Psalms · chapter 76 · verse 10
Psalm 76:10 in Kannada
ನಿಶ್ಚಯವಾಗಿ ಮನುಷ್ಯನ ಕೋಪವು ನಿನ್ನನ್ನು ಕೊಂಡಾಡುವದು; ಕೋಪಶೇಷವನ್ನು ನೀನು ಬಿಗಿ ಹಿಡಿದು ಕೊಳ್ಳುವಿ.
Nishchayavaagi manushyana kopavu ninnannu kondaaduvadu; kopasheshavannu neenu bigi hididu kolluvi.
Psalm 76:10 in English
- King James Version (KJV)
- Surely the wrath of man shall praise thee: the remainder of wrath shalt thou restrain.
- World English Bible (WEB)
- Surely the wrath of man praises you. The survivors of your wrath are restrained.
- American Standard Version (ASV)
- Surely the wrath of man shall praise thee: The residue of wrath shalt thou gird upon thee.
- Bible in Basic English (BBE)
- The ... will give you praise; the rest of ...
- Darby Translation (DBY)
- For the fury of man shall praise thee; the remainder of fury wilt thou gird on thyself.
- Webster's Bible (WBS)
- Surely the wrath of man shall praise thee: the remainder of wrath wilt thou restrain.
- Young's Literal Translation (YLT)
- For the fierceness of man praiseth Thee, The remnant of fierceness Thou girdest on.
Read in context
- 8ಆಕಾಶದಿಂದ ನ್ಯಾಯತೀರ್ವಿಕೆಯನ್ನು ಕೇಳಮಾಡಿದಿ.
- 9ದೇವರು ನ್ಯಾಯತೀರಿಸುವದಕ್ಕೂ ಭೂಮಿಯ ದೀನರೆಲ್ಲರನ್ನು ರಕ್ಷಿಸುವದಕ್ಕೂ ಏಳುವಾಗ ಭೂಮಿಯ ನಿವಾಸಿಗಳು ಭಯಪಟ್ಟು ಸ್ತಬ್ಧ ರಾದರು. ಸೆಲಾ.
- 10ನಿಶ್ಚಯವಾಗಿ ಮನುಷ್ಯನ ಕೋಪವು ನಿನ್ನನ್ನು ಕೊಂಡಾಡುವದು; ಕೋಪಶೇಷವನ್ನು ನೀನು ಬಿಗಿ ಹಿಡಿದು ಕೊಳ್ಳುವಿ.
- 11ನಿಮ್ಮ ದೇವರಾದ ಕರ್ತನಿಗೆ ಪ್ರಮಾಣಮಾಡಿ ಸಲ್ಲಿಸಿರಿ; ಆತನ ಸುತ್ತಲಿರುವವ ರೆಲ್ಲರು ಭಯಪಡಿಸುವಾತನಿಗೆ ಕಾಣಿಕೆಗಳನ್ನು ತರಲಿ.ಆತನು ಪ್ರಧಾನರ ಪ್ರಾಣವನ್ನು ತೆಗೆದು ಹಾಕು ತ್ತಾನೆ; ಭೂಮಿಯ ಅರಸುಗಳಿಗೆ ಭಯಂಕರ ನಾಗಿದ್ದಾನೆ.
- 12ಆತನು ಪ್ರಧಾನರ ಪ್ರಾಣವನ್ನು ತೆಗೆದು ಹಾಕು ತ್ತಾನೆ; ಭೂಮಿಯ ಅರಸುಗಳಿಗೆ ಭಯಂಕರ ನಾಗಿದ್ದಾನೆ.
Cross references
- Romans 9:17 ರೋಮಾಪುರದವರಿಗೆ 9:17ಬರಹವು ಫರೋ ಹನಿಗೆ--ನನ್ನ ಬಲವನ್ನು ನಿನ್ನಲ್ಲಿ ತೋರಿಸುವ ಹಾಗೆಯೂ ನನ್ನ ನಾಮವು ಭೂಮಿಯ ಎಲ್ಲಾ ಕಡೆಯಲ್ಲಿ ಪ್ರಸಿದ್ಧಿ ಹೊಂದಬೇಕೆಂಬ ಉದ್ದೇಶದಿಂದಲೂ ನಾನು ನಿನ್ನನ್ನು ಉನ್ನತ ಸ್ಥಿತಿಗೆ ತಂದಿದ್ದೇನೆ ಎಂದು ಹೇಳುತ್ತದೆ.
