Psalms · chapter 66 · verse 2
Psalm 66:2 in Kannada
ಆತನ ಹೆಸರಿನ ಘನವನ್ನು ಕೀರ್ತಿಸಿರಿ; ಆತನ ಸ್ತೋತ್ರವನ್ನು ಘನವುಳ್ಳದ್ದಾಗಿ ಮಾಡಿರಿ.
Aatana hesarina ghanavannu keertisiri; aatana stotravannu ghanavulladdaagi maadiri.
Psalm 66:2 in English
- King James Version (KJV)
- Sing forth the honour of his name: make his praise glorious.
- World English Bible (WEB)
- Sing to the glory of his name! Offer glory and praise!
- American Standard Version (ASV)
- Sing forth the glory of his name: Make his praise glorious.
- Bible in Basic English (BBE)
- Make a song in honour of his name: give praise and glory to him.
- Darby Translation (DBY)
- Sing forth the glory of his name, make his praise glorious;
- Webster's Bible (WBS)
- Sing forth the honor of his name: make his praise glorious.
- Young's Literal Translation (YLT)
- Praise ye the honour of His name, Make ye honourable His praise.
Read in context
- 1ಸಮಸ್ತ ದೇಶಗಳೇ, ದೇವರಿಗೆ ಉತ್ಸಾಹ ಧ್ವನಿಗೈಯಿರಿ;
- 2ಆತನ ಹೆಸರಿನ ಘನವನ್ನು ಕೀರ್ತಿಸಿರಿ; ಆತನ ಸ್ತೋತ್ರವನ್ನು ಘನವುಳ್ಳದ್ದಾಗಿ ಮಾಡಿರಿ.
- 3ದೇವರಿಗೆ--ನಿನ್ನ ಕೆಲಸಗಳಿಂದ ನೀನು ಎಷ್ಟು ಭಯಂಕರನಾಗಿದ್ದೀ ಎಂದು ಹೇಳಿರಿ. ನಿನ್ನ ಮಹಾಬಲದ ನಿಮಿತ್ತ ನಿನ್ನ ಶತ್ರುಗಳು ತಾವೇ ನಿನಗೆ ಅಧೀನರಾಗುವರು;
- 4ಭೂನಿವಾಸಿಗಳೆಲ್ಲ ನಿನ್ನನ್ನು ಹಾಡಿ ಆರಾಧಿಸಿ ನಿನ್ನ ನಾಮವನ್ನು ಕೀರ್ತಿಸುವರು. ಸೆಲಾ.
Cross references
- Psalm 105:2–3 ಕೀರ್ತನೆಗಳು 105:2–3ಆತನಿಗೆ ಹಾಡಿರಿ, ಆತನಿಗೆ ಕೀರ್ತನೆ ಹಾಡಿರಿ; ಆತನ ಅದ್ಭುತ ಕ್ರಿಯೆಗಳ ವಿಷಯವಾಗಿ ಮಾತನಾಡಿರಿ. ಆತನ ಪರಿಶುದ್ಧ ನಾಮದಲ್ಲಿ ಹೊಗಳಿಕೊಳ್ಳಿರಿ; ಕರ್ತನನ್ನು ಹುಡುಕುವವರ ಹೃದಯವು ಸಂತೋಷಿಸಲಿ.
- Revelation 5:13 ಪ್ರಕಟನೆ 5:13ಇದಲ್ಲದೆ ಆಕಾಶ ದಲ್ಲಿಯೂ ಭೂಮಿಯ ಮೇಲೆಯೂ ಭೂಮಿಯ ಕೆಳಗೂ ಸಮುದ್ರದಲ್ಲಿಯೂ ಅವುಗಳಲ್ಲಿರುವ ಎಲ್ಲಾ ಸೃಷ್ಟಿಗಳೂ--ಸಿಂಹಾಸನಾಸೀನನಾಗಿರುವಾತನಿಗೂ ಕುರಿಮರಿಯಾದಾತನಿಗೂ ಸ್ತೋತ್ರಮಾನ ಪ್ರಭಾವ ಬಲವು ಯುಗಯುಗಾಂತರಗಳಲ್ಲಿಯೂ ಇರಲಿ ಎಂದು ಹೇಳುವದನ್ನು ನಾನು ಕೇಳಿದೆನು.ಆಗ ನಾಲ್ಕು ಜೀವಿಗಳು--ಆಮೆನ್ ಅಂದವು; ಇಪ್ಪತ್ತನಾಲ್ಕು ಮಂದಿ ಹಿರಿಯರು ಅಡ್ಡ ಬಿದ್ದು ಯುಗಯುಗಾಂತರಗಳಲ್ಲಿ ಜೀವಿಸುವಾತನನ್ನು ಆರಾಧಿಸಿದರು.
