Isaiah · chapter 49 · verse 13
Isaiah 49:13 in Kannada
ಆಕಾಶವೇ, ಹರ್ಷಿಸು; ಭೂಮಿಯೇ, ಉಲ್ಲಾಸಪಡು! ಪರ್ವತ ಗಳೇ ಹರ್ಷಧ್ವನಿಗೈಯಿರಿ. ಯಾಕಂದರೆ ಕರ್ತನು ತನ್ನ ಜನರನ್ನು ಆದರಿಸಿ, ಶ್ರಮೆಪಟ್ಟ ತನ್ನವರನ್ನು ಕರುಣಿಸುವನು.
Aakaashave, harshisu; bhoomiye, ullaasapadu! Parvata gale harshadhvanigaiyiri. Yaakandare kartanu tanna janarannu aadarisi, shramepatta tannavarannu karunisuvanu.
Isaiah 49:13 in English
- King James Version (KJV)
- Sing, O heavens; and be joyful, O earth; and break forth into singing, O mountains: for the LORD hath comforted his people, and will have mercy upon his afflicted.
- World English Bible (WEB)
- Sing, heavens, and be joyful, earth! Break out into singing, mountains! For the LORD has comforted his people, and will have compassion on his afflicted.
- American Standard Version (ASV)
- Sing, O heavens; and be joyful, O earth; and break forth into singing, O mountains: for Jehovah hath comforted his people, and will have compassion upon his afflicted.
- Bible in Basic English (BBE)
- Let your voice be loud in song, O heavens; and be glad, O earth; make sounds of joy, O mountains, for the Lord has given comfort to his people, and will have mercy on his crushed ones.
- Darby Translation (DBY)
- Shout, ye heavens; and be joyful, thou earth; and break forth into singing, ye mountains: for Jehovah hath comforted his people, and will have mercy upon his afflicted ones.
- Webster's Bible (WBS)
- Sing, O heavens, and be joyful, O earth; and break forth into singing, O mountains: for the LORD hath comforted his people, and will have mercy upon his afflicted.
- Young's Literal Translation (YLT)
- Sing, O heavens, and joy, O earth, And break forth, O mountains, with singing, For comforted hath Jehovah His people, And His afflicted ones He doth pity.
Read in context
- 11ನನ್ನ ಬೆಟ್ಟ ಗಳನ್ನೆಲ್ಲಾ ಸಮದಾರಿಯನ್ನಾಗಿ ಮಾಡಿ ನನ್ನ ರಾಜ ಮಾರ್ಗಗಳನ್ನು ಉನ್ನತಪಡಿಸುವೆನು.
- 12ಇಗೋ, ಇವರು ದೂರದಿಂದ ಬರುತ್ತಾರೆ. ಇಗೋ, ಇವರು ಬಡಗಣದಿಂದ ಮತ್ತು ಪಡುವಣದಿಂದ, ಇವರು ಸೀನೀಮ್ ದೇಶದಿಂದ ಬರುತ್ತಿದ್ದಾರೆ.
- 13ಆಕಾಶವೇ, ಹರ್ಷಿಸು; ಭೂಮಿಯೇ, ಉಲ್ಲಾಸಪಡು! ಪರ್ವತ ಗಳೇ ಹರ್ಷಧ್ವನಿಗೈಯಿರಿ. ಯಾಕಂದರೆ ಕರ್ತನು ತನ್ನ ಜನರನ್ನು ಆದರಿಸಿ, ಶ್ರಮೆಪಟ್ಟ ತನ್ನವರನ್ನು ಕರುಣಿಸುವನು.
- 14ಆದರೆ ಚೀಯೋನು--ಕರ್ತನು ನನ್ನನ್ನು ತಳ್ಳಿ ಬಿಟ್ಟಿದ್ದಾನೆ ಮತ್ತು ನನ್ನ ಕರ್ತನು ನನ್ನನ್ನು ಮರೆತು ಬಿಟ್ಟಿದ್ದಾನಲ್ಲಾ ಎಂದು ಅಂದುಕೊಂಡಳು.
- 15ತನ್ನ ಗರ್ಭದ ಮಗನ ಮೇಲೆ ಕರುಣಿಸದೆ ಒಬ್ಬ ಹೆಂಗಸು ತನ್ನ ಮೊಲೇ ಕೂಸನ್ನು ಮರೆತಾಳೇ? ಹೌದು, ಅವಳು ಮರೆಯಬಹುದು, ಆದರೂ ನಾನು ನಿನ್ನನ್ನು ಮರೆ ಯುವದಿಲ್ಲ.