- Acts 4:26–28 ಅಪೊಸ್ತಲರ ಕೃತ್ಯಗಳು 4:26–28ಕರ್ತನಿಗೂ ಆತನ ಕ್ರಿಸ್ತ ನಿಗೂ ವಿರೋಧವಾಗಿ ಭೂರಾಜರು ಎದ್ದುನಿಂತರು; ಅಧಿಪತಿಗಳು ಒಂದಾಗಿ ಕೂಡಿಕೊಂಡರು ಎಂದು ಹೇಳಿದ್ದೀ. ನಿಜವಾಗಿಯೂ ನೀನು ಅಭಿಷೇಕಿಸಿದ ನಿನ್ನ ಪವಿತ್ರ ಸೇವಕನಾದ ಯೇಸುವಿಗೆ ವಿರೋಧವಾಗಿ ಹೆರೋದನೂ ಪೊಂತ್ಯ ಪಿಲಾತನೂ ಅನ್ಯಜನರ ಮತ್ತು ಇಸ್ರಾಯೇಲ್ ಜನರ ಸಹಿತ ಒಂದಾಗಿ ಕೂಡಿಕೊಂಡು ನಿನ್ನ ಹಸ್ತವು ಮತ್ತು ನಿನ್ನ ಸಂಕಲ್ಪವು ಮೊದಲೇ ನಿಶ್ಚಯಿಸಿದ್ದನ್ನು ಮಾಡಿದರು.
- Matthew 24:22 ಮತ್ತಾಯನು 24:22ಆ ದಿವಸಗಳು ಕಡಿಮೆ ಮಾಡಲ್ಪಡದಿದ್ದರೆ ಯಾವನೂ ಉಳಿಯು ವದಿಲ್ಲ; ಆದರೆ ಆಯಲ್ಪಟ್ಟವರಿಗಾಗಿ ಆ ದಿವಸಗಳು ಕಡಿಮೆ ಮಾಡಲ್ಪಡುವವು.
- Daniel 3:19–20 ದಾನಿಯೇಲನು 3:19–20ಆಗ ನೆಬೂಕದ್ನೆಚ್ಚರನು ಉಗ್ರದಿಂದ ತುಂಬಿದವನಾಗಿ ಅವನ ಮುಖದ ರೂಪವು ಶದ್ರಕ್ ಮೇಷಕ್ಅಬೇದ್ ನೇಗೋ ಎಂಬ ವರಿಗೆ ವಿರೋಧವಾಗಿ ಬೇರೆಯಾಯಿತು. ಆಗ ಅವನು ಮಾತನಾಡಿ ಆ ಆವಿಗೆಯನ್ನು ಸಾಧಾರಣವಾದ ಉರಿ ಗಿಂತ ಏಳರಷ್ಟು ಹೆಚ್ಚಾಗಿ ಉರಿಹಾಕಬೇಕೆಂದು ಆಜ್ಞಾಪಿ ಸಿದನು. ತನ್ನ ಸೈನ್ಯದಲ್ಲಿರುವ ಅತ್ಯಂತ ಬಲಿಷ್ಠರಾ ದವರು ಶದ್ರಕ್, ಮೇಷಕ್, ಅಬೇದ್ನೆಗೋ ಎಂಬವರನ್ನು ಕಟ್ಟಿ, ಉರಿಯುವ ಬೆಂಕಿಯ ಆವಿಗೆಯಲ್ಲಿ ಹಾಕಬೇಕೆಂದು ಆಜ್ಞಾಪಿಸಿದನು.
- Exodus 18:11 ವಿಮೋಚನಕಾಂಡ 18:11ಎಲ್ಲಾ ದೇವರು ಗಳಿಗಿಂತ ಕರ್ತನೇ ದೊಡ್ಡವನೆಂದು ಈಗ ನಾನು ತಿಳಿದುಕೊಂಡಿದ್ದೇನೆ. ಐಗುಪ್ತ್ಯರು ಗರ್ವಪಟ್ಟಿದ್ದರಿಂದ ಆತನು ಅವರನ್ನು ತಗ್ಗಿಸಿದನು ಅಂದನು.
