Psalms · chapter 32 · verse 1
Psalm 32:1 in Kannada
ಯಾವನ ದ್ರೋಹವು ಕ್ಷಮಿಸಲ್ಪಟ್ಟದೆಯೋ, ಯಾವನ ಪಾಪವು ಮುಚ್ಚಲ್ಪಟ್ಟಿದೆಯೋ, ಅವನೇ ಧನ್ಯನು.
Yaavana drohavu kshamisalpattadeyo, yaavana paapavu muchchalpattideyo, avane dhanyanu.
Psalm 32:1 in English
- King James Version (KJV)
- [A Psalm] of David, Maschil. Blessed [is he whose] transgression [is] forgiven, [whose] sin [is] covered.
- World English Bible (WEB)
- By David. A contemplative psalm. Blessed is he whose disobedience is forgiven, whose sin is covered.
- American Standard Version (ASV)
- [A Psalm] of David. Maschil. Blessed is he whose transgression is forgiven, Whose sin is covered.
- Bible in Basic English (BBE)
- Of David. Maschil. Happy is he who has forgiveness for his wrongdoing, and whose sin is covered.
- Darby Translation (DBY)
- Of David. Instruction. Blessed is he [whose] transgression is forgiven, [whose] sin is covered!
- Webster's Bible (WBS)
- [A Psalm] of David, Maschil. Blessed [is he whose] transgression [is] forgiven, [whose] sin [is] covered.
- Young's Literal Translation (YLT)
- By David. — An Instruction. O the happiness of him whose transgression [is] forgiven, Whose sin is covered.
Read in context
- 1ಯಾವನ ದ್ರೋಹವು ಕ್ಷಮಿಸಲ್ಪಟ್ಟದೆಯೋ, ಯಾವನ ಪಾಪವು ಮುಚ್ಚಲ್ಪಟ್ಟಿದೆಯೋ, ಅವನೇ ಧನ್ಯನು.
- 2ಕರ್ತನು ಯಾವನಿಗೆ ಅಪರಾಧ ವನ್ನು ಎಣಿಸುವದಿಲ್ಲವೋ, ಯಾವನ ಹೃದಯದಲ್ಲಿ ವಂಚನೆ ಇರುವದಿಲ್ಲವೋ, ಆ ಮನುಷ್ಯ ಧನ್ಯನು.
- 3ನಾನು ಮೌನವಾಗಿದ್ದಾಗ ದಿನವೆಲ್ಲಾ ನರಳುವದ ರಿಂದ ನನ್ನ ಎಲುಬುಗಳು ಸವೆದು ಹೋದವು.
Cross references
- Romans 4:6–8 ರೋಮಾಪುರದವರಿಗೆ 4:6–8ದೇವರು ಯಾವನನ್ನು ಕ್ರಿಯೆ ಗಳಿಲ್ಲದೆ ನೀತಿವಂತನೆಂದು ಎಣಿಸುತ್ತಾನೋ ಅವನು ಧನ್ಯನೆಂದು ದಾವೀದನು ಸಹ ಹೇಳುತ್ತಾನೆ. ಹೇಗಂ ದರೆ--ಯಾರ ಅಪರಾಧಗಳು ಕ್ಷಮಿಸಲ್ಪಟ್ಟಿವೆಯೋ ಯಾರ ಪಾಪಗಳು ಮುಚ್ಚಿವೆಯೋ ಅವರೇ ಧನ್ಯರು; ಕರ್ತನು ಯಾವನ ಪಾಪವನ್ನು ಲೆಕ್ಕಕ್ಕೆ ತರುವ ದಿಲ್ಲವೋ ಆ ಮನುಷ್ಯನೇ ಧನ್ಯನು ಎಂಬದು.
- Isaiah 44:22 ಯೆಶಾಯ 44:22ನಾನು ನಿನ್ನ ದ್ರೋಹಗಳನ್ನು ಗಾಢವಾದ ಮೇಘದಂತೆ ಅಳಿಸಿಬಿಟ್ಟಿದ್ದೇನೆ; ನಿನ್ನ ಪಾಪಗಳನ್ನು ಮೋಡದಂತೆ ಹಾರಿಸಿದ್ದೇನೆ; ನನ್ನ ಕಡೆಗೆ ತಿರಿಗಿಕೋ, ನಾನು ನಿನ್ನನ್ನು ವಿಮೋಚಿಸಿದ್ದೇನೆ.
- Psalm 85:2 ಕೀರ್ತನೆಗಳು 85:2ನಿನ್ನ ಜನರ ಅಕ್ರಮವನ್ನು ಪರಿಹರಿಸಿದ್ದೀ; ಅವರ ಪಾಪವನ್ನೆಲ್ಲಾ ಮುಚ್ಚಿದ್ದೀ ಸೆಲಾ.
- Acts 13:38–39 ಅಪೊಸ್ತಲರ ಕೃತ್ಯಗಳು 13:38–39ಆದದರಿಂದ ಜನರೇ, ಸಹೋದರರೇ, ಈ ಮನುಷ್ಯನ ಮೂಲಕವಾಗಿ ಪಾಪಪರಿಹಾರವು ದೊರೆಯುತ್ತದೆಂಬದು ನಿಮಗೆ ಸಾರೋಣವಾಗು ತ್ತದೆಂದೂ ಮೋಶೆಯ ಯಾವ ನ್ಯಾಯಪ್ರಮಾಣ ದಿಂದ ಯಾವವುಗಳಲ್ಲಿ ನೀವು ನೀತಿವಂತರೆಂಬ ನಿರ್ಣಯವನ್ನು ಹೊಂದಲಾರದೆ ಹೋಗಿದ್ದಿರೋ ಅವೆಲ್ಲವುಗಳಿಂದ ನಂಬುವವರೆಲ್ಲರೂ ಆತನ ಮೂಲಕ ನೀತಿವಂತರೆಂಬ ನಿರ್ಣಯವನ್ನು ಹೊಂದಿದ್ದಾರೆಂದು ನಿಮಗೆ ತಿಳಿದಿರಲಿ.
- Isaiah 43:25 ಯೆಶಾಯ 43:25ನಾನಾಗಿ ನಾನೇ ನನಗೋಸ್ಕರ ನಿನ್ನ ದ್ರೋಹಗಳನ್ನು ಅಳಿಸಿಬಿಡುತ್ತೇನೆ. ನಿನ್ನ ಪಾಪ ಗಳನ್ನು ನನ್ನ ನೆನಪಿನಲ್ಲಿಡೆನು.
- Micah 7:18–19 ಮೀಕ 7:18–19ಅಕ್ರಮವನ್ನು ಮನ್ನಿಸುವಂಥ, ತನ್ನ ಬಾಧ್ಯತೆಯ ಶೇಷದ ದ್ರೋಹವನ್ನು ದಾಟಿಹೋಗುವಂಥ, ನಿನ್ನ ಹಾಗೆ ದೇವರು ಯಾರು? ಆತನು ತನ್ನ ಕೋಪವನ್ನು ಎಂದೆಂದಿಗೂ ಇಟ್ಟುಕೊಳ್ಳುವದಿಲ್ಲ; ಯಾಕಂದರೆ ಆತನು ಕರುಣೆಯಲ್ಲಿ ಸಂತೋಷಪಡುತ್ತಾನೆ. ಆತನು ತಿರುಗಿಕೊಂಡು ನಮ್ಮನ್ನು ಕನಿಕರಿಸುವನು; ನಮ್ಮ ಅಕ್ರಮಗಳನ್ನು ತುಳಿದುಬಿಡುವನು; ಅವರ ಪಾಪಗಳ ನ್ನೆಲ್ಲಾ ಸಮುದ್ರದ ಅಗಾಧಗಳಲ್ಲಿ ಹಾಕುವಿ.ನೀನು ನಮ್ಮ ಪಿತೃಗಳಿಗೆ ಪೂರ್ವದ ಕಾಲದಲ್ಲಿ ಪ್ರಮಾಣ ಮಾಡಿದ ಸತ್ಯವನ್ನು ಯಾಕೋಬನಿಗೂ ಕರುಣೆಯನ್ನು ಅಬ್ರಹಾಮನಿಗೂ ಈಡೇರಿಸುವಿ.
- Revelation 22:14 ಪ್ರಕಟನೆ 22:14ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವವರು ಧನ್ಯರು; ಅವರಿಗೆ ಜೀವವೃಕ್ಷದ ಹಕ್ಕು ಇರುವದು; ಅವರು ಹೆಬ್ಬಾಗಿಲು ಗಳಿಂದ ಆ ಪಟ್ಟಣದೊಳಕ್ಕೆ ಸೇರುವರು.
- Isaiah 1:18 ಯೆಶಾಯ 1:18ಈಗ ಬನ್ನಿರಿ, ನಾವು ಒಟ್ಟಾಗಿ ವಾದಿಸೋಣ ಎಂದು ಕರ್ತನು ಹೇಳುತ್ತಾನೆ; ನಿಮ್ಮ ಪಾಪಗಳು ಕಡು ಕೆಂಪಾಗಿದ್ದರೂ ಹಿಮದಂತೆ ಬಿಳುಪಾಗುವವು; ಕಡು ಕೆಂಪಿನಂತೆ ಕೆಂಪಾಗಿದ್ದರೂ ಉಣ್ಣೆಯಂತೆ ಆಗುವವು.
