Psalms · chapter 66 · verse 7
Psalm 66:7 in Kannada
ಆತನು ತನ್ನ ಪರಾಕ್ರಮ ದಿಂದ ಎಂದೆಂದಿಗೂ ಆಳುವವನಾಗಿದ್ದಾನೆ; ಆತನ ಕಣ್ಣುಗಳು ಜನಾಂಗಗಳನ್ನು ದೃಷ್ಟಿಸುತ್ತವೆ; ಎದುರು ಬೀಳುವವರು ತಮ್ಮನ್ನು ತಾವೇ ಹೆಚ್ಚಿಸಿಕೊಳ್ಳದೆ ಇರಲಿ. ಸೆಲಾ.
Aatanu tanna paraakrama dinda endendigoo aaluvavanaagiddaane; aatana kannugalu janaangagalannu drushtisuttave; eduru beeluvavaru tammannu taave hechchisikollade irali. Selaa.
Psalm 66:7 in English
- King James Version (KJV)
- He ruleth by his power for ever; his eyes behold the nations: let not the rebellious exalt themselves. Selah.
- World English Bible (WEB)
- He rules by his might forever. His eyes watch the nations. Don’t let the rebellious rise up against him. Selah.
- American Standard Version (ASV)
- He ruleth by his might for ever; His eyes observe the nations: Let not the rebellious exalt themselves. [Selah
- Bible in Basic English (BBE)
- He is ruling in power for ever; his eyes are watching the nations: may his haters have no strength against him. (Selah.)
- Darby Translation (DBY)
- He ruleth by his power for ever; his eyes observe the nations: let not the rebellious exalt themselves. Selah.
- Webster's Bible (WBS)
- He ruleth by his power for ever; his eyes behold the nations: let not the rebellious exalt themselves. Selah.
- Young's Literal Translation (YLT)
- Ruling by His might to the age, His eyes among the nations do watch, The refractory exalt not themselves. Selah.
Read in context
- 5ಬನ್ನಿರಿ, ದೇವರ ಕಾರ್ಯಗಳನ್ನು ನೋಡಿರಿ; ಮನುಷ್ಯರ ಮಕ್ಕಳ ಕಡೆಗೆ ಆತನು ತನ್ನ ಕಾರ್ಯಗಳಲ್ಲಿ ಭಯಂಕರನಾಗಿದ್ದಾನೆ.
- 6ಆತನು ಸಮುದ್ರವನ್ನು ಒಣ ಗಿದ ಭೂಮಿಗೆ ತಿರುಗಿಸಿದನು; ಅವರು ಕಾಲು ನಡಿಗೆ ಯಾಗಿ ಪ್ರವಾಹವನ್ನು ದಾಟಿದರು; ಅಲ್ಲಿ ನಾವು ಆತನಲ್ಲಿ ಸಂತೋಷಿಸಿದೆವು.
- 7ಆತನು ತನ್ನ ಪರಾಕ್ರಮ ದಿಂದ ಎಂದೆಂದಿಗೂ ಆಳುವವನಾಗಿದ್ದಾನೆ; ಆತನ ಕಣ್ಣುಗಳು ಜನಾಂಗಗಳನ್ನು ದೃಷ್ಟಿಸುತ್ತವೆ; ಎದುರು ಬೀಳುವವರು ತಮ್ಮನ್ನು ತಾವೇ ಹೆಚ್ಚಿಸಿಕೊಳ್ಳದೆ ಇರಲಿ. ಸೆಲಾ.
- 8ಓ ಜನರೇ, ನೀವು ದೇವರನ್ನು ಸ್ತುತಿಸಿರಿ; ಆತನ ಸ್ತೊತ್ರದ ಸ್ವರವು ಕೇಳಲ್ಪಡುವಂತೆ ಮಾಡಿರಿ.
- 9ಆತನು ನಮ್ಮ ಪ್ರಾಣವನ್ನು ಜೀವದಲ್ಲಿಟ್ಟು ನಮ್ಮ ಪಾದಗಳನ್ನು ಕದಲುವಂತೆ ಬಿಡಲಿಲ್ಲ.
