾರರು. ದೇವರು ಹೆಮಾನನಿಗೆ ಹದಿನಾಲ್ಕು ಮಂದಿ ಕುಮಾರರನ್ನೂ ಮೂರು ಮಂದಿ ಕುಮಾರ್ತೆಯರನ್ನೂ ಕೊಟ್ಟನು. ಅರಸನು ಆಸಾಫನಿಗೂ ಯೆದುತೂನನಿಗೂ ಹೆಮಾ ನನಿಗೂ ಆಜ್ಞಾಪಿಸಿದ ಪ್ರಕಾರ ಇವರೆಲ್ಲರು ದೇವರ ಮಂದಿರದ ಸೇವೆಗೋಸ್ಕರ ಕರ್ತನ ಮನೆಯಲ್ಲಿ ತಾಳ ವೀಣೆ ಕಿನ್ನರಿಗಳಿಂದ ಹಾಡುವದಕ್ಕೆ ತಮ್ಮ ತಂದೆಯ ಕೈಕೆಳಗೆ ಇದ್ದರು. ಹೀಗೆಯೇ ಅವರ ಲೆಕ್ಕವೂ ಕರ್ತನ ಹಾಡುಗಳಲ್ಲಿ ಬೋಧಿಸಲ್ಪಟ್ಟ ಸಮಸ್ತ ಪ್ರವೀಣರ ಲೆಕ್ಕವೂ, ತಮ್ಮ ಸಹೋದರರ ಸಹಿತವಾಗಿ ಇನ್ನೂರ ಎಂಭತ್ತೆಂಟು ಮಂದಿಯಾಗಿದ್ದರು. ಇದಲ್ಲದೆ ಹಿರಿಯರು ಕಿರಿಯರ ಹಾಗೆಯೂ ಶಿಷ್ಯನು ಬೋಧಕನ ಹಾಗೆಯೂ ವರ್ಗಕ್ಕೆದುರಾಗಿ ವರ್ಗದವರು ಚೀಟುಗಳನ್ನು ಹಾಕಿದರು. ಆಸಾಫನಿ ಗೋಸ್ಕರ ಮೊದಲನೇ ಚೀಟು ಯೋಸೆಫನಿಗೆ ಬಂತು; ಎರಡನೆಯದು ಗೆದಲ್ಯನಿಗೆ, ಅವನೂ ಅವನ ಸಹೋ ದರರೂ ಅವನ ಕುಮಾರರೂ ಹನ್ನೆರಡು ಮಂದಿ; ಮೂರನೆಯದು ಜಕ್ಕೂರನಿಗೆ; ಅವನೂ ಅವನ ಕುಮಾರರೂ ಸಹೋದರರೂ ಹನ್ನೆರಡು ಮಂದಿ, ನಾಲ್ಕನೆಯದು ಇಚ್ರೀಗೆ, ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ; ಐದನೆ ಯದು ನೆತನ್ಯನಿಗೆ, ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ. ಆರನೆ ಯದು ಬುಕ್ಕಿಯನಿಗೆ, ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ; ಏಳನೆ ಯದು ಯೆಸರೇಲನಿಗೆ, ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ; ಎಂಟನೆ ಯದು ಯೆಶಾಯನಿಗೆ ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ; ಒಂಭ ತ್ತನೆಯದು ಮತ್ತನ್ಯನಿಗೆ, ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ; ಹತ್ತನೆಯದು ಶಿವ್ಮೆಾಗೆ, ಅವನೂ ಅವನ ಕುಮಾ ರರೂ ಅವನ ಸಹೋದರರೂ ಹನ್ನೆರಡು ಮಂದಿ; ಹನ್ನೊಂದನೆಯದು ಅಜರೇಲನಿಗೆ, ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ; ಹನ್ನೆರಡನೆಯದು ಹಷಬ್ಯನಿಗೆ; ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ; ಹದಿಮೂರನೆಯದು