Exodus · chapter 15 · verse 9
Exodus 15:9 in Kannada
ಶತ್ರುವು--ನಾನು ಹಿಂದಟ್ಟಿ, ಹಿಡಿ ಯುವೆನು, ಕೊಳ್ಳೆಯನ್ನು ಹಂಚಿಕೊಳ್ಳುವೆನು, ನನ್ನ ಆಶೆಗಳು ಅವರಿಂದ ತೃಪ್ತಿಹೊಂದುವವು. ನಾನು ನನ್ನ ಖಡ್ಗವನ್ನು ಹಿರಿಯುವೆನು, ನನ್ನ ಕೈ ಅವರನ್ನು ಸಂಹಾರ ಮಾಡುವದು ಅಂದನು.
Shatruvu--naanu hindatti, hidi yuvenu, kolleyannu hanchikolluvenu, nanna aashegalu avarinda truptihonduvavu. Naanu nanna khadgavannu hiriyuvenu, nanna kai avarannu sanhaara maaduvadu andanu.
Exodus 15:9 in English
- King James Version (KJV)
- The enemy said, I will pursue, I will overtake, I will divide the spoil; my lust shall be satisfied upon them; I will draw my sword, my hand shall destroy them.
- World English Bible (WEB)
- The enemy said, ‘I will pursue. I will overtake. I will divide the plunder. My desire will be satisfied on them. I will draw my sword. My hand will destroy them.’
- American Standard Version (ASV)
- The enemy said, I will pursue, I will overtake, I will divide the spoil; My desire shall be satisfied upon them; I will draw my sword, my hand shall destroy them.
- Bible in Basic English (BBE)
- Egypt said, I will go after them, I will overtake, I will make division of their goods: my desire will have its way with them; my sword will be uncovered, my hand will send destruction on them.
- Darby Translation (DBY)
- The enemy said, I will pursue, I will overtake, I will divide the spoil; my soul shall be sated upon them; I will unsheath my sword, my hand shall dispossess them.
- Webster's Bible (WBS)
- The enemy said, I will pursue, I will overtake, I will divide the spoil; my lust shall be satisfied upon them; I will draw my sword, my hand shall destroy them.
- Young's Literal Translation (YLT)
- The enemy said, I pursue, I overtake; I apportion spoil; Filled is my soul with them; I draw out my sword; My hand destroyeth them: —
Read in context
- 7ನಿನ್ನ ಮಹತ್ತಾದ ಘನತೆಯಲ್ಲಿ ನಿನಗೆ ವಿರೋಧವಾಗಿ ಎದ್ದವರನ್ನು ಕೆಡವಿ ಬಿಟ್ಟಿರುವಿ. ನಿನ್ನ ರೌದ್ರವು ಹೊರಟು ಅವರನ್ನು ಹುಲ್ಲಿನಂತೆ ದಹಿಸಿಬಿಟ್ಟಿತು.
- 8ನಿನ್ನ ಮೂಗಿನ ಬಿರುಸಾದ ಗಾಳಿ ಯಿಂದ ನೀರುಗಳು ಒಟ್ಟುಗೂಡಿದವು. ಪ್ರವಾಹಗಳು ರಾಶಿಯಂತೆ ನಿಂತವು; ಸಮುದ್ರದ ಅಗಾಧಗಳ ನೀರು ಗಟ್ಟಿಯಾದವು.
- 9ಶತ್ರುವು--ನಾನು ಹಿಂದಟ್ಟಿ, ಹಿಡಿ ಯುವೆನು, ಕೊಳ್ಳೆಯನ್ನು ಹಂಚಿಕೊಳ್ಳುವೆನು, ನನ್ನ ಆಶೆಗಳು ಅವರಿಂದ ತೃಪ್ತಿಹೊಂದುವವು. ನಾನು ನನ್ನ ಖಡ್ಗವನ್ನು ಹಿರಿಯುವೆನು, ನನ್ನ ಕೈ ಅವರನ್ನು ಸಂಹಾರ ಮಾಡುವದು ಅಂದನು.
- 10ನೀನು ನಿನ್ನ ಗಾಳಿಯನ್ನು ಊದಿದಾಗ ಸಮುದ್ರವು ಅವರನ್ನು ಮುಚ್ಚಿಕೊಂಡಿತು. ಅವರು ಸೀಸದಂತೆ ಮಹಾಜಲಗಳಲ್ಲಿ ಮುಳುಗಿ ಹೊದರು.
- 11ದೇವರುಗಳಲ್ಲಿ ಓ ಕರ್ತನೇ, ನಿನ್ನ ಹಾಗೆ ಯಾರಿದ್ದಾರೆ? ಪರಿಶುದ್ಧತ್ವದಲ್ಲಿ ಮಹಿಮೆ ಹೊಂದಿದವನೂ ಸ್ತೋತ್ರಗಳಲ್ಲಿ ಭಯಂಕರನೂ ಅದ್ಭುತಗಳನ್ನು ಮಾಡುವಾತನೂ ಆದ ನಿನ್ನ ಹಾಗೆ ಯಾರಿದ್ದಾರೆ?
Cross references
- Judges 5:30 ನ್ಯಾಯಸ್ಥಾಪಕರು 5:30ಅವರು ಓಡಲಿಲ್ಲವೋ? ಕೊಳ್ಳೆಹಂಚಿ ಕೊಳ್ಳಲಿಲ್ಲವೋ? ಒಬ್ಬೊಬ್ಬ ಮನುಷ್ಯನಿಗೆ ಒಂದೆರಡು ಹೆಣ್ಣು, ಸೀಸೆರನಿಗೆ ನಾನಾ ವರ್ಣವುಳ್ಳ ಕೊಳ್ಳೆ, ನಾನಾ ವರ್ಣವುಳ್ಳಂಥ ವಿಚಿತ್ರವಾಗಿ, ಹೊಲಿದಂಥ, ಎರಡು ಪಕ್ಕೆಗಳಲ್ಲಿ ವಿಚಿತ್ರವಾಗಿ ಹೊಲಿದಂಥ, ಕೊಳ್ಳೆ ಹಿಡಿ ಯುವರ ಕಂಠಗಳಿಗೆ ತಕ್ಕಂಥ ನಾನಾ ವರ್ಣವುಳ್ಳ ಕೊಳ್ಳೆ, ಸಿಕ್ಕಲಿಲ್ಲವೋ?ಓ ಕರ್ತನೇ, ಹೀಗೆಯೇ ನಿನ್ನ ಶತ್ರುಗಳೆಲ್ಲರು ನಾಶವಾಗಲಿ, ಆದರೆ ಆತನನ್ನು ಪ್ರೀತಿಮಾಡುವವರು ತನ್ನ ಪರಾಕ್ರಮದಿಂದ ಹೊರ ಡುವ ಸೂರ್ಯನ ಹಾಗೆಯೇ ಇರಲಿ. ದೇಶವು ನಾಲ್ವತ್ತು ವರುಷ ವಿಶ್ರಾಂತಿಯಲ್ಲಿತ್ತು.
- Exodus 14:5 ವಿಮೋಚನಕಾಂಡ 14:5ಜನರು ಓಡಿಹೋದರೆಂದು ಐಗುಪ್ತದ ಅರಸನಿಗೆ ತಿಳಿಸಲ್ಪಟ್ಟಿತು; ಆಗ ಫರೋಹನ ಮತ್ತು ಅವನ ಸೇವಕರ ಹೃದಯವು ಜನರಿಗೆ ವಿರೋಧವಾಗಿ ತಿರುಗಿಕೊಂಡಿತು; ಅವರು--ಇಸ್ರಾಯೇಲ್ಯರು ನಮ್ಮ ಸೇವೆಮಾಡುವದನ್ನು ಬಿಟ್ಟುಹೋಗಿಬಿಡುವಂತೆ ನಾವು ಯಾಕೆ ಮಾಡಿದೆವು ಅಂದರು.
- Isaiah 53:12 ಯೆಶಾಯ 53:12ಆದದರಿಂದ ನಾನು ಆತನಿಗೋಸ್ಕರ ದೊಡ್ಡ ವರೊಂದಿಗೆ ಭಾಗಮಾಡುವೆನು ಆತನು ಬಲಿಷ್ಠರ ಸಂಗಡ ಕೊಳ್ಳೆಯಲ್ಲಿ ಪಾಲುಮಾಡುವನು; ಆತನು ತನ್ನ ಪ್ರಾಣವನ್ನು ಮರಣದ ವರೆಗೆ ಹೊಯ್ದು ಬಿಟ್ಟು ದ್ರೋಹಿಗಳೊಂದಿಗೆ ಎಣಿಸಲ್ಪಟ್ಟನು; ಅನೇಕರ ಪಾಪ ವನ್ನು ಹೊತ್ತುಕೊಂಡು ದ್ರೋಹಿಗಳಿಗೋಸ್ಕರ ವಿಜ್ಞಾ ಪನೆ ಮಾಡಿದನು.
