Psalms · chapter 73 · verse 7
Psalm 73:7 in Kannada
ಅವರ ಕಣ್ಣುಗಳು ಕೊಬ್ಬಿನಿಂದ ಉಬ್ಬಿಕೊಂಡಿರುತ್ತವೆ; ಅವರ ಹೃದಯವು ಆಶಿಸುವದಕ್ಕಿಂತಲೂ ಹೆಚ್ಚಾಗಿ ಅವರಿಗೆ ಇವೆ.
Avara kannugalu kobbininda ubbikondiruttave; avara hrudayavu aashisuvadakkintaloo hechchaagi avarige ive.
Psalm 73:7 in English
- King James Version (KJV)
- Their eyes stand out with fatness: they have more than heart could wish.
- World English Bible (WEB)
- Their eyes bulge with fat. Their minds pass the limits of conceit.
- American Standard Version (ASV)
- Their eyes stand out with fatness: They have more than heart could wish.
- Bible in Basic English (BBE)
- Their eyes are bursting with fat; they have more than their heart's desire.
- Darby Translation (DBY)
- Their eyes stand out from fatness, they exceed the imaginations of their heart:
- Webster's Bible (WBS)
- Their eyes stand out with fatness: they have more than heart could wish.
- Young's Literal Translation (YLT)
- Their eye hath come out from fat. The imaginations of the heart transgressed;
Read in context
- 5ಬೇರೆ ಮನುಷ್ಯರಂತೆ ಅವರು ಕಷ್ಟದಲ್ಲಿಲ್ಲ. ಇಲ್ಲವೆ ಬೇರೆ ಮನುಷ್ಯರ ಹಾಗೆ ಅವರಿಗೆ ವ್ಯಾಧಿಯೂ ಇಲ್ಲ;
- 6ಆದದರಿಂದ ಗರ್ವವು ಅವರಿಗೆ ಕಂಠಮಾಲೆಯಂತೆ ಅವರನ್ನು ಸುತ್ತಿದೆ, ಬಲಾತ್ಕಾರವು ಅವರನ್ನು ಬಟ್ಟೆಯ ಹಾಗೆ ಮುಚ್ಚುತ್ತದೆ.
- 7ಅವರ ಕಣ್ಣುಗಳು ಕೊಬ್ಬಿನಿಂದ ಉಬ್ಬಿಕೊಂಡಿರುತ್ತವೆ; ಅವರ ಹೃದಯವು ಆಶಿಸುವದಕ್ಕಿಂತಲೂ ಹೆಚ್ಚಾಗಿ ಅವರಿಗೆ ಇವೆ.
- 8ಅವರು ಕೆಟ್ಟುಹೋದವರು. ಸಂಕಟ ಪಡುವವರ ವಿಷಯ ಕೆಟ್ಟದ್ದಾಗಿಯೂ ಗರ್ವದಿಂದಲೂ ಮಾತನಾಡುತ್ತಾರೆ.
- 9ಪರಲೋಕಕ್ಕೆ ವಿರೋಧವಾಗಿ ತಮ್ಮ ಬಾಯನ್ನು ತೆರೆದಿದ್ದಾರೆ; ಭೂಲೋಕದಲ್ಲೆಲ್ಲಾ ಅವರ ಮಾತೇ ನಡೆಯುವದು.
Cross references
- Psalm 17:10 ಕೀರ್ತನೆಗಳು 17:10ಅವರು ತಮ್ಮ ಕೊಬ್ಬಿನಿಂದ ಸೊಕ್ಕೇರಿದ್ದಾರೆ; ತಮ್ಮ ಗರ್ವದ ಬಾಯಿ ಯಿಂದ ಮಾತನಾಡುತ್ತಾರೆ.
- Job 15:27 ಯೋಬನು 15:27ತನ್ನ ಮುಖವನ್ನು ಕೊಬ್ಬಿನಿಂದ ಮುಚ್ಚಿಕೊಂಡು, ತನ್ನ ನಡುವಿನ ಮೇಲೆ ಬೊಜ್ಜನ್ನು ಕಟ್ಟಿಕೊಂಡಿದ್ದಾನೆ.
