Psalms · chapter 78 · verse 55
Psalm 78:55 in Kannada
ಅನ್ಯಜನಾಂಗವನ್ನು ಅವರ ಮುಂದೆ ಹೊರಗೆ ಹಾಕಿ, ಅವರ ಬಾಧ್ಯತೆಯನ್ನು ಅಳತೆಮಾಡಿ, ಹಂಚಿ, ಅವರ ಗುಡಾರಗಳಲ್ಲಿ ಇಸ್ರಾಯೇಲಿನ ಗೋತ್ರ ಗಳು ವಾಸಿಸುವಂತೆ ಮಾಡಿದನು.
Anyajanaangavannu avara munde horage haaki, avara baadhyateyannu alatemaadi, hanchi, avara gudaaragalalli israayelina gotra galu vaasisuvante maadidanu.
Psalm 78:55 in English
- King James Version (KJV)
- He cast out the heathen also before them, and divided them an inheritance by line, and made the tribes of Israel to dwell in their tents.
- World English Bible (WEB)
- He also drove out the nations before them, allotted them for an inheritance by line, and made the tribes of Israel to dwell in their tents.
- American Standard Version (ASV)
- He drove out the nations also before them, And allotted them for an inheritance by line, And made the tribes of Israel to dwell in their tents.
- Bible in Basic English (BBE)
- Driving out nations before them, marking out the line of their heritage, and giving the people of Israel their tents for a resting-place.
- Darby Translation (DBY)
- And he drove out the nations before them, and allotted them for an inheritance by line, and made the tribes of Israel to dwell in their tents.
- Webster's Bible (WBS)
- He cast out the heathen also before them, and divided them an inheritance by line, and made the tribes of Israel to dwell in their tents.
- Young's Literal Translation (YLT)
- And casteth out nations from before them, And causeth them to fall in the line of inheritance, And causeth the tribes of Israel to dwell in their tents,
Read in context
- 53ಅವರನ್ನು ಸುರಕ್ಷಿತವಾಗಿ ನಡಿಸಿದಕಾರಣ ಅವರು ಹೆದರಲಿಲ್ಲ; ಆದರೆ ಸಮುದ್ರವು ಅವರ ಶತ್ರುಗಳನ್ನು ಮುಚ್ಚಿಬಿಟ್ಟಿತು.
- 54ತನ್ನ ಪರಿಶುದ್ದಾಲಯದ ಮೇರೆಗೂ ಆತನ ಬಲಗೈ ಕೊಂಡುಕೊಂಡ ಈ ಪರ್ವತಕ್ಕೂ ಅವರನ್ನು ಬರ ಮಾಡಿದನು.
- 55ಅನ್ಯಜನಾಂಗವನ್ನು ಅವರ ಮುಂದೆ ಹೊರಗೆ ಹಾಕಿ, ಅವರ ಬಾಧ್ಯತೆಯನ್ನು ಅಳತೆಮಾಡಿ, ಹಂಚಿ, ಅವರ ಗುಡಾರಗಳಲ್ಲಿ ಇಸ್ರಾಯೇಲಿನ ಗೋತ್ರ ಗಳು ವಾಸಿಸುವಂತೆ ಮಾಡಿದನು.
- 56ಆದರೆ ಅವರು ಮಹೋನ್ನತನಾದ ದೇವರನ್ನು ಪರೀಕ್ಷಿಸಿ ರೇಗಿಸಿದರು; ಆತನ ವಿಧಿಗಳನ್ನು ಕೈಕೊಳ್ಳ ಲಿಲ್ಲ.
- 57ತಮ್ಮ ಪಿತೃಗಳ ಹಾಗೆ ತಿರುಗಿಬಿದ್ದು ಅಪ ನಂಬಿಗಸ್ತರಾಗಿ ಮೋಸದ ಬಿಲ್ಲಿನ ಹಾಗೆ ವಾರೆ ಯಾದರು.
Cross references
- Joshua 13:7 ಯೆಹೋಶುವ 13:7ಈಗ ಈ ದೇಶವನ್ನು ಒಂಭತ್ತು ಗೋತ್ರಗಳಿಗೂ ಮನಸ್ಸೆಯ ಅರ್ಧಗೋತ್ರಕ್ಕೂ ಬಾಧ್ಯತೆಗಾಗಿ ಪಾಲು ಮಾಡಿಕೊಡು.