- Matthew 2:13–16 ಮತ್ತಾಯನು 2:13–16ಅವರು ಹೋದಮೇಲೆ ಇಗೋ, ಕರ್ತನ ದೂತನು ಕನಸಿನಲ್ಲಿ ಯೋಸೇಫನಿಗೆ ಕಾಣಿಸಿ ಕೊಂಡು -- ಎದ್ದು ಈ ಶಿಶುವನ್ನೂ ಇದರ ತಾಯಿ ಯನ್ನೂ ಕರಕೊಂಡು ಐಗುಪ್ತಕ್ಕೆ ಓಡಿಹೋಗಿ ನಾನು ನಿನಗೆ ತಿಳಿಸುವ ತನಕ ಅಲ್ಲೇ ಇರು; ಯಾಕಂದರೆ ಹೆರೋದನು ಈ ಶಿಶುವನ್ನು ಕೊಲ್ಲಬೇಕೆಂದು ಆಗ ಅವನು ಎದ್ದು ಆ ಶಿಶುವನ್ನೂ ಅದರ ತಾಯಿಯನ್ನೂ ಕರ ಕೊಂಡು ರಾತ್ರಿಯಲ್ಲಿ ಐಗುಪ್ತಕ್ಕೆ ಹೊರಟುಹೋಗಿ ಹೆರೋದನು ಸಾಯುವ ವರೆಗೆ ಅಲ್ಲೇ ಇದ್ದನು. ಅದು--ನಾನು ನನ್ನ ಮಗನನ್ನು ಐಗುಪ್ತದಿಂದ ಕರೆದೆನು ಎಂದು ಪ್ರವಾದಿಯ ಮುಖಾಂತರ ಕರ್ತನಿಂದ ಹೇಳಲ್ಪಟ್ಟ ಮಾತು ನೆರವೇರುವಂತೆ ಹೀಗಾಯಿತು. ಆಗ ಜ್ಞಾನಿಗಳು ತನ್ನನ್ನು ಪರಿಹಾಸ್ಯ ಮಾಡಿ ದರೆಂದು ಹೆರೋದನು ತಿಳಿದು ಅತಿ ರೋಷಗೊಂಡ ವನಾಗಿ ತಾನು ಅವರ ಮೂಲಕ ಪರಿಷ್ಕಾರವಾಗಿ ಶೋಧಿಸಿದ ಕಾಲಕ್ಕನುಸಾರ ಬೆತ್ಲೆಹೇಮಿನಲ್ಲಿಯೂ ಅದರ ಎಲ್ಲಾ ಪ್ರಾಂತ್ಯಗಳ ಮೇರೆಗಳಲ್ಲಿಯೂ ಎರಡು ವರುಷ ಮತ್ತು ಅದರೊಳಗಿದ್ದ ಎಲ್ಲಾ ಮಕ್ಕ
- Exodus 15:9–11 ವಿಮೋಚನಕಾಂಡ 15:9–11ಶತ್ರುವು--ನಾನು ಹಿಂದಟ್ಟಿ, ಹಿಡಿ ಯುವೆನು, ಕೊಳ್ಳೆಯನ್ನು ಹಂಚಿಕೊಳ್ಳುವೆನು, ನನ್ನ ಆಶೆಗಳು ಅವರಿಂದ ತೃಪ್ತಿಹೊಂದುವವು. ನಾನು ನನ್ನ ಖಡ್ಗವನ್ನು ಹಿರಿಯುವೆನು, ನನ್ನ ಕೈ ಅವರನ್ನು ಸಂಹಾರ ಮಾಡುವದು ಅಂದನು. ನೀನು ನಿನ್ನ ಗಾಳಿಯನ್ನು ಊದಿದಾಗ ಸಮುದ್ರವು ಅವರನ್ನು ಮುಚ್ಚಿಕೊಂಡಿತು. ಅವರು ಸೀಸದಂತೆ ಮಹಾಜಲಗಳಲ್ಲಿ ಮುಳುಗಿ ಹೊದರು. ದೇವರುಗಳಲ್ಲಿ ಓ ಕರ್ತನೇ, ನಿನ್ನ ಹಾಗೆ ಯಾರಿದ್ದಾರೆ? ಪರಿಶುದ್ಧತ್ವದಲ್ಲಿ ಮಹಿಮೆ ಹೊಂದಿದವನೂ ಸ್ತೋತ್ರಗಳಲ್ಲಿ ಭಯಂಕರನೂ ಅದ್ಭುತಗಳನ್ನು ಮಾಡುವಾತನೂ ಆದ ನಿನ್ನ ಹಾಗೆ ಯಾರಿದ್ದಾರೆ?
- Exodus 9:16–17 ವಿಮೋಚನಕಾಂಡ 9:16–17ಆದರೆ ನಿಶ್ಚಯವಾಗಿ ನನ್ನ ಬಲವನ್ನು ನಿನಗೆ ತೋರಿಸುವ ಹಾಗೆಯೂ ನನ್ನ ಹೆಸರು ಭೂಲೋಕದಲ್ಲೆಲ್ಲಾ ತಿಳಿಸಲ್ಪಡುವಂತೆಯೂ ನಿನ್ನನ್ನು ಎಬ್ಬಿಸಿದ್ದೇನೆ. ನೀನು ಇನ್ನೂ ಅವರನ್ನು ಕಳುಹಿಸದೆ ನನ್ನ ಜನರಿಗೆ ವಿರೋಧ ವಾಗಿ ನಿನ್ನನ್ನು ನೀನೇ ಹೆಚ್ಚಿಸಿಕೊಳ್ಳುತ್ತೀಯೋ?
