Psalms · chapter 68 · verse 7
Psalm 68:7 in Kannada
ಓ ದೇವರೇ, ನೀನು ನಿನ್ನ ಜನರ ಮುಂದೆ ಹೊರಟು ಕಾಡಿನಲ್ಲಿ ನಡೆದಾಗ, ಸೆಲಾ.
O devare, neenu ninna janara munde horatu kaadinalli nadedaaga, selaa.
Psalm 68:7 in English
- King James Version (KJV)
- O God, when thou wentest forth before thy people, when thou didst march through the wilderness; Selah:
- World English Bible (WEB)
- God, when you went out before your people, when you marched through the wilderness... Selah.
- American Standard Version (ASV)
- O God, when thou wentest forth before thy people, When thou didst march through the wilderness; [Selah
- Bible in Basic English (BBE)
- O God, when you went out before your people, wandering through the waste land; (Selah.)
- Darby Translation (DBY)
- O God, when thou wentest forth before thy people, when thou didst march through the wilderness — (Selah) —
- Webster's Bible (WBS)
- O God, when thou wentest forth before thy people, when thou didst march through the wilderness; Selah:
- Young's Literal Translation (YLT)
- O God, in Thy going forth before Thy people, In Thy stepping through the wilderness, Selah.
Read in context
- 5ದೇವರು ತನ್ನ ಪರಿಶುದ್ಧಸ್ಥಾನದಲ್ಲಿ ದಿಕ್ಕಿಲ್ಲದವರಿಗೆ ತಂದೆಯೂ ವಿಧವೆಯರಿಗೆ ನ್ಯಾಯಾಧಿಪತಿಯೂ ಆಗಿದ್ದಾನೆ.
- 6ದೇವರು ಒಬ್ಬೊಂಟಿಗರನ್ನು ಕುಟುಂಬಸ್ತರನ್ನಾಗಿ ಮಾಡುತ್ತಾನೆ; ಸರಪಣಿಗಳಿಂದ ಬಂಧಿಸಲ್ಪಟ್ಟವರನ್ನು ಹೊರಗೆ ಬರಮಾಡುತ್ತಾನೆ; ಆದರೆ ಎದುರು ಬೀಳು ವವರು ಒಣಭೂಮಿಯಲ್ಲಿ ವಾಸಮಾಡುತ್ತಾರೆ.
- 7ಓ ದೇವರೇ, ನೀನು ನಿನ್ನ ಜನರ ಮುಂದೆ ಹೊರಟು ಕಾಡಿನಲ್ಲಿ ನಡೆದಾಗ, ಸೆಲಾ.
- 8ದೇವರು ಪ್ರತ್ಯಕ್ಷನಾಗಿ ದ್ದಾನೆಂದು ಭೂಮಿಯು ಕಂಪಿಸಿತು; ಮೇಘ ಮಂಡ ಲವು ಮಳೆಗರಿಯಿತು. ಇಸ್ರಾಯೇಲ್ಯರ ದೇವನಾದ ದೇವರು ಪ್ರತ್ಯಕ್ಷನಾಗಿದ್ದಾನೆಂದು ಆ ಸೀನಾಯಿ ಬೆಟ್ಟವು ಕದಲಿತು.
- 9ಓ ದೇವರೇ, ನೀನು ಸಮೃದ್ಧಿಯಾಗಿ ಮಳೆಯನ್ನು ಸುರಿಸಿದಿ; ಇದರಿಂದ ದಣಿದ ನಿನ್ನ ಬಾಧ್ಯ ತೆಯನ್ನು ನೀನು ಸ್ಥಿರಪಡಿಸಿದಿ.
