Psalms · chapter 78 · verse 56
Psalm 78:56 in Kannada
ಆದರೆ ಅವರು ಮಹೋನ್ನತನಾದ ದೇವರನ್ನು ಪರೀಕ್ಷಿಸಿ ರೇಗಿಸಿದರು; ಆತನ ವಿಧಿಗಳನ್ನು ಕೈಕೊಳ್ಳ ಲಿಲ್ಲ.
Aadare avaru mahonnatanaada devarannu pareekshisi regisidaru; aatana vidhigalannu kaikolla lilla.
Psalm 78:56 in English
- King James Version (KJV)
- Yet they tempted and provoked the most high God, and kept not his testimonies:
- World English Bible (WEB)
- Yet they tempted and rebelled against the Most High God, and didn’t keep his testimonies,
- American Standard Version (ASV)
- Yet they tempted and rebelled against the Most High God, And kept not his testimonies;
- Bible in Basic English (BBE)
- But they were bitter against the Most High God, testing him, and not keeping his laws;
- Darby Translation (DBY)
- But they tempted and provoked God, the Most High, and kept not his testimonies,
- Webster's Bible (WBS)
- Yet they tempted and provoked the most high God, and kept not his testimonies:
- Young's Literal Translation (YLT)
- And they tempt and provoke God Most High, And His testimonies have not kept.
Read in context
- 54ತನ್ನ ಪರಿಶುದ್ದಾಲಯದ ಮೇರೆಗೂ ಆತನ ಬಲಗೈ ಕೊಂಡುಕೊಂಡ ಈ ಪರ್ವತಕ್ಕೂ ಅವರನ್ನು ಬರ ಮಾಡಿದನು.
- 55ಅನ್ಯಜನಾಂಗವನ್ನು ಅವರ ಮುಂದೆ ಹೊರಗೆ ಹಾಕಿ, ಅವರ ಬಾಧ್ಯತೆಯನ್ನು ಅಳತೆಮಾಡಿ, ಹಂಚಿ, ಅವರ ಗುಡಾರಗಳಲ್ಲಿ ಇಸ್ರಾಯೇಲಿನ ಗೋತ್ರ ಗಳು ವಾಸಿಸುವಂತೆ ಮಾಡಿದನು.
- 56ಆದರೆ ಅವರು ಮಹೋನ್ನತನಾದ ದೇವರನ್ನು ಪರೀಕ್ಷಿಸಿ ರೇಗಿಸಿದರು; ಆತನ ವಿಧಿಗಳನ್ನು ಕೈಕೊಳ್ಳ ಲಿಲ್ಲ.
- 57ತಮ್ಮ ಪಿತೃಗಳ ಹಾಗೆ ತಿರುಗಿಬಿದ್ದು ಅಪ ನಂಬಿಗಸ್ತರಾಗಿ ಮೋಸದ ಬಿಲ್ಲಿನ ಹಾಗೆ ವಾರೆ ಯಾದರು.
- 58ತಮ್ಮ ಉನ್ನತ ಸ್ಥಳಗಳಿಂದ ಆತನಿಗೆ ಕೋಪವನ್ನೆಬ್ಬಿಸಿ ಕೆತ್ತಿದ ತಮ್ಮ ವಿಗ್ರಹಗಳಿಂದ ಆತನಿಗೆ ರೋಷವನ್ನೆಬ್ಬಿಸಿದರು.
Cross references
- Judges 2:11–12 ನ್ಯಾಯಸ್ಥಾಪಕರು 2:11–12ಇಸ್ರಾಯೇಲ್ ಮಕ್ಕಳು ಕರ್ತನ ಮುಂದೆ ಕೆಟ್ಟತನ ಮಾಡಿ ಬಾಳನನ್ನು ಸೇವಿಸಿ ತಮ್ಮ ತಂದೆಗಳನ್ನು ಐಗುಪ್ತದಿಂದ ಹೊರಡಮಾಡಿದ ತಮ್ಮ ದೇವರಾದ ಕರ್ತನನ್ನು ಬಿಟ್ಟು ತಮ್ಮ ಸುತ್ತಲಿರುವ ಜನಗಳ ಅನ್ಯ ದೇವರುಗಳ ಹಿಂದೆಹೋಗಿ ಅವುಗಳಿಗೆ ಅಡ್ಡಬಿದ್ದು ಕರ್ತನಿಗೆ ಕೋಪವನ್ನೆಬ್ಬಿಸಿದರು.
