Psalms · chapter 87 · verse 4
Psalm 87:4 in Kannada
ರಾಹಬನ್ನೂ ಬಾಬೆಲನ್ನೂ ನನ್ನನ್ನು ತಿಳಿದವರಿಗೆ ಜ್ಞಾಪಕಮಾಡುವೆನು; ಫಿಲಿಷ್ಟಿಯವೂ ತೂರಿನ ಸಂಗಡ ಕೂಷನ್ನೂ ನೋಡು: ಈ ಮನುಷ್ಯನು ಅಲ್ಲಿ ಹುಟ್ಟಿ ದನು.
Raahabannoo baabelannoo nannannu tilidavarige jnyaapakamaaduvenu; philishtiyavoo toorina sangada kooshannoo nodu: ee manushyanu alli hutti danu.
Psalm 87:4 in English
- King James Version (KJV)
- I will make mention of Rahab and Babylon to them that know me: behold Philistia, and Tyre, with Ethiopia; this [man] was born there.
- World English Bible (WEB)
- I will record Rahab and Babylon among those who acknowledge me. Behold, Philistia, Tyre, and also Ethiopia: “This one was born there.”
- American Standard Version (ASV)
- I will make mention of Rahab and Babylon as among them that know me: Behold, Philistia, and Tyre, with Ethiopia: This one was born there.
- Bible in Basic English (BBE)
- Rahab and Babylon will be named among those who have knowledge of me; see, Philistia and Tyre, with Ethiopia; this man had his birth there.
- Darby Translation (DBY)
- I will make mention of Rahab and Babylon among them that know me; behold Philistia, and Tyre, with Ethiopia: this [man] was born there.
- Webster's Bible (WBS)
- I will make mention of Rahab and Babylon to them that know me: behold Philistia, and Tyre, with Cush; this [man] was born there.
- Young's Literal Translation (YLT)
- I mention Rahab and Babel to those knowing Me, Lo, Philistia, and Tyre, with Cush! This [one] was born there.
Read in context
- 2ಕರ್ತನು ಚಿಯೋನಿನ ಬಾಗಲುಗಳನ್ನು ಯಾಕೋಬನ ಎಲ್ಲಾ ನಿವಾಸಗಳಿ ಗಿಂತ ಪ್ರೀತಿಮಾಡುತ್ತಾನೆ.
- 3ದೇವರ ಪಟ್ಟಣವೇ, ನಿನ್ನ ವಿಷಯವಾಗಿ ಘನವುಳ್ಳವುಗಳು ಹೇಳಲ್ಪಟ್ಟಿವೆ.
- 4ರಾಹಬನ್ನೂ ಬಾಬೆಲನ್ನೂ ನನ್ನನ್ನು ತಿಳಿದವರಿಗೆ ಜ್ಞಾಪಕಮಾಡುವೆನು; ಫಿಲಿಷ್ಟಿಯವೂ ತೂರಿನ ಸಂಗಡ ಕೂಷನ್ನೂ ನೋಡು: ಈ ಮನುಷ್ಯನು ಅಲ್ಲಿ ಹುಟ್ಟಿ ದನು.
- 5ಚೀಯೋನಿನ ವಿಷಯ ಹೇಳುವದೇನಂದರೆ --ಇಂಥಿಂಥವರು ಅದರಲ್ಲಿ ಹುಟ್ಟಿದರೆಂದೂ ಮಹೋ ನ್ನತನು ತಾನೇ ಅದನ್ನು ಸ್ಥಾಪಿಸುವನು.
- 6ಕರ್ತನು ಜನಸಂಖ್ಯೆ ಬರೆಯುವಾಗ ಇವನು ಅಲ್ಲಿ ಹುಟ್ಟಿದ ನೆಂದು ಎಣಿಸುವನು ಸೆಲಾ.ಹಾಡುವವರೂ ವಾದ್ಯ ಗಳನ್ನು ಬಾರಿಸುವವರೂ ಇದ್ದಾರೆ; ನನ್ನ ಬುಗ್ಗೆಗಳೆಲ್ಲಾ ನಿನ್ನಲ್ಲಿಯೇ.
Cross references
- Isaiah 19:23–25 ಯೆಶಾಯ 19:23–25ಆ ದಿವಸದಲ್ಲಿ ಐಗುಪ್ತದಿಂದ ಅಶ್ಶೂರಕ್ಕೆ ಹೋಗುವ ಒಂದು ರಾಜಮಾರ್ಗವಿರುವದು. ಅಶ್ಶೂ ರ್ಯರು ಐಗುಪ್ತಕ್ಕೂ ಐಗುಪ್ತ್ಯರು ಅಶ್ಶೂರ್ಯಕ್ಕೂ ಹೋಗಿ ಬರುವರು ಮತ್ತು ಐಗುಪ್ತ್ಯರು ಅಶ್ಶೂರ್ಯರೊಂದಿಗೆ (ಕರ್ತನನ್ನು) ಸೇವಿಸುವರು. ಆ ದಿನದಲ್ಲಿ ಇಸ್ರಾಯೇಲು ಐಗುಪ್ತ್ಯರ ಸಂಗ ಡಲೂ ಅಶ್ಶೂರ್ಯರ ಸಂಗಡಲೂ ಮೂರನೆಯ ದಾಗಿ ದೇಶದ ಮಧ್ಯದಲ್ಲಿ ಆಶೀರ್ವಾದವಾಗಿರುವದು.ನನ್ನ ಪ್ರಜೆಯಾದ ಐಗುಪ್ತಕ್ಕೂ ನನ್ನ ಕೈಗಳ ಕೆಲಸ ವಾದ ಅಶ್ಶೂರ್ಯಕ್ಕೂ ನನ್ನ ಸ್ವಾಸ್ತ್ಯವಾದ ಇಸ್ರಾಯೇ ಲಿಗೂ ನಿಮಗೆ ಆಶೀರ್ವಾದ ಎಂದು ಹೇಳಿ ಅವರಿಗೆ ಆಶೀರ್ವಾದ ಕೊಡುವನು. ನನ್ನ ಪ್ರಜೆಯಾದ ಐಗುಪ್ತಕ್ಕೂ ನನ್ನ ಕೈಗಳ ಕೆಲಸ ವಾದ ಅಶ್ಶೂರ್ಯಕ್ಕೂ ನನ್ನ ಸ್ವಾಸ್ತ್ಯವಾದ ಇಸ್ರಾಯೇ ಲಿಗೂ ನಿಮಗೆ ಆಶೀರ್ವಾದ ಎಂದು ಹೇಳಿ ಅವರಿಗೆ ಆಶೀರ್ವಾದ ಕೊಡುವನು.
