Psalms · chapter 7 · verse 1
Psalm 7:1 in Kannada
ನನ್ನ ದೇವರಾದ ಓ ಕರ್ತನೇ, ನಿನ್ನಲ್ಲಿ ಭರವಸವಿಟ್ಟಿದ್ದೇನೆ. ನನ್ನನ್ನು ಹಿಂಸಿಸುವ ವರಿಂದ ತಪ್ಪಿಸಿ ಕಾಪಾಡು;
Nanna devaraada o kartane, ninnalli bharavasavittiddene. Nannannu hinsisuva varinda tappisi kaapaadu;
Psalm 7:1 in English
- King James Version (KJV)
- Shiggaion of David, which he sang unto the LORD, concerning the words of Cush the Benjamite. O LORD my God, in thee do I put my trust: save me from all them that persecute me, and deliver me:
- World English Bible (WEB)
- A meditation by David, which he sang to the LORD, concerning the words of Cush, the Benjamite. LORD, my God, I take refuge in you. Save me from all those who pursue me, and deliver me,
- American Standard Version (ASV)
- Shiggaion of David, which he sang unto Jehovah, concerning the words of Cush a Benjamite. O Jehovah my God, in thee do I take refuge: Save me from all them that pursue me, and deliver me,
- Bible in Basic English (BBE)
- Shiggaion of David; a song which he made to the Lord, about the words of Cush the Benjamite. O Lord my God, I put my faith in you; take me out of the hands of him who is cruel to me, and make me free;
- Darby Translation (DBY)
- Shiggaion of David, which he sang to Jehovah, concerning the words of Cush the Benjaminite. Jehovah my God, in thee have I trusted: save me from all my pursuers, and deliver me;
- Webster's Bible (WBS)
- Shiggaion of David, which he sang to the LORD, concerning the words of Cush the Benjaminite. O LORD my God, in thee do I put my trust: save me from all them that persecute me, and deliver me:
- Young's Literal Translation (YLT)
- 'The Erring One,' by David, that he sung to Jehovah concerning the words of Cush a Benjamite. O Jehovah, my God, in Thee I have trusted, Save me from all my pursuers, and deliver me.
Read in context
- 1ನನ್ನ ದೇವರಾದ ಓ ಕರ್ತನೇ, ನಿನ್ನಲ್ಲಿ ಭರವಸವಿಟ್ಟಿದ್ದೇನೆ. ನನ್ನನ್ನು ಹಿಂಸಿಸುವ ವರಿಂದ ತಪ್ಪಿಸಿ ಕಾಪಾಡು;
- 2ಇಲ್ಲವಾದರೆ ಅವನು ನನ್ನ ಪ್ರಾಣವನ್ನು ಸಿಂಹದಂತೆ ಹರಿದು ತುಂಡು ತುಂಡು ಮಾಡುವನು.
- 3ನನ್ನ ದೇವರಾದ ಓ ಕರ್ತನೇ, ನಾನು ಇದನ್ನು ಮಾಡಿದರೆ, ಅಂದರೆ ನನ್ನ ಕೈಗಳಲ್ಲಿ ಅಪರಾ ಧವಿದ್ದರೆ,
Cross references
- Psalm 31:15 ಕೀರ್ತನೆಗಳು 31:15ನನ್ನ ಆಯ ಷ್ಕಾಲವು ನಿನ್ನ ಕೈಯಲ್ಲಿದೆ; ಶತ್ರುಗಳ ಕೈಯಿಂದಲೂ ಹಿಂಸೆಪಡಿಸುವವರಿಂದಲೂ ನನ್ನನ್ನು ಬಿಡಿಸು.
- 1 Peter 4:19 1 ಪೇತ್ರನು 4:19ಹೀಗಿರಲಾಗಿ ದೇವರ ಚಿತ್ತಾನುಸಾರ ಬಾಧೆಪಡು ವವರು ಒಳ್ಳೇದನ್ನು ಮಾಡುವವರಾಗಿದ್ದು ತಮ್ಮ ಆತ್ಮಗಳನ್ನು ನಂಬಿಗಸ್ತನಾದ ಸೃಷ್ಟಿಕರ್ತನಿಗೆ ಒಪ್ಪಿಸಲಿ.
