Psalms · chapter 68 · verse 6
Psalm 68:6 in Kannada
ದೇವರು ಒಬ್ಬೊಂಟಿಗರನ್ನು ಕುಟುಂಬಸ್ತರನ್ನಾಗಿ ಮಾಡುತ್ತಾನೆ; ಸರಪಣಿಗಳಿಂದ ಬಂಧಿಸಲ್ಪಟ್ಟವರನ್ನು ಹೊರಗೆ ಬರಮಾಡುತ್ತಾನೆ; ಆದರೆ ಎದುರು ಬೀಳು ವವರು ಒಣಭೂಮಿಯಲ್ಲಿ ವಾಸಮಾಡುತ್ತಾರೆ.
Devaru obbontigarannu kutumbastarannaagi maaduttaane; sarapanigalinda bandhisalpattavarannu horage baramaaduttaane; aadare eduru beelu vavaru onabhoomiyalli vaasamaaduttaare.
Psalm 68:6 in English
- King James Version (KJV)
- God setteth the solitary in families: he bringeth out those which are bound with chains: but the rebellious dwell in a dry [land].
- World English Bible (WEB)
- God sets the lonely in families. He brings out the prisoners with singing, but the rebellious dwell in a sun-scorched land.
- American Standard Version (ASV)
- God setteth the solitary in families: He bringeth out the prisoners into prosperity; But the rebellious dwell in a parched land.
- Bible in Basic English (BBE)
- Those who are without friends, God puts in families; he makes free those who are in chains; but those who are turned away from him are given a dry land.
- Darby Translation (DBY)
- God maketh the solitary into families; those that were bound he bringeth out into prosperity: but the rebellious dwell in a parched [land].
- Webster's Bible (WBS)
- God setteth the solitary in families: he bringeth out those who are bound with chains: but the rebellious dwell in a dry [land] .
- Young's Literal Translation (YLT)
- God — causing the lonely to dwell at home, Bringing out bound ones into prosperity, Only — the refractory have inhabited a dry place.
Read in context
- 4ದೇವರಿಗೆ ಹಾಡಿರಿ; ಆತನ ನಾಮಕ್ಕೆ ಸ್ತುತಿಗಳನ್ನು ಹಾಡಿರಿ; ಆಕಾಶಗಳ ಮೇಲೆ ಯಾಹು ಎಂಬ ತನ್ನ ಹೆಸರಿನ ಮೇಲೆ ಸವಾರಿಮಾಡುವಾತನನ್ನು ಕೊಂಡಾಡಿ ಆತನ ಮುಂದೆ ಉತ್ಸಾಹಪಡಿರಿ.
- 5ದೇವರು ತನ್ನ ಪರಿಶುದ್ಧಸ್ಥಾನದಲ್ಲಿ ದಿಕ್ಕಿಲ್ಲದವರಿಗೆ ತಂದೆಯೂ ವಿಧವೆಯರಿಗೆ ನ್ಯಾಯಾಧಿಪತಿಯೂ ಆಗಿದ್ದಾನೆ.
- 6ದೇವರು ಒಬ್ಬೊಂಟಿಗರನ್ನು ಕುಟುಂಬಸ್ತರನ್ನಾಗಿ ಮಾಡುತ್ತಾನೆ; ಸರಪಣಿಗಳಿಂದ ಬಂಧಿಸಲ್ಪಟ್ಟವರನ್ನು ಹೊರಗೆ ಬರಮಾಡುತ್ತಾನೆ; ಆದರೆ ಎದುರು ಬೀಳು ವವರು ಒಣಭೂಮಿಯಲ್ಲಿ ವಾಸಮಾಡುತ್ತಾರೆ.
- 7ಓ ದೇವರೇ, ನೀನು ನಿನ್ನ ಜನರ ಮುಂದೆ ಹೊರಟು ಕಾಡಿನಲ್ಲಿ ನಡೆದಾಗ, ಸೆಲಾ.
- 8ದೇವರು ಪ್ರತ್ಯಕ್ಷನಾಗಿ ದ್ದಾನೆಂದು ಭೂಮಿಯು ಕಂಪಿಸಿತು; ಮೇಘ ಮಂಡ ಲವು ಮಳೆಗರಿಯಿತು. ಇಸ್ರಾಯೇಲ್ಯರ ದೇವನಾದ ದೇವರು ಪ್ರತ್ಯಕ್ಷನಾಗಿದ್ದಾನೆಂದು ಆ ಸೀನಾಯಿ ಬೆಟ್ಟವು ಕದಲಿತು.