ಶೂಬಾಯೇಲನಿಗೆ, ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ; ಹದಿನಾಲ್ಕನೆಯದು ಮತ್ತಿತ್ಯನಿಗೆ, ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ; ಹದಿನೈದನೆಯದು ಯೆರೆಮೋತ ನಿಗೆ, ಅವನೂ ಅವನ ಕುಮಾರರೂ ಅವನ ಸಹೋ ದರರೂ ಹನ್ನೆರಡು ಮಂದಿ; ಹದಿನಾರನೆಯದು ಹನನ್ಯನಿಗೆ, ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ; ಹದಿನೇಳನೆ ಯದು ಯೊಷ್ಬೆಕಾಷನಿಗೆ, ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ; ಹದಿ ನೆಂಟನೆಯದು ಹನಾನೀಗೆ, ಅವನೂ ಅವನ ಕುಮಾ ರರೂ ಅವನ ಸಹೋದರರೂ ಹನ್ನೆರಡು ಮಂದಿ; ಹತ್ತೊಂಭತ್ತನೆಯದು ಮಲ್ಲೋತಿಗೆ, ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆ ರಡು ಮಂದಿ; ಇಪ್ಪತ್ತನೆಯದು ಎಲೀಯಾತನಿಗೆ, ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ; ಇಪ್ಪತ್ತೊಂದನೆಯದು ಹೋತೀ ರನಿಗೆ, ಅವನೂ ಅವನ ಕುಮಾರರೂ ಅವನ ಸಹೋ ದರರೂ ಹನ್ನೆರಡು ಮಂದಿ; ಇಪ್ಪತ್ತೆರಡನೆಯದು ಗಿದ್ದಲ್ತಿಗೆ ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ; ಇಪ್ಪತ್ತು ಮೂರನೆಯದು ಮಹಜೀಯೋತನಿಗೆ; ಅವನೂ ಅವನ ಕುಮಾರರೂ ಅವನ ಸಹೋದರರೂ ಹನ್ನೆರಡು ಮಂದಿ;ಇಪ್ಪತ್ತು ನಾಲ್ಕನೆಯದು ರೊಮಮ್ತಿಯೇಜರ ನಿಗೆ, ಅವನೂ ಅವನ ಕುಮಾರರೂ ಅವನ ಸಹೋ ದರರೂ ಹನ್ನೆರಡು ಮಂದಿ. ಇಪ್ಪತ್ತು ನಾಲ್ಕನೆಯದು ರೊಮಮ್ತಿಯೇಜರ ನಿಗೆ, ಅವನೂ ಅವನ ಕುಮಾರರೂ ಅವನ ಸಹೋ ದರರೂ ಹನ್ನೆರಡು ಮಂದಿ.
- Psalm 56:12 ಕೀರ್ತನೆಗಳು 56:12ಓ ದೇವರೇ, ನಿನ್ನ ಪ್ರಮಾಣಗಳು ನನ್ನ ಮೇಲೆ ಇವೆ; ನಾನು ಸ್ತೋತ್ರಗಳನ್ನು ನಿನಗೆ ಸಲ್ಲಿಸುವೆನು.ನನ್ನ ಪ್ರಾಣವನ್ನು ಮರಣದಿಂದ ಬಿಡಿಸಿದ್ದೀ, ಹಾಗೆ ನಾನು ಜೀವಿತರ ಬೆಳಕಿನಲ್ಲಿ ದೇವರ ಮುಂದೆ ನಡೆಯುವ ನನ್ನ ಪಾದಗಳನ್ನು ಬೀಳದಂತೆ ನೀನು ತಪ್ಪಿಸುವದಿಲ್ಲವೋ?
- Psalm 76:2 ಕೀರ್ತನೆಗಳು 76:2ಸಾಲೇಮಿನಲ್ಲಿ ಆತನ ಗುಡಾರವೂ ಚೀಯೋನಿನಲ್ಲಿ ಆತನ ವಾಸಸ್ಥಾನವೂ ಉಂಟು.