- Habakkuk 3:1 ಹಬಕ್ಕೂಕ 3:1ಶಿಗ್ಯೋನೋತನ ಮೇಲೆ ಪ್ರವಾದಿಯಾದ ಹಬಕ್ಕೂಕನ ಪ್ರಾರ್ಥನೆ. ಕರ್ತನೇ, ನಿನ್ನ ಮಾತನ್ನು ಕೇಳಿ ಭಯಪಟ್ಟಿದ್ದೇನೆ.
- Jeremiah 20:11 ಯೆರೆಮೀಯ 20:11ಆದರೆ ಕರ್ತನು ಭಯಂಕರವಾದ ಪರಾಕ್ರಮಶಾಲಿಯ ಹಾಗೆ ನನ್ನ ಸಂಗಡ ಇದ್ದಾನೆ; ಆದದರಿಂದ ನನ್ನನ್ನು ಹಿಂಸಿಸು ವವರು ಎಡವುವರು, ಗೆಲ್ಲುವದಿಲ್ಲ; ಅನುಕೂಲ ವಾಗದೆ ಇದ್ದದರಿಂದ ಅವರು ಬಹಳ ನಾಚಿಕೆಪಡುವರು; ಅವರ ಗಲಿಬಿಲಿಯು ನಿತ್ಯವಾಗಿರುವದು. ಅದು ಮರೆತು ಹೋಗಲ್ಪಡುವದಿಲ್ಲ.
- Psalm 35:1–3 ಕೀರ್ತನೆಗಳು 35:1–3ಓ ಕರ್ತನೇ, ನನ್ನ ಸಂಗಡ ವ್ಯಾಜ್ಯವಾಡುವವರೊಡನೆ ಸಂಗಡ ವ್ಯಾಜ್ಯವಾಡು; ನನಗೆ ವಿರೋಧವಾಗಿ ಯುದ್ಧಮಾಡುವವರ ಸಂಗಡ ಯುದ್ಧ ಮಾಡು. ಗುರಾಣಿಯನ್ನೂ ಖೇಡ್ಯವನ್ನೂ ಹಿಡು ಕೊಂಡು ನನ್ನ ಸಹಾಯಕ್ಕೆ ನಿಂತುಕೋ. ಭಲ್ಲೆ ಯನ್ನು ಹಿಡಿದು ನನ್ನನ್ನು ಹಿಂಸಿಸುವವರಿಗೆ ಎದುರಾಗಿ ಅಡ್ಡಗಟ್ಟಿ--ನಾನೇ ನಿನ್ನ ರಕ್ಷಣೆ ಎಂದು ನನ್ನ ಪ್ರಾಣಕ್ಕೆ ಹೇಳು.
- Psalm 18:2 ಕೀರ್ತನೆಗಳು 18:2ಕರ್ತನು ನನ್ನ ಬಂಡೆಯೂ ನನ್ನ ಕೋಟೆಯೂ ನನ್ನನ್ನು ತಪ್ಪಿಸು ವಾತನೂ ನನ್ನ ದೇವರೂ ನಾನು ಭರವಸವಿಡುವ ನನ್ನ ಬಲವೂ ನನ್ನ ಗುರಾಣಿಯೂ ನನ್ನ ರಕ್ಷಣೆಯ ಕೊಂಬೂ ನನ್ನ ಉನ್ನತವಾದ ದುರ್ಗವೂ ಆಗಿದ್ದಾನೆ.
- Psalm 26:1 ಕೀರ್ತನೆಗಳು 26:1ಓ ಕರ್ತನೇ, ನನಗೆ ನ್ಯಾಯತೀರಿಸು; ಯಾಕಂದರೆ ನಾನು ನನ್ನ ಯಥಾರ್ಥತ್ವ ದಲ್ಲಿ ನಡೆದುಕೊಂಡಿದ್ದೇನೆ. ನಾನು ಕರ್ತನಲ್ಲಿ ಭರ ವಸವಿಟ್ಟಿದ್ದೇನೆ; ನಾನು ಕದಲುವದಿಲ್ಲ.
- 2 Samuel 16:1–23 2 ಸಮುವೇಲನು 16:1–23ದಾವೀದನು ಬೆಟ್ಟದ ತುದಿಯಿಂದ ಸ್ವಲ್ಪ ದೂರಹೋದಾಗ ಇಗೋ, ಮೆಫೀಬೋ ಶೆತನ ಸೇವಕನಾದ ಚೀಬನು ತಡಿಹಾಕಿದ ಎರಡು ಕತ್ತೆಗಳನ್ನು ಹೊಡಕೊಂಡು ಬಂದು ಅವನನ್ನು ಎದುರು ಗೊಂಡನು; ಅವುಗಳ ಮೇಲೆ ಇನ್ನೂರು ರೊಟ್ಟಿ ಗಳೂ ಒಣಗಿದ ನೂರು ದ್ರಾಕ್ಷೇ ಗೊಂಚಲುಗಳೂ ವಸಂತಕಾಲದ ನೂರು ಹಣ್ಣುಗಳೂ ಒಂದು ಬುದ್ದಲಿ ದ್ರಾಕ್ಷಾರಸವೂ ಇದ್ದವು. ಅರಸನು ಚೀಬನಿಗೆ--ಇವು ಯಾಕೆ ಅಂದನು. ಅದಕ್ಕೆ ಚೀಬನು--ಕತ್ತೆಗಳು ಅರಸನ ಮನೆಯವರು ಹತ್ತುವದಕ್ಕೂ ಆ ರೊಟ್ಟಿಗಳೂ ವಸಂತಕಾಲದ ಫಲಗಳೂ ಯೌವನಸ್ಥರು ತಿನ್ನುವ ದಕ್ಕೂ ದ್ರಾಕ್ಷಾರಸವು ಅರಣ್ಯದಲ್ಲಿ ದಣಿದವರು ಕುಡಿಯುವದಕ್ಕೂ ಅಂದನು. ಆಗ ಅರಸನು ಅವ ನನ್ನು--ನಿನ್ನ ಯಜಮಾನನ ಕುಮಾರನು ಎಲ್ಲಿದ್ದಾ ನೆಂದು ಕೇಳಿದನು. ಚೀಬನು ಅರಸನಿಗೆ--ಇಗೋ, ಅವನು ಯೆರೂಸಲೇಮಿನಲ್ಲಿದ್ದಾನೆ. ಯಾಕಂದರೆ--ಈ ಹೊತ್ತು ಇಸ್ರಾಯೇಲಿನ ಮನೆಯವರು ನನ್ನ ತಂದೆಯ ರಾಜ್ಯವನ್ನು ನನಗೆ ತಿರಿಗಿಕೊಡುವರೆಂದು ಅಂದನು. ಆಗ ಅರಸನು ಚೀಬನಿಗೆ--ಇಗೋ, ಮೆಫೀಬೋಶೆತನಿಗೆ ಉಂಟಾದದ್ದೆಲ್ಲಾ ನಿನ್ನದಾಯಿತು ಅಂದನು. ಅದಕ್ಕೆ ಚೀಬನು--ಅರಸನಾದ ನನ್ನ ಒಡೆ ಯನೇ, ನಿನ್ನ ದೃಷ್ಟಿಯಲ್ಲಿ ನನಗೆ ದಯೆದೊರಕಲಿ ಎಂದು ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ ಅಂದನು. ಅರಸನಾದ ದಾವೀದನು ಬಹುರೀಮಿನ ವರೆಗೂ ಬಂದಾಗ ಇಗೋ, ಸೌಲನ ಗೋತ್ರದವನಾದಂಥ ಗೇರನ ಮಗನಾದ ಶಿಮ್ಮಿಯೆಂಬ ಹೆಸರುಳ್ಳ ಒಬ್ಬ ಮನುಷ್ಯನು ಅಲ್ಲಿಂದ ಹೊರಟು ದೂಷಿಸುತ್ತಾ ನಡೆದು ಬಂದನು. ಎಲ್ಲಾ ಜನರೂ ಎಲ್ಲಾ ಪರಾಕ್ರಮಶಾಲಿ ಗಳೂ ದಾವೀದನ ಬಲ ಮತ್ತು ಎಡ ಪಾರ್ಶ್ವಗಳಲ್ಲಿ ರುವಾಗ ಅವನು ಅರಸನಾದ ದಾವೀದನ ಮೇಲೆಯೂ ಅವನ ಎಲ್ಲಾ ಊಳಿಗದವರ ಮೇಲೆಯೂ ಕಲ್ಲುಗಳನ್ನು ಎಸೆದನು. ಶಿಮ್ಮಿ ಅವನನ್ನು ದೂಷಿಸುತ್ತಾ--ರಕ್ತದ ಮನುಷ್ಯನೇ, ಬೆಲಿಯಾಳನ ಮನುಷ್ಯನೇ, ಹೊರಟು ಬಾ, ಹೊರಟು ಬಾ. ಕರ್ತನು ಸೌಲನ ಮನೆಯವರ ರಕ್ತವನ್ನು ಸೌಲನಿಗೆ ಪ್ರತಿಯಾಗಿ ಅರಸನಾದ ನಿನ್ನ ಮೇಲೆ ತಿರಿಗಿ ಬರಮಾಡಿ ರಾಜ್ಯವನ್ನು ನಿನ್ನ ಮಗನಾದ ಅಬ್ಷಾಲೋಮನ ಕೈಯಲ್ಲಿ ಒಪ್ಪಿಸಿಕೊಟ್ಟನು; ನೀನು ರಕ್ತದ ಮನುಷ್ಯನಾದದರಿಂದ ಇಗೋ, ನಿನ್ನ ಕೇಡಿನಲ್ಲಿ ಸಿಕ್ಕಿಕೊಂಡಿ ಅಂದನು. ಆಗ ಚೆರೂಯಳ ಮಗನಾದ ಅಬೀಷೈಯು ಅರಸನಿಗೆ--ಈ ಸತ್ತ ನಾಯಿ, ಅರಸನಾದ ನನ್ನ ಒಡೆಯನನ್ನು ದೂಷಿಸುವದೇನು? ನಾನೇ ದಾಟಿಹೋಗಿ ಅವನ ತಲೆಯನ್ನು ತೆಗೆದುಕೊಳ್ಳಲು ಅಪ್ಪಣೆಯಾಗಲಿ ಅಂದನು. ಆದರೆ ಅರಸನು--ಚೆರೂಯಳ ಮಕ್ಕಳೇ, ನನಗೂ ನಿಮಗೂ ಏನು? ಅವನು ನನ್ನನ್ನು ದೂಷಿಸಲಿ; ಯಾಕಂದರೆ--ದಾವೀದ ನನ್ನು ದೂಷಿಸು ಎಂದು ಕರ್ತನು ಅವನಿಗೆ ಹೇಳಿದ್ದಾನೆ; ಹಾಗಾದರೆ ಯಾಕೆ ಹೀಗೆ ಮಾಡುತ್ತೀ ಎಂದು ಹೇಳುವ ವನಾರು ಅಂದನು. ದಾವೀದನು ಅಬೀಷೈಗೂ ತನ್ನ ಎಲ್ಲಾ ಸೇವಕರಿಗೂ--ಇಗೋ, ನನ್ನ ಹೊಟ್ಟೆಯಲ್ಲಿ ಹುಟ್ಟಿದ ನನ್ನ ಮಗನು ನನ್ನ ಪ್ರಾಣವನ್ನು ಹುಡುಕಿದರೆ ಎಷ್ಟೋ ಅಧಿಕವಾಗಿ ಈ ಬೆನ್ಯಾವಿಾನ್ಯನಾದವನು ಹೀಗೆ ಮಾಡುವದು ಯಾವ ದೊಡ್ಡಮಾತು? ಅವ ನನ್ನು ಬಿಟ್ಟುಬಿಡಿರಿ; ಅವನು ದೂಷಿಸಲಿ; ಯಾಕಂದರೆ ಕರ್ತನು ಅವನಿಗೆ ಹಾಗೆಯೇ ಹೇಳಿದ್ದಾನೆ. ಒಂದು ವೇಳೆ ಕರ್ತನು ನನ್ನ ಶ್ರಮೆಯನ್ನು ನೋಡಿ ಈ ದಿನ ದಲ್ಲಿ ಅವನು ಮಾಡಿದ ದೂಷಣೆಗೆ ಪ್ರತಿಯಾಗಿ ನನಗೆ ಒಳ್ಳೆಯದನ್ನು ಮಾಡಬಹುದು ಅಂದನು. ದಾವೀದನೂ ಅವನ ಸೇವಕರೂ ದಾರಿ ಹಿಡಿದು ಹೋಗುವಾಗ ಶಿಮ್ಮಿ ಬೆಟ್ಟದ ಪಾರ್ಶ್ವವಾಗಿ ಬಂದು ಅವನಿಗೆದುರಾಗಿ ನಡೆದು ದೂಷಿಸಿ ಅವನ ಕಡೆಗೆ ಮಣ್ಣನ್ನು ತೂರಿ ಕಲ್ಲುಗಳನ್ನು ಎಸೆದನು. ಅರಸನೂ ಅವನ ಸಂಗಡಲಿರುವ ಎಲ್ಲಾ ಜನರೂ ನಡೆದು ದಣಿದದ್ದರಿಂದ ಅಲ್ಲಿ ವಿಶ್ರಮಿಸಿಕೊಂಡರು. ಅಬ್ಷಾಲೋಮನೂ ಎಲ್ಲಾ ಇಸ್ರಾಯೇಲ್ ಜನರೂ ಅವನ ಸಂಗಡ ಅಹೀತೋಫೆಲನೂ ಯೆರೂ ಸಲೇಮಿಗೆ ಬಂದರು ಅರ್ಕೀಯನಾದ ಹೂಷೈ ಯೆಂಬ ದಾವೀದನ ಸ್ನೇಹಿತನು ಅಬ್ಷಾಲೋಮನ ಬಳಿಗೆ ಬಂದು--ಅರಸನು ಬಾಳಲಿ, ಅರಸನು ಬಾಳಲಿ ಅಂದನು. ಅಬ್ಷಾಲೋಮನು ಅವನಿಗೆ--ಸ್ನೇಹಿತನ ಮೇಲೆ ನಿನಗಿದ್ದ ಪ್ರೀತಿ ಇಷ್ಟೇಯೇನು? ನೀನು ನಿನ್ನ ಸ್ನೇಹಿತನೊಡನೆ ಯಾಕೆ ಹೋಗಲಿಲ್ಲ ಅಂದನು. ಹೂಷೈ ಅಬ್ಷಾಲೋಮನಿಗೆ--ಹಾಗಲ್ಲ, ಆದರೆ ಕರ್ತನೂ ಈ ಜನವೂ ಇಸ್ರಾಯೇಲಿನ ಎಲ್ಲಾ ಜನರೂ ಯಾರನ್ನು ಆದುಕೊಳ್ಳುವರೋ ನಾನೂ ಅವನ ಪಕ್ಷದವನಾಗಿರುವೆನು; ನಾನು ಅವನ ಬಳಿಯಲ್ಲಿ ಇರುವೆನು. ಇದಲ್ಲದೆ ನಾನು ಯಾರನ್ನು ಸೇವಿಸತಕ್ಕದ್ದು? ಅವನ ಮಗನ ಸಮ್ಮುಖ ದಲ್ಲಿ ಅಲ್ಲವೇ? ನಾನು ನಿನ್ನ ತಂದೆಯ ಸಮ್ಮುಖದಲ್ಲಿ ಹೇಗೆ ಸೇವಿಸಿದೆನೋ ಹಾಗೆಯೇ ನಿನ್ನ ಸಮ್ಮುಖದಲ್ಲಿ ಇರುವೆನು ಅಂದನು. ಆಗ ಅಬ್ಷಾಲೋಮನು ಅಹೀತೋಫೆಲನಿಗೆ--ನಾವು ಮಾಡಬೇಕಾದದ್ದನ್ನು ನೀನು ಯೋಚನೆ ಮಾಡಿ ಹೇಳು ಅಂದನು. ಅಹೀತೋಫೆಲನು ಅಬ್ಷಾಲೋಮನಿಗೆ--ನಿನ್ನ ತಂದೆಯು ಮನೆಗೆ ಕಾವಲಿಟ್ಟ ಉಪಪತ್ನಿಗಳೊಡನೆ ಸಂಗಮಿಸು; ಆಗ ನಿನ್ನ ತಂದೆ ಯಿಂದ ನೀನು ಹಗೆಮಾಡಲ್ಪಟ್ಟವನೆಂದು ಎಲ್ಲಾ ಇಸ್ರಾ ಯೇಲ್ಯರು ಕೇಳಿ ನಿನ್ನ ಸಂಗಡ ಇರುವ ಎಲ್ಲಾ ಜನರ ಕೈಗಳೂ ಬಲವಾಗಿರುವವು ಅಂದನು. ಹಾಗೆಯೇ ಅವರು ಅಬ್ಷಾಲೋಮನಿಗೋಸ್ಕರ ಮನೆಯ ಮೇಲೆ ಡೇರೆ ಹಾಕಿದರು; ಅಲ್ಲಿ ಅಬ್ಷಾಲೋಮನು ಎಲ್ಲಾ ಇಸ್ರಾಯೇಲ್ಯರ ಕಣ್ಣುಗಳ ಮುಂದೆ ತನ್ನ ತಂದೆಯ ಉಪಪತ್ನಿಗಳನ್ನು ಕೂಡಿದನು.ಆ ದಿವಸಗಳಲ್ಲಿ ಅಹೀತೋಫೆಲನು ಆಲೋಚಿಸಿದ ಆಲೋಚನೆಯು ಒಬ್ಬನು ದೈವೋಕ್ತಿಗಳನ್ನು ವಿಚಾರಿಸುವ ಹಾಗೆ ಇತ್ತು. ಅಹೀತೋಫೆಲನ ಆಲೋಚನೆಯೆಲ್ಲಾ ದಾವೀದನಿಗೂ ಅಬ್ಷಾಲೋಮನಿಗೂ ಹಾಗೆಯೇ ಇತ್ತು. ಆ ದಿವಸಗಳಲ್ಲಿ ಅಹೀತೋಫೆಲನು ಆಲೋಚಿಸಿದ ಆಲೋಚನೆಯು ಒಬ್ಬನು ದೈವೋಕ್ತಿಗಳನ್ನು ವಿಚಾರಿಸುವ ಹಾಗೆ ಇತ್ತು. ಅಹೀತೋಫೆಲನ ಆಲೋಚನೆಯೆಲ್ಲಾ ದಾವೀದನಿಗೂ ಅಬ್ಷಾಲೋಮನಿಗೂ ಹಾಗೆಯೇ ಇತ್ತು.