Cross references
- Isaiah 44:23 ಯೆಶಾಯ 44:23ಓ ಆಕಾಶಗಳೇ, ಹಾಡಿರಿ; ಕರ್ತನು ತಾನೇ ಅದನ್ನು ಮಾಡಿದ್ದಾನೆ. ಭೂಮಿಯ ಅಧೋಭಾಗವೇ, ಆರ್ಭ ಟಿಸು; ಪರ್ವತಗಳೇ, ಓ ವನವೇ, ಅದರಲ್ಲಿರುವ ಎಲ್ಲಾ ಮರಗಳೇ, ಉತ್ಸಾಹ ಧ್ವನಿಮಾಡಿರಿ; ಯಾಕಂದರೆ ಕರ್ತನು ಯಾಕೋಬನ್ನು ವಿಮೋಚಿಸಿದ್ದಾನೆ. ಇಸ್ರಾ ಯೇಲಿನಲ್ಲಿ ತನ್ನನ್ನು ಮಹಿಮೆಪಡಿಸಿದ್ದಾನೆ.
- Isaiah 51:3 ಯೆಶಾಯ 51:3ಕರ್ತನು ಚೀಯೋನನ್ನು ಆದರಿಸುವನು; ಆತನು ಅದರ ಹಾಳಾದ ಸ್ಥಳಗ ಳನ್ನು ಸುಧಾರಿಸುವನು; ಅದರ ಅರಣ್ಯವನ್ನು ಏದೆನ್ ಹಾಗೆಯೂ ಮರುಭೂಮಿಯನ್ನು ಕರ್ತನ ತೋಟದ ಹಾಗೆಯೂ ಮಾಡುವನು. ಅಲ್ಲಿ ಆನಂದವೂ ಉಲ್ಲಾ ಸವೂ ಉಪಕಾರ ಸ್ತುತಿಯೂ ಇಂಪಾದ ಸ್ವರವೂ ಕಂಡುಬರುವವು.
- Psalm 96:11–13 ಕೀರ್ತನೆಗಳು 96:11–13ಆಕಾಶಗಳು ಸಂತೋಷಿಸಲಿ; ಭೂಮಿಯು ಉಲ್ಲಾಸಪಡಲಿ; ಸಮುದ್ರವೂ ಅದರ ಪರಿಪೂರ್ಣ ತೆಯೂ ಘೋಷಿಸಲಿ. ಹೊಲವೂ ಅದರಲ್ಲಿರುವ ಸಮಸ್ತವೂ ಉತ್ಸಾಹಪಡಲಿ; ಅಡವಿಯ ಮರಗಳೆಲ್ಲಾ ಕರ್ತನ ಮುಂದೆಯೇ ಉತ್ಸಾಹಧ್ವನಿ ಮಾಡಲಿ.ಆತನು ಬರುತ್ತಾನೆ, ಭೂಮಿಗೆ ನ್ಯಾಯತೀರಿಸಲು ಬರುತ್ತಾನೆ; ಲೋಕಕ್ಕೆ ನೀತಿಯಿಂದಲೂ ಜನಗಳಿಗೆ ತನ್ನ ಸತ್ಯದಿಂದಲೂ ನ್ಯಾಯತೀರಿಸುವನು. ಆತನು ಬರುತ್ತಾನೆ, ಭೂಮಿಗೆ ನ್ಯಾಯತೀರಿಸಲು ಬರುತ್ತಾನೆ; ಲೋಕಕ್ಕೆ ನೀತಿಯಿಂದಲೂ ಜನಗಳಿಗೆ ತನ್ನ ಸತ್ಯದಿಂದಲೂ ನ್ಯಾಯತೀರಿಸುವನು.
- Isaiah 52:9 ಯೆಶಾಯ 52:9ಯೆರೂಸಲೇಮಿನ ಹಾಳಾದ ಸ್ಥಳಗಳೇ, ಆನಂದ ಧ್ವನಿಗೈಯಿರಿ ಒಟ್ಟಾಗಿ ಹಾಡಿರಿ; ಯಾಕಂದರೆ ಕರ್ತನು ತನ್ನ ಪ್ರಜೆಗಳನ್ನು ಆದರಿಸಿದ್ದಾನೆ, ಆತನು ಯೆರೂಸ ಲೇಮನ್ನು ವಿಮೋಚಿಸಿದ್ದಾನೆ.
- Luke 2:13–14 ಲೂಕನು 2:13–14ಫಕ್ಕನೆ ಪರಲೋಕ ಸೈನ್ಯದ ಸಮೂಹವು ಆ ದೂತನ ಸಂಗಡ ಇದ್ದು ದೇವರನ್ನು ಕೊಂಡಾಡುತ್ತಾ-- ಮಹೋನ್ನತ ದಲ್ಲಿರುವ ದೇವರಿಗೆ ಮಹಿಮೆ, ಭೂಮಿಯ ಮೇಲೆ ಸಮಾಧಾನ, ಮನುಷ್ಯರ ಕಡೆಗೆ ದಯೆ ಎಂದು ಹೇಳಿದರು.