- Psalm 78:68–69 ಕೀರ್ತನೆಗಳು 78:68–69ಯೆಹೂದನ ಕುಲವನ್ನೂ ತಾನು ಪ್ರೀತಿ ಮಾಡಿದ ಚೀಯೋನ್ ಪರ್ವತವನ್ನೂ ಆದುಕೊಂಡು, ಉನ್ನತವಾದವುಗಳಂತೆಯೂ ಯುಗಯುಗಕ್ಕೂ ತಾನು ಅಸ್ತಿವಾರ ಹಾಕಿದ ಭೂಮಿಯಂತೆಯೂ ತನ್ನ ಪರಿಶುದ್ಧಾಲಯವನ್ನು ಕಟ್ಟಿದನು
- 1 Chronicles 15:29 1 ಪೂರ್ವಕಾಲವೃತ್ತಾಂತ 15:29ಕರ್ತನ ಒಡಂಬಡಿಕೆಯ ಮಂಜೂ ಷವು ದಾವೀದನ ಪಟ್ಟಣದಲ್ಲಿ ಸೇರಿದಾಗ ಏನಾಯಿ ತಂದರೆ, ಸೌಲನ ಮಗಳಾದ ವಿಾಕಳು ಕುಣಿಯುತ್ತಾ ಆಡುತ್ತಾ ಇರುವ ಅರಸನಾದ ದಾವೀದನನ್ನು ಕಿಟಿಕಿ ಯಿಂದ ನೋಡಿ ತನ್ನ ಹೃದಯದಲ್ಲಿ ಅವನನ್ನು ಹೀನೈಸಿದಳು.
- 1 Chronicles 11:7 1 ಪೂರ್ವಕಾಲವೃತ್ತಾಂತ 11:7ದಾವೀದನು ಕೋಟೆಯೊಳಗೆ ವಾಸಮಾಡಿದನು; ಆದಕಾರಣ ಅದಕ್ಕೆ ದಾವೀದನ ಪಟ್ಟಣವೆಂದು ಹೆಸ ರಿಟ್ಟರು.
- 1 Chronicles 16:41–42 1 ಪೂರ್ವಕಾಲವೃತ್ತಾಂತ 16:41–42ಅವರ ಸಂಗಡ ಆತನ ಕೃಪೆ ಯುಗಯುಗಕ್ಕಿರುವ ಕಾರಣ ಕರ್ತನನ್ನು ಕೊಂಡಾಡುವದಕ್ಕೆ ಹೇಮಾನನೂ ಯೆದುತೂನನೂ ಹೆಸರಿನಿಂದ ಲೆಕ್ಕಿಸಲ್ಪಟ್ಟು ಆಯಲ್ಪಟ್ಟ ಮಿಕ್ಕಾದವರೂ. ಅವರ ಸಂಗಡ ಶಬ್ದ ಮಾಡ ಬೇಕಾದವರಿಗೋಸ್ಕರ ತುತೂರಿಗಳೂ ತಾಳಗಳೂ ದೇವರ ಗೀತ ವಾದ್ಯಗಳೂ ಸಹಿತವಾಗಿ ಹೇಮಾನನೂ ಯೆದುತೂನನೂ, ಮತ್ತು ಯೆದುತೂನನ ಕುಮಾರರು ದ್ವಾರಪಾಲಕರಾಗಿದ್ದರು.ತರುವಾಯ ಜನರೆಲ್ಲರೂ ತಮ್ಮ ತಮ್ಮ ಮನೆಗೆ ಹೋದರು; ದಾವೀದನು ತನ್ನ ಮನೆಯವರನ್ನು ಆಶೀ ರ್ವದಿಸುವದಕ್ಕೆ ಹಿಂತಿರುಗಿದನು.
- Psalm 115:1–2 ಕೀರ್ತನೆಗಳು 115:1–2ನಮಗಲ್ಲ, ಓ ಕರ್ತನೇ, ನಮಗಲ್ಲ, ನಿನ್ನ ಹೆಸರಿಗೆ ಮಾತ್ರ, ನಿನ್ನ ಕರುಣೆಯ ನಿಮಿತ್ತವೂ ನಿನ್ನ ಸತ್ಯದ ನಿಮಿತ್ತವೂ ಘನವುಂಟಾಗಲಿ. ಅವರ ದೇವರು ಎಲ್ಲಿ ಎಂದು ಅನ್ಯ ಜನಾಂಗಗಳು ಯಾಕೆ ಹೇಳಬೇಕು?