- Psalm 44:2 ಕೀರ್ತನೆಗಳು 44:2ನೀನು ನಿನ್ನ ಕೈಯಿಂದ ಜನಾಂಗಗಳನ್ನು ಹೊರಡಿಸಿ (ನಮ್ಮ ತಂದೆಗಳನ್ನು) ನೆಟ್ಟಿದ್ದೀ; ಜನರನ್ನು ಬಾಧೆಪಡಿಸಿ ಅವರನ್ನು ಹೊರಗೆ ಹಾಕಿದಿ.
- Nehemiah 9:22–25 ನೆಹೆಮೀಯ 9:22–25ಇದಲ್ಲದೆ ನೀನು ಅವರಿಗೆ ರಾಜ್ಯಗಳನ್ನೂ ಜನಾಂಗಗಳನ್ನೂ ಒಪ್ಪಿಸಿಕೊಟ್ಟು ಅವರಿಗೆ ಮೇರೆಗಳನ್ನು ವಿಭಾಗಿಸಿಕೊಟ್ಟಿ. ಹೀಗೆಯೇ ಅವರು ಸೀಹೋನನ ದೇಶವನ್ನೂ ಹೆಷ್ಬೋನಿನ ಅರಸನ ದೇಶವನ್ನೂ ಬಾಷಾ ನಿನ ಅರಸನಾದ ಓಗನ ದೇಶವನ್ನು ಸ್ವಾಧೀನಮಾಡಿ ಕೊಂಡರು. ಇದಲ್ಲದೆ ಅವರ ಮಕ್ಕಳನ್ನು ಆಕಾಶದ ನಕ್ಷತ್ರಗಳ ಹಾಗೆ ಹೆಚ್ಚಿಸಿ ಅವರು ಸ್ವಾಧೀನಮಾಡಿಕೊಳ್ಳಲು ಹೋಗುವರೆಂದು ನೀನು ಅವರ ಪಿತೃಗ ಳಿಗೆ ವಾಗ್ದಾನಮಾಡಿದ ದೇಶದಲ್ಲಿ ಅವರನ್ನು ಬರಮಾಡಿದಿ; ಹೀಗೆ ಮಕ್ಕಳು ಪ್ರವೇಶಿಸಿ ದೇಶವನ್ನು ಸ್ವಾಧೀನಮಾಡಿಕೊಂಡರು. ನೀನು ಅವರ ಮುಂದೆ ದೇಶದ ನಿವಾಸಿಗಳಾದ ಕಾನಾನ್ಯರನ್ನು ಕುಗ್ಗಿಸಿ ಅವರಿಗೆ ತಮ್ಮ ಇಚ್ಛೆಯ ಪ್ರಕಾರ ಮಾಡುವದಕ್ಕೆ ಅವರನ್ನೂ ಅವರ ಅರಸುಗಳನ್ನೂ ದೇಶದ ಜನರನ್ನೂ ಅವರ ಕೈಯಲ್ಲಿ ಒಪ್ಪಿಸಿಕೊಟ್ಟಿ. ಅವರು ಬಲವಾದ ಪಟ್ಟಣ ಗಳನ್ನೂ ರಸವತ್ತಾದ ಭೂಮಿಯನ್ನೂ ತೆಗೆದುಕೊಂಡು ಸಮಸ್ತ ಉತ್ತಮವಾದವುಗಳಿಂದ ತುಂಬಿದ ಮನೆ ಗಳನ್ನೂ ತೋಡಿದ ಬಾವಿಗಳನ್ನೂ ದ್ರಾಕ್ಷೇ ತೋಟ ಗಳನ್ನೂ ಇಪ್ಪೇತೋಪುಗಳನ್ನೂ ಸಮೃದ್ಧಿಯಾದ ಹಣ್ಣಿನ ಮರಗಳನ್ನೂ ಬಹಳವಾಗಿ ಸ್ವಾಧೀನಮಾಡಿಕೊಂಡರು. ಹೀಗೆ ಅವರು ತಿಂದು ತೃಪ್ತಿಪಟ್ಟು ಪುಷ್ಟಿಯಾಗಿ ನಿನ್ನ ದೊಡ್ಡ ಉಪಕಾರದಲ್ಲಿ ಆನಂದಪಟ್ಟರು.