- Jeremiah 5:28 ಯೆರೆಮೀಯ 5:28ಕೊಬ್ಬಿದ್ದಾರೆ, ಪ್ರಕಾಶಿಸುತ್ತಾರೆ; ಹೌದು, ದುಷ್ಟರ ಕೃತ್ಯಗಳಿಗಿಂತ ವಿಾರಿ ಹೋಗಿದ್ದಾರೆ. ವ್ಯಾಜ್ಯ ವನ್ನು, ದಿಕ್ಕಿಲ್ಲದವನ ವ್ಯಾಜ್ಯವನ್ನು ವಿಚಾರಿಸುವದಿಲ್ಲ; ಆದಾಗ್ಯೂ ಅವರು ಸಫಲವಾಗುತ್ತಾರೆ; ಬಡವರ ನ್ಯಾಯವನ್ನು ತೀರಿಸರು.
- Psalm 73:12 ಕೀರ್ತನೆಗಳು 73:12ಇಗೋ, ಇಹಲೋಕದಲ್ಲಿ ವೃದ್ಧಿಯಾಗುವ ದುಷ್ಟರು ಇವರೇ, ಐಶ್ವರ್ಯದಲ್ಲಿ ಇವರು ಹೆಚ್ಚುತ್ತಾರೆ.
- Psalm 119:70 ಕೀರ್ತನೆಗಳು 119:70ಅವರ ಹೃದಯವು ಕೊಬ್ಬಿನ ಹಾಗೆ ಮಂದವಾಗಿದೆ; ನಾನು ನಿನ್ನ ನ್ಯಾಯಪ್ರಮಾಣದಲ್ಲಿ ಆನಂದಪಡುತ್ತೇನೆ.
- Isaiah 3:9 ಯೆಶಾಯ 3:9ಅವರ ಮುಖಭಾವವೇ ಅವರಿಗೆ ವಿರುದ್ಧವಾಗಿ ಸಾಕ್ಷಿಯಾಗಿದೆ. ತಮ್ಮ ಪಾಪ ಗಳನ್ನು ಸೊದೋಮಿನವರಂತೆ ಮರೆಮಾಜದೆ ಪ್ರಕಟ ಮಾಡುತ್ತಾರೆ. ಅವರ ಆತ್ಮಕ್ಕೆ ಅಯ್ಯೋ! ತಮಗೆ ತಾವೇ ಕೇಡನ್ನು ಪ್ರತೀಕಾರವಾಗಿ ಮಾಡಿಕೊಂಡಿದ್ದಾರೆ.
- Psalm 17:14 ಕೀರ್ತನೆಗಳು 17:14ಓ ಕರ್ತನೇ, ನಿನ್ನ ಕೈಚಾಚಿ ಈ ಮನುಷ್ಯರಿಂದ ಅಂದರೆ ಜೀವನದಲ್ಲಿ ತಮ್ಮ ಪಾಲಿಗಿರುವ ಈ ಲೋಕದ ಜನರಿಂದ ನನ್ನನ್ನು ಪಾರುಮಾಡು. ಅವರ ಹೊಟ್ಟೆಯನ್ನು ಮರೆಯಾದ ನಿನ್ನ ನಿಕ್ಷೇಪದಿಂದ ತುಂಬಿಸುತ್ತೀ; ಅವರು ಮಕ್ಕಳಿಂದ ತೃಪ್ತರಾಗಿ ತಮ್ಮ ಮಿಕ್ಕ ಆಸ್ತಿಯನ್ನು ತಮ್ಮ ಶಿಶುಗಳಿಗೆ ಉಳಿಸುತ್ತಾರೆ.ನಾನಾದರೋ ನೀತಿಯಲ್ಲಿ ನಿನ್ನ ಮುಖವನ್ನು ದೃಷ್ಟಿಸುವೆನು; ನಾನು ಎಚ್ಚರವಾದಾಗ ನಿನ್ನ ಹೋಲಿಕೆಯೊಂದಿಗೆ ತೃಪ್ತಿಹೊಂದುವೆನು.
- Ezekiel 16:49 ಯೆಹೆಜ್ಕೇಲನು 16:49ಇಗೋ, ಸೊದೋಮ್ ಎಂಬ ನಿನ್ನ ತಂಗಿಯ ಅಕ್ರಮವನ್ನೂ ಗರ್ವವನ್ನೂ ನೋಡು; ರೊಟ್ಟಿಯ ತೃಪ್ತಿಯು ಅವಳಿಗೂ ಅವಳ ಕುಮಾರ್ತೆ ಯರಿಗೂ ನಿರ್ಭಯವಾದ ಸೌಖ್ಯವಾಗಿದೆ; ಆಕೆಯು ದೀನದರಿದ್ರರಿಗೆ ಬೆಂಬಲವಾಗಿರಲಿಲ್ಲ.
