Psalms · chapter 79 · verse 3
Psalm 79:3 in Kannada
ಅವರ ರಕ್ತವನ್ನು ಯೆರೂಸಲೇಮಿನ ಸುತ್ತಲೂ ನೀರಿನ ಹಾಗೆ ಚೆಲ್ಲಿದ್ದಾರೆ; ಅವರನ್ನು ಹೂಣಿಡುವ ವನೊಬ್ಬನೂ ಇಲ್ಲ.
Avara raktavannu yeroosalemina suttaloo neerina haage chelliddaare; avarannu hooniduva vanobbanoo illa.
Psalm 79:3 in English
- King James Version (KJV)
- Their blood have they shed like water round about Jerusalem; and [there was] none to bury [them].
- World English Bible (WEB)
- They have shed their blood like water around Jerusalem. There was no one to bury them.
- American Standard Version (ASV)
- Their blood have they shed like water round about Jerusalem; And there was none to bury them.
- Bible in Basic English (BBE)
- Their blood has been flowing like water round about Jerusalem; there was no one to put them in their last resting-place.
- Darby Translation (DBY)
- Their blood have they shed like water round about Jerusalem, and there was none to bury [them].
- Webster's Bible (WBS)
- Their blood have they shed like water around Jerusalem; and [there was] none to bury [them] .
- Young's Literal Translation (YLT)
- They have shed their blood As water round about Jerusalem, And there is none burying.
Read in context
- 1ದೇವರೇ, ಅನ್ಯಜನಾಂಗಗಳು ನಿನ್ನ ಬಾಧ್ಯತೆಯೊಳಗೆ ಬಂದು, ನಿನ್ನ ಪರಿಶುದ್ಧ ಮಂದಿರವನ್ನು ಅಪವಿತ್ರ ಮಾಡಿ, ಯೆರೂಸಲೇಮನ್ನು ಹಾಳು ದಿಬ್ಬಗಳಾಗಿ ಮಾಡಿದ್ದಾರೆ.
- 2ನಿನ್ನ ಸೇವಕರ ಹೆಣಗಳನ್ನು ಆಕಾಶದ ಪಕ್ಷಿಗಳಿಗೂ ಪರಿಶುದ್ಧರ ಮಾಂಸ ವನ್ನು ಭೂಮಿಯ ಮೃಗಗಳಿಗೂ ಆಹಾರವಾಗಿ ಕೊಟ್ಟಿ ದ್ದಾರೆ.
- 3ಅವರ ರಕ್ತವನ್ನು ಯೆರೂಸಲೇಮಿನ ಸುತ್ತಲೂ ನೀರಿನ ಹಾಗೆ ಚೆಲ್ಲಿದ್ದಾರೆ; ಅವರನ್ನು ಹೂಣಿಡುವ ವನೊಬ್ಬನೂ ಇಲ್ಲ.
- 4ನಮ್ಮ ನೆರೆಯವರಿಗೆ ನಿಂದೆಯೂ ನಮ್ಮ ಸುತ್ತಲಿರುವವರಿಗೆ ಗೇಲಿಯೂ ಹಾಸ್ಯವೂ ಆಗಿದ್ದೇವೆ.
- 5ಕರ್ತನೇ, ನೀನು ಯಾವಾಗಲೂ ಕೋಪ ಮಾಡು ವದೂ ನಿನ್ನ ರೋಷವು ಬೆಂಕಿಯ ಹಾಗೆ ಉರಿಯು ವದೂ ಎಷ್ಟರವರೆಗೆ?
Cross references
- Jeremiah 14:16 ಯೆರೆಮೀಯ 14:16ಅವರ ಪ್ರವಾದನೆಯನು ಕೇಳುವ ಜನರು ಕ್ಷಾಮದ ಮತ್ತು ಕತ್ತಿಯ ನಿಮಿತ್ತ ಯೆರೂಸಲೇಮಿನ ಬೀದಿಗಳಲ್ಲಿ ಬಿಸಾಡಲ್ಪಡುವರು; ಅವರನ್ನೂ ಹೆಂಡತಿಯರನ್ನೂ ಕುಮಾರರನ್ನೂ ಕುಮಾರ್ತೆಯರನ್ನೂ ಹೂಣಿಡುವದಕ್ಕೆ ಯಾರೂ ಇರು ವದಿಲ್ಲ; ನಾನು ಅವರ ಕೆಟ್ಟತನವನ್ನು ಅವರ ಮೇಲೆ ಹೊಯಿದು ಬಿಡುವೆನು.