Cross references
- Psalm 113:9 ಕೀರ್ತನೆಗಳು 113:9ಬಂಜೆಯಾದವಳನ್ನು ಮಕ್ಕಳ ಸಂತೋಷ ವುಳ್ಳ ತಾಯಿಯಾಗಿ ಮನೆಯಲ್ಲಿ ನಿವಾಸಿಸುವಂತೆ ಮಾಡುತ್ತಾನೆ ಕರ್ತನನ್ನು ಸ್ತುತಿಸಿರಿ.
- Psalm 69:33 ಕೀರ್ತನೆಗಳು 69:33ಕರ್ತನು ಬಡವರನ್ನು ಲಾಲಿಸಿ ತನ್ನ ಸೆರೆಯವರನ್ನು ತಿರಸ್ಕರಿಸುವದಿಲ್ಲ.
- Psalm 107:10 ಕೀರ್ತನೆಗಳು 107:10ಕತ್ತಲಲ್ಲಿ ಮತ್ತು ಮರಣದ ನೆರಳಿ ನಲ್ಲಿ ಕೂತವರೂ ದೀನತೆಯಲ್ಲಿಯೂ ಕಬ್ಬಿಣದ ಬೇಡಿ ಯಲ್ಲಿ ಬಂಧಿತರೂ ಸೆರೆಬಿದ್ದವರೂ ಆದ ಇವರು
- Isaiah 61:1 ಯೆಶಾಯ 61:1ದೇವರಾದ ಕರ್ತನ ಆತ್ಮವು ನನ್ನ ಮೇಲೆ ಅದೆ; ದೀನರಿಗೆ ಶುಭಸಮಾಚಾರವನ್ನು ಸಾರುವದಕ್ಕೆ ಕರ್ತನು ನನ್ನನ್ನು ಅಭಿಷೇಕಿಸಿದ್ದಾನೆ; ಮುರಿದ ಹೃದಯವುಳ್ಳವರನ್ನು ಕಟ್ಟುವದಕ್ಕೂ ಸೆರೆಯವರಿಗೆ ಬಿಡುಗಡೆಯನ್ನು ಬಂಧಿಸಲ್ಪಟ್ಟವರಿಗೆ ಸೆರೆಮನೆಯ ಕದ ತೆರೆಯುವದನ್ನು ಪ್ರಸಿದ್ಧಿ ಮಾಡುವದಕ್ಕೂ
- Psalm 107:14 ಕೀರ್ತನೆಗಳು 107:14ಕತ್ತಲೆಯೊಳಗಿಂದಲೂ ಮರಣದ ನೆರಳಿನಿಂದಲೂ ಅವರನ್ನು ಹೊರಗೆ ತಂದು ಅವರ ಬಂಧನಗಳನ್ನು ಮುರಿದುಬಿಟ್ಟನು.
- Psalm 146:7 ಕೀರ್ತನೆಗಳು 146:7ಹಿಂಸೆಗೆ ಗುರಿಯಾದವರ ನ್ಯಾಯವನ್ನು ಸ್ಥಾಪಿಸುವವನೂ ಹಸಿ ದವರಿಗೆ ಆಹಾರ ಕೊಡುವವನೂ ಆತನೇ.
- Psalm 107:40–41 ಕೀರ್ತನೆಗಳು 107:40–41ಆತನು ಅಧಿಪತಿಗಳ ಮೇಲೆ ತಿರಸ್ಕಾರವನ್ನು ಹೊಯಿದು ಅವ ರನ್ನು ದಾರಿ ಇಲ್ಲದ ಕಾಡಿನಲ್ಲಿ ಅಲೆಯ ಮಾಡುತ್ತಾನೆ. ಆದಾಗ್ಯೂ ಆತನು ಬಡವನನ್ನು ಸಂಕಟದಿಂದ ಉನ್ನತಕ್ಕೇರಿಸಿ ಅವನ ಕುಟುಂಬಗಳನ್ನು ಮಂದೆಯ ಹಾಗೆ ಇರಿಸುತ್ತಾನೆ.
- Galatians 4:27 ಗಲಾತ್ಯದವರಿಗೆ 4:27ಯಾಕಂದರೆ--ಬಂಜೆಯೇ, ಹೆರದವಳೇ, ಸಂತೋಷಿಸು; ಪ್ರಸವ ವೇದನೆ ಪಡದವಳೇ, ಸ್ವರವೆತ್ತಿ ಕೂಗು; ಯಾಕಂದರೆ ಗಂಡನುಳ್ಳವಳಿಗಿಂತ ಬಿಡಲ್ಪಟ್ಟವಳಿಗೆ ಎಷ್ಟೋ ಹೆಚ್ಚು ಮಕ್ಕಳಿದ್ದಾರೆಂದು ಬರೆದದೆ.