- Deuteronomy 6:10–12 ಧರ್ಮೋಪದೇಶಕಾಂಡ 6:10–12ಇದಲ್ಲದೆ ನಿನ್ನ ದೇವರಾದ ಕರ್ತನು ನಿನ್ನ ಪಿತೃಗಳಾದ ಅಬ್ರಹಾಮ್ ಇಸಾಕ್ ಯಾಕೋಬರಿಗೆ ಪ್ರಮಾಣಮಾಡಿದ ದೇಶದಲ್ಲಿ ನಿನ್ನನ್ನು ಸೇರಿಸಿ ನೀನು ಕಟ್ಟದ ದೊಡ್ಡದಾದ ಒಳ್ಳೇ ಪಟ್ಟಣಗಳನ್ನೂ ನೀನು ತುಂಬದಿದ್ದ ಎಲ್ಲಾ ಒಳ್ಳೆಯವುಗಳು ತುಂಬಿರುವ ಮನೆ ಗಳನ್ನೂ ಅಗೆಯದಿರುವ ಬಾವಿಗಳನ್ನೂ ನೆಡದ ದ್ರಾಕ್ಷೇ ತೋಟಗಳನ್ನೂ ಇಪ್ಪೇತೋಟಗಳನ್ನೂ ನಿನಗೆ ಕೊಡ ಲಾಗಿ ನೀನು ತಿಂದು ತೃಪ್ತಿಯಾದಾಗ ಐಗುಪ್ತದೇಶದ ದಾಸತ್ವದ ಮನೆಯೊಳಗಿಂದ ನಿನ್ನನ್ನು ಹೊರಗೆ ಬರ ಮಾಡಿದ ಕರ್ತನನ್ನು ಮರೆಯದ ಹಾಗೆ ನೋಡಿ ಕೋ.
- Numbers 33:54 ಅರಣ್ಯಕಾಂಡ 33:54ನೀವು ದೇಶವನ್ನು ನಿಮ್ಮ ಗೋತ್ರಗಳ ಪ್ರಕಾರ ಚೀಟಿನಿಂದ ಸ್ವಾಧೀನಮಾಡಿ ಹಂಚಿಕೊಳ್ಳಬೇಕು; ಹೆಚ್ಚಾದವರಿಗೆ ಸ್ವಾಸ್ತ್ಯವನ್ನು ಹೆಚ್ಚಿಸಿ ಕಡಿಮೆಯಾದ ವರಿಗೆ ಸ್ವಾಸ್ತ್ಯವನ್ನು ಕಡಿಮೆಮಾಡಬೇಕು; ಒಬ್ಬೊಬ್ಬ ನಿಗೆ ಚೀಟು ಎಲ್ಲಿ ಬೀಳುವದೋ ಅದೇ ಅವನಿಗಾಗ ಬೇಕು; ನಿಮ್ಮ ಪಿತೃಗಳ ಗೋತ್ರದ ಪ್ರಕಾರ ನೀವು ಸ್ವಾಧೀನಮಾಡಿಕೊಳ್ಳಬೇಕು.
- Psalm 136:18–22 ಕೀರ್ತನೆಗಳು 136:18–22ಪ್ರಸಿ ದ್ಧರಾದ ಅರಸುಗಳನ್ನು ಕೊಂದುಹಾಕಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ. ಅಮೋರಿಯರ ಅರಸನಾದ ಸೀಹೋನನು ಒಬ್ಬ; ಆತನ ಕರುಣೆಯು ಎಂದೆಂದಿಗೂ ಅದೆ. ಬಾಷಾ ನಿನ ಅರಸನಾದ ಓಗನೊಬ್ಬ; ಆತನ ಕರುಣೆಯು ಎಂದೆಂದಿಗೂ ಅದೆ. ಅವರ ದೇಶವನ್ನು ಬಾಧ್ಯತೆ ಯಾಗಿ ಕೊಟ್ಟಾತನನ್ನು ಕೊಂಡಾಡಿರಿ; ಆತನ ಕರು ಣೆಯು ಎಂದೆಂದಿಗೂ ಅದೆ. ತನ್ನ ಸೇವಕನಾದ ಇಸ್ರಾಯೇಲಿಗೆ ಅದು ಬಾಧ್ಯತೆಯಾಗಿದೆ; ಆತನ ಕರುಣೆಯು ಎಂದೆಂದಿಗೂ ಅದೆ.