- Jeremiah 16:4 ಯೆರೆಮೀಯ 16:4ಅವರು ಬಹು ಕ್ರೂರವಾದ ಮರಣಗಳಿಂದ ಸಾಯುವರು; ಅವರಿಗೋಸ್ಕರ ಗೋಳಾಟ ಆಗುವದಿಲ್ಲ; ಅವರು ಹೂಣಿಡಲ್ಪಡುವದಿಲ್ಲ; ಭೂಮಿಯ ಮೇಲೆ ಅವರು ಗೊಬ್ಬರವಾಗುವರು; ಕತ್ತಿಯಿಂದಲೂ ಕ್ಷಾಮದಿಂದಲೂ ಸಂಹಾರವಾಗುವರು; ಅವರ ಹೆಣಗಳು ಆಕಾಶದ ಪಕ್ಷಿಗಳಿಗೂ ಭೂಮಿಯ ಮೃಗಗಳಿಗೂ ಆಹಾರ ವಾಗುವವು.
- Revelation 11:9 ಪ್ರಕಟನೆ 11:9ಆಗ ಪ್ರಜೆ ಕುಲ ಭಾಷೆ ಜನಾಂಗಗಳವರು ಸತ್ತುಹೋದ ಅವರ ಶವಗಳನ್ನು ಮೂರುವರೆ ದಿನಗಳು ನೋಡುವರು, ಸತ್ತುಹೋದ ಅವರ ಶವಗಳನ್ನು ಸಮಾಧಿಯಲ್ಲಿ ಇಡ ಗೊಡಿಸುವದಿಲ್ಲ.
- Matthew 23:35 ಮತ್ತಾಯನು 23:35ಹೀಗೆ ನೀತಿವಂತನಾದ ಹೇಬೆಲನ ರಕ್ತ ಮೊದಲು ಗೊಂಡು ದೇವಾಲಯಕ್ಕೂ ಯಜ್ಞವೇದಿಗೂ ನಡುವೆ ನೀವು ಕೊಂದು ಹಾಕಿದ ಬರಕೀಯನ ಮಗನಾದ ಜಕರೀಯನ ರಕ್ತದವರೆಗೂ ಭೂಮಿಯ ಮೇಲೆ ಸುರಿಸಲ್ಪಟ್ಟ ಎಲ್ಲಾ ನೀತಿವಂತರ ರಕ್ತಾಪರಾಧವು ನಿಮ್ಮ ಮೇಲೆ ಬರುವದು.
- Jeremiah 25:33 ಯೆರೆಮೀಯ 25:33ಆ ದಿವಸದಲ್ಲಿ ಭೂಮಿಯ ಈ ಮೇರೆಯಿಂದ ಭೂಮಿಯ ಆ ಮೇರೆಯ ವರೆಗೆ ಕರ್ತ ನಿಂದ ಕೊಂದುಹಾಕಲ್ಪಟ್ಟವರು ಇರುವರು; ಅವರಿ ಗೋಸ್ಕರ ಗೋಳಾಡುವದಿಲ್ಲ; ಅವರನ್ನು ಕೂಡಿಸುವ ದಿಲ್ಲ; ಅವರನ್ನು ಹೂಣಿಡುವದಿಲ್ಲ; ಅವರು ಭೂಮಿಯ ಮೇಲೆ ಗೊಬ್ಬರವಾಗುವರು.
- Romans 8:36 ರೋಮಾಪುರದವರಿಗೆ 8:36ನಾವು ನಿನ್ನ ನಿಮಿತ್ತ ದಿನವೆಲ್ಲಾ ಕೊಲೆಗೆ ಗುರಿಯಾಗಿದ್ದೇವೆ; ನಾವು ಕೊಯ್ಗುರಿಗಳಂತೆ ಎಣಿಸಲ್ಪಡುತ್ತಿದ್ದೇವೆ ಎಂದು ಬರೆಯಲ್ಪಟ್ಟಿದೆ.
- Psalm 141:7 ಕೀರ್ತನೆಗಳು 141:7ಭೂಮಿಯಲ್ಲಿ ಮರವನ್ನು ಕಡಿದು ಸೀಳುವವನ ಹಾಗೆ ನಮ್ಮ ಎಲುಬುಗಳು ಸಮಾಧಿಯ ಬಾಯಿಯ ಹತ್ತಿರ ಚದುರಿ ಅವೆ.
