Psalms · chapter 82 · verse 2
Psalm 82:2 in Kannada
ಎಷ್ಟರ ವರೆಗೂ ಅನ್ಯಾಯವಾಗಿ ತೀರ್ಪುಮಾಡಿ ದುಷ್ಟ ರಿಗೆ ಮುಖದಾಕ್ಷಿಣ್ಯ ಮಾಡುವಿರಿ? ಸೆಲಾ.
Eshtara varegoo anyaayavaagi teerpumaadi dushta rige mukhadaakshinya maaduviri? Selaa.
Psalm 82:2 in English
- King James Version (KJV)
- How long will ye judge unjustly, and accept the persons of the wicked? Selah.
- World English Bible (WEB)
- “How long will you judge unjustly, and show partiality to the wicked?” Selah.
- American Standard Version (ASV)
- How long will ye judge unjustly, And respect the persons of the wicked? [Selah
- Bible in Basic English (BBE)
- How long will you go on judging falsely, having respect for the persons of evil-doers? (Selah.)
- Darby Translation (DBY)
- How long will ye judge unrighteously, and accept the person of the wicked? Selah.
- Webster's Bible (WBS)
- How long will ye judge unjustly, and accept the persons of the wicked? Selah.
- Young's Literal Translation (YLT)
- Till when do ye judge perversely? And the face of the wicked lift up? Selah.
Read in context
- 1ದೇವರು ಬಲಶಾಲಿಗಳ ಮಧ್ಯದಲ್ಲಿ ನಿಂತು ದೇವರುಗಳಿಗೆ ನ್ಯಾಯತೀರಿಸುತ್ತಾನೆ.
- 2ಎಷ್ಟರ ವರೆಗೂ ಅನ್ಯಾಯವಾಗಿ ತೀರ್ಪುಮಾಡಿ ದುಷ್ಟ ರಿಗೆ ಮುಖದಾಕ್ಷಿಣ್ಯ ಮಾಡುವಿರಿ? ಸೆಲಾ.
- 3ದರಿದ್ರ ನನ್ನೂ ದಿಕ್ಕಿಲ್ಲದವನನ್ನೂ ಕಾಪಾಡಿ ದೀನನಿಗೂ ಬಡವ ನಿಗೂ ನೀತಿಯನ್ನು ಮಾಡಿರಿ.
- 4ದರಿದ್ರನನ್ನೂ ಬಡವ ನನ್ನೂ ದುಷ್ಟರ ಕೈಯಿಂದ ಬಿಡಿಸಿರಿ.
Cross references
- Proverbs 18:5 ಜ್ಞಾನೋಕ್ತಿಗಳು 18:5ನನ್ನ ನ್ಯಾಯತೀರ್ಪಿನಲ್ಲಿ ನೀತಿವಂತರನ್ನು ಕೆಡವುವಂತೆ ದುಷ್ಟ ರನ್ನು ಸ್ವೀಕರಿಸುವದು ಯುಕ್ತವಲ್ಲ.
- Deuteronomy 1:17 ಧರ್ಮೋಪದೇಶಕಾಂಡ 1:17ನ್ಯಾಯದಲ್ಲಿ ನೀವು ಮುಖದಾಕ್ಷಿಣ್ಯ ನೋಡಬೇಡಿರಿ; ಹಿರಿಯನನ್ನು ಹೇಗೋ, ಹಾಗೆಯೇ ಕಿರಿಯನನ್ನು ಕೇಳಬೇಕು; ಮನುಷ್ಯನ ಮುಖವನ್ನು ನೋಡಿ ಹೆದರಬೇಡಿರಿ; ಯಾಕಂದರೆ ನ್ಯಾಯತೀರ್ಪು ದೇವರದೇ; ನಿಮಗೆ ಕಠಿಣವಾದ ವ್ಯಾಜ್ಯಗಳನ್ನು ನನ್ನ ಮುಂದೆ ತನ್ನಿರಿ; ಆಗ ನಾನು ಅದನ್ನು ತೀರಿಸುವೆನು.
- Psalm 58:1–2 ಕೀರ್ತನೆಗಳು 58:1–2ಓ ಸಭೆಯೇ, ನೀವು ನಿಜವಾಗಿ ನೀತಿಯನ್ನು ನುಡಿಯುವಿರೋ? ಓ ಮನುಷ್ಯರ ಮಕ್ಕಳೇ, ನೀವು ಯಥಾರ್ಥವಾಗಿ ನ್ಯಾಯತೀರಿಸು ವಿರೋ? ಹೌದು, ನಿಮ್ಮ ಹೃದಯದಲ್ಲಿ ದುಷ್ಟತ್ವ ವನ್ನು ಮಾಡುತ್ತೀರಲ್ಲಾ, ಲೋಕದಲ್ಲಿ ನಿಮ್ಮ ಕೈಗಳ ಬಲಾತ್ಕಾರವನ್ನು ತೂಗುತ್ತೀರಲ್ಲಾ.