- Joshua 6:1–21 ಯೆಹೋಶುವ 6:1–21ಆಗ ಇಸ್ರಾಯೇಲ್ ಮಕ್ಕಳ ನಿಮಿತ್ತವಾಗಿ ಒಬ್ಬರೂ ಹೊರಗೆ ಬಾರದ ಹಾಗೆಯೂ ಒಳಗೆ ಹೋಗದ ಹಾಗೆಯೂ ಯೆರಿಕೋವು ಭದ್ರ ವಾಗಿ ಮುಚ್ಚಲ್ಪಟ್ಟಿತು. ಆಗ ಕರ್ತನು ಯೆಹೋಶುವ ನಿಗೆ--ನೋಡು, ಯೆರಿಕೋವನ್ನೂ ಅದರ ಅರಸನನ್ನೂ ಬಲವುಳ್ಳ ಪರಾಕ್ರಮಿಗಳನ್ನೂ ನಿನ್ನ ಕೈಯಲ್ಲಿ ಒಪ್ಪಿಸಿ ಕೊಟ್ಟಿದ್ದೇನೆ. ಯುದ್ಧ ಸನ್ನದ್ಧರಾದ ನೀವೆಲ್ಲರೂ ಪಟ್ಟಣ ವನ್ನು ಸುತ್ತಬೇಕು, ಅಂದರೆ ಒಂದು ಸಾರಿ ಪಟ್ಟಣದ ಸುತ್ತಲೂ ಹೋಗಬೇಕು. ಈ ಪ್ರಕಾರ ಆರು ದಿವಸಗಳು ಮಾಡಬೇಕು. ಏಳು ಮಂದಿ ಯಾಜಕರು ಟಗರಿನ ಕೊಂಬುಗಳ ಏಳು ತುತೂರಿಗಳನ್ನು ಹಿಡುಕೊಂಡು ಮಂಜೂಷದ ಮುಂದೆ ಹೋಗಬೇಕು. ಆದರೆ ಅವರು ಏಳನೇ ದಿನ ಪಟ್ಟಣವನ್ನು ಏಳುಸಾರಿ ಸುತ್ತಬೇಕು. ಯಾಜಕರು ತುತೂರಿಗಳನ್ನು ಊದಬೇಕು. ಅವರು ಟಗರಿನ ಕೊಂಬುಗಳ ತುತೂರಿಗಳಿಂದ ದೀರ್ಘ ಧ್ವನಿ ಗೈಯುವಾಗ ನೀವು ಆ ತುತೂರಿಯ ಧ್ವನಿಯನ್ನು ಕೇಳಿದವರಾಗಿ ಜನರೆಲ್ಲರು ಮಹಾ ಆರ್ಭಟವಾಗಿ ಆರ್ಭಟಿಸಬೇಕು; ಆಗ ಆ ಪಟ್ಟಣದ ಗೋಡೆಯು ನೆಲಸಮವಾಗಿ ಬಿದ್ದು ಹೋಗುವದು. ಜನರಲ್ಲಿ ಪ್ರತಿಯೊಬ್ಬನು ತನ್ನ ಮುಂದೆ ನೇರವಾಗಿ ಹೋಗುವನು ಎಂದು ಹೇಳಿದನು. ಆಗ ನೂನನ ಮಗನಾದ ಯೆಹೋಶುವನು ಯಾಜಕರನ್ನು ಕರೆದು ಅವರಿಗೆ--ನೀವು ಒಡಂಬಡಿ ಕೆಯ ಮಂಜೂಷವನ್ನು ಎತ್ತಿಕೊಳ್ಳಿರಿ; ಏಳು ಮಂದಿ ಯಾಜಕರು ಟಗರಿನ ಕೊಂಬುಗಳ ಏಳು ತುತೂರಿ ಗಳನ್ನು ಕರ್ತನ ಮಂಜೂಷದ ಮುಂದೆ ಹಿಡುಕೊಂಡು ಹೋಗಲಿ ಅಂದನು. ಜನರಿಗೆ--ನೀವು ಹಾದು ಹೋಗಿ ಪಟ್ಟಣವನ್ನು ಸುತ್ತಿರಿ; ಯುದ್ಧಸನ್ನದ್ಧರು ಕರ್ತನ ಮಂಜೂಷದ ಮುಂದೆ ಹೋಗಲಿ ಅಂದನು. ಯೆಹೋಶುವನು ಜನರ ಸಂಗಡ ಮಾತನಾಡಿದ ತರುವಾಯ ಆದದ್ದೇನಂದರೆ, ಟಗರಿನ ಕೊಂಬುಗಳ ಏಳು ತುತೂರಿಗಳನ್ನು ಹಿಡುಕೊಂಡ ಏಳು ಮಂದಿ ಯಾಜಕರು ತುತೂರಿಗಳನ್ನು ಊದುತ್ತಾ ಕರ್ತನ ಮುಂದೆ ನಡೆದರು. ಕರ್ತನ ಒಡಂಬಡಿಕೆಯ ಮಂಜೂ ಷವು ಅವರನ್ನು ಹಿಂಬಾಲಿಸಿತು. ಹೀಗೆ ಯುದ್ಧಸನ್ನದ್ಧ ರಾದ ಜನರು ತುತೂರಿಗಳನ್ನು ಊದುವ ಯಾಜಕರ ಮುಂದೆ ಹೋದರು. ಯಾಜಕರು ತುತೂರಿಯನ್ನು ಊದುತ್ತಿರುವಾಗ ಹಿಂದಿನ ಸೈನ್ಯವು ಮಂಜೂಷದ ಹಿಂದೆ ನಡೆದು ಬಂತು. ಯೆಹೋಶುವನು ಜನರಿಗೆನೀವು ಆರ್ಭಟಿಸಬಾರದು, ನಿಮ್ಮ ಶಬ್ದವು ಕೇಳಿಸ ಬಾರದು; ನಿಮ್ಮ ಬಾಯಿಂದ ಯಾವ ಮಾತು ಹೊರಡ ಬಾರದು; ನಾನು ಆರ್ಭಟಿಸಿರೆಂದು ಹೇಳುವ ದಿನದಲ್ಲಿ ಆರ್ಭಟಿಸಬೇಕು ಎಂದು ಆಜ್ಞಾಪಿಸಿದನು. ಹೀಗೆ ಯೇ ಕರ್ತನ ಮಂಜೂಷವು ಪಟ್ಟಣವನ್ನು ಒಂದು ಸಾರಿ ಸುತ್ತಿದ ಮೇಲೆ ಅವರು ಪಾಳೆಯಕ್ಕೆ ಬಂದು ಅಲ್ಲಿ ವಾಸಿಸಿದರು. ಯೆಹೋಶುವನು ಬೆಳಿಗ್ಗೆ ಎದ್ದನು; ಯಾಜಕರು ಕರ್ತನ ಮಂಜೂಷವನ್ನು ತೆಗೆದುಕೊಂಡರು. ಟಗ ರಿನ ಕೊಂಬುಗಳ ಏಳು ತುತೂರಿಗಳನ್ನು ಹಿಡಿಯುವ ಏಳುಮಂದಿ ಯಾಜಕರು ತುತೂರಿಗಳನ್ನು ಊದುತ್ತಾ ಕರ್ತನ ಒಡಂಬಡಿಕೆಯ ಮಂಜೂಷದ ಮುಂದೆ ನಡೆಯುತ್ತಾ ಹೋದರು. ಯುದ್ಧಕ್ಕೆ ಸಿದ್ಧರಾದ ಜನರು ಅವರ ಮುಂದೆ ಹೋದರು. ಆದರೆ ಯಾಜಕರು ತುತೂರಿಗಳನ್ನು ಊದುತ್ತಾ ಹೋಗುವಾಗ ಕರ್ತನ ಮಂಜೂಷದ ಹಿಂದೆ ಸೈನ್ಯದವರು ನಡೆದರು. ಹೀಗೆ ಎರಡನೆ ದಿನದಲ್ಲಿ ಅವರು ಪಟ್ಟಣವನ್ನು ಒಂದು ಸಾರಿ ಸುತ್ತಿ ಬಂದು ಪಾಳೆಯಕ್ಕೆ ಹಿಂತಿರುಗಿದರು. ಹೀಗೆಯೇ ಆರು ದಿವಸ ಮಾಡಿದರು. ಆದರೆ ಏಳನೇ ದಿವಸ ಸೂರ್ಯೋದಯವಾಗುವಾಗ ಅವರು ಎದ್ದು