Cross references
- Psalm 11:4 ಕೀರ್ತನೆಗಳು 11:4ಕರ್ತನು ತನ್ನ ಪರಿಶುದ್ಧ ಮಂದಿರದಲ್ಲಿ ಇದ್ದಾನೆ; ಕರ್ತನ ಸಿಂಹಾಸನವು ಪರಲೋಕದಲ್ಲಿ ಅದೆ; ಆತನ ಕಣ್ಣುಗಳು ದೃಷ್ಟಿಸುತ್ತವೆ; ಆತನ ರೆಪ್ಪೆಗಳು ಮನು ಷ್ಯನ ಮಕ್ಕಳನ್ನು ಶೋಧಿಸುತ್ತವೆ;
- Matthew 28:18 ಮತ್ತಾಯನು 28:18ಯೇಸು ಬಂದು ಅವರೊಂದಿಗೆ ಮಾತ ನಾಡಿ-- ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರ ನನಗೆ ಕೊಡಲ್ಪಟ್ಟಿದೆ;
- 2 Chronicles 16:9 2 ಪೂರ್ವಕಾಲವೃತ್ತಾಂತ 16:9ಕರ್ತನ ಸಮ್ಮುಖದಲ್ಲಿ ಪೂರ್ಣ ಹೃದಯವುಳ್ಳವರ ನಿಮಿತ್ತ ಬಲವನ್ನು ತೋರಿಸುವದಕ್ಕೆ ಆತನ ಕಣ್ಣುಗಳು ಸಮಸ್ತ ಭೂಮಿಯಲ್ಲಿ ಓಡಾಡುತ್ತವೆ. ಈಗ ನೀನು ಬುದ್ಧಿ ಹೀನನಾಗಿ ನಡಕೊಂಡಿದ್ದೀ. ನಿಶ್ಚಯವಾಗಿ ಇಂದಿನಿಂದ ನಿನಗೆ ಯುದ್ಧಗಳು ಉಂಟಾಗಿರುವವು ಅಂದನು.
- Psalm 33:13 ಕೀರ್ತನೆಗಳು 33:13ಕರ್ತನು ಆಕಾಶದಿಂದ ಮನುಷ್ಯರ ಮಕ್ಕಳೆಲ್ಲರನ್ನು ದೃಷ್ಟಿಸಿ ನೋಡುತ್ತಾನೆ.
- Psalm 62:11 ಕೀರ್ತನೆಗಳು 62:11ಅಧಿಕಾರವು ದೇವರದೆಂದು ಆತನು ಒಂದು ಸಾರಿ ಮಾತನಾಡಿದ್ದನ್ನು; ನಾನು ಎರಡು ಸಾರಿ ಕೇಳಿದ್ದೇನೆ; ಶಕ್ತಿಯು ದೇವರಿಗೆ ಸಂಬಂಧಪಟ್ಟದ್ದು.ಓ ಕರ್ತನೇ, ನಿನ್ನಲ್ಲಿ ಕರುಣೆಯುಂಟು; ನೀನು ಪ್ರತಿ ಮನುಷ್ಯನಿಗೆ ಅವನ ಕೆಲಸದ ಪ್ರಕಾರ ಪ್ರತಿಫಲ ಕೊಡುತ್ತೀ.
- Psalm 140:8 ಕೀರ್ತನೆಗಳು 140:8ಓ ಕರ್ತನೇ, ದುಷ್ಟರ ಆಶೆಯನ್ನು ನೆರವೇರಿಸಬೇಡ; ಅವರು ಉನ್ನತಕ್ಕೇರುವ ಹಾಗೆ ಅವರ ಯುಕ್ತಿಯನ್ನು ಪೂರೈಸಬೇಡ ಎಂದು ಹೇಳಿದೆನು ಸೆಲಾ.
- Job 9:4 ಯೋಬನು 9:4ಆತನು ಹೃದಯದಲ್ಲಿ ಜ್ಞಾನಿಯೂ ಬಲದಲ್ಲಿ ಶಕ್ತನೂ ಆಗಿದ್ದಾನೆ; ಆತನಿಗೆ ವಿರೋಧವಾಗಿ ತನ್ನನ್ನು ಕಠಿಣಪಡಿಸಿಕೊಂಡು ವೃದ್ಧಿಯಾಗುವವನು ಯಾರು?