- Nehemiah 9:25–26 ನೆಹೆಮೀಯ 9:25–26ಅವರು ಬಲವಾದ ಪಟ್ಟಣ ಗಳನ್ನೂ ರಸವತ್ತಾದ ಭೂಮಿಯನ್ನೂ ತೆಗೆದುಕೊಂಡು ಸಮಸ್ತ ಉತ್ತಮವಾದವುಗಳಿಂದ ತುಂಬಿದ ಮನೆ ಗಳನ್ನೂ ತೋಡಿದ ಬಾವಿಗಳನ್ನೂ ದ್ರಾಕ್ಷೇ ತೋಟ ಗಳನ್ನೂ ಇಪ್ಪೇತೋಪುಗಳನ್ನೂ ಸಮೃದ್ಧಿಯಾದ ಹಣ್ಣಿನ ಮರಗಳನ್ನೂ ಬಹಳವಾಗಿ ಸ್ವಾಧೀನಮಾಡಿಕೊಂಡರು. ಹೀಗೆ ಅವರು ತಿಂದು ತೃಪ್ತಿಪಟ್ಟು ಪುಷ್ಟಿಯಾಗಿ ನಿನ್ನ ದೊಡ್ಡ ಉಪಕಾರದಲ್ಲಿ ಆನಂದಪಟ್ಟರು. ಆದಾಗ್ಯೂ ಅವರು ನಿನಗೆ ಅವಿಧೇಯರಾಗಿ, ವಿರೋಧವಾಗಿ, ನಿಂತು ತಿರುಗಿಬಿದ್ದು, ನಿನ್ನ ನ್ಯಾಯ ಪ್ರಮಾಣವನ್ನು ತಮ್ಮ ಬೆನ್ನಿನ ಹಿಂದಕ್ಕೆ ಬಿಸಾಡಿ, ಅವರು ನಿನ್ನ ಕಡೆಗೆ ತಿರುಗಬೇಕೆಂದು ಸಾಕ್ಷಿ ಹೇಳಿದ ನಿನ್ನ ಪ್ರವಾದಿಗಳನ್ನು ಕೊಂದು ಬಹು ಕೋಪೋದ್ರೇಕ ಗೊಳಿಸಿದರು.
- Psalm 78:40–41 ಕೀರ್ತನೆಗಳು 78:40–41ಎಷ್ಟೋ ಸಾರಿ ಅವರು ಅರಣ್ಯದಲ್ಲಿ ಆತನಿಗೆ ಕೋಪವನ್ನೆಬ್ಬಿಸಿದರು. ಕಾಡಿನಲ್ಲಿ ಆತನನ್ನು ದುಃಖ ಪಡಿಸಿದರು. ಹೌದು, ಅವರು ತಿರುಗಿಬಿದ್ದು ದೇವ ರನ್ನು ಪರೀಕ್ಷಿಸಿ ಇಸ್ರಾಯೇಲಿನ ಪರಿಶುದ್ಧನಿಗೆ ಮಿತಿ ಮಾಡಿದರು.
- Ezekiel 16:15–26 ಯೆಹೆಜ್ಕೇಲನು 16:15–26ಆದರೆ ನೀನು ನಿನ್ನ ಸೌಂದರ್ಯದಲ್ಲಿ ಭರವಸ ವಿಟ್ಟು ನಿನ್ನ ಕೀರ್ತಿಯ ನಿಮಿತ್ತವಾಗಿ ಸೂಳೆತನ ಮಾಡಿದೆ; ಹಾದುಹೋಗುವ ಪ್ರತಿಯೊಬ್ಬನ ಸಂಗಡ ಮಿತಿವಿಾರಿ ಹಾದರತನ ಮಾಡಿದೆ; ಒಬ್ಬೊಬ್ಬನಿಗೂ ಒಳಗಾದೆ. ನಿನ್ನ ವಸ್ತ್ರಗಳನ್ನು ತೆಗೆದುಕೊಂಡು ಚಿತ್ರ ವಿಚಿತ್ರ ಮಾಡಿ ಅಲಂಕರಿಸಿಕೊಂಡು ಪೂಜಾಸ್ಥಳದಲ್ಲಿ ವ್ಯಭಿಚಾರ ಮಾಡಿದೆ, ಇದು ನಡೆಯತಕ್ಕದ್ದಲ್ಲ ಮತ್ತು ನಡೆಯಬಾರದಂಥ ಕೆಲಸವಾಗಿದೆ. ಇದಲ್ಲದೆ ನಾನು ನಿನಗೆ ಬೆಳ್ಳಿ ಬಂಗಾರದಿಂದ ಮಾಡಿಸಿಕೊಟ್ಟಿದ್ದ ನಿನ್ನ ಅಂದವಾದ ಆಭರಣಗಳನ್ನು ತೆಗೆದು ಅವುಗಳಿಂದ ಪುರುಷ ರೂಪಗಳನ್ನು ಮಾಡಿಕೊಂಡು ಅದರ ಸಂಗಡ ವ್ಯಭಿಚಾರ ಮಾಡಿದಿ. ನಿನ್ನ ಕಸೂತಿಯ ಬಟ್ಟೆಗಳನ್ನು ತೆಗೆದು ಅವರಿಗೆ ಹೊದಿಸಿ ನನ್ನ ಎಣ್ಣೆಯನ್ನೂ ಧೂಪ ವನ್ನೂ ಅವರ ಮುಂದೆ ಇಟ್ಟೆ. ನಾನು ನಿನಗೆ ನನ್ನ ಆಹಾರವನ್ನೂ ನಿನಗೆ ನಯವಾದ ಹಿಟ್ಟನ್ನೂ ಎಣ್ಣೆ ಮತ್ತು ಜೇನುಗಳನ್ನೂ ಸುವಾಸನೆಗಾಗಿ ಕೊಟ್ಟೆ. ಆದರೆ ನೀನು ಅವುಗಳನ್ನು ಅವರ ಮುಂದೆ ಇಟ್ಟೆ ಎಂದು ದೇವರಾದ ಕರ್ತನು ಹೇಳುತ್ತಾನೆ. ಇದಾದ ಮೇಲೆ ನನಗೆ ಹುಟ್ಟಿದ್ದ ನನ್ನ ಕುಮಾರರನ್ನೂ ಕುಮಾರ್ತೆ ಯರನ್ನೂ ಅವರ ಆಹಾರಕ್ಕಾಗಿ ಅರ್ಪಿಸಿದಿ. ಈ ನಿನ್ನ ವ್ಯಭಿಚಾರ ಸಾಮಾನ್ಯವಾದದ್ದಲ್ಲ, ನೀನು ನನ್ನ ಮಕ್ಕಳನ್ನು ಕೊಂದು ಅವರಿಗೆ ಬೆಂಕಿಯನ್ನು ದಾಟುವ ಹಾಗೆ ಒಪ್ಪಿಸಿದಿಯಲ್ಲಾ; ನಿನ್ನ ಎಲ್ಲಾ ಅಸಹ್ಯಗಳ ಲ್ಲಿಯೂ ನಿನ್ನ ವ್ಯಭಿಚಾರಗಳಲ್ಲಿಯೂ ನಿನ್ನ ಎಳೆಯ ಪ್ರಾಯದ ದಿವಸಗಳನ್ನು ನೀನು ಬರೀ ಬೆತ್ತಲೆಯಾಗಿ ನಿನ್ನ ರಕ್ತದಲ್ಲಿ ಹೊರಳಾಡುತ್ತಿದ್ದದ್ದನ್ನು ನೀನು ಜ್ಞಾಪಕ ಮಾಡಲಿಲ್ಲ. ಇದಲ್ಲದೆ ಈ ನಿನ್ನ ಎಲ್ಲಾ ಕೆಟ್ಟತನಗಳ ತರುವಾಯ ಆಗಿದ್ದೇನಂದರೆ (ಅಯ್ಯೋ! ಅಯ್ಯೋ ಎಂದು ನಿನಗೆ ದೇವರಾದ ಕರ್ತನು ಹೇಳುತ್ತಾನೆ;) ನೀನು ಪ್ರತಿಯೊಂದು ಬೀದಿಯಲ್ಲಿಯೂ ಉನ್ನತ ಸ್ಥಳಗಳನ್ನು