- 1 Samuel 2:5 1 ಸಮುವೇಲನು 2:5ತೃಪ್ತಿಪಟ್ಟವರು ರೊಟ್ಟಿಗೋಸ್ಕರ ಕೂಲಿ ಕೆಲಸಕ್ಕೆ ಹೋಗುತ್ತಾರೆ; ಹಸಿದವರು ತಿಂದು ತೃಪ್ತರಾದರು; ಬಂಜೆಯಾದವಳು ಏಳು ಮಂದಿ ಮಕ್ಕಳನ್ನು ಹೆತ್ತಳು, ಅನೇಕ ಮಂದಿ ಮಕ್ಕಳನ್ನು ಹೆತ್ತವಳು ಬಲಹೀನ ಳಾದಳು.
- Acts 12:6–25 ಅಪೊಸ್ತಲರ ಕೃತ್ಯಗಳು 12:6–25ಹೆರೋದನು ಪೇತ್ರನನ್ನು ಹೊರಗೆ ತರಬೇಕೆಂದಿದ್ದ ಅದೇ ರಾತ್ರಿಯಲ್ಲಿ ಅವನು ಎರಡು ಸರಪಣಿಗಳಿಂದ ಕಟ್ಟಲ್ಪಟ್ಟು ಇಬ್ಬರು ಸೈನಿಕರ ಮಧ್ಯದಲ್ಲಿ ನಿದ್ರೆಮಾಡುತ್ತಿದ್ದನು; ಕಾವಲುಗಾರರು ಬಾಗಿಲ ಮುಂದೆ ನಿಂತು ಸೆರೆಮನೆಯನ್ನು ಕಾಯು ತ್ತಿದ್ದರು. ಆಗ ಇಗೋ, ಕರ್ತನ ದೂತನು ಪೇತ್ರನ ಬಳಿಗೆ ಬಂದಾಗ ಅವನಿದ್ದ ಸೆರೆಮನೆಯಲ್ಲಿ ಬೆಳಕು ಹೊಳೆಯಿತು. ಅವನು ಪೇತ್ರನನ್ನು ಪಕ್ಕೆ ತಟ್ಟಿ ಎಬ್ಬಿಸಿ--ತಟ್ಟನೆ ಏಳು ಅಂದನು. ಆಗಲೇ ಅವನ ಕೈಗಳಿಂದ ಸರಪಣಿಗಳು ಕಳಚಿಬಿದ್ದವು. ಆ ದೂತನು ಅವನಿಗೆ--ನಡುಕಟ್ಟಿಕೊಂಡು ನಿನ್ನ ಕೆರಗಳನ್ನು ಮೆಟ್ಟಿಕೋ ಎಂದು ಹೇಳಲು ಅವನು ಹಾಗೆಯೇ ಮಾಡಿದನು. ಆ ದೂತನು ಅವನಿಗೆ ನಿನ್ನ ಮೇಲಂಗಿ ಯನ್ನು ಹಾಕಿಕೊಂಡು ನನ್ನ ಹಿಂದೆ ಬಾ ಅಂದನು. ಅವನು ಹೊರಗೆ ಬಂದು ಆ ದೂತನ ಹಿಂದೆಯೇ ಹೋಗುತ್ತಾ ಅವನ ಮೂಲಕವಾಗಿ ನಡೆದ ಸಂಗತಿ ನಿಜವಾದದ್ದೆಂದು ತಿಳಿಯದೆ ತಾನು ನೋಡಿದ್ದು ದರ್ಶನವೆಂದು ನೆನಸಿದನು. ಅವನು ಮೊದಲನೆಯ ಎರಡನೆಯ ಕಾವಲುಗಳನ್ನು ದಾಟಿ ಪಟ್ಟಣಕ್ಕೆ ಹೋಗುವ ಕಬ್ಬಿಣದ ಬಾಗಿಲಿಗೆ ಬಂದಾಗ ಅದು ತನ್ನಷ್ಟಕ್ಕೆ ತಾನೇ ಅವರಿಗೆ ತೆರೆಯಿತು. ಅವರು ಹೊರಗೆ ಬಂದು ಒಂದು ಬೀದಿಯನ್ನು ದಾಟಿದರು; ಕೂಡಲೆ ಆ ದೂತನು ಅವನನ್ನು ಬಿಟ್ಟು ಹೊರಟುಹೋದನು. ಆಗ ಪೇತ್ರನು ಎಚ್ಚರವಾಗಿ-- ಕರ್ತನು ತನ್ನ ದೂತನನ್ನು ಕಳುಹಿಸಿ ಹೆರೋದನ ಕೈಯಿಂದಲೂ ಯೆಹೂದ್ಯ ಜನರು ನನಗೆ ಮಾಡಬೇಕೆಂದಿದ್ದ ಎಲ್ಲವುಗಳಿಂದಲೂ ನನ್ನನ್ನು ಬಿಡಿಸಿದನೆಂದು ನನಗೀಗ ನಿಶ್ಚಯವಾಗಿ ತಿಳಿದುಬಂದಿದೆ ಅಂದುಕೊಂಡನು. ತರುವಾಯ ಅವನು ಯೋಚನೆ ಮಾಡಿಕೊಂಡು ಮಾರ್ಕನೆನಿಸಕೊಳ್ಳುವ ಯೋಹಾನನ ತಾಯಿಯಾದ ಮರಿಯಳ ಮನೆಗೆ ಬಂದನು. ಅಲ್ಲಿ ಅನೇಕರು ಕೂಡಿಬಂದು ಪ್ರಾರ್ಥನೆ ಮಾಡುತ್ತಿದ್ದರು. ಪೇತ್ರನು ದ್ವಾರದ ಬಾಗಿಲನ್ನು ತಟ್ಟಿದಾಗ ರೋದೆ ಎಂಬ ಒಬ್ಬ ಹುಡುಗಿಯು ಕೇಳುವದಕ್ಕೆ ಬಂದಳು. ಅವಳು ಪೇತ್ರನ ಧ್ವನಿಯನ್ನು ತಿಳಿದಾಗ ಸಂತೋಷದ ನಿಮಿತ್ತದಿಂದಲೇ ಬಾಗಿಲನ್ನು ತೆರೆಯದೆ ಒಳಕ್ಕೆ ಓಡಿಹೋಗಿ--ಪೇತ್ರನು ಬಾಗಿಲ ಮುಂದೆ ನಿಂತಿದ್ದಾನೆ ಎಂದು ಹೇಳಿದಳು. ಅವರು ಅವಳಿಗೆ--ನಿನಗೆ ಹುಚ್ಚು ಹಿಡಿದದೆ ಎಂದು ಹೇಳಿದರು. ಆದರೆ ಅವಳು ತಾನು ಹೇಳಿದಂತೆಯೇ ಅದೆ ಎಂದು ದೃಢವಾಗಿ ಹೇಳಿದ್ದಕ್ಕೆ ಅವರು--ಅವನು ಪೇತ್ರನ ದೂತನು ಅಂದರು. ಅಷ್ಟರಲ್ಲಿ ಪೇತ್ರನು ಇನ್ನೂ ತಟ್ಟುತ್ತಾ ಇರಲು ಅವರು ಬಾಗಿಲನ್ನು ತೆರೆದು ಅವನನ್ನು ಕಂಡು ಬೆರಗಾದರು. ಅವನು ಸುಮ್ಮನಿರ್ರಿ ಎಂದು ಅವರಿಗೆ ಕೈಸನ್ನೆ ಮಾಡಿ ತನ್ನನ್ನು ಕರ್ತನು ಸೆರೆಮನೆಯೊಳಗಿಂದ ಹೊರಗೆ ಕರಕೊಂಡು ಬಂದ ರೀತಿಯನ್ನು ವಿವರಿಸಿ ಈ ಸಂಗತಿಗಳನ್ನು ಯಾಕೋಬನಿಗೂ ಸಹೋದರ ರಿಗೂ ತಿಳಿಸಿರೆಂದು ಹೇಳಿ ಬೇರೆ ಸ್ಥಳಕ್ಕೆ ಹೊರಟು ಹೋದನು. ಬೆಳಗಾದ ಮೇಲೆ ಪೇತ್ರನು ಏನಾದ ನೆಂದು ಸೈನಿಕರಲ್ಲಿ ಬಹಳ ಕಳವಳ ಉಂಟಾಯಿತು. ಹೆರೋದನು ಅವನನ್ನು ಹುಡುಕಿಸಿ ಅವನು ಸಿಕ್ಕಲಿಲ್ಲವಾದದರಿಂದ ಕಾವಲುಗಾರರನ್ನು ವಿಚಾರಣೆ ಮಾಡಿ ಅವರಿಗೆ ಮರಣ ದಂಡನೆಯನ್ನು ವಿಧಿಸಿದನು. ಬಳಿಕ ಅವನು