- Jeremiah 17:7–8 ಯೆರೆಮೀಯ 17:7–8ಯಾವನು ಕರ್ತನಲ್ಲಿ ಭರವಸವಿಟ್ಟಿರುವನೋ ಯಾವನಿಗೆ ಕರ್ತನು ನಿರೀಕ್ಷೆ ಯಾಗಿದ್ದಾನೋ ಆ ಮನುಷ್ಯನು ಧನ್ಯನು. ಅವನು ನೀರಿನ ಬಳಿಯಲ್ಲಿ ನೆಡಲ್ಪಟ್ಟು ಹೊಳೆಯ ಬಳಿಯಲ್ಲಿ ತನ್ನ ಬೇರುಗಳನ್ನು ಹರಡಿರುವ ಮರದ ಹಾಗಿರುವನು; ಧಗೆಯು ಬರುವಾಗ ಅದು ಬಾಡಿಹೋಗದೆ ಅದರ ಎಲೆ ಹಸುರಾಗಿರುವದು; ಕ್ಷಾಮದ ವರುಷದಲ್ಲಿ ಅದಕ್ಕೆ ಚಿಂತೆ ಇರುವದಿಲ್ಲ ಇಲ್ಲವೆ ಫಲಫಲಿಸುವದನ್ನು ನಿಲ್ಲಿಸುವದಿಲ್ಲ.
- Psalm 40:4 ಕೀರ್ತನೆಗಳು 40:4ಕರ್ತನನ್ನು ತನ್ನ ಭರವಸವಾಗಿ ಮಾಡಿಕೊಂಡು ಅಹಂಕಾರಿಗಳನ್ನು ಗೌರವಿಸದೆಯೂ ಇಲ್ಲವೆ ಸುಳ್ಳಿನ ಕಡೆಗೆ ತಿರುಗಿಕೊಳ್ಳ ದೆಯೂ ಇರುವ ಮನುಷ್ಯನು ಧನ್ಯನು.
- Matthew 5:3–12 ಮತ್ತಾಯನು 5:3–12ಆತ್ಮದಲ್ಲಿ ಬಡವರಾಗಿರುವವರು ಧನ್ಯರು; ಯಾಕಂದರೆ ಪರಲೋಕರಾಜ್ಯವು ಅವರದು. ದುಃಖಪಡುವವರು ಧನ್ಯರು; ಯಾಕಂದರೆ ಅವರು ಆದರಣೆ ಹೊಂದುವರು. ಸಾತ್ವಿಕರು ಧನ್ಯರು; ಯಾಕಂದರೆ ಅವರು ಭೂಮಿಯನ್ನು ಬಾಧ್ಯವಾಗಿ ಹೊಂದುವರು. ನೀತಿಗೋಸ್ಕರ ಹಸಿದು ಬಾಯಾರಿದವರು ಧನ್ಯರು; ಯಾಕಂದರೆ ಅವರು ತೃಪ್ತಿ ಹೊಂದುವರು. ಕರುಣೆಯುಳ್ಳವರು ಧನ್ಯರು; ಯಾಕಂದರೆ ಅವರು ಕರುಣೆ ಹೊಂದುವರು. ಶುದ್ಧ ಹೃದಯವುಳ್ಳವರು ಧನ್ಯರು; ಯಾಕಂದರೆ ಅವರು ದೇವರನ್ನು ನೋಡುವರು. ಸಮಾಧಾನ ಮಾಡುವವರು ಧನ್ಯರು; ಯಾಕಂದರೆ ಅವರು ದೇವರ ಮಕ್ಕಳೆಂದು ಕರೆಯಲ್ಪಡುವರು. ನೀತಿಯ ನಿಮಿತ್ತವಾಗಿ ಹಿಂಸಿಸಲ್ಪಡುವವರು ಧನ್ಯರು; ಯಾಕಂದರೆ ಪರಲೋಕರಾಜ್ಯವು ಅವರದು. ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ದೂಷಿಸಿ ಹಿಂಸಿಸಿ ನಿಮಗೆ ವಿರೋಧವಾಗಿ ಎಲ್ಲಾ ತರದ ಕೆಟ್ಟದ್ದನ್ನು ಸುಳ್ಳಾಗಿ ಹೇಳಿದರೆ ನೀವು ಧನ್ಯರು. ಸಂತೋಷಿಸಿರಿ, ಅತಿ ಉಲ್ಲಾಸದಿಂದಿರ್ರಿ; ಯಾಕಂದರೆ ಪರಲೋಕದಲ್ಲಿ ನಿಮ್ಮ ಪ್ರತಿಫಲವು ದೊಡ್ಡದಾಗಿದೆ; ನಿಮಗಿಂತ ಮುಂಚೆ ಇದ್ದ ಪ್ರವಾದಿ ಗಳನ್ನು ಅವರು ಹೀಗೆಯೇ ಹಿಂಸಿಸಿದರಲ್ಲಾ.
- Psalm 119:1–2 ಕೀರ್ತನೆಗಳು 119:1–2ಮಾರ್ಗದಲ್ಲಿ ಅಶುದ್ಧರಾಗದವರೂ ಕರ್ತನ ನ್ಯಾಯಪ್ರಮಾಣದಲ್ಲಿ ನಡೆದುಕೊಳ್ಳುವವರೂ ಧನ್ಯರು. ಆತನ ಸಾಕ್ಷಿಗಳನ್ನು ಕೈಕೊಂಡು ಪೂರ್ಣಹೃದಯದಿಂದ ಆತನನ್ನು ಹುಡುಕುವವರು ಧನ್ಯರು.