Cross references
- Exodus 13:21 ವಿಮೋಚನಕಾಂಡ 13:21ಇದಲ್ಲದೆ ಅವರು ಹಗಲಿರುಳು ಪ್ರಯಾಣ ಮಾಡುವ ಹಾಗೆ ಕರ್ತನು ಹಗಲಲ್ಲಿ ಅವರಿಗೆ ದಾರಿ ತೋರಿಸುವದಕ್ಕೆ ಮೇಘಸ್ತಂಭದಲ್ಲಿಯೂ ರಾತ್ರಿಯಲ್ಲಿ ಅವರಿಗೆ ಬೆಳಕು ಕೊಡುವದಕ್ಕೆ ಅಗ್ನಿಸ್ತಂಭದಲ್ಲಿಯೂ ಅವರ ಮುಂದೆ ಹೋದನು.ಆತನು ಹಗಲಲ್ಲಿ ಮೇಘಸ್ತಂಭವನ್ನೂ ರಾತ್ರಿಯಲ್ಲಿ ಅಗ್ನಿಸ್ತಂಭವನ್ನೂ ಜನರ ಎದುರಿನಿಂದ ತೆಗೆದು ಬಿಡಲಿಲ್ಲ.
- Judges 5:4 ನ್ಯಾಯಸ್ಥಾಪಕರು 5:4ಕರ್ತನೇ, ನೀನು ಸೇಯಾರಿನಿಂದ ಹೊರಟು ಎದೋ ಮಿನ ಹೊಲದಿಂದ ಮುನ್ನಡೆಯುವಾಗ ಭೂಮಿ ನಡುಗಿತು, ಆಕಾಶವು ಸುರಿಯಿತು; ಮೇಘಗಳು ಸಹ ನೀರು ಸುರಿದವು.
- Judges 4:14 ನ್ಯಾಯಸ್ಥಾಪಕರು 4:14ದೆಬೋರಳು ಬಾರಾಕನಿಗೆ--ನೀನು ಏಳು; ಕರ್ತನು ಸೀಸೆರನನ್ನು ನಿನ್ನ ಕೈಗೆ ಒಪ್ಪಿಸಿಕೊಡುವ ದಿನವು ಇದೇ; ಕರ್ತನು ನಿನ್ನ ಮುಂದೆ ಹೊರಡಲಿಲ್ಲವೋ ಅಂದಳು. ಹೀಗೆ ಬಾರಾಕನು ತನ್ನ ಹಿಂದೆ ಹತ್ತು ಸಾವಿರ ಜನರನ್ನು ತೆಗೆದುಕೊಂಡು ತಾಬೋರ್ ಬೆಟ್ಟ ದಿಂದ ಇಳಿದನು.
- Habakkuk 3:12–13 ಹಬಕ್ಕೂಕ 3:12–13ನೀನು ಸಿಟ್ಟಿನಿಂದ ದೇಶದ ಮೇಲೆ ನಡೆದುಹೋಗಿ ಕೋಪದಿಂದ ಅನ್ಯಜನಾಂಗಗಳನ್ನು ತುಳಿದುಹಾಕಿದ್ದೀ. ನಿನ್ನ ಜನರ ರಕ್ಷಣೆಗೋಸ್ಕರವೂ ನಿನ್ನ ಅಭಿಷಿಕ್ತರ ರಕ್ಷಣೆಗೊಸ್ಕರವೂ ನೀನು ಹೊರಟು ಹೋಗಿ ಕುತ್ತಿಗೆಯ ವರೆಗೂ ಆಸ್ತಿವಾರವನ್ನು ಬರಿದು ಮಾಡಿದ ಹಾಗೆ ದುಷ್ಟರ ಮನೆಯ ತಲೆಯನ್ನು ಗಾಯ ಮಾಡಿಬಿಟ್ಟಿದ್ದೀ. ಸೆಲಾ.