- Jeremiah 31:18 ಯೆರೆಮೀಯ 31:18ಎಫ್ರಾಯಾಮನು ಅಂಗಲಾಚುವದನ್ನು ನಿಶ್ಚಯ ವಾಗಿ ಕೇಳಿದೆನು; ಹೇಗಂದರೆ--ನೀನು ನನ್ನನ್ನು ಶಿಕ್ಷಿ ಸಿದಿ; ತಿದ್ದುಪಾಟಾಗದ ಎತ್ತಿಗೆ ಆದ ಹಾಗೆ ನನಗೆ ಶಿಕ್ಷೆ ಆಯಿತು; ನನ್ನನ್ನು ತಿರುಗಿಸು, ಆಗ ತಿರುಗಿ ಕೊಳ್ಳುವೆನು; ಓ ಕರ್ತನೇ, ನೀನೇ ನನ್ನ ದೇವ ರಾಗಿದ್ದೀ.
- Psalm 17:7–9 ಕೀರ್ತನೆಗಳು 17:7–9ನಿನ್ನಲ್ಲಿ ಭರವಸವಿಟ್ಟವರ ವಿರೋಧವಾಗಿ ಏಳುವ ದರಿಂದ ನೀನು ನಿನ್ನ ಬಲಗೈಯಿಂದ ರಕ್ಷಿಸುವಾತನೇ, ಆಶ್ಚರ್ಯವಾದ ನಿನ್ನ ಪ್ರೀತಿ ಕರುಣೆಯನ್ನು ತೋರಿಸು. ಕಣ್ಣುಗುಡ್ಡಿನ ಹಾಗೆ ನನ್ನನ್ನು ಕಾಪಾಡು. ನಿನ್ನ ರೆಕ್ಕೆ ಗಳ ನೆರಳಿನಲ್ಲಿ ನನ್ನನ್ನು ಮರೆಮಾಡು, ನನ್ನನ್ನು ಬಾಧಿ ಸುವ ದುಷ್ಟರಿಗೂ ನನ್ನನ್ನು ಸುತ್ತಿಕೊಳ್ಳುವ ಪ್ರಾಣ ಶತ್ರುಗಳಿಗೂ ಸಿಕ್ಕದಂತೆ ತಪ್ಪಿಸುವಿ.
- Psalm 43:4 ಕೀರ್ತನೆಗಳು 43:4ಆಗ ದೇವರ ಬಲಿಪೀಠದ ಬಳಿಗೂ ನನ್ನ ಅಧಿಕ ಸಂತೋಷವಾದ ದೇವರ ಬಳಿಗೂ ಬಂದು ಹೌದು, ಕಿನ್ನರಿಯಿಂದ, ನನ್ನ ದೇವರಾದ ಓ ದೇವರೇ, ನಿನ್ನನ್ನು ಕೊಂಡಾಡುವೆನು.ಓ ನನ್ನ ಪ್ರಾಣವೇ, ಕುಗ್ಗಿಹೋಗಿರುವದೇನು? ಯಾಕೆ ನನ್ನಲ್ಲಿ ವ್ಯಾಕುಲಪಡುತ್ತೀ? ದೇವರನ್ನು ನಿರೀಕ್ಷಿಸು. ನನ್ನ ಮುಖದ ಲಕ್ಷಣವೂ ನನ್ನ ದೇವರೂ ಆಗಿರುವಾತನನ್ನು ಇನ್ನೂ ಕೊಂಡಾಡುವೆನು.
- Jeremiah 15:15 ಯೆರೆಮೀಯ 15:15ಓ ಕರ್ತನೇ, ನೀನೇ ಬಲ್ಲೆ, ನನ್ನನ್ನು ಜ್ಞಾಪಕ ಮಾಡಿ ವಿಚಾರಿಸಿ ನನ್ನನ್ನು ಹಿಂಸಿಸುವವರಿಗೆ ನನಗೋ ಸ್ಕರ ಮುಯ್ಯಿಗೆ ಮುಯ್ಯಿ ತೀರಿಸು; ನಿನ್ನ ದೀರ್ಘ ಶಾಂತಿಯಲ್ಲಿ ನನ್ನನ್ನು ತೆಗೆದುಬಿಡಬೇಡ; ನಿನ್ನ ನಿಮಿತ್ತ ನಾನು ಗದರಿಸಲ್ಪಡುವೆನೆಂದು ತಿಳಿದುಕೋ.