- Isaiah 40:1–2 ಯೆಶಾಯ 40:1–2ನೀವು ನನ್ನ ಜನರನ್ನು ಸಂತೈಸಿರಿ, ಸಂತೈಸಿರಿ ಎಂದು ನಿಮ್ಮ ದೇವರು ಹೇಳುತ್ತಾನೆ. ಯೆರೂಸಲೇಮಿನ ಸಂಗಡ ನೀವು ಹೃದಯಾಂಗಮ ವಾಗಿ ಮಾತಾಡಿರಿ; ಅದರ ಯುದ್ಧವು ತೀರಿತೆಂದೂ ದೋಷವು ಕ್ಷಮಿಸಲ್ಪಟ್ಟಿದೆ ಎಂದು ಕೂಗಿರಿ; ಅದು ಎಲ್ಲಾ ಪಾಪಗಳಿಗೂ ಕರ್ತನಿಂದ ಎರಡರಷ್ಟು ಹೊಂದಿ ದ್ದಾಯಿತು.
- Isaiah 42:10–11 ಯೆಶಾಯ 42:10–11ಸಮುದ್ರ ಪ್ರಯಾಣಿಕರೇ, ಸಕಲ ಜಲಚರಗಳೇ, ದ್ವೀಪಗಳೇ, ಅದರ ನಿವಾಸಿಗಳೇ, ಕರ್ತನಿಗೆ ಹೊಸ ಹಾಡನ್ನು ಹಾಡಿರಿ. ಭೂಮಿಯ ಕಟ್ಟಕಡೆಯಿಂದ ಆತನಿಗೆ ಸ್ತೋತ್ರ ಮಾಡಿರಿ. ಅರಣ್ಯವು ಅದರ ಪಟ್ಟಣಗಳು ಸ್ವರವೆತ್ತಲಿ; ಕೇದಾರ್ ಊರಿನ ನಿವಾಸಿಗಳು, ಬಂಡೆಯ ಪ್ರದೇಶದ ನಿವಾಸಿಗಳು ಹಾಡಲಿ; ಅವರು ಪರ್ವತದ ತುದಿಯಲ್ಲಿ ಕೂಗಲಿ,
- Isaiah 66:13–14 ಯೆಶಾಯ 66:13–14ಒಬ್ಬ ನನ್ನು ಅವನ ತಾಯಿ ಆದರಿಸುವ ಪ್ರಕಾರವೇ ನಾನು ನಿಮ್ಮನ್ನು ಆದರಿಸುವೆನು; ಯೆರೂಸಲೇಮಿನಲ್ಲಿ ಆದ ರಣೆ ಹೊಂದುವಿರಿ. ನೀವು ಅದನ್ನು ನೋಡುವಾಗ ನಿಮ್ಮ ಹೃದಯವು ಸಂತೋಷಿಸುವದು, ನಿಮ್ಮ ಎಲುಬು ಗಳು ಹಸಿರು ಪಲ್ಯದ ಹಾಗೆ ಚಿಗುರುವವು; ಕರ್ತನ ಕೈ ಆತನ ಸೇವಕನ ಕಡೆಗೂ ಆತನ ರೌದ್ರವು ಆತನ ಶತ್ರುಗಳ ಕಡೆಗೂ ಕಾಣಬರುವದು.
- 2 Thessalonians 2:16–17 2 ಥೆಸಲೊನೀಕದವರಿಗೆ 2:16–17ನಮ್ಮನ್ನು ಪ್ರೀತಿಸಿ ನಮಗೆ ನಿತ್ಯವಾದ ಆದರಣೆಯನ್ನೂ ಉತ್ತಮವಾದ ನಿರೀಕ್ಷೆಯನ್ನೂ ಕೃಪೆಯಿಂದ ಅನುಗ್ರ ಹಿಸಿದ ನಮ ಕರ್ತನಾದ ಯೇಸು ಕ್ರಿಸ್ತನೂ ನಮ್ಮ ತಂದೆಯಾದ ದೇವರೂನಿಮ್ಮ ಹೃದಯಗಳನ್ನು ಸಂತೈಸಿ ಸಕಲ ಸದ್ವಾಕ್ಯದಲ್ಲಿಯೂ ಸತ್ಕಾರ್ಯದಲ್ಲಿಯೂ ದೃಢಪಡಿಸಲಿ. ನಿಮ್ಮ ಹೃದಯಗಳನ್ನು ಸಂತೈಸಿ ಸಕಲ ಸದ್ವಾಕ್ಯದಲ್ಲಿಯೂ ಸತ್ಕಾರ್ಯದಲ್ಲಿಯೂ ದೃಢಪಡಿಸಲಿ.