- Deuteronomy 4:34 ಧರ್ಮೋಪದೇಶಕಾಂಡ 4:34ಇಲ್ಲವೆ ನಿಮ್ಮ ದೇವರಾದ ಕರ್ತನು ಐಗುಪ್ತದಲ್ಲಿ ನಿಮ್ಮ ಕಣ್ಣುಗಳ ಮುಂದೆ ನಿಮಗೆ ಮಾಡಿದ್ದೆಲ್ಲಾದರ ಹಾಗೆ ಬೇರೆ ದೇವರು ಹೋಗಿ ಒಂದು ಜನಾಂಗವನ್ನು ಮತ್ತೊಂದು ಜನಾಂಗದ ಮಧ್ಯ ದಿಂದ ಶೋಧನೆಗಳು ಗುರುತುಗಳು ಅದ್ಭುತಗಳು ಇವುಗಳ ಮೂಲಕವಾಗಿಯೂ ಯುದ್ಧದಿಂದಲೂ ಬಲವಾದ ಕೈಯಿಂದಲೂ ಚಾಚಿದ ತೋಳಿನಿಂದಲೂ ಮಹಾಭೀತಿಯಿಂದಲೂ ತಕ್ಕೊಳ್ಳುವದಕ್ಕೆ ಪ್ರಯತ್ನ ಮಾಡಿದನೋ?
- Psalm 114:1–8 ಕೀರ್ತನೆಗಳು 114:1–8ಇಸ್ರಾಯೇಲನು ಐಗುಪ್ತದೊಳಗಿಂದಲೂ ಯಾಕೋಬನ ಮನೆ ತನವು ಅನ್ಯಭಾಷೆಯುಳ್ಳ ಜನರೊಳಗಿಂದಲೂ ಹೊರಟಾಗ ಯೆಹೂದನು ಆತನ ಪರಿಶುದ್ಧ ಸ್ಥಳವೂ ಇಸ್ರಾಯೇಲನು ಆತನ ದೊರೆತನವೂ ಆಗಿದ್ದರು. ಸಮುದ್ರವು ನೋಡಿ ಓಡಿಹೋಯಿತು; ಯೊರ್ದನ್ ಹಿಂತಿರುಗಿತು. ಬೆಟ್ಟಗಳು ಟಗರುಗಳ ಹಾಗೆಯೂ ಗುಡ್ಡಗಳು ಕುರಿಮರಿಗಳ ಹಾಗೆಯೂ ಹಾರಾಡಿದವು. ಸಮುದ್ರವೇ, ನಿನಗೆ ಏನಾಯಿತು? ಯಾಕೆ ಓಡಿ ಹೋಗುತ್ತೀ? ಯೊರ್ದನೇ, ಯಾಕೆ ಹಿಂದಿರುಗುತ್ತೀ? ಬೆಟ್ಟಗಳೇ, ಟಗರುಗಳ ಹಾಗೆಯೂ ಚಿಕ್ಕ ಗುಡ್ಡಗಳೇ, ನೀವು ಕುರಿಮರಿಗಳ ಹಾಗೆಯೂ ಹಾರಾಡುವದು ಯಾಕೆ? ಬಂಡೆಯನ್ನು ನೀರಿನ ಕೆರೆಗೂ ಬೆಣಚು ಕಲ್ಲನ್ನು ನೀರಿನ ಬುಗ್ಗೆಗೂ ಮಾರ್ಪಡಿಸುವಕರ್ತನ ಸನ್ನಿಧಿ ಯಲ್ಲಿಯೂ ಯಾಕೋಬನ ದೇವರ ಮುಂದೆಯೂ ಭೂಮಿಯೇ, ನಡುಗು. ಕರ್ತನ ಸನ್ನಿಧಿ ಯಲ್ಲಿಯೂ ಯಾಕೋಬನ ದೇವರ ಮುಂದೆಯೂ ಭೂಮಿಯೇ, ನಡುಗು.
- Micah 2:13 ಮೀಕ 2:13ಒಡೆಯುವವನು ಅವರ ಮುಂದೆ ಬಂದಿದ್ದಾನೆ; ಅವರು ಬಾಗಲನ್ನು ಒಡೆದು ಅದರಿಂದ ಹಾದುಹೋಗಿದ್ದಾರೆ; ಅವರ ಅರಸನು ಅವರ ಮುಂದೆ ಹಾದುಹೋಗುತ್ತಾನೆ; ಕರ್ತನು ಅವರಿಗೆ ಮುಂದಾಗಿರುವನು.