Psalms · chapter 76 · verse 5
Psalm 76:5 in Kannada
ಬಲವಾದ ಹೃದಯ ದವರು ಕೊಳ್ಳೆ ಮಾಡಲ್ಪಟ್ಟಿದ್ದಾರೆ, ತೂಕಡಿಸಿ ನಿದ್ರೆ ಹೋಗಿದ್ದಾರೆ; ಪರಾಕ್ರಮಿಗಳಲ್ಲಿ ಒಬ್ಬನೂ ತನ್ನ ಕೈಗ ಳನ್ನು ಕಂಡುಕೊಳ್ಳಲಿಲ್ಲ.
Balavaada hrudaya davaru kolle maadalpattiddaare, tookadisi nidre hogiddaare; paraakramigalalli obbanoo tanna kaiga lannu kandukollalilla.
Psalm 76:5 in English
- King James Version (KJV)
- The stouthearted are spoiled, they have slept their sleep: and none of the men of might have found their hands.
- World English Bible (WEB)
- Valiant men lie plundered, they have slept their last sleep. None of the men of war can lift their hands.
- American Standard Version (ASV)
- The stouthearted are made a spoil, They have slept their sleep; And none of the men of might have found their hands.
- Bible in Basic English (BBE)
- Gone is the wealth of the strong, their last sleep has overcome them; the men of war have become feeble.
- Darby Translation (DBY)
- The stout-hearted are made a spoil, they have slept their sleep; and none of the men of might have found their hands.
- Webster's Bible (WBS)
- The stout-hearted are spoiled, they have slept their sleep: and none of the men of might have found their hands.
- Young's Literal Translation (YLT)
- Spoiled themselves have the mighty of heart, They have slept their sleep, And none of the men of might found their hands.
Read in context
- 3ಅಲ್ಲಿಯೇ ಬಿಲ್ಲಿನ ಬಾಣಗಳನ್ನೂ ಗುರಾಣಿಯನ್ನೂ ಕತ್ತಿಯನ್ನೂ ಯುದ್ಧವನ್ನೂ ಮುರಿದುಬಿಟ್ಟನು. ಸೆಲಾ.
- 4ಬೇಟೆಗಳಿರುವ ಬೆಟ್ಟಗಳಿಗಿಂತ ನೀನು ಪ್ರಕಾಶವು ಳ್ಳವನೂ ಶ್ರೇಷ್ಠನೂ ಆಗಿದ್ದೀ.
- 5ಬಲವಾದ ಹೃದಯ ದವರು ಕೊಳ್ಳೆ ಮಾಡಲ್ಪಟ್ಟಿದ್ದಾರೆ, ತೂಕಡಿಸಿ ನಿದ್ರೆ ಹೋಗಿದ್ದಾರೆ; ಪರಾಕ್ರಮಿಗಳಲ್ಲಿ ಒಬ್ಬನೂ ತನ್ನ ಕೈಗ ಳನ್ನು ಕಂಡುಕೊಳ್ಳಲಿಲ್ಲ.
- 6ಓ ಯಾಕೋಬನ ದೇವರೇ, ನಿನ್ನ ಗದರಿಕೆಯಿಂದ ರಥವೂ ಕುದುರೆಯೂ ಗಾಢ ನಿದ್ರೆಯಲ್ಲಿ ಬಿದ್ದಿವೆ.
- 7ನೀನು, ನೀನೇ, ಭಯಹುಟ್ಟಿಸುತ್ತೀ; ನೀನು ಒಂದು ಸಾರಿ ಕೋಪಿಸಿಕೊಂಡರೆ ನಿನ್ನ ಮುಂದೆ ನಿಲ್ಲುವವನಾರು?
Cross references
- Nahum 3:18 ನಹೂಮ 3:18ಅಶ್ಶೂರ್ಯದ ಅರಸನೇ, ನಿನ್ನ ಕುರುಬರು ತೂಕಡಿಸುತ್ತಾರೆ, ನಿನ್ನ ಶ್ರೇಷ್ಠರು ಧೂಳಿನಲ್ಲಿ ಬಿದ್ದಿದ್ದಾರೆ; ನಿನ್ನ ಜನರು ಬೆಟ್ಟಗಳಲ್ಲಿ ಚದರಿ ಹೋಗಿ ದ್ದಾರೆ; ಕೂಡಿಸುವವರು ಯಾರೂ ಇಲ್ಲ.ನಿನ್ನ ಗಾಯವು ಗುಣಹೊಂದದು; ನಿನ್ನ ಗಾಯ ಕಠಿಣ ವಾದದ್ದು; ನಿನ್ನ ಸುದ್ದಿಯನ್ನು ಕೇಳುವವರೆಲ್ಲರು ನಿನಗೆ ಚಪ್ಪಾಳೆ ಹೊಡೆಯುವರು; ನಿನ್ನ ಕೆಟ್ಟತನವು ನಿತ್ಯವಾಗಿ ಯಾರ ಮೇಲೆ ಹಾದುಹೋಗದೆ ಇತ್ತು?