- Galatians 2:6 ಗಲಾತ್ಯದವರಿಗೆ 2:6ಆದರೆ ಮಾನಿಷ್ಠರೆನಿಸಿಕೊಂಡವರಿಂದ ನನಗೇನೂ ದೊರೆಯ ಲಿಲ್ಲ; (ಅವರು ಎಂಥವ ರಾಗಿದ್ದರೂ ನನಗೆ ಲಕ್ಷ್ಯವಿಲ್ಲ; ದೇವರು ಪಕ್ಷಪಾತಿಯಲ್ಲ). ಯಾಕಂದರೆ ಮಾನಿಷ್ಠರೆನಿಸಿ ಕೊಂಡವರು ನನಗೆ ಹೆಚ್ಚೇನೂ ಕೂಡಿಸಲಿಲ್ಲ.
- Exodus 10:3 ವಿಮೋಚನಕಾಂಡ 10:3ಮೋಶೆ ಆರೋನರು ಫರೋಹನ ಬಳಿಗೆ ಬಂದು ಅವನಿಗೆ--ಇಬ್ರಿಯರ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನೀನು ನನ್ನ ಸನ್ನಿಧಿಯಲ್ಲಿ ತಗ್ಗಿಸಿಕೊಳ್ಳದೆ ಇರುವದು ಎಲ್ಲಿಯವರೆಗೇ? ನನ್ನನ್ನು ಸೇವಿಸುವಂತೆ ನನ್ನ ಜನರನ್ನು ಹೋಗಗೊಡಿಸು.
- 1 Kings 18:21 1 ಅರಸುಗಳು 18:21ಆಗ ಎಲೀಯನು ಸಕಲ ಜನರ ಬಳಿಗೆ ಬಂದು--ನೀವು ಎರಡು ಅಭಿಪ್ರಾಯಗಳ ಮಧ್ಯದಲ್ಲಿ ಎಷ್ಟರ ವರೆಗೂ ನಿಂತವರಾಗಿ ಇರುವಿರಿ. ಕರ್ತನು ದೇವರಾಗಿದ್ದರೆ ಆತನನ್ನು ಹಿಂಬಾಲಿಸಿರಿ; ಬಾಳನು ದೇವರಾಗಿದ್ದರೆ ಅವನನ್ನು ಹಿಂಬಾಲಿಸಿರಿ ಅಂದನು. ಜನರು ಅವನಿಗೆ ಒಂದು ಮಾತಾದರೂ ಹೇಳಲಿಲ್ಲ.
- Exodus 23:6–7 ವಿಮೋಚನಕಾಂಡ 23:6–7ಬಡವನ ವ್ಯಾಜ್ಯದಲ್ಲಿ ನ್ಯಾಯವನ್ನು ಬಿಟ್ಟು ತೀರ್ಪು ಕೊಡಬೇಡ. ಸುಳ್ಳಿನ ವಿಷಯಗಳಿಂದ ನೀನು ದೂರ ವಿರು; ನಿರಪರಾಧಿಯನ್ನೂ ನೀತಿವಂತನನ್ನೂ ಕೊಲ್ಲ ಬೇಡ, ಯಾಕಂದರೆ ನಾನು ದುಷ್ಟನನ್ನು ನೀತಿವಂತ ನೆಂದು ನಿರ್ಣಯಿಸುವದಿಲ್ಲ.
- Micah 3:9–12 ಮೀಕ 3:9–12ಯಾಕೋಬನ ಮನೆತನದವರ ಪ್ರಧಾನರೇ, ಇಸ್ರಾಯೇಲಿನ ಮನೆತನದವರ ನ್ಯಾಯಾ ಧಿಪತಿಗಳೇ, ನ್ಯಾಯವನ್ನು ಅಸಹ್ಯಿಸಿ ಎಲ್ಲಾ ಯಥಾರ್ಥ ತ್ವವನ್ನು ಡೊಂಕು ಮಾಡುವವರೇ, ಚೀಯೋನನ್ನು ರಕ್ತದಿಂದಲೂ ಯೆರೂಸಲೇಮನ್ನು ಅಕ್ರಮದಿಂದಲೂ ಕಟ್ಟುವವರೇ, ಈಗ ಇದನ್ನು ಕೇಳಿರಿ. ಅದರ ಮುಖ್ಯಸ್ಥರು ಲಂಚಕ್ಕೆ ನ್ಯಾಯತೀರಿಸುತ್ತಾರೆ; ಅದರ ಯಾಜಕರು ಸಂಬಳಕ್ಕೆ ಬೋಧಿಸುತ್ತಾರೆ; ಅದರ ಪ್ರವಾ ದಿಗಳು ಹಣಕ್ಕೆ ಶಕುನ ಹೇಳುತ್ತಾರೆ; ಆದರೂ ಕರ್ತನ ಮೇಲೆ ಆತುಕೊಂಡು--ಕರ್ತನು ನಮ್ಮ ಮಧ್ಯದಲ್ಲಿ ಇಲ್ಲವೋ? ನಮ್ಮ ಮೇಲೆ ಕೇಡು ಬರುವದಿಲ್ಲ ಅನ್ನು ತ್ತಾರೆ.ಆದಕಾರಣ ನಿಮ್ಮ ನಿಮಿತ್ತವೇ, ಚೀಯೋನು ಹೊಲದ ಹಾಗೆ ಉಳಲ್ಪಡುವದು; ಯೆರೂಸಲೇಮು ದಿಬ್ಬೆಗಳಾಗುವದು, ಆಲಯದ ಪರ್ವತವು ಅಡವಿಯ ಉನ್ನತ ಸ್ಥಳಗಳ ಹಾಗಾಗುವದು. ಆದಕಾರಣ ನಿಮ್ಮ ನಿಮಿತ್ತವೇ, ಚೀಯೋನು ಹೊಲದ ಹಾಗೆ ಉಳಲ್ಪಡುವದು; ಯೆರೂಸಲೇಮು ದಿಬ್ಬೆಗಳಾಗುವದು, ಆಲಯದ ಪರ್ವತವು ಅಡವಿಯ ಉನ್ನತ ಸ್ಥಳಗಳ ಹಾಗಾಗುವದು.
- Job 34:19 ಯೋಬನು 34:19ಆತನು ಪ್ರಧಾನರ ಮುಖದಾಕ್ಷಿಣ್ಯ ನೋಡು ವನೋ? ಧನಿಕನನ್ನು ಬಡವನಿಗಿಂತ ಹೆಚ್ಚೆಂದು ಲಕ್ಷಿ ಸುವನೋ? ಯಾಕಂದರೆ ಇಬ್ಬರೂ ಆತನ ಕೈ ಕೆಲಸ ವಾಗಿದ್ದಾರೆ.
- Psalm 62:3 ಕೀರ್ತನೆಗಳು 62:3ಎಷ್ಟರವರೆಗೆ ಒಬ್ಬ ಮನುಷ್ಯನಿಗೆ ವಿರೋಧವಾಗಿ ಕೇಡನ್ನು ಕಲ್ಪಿಸುತ್ತೀರಿ? ನೀವೆಲ್ಲರೂ ಕೊಲ್ಲಲ್ಪಡುವಿರಿ; ನೀವು ಕುಸಿದುಬೀಳುವ ಗೋಡೆಯಂತೆಯೂ ಅಲ್ಲಾ ಡುವ ಬೇಲಿಯಂತೆಯೂ ಇರುವಿರಿ.
- Micah 3:1–3 ಮೀಕ 3:1–3ಆಗ ನಾನು ಹೇಳಿದ್ದೇನಂದರೆ--ಯಾಕೋಬಿನ ಮುಖ್ಯಸ್ಥರೇ, ಇಸ್ರಾಯೇ ಲಿನ ಮನೆತನದ ಪ್ರಧಾನರೇ, ಈಗ ಕೇಳಿರಿ; ನ್ಯಾಯ ವನ್ನು ತಿಳಿಯುವದು ನಿಮ್ಮದಲ್ಲವೋ? ಒಳ್ಳೇದನ್ನು ಹಗೆಮಾಡಿ ಕೆಟ್ಟದ್ದನ್ನು ಪ್ರೀತಿಮಾಡುವವರೇ, ಅವರ ಮೇಲಿನಿಂದ ಅವರ ಚರ್ಮವನ್ನೂ ಅವರ ಎಲುಬುಗಳ ಮೇಲಿನಿಂದ ಅವರ ಮಾಂಸವನ್ನೂ ಕಿತ್ತುಕೊಳ್ಳು ವವರೇ, ನನ್ನ ಜನರ ಮಾಂಸವನ್ನು ತಿಂದು ಅವರ ಚರ್ಮವನ್ನು ಸುಲಿದು ಅವರ ಎಲುಬುಗಳನ್ನು ಮುರಿದು ಮಡಿಕೆಯಂತೆ ಅವರ ಮಾಂಸವನ್ನು ತುಂಡು ಮಾಡಿ ಕೊಪ್ಪರಿಗೆಯಲ್ಲಿ ಹಾಕುತ್ತೀರಿ.
- Matthew 17:17 ಮತ್ತಾಯನು 17:17ಆಗ ಯೇಸು ಪ್ರತ್ಯುತ್ತರ ವಾಗಿ--ನಂಬಿಕೆಯಿಲ್ಲದ ಓ ಮೂರ್ಖ ಸಂತತಿಯೇ, ಎಷ್ಟು ಕಾಲ ನಾನು ನಿಮ್ಮೊಂದಿಗಿರಲಿ? ಎಷ್ಟು ಕಾಲ ನಾನು ನಿಮ್ಮನ್ನು ಸಹಿಸಲಿ? ಅವನನ್ನು ನನ್ನ ಬಳಿಗೆ ತಕ್ಕೊಂಡು ಬನ್ನಿರಿ ಎಂದು ಹೇಳಿದನು.