Psalms · chapter 85 · verse 2
Psalm 85:2 in Kannada
ನಿನ್ನ ಜನರ ಅಕ್ರಮವನ್ನು ಪರಿಹರಿಸಿದ್ದೀ; ಅವರ ಪಾಪವನ್ನೆಲ್ಲಾ ಮುಚ್ಚಿದ್ದೀ ಸೆಲಾ.
Ninna janara akramavannu pariharisiddee; avara paapavannellaa muchchiddee selaa.
Psalm 85:2 in English
- King James Version (KJV)
- Thou hast forgiven the iniquity of thy people, thou hast covered all their sin. Selah.
- World English Bible (WEB)
- You have forgiven the iniquity of your people. You have covered all their sin. Selah.
- American Standard Version (ASV)
- Thou hast forgiven the iniquity of thy people; Thou hast covered all their sin. [Selah
- Bible in Basic English (BBE)
- The wrongdoing of your people had forgiveness; all their sin had been covered. (Selah.)
- Darby Translation (DBY)
- Thou hast forgiven the iniquity of thy people; thou hast covered all their sin. Selah.
- Webster's Bible (WBS)
- Thou hast forgiven the iniquity of thy people, thou hast covered all their sin. Selah.
- Young's Literal Translation (YLT)
- Thou hast borne away the iniquity of Thy people, Thou hast covered all their sin. Selah.
Read in context
- 1ಕರ್ತನೇ, ನಿನ್ನ ದೇಶಕ್ಕೆ ದಯೆತೋರಿಸಿದ್ದೀ; ಯಾಕೋಬನ್ನು ಸೆರೆಯಿಂದ ಹಿಂದಕ್ಕೆ ಬರ ಮಾಡಿದ್ದೀ.
- 2ನಿನ್ನ ಜನರ ಅಕ್ರಮವನ್ನು ಪರಿಹರಿಸಿದ್ದೀ; ಅವರ ಪಾಪವನ್ನೆಲ್ಲಾ ಮುಚ್ಚಿದ್ದೀ ಸೆಲಾ.
- 3ನಿನ್ನ ಕೋಪ ವನ್ನೆಲ್ಲಾ ನೀನು ತೆಗೆದುಬಿಟ್ಟಿದ್ದೀ; ನೀನು ಕೋಪದ ಉರಿಯಿಂದ ತಿರುಗಿಕೊಂಡಿದ್ದೀ.
- 4ನಮ್ಮ ರಕ್ಷಣೆಯ ಓ ದೇವರೇ, ನಮ್ಮ ಕಡೆಗೆ ತಿರುಗು; ನಮ್ಮ ಮೇಲಿರುವ ನಿನ್ನ ಕೋಪವನ್ನು ತೊಲ ಗಿಸು.
Cross references
- Micah 7:18 ಮೀಕ 7:18ಅಕ್ರಮವನ್ನು ಮನ್ನಿಸುವಂಥ, ತನ್ನ ಬಾಧ್ಯತೆಯ ಶೇಷದ ದ್ರೋಹವನ್ನು ದಾಟಿಹೋಗುವಂಥ, ನಿನ್ನ ಹಾಗೆ ದೇವರು ಯಾರು? ಆತನು ತನ್ನ ಕೋಪವನ್ನು ಎಂದೆಂದಿಗೂ ಇಟ್ಟುಕೊಳ್ಳುವದಿಲ್ಲ; ಯಾಕಂದರೆ ಆತನು ಕರುಣೆಯಲ್ಲಿ ಸಂತೋಷಪಡುತ್ತಾನೆ.
- Colossians 2:13 ಕೊಲೊಸ್ಸೆಯವರಿಗೆ 2:13ನಿಮ್ಮ ಪಾಪಗಳಲ್ಲಿಯೂ ಸುನ್ನತಿಯಿಲ್ಲದ ಶರೀರ ಭಾವದಿಂದಲೂ ಸತ್ತವರಾಗಿದ್ದ ನಿಮ್ಮನ್ನು ದೇವರು ಆತನೊಂದಿಗೆ ಬದುಕಿಸಿ ನಿಮ್ಮ ಅಪರಾಧಗಳನ್ನೆಲ್ಲಾ ಕ್ಷಮಿಸಿದ್ದಾನೆ.
- Psalm 32:1 ಕೀರ್ತನೆಗಳು 32:1ಯಾವನ ದ್ರೋಹವು ಕ್ಷಮಿಸಲ್ಪಟ್ಟದೆಯೋ, ಯಾವನ ಪಾಪವು ಮುಚ್ಚಲ್ಪಟ್ಟಿದೆಯೋ, ಅವನೇ ಧನ್ಯನು.