- Daniel 4:35 ದಾನಿಯೇಲನು 4:35ಭೂ ನಿವಾಸಿಗಳೆಲ್ಲರೂ ಏನೂ ಇಲ್ಲದ ಹಾಗೆ ಎಣಿಸಲ್ಪಟ್ಟಿ ದ್ದಾರೆ; ಆತನು ಪರಲೋಕದ ಸೈನ್ಯದಲ್ಲಿಯೂ ಭೂ ನಿವಾಸಿಗಳಲ್ಲಿಯೂ ತನ್ನ ಚಿತ್ತದ ಪ್ರಕಾರವೇ ಮಾಡು ತ್ತಾನೆ. ಯಾರೂ ಆತನ ಹಸ್ತವನ್ನು ಹಿಂತೆಗೆಯಲಾರರು; ನೀನು ಏನು ಮಾಡುತ್ತಿರುವಿ ಎಂದು ಆತನಿಗೆ ಯಾರೂ ಕೇಳಲಾರರು.
- Psalm 75:4–5 ಕೀರ್ತನೆಗಳು 75:4–5ಮೂರ್ಖತನದಿಂದ ವರ್ತಿಸಬೇಡಿರಿ ಎಂದು ಮೂರ್ಖರಿಗೆ ಹೇಳುತ್ತೇನೆ. ಕೊಂಬು ಎತ್ತಬೇಡಿರಿ ಎಂದು ದುಷ್ಟರಿಗೆ ಹೇಳಿದೆನು. ನಿಮ್ಮ ಕೊಂಬನ್ನು ಉನ್ನತಕ್ಕೆ ಎತ್ತಬೇಡಿರಿ; ಬೊಗ್ಗದ ಕುತ್ತಿಗೆಯಿಂದ ಮಾತಾಡಬೇಡಿರಿ.
- Daniel 5:20–28 ದಾನಿಯೇಲನು 5:20–28ಆದರೆ ಯಾವಾಗ ಅವನ ಹೃದಯವು ಹೆಚ್ಚಿಸಲ್ಪಟ್ಟಿತೋ ಆಗ ಅವನ ಮನಸ್ಸು ಗರ್ವದಿಂದ ಕಠಿಣವಾಯಿತು. ಅವನು ತನ್ನ ರಾಜ್ಯದ ಸಿಂಹಾಸನದಿಂದ ಇಳಿಸಲ್ಪಟ್ಟನು. ಅವನ ಘನವನ್ನು ಅವನಿಂದ ತೆಗೆದುಹಾಕಿದರು; ಅವನು ಮನುಷ್ಯರ ಮಕ್ಕಳೊಳಗಿಂದ ತೆಗೆಯಲ್ಪಟ್ಟನು; ಮಹೋನ್ನತನಾದ ದೇವರು ಮನುಷ್ಯರ ರಾಜ್ಯವನ್ನು ಆಳುತ್ತಾನೆಂದೂ ಅವನು ತಿಳಿಯುವ ತನಕ ಬೇಕಾದವರನ್ನು ಅದಕ್ಕೆ ನೇಮಿಸುತ್ತಾನೆಂದೂ ಅವನು ತಿಳಿಯುವಷ್ಟರಲ್ಲಿ ಅವನ ಹೃದಯವು ಮೃಗಗಳ ಹೃದಯದಂತಾಯಿತು, ಅವನ ನಿವಾಸವು ಕಾಡುಕತ್ತೆಗಳ ಸಂಗಡ ಇತ್ತು; ಅವನಿಗೆ ಎತ್ತುಗಳ ಹಾಗೆ ಹುಲ್ಲನ್ನು ಮೇಯಿಸಿದರು; ಅವನ ಶರೀರವು ಆಕಾಶದ ಮಂಜಿನಿಂದ ತೇವವಾಯಿತು. ಅವನ ಮಗನಾದ ಓ ಬೇಲ್ಯಚ್ಚರನೇ--ನೀನು ಇದನ್ನೆಲ್ಲಾ ತಿಳಿದರೂ ನಿನ್ನ ಹೃದಯವನ್ನು ತಗ್ಗಿಸದೆ ಪರಲೋಕದ ಕರ್ತನಿಗೆ ವಿರೋಧವಾಗಿ ನಿನ್ನನ್ನು