- Luke 12:16–19 ಲೂಕನು 12:16–19ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದ್ದೇನಂದರೆ--ಒಬ್ಬಾ ನೊಬ್ಬ ಐಶ್ವರ್ಯವಂತನ ಭೂಮಿಯು ಸಮೃದ್ಧಿಯಾಗಿ ಬೆಳೆಯಿತು. ಆಗ ಅವನು ತನ್ನೊಳಗೆ--ನಾನೇನು ಮಾಡಲಿ? ನನಗಿರುವ ಬೆಳೆಯನ್ನು ತುಂಬಿಡುವದಕ್ಕೆ ನನಗೆ ಸ್ಥಳವಿಲ್ಲ ಎಂದು ಆಲೋಚಿಸಿ ಅವನು-- ನಾನು ಹೀಗೆ ಮಾಡುತ್ತೇನೆ; ನನ್ನ ಕಣಜಗಳನ್ನು ಕೆಡವಿ ದೊಡ್ಡವನ್ನಾಗಿ ಕಟ್ಟಿಸುತ್ತೇನೆ; ಅಲ್ಲಿ ನನ್ನ ಎಲ್ಲಾ ಬೆಳೆಯನ್ನೂ ನನ್ನ ಸರಕುಗಳನ್ನೂ ಕೂಡಿಸಿಟು ನಾನು ನನ್ನ ಆತ್ಮಕ್ಕೆ--ಆತ್ಮವೇ, ಅನೇಕ ವರುಷ ಗಳಿಗಾಗಿ ನಿನಗೆ ಬಹಳ ಸರಕು ಇಡಲ್ಪಟ್ಟಿದೆ; ನೀನು ವಿಶ್ರಮಿಸಿಕೋ, ತಿನ್ನು, ಕುಡಿ ಆನಂದವಾಗಿರು ಎಂದು ಹೇಳುವೆನು ಎಂದು ಅಂದುಕೊಂಡನು.
- 1 Samuel 25:36 1 ಸಮುವೇಲನು 25:36ತರುವಾಯ ಅಬೀಗೈಲಳು ನಾಬಾಲನ ಬಳಿಗೆ ಬಂದಾಗ ಇಗೋ, ಅರಸನ ಔತಣಕ್ಕೆ ಸಮಾನವಾದ ಔತಣ ಅವನ ಮನೆಯಲ್ಲಿತ್ತು. ಅವನು ಬಹಳವಾಗಿ ಕುಡಿದದ್ದರಿಂದ ಅವನ ಹೃದಯವು ಅವನಲ್ಲಿ ಉಲ್ಲಾಸ ಗೊಂಡಿತ್ತು. ಆದಕಾರಣ ಅವಳು ಉದಯವಾಗುವ ವರೆಗೆ ಅವನಿಗೆ ಕಡಿಮೆಯಾದದ್ದನ್ನಾಗಲಿ ಹೆಚ್ಚಾದದ್ದ ನ್ನಾಗಲಿ ತಿಳಿಸಲಿಲ್ಲ.
- 1 Samuel 25:2 1 ಸಮುವೇಲನು 25:2ಕರ್ಮೆಲಿನಲ್ಲಿ ಸ್ವಾಸ್ತ್ಯಗಳಿರುವ ಮಾವೋನಿನ ವನಾದ ಒಬ್ಬ ಮನುಷ್ಯನಿದ್ದನು. ಆ ಮನುಷ್ಯನು ಬಹು ದೊಡ್ಡವನಾಗಿದ್ದನು; ಅವನಿಗೆ ಮೂರು ಸಾವಿರ ಕುರಿಗಳೂ ಸಾವಿರ ಮೇಕೆಗಳೂ ಇದ್ದವು. ಅವನು ಕರ್ಮೆಲಿನಲ್ಲಿ ತನ್ನ ಕುರಿಗಳ ಉಣ್ಣೆಯನ್ನು ಕತ್ತರಿಸುತ್ತಿ ದ್ದನು.