ಕಟ್ಟಿ ನಿನಗೆ ಉತ್ತಮವಾದ ಸ್ಥಳಗ ಳನ್ನು ಮಾಡಿಕೊಂಡಿರುವಿ. ಪ್ರತಿಯೊಂದು ಕಡೆ ಮೂಲೆ ಮೂಲೆಗೂ ಉನ್ನತ ಸ್ಥಳವನ್ನು ಕಟ್ಟಿ ನಿನ್ನ ಸೌಂದರ್ಯವನ್ನು ದುರುಪಯೋಗಪಡಿಸಿಕೊಂಡು ಹಾದು ಹೋಗುವ ಪ್ರತಿಯೊಬ್ಬರಿಗೂ ನಿನ್ನ ಕಾಲು ಗಳನ್ನು ಅಗಲಿಸಿದಿ; ನಿನ್ನ ವ್ಯಭಿಚಾರವನ್ನು ವೃದ್ಧಿಸಿದಿ. ಇದಲ್ಲದೆ ಮಾಂಸದಲ್ಲಿ (ಶರೀರಭಾವದಲ್ಲಿ) ಮದಿ ಸಿದ ನಿನ್ನ ನೆರೆಯವರಾದ ಐಗುಪ್ತ್ಯರ ಸಂಗಡ ವ್ಯಭಿ ಚಾರ ಮಾಡಿದಿ; ಮತ್ತು ನನ್ನನ್ನು ರೇಗಿಸುವ ಹಾಗೆ ವ್ಯಭಿಚಾರವನ್ನು ಹೆಚ್ಚಿಸಿದಿ.
- Deuteronomy 32:15–21 ಧರ್ಮೋಪದೇಶಕಾಂಡ 32:15–21ಆದರೆ ಯೆಶುರೂನು ಕೊಬ್ಬಿ ಒದ್ದನು, ನೀನು ಕೊಬ್ಬಿದವನಾಗಿ ಉಬ್ಬಿದಿ, ನೀನು ಕೊಬ್ಬಿನಿಂದ ಮುಚ್ಚ ಲ್ಪಟ್ಟಿ. ಅವನು ತನ್ನನ್ನು ಉಂಟುಮಾಡಿದ ದೇವರನ್ನು ತೊರೆದು ತನ್ನ ರಕ್ಷಣೆಯ ಬಂಡೆಯನ್ನು ಅಲಕ್ಷ್ಯ ಮಾಡಿದನು. ಅನ್ಯದೇವತೆಗಳಿಂದ ಆತನಿಗೆ ಅವರು ರೋಷ ಹುಟ್ಟಿಸಿದರು. ಅಸಹ್ಯವಾದವುಗಳಿಂದ ಆತನಿಗೆ ಕೋಪ ವನ್ನು ಎಬ್ಬಿಸಿದರು. ದೇವರಿಗೆ ಅಲ್ಲ, ದೆವ್ವಗಳಿಗೆ, ಅವರು ಅರಿಯದ ದೇವರುಗಳಿಗೆ, ಇತ್ತಲಾಗಿ ಬಂದ ಹೊಸ ದೇವರು ಗಳಿಗೆ ನಿಮ್ಮ ಪಿತೃಗಳು ಭಯಪಡದವುಗಳಿಗೆ ಬಲಿ ಅರ್ಪಿಸಿದರು. ನಿನ್ನನ್ನು ಹುಟ್ಟಿಸಿದ ಬಂಡೆಯನ್ನು ನೆನಸದೆ ನಿನ್ನನ್ನು ರೂಪಿಸಿದ ದೇವರನ್ನು ಮರೆತುಬಿಟ್ಟಿದ್ದಿ. ಕರ್ತನು ಅದನ್ನು ನೋಡಿ ಕೋಪದಿಂದ ತನ್ನ ಕುಮಾರ ಕುಮಾರ್ತೆಯರನ್ನು ಅಸಹ್ಯಿಸಿಕೊಂಡನು. ಆತನು--ನನ್ನ ಮುಖವನ್ನು ಅವರಿಗೆ ಮರೆ ಮಾಡುವೆನು; ಅವರ ಅಂತ್ಯವು ಏನೆಂದು ನೋಡು ವೆನು; ಅವರು ಮೂರ್ಖ ಸಂತತಿಯೇ, ನಂಬಿಕೆಯಿಲ್ಲದ ಮಕ್ಕಳೇ. ದೇವರಲ್ಲದ್ದರಿಂದ ಅವರು ನನಗೆ ರೋಷ ಹುಟ್ಟಿಸಿ ದರು; ತಮ್ಮ ವ್ಯರ್ಥವಾದವುಗಳಿಂದ ನನಗೆ ಕೋಪ ವನ್ನು ಎಬ್ಬಿಸಿದರು. ಜನವಲ್ಲದ್ದರಿಂದ ನಾನು ಅವರಿಗೆ ರೋಷ ಹುಟ್ಟಿಸುವೆನು; ಮೂಢ ಜನಾಂಗದಿಂದ ಅವರಿಗೆ ಕೋಪವನ್ನೆಬ್ಬಿಸುವೆನು.
- Deuteronomy 31:16–20 ಧರ್ಮೋಪದೇಶಕಾಂಡ 31:16–20ಆಗ ಕರ್ತನು ಮೋಶೆಗೆ--ನೀನು ನಿನ್ನ ಪಿತೃಗಳ ಸಂಗಡ ಮಲಗುವಿ; ಈ ಜನರು ಎದ್ದು ತಾವು ಪ್ರವೇಶಿಸುವ ದೇಶದ ಅನ್ಯದೇವರುಗಳನ್ನು ಅನುಸರಿಸಿ ಜಾರತ್ವಮಾಡಿ ನನ್ನನ್ನು ಬಿಟ್ಟು ನಾನು ಅವರ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ವಿಾರುವರು. ಆ ದಿವಸದಲ್ಲಿ ನನ್ನ ಕೋಪವು ಅವರ ಮೇಲೆ ಉರಿಯು ವದು. ನಾನು ಅವರನ್ನು ಬಿಟ್ಟುಬಿಟ್ಟು ನನ್ನ ಮುಖವನ್ನು ಅವರಿಗೆ ಮರೆಮಾಡುವೆನು; (ವಿರೋಧಿಗಳು) ಅವ ರನ್ನು ನುಂಗಿ ಬಿಡುವರು; ಬಹಳ ಕೇಡುಗಳೂ ಇಕ್ಕಟ್ಟು ಗಳೂ ಅವರಿಗೆ ಸಂಭವಿಸುವವು; ಆ ದಿವಸದಲ್ಲಿ ಅವರು--ನಮ್ಮ ದೇವರು ನಮ್ಮ ಮಧ್ಯದಲ್ಲಿ ಇಲ್ಲದ ಕಾರಣ ಈ ಕೇಡುಗಳು ನಮ್ಮನ್ನು ಹಿಡಿದವಲ್ಲಾ ಎಂದು ಹೇಳುವರು. ಅವರು ಮಾಡಿದ ಎಲ್ಲಾ ಕೆಟ್ಟತನದ ನಿಮಿತ್ತವೂ ಅನ್ಯದೇವರುಗಳ ಕಡೆಗೆ ತಿರುಗಿದ್ದರಿಂದಲೂ ನಾನು ಆ ದಿವಸದಲ್ಲಿ ನನ್ನ ಮುಖವನ್ನು ಖಂಡಿತವಾಗಿ ಮರೆಮಾಡುವೆನು. ಹೀಗಿರುವದರಿಂದ ಈಗ ಈ ಹಾಡನ್ನು ಬರೆದು ಕೊಳ್ಳಿರಿ; ಇಸ್ರಾಯೇಲ್ ಮಕ್ಕಳಿಗೆ ಅದನ್ನು ಕಲಿಸು; ಇಸ್ರಾಯೇಲ್ ಮಕ್ಕಳಲ್ಲಿ ಈ ಹಾಡು ನನಗೆ ಸಾಕ್ಷಿಯಾ ಗಿರುವ ಹಾಗೆ ಅದನ್ನು ಅವರ ಬಾಯಿಗಳಲ್ಲಿ ಇಡು. ನಾನು ಅವರ ಪಿತೃಗಳಿಗೆ ಪ್ರಮಾಣಮಾಡಿದಂಥ ಹಾಲೂ ಜೇನೂ ಹರಿಯುವಂಥ ದೇಶಕ್ಕೆ ಅವರನ್ನು ತರಲಾಗಿ ಅವರು ತಿಂದು ತೃಪ್ತಿಯಾಗಿ ಕೊಬ್ಬಿದವ ರಾದಾಗ ಅವರು ಅನ್ಯದೇವರುಗಳ ಕಡೆಗೆ ತಿರುಗಿ ಕೊಂಡು ಅವುಗಳನ್ನು ಸೇವಿಸಿ ನನಗೆ ಕೋಪವನ್ನೆಬ್ಬಿಸಿ ನನ್ನ ಒಡಂಬಡಿಕೆಯನ್ನು ವಿಾರುವರು.