ಹೆಚ್ಚಿಸಿಕೊಂಡಿರುವಿ; ಆತನ ಆಲಯದ ಪಾತ್ರೆಗಳನ್ನು ನಿನ್ನ ಸನ್ನಿಧಿಗೆ ತಂದರು, ಆಗ ನೀನು, ನಿನ್ನ ಪ್ರಭುಗಳು ಮತ್ತು ಪತ್ನಿ ಉಪಪತ್ನಿಯರ ಸಂಗಡ ಅವುಗಳಲ್ಲಿ ದ್ರಾಕ್ಷಾರಸವನ್ನು ಕುಡಿದು ಬುದ್ಧಿ ಕಣ್ಣು ಕಿವಿಗಳಿಲ್ಲದ ಬೆಳ್ಳಿ ಬಂಗಾರ ಕಂಚು ಕಬ್ಬಿಣ ಮರ ಕಲ್ಲುಗಳ ದೇವರುಗಳನ್ನು ಸ್ತುತಿಸಿದಿ; ಆದರೆ ನಿನ್ನ ಪ್ರಾಣವು ಯಾರ ಕೈಯಲ್ಲಿದೆಯೋ ನಿನ್ನ ಸ್ಥಿತಿಗಳು ಯಾರ ಅಧೀನದಲ್ಲಿವೆಯೋ ಆ ದೇವರನ್ನು ಘನಪಡಿಸಲೇ ಇಲ್ಲ. ಅದಕ್ಕಾಗಿಯೇ ಆತನಿಂದ ಕಳುಹಿಸಲ್ಪಟ್ಟ ಕೈಯ ಭಾಗವು ಬಂದು ಆ ಬರಹವನ್ನು ಬರೆಯಿತು. ಆ ಬರಹವು ಏನಂದರೆ ಮೆನೇ ಮೆನೇ ತೇಕಲ್ ಉಫ ರ್ಸಿನ್, ಇದರ ಅರ್ಥವು ಹೀಗಿದೆ--ಮೆನೇ ಅಂದರೆ ದೇವರು ನಿನ್ನ ಆಳ್ವಿಕೆಯ ಕಾಲವನ್ನು ಲೆಕ್ಕಿಸಿ ಕೊನೆ ಗಾಣಿಸಿದ್ದಾನೆ; ತೇಕೆಲ್ ಅಂದರೆ ನೀನು ತಕ್ಕಡಿಯಲ್ಲಿ ತೂಗಲ್ಪಟ್ಟು ಕಡಿಮೆಯಾಗಿ ಕಂಡುಬಂದಿರುವಿ. ಪೆರೇಸ್ ಅಂದರೆ ನಿನ್ನ ರಾಜ್ಯವು ವಿಭಿನ್ನವಾಗಿ ಮೇದ್ಯಯರಿಗೂ ಪಾರಸೀಯರಿಗೂ ಕೊಡಲ್ಪಟ್ಟಿದೆ ಎಂಬದಾಗಿ ಅರಿಕೆಮಾಡಿದನು.
- Isaiah 37:28–29 ಯೆಶಾಯ 37:28–29ನೀನು ವಾಸಿಸುವದು ಹೊರಗೆ ಹೋಗುವದು, ಒಳಗೆ ಬರುವದು; ನೀನು ನನ್ನ ಮೇಲೆ ರೌದ್ರಾವೇಶನಾಗಿ ರುವದನ್ನೂ ನಾನು ಬಲ್ಲೆನು. ನೀನು ನನಗೆ ವಿರೋಧವಾಗಿ ರೌದ್ರನಾಗಿರುವದೂ ಗೊಂದಲ ದಿಂದಿರುವದೂ ನನ್ನ ಕಿವಿಗೆ ಕೇಳಿಬಂತು. ಆದದರಿಂದ ನಾನು ನಿನ್ನ ಕೊಂಡಿಯನ್ನು ನಿನ್ನ ಮೂಗಿನಲ್ಲಿಯೂ ನನ್ನ ಕಡಿವಾಣವನ್ನು ನಿನ್ನ ತುಟಿಗಳಲ್ಲಿಯೂ ಹಾಕಿ, ನೀನು ಬಂದು ದಾರಿಯಿಂದಲೇ ನಿನ್ನನ್ನು ಹಿಂದಕ್ಕೆ ಎಳೆದುಕೊಂಡು ಹೋಗುವೆನು ಎಂಬದಾಗಿ ಹೇಳಿ ದ್ದಾನೆ.