- Psalm 46:6 ಕೀರ್ತನೆಗಳು 46:6ಅನ್ಯ ಜನಾಂಗವು ಘೋಷಿಸಿತು, ರಾಜ್ಯಗಳು ಕದಲಿದವು; ಆತನು ತನ್ನ ಧ್ವನಿಯನ್ನೆತ್ತಿ ಕೂಗಿದಾಗ ಭೂಮಿಯು ಕರಗಿತು.
- Genesis 37:26–28 ಆದಿಕಾಂಡ 37:26–28ಆಗ ಯೆಹೂದನು ತನ್ನ ಸಹೋದರರಿಗೆ--ನಾವು ನಮ್ಮ ಸಹೋದರನನ್ನು ಕೊಂದುಹಾಕಿ ಅವನ ರಕ್ತವನ್ನು ಮರೆಮಾಡುವದರಲ್ಲಿ ಲಾಭವೇನು? ಬನ್ನಿರಿ, ಇಷ್ಮಾಯೇಲ್ಯರಿಗೆ ಅವನನ್ನು ಮಾರೋಣ. ನಾವು ಅವನ ಮೇಲೆ ಕೈಹಾಕಬಾರದು. ಯಾಕಂದರೆ ಅವನು ನಮ್ಮ ಸಹೋದರನೂ ನಮ್ಮ ಮಾಂಸವೂ ಆಗಿದ್ದಾನೆ ಅಂದನು. ಅದಕ್ಕೆ ಅವನ ಸಹೋದರರು ಒಪ್ಪಿದರು. ಈ ಪ್ರಕಾರ (ಮಿದ್ಯಾನ್ಯರ ವರ್ತಕರು ಹಾದುಹೋಗುತ್ತಿದ್ದಾಗ) ಅವರು ಯೋಸೇಫನನ್ನು ತಗ್ಗಿನಿಂದ ಮೇಲೆತ್ತಿ ಇಷ್ಮಾಯೇಲ್ಯ ರಿಗೆ ಅವನನ್ನು ಇಪ್ಪತ್ತು ಬೆಳ್ಳಿಯ ನಾಣ್ಯಗಳಿಗೆ ಮಾರಿದರು, ಅವರು ಯೋಸೇಫನನ್ನು ಐಗುಪ್ತಕ್ಕೆ ಕರಕೊಂಡು ಹೋದರು.
- Revelation 11:18 ಪ್ರಕಟನೆ 11:18ಜನಾಂಗಗಳು ಕೋಪಿಸಿ ಕೊಂಡವು, ನಿನ್ನ ಕೋಪವು ಬಂದಿತು. ಸತ್ತವರು ತೀರ್ಪು ಹೊಂದುವದಕ್ಕೂ ನೀನು ನಿನ್ನ ಸೇವಕರಾದ ಪ್ರವಾದಿಗಳಿಗೂ ಪರಿಶುದ್ಧರಿಗೂ ನಿನ್ನ ನಾಮಕ್ಕೆ ಭಯಪಡುವ ಚಿಕ್ಕವರಿಗೂ ದೊಡ್ಡವರಿಗೂ ಪ್ರತಿ ಫಲವನ್ನು ಕೊಡುವದಕ್ಕೆ ಮತ್ತು ಭೂಮಿಯನ್ನು ನಾಶಮಾಡುವವರನುಆಗ ಪರಲೋಕದಲ್ಲಿ ದೇವಾಲಯವು ತೆರೆಯ ಲ್ಪಟ್ಟಿತು; ಆತನ ಆಲಯದಲ್ಲಿ ಆತನ ಒಡಂಬಡಿಕೆಯ ಮಂಜೂಷವು ಕಾಣಿಸಿತು; ಇದಲ್ಲದೆ ಮಿಂಚುಗಳೂ ವಾಣಿಗಳೂ ಗುಡುಗುಗಳೂ ಭೂಕಂಪವೂ ದೊಡ್ಡ ಆನೆಕಲ್ಲಿನ ಮಳೆಯೂ ಉಂಟಾದವು.
- Genesis 50:20 ಆದಿಕಾಂಡ 50:20ನೀವು ನನಗೆ ವಿರೋಧವಾಗಿ ಕೇಡನ್ನು ಆಲೋಚಿ ಸಿದಿರಿ; ಆದರೆ ದೇವರು ಈಗ ಮಾಡಿದ ಹಾಗೆ ಬಹುಜನರನ್ನು ಬದುಕಿಸುವದಕ್ಕೋಸ್ಕರ ಮೇಲಿಗಾಗಿ ಆಲೋಚನೆ ಮಾಡಿದನು.