- Isaiah 49:13 ಯೆಶಾಯ 49:13ಆಕಾಶವೇ, ಹರ್ಷಿಸು; ಭೂಮಿಯೇ, ಉಲ್ಲಾಸಪಡು! ಪರ್ವತ ಗಳೇ ಹರ್ಷಧ್ವನಿಗೈಯಿರಿ. ಯಾಕಂದರೆ ಕರ್ತನು ತನ್ನ ಜನರನ್ನು ಆದರಿಸಿ, ಶ್ರಮೆಪಟ್ಟ ತನ್ನವರನ್ನು ಕರುಣಿಸುವನು.
- Isaiah 42:12 ಯೆಶಾಯ 42:12ಅವರು ಕರ್ತನಿಗೆ ಮಹಿಮೆಯನ್ನು ಕೊಡಲಿ ಆತನ ಸ್ತೋತ್ರವನ್ನು ದ್ವೀಪಗಳಲ್ಲಿ ಪ್ರಕಟಿಸಲಿ.
- Nehemiah 9:5 ನೆಹೆಮೀಯ 9:5ಲೇವಿಯರಾದ ಯೇಷೂವನೂ ಕದ್ಮೀಯೇಲನೂ ಬಾನೀಯೂ ಹಷ ಬ್ನೆಯೂ ಶೇರೇಬ್ಯನೂ ಹೋದೀಯನೂ ಶೆಬನ್ಯನೂ ಪೆತಹ್ಯನೂ ಜನರಿಗೆ ಹೇಳಿದ್ದೇನಂದರೆ--ನೀವು ಎದ್ದು ನಿಮ್ಮ ದೇವರಾಗಿರುವ ಕರ್ತನನ್ನು ಎಂದೆಂದಿಗೂ ಸ್ತುತಿಸಿರಿ ಅಂದನು. ಹೀಗೆ ಅವರು--ಸಕಲ ಸ್ತುತಿ ಸ್ತೋತ್ರಗಳಿಗಿಂತ ಉನ್ನತವಾದ ನಿನ್ನ ಘನವುಳ್ಳ ಹೆಸರಿಗೆ ಕೊಂಡಾಟವಾಗಲಿ.
- Psalm 107:22 ಕೀರ್ತನೆಗಳು 107:22ಸ್ತೋತ್ರದ ಬಲಿಗಳನ್ನು ಅರ್ಪಿಸಿ ಆತನ ಕೆಲಸಗಳನ್ನು ಉತ್ಸಾಹ ದಿಂದ ಸಾರಲಿ.
- Isaiah 12:4–6 ಯೆಶಾಯ 12:4–6ನೀವು--ಕರ್ತನನ್ನು ಕೊಂಡಾ ಡಿರಿ; ಜನರ ಮಧ್ಯದಲ್ಲಿ ಆತನ ಹೆಸರನ್ನೆತ್ತಿ ಕ್ರಿಯೆಗ ಳನ್ನು ಪ್ರಕಟಿಸಿರಿ. ಆತನ ನಾಮವನ್ನು ಉನ್ನತೋನ್ನತ ವೆಂದು ಎತ್ತಿ ಹೇಳಿರಿ ಎಂದು ಆ ದಿನದಲ್ಲಿ ಹೇಳುವಿರಿ. ಕರ್ತನಿಗೆ ಹಾಡಿರಿ, ಆತನು ಶ್ರೇಷ್ಠವಾದ ಕಾರ್ಯಗ ಳನ್ನು ಮಾಡಿದ್ದಾನೆ; ಇದು ಭೂಮಂಡಲದಲ್ಲೆಲ್ಲಾ ತಿಳಿದಿರಲಿ.ಚೀಯೋನಿನ ನಿವಾಸಿಗಳೇ, ಆರ್ಭಟಿಸಿ ಹರ್ಷಧ್ವನಿಯನ್ನು ಗೈಯಿರಿ; ಇಸ್ರಾಯೇಲಿನ ಪರಿಶು ದ್ಧನು ನಿನ್ನ ಮಧ್ಯದಲ್ಲಿ ಮಹತ್ವವುಳ್ಳವನಾಗಿದ್ದಾನೆ. ಚೀಯೋನಿನ ನಿವಾಸಿಗಳೇ, ಆರ್ಭಟಿಸಿ ಹರ್ಷಧ್ವನಿಯನ್ನು ಗೈಯಿರಿ; ಇಸ್ರಾಯೇಲಿನ ಪರಿಶು ದ್ಧನು ನಿನ್ನ ಮಧ್ಯದಲ್ಲಿ ಮಹತ್ವವುಳ್ಳವನಾಗಿದ್ದಾನೆ.
