Psalms · chapter 73 · verse 11
Psalm 73:11 in Kannada
ಅವರು-- ದೇವರು ಹೇಗೆ ಬಲ್ಲನು? ಮಹೋನ್ನತನಲ್ಲಿ ತಿಳುವಳಿಕೆ ಉಂಟೋ ಎಂದು ಅಂದುಕೊಳ್ಳುತ್ತಾರೆ.
Avaru-- devaru hege ballanu? Mahonnatanalli tiluvalike unto endu andukolluttaare.
Psalm 73:11 in English
- King James Version (KJV)
- And they say, How doth God know? and is there knowledge in the most High?
- World English Bible (WEB)
- They say, “How does God know? Is there knowledge in the Most High?”
- American Standard Version (ASV)
- And they say, How doth God know? And is there knowledge in the Most High?
- Bible in Basic English (BBE)
- And they say, How will the Lord see this? is there knowledge in the Most High?
- Darby Translation (DBY)
- And they say, How can God know, and is there knowledge in the Most High?
- Webster's Bible (WBS)
- And they say, How doth God know? and is there knowledge in the Most High?
- Young's Literal Translation (YLT)
- And they have said, 'How hath God known? And is there knowledge in the Most High?'
Read in context
- 9ಪರಲೋಕಕ್ಕೆ ವಿರೋಧವಾಗಿ ತಮ್ಮ ಬಾಯನ್ನು ತೆರೆದಿದ್ದಾರೆ; ಭೂಲೋಕದಲ್ಲೆಲ್ಲಾ ಅವರ ಮಾತೇ ನಡೆಯುವದು.
- 10ಆದದರಿಂದ ಅವನ ಜನರು ಇಲ್ಲಿಗೆ ತಿರುಗಿ ಕೊಳ್ಳುತ್ತಾರೆ; ಅವರಿಗೆ ಪಾನವು ಯಥೇಚ್ಚವಾಗಿ ದೊರೆಯುತ್ತದೆ.
- 11ಅವರು-- ದೇವರು ಹೇಗೆ ಬಲ್ಲನು? ಮಹೋನ್ನತನಲ್ಲಿ ತಿಳುವಳಿಕೆ ಉಂಟೋ ಎಂದು ಅಂದುಕೊಳ್ಳುತ್ತಾರೆ.
- 12ಇಗೋ, ಇಹಲೋಕದಲ್ಲಿ ವೃದ್ಧಿಯಾಗುವ ದುಷ್ಟರು ಇವರೇ, ಐಶ್ವರ್ಯದಲ್ಲಿ ಇವರು ಹೆಚ್ಚುತ್ತಾರೆ.
- 13ನಿಶ್ಚಯವಾಗಿ ನನ್ನ ಹೃದಯವನ್ನು ವ್ಯರ್ಥವಾಗಿ ನಿರ್ಮಲ ಮಾಡಿಕೊಂಡು ನನ್ನ ಕೈಗಳನ್ನು ನಿರಪರಾಧ ದಲ್ಲಿ ತೊಳೆದಿದ್ದೇನೆ.
Cross references
- Hosea 7:2 ಹೋಶೇಯ 7:2ನಾನು ಅವರ ಕೆಟ್ಟತನವನ್ನೆಲ್ಲಾ ಜ್ಞಾಪಕಮಾಡು ತ್ತೇನೆಂದು ಅವರು ತಮ್ಮ ಹೃದಯಗಳಲ್ಲಿ ನೆನಸಿಕೊಳ್ಳು ವದಿಲ್ಲ; ಈಗ ಅವರ ಸ್ವಂತ ಕೃತ್ಯಗಳು ಅವರನ್ನು ಸುತ್ತಿಕೊಂಡಿವೆ; ಅವು ನನ್ನ ಮುಖದ ಮುಂದೆ ಇವೆ.
- Zephaniah 1:12 ಚೆಫನ್ಯ 1:12ಆ ಕಾಲದಲ್ಲಿ ಆಗುವದೇನಂದರೆ--ನಾನು ಯೆರೂಸಲೇಮನ್ನು ದೀಪಗಳಿಂದ ಶೋಧಿಸುವೆನು; ಕರ್ತನು ಒಳ್ಳೇದನ್ನಾದರೂ ಕೆಟ್ಟದ್ದನ್ನಾದರೂ ಮಾಡು ವದಿಲ್ಲವೆಂದು ತಮ್ಮ ಹೃದಯಗಳಲ್ಲಿ ಅನ್ನುವವರಾಗಿ ಮರೆಯಾದವುಗಳ ಮೇಲೆ ಕಟ್ಟಿಕೊಂಡಿರುವ ಮನುಷ್ಯ ರನ್ನು ದಂಡಿಸುವೆನು.
- Psalm 94:7 ಕೀರ್ತನೆಗಳು 94:7ಕರ್ತನು ನೋಡುವದಿಲ್ಲ; ಇಲ್ಲವೆ ಯಾಕೋಬನ ದೇವರು ಲಕ್ಷಿಸುವದಿಲ್ಲ ಅನ್ನುತ್ತಾರೆ.