- Luke 11:22 ಲೂಕನು 11:22ಆದರೆ ಅವನಿಗಿಂತ ಬಲಿ ಷ್ಠನು ಅವನ ಮೇಲೆ ಬಂದು ಅವನನ್ನು ಜಯಿಸಿ ಅವನು ನಂಬಿಕೊಂಡಿದ್ದ ಆಯುಧಗಳನ್ನು ಅವನಿಂದ ತಕ್ಕೊಂಡು ತನ್ನ ಸುಲಿಗೆಗಳನ್ನು ಹಂಚುವನು.
- Isaiah 36:20 ಯೆಶಾಯ 36:20ಈ ದೇಶಗಳ ಎಲ್ಲಾ ದೇವರುಗಳಲ್ಲಿ ಯಾರೂ ತಮ್ಮ ದೇಶವನ್ನು ನನ್ನ ಕೈಯಿಂದ ಬಿಡಿಸಲಾರದ ಮೇಲೆ ಕರ್ತನು ಯೆರೂಸಲೇಮನ್ನು ನನ್ನ ಕೈಯಿಂದ ಬಿಡಿಸು ವನೋ ಅನ್ನುತ್ತಾನೆ ಎಂದು ಹೇಳಿದನು.
- Habakkuk 3:14 ಹಬಕ್ಕೂಕ 3:14ಅವನ ದೊಣ್ಣೆಗಳಿಂದಲೇ ತನ್ನ ಹಳ್ಳಿಗಳ ಮುಖ್ಯಸ್ಥನನ್ನು ಹೊಡೆದಿದ್ದೀ; ಅವರು ನನ್ನನ್ನು ಚದುರಿಸುವದಕ್ಕೆ ಬಿರುಗಾಳಿಯಂತೆ ಬಂದರು; ಬಡವರನ್ನು ಅಂತರಂಗದಲ್ಲಿ ನುಂಗಿಬಿಡುವ ಹಾಗೆ ಅವರಿಗೆ ಸಂತೋಷವು ಇರುವದು.
- Genesis 49:27 ಆದಿಕಾಂಡ 49:27ಬೆನ್ಯಾವಿಾನನು ತೋಳದಂತೆ ಸೀಳುವನು. ಬೆಳಿಗ್ಗೆ ಸುಲಿಗೆಯನ್ನು ತಿಂದುಬಿಡುವನು. ಸಾಯಂಕಾಲದಲ್ಲಿ ಕೊಳ್ಳೆಯನ್ನು ಪಾಲುಮಾಡುವನು.
- 1 Kings 20:10 1 ಅರಸುಗಳು 20:10ಆಗ ಬೆನ್ಹದದನು ಕಳುಹಿಸಿ--ನನ್ನನ್ನು ಹಿಂಬಾಲಿಸುವ ಸಮಸ್ತ ಜನರು ಕೈತುಂಬ ತಕ್ಕೊಳ್ಳಲು ಸಮಾರ್ಯದ ಧೂಳು ಸಾಕಾದರೆ ದೇವರುಗಳು ನನಗೆ ಹೀಗೆಯೂ ಇನ್ನೂ ಹೆಚ್ಚಾಗಿಯೂ ಮಾಡಲಿ ಎಂದು ಅವನಿಗೆ ಹೇಳಿ ಕಳುಹಿಸಿದನು.
- Exodus 14:8–9 ವಿಮೋಚನಕಾಂಡ 14:8–9ಐಗುಪ್ತದ ಅರಸನಾದ ಫರೋಹನ ಹೃದಯವನ್ನು ಕರ್ತನು ಕಠಿಣ ಮಾಡಿದ್ದರಿಂದ ಅವನು ಇಸ್ರಾಯೇಲ್ ಮಕ್ಕಳನ್ನು ಹಿಂದಟ್ಟಿದನು. ಆದರೆ ಇಸ್ರಾಯೇಲ್ ಮಕ್ಕಳು ಧೈರ್ಯ ದಿಂದ ಹೊರಗೆ ಹೋದರು. ಐಗುಪ್ತ್ಯರು ಅವರನ್ನು ಹಿಂದಟ್ಟಿದ್ದರು; ಅವರು ಸಮುದ್ರ ತೀರದಲ್ಲಿ ಇಳು ಕೊಂಡಿರುವಾಗ ಫರೋಹನ ಎಲ್ಲಾ ಕುದುರೆಗಳೂ ರಥಗಳೂ ಕುದುರೆ ಸವಾರರೂ ಅವನ ಸೈನ್ಯವೂ ಪೀಹಹೀರೋತಿನ ಸವಿಾಪದಲ್ಲಿ ಬಾಳ್ಚೆಫೋನಿನ ಎದುರಾಗಿ ಸವಿಾಪಿಸಿದರು.