- Revelation 4:8–11 ಪ್ರಕಟನೆ 4:8–11ಆ ನಾಲ್ಕು ಜೀವಿಗಳೊಳಗೆ ಒಂದೊಂದಕ್ಕೆ ಆರಾರು ರೆಕ್ಕೆಗಳಿದ್ದವು; ಅವುಗಳಿಗೆ ತುಂಬಾ ಕಣ್ಣುಗಳಿದ್ದವು; ಆ ಜೀವಿಗಳು ಹಗಲಿರುಳು ವಿಶ್ರಮಿಸಿಕೊಳ್ಳದೆ-- ಇದ್ದಾತನು ಇರುವಾತನೂ ಬರುವಾತನೂ ಸರ್ವಶಕ್ತ ನಾಗಿರುವ ದೇವರಾದ ಕರ್ತನು ಪರಿಶುದ್ಧನು ಪರಿ ಶುದ್ಧನು ಪರಿಶುದ್ಧನು ಎಂದು ಹೇ ಯುಗ ಯುಗಾಂತರಗಳಲ್ಲಿಯೂ ಜೀವಿಸುವಾತನಾಗಿ ಸಿಂಹಾ ಸನದ ಮೇಲೆ ಕೂತಿರುವಾತನಿಗೆ ಆ ಜೀವಿಗಳು ಪ್ರಭಾವಮಾನ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದವು. ಆಗ ಆ ಇಪ್ಪತ್ತನಾಲ್ಕು ಮಂದಿ ಹಿರಿಯರು ಸಿಂಹಾಸನದ ಮೇಲೆ ಕೂತಿದ್ದಾತನ ಮುಂದೆ ಅಡ್ಡಬಿದ್ದು ತಮ್ಮ ಕಿರೀಟಗಳನ್ನು ಸಿಂಹಾಸನದ ಮುಂದೆ ಹಾಕಿ ಯುಗಯುಗಾಂತರ ಗಳಲ್ಲಿಯೂ ಜೀವಿಸುವಾತನನ್ನು ಆರಾಧಿಸುತ್ತಾ--ಓ ಕರ್ತನೇ, ನೀನು ಪ್ರಭಾವ ಮಾನಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಯಾಕಂದರೆ ಸಮಸ್ತವನ್ನು ಸೃಷ್ಟಿಸಿದಾತನು ನೀನೇ. ಅವು ನಿನ್ನ ಚಿತ್ತ ದಂತೆ ಉಂಟಾಗಿ ಸೃಷ್ಟಿಸಲ್ಪಟ್ಟವು ಎಂದು ಹೇಳುವರು. ಓ ಕರ್ತನೇ, ನೀನು ಪ್ರಭಾವ ಮಾನಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಯಾಕಂದರೆ ಸಮಸ್ತವನ್ನು ಸೃಷ್ಟಿಸಿದಾತನು ನೀನೇ. ಅವು ನಿನ್ನ ಚಿತ್ತ ದಂತೆ ಉಂಟಾಗಿ ಸೃಷ್ಟಿಸಲ್ಪಟ್ಟವು ಎಂದು ಹೇಳುವರು.
- Psalm 96:3–10 ಕೀರ್ತನೆಗಳು 96:3–10ಅನ್ಯಜನಾಂಗದಲ್ಲಿ ಆತನ ಘನವನ್ನೂ ಎಲ್ಲಾ ಜನಾಂಗಗಳಲ್ಲಿ ಆತನ ಅದ್ಭುತಗಳನ್ನೂ ವಿವ ರಿಸಿರಿ. ಕರ್ತನು ದೊಡ್ಡವನೂ ಬಹಳವಾಗಿ ಸ್ತುತಿಸ ಲ್ಪಡತಕ್ಕವನೂ ಆಗಿದ್ದಾನೆ; ಆತನಿಗೇ ಭಯಪಡ ತಕ್ಕದ್ದು. ಜನಾಂಗಗಳ ದೇವರುಗಳೆಲ್ಲಾ ವಿಗ್ರಹಗಳಾಗಿವೆ; ಆದರೆ ಕರ್ತನು ಆಕಾಶಗಳನ್ನು ನಿರ್ಮಿಸಿ ದನು. ಘನವೂ ಪ್ರಭೆಯೂ ಆತನ ಮುಂದೆ ಅವೆ; ಬಲವೂ ಸೌಂದರ್ಯವೂ ಆತನ ಪರಿಶುದ್ಧ ಸ್ಥಳದಲ್ಲಿ ಅವೆ. ಓ ಜನಾಂಗಗಳೇ, ಕರ್ತನಿಗೆ ನೀವು ಘನವನ್ನೂ ಬಲವನ್ನೂ ಸಲ್ಲಿಸಿರಿ. ಕರ್ತನಿಗೆ, ಆತನ ಹೆಸರಿಗೆ ಸಲ್ಲತಕ್ಕ ಘನವನ್ನು ಸಲ್ಲಿಸಿರಿ; ಕಾಣಿಕೆ ತೆಗೆದುಕೊಂಡು ಆತನ ಅಂಗಳಗಳಿಗೆ ಬನ್ನಿರಿ. ಪರಿಶುದ್ಧತ್ವದ ಸೌಂದರ್ಯದಿಂದ ಕರ್ತನನ್ನು ಆರಾಧಿಸಿರಿ; ಸಮಸ್ತ ಭೂಮಿಯೇ, ಆತನ ಮುಂದೆ ಭಯಪಡು, ಕರ್ತನು ಆಳುತ್ತಾನೆ; ಲೋಕವು ಸ್ಥಿರವಾಗಿದೆ, ಕದಲುವದಿಲ್ಲ. ಆತನು ಜನಗಳಿಗೆ ನೀತಿಯಲ್ಲಿ ನ್ಯಾಯತೀರಿಸುವನೆಂದು ಅನ್ಯಜನಾಂಗಗಳಲ್ಲಿ ಹೇಳಿರಿ.
- 1 Chronicles 29:10–13 1 ಪೂರ್ವಕಾಲವೃತ್ತಾಂತ 29:10–13ಆಗ ದಾವೀದನು ಸಮಸ್ತ ಕೂಟದ ಮುಂದೆ ಕರ್ತನನ್ನು ಕೊಂಡಾಡಿ ಹೇಳಿದ್ದೇನಂದರೆ -- ನಮ್ಮ ತಂದೆ ಯಾದ ಇಸ್ರಾಯೇಲಿನ ದೇವರಾದ ಕರ್ತನೇ, ನೀನು ಯುಗಯುಗಾಂತರಗಳಿಂದ ಯುಗಯುಗಾಂತರ ಗಳಿಗೂ ಸ್ತುತಿಸಲ್ಪಡುವವನಾಗಿದ್ದೀ. ಕರ್ತನೇ, ದೊಡ್ಡಸ್ತಿಕೆಯೂ ಪರಾಕ್ರಮವೂ ಸೌಂದರ್ಯವೂ ಜಯವೂ ಮಹಿಮೆಯೂ ನಿನ್ನದೇ; ಆಕಾಶಗಳಲ್ಲಿಯೂ ಭೂಮಿಯಲ್ಲಿಯೂ ಇರುವದೆಲ್ಲಾ ನಿನ್ನದೇ. ಕರ್ತನೇ, ರಾಜ್ಯವು ನಿನ್ನದು; ನೀನು ಸಮಸ್ತಕ್ಕೂ ತಲೆಯಾಗಿ ಉನ್ನತವಾಗಿದ್ದೀ. ಐಶ್ವರ್ಯವೂ ಘನವೂ ನಿನ್ನ ಬಳಿ ಯಿಂದ ಬರುತ್ತದೆ. ನೀನು ಸಮಸ್ತವನ್ನು ಆಳುವಾತ ನಾಗಿದ್ದೀ. ಶಕ್ತಿಯೂ ಪರಾಕ್ರಮವೂ ನಿನ್ನ ಕೈಯಲ್ಲಿ ಅವೆ. ಎಲ್ಲರಿಗೂ ದೊಡ್ಡಸ್ತಿಕೆಯನ್ನೂ ಬಲವನ್ನೂ ಕೊಡುವದಕ್ಕೆ ನಿನ್ನ ಕೈಯಲ್ಲಿ ಅದೆ. ಆದದರಿಂದ ನಮ್ಮ ದೇವರೇ, ನಾವು ನಿನ್ನನ್ನು ಸ್ತುತಿಸಿ ನಿನ್ನ ಮಹಿಮೆ ಯುಳ್ಳ ನಾಮವನ್ನು ಕೊಂಡಾಡುತ್ತೇವೆ.
- Psalm 106:2 ಕೀರ್ತನೆಗಳು 106:2ಕರ್ತನ ಪರಾಕ್ರಮ ಕ್ರಿಯೆಗಳನ್ನು ಪ್ರಕಟಿಸುವವನಾರು? ಆತನ ಸ್ತೋತ್ರಗಳನ್ನು ಪ್ರಸಿದ್ಧಿ ಪಡಿಸುವವನಾರು?
- Psalm 72:18 ಕೀರ್ತನೆಗಳು 72:18ಒಬ್ಬನೇ ಅದ್ಭುತಗಳನ್ನು ಮಾಡುವ ಇಸ್ರಾಯೇಲಿನ ದೇವರಾಗಿರುವ ಕರ್ತನಾದ ದೇವರಿಗೆ ಸ್ತೋತ್ರವಾಗಲಿ.