- Psalm 45:12 ಕೀರ್ತನೆಗಳು 45:12ತೂರಿನ ಮಗಳು ಕಾಣಿಕೆಯೊಂದಿಗೆ ಅಲ್ಲಿ ಇರುವಳು; ಅಂದರೆ ಪ್ರಜೆ ಗಳಲ್ಲಿ ಸ್ಥಿತಿವಂತರು ನಿನ್ನ ದಯೆಯನ್ನು ಕೋರುವರು.
- Psalm 68:31 ಕೀರ್ತನೆಗಳು 68:31ಐಗುಪ್ತದಿಂದ ಪ್ರಧಾನರು ಬರುವರು; ಕೂಷ್ ತನ್ನ ಕೈಗಳನ್ನು ದೇವರ ಕಡೆಗೆ ಬೇಗ ಚಾಚುವದು.
- Job 9:13 ಯೋಬನು 9:13ದೇವರು ತನ್ನ ಕೋಪವನ್ನು ಹಿಂತೆಗೆಯ ದಿದ್ದರೆ ಸೊಕ್ಕಿನ ಸಹಾಯಕರು ಆತನ ಕೆಳಗೆ ಬೊಗ್ಗಿ ಕೊಳ್ಳುತ್ತಾರೆ.
- Psalm 89:10 ಕೀರ್ತನೆಗಳು 89:10ಕೊಲ್ಲ ಲ್ಪಟ್ಟ ಒಬ್ಬನಂತೆ ನೀನು ರಾಹಬನ್ನು ತುಂಡಾಗುವಂತೆ ಒಡೆದಿದ್ದೀ. ನಿನ್ನ ಬಲದ ತೋಳಿನಿಂದ ನಿನ್ನ ಶತ್ರು ಗಳನ್ನು ಚದರಿಸಿ ಬಿಟ್ಟಿದ್ದೀ.
- Isaiah 51:9 ಯೆಶಾಯ 51:9ಓ ಕರ್ತನ ತೋಳೇ, ಎಚ್ಚರಗೊಳ್ಳು, ಎಚ್ಚರ ಗೊಳ್ಳು, ಬಲವನ್ನು ಹೊಂದಿಕೋ; ಹಿಂದಿನ ಜನಾಂಗ ಗಳಲ್ಲಿ ಪೂರ್ವಕಾಲದ ದಿವಸಗಳಲ್ಲಿ ಎಚ್ಚರವಿದ್ದಂ ತೆಯೇ ಎಚ್ಚರವಾಗು. ರಹಬನ್ನು ಕಡಿದುಬಿಟ್ಟದ್ದೂ, ಘಟಸರ್ಪವನ್ನು ಗಾಯಪಡಿಸಿದ್ದೂ ನೀನಲ್ಲವೋ?
- Revelation 18:2 ಪ್ರಕಟನೆ 18:2ಅವನು ಗಟ್ಟಿ ಯಾದ ಶಬ್ದದಿಂದ ಕೂಗುತ್ತಾ--ಮಹಾಬಾಬೆಲ್ ಬಿದ್ದಳು, ಬಿದ್ದಳು; ದೆವ್ವಗಳ ವಾಸಸ್ಥಾನವೂ ಅಶುದ್ಧಾತ್ಮಗಳ ಆಶ್ರಯವೂ ಅಪವಿತ್ರವಾಗಿಯೂ ಅಸಹ್ಯವಾಗಿಯೂ ಇರುವ ಸಕಲ ವಿಧವಾದ ಪಕ್ಷಿಗಳ ಪಂಜರವೂ ಆದಳು.
- Isaiah 13:1–22 ಯೆಶಾಯ 13:1–22ಆಮೋಚನ ಮಗನಾದ ಯೆಶಾಯನಿಗೆ ಬಾಬೆಲಿನ ವಿಷಯವಾಗಿ ಕಂಡುಬಂದ ದೈವೋಕ್ತಿ. ಅವರು(ಶತ್ರುಗಳು) ಬಂದು ಘನವಂತ ದ್ವಾರಗಳೊಳಗೆ ಹೋಗುವಂತೆ ಎತ್ತರವಾದ ಪರ್ವತದ ಮೇಲೆ ನೀವು ಧ್ವಜವನ್ನೆತ್ತಿ ಅವರಿಗೆ ನಿಮ್ಮ ಶಬ್ದವನ್ನು ಕೇಳಿಸುವಂತೆ ಜೋರಾಗಿ ಕೂಗಿ ಕರೆಯಿರಿ. ನಾನು ನನ್ನ ಪರಿಶುದ್ಧರಿಗೆ ಆಜ್ಞಾಪಿಸಿ ನನ್ನ ಮಹಿಮೆಯಲ್ಲಿ ಉಲ್ಲಾಸಿಸುವವರನ್ನೂ ಶೂರರನ್ನೂ ನನ್ನ ಕೋಪಕ್ಕೆ ಕರೆದಿದ್ದೇನೆ. ಬಹು ಸಮೂಹವು ಇದ್ದಂತೆ ಗದ್ದಲವು ಬೆಟ್ಟಗಳಲ್ಲಿ ಕೇಳಿಬರುತ್ತದೆ; ಒಟ್ಟಿಗೆ ಕೂಡಿಕೊಂಡ ರಾಜ್ಯ ಜನಾಂಗ ಗಳ ಆರ್ಭಟ; ಸೈನ್ಯಗಳ ಕರ್ತನು ಯುದ್ಧಕ್ಕೆ ಸೈನ್ಯವನ್ನು ಸಿದ್ಧಮಾಡುತ್ತಾನೆ. ಕರ್ತನೂ ಆತನ ರೋಷಕ್ಕೆ ಆಯುಧಗಳಾದವರೂ ದೂರ ದೇಶದಿಂದ, ಅಂದರೆ ಆಕಾಶಮಂಡಲದ ಕಟ್ಟಕಡೆಯಿಂದ ದೇಶವನ್ನೆಲ್ಲಾ ಹಾಳುಮಾಡುವದಕ್ಕಾಗಿ ಬರುತ್ತಾರೆ. ನೀವು ಗೋಳಾ ಡಿರಿ, ಕರ್ತನ ದಿನವು ಸವಿಾಪವಾಯಿತು; ಅದು ಸರ್ವಶಕ್ತನಿಂದ ನಾಶನದಂತೆ ಬರುವದು. ಆದ ಕಾರಣ ಎಲ್ಲಾ ಕೈಗಳು ಜೋಲು ಬೀಳುವವು ಪ್ರತಿ ಯೊಬ್ಬನ ಹೃದಯವು ಕರಗುವದು. ಅವರು ಭಯ ಪಡುವರು; ನೋವು ಮತ್ತು ಬೇನೆಗಳು ಅವರನ್ನು ಆವರಿಸಿಕೊಳ್ಳುವವು; ಹೆರುವ ಹೆಂಗಸಿನಂತೆ ಸಂಕಟ ಪಡುವರು; ಅವರು ಒಬ್ಬರಿಗೊಬ್ಬರು ಭ್ರಮೆಪಡು ವರು; ಅವರ ಮುಖಗಳು ಜ್ವಾಲೆಯಂತಿರುವವು. ಇಗೋ, ಕರ್ತನ ದಿನವು ಬರುತ್ತದೆ, ಭೂಮಿಯನ್ನು ಹಾಳುಮಾಡುವದಕ್ಕೂ ಅಲ್ಲಿಂದ ಪಾಪಿಗಳನ್ನು ನಿರ್ಮೂಲಮಾಡುವದಕ್ಕೂ ಅದು ಕೋಪೋದ್ರೇಕ ದಿಂದಲೂ ತೀಕ್ಷ್ಣ ರೋಷದಿಂದಲೂ ಕ್ರೂರವಾಗಿರು ವದು. ಆಕಾಶದ ನಕ್ಷತ್ರಗಳು ಅದರ ರಾಶಿಗಳು ತಮ್ಮ ಬೆಳಕನ್ನು ಕೊಡುವುದಿಲ್ಲ; ಸೂರ್ಯನು ಮೂಡಿ ಹೋಗುತ್ತಿರುವಾಗಲೇ ಕತ್ತಲಾಗುವನು. ಚಂದ್ರನು ತನ್ನ ಬೆಳಕನ್ನು ಕೊಡುವದಿಲ್ಲ. ಅವರ ಕೆಟ್ಟವುಗಳಿಗೋಸ್ಕರವೂ ದುಷ್ಟರ ಅಪ ರಾಧಗಳಿಗೋಸ್ಕರವೂ ನಾನು ಲೋಕವನ್ನು ಶಿಕ್ಷಿಸು ವೆನು; ಗರ್ವಿಷ್ಟರ ಅಹಂಕಾರವನ್ನು ನಿಲ್ಲಿಸಿಬಿಡುವೆನು, ಭಯಂಕರವಾದ ಹೆಮ್ಮೆಯನ್ನು ತಗ್ಗಿಸುವೆನು. ನಾನು ಮನುಷ್ಯನನ್ನು ಚೊಕ್ಕ ಬಂಗಾರಕ್ಕಿಂತಲೂ ಇಲ್ಲವೆ ಒಫೀರಿನ ಬಂಗಾರಕ್ಕಿಂತಲೂ ಅಮೂಲ್ಯನನ್ನಾಗಿ ಮಾಡುವೆನು. ಆದದರಿಂದ ಸೈನ್ಯಗಳ ಕರ್ತನ ಉಗ್ರದಲ್ಲಿಯೂ ಆತನ ಕೋಪೋದ್ರೇಕದ ದಿನ ದಲ್ಲಿಯೂ ನಾನು ಆಕಾಶಗಳನ್ನು ನಡುಗಿಸುವೆನು, ಭೂಮಿಯನ್ನು ಅದರ ಸ್ಥಳದಿಂದ ತೆಗೆದುಬಿಡುವೆನು. ಅದು ಅಟ್ಟಿದ ಜಿಂಕೆಯಂತೆಯೂ ಯಾರೂ ಕೂಡಿ ಸದ ಕುರಿಗಳಂತೆಯೂ ಇರುವದು. ಅವರಲ್ಲಿ ಪ್ರತಿಯೊ ಬ್ಬನೂ ತನ್ನ ಜನರ ಕಡೆಗೆ ತಿರುಗಿಕೊಳ್ಳುವನು ಪ್ರತಿಯೊ ಬ್ಬನೂ ತನ್ನ ಸ್ವದೇಶಕ್ಕೆ ಓಡಿಹೋಗುವನು. ಸಿಕ್ಕಿದ ಪ್ರತಿಯೊಬ್ಬನೂ ಇರಿಯಲ್ಪಡುವನು; ಅವರೊಂದಿಗೆ ಸೇರಿಕೊಂಡ ಪ್ರತಿಯೊಬ್ಬನೂ ಕತ್ತಿಯಿಂದ ಬೀಳು ವನು. ಅವರ ಮಕ್ಕಳೂ ಅವರ ಕಣ್ಣೆದುರಿಗೆ ತುಂಡು ತುಂಡಾಗುವಂತೆ ಅಪ್ಪಳಿಸಲ್ಪಡುವರು; ಅವರ ಮನೆ ಗಳು ಸೂರೆಯಾಗುವವು; ಅವರ ಪತ್ನಿಯರು ಕೆಡಿ ಸಲ್ಪಡುವರು. ಇಗೋ, ಬೆಳ್ಳಿಯನ್ನು ಲಕ್ಷಿಸದೆ ಬಂಗಾರದಲ್ಲಿ ಆನಂದಿಸದೆ ಇರುವ ಮೇದ್ಯರನ್ನು ಅವರಿಗೆ ವಿರೋಧ ವಾಗಿ ನಾನು ಎಬ್ಬಿಸುವೆನು. ಅವರ ಬಿಲ್ಲುಗಳು ಸಹ ಯುವಕರನ್ನು ಹೊಡೆದು ತುಂಡುತುಂಡು ಮಾಡುವವು; ಇವರು ಗರ್ಭಫಲವನ್ನು ಕರುಣಿಸರು, ಇವರ ಕಣ್ಣುಗಳು ಮಕ್ಕಳನ್ನೂ ಉಳಿಸುವದಿಲ್ಲ. ರಾಜ್ಯಗಳ ಘನತೆಯೂ ಕಸ್ದೀಯರ ಶ್ರೇಷ್ಠವಾದ ಸೌಂದರ್ಯವೂ ಆದ ಬಾಬೆಲಿಗೆ ದೇವರು ಸೊದೋ ಮ್ ಗೊಮೋರಗಳನ್ನು ಕೆಡವಿಬಿಟ್ಟಂತೆ ಇದನ್ನು ಸಹ ಕೆಡವಿಬಿಡುವನು. ಅದು ಎಂದಿಗೂ ನಿವಾಸ ಸ್ಥಳ ವಾಗದು, ಇಲ್ಲವೆ ತಲತಲಾಂತರಕ್ಕೂ ಅಲ್ಲಿ ಯಾರೂ ವಾಸಿಸರು; ಇಲ್ಲವೆ ಯಾವ ಅರಬಿಯನೂ ಗುಡಾರ ಹಾಕನು; ಅಥವಾ ಕುರುಬರು ಮಂದೆಯನ್ನು ತಂಗಿಸರು. ಆದರೆ ಮರುಭೂಮಿಯ ಕಾಡುಮೃಗಗಳು ಅಲ್ಲಿ ಮಲಗುವವು; ಅವರ ಮನೆಗಳು ವ್ಯೆಥೆಯಿಂದ ತುಂಬಿರುವವು; ಅಲ್ಲಿ ಗೂಬೆಗಳು ವಾಸಿಸುವವು, ದೆವ್ವಗಳು ಕುಣಿದಾಡುವವು.ಅವರ ಹಾಳಾದ ಮನೆಗಳಲ್ಲಿ ದ್ವೀಪಗಳ ಕಾಡುಮೃಗಗಳು ಕೂಗುವವು; ಅವರ ಮೆಚ್ಚಿಕೆಯಾದ ಅರಮನೆಗಳಲ್ಲಿ ಸರ್ಪಗಳು ವಾಸಿಸುವವು; ಅವಳ ಕಾಲವು ಸವಿಾಪಿಸಿತು, ಇನ್ನು ಅವಳ ದಿನಗಳು ಮುಂದುವರಿಯವು. ಅವರ ಹಾಳಾದ ಮನೆಗಳಲ್ಲಿ ದ್ವೀಪಗಳ ಕಾಡುಮೃಗಗಳು ಕೂಗುವವು; ಅವರ ಮೆಚ್ಚಿಕೆಯಾದ ಅರಮನೆಗಳಲ್ಲಿ ಸರ್ಪಗಳು ವಾಸಿಸುವವು; ಅವಳ ಕಾಲವು ಸವಿಾಪಿಸಿತು, ಇನ್ನು ಅವಳ ದಿನಗಳು ಮುಂದುವರಿಯವು.