- Psalm 44:21 ಕೀರ್ತನೆಗಳು 44:21ದೇವರು ಅದನ್ನು ವಿಚಾರಿಸನೋ? ಆತನು ಹೃದಯದ ಮರ್ಮ ಗಳನ್ನು ತಿಳಿದಿದ್ದಾನೆ.
- Job 22:13–14 ಯೋಬನು 22:13–14ಆದರೆ ನೀನು ಹೇಳುತ್ತೀ--ದೇವರು ಏನು ಬಲ್ಲನು? ಆತನು ಕಾರ್ಗತ್ತಲಿಂದ ನ್ಯಾಯತೀರಿಸುವನೋ? ಮಂದವಾದ ಮೇಘಗಳು ಆತನ ಮರೆ; ಆತನು ನೋಡುವದಿಲ್ಲ; ಆತನು ಆಕಾಶ ಮಂಡಲದ ಮೇಲೆ ನಡೆಯುತ್ತಾನೆ.
- Psalm 139:1–6 ಕೀರ್ತನೆಗಳು 139:1–6ಕರ್ತನೇ, ನನ್ನನ್ನು ಪರಿಶೋಧಿಸಿ ತಿಳುಕೊಂಡಿದ್ದೀ; ನಾನು ಕೂತು ಕೊಳ್ಳುವದನ್ನೂ ಏಳುವದನ್ನೂ ನೀನು ತಿಳುಕೊಂಡಿದ್ದೀ; ನನ್ನ ಆಲೋಚನೆಯನ್ನು ದೂರದಿಂದ ಗ್ರಹಿಸಿ ಕೊಂಡ್ಡಿದ್ದೀ; ನಾನು ನಡೆಯುವದನ್ನೂ ಮಲಗುವದನ್ನೂ ನೀನು ಶೋಧಿಸಿದ್ದೀ; ನನ್ನ ಮಾರ್ಗಗಳೆಲ್ಲಾ ನಿನಗೆ ಗೊತ್ತಾಗಿವೆ. ಇಗೋ, ಓ ಕರ್ತನೇ, ನನ್ನ ನಾಲಿಗೆಯಲ್ಲಿ ನಿನಗೆ ತಿಳಿಯದ ಮಾತು ಒಂದಾದರೂ ಇಲ್ಲ. ನೀನು ಹಿಂದೆಯೂ ಮುಂದೆಯೂ ನನ್ನನ್ನು ಸುತ್ತಿಕೊಂಡು ನಿನ್ನ ಕೈಯನ್ನು ನನ್ನ ಮೇಲೆ ಇಟ್ಟಿದ್ದೀ. ಇಂಥ ತಿಳುವಳಿಕೆಯು ನನಗೆ ಅತಿ ಅದ್ಭುತವಾಗಿದೆ; ಅದು ನನಗೆ ನಿಲುಕದಷ್ಟು ಉನ್ನತವಾಗಿದೆ.
- Psalm 73:9 ಕೀರ್ತನೆಗಳು 73:9ಪರಲೋಕಕ್ಕೆ ವಿರೋಧವಾಗಿ ತಮ್ಮ ಬಾಯನ್ನು ತೆರೆದಿದ್ದಾರೆ; ಭೂಲೋಕದಲ್ಲೆಲ್ಲಾ ಅವರ ಮಾತೇ ನಡೆಯುವದು.
- Ezekiel 8:12 ಯೆಹೆಜ್ಕೇಲನು 8:12ಆಗ ಆತನು ನನಗೆ ಮನುಷ್ಯಪುತ್ರನೇ, ಇಸ್ರಾಯೇಲಿನ ಮನೆತನದವರ ಪೂರ್ವಿಕರು ಕತ್ತಲೆ ಯಲ್ಲಿ ಪ್ರತಿಯೊಬ್ಬನೂ ತನ್ನ ಕೊಠಡಿಗಳಲ್ಲಿ ಚಿತ್ರಗಳನ್ನು ಮಾಡುವದನ್ನು ನೋಡಿದೆಯಾ?--ಕರ್ತನು ನಮ್ಮನ್ನು ನೋಡುವದಿಲ್ಲ, ಕರ್ತನು ಭೂಮಿಯನ್ನು ತೊರೆದು ಬಿಟ್ಟಿದ್ದಾನೆ ಎಂದು ಹೇಳುವರು.
- Psalm 10:11 ಕೀರ್ತನೆಗಳು 10:11ದೇವರು ಮರೆತು ಬಿಟ್ಟಿ ದ್ದಾನೆ; ತನ್ನ ಮುಖವನ್ನು ಮರೆಮಾಡುತ್ತಾನೆ; ಆತನು ಎಂದೂ ನೋಡನು ಎಂದು ತನ್ನ ಹೃದಯದಲ್ಲಿ ಹೇಳಿಕೊಂಡಿದ್ದಾನೆ.