- 2 Kings 17:7–23 2 ಅರಸುಗಳು 17:7–23ಯಾಕೆ ಹೀಗಾಯಿತಂದರೆ, ಇಸ್ರಾಯೇಲಿನ ಮಕ್ಕಳು, ಐಗುಪ್ತದ ಅರಸನಾದ ಫರೋಹನ ಕೈಯಿಂದ ತಪ್ಪಿಸಿ ಐಗುಪ್ತದೇಶದೊಳಗಿಂದ ಬರ ಮಾಡಿದ ತಮ್ಮ ದೇವರಾದ ಕರ್ತನಿಗೆ ವಿರೋಧ ವಾಗಿ ಪಾಪಮಾಡಿ ಇತರ ದೇವರುಗಳಿಗೆ ಭಯಪಟ್ಟರು. ಇಸ್ರಾಯೇಲ್ಯರ ಮುಂದೆ ಕರ್ತನು ಹೊರ ಡಿಸಿಬಿಟ್ಟ ಅನ್ಯ ಜನಾಂಗಗಳ ಕಟ್ಟಳೆಗಳಲ್ಲಿಯೂ ಇಸ್ರಾ ಯೇಲಿನ ಅರಸುಗಳು ಮಾಡಿದ ಕಟ್ಟಳೆಗಳಲ್ಲಿಯೂ ನಡೆದರು. ಇಸ್ರಾಯೇಲಿನ ಮಕ್ಕಳು ಗುಪ್ತವಾಗಿ ತಮ್ಮ ದೇವರಾದ ಕರ್ತನಿಗೆ ವಿರೋಧವಾಗಿ ಅಯುಕ್ತ ವಾದವುಗಳನ್ನು ಮಾಡಿ ಬರುವ ಸ್ಥಳಗಳು ಮೊದಲು ಗೊಂಡು ಕೋಟೆಯುಳ್ಳ ಪಟ್ಟಣಗಳ ವರೆಗೂ ತಮ್ಮ ಎಲ್ಲಾ ಪಟ್ಟಣಗಳಲ್ಲಿ ತಮಗೆ ಉನ್ನತ ಸ್ಥಳಗಳನ್ನು ಕಟ್ಟಿಸಿ ಕೊಂಡಿದ್ದರು. ಇದಲ್ಲದೆ ಅವರು ಎತ್ತರವಾದ ಎಲ್ಲಾ ಗುಡ್ಡಗಳಲ್ಲಿ ತೋಪುಗಳನ್ನು ಹಾಕಿ ಹಸುರಾದ ಎಲ್ಲಾ ಮರಗಳ ಕೆಳಗೂ ತಮಗೆ ವಿಗ್ರಹಗಳನ್ನು ನಿಲ್ಲಿಸಿ ಅಲ್ಲಿ ಕರ್ತನು ತಮ್ಮ ಮುಂದೆ ಓಡಿಸಿಬಿಟ್ಟ ಅನ್ಯ ಜನಾಂಗಗಳ ಹಾಗೆ ಅವರು ಎಲ್ಲಾ ಉನ್ನತ ಸ್ಥಳಗಳಲ್ಲಿ ಧೂಪವನ್ನು ಸುಟ್ಟು ಕರ್ತನನ್ನು ಸಿಟ್ಟುಗೊಳಿಸುವ ಹಾಗೆ ಕೆಟ್ಟ ಕಾರ್ಯಗಳನ್ನು ಮಾಡಿದರು-- ನೀವು ಈ ಕಾರ್ಯವನ್ನು ಮಾಡಬೇಡಿರೆಂದು ಕರ್ತನು ತಮಗೆ ಹೇಳಿದ ಮಣ್ಣು ಪ್ರತಿಮೆಗಳನ್ನು ಸೇವಿಸಿದರು. ನೀವು ನಿಮ್ಮ ದುರ್ಮಾರ್ಗಗಳನ್ನು ಬಿಟ್ಟು ತಿರುಗಿ ನಾನು ನಿಮ್ಮ ಪಿತೃಗಳಿಗೆ ಆಜ್ಞಾಪಿಸಿದ, ಪ್ರವಾದಿಗಳಾದ ನನ್ನ ಸೇವಕರ ಮುಖಾಂತರ ನಾನು ನಿಮಗೆ ಕಳುಹಿಸಿದ ನ್ಯಾಯಪ್ರಮಾಣದ ಪ್ರಕಾರ ನನ್ನ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ಕೈಕೊಳ್ಳಿರೆಂದು ಕರ್ತನು ಎಲ್ಲಾ ಪ್ರವಾ ದಿಗಳ ಮುಖಾಂತರವಾಗಿಯೂ ಎಲ್ಲಾ ದರ್ಶಿಗಳ ಮುಖಾಂತರವಾಗಿಯೂ ಇಸ್ರಾಯೇಲಿಗೂ ಯೆಹೂ ದಕ್ಕೂ ಸಾಕ್ಷಿ ಹೇಳಿದನು. ಆದರೆ ಅವರು ಕೇಳ ದೆಯೂ ತಮ್ಮ ದೇವರಾದ ಕರ್ತನಲ್ಲಿ ನಂಬಿಕೆ ಇಡ ದೆಯೂ ತಮ್ಮ ಪಿತೃಗಳ ಕುತ್ತಿಗೆಯ ಹಾಗೆ ತಮ್ಮ ಕುತ್ತಿಗೆಯನ್ನು ಕಠಿಣಪಡಿಸಿ ಆತನ ಕಟ್ಟಳೆಗಳನ್ನೂ ಆತನು ತಮ್ಮ ಪಿತೃಗಳ ಸಂಗಡ ಮಾಡಿದ ಆತನ ಒಡಂಬಡಿಕೆಯನ್ನೂ ಆತನು ಅವರಿಗೆ ಹೇಳಿದ ಸಾಕ್ಷಿ ಗಳನ್ನೂ ಅಲಕ್ಷ್ಯಮಾಡಿ ವ್ಯರ್ಥವಾದದ್ದನ್ನು ಹಿಂಬಾ ಲಿಸಿ ವ್ಯರ್ಥವಾದವರಾಗಿ -- ನೀವು ಅವರ ಹಾಗೆ ಮಾಡಬೇಡಿರೆಂದು ಕರ್ತನು ಅವರಿಗೆ ಆಜ್ಞಾಪಿಸಿದರೂ ಅವರ ಸುತ್ತಲಿರುವ ಅನ್ಯಜನಾಂಗಗಳ ಹಿಂದೆ ಹೋದರು. ಇದಲ್ಲದೆ ಅವರು ತಮ್ಮ ದೇವರಾದ ಕರ್ತನ ಎಲ್ಲಾ ಆಜ್ಞೆಗಳನ್ನು ಬಿಟ್ಟು ತಮಗೆ ತಾವೇ ಎರಕ ಹೊಯ್ದ ವಿಗ್ರಹಗಳಾದ ಎರಡು ಹೋರಿಗಳನ್ನು ಮಾಡಿಕೊಂಡು ವಿಗ್ರಹಗಳ ತೋಪನ್ನು ಮಾಡಿ ಆಕಾಶದ ಸೈನ್ಯಕ್ಕೆಲ್ಲಾ ಅಡ್ಡಬಿದ್ದು ಬಾಳನನ್ನು ಸೇವಿಸಿ ತಮ್ಮ ಕುಮಾರರನ್ನೂ ಕುಮಾರ್ತೆಯರನ್ನೂ ಬೆಂಕಿಯಲ್ಲಿ ದಾಟಮಾಡಿ ಕಣಿಗಳನ್ನೂ ಶಕುನಗಳನ್ನೂ ಬಳಸಿ ಕರ್ತ ನಿಗೆ ಕೋಪ ಬರುವಂತೆ ಆತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಲು ತಮ್ಮನ್ನು ಮಾರಿಬಿಟ್ಟರು. ಆದದರಿಂದ ಕರ್ತನು ಇಸ್ರಾಯೇಲಿನ ಮೇಲೆ ಬಹುಕೋಪ ಗೊಂಡು ಅವರನ್ನು ತನ್ನ ಸಮ್ಮುಖದಿಂದ ತೆಗೆದುಹಾಕಿ ದನು. ಯೆಹೂದದ ಗೋತ್ರದ ಹೊರತಾಗಿ ಇನ್ಯಾರೂ ಉಳಿದದ್ದಿಲ್ಲ. ಆದರೆ ಯೆಹೂದದವರು ತಮ್ಮ ದೇವರಾದ ಕರ್ತನ ಆಜ್ಞೆಗಳನ್ನು ಕೈಕೊಳ್ಳದೆ ಇಸ್ರಾ ಯೇಲು ಮಾಡಿಕೊಂಡ ಕಟ್ಟಳೆಗಳಲ್ಲಿ ನಡೆದರು. ಆದದರಿಂದ ಕರ್ತನು ಇಸ್ರಾಯೇಲಿನ ಸಂತತಿ ಯನ್ನೆಲ್ಲಾ ಅಲಕ್ಷ್ಯಮಾಡಿಬಿಟ್ಟು ಅವರನ್ನು ಕುಂದಿಸಿ ಅವರನ್ನು ತನ್ನ ಸಮ್ಮುಖದಿಂದ ತಳ್ಳಿಬಿಡುವ ವರೆಗೆ ಅವರನ್ನು ಕೊಳ್ಳೆಗಾರರ ಕೈಯಲ್ಲಿ ಒಪ್ಪಿಸಿಕೊಟ್ಟನು. ಅವನು ಇಸ್ರಾಯೇಲನ್ನು ದಾವೀದನ ಮನೆಯಿಂದ ಹರಿದುಬಿಟ್ಟನು; ಅವರು ನೆಬಾಟನ ಮಗನಾದ ಯಾರೊಬ್ಬಾಮನನ್ನು ಅರಸನನ್ನಾಗಿ ಮಾಡಿಕೊಂಡರು. ಆಗ ಯಾರೊಬ್ಬಾಮನು ಇಸ್ರಾಯೇಲ್ಯರನ್ನು ಕರ್ತ ನನ್ನು ಹಿಂಬಾಲಿಸುವದರಿಂದ ತಪ್ಪಿಸಿ ಅವರನ್ನು ಮಹಾ ಪಾಪಮಾಡಲು ಪ್ರೇರೇಪಿಸಿದನು. ಕರ್ತನು ಪ್ರವಾ ದಿಗಳಾದ ತನ್ನ ಸೇವಕರ ಮುಖಾಂತರ ಹೇಳಿದ ಹಾಗೆ ಅವನು ಇಸ್ರಾಯೇಲನ್ನು ತನ್ನ ಸಮ್ಮುಖದಿಂದ ತೆಗೆದು ಹಾಕುವ ವರೆಗೆ ಇಸ್ರಾಯೇಲಿನ ಮಕ್ಕಳು ಯಾರೊ ಬ್ಬಾಮನು ಮಾಡಿದ ಎಲ್ಲಾ ಪಾಪಗಳಲ್ಲಿ ನಡೆದರು; ಅವುಗಳನ್ನು ತೊರೆದು ಬಿಡಲಿಲ್ಲ. ಹೀಗೆಯೇ ಇಸ್ರಾ ಯೇಲಿನವರು ಇಂದಿನ ವರೆಗೂ ತಮ್ಮ ದೇಶದಿಂದ ಅಶ್ಶೂರಿಗೆ ಸೆರೆಯಾಗಿ ಒಯ್ಯಲ್ಪಟ್ಟರು.