ಪಟ್ಟಣವನ್ನು ಅದೇ ರೀತಿಯಾಗಿ ಏಳು ಸಾರಿ ಸುತ್ತಿಬಂದರು; ಆ ದಿನದಲ್ಲಿ ಮಾತ್ರವೇ ಪಟ್ಟಣವನ್ನು ಏಳು ಸಾರಿ ಸುತ್ತಿ ಬಂದರು. ಏಳನೇ ಸಾರಿ ಯಾಜಕರು ತುತೂರಿಗಳನ್ನು ಊದುವಾಗ ಆದದ್ದೇನಂದರೆ, ಯೆಹೋಶುವನು ಜನರಿಗೆ--ಆರ್ಭಟಿಸಿರಿ; ಕರ್ತನು ನಿಮಗೆ ಈ ಪಟ್ಟಣವನ್ನು ಕೊಟ್ಟಿದ್ದಾನೆ ಅಂದನು. ಇದಲ್ಲದೆ ಈ ಪಟ್ಟಣವೂ ಅದರಲ್ಲಿರುವ ಸಮಸ್ತವೂ ಕರ್ತನ ಶಾಪಕ್ಕೊಳಗಾಗುವದು; ರಾಹಾಬಳೆಂಬ ಸೂಳೆಯೂ ಆಕೆಯ ಮನೆಯಲ್ಲಿ ಇರುವವರೆಲ್ಲರೂ ಮಾತ್ರ ಉಳಿಯಲಿ. ಯಾಕಂದರೆ ನಾವು ಕಳುಹಿಸಿದ ದೂತರನ್ನು ಆಕೆಯು ಬಚ್ಚಿಟ್ಟಳು. ನೀವು ಶಾಪ ಕ್ಕೊಳಗಾದವುಗಳನ್ನು ತೆಗೆದುಕೊಂಡಾಗ ನಿಮ್ಮನ್ನು ಶಾಪಕ್ಕೆ ಈಡಾಗಿ ಮಾಡಿಕೊಂಡು ಇಸ್ರಾಯೇಲಿನ ದಂಡನ್ನು ಶಾಪಕ್ಕೆ ಈಡುಮಾಡಿ ತೊಂದರೆಪಡಿಸದ ಹಾಗೆ ಶಾಪಕ್ಕೆ ಈಡಾದವುಗಳನ್ನು ತೆಗೆದುಕೊಳ್ಳದೆ ಬಹು ಎಚ್ಚರಿಕೆಯಾಗಿರ್ರಿ. ಎಲ್ಲಾ ಬೆಳ್ಳಿ ಬಂಗಾರವೂ ಹಿತ್ತಾಳೆ ಕಬ್ಬಿಣ ಪಾತ್ರೆಗಳೂ ಕರ್ತನಿಗೆ ವಿಾಸಲಾಗಿರ ಬೇಕು. ಅವು ಕರ್ತನ ಭಂಡಾರಕ್ಕೆ ಸೇರಬೇಕು ಅಂದನು. ಹೀಗೆ ಯಾಜಕರು ತುತೂರಿಗಳನ್ನು ಊದಿದಾಗ ಜನರು ಆರ್ಭಟಿಸಿದರು. ತುತ್ತೂರಿಯ ಶಬ್ದವನ್ನು ಜನರು ಕೇಳಿದಾಗ ಮಹಾ ಆರ್ಭಟವಾಗಿ ಆರ್ಭಟಿಸುತ್ತಲೇ ಗೋಡೆಯು ನೆಲಸಮವಾಗಿ ಕೆಳಗೆ ಬಿತ್ತು; ಹೀಗೆ ಜನರಲ್ಲಿ ಪ್ರತಿಯೊಬ್ಬನು ತನ್ನ ಮುಂದೆ ನೇರವಾಗಿ ಏರಿಹೋದನು. ಆಗ ಪಟ್ಟಣವು ಅವರಿಗೆ ಸ್ವಾಧೀನ ವಾಯಿತು. ಪಟ್ಟಣದಲ್ಲಿರುವ ಎಲ್ಲಾ ಸ್ತ್ರೀ ಪುರುಷ ರನ್ನೂ ಹಿರಿಕಿರಿಯರನ್ನೂ ಕುರಿದನಗಳನ್ನೂ ಕತ್ತೆ ಗಳನ್ನೂ ಕತ್ತಿಯ ಬಾಯಿಂದ ಸಂಪೂರ್ಣವಾಗಿ ನಾಶ ಮಾಡಿದರು.