- Psalm 98:4–9 ಕೀರ್ತನೆಗಳು 98:4–9ಸಮಸ್ತ ಭೂಮಿಯೇ; ಕರ್ತನಿಗೆ ಉತ್ಸಾಹಧ್ವನಿ ಮಾಡಿರಿ, ಗಟ್ಟಿಯಾದ ಧ್ವನಿಯಿಂದ ಸಂತೋಷಿಸಿ ಕೀರ್ತಿಸಿರಿ. ಕರ್ತನಿಗೆ ಕಿನ್ನರಿಯಿಂದ, ಹೌದು, ಕಿನ್ನರಿ ಯಿಂದಲೂ ಕೀರ್ತನೆಯ ಸ್ವರದಿಂದಲೂ ಹಾಡಿರಿ. ತುತೂರಿಗಳಿಂದಲೂ ಹೌದು, ತುತೂರಿಯ ಶಬ್ಧ ದಿಂದಲೂ, ಅರಸನಾದ ಕರ್ತನ ಮುಂದೆ ಜಯಧ್ವನಿ ಮಾಡಿರಿ. ಸಮುದ್ರವೂ ಅದರ ಪರಿಪೂರ್ಣತೆಯೂ ಲೋಕ ವೂ ಅದರ ನಿವಾಸಿಗಳೂ ಘೋಷಿಸಲಿ. ಪ್ರವಾಹ ಗಳು ಕೈತಟ್ಟಲಿ; ಕರ್ತನ ಮುಂದೆ ಬೆಟ್ಟಗಳು ಕೂಡ ಉತ್ಸಾಹ ಧ್ವನಿಮಾಡಲಿ.ಆತನು ಭೂಮಿಗೆ ನ್ಯಾಯ ತೀರಿಸಲು ಬರುತ್ತಾನೆ. ಲೋಕಕ್ಕೆ ನೀತಿಯಿಂದಲೂ ಜನಗಳಿಗೆ ನ್ಯಾಯದಲ್ಲಿಯೂ ತೀರ್ಪು ಕೊಡುವನು. ಆತನು ಭೂಮಿಗೆ ನ್ಯಾಯ ತೀರಿಸಲು ಬರುತ್ತಾನೆ. ಲೋಕಕ್ಕೆ ನೀತಿಯಿಂದಲೂ ಜನಗಳಿಗೆ ನ್ಯಾಯದಲ್ಲಿಯೂ ತೀರ್ಪು ಕೊಡುವನು.
- Isaiah 55:12 ಯೆಶಾಯ 55:12ನೀವು ಆನಂದದೊಡನೆ ಹೋಗುವಿರಿ ಸಮಾಧಾನದಿಂದ ನಡಿಸಲ್ಪಡುವಿರಿ; ಪರ್ವತಗಳು ಮತ್ತು ಗುಡ್ಡಗಳು ನಿಮ್ಮ ಮುಂದೆ ಹರ್ಷಧ್ವನಿಗೈಯುವವು. ಹೊಲದ ಮರಗಳೆಲ್ಲಾ ಚಪ್ಪಾಳೆ ಹೊಡೆಯುವವು.ಮುಳ್ಳಿಗೆ ಬದಲಾಗಿ ಫರ್ (ತುರಾಯಿ) ಮರವು ಮತ್ತು ದತ್ತೂರಿಗೆ ಬದಲಾಗಿ ಸುವಾಸನೆ ಬೀರುವ ಮರವು ಹುಟ್ಟುವವು; ಅದು ಕರ್ತನ ಹೆಸರಿಗಾಗಿ ಮತ್ತು ಶಾಶ್ವತವಾದ ಗುರುತಾಗಿ ಎಂದಿಗೂ ಅಳಿಯದಿರುವದು.
- Isaiah 12:1 ಯೆಶಾಯ 12:1ಆ ದಿನದಲ್ಲಿ ನೀನು ಹೇಳುವದೇನಂದರೆ --ಓ ಕರ್ತನೇ, ನಿನ್ನನ್ನು ಸ್ತುತಿಸು ವೆನು; ನನ್ನ ಮೇಲೆ ನೀನು ಕೋಪಿಸಿದ್ದಾಗ್ಯೂ ನಿನ್ನ ಕೋಪದಿಂದ ತಿರುಗಿಕೊಂಡು ನನ್ನನ್ನು ಆದರಿಸಿದ್ದೀ.