- Psalm 73:3–12 ಕೀರ್ತನೆಗಳು 73:3–12ದುಷ್ಟರ ಅಭಿವೃದ್ಧಿಯನ್ನು ನೋಡಿದಾಗ ಮೂರ್ಖರ ಮೇಲೆ ಹೊಟ್ಟೇಕಿಚ್ಚು ಪಟ್ಟೆನು. ಅವರ ಮರಣಕ್ಕೆ ಬಂಧನಗಳು ಇಲ್ಲ; ಅವರ ತ್ರಾಣವು ಸ್ಥಿರವಾಗಿದೆ. ಬೇರೆ ಮನುಷ್ಯರಂತೆ ಅವರು ಕಷ್ಟದಲ್ಲಿಲ್ಲ. ಇಲ್ಲವೆ ಬೇರೆ ಮನುಷ್ಯರ ಹಾಗೆ ಅವರಿಗೆ ವ್ಯಾಧಿಯೂ ಇಲ್ಲ; ಆದದರಿಂದ ಗರ್ವವು ಅವರಿಗೆ ಕಂಠಮಾಲೆಯಂತೆ ಅವರನ್ನು ಸುತ್ತಿದೆ, ಬಲಾತ್ಕಾರವು ಅವರನ್ನು ಬಟ್ಟೆಯ ಹಾಗೆ ಮುಚ್ಚುತ್ತದೆ. ಅವರ ಕಣ್ಣುಗಳು ಕೊಬ್ಬಿನಿಂದ ಉಬ್ಬಿಕೊಂಡಿರುತ್ತವೆ; ಅವರ ಹೃದಯವು ಆಶಿಸುವದಕ್ಕಿಂತಲೂ ಹೆಚ್ಚಾಗಿ ಅವರಿಗೆ ಇವೆ. ಅವರು ಕೆಟ್ಟುಹೋದವರು. ಸಂಕಟ ಪಡುವವರ ವಿಷಯ ಕೆಟ್ಟದ್ದಾಗಿಯೂ ಗರ್ವದಿಂದಲೂ ಮಾತನಾಡುತ್ತಾರೆ. ಪರಲೋಕಕ್ಕೆ ವಿರೋಧವಾಗಿ ತಮ್ಮ ಬಾಯನ್ನು ತೆರೆದಿದ್ದಾರೆ; ಭೂಲೋಕದಲ್ಲೆಲ್ಲಾ ಅವರ ಮಾತೇ ನಡೆಯುವದು. ಆದದರಿಂದ ಅವನ ಜನರು ಇಲ್ಲಿಗೆ ತಿರುಗಿ ಕೊಳ್ಳುತ್ತಾರೆ; ಅವರಿಗೆ ಪಾನವು ಯಥೇಚ್ಚವಾಗಿ ದೊರೆಯುತ್ತದೆ. ಅವರು-- ದೇವರು ಹೇಗೆ ಬಲ್ಲನು? ಮಹೋನ್ನತನಲ್ಲಿ ತಿಳುವಳಿಕೆ ಉಂಟೋ ಎಂದು ಅಂದುಕೊಳ್ಳುತ್ತಾರೆ. ಇಗೋ, ಇಹಲೋಕದಲ್ಲಿ ವೃದ್ಧಿಯಾಗುವ ದುಷ್ಟರು ಇವರೇ, ಐಶ್ವರ್ಯದಲ್ಲಿ ಇವರು ಹೆಚ್ಚುತ್ತಾರೆ.