- Jeremiah 50:20 ಯೆರೆಮೀಯ 50:20ಕರ್ತನು ಹೀಗೆ ಅನ್ನುತ್ತಾನೆ--ಆ ದಿವಸಗಳಲ್ಲಿ ಆ ಕಾಲದಲ್ಲಿ ಇಸ್ರಾ ಯೇಲಿನ ಅಕ್ರಮವನ್ನು ಹುಡುಕಿದರೂ ಅಲ್ಲಿ ಏನೂ ಇರದು; ಯೆಹೂದದ ಪಾಪಗಳನ್ನು ಹುಡುಕಿದರೂ ಅವು ಸಿಕ್ಕುವದಿಲ್ಲ. ನಾನು ಉಳಿಸುವವರನ್ನು ಮನ್ನಿಸುತ್ತೇನೆ.
- Acts 13:39 ಅಪೊಸ್ತಲರ ಕೃತ್ಯಗಳು 13:39ಮೋಶೆಯ ಯಾವ ನ್ಯಾಯಪ್ರಮಾಣ ದಿಂದ ಯಾವವುಗಳಲ್ಲಿ ನೀವು ನೀತಿವಂತರೆಂಬ ನಿರ್ಣಯವನ್ನು ಹೊಂದಲಾರದೆ ಹೋಗಿದ್ದಿರೋ ಅವೆಲ್ಲವುಗಳಿಂದ ನಂಬುವವರೆಲ್ಲರೂ ಆತನ ಮೂಲಕ ನೀತಿವಂತರೆಂಬ ನಿರ್ಣಯವನ್ನು ಹೊಂದಿದ್ದಾರೆಂದು ನಿಮಗೆ ತಿಳಿದಿರಲಿ.
- Numbers 14:19 ಅರಣ್ಯಕಾಂಡ 14:19ನಿನ್ನ ಕೃಪೆಯು ದೊಡ್ಡದಾಗಿರುವ ಪ್ರಕಾರವೂ ನೀನು ಐಗುಪ್ತದಿಂದ ಇಲ್ಲಿಯ ವರೆಗೆ ಮನ್ನಿಸಿದ ಪ್ರಕಾರವೂ ಈ ಜನರ ಅಕ್ರಮವನ್ನು ದಯ ದಿಂದ ಮನ್ನಿಸು ಎಂದು ಬೇಡಿಕೊಂಡನು.
- Psalm 79:8–9 ಕೀರ್ತನೆಗಳು 79:8–9ಪೂರ್ವಕಾಲದ ಅಕ್ರಮಗಳನ್ನು ನಮಗೆ ವಿರೋಧವಾಗಿ ಜ್ಞಾಪಕಮಾಡಿ ಕೊಳ್ಳಬೇಡ. ನಿನ್ನ ಅಂತಃಕರಣಗಳು ಬೇಗ ನಮ್ಮನ್ನು ಎದುರುಗೊಳ್ಳಲ್ಲಿ; ಬಹಳವಾಗಿ ಕುಗ್ಗಿ ಹೋಗಿದ್ದೇವೆ. ಓ ನಮ್ಮ ರಕ್ಷಣೆಯ ದೇವರೇ, ನಿನ್ನ ಹೆಸರಿನ ಘನದ ನಿಮಿತ್ತ ನಮಗೆ ಸಹಾಯ ಮಾಡು; ನಿನ್ನ ಹೆಸರಿಗಾಗಿ ನಮ್ಮನ್ನು ಬಿಡಿಸಿ ನಮ್ಮ ಪಾಪಗಳನ್ನು ತೊಳೆದುಬಿಡು.
- Psalm 78:38 ಕೀರ್ತನೆಗಳು 78:38ಆದಾಗ್ಯೂ ಆತನು ಅಂತಃಕರಣವುಳ್ಳವನಾಗಿ, ಅವರ ಅಕ್ರಮವನ್ನು ಕ್ಷಮಿಸಿ, ನಾಶಮಾಡದೆ ಹೌದು, ಆತನು ಅನೇಕ ಸಾರಿ ತನ್ನ ಕೋಪವನ್ನು ತೋರಿಸದೆ ಕೋಪೋದ್ರೇಕವನ್ನೂ ಮಾಡಿಕೊಳ್ಳಲಿಲ್ಲ.