- Isaiah 10:8–13 ಯೆಶಾಯ 10:8–13ಅವನು ಅಂದು ಕೊಳ್ಳುವದೇನಂದರೆ--ನನ್ನ ಅಧಿಪತಿಗಳೆಲ್ಲಾ ರಾಜರಲ್ಲವೇ? ಕಲ್ನೋ, ಕರ್ಕೆ ವಿಾಷಿನ ಹಾಗಲ್ಲವೋ? ಹಾಮಾತ್ ಅರ್ಪದಿನ ಹಾಗಲ್ಲವೇ? ಸಮಾರ್ಯವು ದಮಸ್ಕದ ಹಾಗ ಲ್ಲವೋ? ಯೆರೂಸಲೇಮಿನಲ್ಲಿಯೂ ಸಮಾರ್ಯ ದಲ್ಲಿಯೂ ಹೆಚ್ಚಾಗಿದ್ದ ಅವರ ವಿಗ್ರಹಗಳು ಹಾಗೂ ಕೆತ್ತಿದ ವಿಗ್ರಹಗಳ ರಾಜ್ಯಗಳು ನನ್ನ ಕೈಗೆ ಸಿಕ್ಕಿದಂತೆ ನಾನು ಸಮಾರ್ಯಕ್ಕೂ ಅದರ ವಿಗ್ರಹಗಳಿಗೂ ಮಾಡಿದಂತೆ ಯೆರೂಸಲೇಮಿಗೂ ಅದರ ವಿಗ್ರಹ ಗಳಿಗೂ ಮಾಡದೆ ಇರುವೆನೋ? ಆದಕಾರಣ, ಕರ್ತನು ಚೀಯೋನ್ ಪರ್ವತದ ಮೇಲೆಯೂ ಯೆರೂಸಲೇಮಿನ ಮೇಲೆಯೂ ತನ್ನ ಕಾರ್ಯಗಳನ್ನು ಮಾಡಿ ಮುಗಿಸಿದ ಮೇಲೆ, ಅಶ್ಶೂರದ ಅರಸನ ಹೃದಯದ ದೊಡ್ಡಸ್ತಿಕೆಯ ಫಲವನ್ನು ಅವನ ಉನ್ನತವಾದ ದೃಷ್ಟಿಯ ಘನತೆಯನ್ನು ನಾನು ದಂಡಿ ಸುವೆನು. ಅವನು ತನ್ನೊಳಗೆ--ನನ್ನ ಕೈಯ ಬಲ ದಿಂದಲೂ ಜ್ಞಾನದಿಂದಲೂ ಅದನ್ನು ಮಾಡಿದೆ; ನಾನು ವಿವೇಕಿ ಮತ್ತು ಜನಾಂಗಗಳ ಮೇರೆಗಳನ್ನು ಕಿತ್ತು ಅವರ ನಿಧಿಗಳನ್ನು ಕೊಳ್ಳೆಹೊಡೆದು ಅದರ ನಿವಾಸಿಗಳನ್ನು ಮಹಾವೀರನಂತೆ ಕೆಡವಿಬಿಟ್ಟಿದ್ದೇನೆ.
- 1 Kings 19:2 1 ಅರಸುಗಳು 19:2ಈಜೆಬೆಲಳು ಎಲೀಯನ ಬಳಿಗೆ ದೂತ ನನ್ನು ಕಳುಹಿಸಿ--ನಾನು ನಾಳೆ ಇಷ್ಟು ಹೊತ್ತಿಗೆ ಅವ ರಲ್ಲಿರುವ ಒಬ್ಬೊಬ್ಬನ ಪ್ರಾಣದ ಹಾಗೆ ನಿನ್ನ ಪ್ರಾಣಕ್ಕೂ ಮಾಡದೆ ಹೋದರೆ ದೇವರುಗಳು ನನಗೆ ಹೀಗೆಯೂ ಹೆಚ್ಚಾಗಿಯೂ ಮಾಡಲಿ ಎಂದು ಹೇಳಿದಳು.