- Psalm 13:3 ಕೀರ್ತನೆಗಳು 13:3ನನ್ನ ದೇವರಾದ ಓ ಕರ್ತನೇ, ದೃಷ್ಟಿಸಿ ನನಗೆ ಉತ್ತರಕೊಡು; ನಾನು ಮರಣದ ನಿದ್ದೆಮಾಡದ ಹಾಗೆಯೂ
- Jeremiah 51:39 ಯೆರೆಮೀಯ 51:39ಅವರ ಉರಿಯಲ್ಲಿ ನಾನು ಅವರ ಔತಣವನ್ನು ಸಿದ್ಧಮಾಡುವೆನು; ಅವರು ಉಲ್ಲಾಸಿಸಿ ನಿತ್ಯವಾದ ನಿದ್ರೆಯನ್ನು ಮಾಡಿ ಎಚ್ಚರವಾಗದ ಹಾಗೆ ಅವರಿಗೆ ಅಮಲೇರಿಸುವೆನೆಂದು ಕರ್ತನು ಅನ್ನುತ್ತಾನೆ.
- Isaiah 46:12 ಯೆಶಾಯ 46:12ಕಠಿಣ ಹೃದಯವುಳ್ಳವರೇ, ನೀತಿಗೆ ದೂರವಾದವರೇ, ನನಗೆ ಕಿವಿಗೊಡಿರಿ;ನನ್ನ ನೀತಿಯನ್ನು ಹತ್ತಿರಕ್ಕೆ ಬರಮಾಡುವೆನು, ಅದು ಇನ್ನು ದೂರವಾಗಿರದು. ನನ್ನ ರಕ್ಷಣೆಯು ಇನ್ನು ತಡವಾ ಗದು; ನನ್ನ ಮಹಿಮೆಯಾಗಿರುವ ಇಸ್ರಾಯೇಲಿ ಗೋಸ್ಕರ ಚೀಯೋನಿನಲ್ಲಿ ರಕ್ಷಣೆಯನ್ನು ಉಂಟು ಮಾಡುವೆನು.
- Luke 1:51–52 ಲೂಕನು 1:51–52ಆತನು ತನ್ನ ಬಾಹುಬಲವನ್ನು ತೋರಿಸಿ ಗರ್ವಿಷ್ಠರನ್ನು ಅವರ ಹೃದಯದ ಕಲ್ಪನೆಗಳ ನಿಮಿತ್ತವಾಗಿ ಅವರನ್ನು ಚದರಿಸಿಬಿಟ್ಟಿದ್ದಾನೆ; ಬಲಿಷ್ಠ ರನ್ನು ಅವರ ಸ್ಥಾನಗಳಿಂದ ಕೆಳಗೆ ದೊಬ್ಬಿ ದೀನರನ್ನು ಮೇಲಕ್ಕೆ ಎತ್ತಿದ್ದಾನೆ.
- Daniel 4:37 ದಾನಿಯೇಲನು 4:37ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕದ ಅರಸನನ್ನು ಸ್ತುತಿಸಿ, ಹೆಚ್ಚಿಸಿ, ಘನಪಡಿಸುತ್ತೇನೆ; ಆತನ ಕ್ರಿಯೆಗಳೆಲ್ಲಾ ಸತ್ಯವೇ; ಆತನ ಮಾರ್ಗಗಳು ನ್ಯಾಯವೇ; ಗರ್ವದಲ್ಲಿ ನಡೆಯುವವರನ್ನು ಆತನೇ ತಗ್ಗಿಸಬಲ್ಲನು.
- Ezekiel 30:21–25 ಯೆಹೆಜ್ಕೇಲನು 30:21–25ಮನುಷ್ಯ ಪುತ್ರನೇ, ನಾನು ಐಗುಪ್ತದ ಅರಸ ನಾದ ಫರೋಹನ ತೋಳನ್ನು ಮುರಿದು ಹಾಕಿದ್ದೇನೆ; ಇಗೋ, ಅದು ಕಟ್ಟಲ್ಪಡುವ ಹಾಗೆ ವಾಸಿಯಾಗುವದೇ ಇಲ್ಲ, ಅದು ಕತ್ತಿಯನ್ನು ಹಿಡಿಯುವ ಹಾಗೆಯೇ ಅದಕ್ಕೆ ಬಲಬರುವ ಹಾಗೆ ಪಟ್ಟಿ ಬಿಗಿಸಲ್ಪಡುವದಿಲ್ಲ. ಆದ ದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ --ಇಗೋ, ನಾನು ಐಗುಪ್ತದೇಶದ ಅರಸನಾದ ಫರೋಹನಿಗೆ ವಿರುದ್ಧವಾಗಿದ್ದೇನೆ. ಬಲವುಳ್ಳದ್ದೂ ಮುರಿದದ್ದೂ ಆಗಿರುವ ಅವನ ತೋಳುಗಳನ್ನು ಮುರಿ ಯುತ್ತೇನೆ; ಅವನ ಕೈಯಿಂದ ಕತ್ತಿಯನ್ನು ಬೀಳಿಸುತ್ತೇನೆ. ಐಗುಪ್ತರನ್ನು ಜನಾಂಗಗಳಲ್ಲಿ ಚದರಿಸಿ ದೇಶಗಳ ಮೇಲೆ ಹರಡುವೆನು. ಬಾಬೆಲಿನ ಅರಸನ ತೋಳು ಗಳನ್ನು ನಾನು ಬಲಪಡಿಸುವೆನು; ಅವನ ಕೈಯಲ್ಲಿ ನನ್ನ ಕತ್ತಿಯನ್ನಿಡುವೆನು; ಫರೋಹನ ತೋಳನ್ನು ಮುರಿಯುವೆನು, ಅವನು ಗಾಯದಿಂದ ಸಾಯುವ ಹಾಗೆ ಅವನ ಮುಂದೆ ನರಳಾಡುವನು. ನಾನು ಬಾಬೆಲಿನ ಅರಸನ ತೋಳುಗಳಿಗೆ ಬಲ ಕೊಡುವೆನು, ಫರೋಹನ ತೋಳುಗಳು ಬಿದ್ದು ಹೋಗುವವು; ಯಾವಾಗ ನಾನು ನನ್ನ ಕತ್ತಿಯನ್ನು ಬಾಬೆಲಿನ ಅರಸನ ಕೈಗೆ ಕೊಡುವೆನೋ ಅದನ್ನು ಐಗುಪ್ತದೇಶದಿಂದ ಹೊರಗೆ ಚಾಚುವೆನೋ ಆಗ ನಾನೇ ಕರ್ತನೆಂದು ಅವರಿಗೆ ಗೊತ್ತಾಗುವದು.ನಾನು ಐಗುಪ್ತರನ್ನು ಜನಾಂಗಗಳೊಳಗೆ ಚದರಿಸಿ ದೇಶಗಳಲ್ಲಿ ಹರಡಿಸು ತ್ತೇನೆ; ಆಗ ನಾನೇ ಕರ್ತನೆಂದು ಅವರಿಗೆ ತಿಳಿಯುವದು.
- Isaiah 31:8 ಯೆಶಾಯ 31:8ಆಗ ಅಶ್ಶೂರ್ಯನು ಕತ್ತಿಯಿಂದ ಬೀಳುವನು, ಬಲಿಷ್ಟ ನಿಂದಲ್ಲ; ಅವನು ನುಂಗಲ್ಪಡುವನು, ಹೀನನ ಕತ್ತಿ ಯಿಂದಲ್ಲ; ಅವನು ಕತ್ತಿಯ ಕಡೆಯಿಂದ ಓಡುವನು, ಅವನ ಯೌವನಸ್ಥರು ಸೋಲಿಸಲ್ಪಡುವರು.ಅವನು ಅಂಜಿಕೆಯಿಂದ ತನ್ನ ತ್ರಾಣಸ್ಥಾನಕ್ಕೆ ದಾಟಿಹೋಗು ವನು; ಅವನ ಪ್ರಧಾನರು ಧ್ವಜಕ್ಕೆ ಹೆದರಿಓಡು ವರು; ಚೀಯೋನಿನಲ್ಲಿ ಅಗ್ನಿಯನ್ನೂ ಯೆರೂಸಲೇಮಿ ನಲ್ಲಿ ಕುಲುಮೆಯನ್ನೂ ಮಾಡಿಕೊಂಡಿರುವ ಕರ್ತನ ನುಡಿ ಇದೇ.
- Job 40:10–12 ಯೋಬನು 40:10–12ಗಾಂಭೀರ್ಯದಿಂದಲೂ ಘನತೆಯಿಂದ ಲೂ ನಿನ್ನನ್ನು ಅಲಂಕರಿಸಿಕೋ; ಮಹಿಮೆಯನ್ನೂ ಪ್ರಭೆಯನ್ನೂ ಧರಿಸಿಕೋ. ನಿನ್ನ ಕೋಪದ ಉರಿ ಯನ್ನು ದೂರಹಾಕು. ಗರ್ವಿಷ್ಟರನ್ನೆಲ್ಲಾ ನೋಡಿತಗ್ಗಿಸು. ಗರ್ವಿಷ್ಟರನ್ನೆಲ್ಲಾ ನೋಡಿ ತಗ್ಗಿಸಿಬಿಡು; ದುಷ್ಟರನ್ನು ಅವರ ಸ್ಥಳದಲ್ಲಿ ತುಳಿದುಬಿಡು.
- Isaiah 37:36 ಯೆಶಾಯ 37:36ಆಗ ಕರ್ತನ ದೂತನು ಹೊರಟು ಬಂದು ಅಶ್ಶೂರ್ಯರ ಪಾಳೆಯದಲ್ಲಿ ಲಕ್ಷದ ಎಂಭತ್ತೈದು ಸಾವಿರ ಮಂದಿಯನ್ನು ಹೊಡೆದನು. ಇನ್ನೂ ಮೊಬ್ಬಿರು ವಾಗಲೇ ಎದ್ದಾಗ ಇಗೋ, ಅವರು ಸತ್ತ ಹೆಣಗಳಾ ಗಿದ್ದರು.