ಯೂದಾಯದಿಂದ ಕೈಸರೈಯಕ್ಕೆ ಹೋಗಿ ಅಲ್ಲಿ ಇದ್ದನು. ತೂರ್ ಸೀದೋನ್ ಪಟ್ಟಣಗಳವರು ತಮ್ಮ ಮೇಲೆ ಹೆರೋದನು ಬಹಳವಾಗಿ ಕೋಪಿಸಿ ಕೊಂಡಿರುವದರಿಂದ ಅವರು ಒಮ್ಮನಸ್ಸಿನಿಂದ ಅವನ ಬಳಿಗೆ ಬಂದು ಅರಸನ ಮನೆಯ ಮೇಲಣ ಅಧಿಕಾರಿಯಾದ ಬ್ಲಾಸ್ತನನ್ನು ತಮ್ಮ ಸ್ನೇಹಿತನನ್ನಾಗಿ ಮಾಡಿಕೊಂಡು ಅರಸನು ಸಮಾಧಾನವಾಗಬೇಕೆಂದು ಅಪೇಕ್ಷೆಪಟ್ಟರು. ಯಾ ಗೊತ್ತು ಮಾಡಿದ ಒಂದು ದಿನದಲ್ಲಿ ಹೆರೋದನು ರಾಜವಸ್ತ್ರವನ್ನು ಧರಿಸಿದವನಾಗಿ ತನ್ನ ಸಿಂಹಾಸನದ ಮೇಲೆ ಕೂತುಕೊಂಡು ಅವರಿಗೆ ಉಪನ್ಯಾಸ ಮಾಡಿ ದನು. ಆಗ ಜನರು--ಇದು ಮನುಷ್ಯನ ಸ್ವರವಲ್ಲ, ದೇವರ ಸ್ವರವೇ ಎಂದು ಅರ್ಭಟಿಸಿದರು. ಅವನು ದೇವರಿಗೆ ಮಹಿಮೆ ಸಲ್ಲಿಸದೆ ಹೋದದರಿಂದ ಕರ್ತನ ದೂತನು ಆ ಕ್ಷಣದಲ್ಲೇ ಅವನನ್ನು ಹೊಡೆದನು; ಆಗ ಅವನನ್ನು ಹುಳಗಳು ತಿಂದದ್ದರಿಂದ ಅವನು ಪ್ರಾಣ ಬಿಟ್ಟನು. ಆದರೆ ದೇವರ ವಾಕ್ಯವು ಹಬ್ಬಿ ಹೆಚ್ಚುತ್ತಾ ಬಂತು.ಬಾರ್ನಬ ಸೌಲರು ತಮ್ಮ ಸೇವೆ ತೀರಿಸಿಕೊಂಡು ಮಾರ್ಕನೆನಿಸಿಕೊಳ್ಳುವ ಯೋಹಾನ ನನ್ನು ಕರಕೊಂಡು ಯೆರೂಸಲೇಮಿನಿಂದ ಹಿಂತಿರುಗಿ ಬಂದರು. ಬಾರ್ನಬ ಸೌಲರು ತಮ್ಮ ಸೇವೆ ತೀರಿಸಿಕೊಂಡು ಮಾರ್ಕನೆನಿಸಿಕೊಳ್ಳುವ ಯೋಹಾನ ನನ್ನು ಕರಕೊಂಡು ಯೆರೂಸಲೇಮಿನಿಂದ ಹಿಂತಿರುಗಿ ಬಂದರು.
- Acts 16:26 ಅಪೊಸ್ತಲರ ಕೃತ್ಯಗಳು 16:26ಆಗ ಆಕಸ್ಮಾತ್ತಾಗಿ ಮಹಾಭೂಕಂಪವುಂಟಾಯಿತು; ಸೆರೆಮನೆಯ ಅಸ್ತಿ ವಾರಗಳು ಕದಲಿದವು. ಅದೇ ಕ್ಷಣದಲ್ಲಿ ಕದಗಳೆಲ್ಲಾ ತೆರೆದವು, ಎಲ್ಲರ ಬೇಡಿಗಳು ಕಳಚಿಬಿದ್ದವು.
- Psalm 107:34 ಕೀರ್ತನೆಗಳು 107:34ಫಲ ವುಳ್ಳ ಭೂಮಿಯನ್ನು ಬಂಜರಾಗಿಯೂ ಅದರ ನಿವಾಸಿ ಗಳ ಕೆಟ್ಟತನಕ್ಕೋಸ್ಕರ ಮಾರ್ಪಡಿಸುತ್ತಾನೆ.