- Psalm 105:44–45 ಕೀರ್ತನೆಗಳು 105:44–45ಅವರು ಪ್ರಜೆಗಳ ಕಷ್ಟಾರ್ಜಿತವನ್ನು ಸ್ವಾಧೀನಮಾಡಿಕೊಂಡರು.ಆತನ ನಿಯಮಗಳನ್ನು ಕೈಕೊಂಡು ನ್ಯಾಯಪ್ರಮಾಣ ಗಳನ್ನೂ ಕಾಪಾಡುವದಕ್ಕಾಗಿ ಆತನು ಅನ್ಯಜನಾಂಗದ ದೇಶಗಳನ್ನು ಅವರಿಗೆ ಕೊಟ್ಟನು. ಕರ್ತನನ್ನು ಸ್ತುತಿಸಿರಿ. ಆತನ ನಿಯಮಗಳನ್ನು ಕೈಕೊಂಡು ನ್ಯಾಯಪ್ರಮಾಣ ಗಳನ್ನೂ ಕಾಪಾಡುವದಕ್ಕಾಗಿ ಆತನು ಅನ್ಯಜನಾಂಗದ ದೇಶಗಳನ್ನು ಅವರಿಗೆ ಕೊಟ್ಟನು. ಕರ್ತನನ್ನು ಸ್ತುತಿಸಿರಿ.
- Psalm 135:10–12 ಕೀರ್ತನೆಗಳು 135:10–12ಆತನು ದೊಡ್ಡ ಜನಾಂಗಗಳನ್ನೂ ಬಲವಾದ ಅರಸುಗಳನ್ನೂ ಕೊಂದುಹಾಕಿದನು. ಅಮೋರಿ ಯರ ಅರಸನಾದ ಸೀಹೋನನನ್ನೂ ಬಾಷಾನಿನ ಅರಸನಾದ ಓಗನನ್ನೂ ಕಾನಾನಿನ ಎಲ್ಲಾ ರಾಜ್ಯ ಗಳನ್ನೂ ಹೊಡೆದನು. ಅವರ ದೇಶವನ್ನು ಬಾಧ್ಯತೆ ಯಾಗಿ ಅಂದರೆ ತನ್ನ ಜನರಾದ ಇಸ್ರಾಯೇಲಿಗೆ ಬಾಧ್ಯತೆಯಾಗಿ ಕೊಟ್ಟನು.
- Joshua 19:51 ಯೆಹೋಶುವ 19:51ಯಾಜಕನಾದ ಎಲಿಯಾ ಜರನೂ ನೂನನ ಮಗನಾದ ಯೆಹೋಶುವನೂ ಇಸ್ರಾಯೇಲಿನ ಮಕ್ಕಳ ಗೋತ್ರಗಳ ಪಿತೃಗಳ ಹಿರಿಯರೂ ಶೀಲೋವಿನಲ್ಲಿ ಸಭೆಯ ಗುಡಾರದ ಬಾಗಲ ಬಳಿಯಲ್ಲಿ ಕರ್ತನ ಸಮ್ಮುಖದಲ್ಲಿ ಚೀಟು ಹಾಕಿ ಹಂಚಿಕೊಟ್ಟ ಬಾಧ್ಯತೆಗಳು ಇವೇ. ಹೀಗೆ ಅವರು ದೇಶವನ್ನು ಭಾಗವಾಗಿ ಹಂಚಿಕೊಂಡು ಪೂರೈಸಿದರು.
- Joshua 23:4 ಯೆಹೋಶುವ 23:4ಇಗೋ, ನಾನು ಯೊರ್ದನ್ ಮೊದಲುಗೊಂಡು ಪಶ್ಚಿಮಕ್ಕಿರುವ ದೊಡ್ಡ ಸಮುದ್ರದ ವರೆಗೂ ಜನಾಂಗಗಳನ್ನು ಕಡಿದು ಉಳಿದ ಸಕಲ ಜನಾಂಗಗಳ ದೇಶಗಳನ್ನು ನಿಮ್ಮ ಗೋತ್ರಗಳಿಗೆ ಚೀಟು ಹಾಕಿ ನಿಮಗೆ ಹಂಚಿಕೊಟ್ಟೆನು.