- Jeremiah 15:3 ಯೆರೆಮೀಯ 15:3ಕರ್ತನು--ನಾನು ಅವರಿಗೆ ವಿರೋಧವಾಗಿ ನಾಲ್ಕು ತರವಾದವುಗಳನ್ನು ಅಂದರೆ ಕೊಲ್ಲುವದಕ್ಕೆ ಕತ್ತಿಯನ್ನೂ ಹರಿಯುವದಕ್ಕೆ ನಾಯಿಗಳನ್ನೂ ತಿನ್ನುವದಕ್ಕೂ ನಾಶ ಮಾಡುವದಕ್ಕೂ ಆಕಾಶದ ಪಕ್ಷಿಗಳನ್ನೂ ಭೂಮಿಯ ಮೃಗಗಳನ್ನೂ ನೇಮಿಸುತ್ತೇನೆ.
- Psalm 79:10 ಕೀರ್ತನೆಗಳು 79:10ಅವರ ದೇವರು ಎಲ್ಲಿ ಎಂದು ಅನ್ಯಜನಾಂಗಗಳು ಯಾಕೆ ಹೇಳಬೇಕು? ಚೆಲ್ಲಿರುವ ನಿನ್ನ ಸೇವಕರ ರಕ್ತದ ಪ್ರತಿ ದಂಡನೆಯನ್ನು ನಮ್ಮ ಕಣ್ಣುಗಳ ಮುಂದೆ ಅನ್ಯ ಜನಾಂಗಗಳಲ್ಲಿ ತಿಳಿಯಲ್ಪಡಲಿ.
- Jeremiah 34:20 ಯೆರೆಮೀಯ 34:20ಅವರ ಶತ್ರುಗಳ ಕೈಯಲ್ಲಿಯೂ ಅವರ ಪ್ರಾಣವನ್ನು ಹುಡುಕು ವವರ ಕೈಯಲ್ಲಿಯೂ ಒಪ್ಪಿಸುವೆನು: ಅವರ ಹೆಣಗಳು ಆಕಾಶದ ಪಕ್ಷಿಗಳಿಗೂ ಭೂಮಿಯ ಮೃಗಗಳಿಗೂ ಆಹಾರವಾಗುವವು.
- Revelation 16:6 ಪ್ರಕಟನೆ 16:6ಅವರು ಪರಿಶುದ್ಧರ ಮತ್ತು ಪ್ರವಾದಿಗಳ ರಕ್ತವನ್ನು ಸುರಿಸಿದರು; ನೀನು ಅವರಿಗೆ ರಕ್ತವನ್ನೇ ಕುಡಿಯುವದಕ್ಕೆ ಕೊಟ್ಟಿದ್ದೀ;ಇದಕ್ಕೆ ಅವರು ಪಾತ್ರರು ಎಂದು ಹೇಳುವದನ್ನು ನಾನು ಕೇಳಿದೆನು.
- Jeremiah 8:1–2 ಯೆರೆಮೀಯ 8:1–2ಕರ್ತನು ಹೇಳುವದೇನಂದರೆ--ಆ ಕಾಲದಲ್ಲಿ ಯೆಹೂದದ ಅರಸರು ಅವರ ಪ್ರಧಾನರು ಯಾಜಕರು ಪ್ರವಾದಿಗಳು ಯೆರೂಸಲೇಮಿನ ನಿವಾಸಿಗಳು ಇವರೆಲ್ಲರ ಎಲುಬುಗಳನ್ನು ಅವರ ಸಮಾಧಿಗಳೊಳಗಿಂದ ಹೊರಗೆ ಅವರು ತರುವರು. ಅವರು ಪ್ರೀತಿಸಿ ಸೇವಿಸಿ ಹಿಂಬಾಲಿಸಿ ಹುಡುಕಿ ಆರಾಧಿಸಿದ ಸೂರ್ಯ ಚಂದ್ರ ಸಮಸ್ತ ಆಕಾಶ ಸೈನ್ಯದ ಮುಂದೆ ಅವುಗಳನ್ನು ಚೆಲ್ಲುವರು; ಅವು ಕೂಡಿಸಲ್ಪಡವು, ಹೂಣಿಡಲ್ಪಡವು, ಅವು ಭೂಮಿಯ ಮೇಲೆ ಗೊಬ್ಬರವಾಗುವವು.