- Isaiah 19:11 ಯೆಶಾಯ 19:11ಚೋಯನಿನ ಪ್ರಧಾನರು ನಿಜ ವಾಗಿ ಮೂರ್ಖರು, ಫರೋಹನ ಜ್ಞಾನವುಳ್ಳ ಸಲಹೆ ಗಾರರ ಆಲೋಚನೆಯು ಬುದ್ಧಿಹೀನವೇ. ನಾನು ಜ್ಞಾನಿಗಳ ಮಗನೆಂದು ಪುರಾತನ ರಾಜವಂಶಿಯನು ಎಂದು ನೀವು ಫರೋಹನಿಗೆ ಹೇಳುವದು ಹೇಗೆ?
- Jeremiah 50:1–46 ಯೆರೆಮೀಯ 50:1–46ಬಾಬೆಲಿಗೆ ವಿರೋಧವಾಗಿಯೂ ಕಸ್ದೀಯರ ದೇಶಕ್ಕೆ ವಿರೋಧವಾಗಿಯೂ ಕರ್ತನು ಪ್ರವಾದಿಯಾದ ಯೆರೆವಿಾಯನ ಮೂಲಕ ಹೇಳಿಸಿದ ವಾಕ್ಯವು. ಜನಾಂಗಗಳಿಗೆ ತಿಳಿಸಿರಿ, ಸಾರಿರಿ; ಧ್ವಜವನ್ನೆತ್ತಿರಿ; ಸಾರಿರಿ, ಮರೆಮಾಡಬೇಡಿರಿ, ಬಾಬೆಲು ಹಿಡಿಯ ಲ್ಪಟ್ಟಳು, ಬೇಲ್ನಿಗೆ ನಾಚಿಕೆಯಾಯಿತು, ಮೆರೋದಾ ಕನು ತುಂಡು ತುಂಡಾಗಿ ಮುರಿದು ಹೋದನು, ಅವಳ ವಿಗ್ರಹಗಳಿಗೆ ನಾಚಿಕೆಯಾಯಿತು. ಅವಳ ವಿಗ್ರಹಗಳು ಮುರಿದು ಹೋದವೆಂದು ಹೇಳಿರಿ; ಉತ್ತರದಿಂದ ಅವಳ ವಿರೋಧವಾಗಿ ಜನಾಂಗವು ಬರುತ್ತದೆ; ಅದು ಅವಳ ದೇಶವನ್ನು ಹಾಳು ಮಾಡಿ ಬಿಡುವದು; ಅವಳಲ್ಲಿ ಯಾರೂ ವಾಸಿಸುವದಿಲ್ಲ; ಮನುಷ್ಯರೂ ಮೃಗಗಳೂ ಒಟ್ಟಾಗಿ ತೊಲಗಿಬಿಡುತ್ತಾರೆ, ಓಡಿಹೋಗುತ್ತಾರೆ. ಆ ದಿವಸಗಳಲ್ಲಿಯೂ ಕಾಲ ದಲ್ಲಿಯೂ ಇಸ್ರಾಯೇಲಿನ ಮಕ್ಕಳು ಬರುವರು; ಅವರೂ ಯೆಹೂದನ ಮಕ್ಕಳೂ ಒಟ್ಟಾಗಿ ಕೂಡಿ ಕೊಳ್ಳುವರೆಂದು ಕರ್ತನು ಅನ್ನುತ್ತಾನೆ. ಅವರು ಅಳುತ್ತಾ ಹೋಗಿ, ತಮ್ಮ ದೇವರಾದ ಕರ್ತನನ್ನು ಹುಡುಕುವರು. ಚೀಯೋನಿನ ಕಡೆಗೆ ಅಭಿಮುಖರಾಗಿ ಅದರ ಮಾರ್ಗವನ್ನು ವಿಚಾರಿಸಿ--ಬನ್ನಿ, ಮರೆತುಹೋಗದ ನಿತ್ಯವಾದ ಒಡಂಬಡಿಕೆಯಿಂದ ಕರ್ತನನ್ನು ಸೇರಿಸಿ ಕೊಳ್ಳೋಣ ಅನ್ನುವರು. ನನ್ನ ಜನರು ಕಳೆದುಹೋದ ಕುರಿಗಳಾಗಿದ್ದರು; ಅವರ ಕುರುಬರು ಅವರನ್ನು ತಪ್ಪಿ ಹೋಗುವಂತೆ ಮಾಡಿದರು; ಅವರನ್ನು ಬೆಟ್ಟಗಳ ಮೇಲೆ ತಿರುಗಿಸಿ ಅಡ್ಡಾಡಿಸಿದರು; ಅವರು ಬೆಟ್ಟದಿಂದ ಗುಡ್ಡಕ್ಕೆ ಹೋದರು; ಮಲಗುವ ಸ್ಥಳವನ್ನು ಮರೆತುಬಿಟ್ಟರು. ಅವರನ್ನು ಕಂಡವರೆಲ್ಲರು ಅವರನ್ನು ನುಂಗಿಬಿಟ್ಟರು, ಅವರ ಎದುರಾಳಿಗಳು--ನಮ್ಮಲ್ಲಿ ಅಪರಾಧವಿಲ್ಲ; ನೀತಿಯ ನಿವಾಸವಾದ ಕರ್ತನಿಗೆ, ಅವರ ತಂದೆಗಳ ನಿರೀಕ್ಷಣೆಯಾದ ಕರ್ತನಿಗೆ ವಿರೋಧವಾಗಿ ಪಾಪಮಾಡಿದ್ದಾರೆಂದು ಅಂದರು. ಬಾಬೆಲಿನೊಳ ಗಿಂದ ಓಡಿಹೋಗಿರಿ; ಕಸ್ದೀಯರ ದೇಶದಿಂದ ಹೊರ ಡಿರಿ, ಮಂದೆಯ ಮುಂದೆ ಹೋತಗಳ ಹಾಗೆ ಇರ್ರಿ. ಇಗೋ, ನಾನು ಉತ್ತರ ದೇಶದಿಂದ ದೊಡ್ಡ ಜನಾಂಗಗಳ ಸಭೆ ಸೇರಿಸಿ; ಬಾಬೆಲಿಗೆ ವಿರೋಧವಾಗಿ ಏಳುವಂತೆ ಮಾಡುತ್ತೇನೆ. ಅವರು ಅದಕ್ಕೆ ವಿರೋಧ ವಾಗಿ ಯುದ್ಧವನ್ನು ಸಿದ್ಧಮಾಡುವರು; ಅಲ್ಲಿಂದ ಅದು ಹಿಡಿಯಲ್ಪಡುವದು; ಅವರ ಬಾಣಗಳು ಬಲಿಷ್ಠನಾದ ಪ್ರವೀಣಶಾಲಿಯ ಹಾಗಿರುವವು. ಯಾವದೂ ವ್ಯರ್ಥವಾಗಿ ತಿರುಗವು. ಕಸ್ದೀಯರ ದೇಶವು ಸುಲಿಗೆಯಾಗುವದು; ಅದನ್ನು ಸುಲುಕೊಳ್ಳುವವರೆಲ್ಲರಿಗೆ ತೃಪ್ತಿಯಾಗುವದೆಂದು ಕರ್ತನು ಅನ್ನುತ್ತಾನೆ. ನನ್ನ ಸ್ವಾಸ್ತ್ಯವನ್ನು ನಾಶಮಾಡಿದವರೇ, ನೀವು ಸಂತೋಷಿಸಿದ್ದರಿಂದಲೂ ಉಲ್ಲಾಸಿಸಿದ್ದರಿಂದಲೂ ಕೊಬ್ಬಿದ ಕಡಸಿನ ಹಾಗೆ ಗರ್ವಪಟ್ಟದ್ದರಿಂದಲೂ ಹೋರಿಗಳ ಹಾಗೆ ಹೂಂಕರಿಸಿದ್ದರಿಂದಲೂ ನಿಮ್ಮ ತಾಯಿ ಬಹಳವಾಗಿ ನಾಚಿಕೆಪಡುವಳು; ನಿಮ್ಮನ್ನು ಹೆತ್ತವಳು ಲಜ್ಜೆ ಹೊಂದುವಳು; ಇಗೋ, ಜನಾಂಗ ಗಳಲ್ಲಿ ಅಂತ್ಯವಾದದ್ದು ಕಾಡೂ ಒಣ ಭೂಮಿಯೂ ಅರಣ್ಯವೂ ಆಗುವದು. ಕರ್ತನ ರೌದ್ರದ ನಿಮಿತ್ತ ಅದರಲ್ಲಿ ಯಾರೂ ವಾಸಮಾಡುವದಿಲ್ಲ; ಸಂಪೂರ್ಣ ಹಾಳಾಗುವದು ಬಾಬೆಲನ್ನು ಹಾದುಹೋಗುವವ ರೆಲ್ಲರು ಅದರ ಎಲ್ಲಾ ಬಾಧೆಗಳ ವಿಷಯ ವಿಸ್ಮಯಪಟ್ಟು ಸಿಳ್ಳಿಡುವರು. ಬಿಲ್ಲನ್ನು ಬೊಗ್ಗಿಸುವವರೆಲ್ಲರೇ, ಬಾಬೆಲಿಗೆ ವಿರೋಧವಾಗಿ ಸುತ್ತಲೂ ಯುದ್ಧವನ್ನು ಸಿದ್ಧಮಾಡಿರಿ. ಬಾಣಗಳನ್ನು ಅದಕ್ಕೆ ಎಸೆಯಿರಿ; ಕಡಿಮೆ ಮಾಡಬೇಡಿರಿ; ಅದು ಕರ್ತನಿಗೆ ವಿರೋಧವಾಗಿ ಪಾಪಮಾಡಿದೆ. ಸುತ್ತಲೂ ಅದಕ್ಕೆ ವಿರೋಧವಾಗಿ ಆರ್ಭಟಿಸಿರಿ; ಒಳಪಟ್ಟಿತು; ಅದರ ಅಸ್ತಿವಾರಗಳು ಬಿದ್ದು ಹೋದವು; ಅದರ ಗೋಡೆಗಳು ಕೆಡವಲ್ಪಟ್ಟವು; ಅದು ಕರ್ತನ ಪ್ರತಿದಂಡನೆಯೇ, ಅದರಿಂದ ಪ್ರತಿ ದಂಡನೆ ತಕ್ಕೊಳ್ಳಿರಿ. ಅದು ಮಾಡಿದ ಹಾಗೆಯೇ ಅದಕ್ಕೆ ಮಾಡಿರಿ. ಬಿತ್ತುವವನನ್ನೂ ಸುಗ್ಗಿ ಕಾಲದಲ್ಲಿ ಕುಡುಗೋಲು ಹಿಡಿಯುವವನನ್ನೂ ಬಾಬೆಲಿನೊಳ ಗಿಂದ ಕಡಿದು ಬಿಡಿರಿ; ಕಷ್ಟಪಡಿಸುವ ಕತ್ತಿಯ ಭಯದಿಂದ ಅವರು ತಮ್ಮ ತಮ್ಮ ಜನರ ಬಳಿಗೆ ತಿರುಗಿಕೊಳ್ಳುವರು; ತಮ್ಮ ತಮ್ಮ ದೇಶಗಳಿಗೆ ಓಡಿ ಹೋಗುವರು. ಇಸ್ರಾಯೇಲನು ಚದರಿಹೋದ ಕುರಿಯಾಗಿ ದ್ದನು; ಸಿಂಹಗಳು ಅವನನ್ನು ಓಡಿಸಿಬಿಟ್ಟವು; ಮೊದಲು ಅಶ್ಶೂರಿನ ಅರಸನು ಅವನನ್ನು ನುಂಗಿಬಿಟ್ಟನು. ಕಡೆಯಲ್ಲಿ ಬಾಬೆಲಿನ ಅರಸನಾದ ಈ ನೆಬೂಕದ್ನೆಚ್ಚರನು ಅವನ ಎಲುಬುಗಳನ್ನು ಮುರಿದಿದ್ದಾನೆ. ಆದದರಿಂದ ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಅಶ್ಶೂರಿನ ಅರಸನನ್ನು ಶಿಕ್ಷಿಸಿದ ಹಾಗೆ, ಬಾಬೆಲಿನ ಅರಸನನ್ನೂ ಅವನ ದೇಶವನ್ನೂ ಶಿಕ್ಷಿಸುತ್ತೇನೆ. ಇಸ್ರಾಯೇಲನನ್ನು ಅವನ ನಿವಾಸಕ್ಕೆ ತಿರಿಗಿ ಬರಮಾಡುತ್ತೇನೆ; ಅವನು ಕರ್ಮೆಲಿ ನಲ್ಲಿಯೂ ಬಾಷಾನಿನ್ನಲ್ಲಿಯೂ ಮೇಯುವನು; ಅವನ ಪ್ರಾಣವು ಎಫ್ರಾಯಿಮ್ ಬೆಟ್ಟದಲ್ಲಿಯೂ ಗಿಲ್ಯಾದಿ ನಲ್ಲಿಯೂ ತೃಪ್ತಿಹೊಂದುವದು. ಕರ್ತನು ಹೀಗೆ ಅನ್ನುತ್ತಾನೆ--ಆ ದಿವಸಗಳಲ್ಲಿ ಆ ಕಾಲದಲ್ಲಿ ಇಸ್ರಾ ಯೇಲಿನ ಅಕ್ರಮವನ್ನು ಹುಡುಕಿದರೂ ಅಲ್ಲಿ ಏನೂ ಇರದು; ಯೆಹೂದದ ಪಾಪಗಳನ್ನು ಹುಡುಕಿದರೂ ಅವು ಸಿಕ್ಕುವದಿಲ್ಲ. ನಾನು ಉಳಿಸುವವರನ್ನು ಮನ್ನಿಸುತ್ತೇನೆ. ಮೆರಾಥಯಿಮ್ ದೇಶಕ್ಕೂ ಪೆಕೋದಿನ ನಿವಾಸಿ ಗಳಿಗೂ ವಿರೋಧವಾಗಿ ಏರಿಹೋಗು; ಅವರನ್ನು ಹಿಂದಟ್ಟಿ ಕೆಡಿಸಿಬಿಟ್ಟು ಸಂಪೂರ್ಣ ನಾಶಮಾಡು, ನಾನು ನಿನಗೆ ಆಜ್ಞಾಪಿಸಿದ್ದೆಲಾದರ ಪ್ರಕಾರ ಮಾಡು ಎಂದು ಕರ್ತನು ಅನ್ನುತ್ತಾನೆ. ಯುದ್ಧದ ಶಬ್ದವೂ ದೊಡ್ಡ ನಾಶನವೂ ದೇಶದಲ್ಲಿ ಇರುವದು. ಎಲ್ಲಾ ಭೂಮಿಯ ಸುತ್ತಿಗೆಯೂ ಹೇಗೆ ತುಂಡಾಗಿ ಮುರಿಯಲ್ಪಟ್ಟಿತು; ಬಾಬೆಲ್ ಹೇಗೆ ಜನಾಂಗಗಳೊಳಗೆ ಹಾಳಾಯಿತು! ನಾನು ಬೋನನ್ನು ಇಟ್ಟೆನು; ಹೌದು, ಬಾಬೆಲೇ ನೀನು ಹಿಡಿಯಲ್ಪಟ್ಟಿದ್ದೀ; ಆದರೆ ನಿನಗೆ ತಿಳಿಯದಿತ್ತು; ನೀನು ಕರ್ತನಿಗೆ ವಿರೋಧವಾಗಿ ಜಗಳವಾಡಿದ್ದ ರಿಂದಲೇ ಸಿಕ್ಕಿದ್ದೀ; ವಶಮಾಡಲ್ಪಟ್ಟಿದ್ದೀ; ಕರ್ತನು ತನ್ನ ಆಯುಧ ಶಾಲೆಯನ್ನು ತೆರೆದು, ರೋಷದ ಆಯುಧಗಳನ್ನು ಹೊರಗೆ ತಂದಿದ್ದಾನೆ; ಕಸ್ದೀಯರ ದೇಶದಲ್ಲಿ ಸೈನ್ಯಗಳ ಕರ್ತನಾದ ದೇವರಿಗೆ ನಿರ್ವಹಿಸ ಬೇಕಾದ ಕಾರ್ಯವುಂಟು. ಕಟ್ಟಕಡೆಯ ಮೇರೆ ಯಿಂದ ಅದಕ್ಕೆ ವಿರೋಧವಾಗಿ ಬನ್ನಿ; ಅದರ ಕಣಜಗಳನ್ನು ತೆರೆಯಿರಿ; ಅದನ್ನು ದಿಬ್ಬಗಳಂತೆ ತುಳಿ ಯಿರಿ; ಸಂಪೂರ್ಣವಾಗಿ ನಾಶಮಾಡಿರಿ; ಅದಕ್ಕೆ ಒಂದೂ ಉಳಿಯದಿರಲಿ. ಅದರ ಹೋರಿಗಳನ್ನೆಲ್ಲಾ ಕೊಂದುಹಾಕಿರಿ; ಅವು ಕೊಲೆಗೆ ಇಳಿಯಲಿ; ಅವರಿಗೆ ಅಯ್ಯೋ! ಅವರ ದಿನವೂ ಅವರ ವಿಚಾರಣೆಯ ಕಾಲವೂ ಬಂತು. ಅವರು ಚೀಯೋನಿನಲ್ಲಿ ನಮ್ಮ ದೇವರಾದ ಕರ್ತನ ಪ್ರತಿದಂಡನೆಯನ್ನೂ ಆತನ ಆಲಯದ ಪ್ರತಿ ದಂಡನೆ ಯನ್ನೂ ತಿಳಿಸುತ್ತಾ, ಬಾಬೆಲಿನ ದೇಶದಿಂದ ತಪ್ಪಿಸಿ ಕೊಂಡು ಓಡಿ ಹೋಗುವವರ ಸ್ವರವು! ಬಾಬೆಲಿಗೆ ವಿರೋಧವಾಗಿ ಬಿಲ್ಲಿನವರನ್ನು ಒಟ್ಟಾಗಿ ಕರೆಯಿರಿ; ಬಿಲ್ಲು ಬೊಗ್ಗಿಸುವವರೆಲ್ಲರೇ, ಅದಕ್ಕೆ ವಿರೋಧವಾಗಿ ಸುತ್ತಲು ದಂಡು ಕಟ್ಟಿರಿ; ಅದರಲ್ಲಿ ಯಾವದು ತಪ್ಪಿಸಿ ಕೊಳ್ಳಲಾರದೆ ಇರಲಿ. ಅದರ ಕೃತ್ಯಗಳ ಪ್ರಕಾರ ಅದಕ್ಕೆ ಪ್ರತಿಫಲ ಕೊಡಿರಿ; ಅದು ಮಾಡಿದ್ದೆಲ್ಲಾದರ ಹಾಗೆ ಅದಕ್ಕೆ ಮಾಡಿರಿ; ಕರ್ತನಿಗೆ ವಿರೋಧವಾಗಿಯೂ ಇಸ್ರಾಯೇಲಿನ ಪರಿಶುದ್ಧನಿಗೆ ವಿರೋಧವಾಗಿಯೂ ಅದು ಗರ್ವ ತೋರಿಸಿತು. ಆದದರಿಂದ ಅದರ ಯೌವನಸ್ಥರು ಬೀದಿಗಳಲ್ಲಿ ಬೀಳುವರು; ಅದರ ಯುದ್ಧಸ್ಥರೆಲ್ಲರು ಆ ದಿವಸದಲ್ಲಿ ತೆಗೆದುಹಾಕಲ್ಪಡು ವರೆಂದು ಕರ್ತನು ಅನ್ನುತ್ತಾನೆ. ಅತಿ ಗರ್ವಿಷ್ಠನೇ, ಇಗೋ, ನಾನು ನಿನಗೆ ವಿರೋಧವಾಗಿದ್ದೇನೆಂದು ಸೈನ್ಯಗಳ ಕರ್ತನಾದ ದೇವರು ಅನ್ನುತ್ತಾನೆ; ನಿನ್ನ ದಿವಸವೂ ನಿನ್ನ ವಿಚಾರಣೆಯ ಕಾಲವೂ ಬಂತು. ಆಗ ಅತಿ ಗರ್ವದ (ರಾಜ್ಯವು) ಎಡವಿ ಬೀಳುವದು; ಅದನ್ನು ಎಬ್ಬಿಸುವದಕ್ಕೆ ಯಾರೂ ಇರುವದಿಲ್ಲ; ಅದರ ಪಟ್ಟಣಗಳಲ್ಲಿ ನಾನು ಬೆಂಕಿ ಹಚ್ಚುವೆನು, ಅದು ಅದರ ಸುತ್ತಲಿರುವದನ್ನೆಲ್ಲಾ ನುಂಗಿಬಿಡುವದು. ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ-- ಇಸ್ರಾಯೇಲಿನ ಮಕ್ಕಳೂ ಯೆಹೂದನ ಮಕ್ಕಳೂ ಕೂಡ ಹಿಂಸಿಸಲ್ಪಟ್ಟರು; ಅವರನ್ನು ಸೆರೆಗೆ ಒಯ್ಯುವವ ರೆಲ್ಲರು ಅವರನ್ನು ಬಲವಾಗಿ ಹಿಡಿದು, ಕಳುಹಿಸಿ ಬಿಡಲೊಲ್ಲದೆ ಇದ್ದರು. ಅವರ ವಿಮೋಚಕನು ಬಲಿಷ್ಠನೇ, ಸೈನ್ಯಗಳ ಕರ್ತನು ಆತನ ಹೆಸರು; ಆತನು ದೇಶಕ್ಕೆ ಶಾಂತಿಯನ್ನು ಕೊಡುವ ಹಾಗೆಯೂ ಬಾಬೆಲಿನ ನಿವಾಸಿಗಳಿಗೆ ನಡುಗುವಿಕೆಯನ್ನು ಕೊಡುವ ಹಾಗೆಯೂ ಅವರ ವ್ಯಾಜ್ಯವನ್ನು ಪೂರ್ಣವಾಗಿ ತೀರಿಸುವನು. ಕಸ್ದೀಯರಿಗೂ ಬಾಬೆಲಿನ ನಿವಾಸಿಗಳಿಗೂ ಅದರ ಪ್ರಧಾನರಿಗೂ ಜ್ಞಾನಿಗಳಿಗೂ ವಿರೋಧವಾಗಿ ಕತ್ತಿ ಉಂಟೆಂದು ಕರ್ತನು ಅನ್ನುತ್ತಾನೆ. ಸುಳ್ಳುಗಾರರಿಗೆ ವಿರೋಧವಾಗಿ ಖಡ್ಗ ಉಂಟು; ಅವರು ಮೂರ್ಖರಾಗು ವರು; ಅದರ ಪರಾಕ್ರಮಶಾಲಿಗಳಿಗೆ ವಿರೋಧವಾಗಿ ಖಡ್ಗ ಉಂಟು; ಅವರು ಭಯಭ್ರಾಂತಿ ಪಡುವರು. ಅವರ ಕುದುರೆಗಳಿಗೂ ರಥಗಳಿಗೂ ಅದರೊಳ ಗಿರುವ ಎಲ್ಲಾ ಜನರಿಗೆ ವಿರೋಧವಾಗಿ ಖಡ್ಗ ಉಂಟು. ಅವರು ಹೆಂಗಸರ ಹಾಗೆ ಬೆದರುವರು; ಅದರ ಬೊಕ್ಕಸಗಳಿಗೆ ವಿರೋಧವಾಗಿಯೂ ಖಡ್ಗ ಉಂಟು. ಅವು ಕೊಳ್ಳೆಯಾಗುವವು. ಬೇಗೆಯು ಅವರ ನೀರನ್ನೆಲ್ಲಾ ಹೀರಲಿ; ಅದು ಬತ್ತಿ ಹೋಗುವದು; ಅದು ವಿಗ್ರಹಗಳ ದೇಶವೇ, ಅವರು ವಿಗ್ರಹಗಳಿಂದ ಹುಚ್ಚರಾದರು. ಆದದರಿಂದ ಅರಣ್ಯದ ಕಾಡು ಮೃಗಗಳು, ನರಿಗಳು ಕೂಡ ಅಲ್ಲಿ ವಾಸಮಾಡುವವು. ಗೂಬೆಗಳೂ ಸಹ ಅದರಲ್ಲಿ ವಾಸಮಾಡುವವು; ಅದು ಇನ್ನು ಮೇಲೆ ಎಂದೆಂದಿಗೂ ನಿವಾಸವಾಗುವದಿಲ್ಲ; ತಲತಲಾಂತರಗಳ ವರೆಗೂ ಯಾರೂ ಅದರಲ್ಲಿ ತಂಗುವದಿಲ್ಲ. ದೇವರು ಸೊದೋಮನ್ನೂ ಗೊಮೋರವನ್ನು ಅವುಗಳ ಸವಿಾಪದಲ್ಲಿದ್ದ ಪಟ್ಟಣಗಳನ್ನೂ ಕೆಡವಿಹಾಕಿದಾಗ ಆದ ಹಾಗೆ ಅಲ್ಲಿ ಯಾವ ಮನುಷ್ಯನಾದರೂ ವಾಸಮಾಡುವದಿಲ್ಲ; ಅದರಲ್ಲಿ ಯಾವ ನರಪುತ್ರನಾದರೂ ತಂಗುವದಿ ಲ್ಲವೆಂದು ಕರ್ತನು ಅನ್ನುತ್ತಾನೆ. ಇಗೋ, ಒಂದು ಜನಾಂಗ ಉತ್ತರದಿಂದ ಬರುತ್ತದೆ; ಅದು ದೊಡ್ಡ ಜನಾಂಗವು. ಭೂಮಿಯ ಮೇರೆಗಳಿಂದ ಅನೇಕ ಅರಸರು ಎಬ್ಬಿಸಲ್ಪಡುವರು. ಅವರು ಬಿಲ್ಲನ್ನೂ ಭಲ್ಲೆಯನ್ನೂ ಹಿಡಿಯುವರು; ಅವರು ಕ್ರೂರರು; ಅಂತಃಕರುಣೆ ತೋರಿಸುವದಿಲ್ಲ; ಅವರ ಶಬ್ದವು ಸಮುದ್ರದ ಹಾಗೆ ಘೋಷಿಸುವದು; ಬಾಬೆಲಿನ ಮಗಳೇ, ನಿನಗೆ ವಿರೋಧವಾಗಿ ಯುದ್ಧಕ್ಕೆ ಸಿದ್ಧವಾಗಿ ರುವ ಪುರುಷರ ಹಾಗೆ ಕುದುರೆಗಳನ್ನು ಹತ್ತಿಕೊಂಡು ಬರುವರು. ಬಾಬೆಲಿನ ಅರಸನು ಅವರ ಸುದ್ದಿಯನ್ನು ಕೇಳಿದ್ದಾನೆ. ಅವನ ಕೈಗಳು ನಿತ್ರಾಣವಾದವು. ಸಂಕಟವೂ ಹೆರುವ ಸ್ತ್ರೀಯ ಹಾಗೆ ನೋವೂ ಅವನನ್ನು ಹಿಡಿದವು. ಇಗೋ, ಅವನು ಸಿಂಹದ ಹಾಗೆ ಯೊರ್ದನಿನ ಉಕ್ಕುವಿಕೆಯಿಂದ ಬಲವಾದ ನಿವಾಸಕ್ಕೆ ಏರಿ ಬರುವನು; ಆದರೆ ನಾನು ಅವರನ್ನು ಕ್ಷಣಮಾತ್ರ ದಲ್ಲಿ ಅದಕ್ಕೆ ದೂರವಾಗಿ ಓಡಿಹೋಗುವಂತೆ ಮಾಡುವೆನು, ನಾನು ಅದರ ಮೇಲೆ ನೇಮಿಸತಕ್ಕ ಆಯಲ್ಪಟ್ಟವನು ಯಾರು? ನನ್ನ ಹಾಗೆ ಯಾರು? ಮತ್ತು ನನಗೆ ಕಾಲವನ್ನು ನೇಮಿಸುವವನಾರು? ನನ್ನ ಮುಂದೆ ನಿಲ್ಲತಕ್ಕ ಕುರುಬನು ಯಾರು? ಆದದರಿಂದ ಕರ್ತನು ಬಾಬೆಲಿಗೆ ವಿರೋಧವಾಗಿ ಮಾಡಿದ ಆಲೋ ಚನೆಯನ್ನೂ ಆತನು ಕಸ್ದೀಯರ ದೇಶಕ್ಕೆ ವಿರೋಧವಾಗಿ ಮಾಡಿದ ಯೋಚನೆಗಳನ್ನೂ ಕೇಳಿರಿ; ನಿಶ್ಚಯವಾಗಿ ಮಂದೆಯಲ್ಲಿ ಚಿಕ್ಕವುಗಳು ಅವರನ್ನು ಎಳೆಯುವವು; ನಿಶ್ಚಯವಾಗಿ ಅವರ ನಿವಾಸವನ್ನು ಅವರ ಸಂಗಡ ಹಾಳುಮಾಡುವನು.ಬಾಬೆಲ್ ಹಿಡಿಯಲ್ಪಟ್ಟಿತ್ತೆಂಬ ಶಬ್ದದಿಂದ ಭೂಮಿಯು ಕದಲುತ್ತದೆ; ಅದರ ಕೂಗು ಜನಾಂಗಗಳೊಳಗೆ ಕೇಳಬಂತು. ಬಾಬೆಲ್ ಹಿಡಿಯಲ್ಪಟ್ಟಿತ್ತೆಂಬ ಶಬ್ದದಿಂದ ಭೂಮಿಯು ಕದಲುತ್ತದೆ; ಅದರ ಕೂಗು ಜನಾಂಗಗಳೊಳಗೆ ಕೇಳಬಂತು.
- Isaiah 23:1–18 ಯೆಶಾಯ 23:1–18ತೂರಿನ ವಿಷಯವಾದ ದೈವೋಕ್ತಿ. ತಾರ್ಷೀಷಿನ ಹಡಗುಗಳೇ, ಗೋಳಾ ಡಿರಿ; ಅದು ಹಾಳಾಗಿರುವದರಿಂದ ನಿಮಗೆ ಮನೆಯಿಲ್ಲ ಮತ್ತು ಒಳಗೆ ಪ್ರವೇಶವೂ ಇಲ್ಲ. ಇದು ಕಿತ್ತೀಮ್ ದೇಶದವರಿಂದ ಅವರಿಗೆ ತಿಳಿಯಿತು. ದ್ವೀಪಗಳ ನಿವಾಸಿಗಳೇ, ಸಮುದ್ರವನ್ನು ದಾಟುವ ಚೀದೋನಿನ ವರ್ತಕರಿಂದ ಸಮೃದ್ಧಿಯನ್ನು ಹೊಂದಿದವರೇ, ಮೌನ ವಾಗಿರ್ರಿ. ವಿಶಾಲವಾದ ನೀರುಗಳಿಂದ ಸೀಹೋರಿನ ಧಾನ್ಯವೂ ನದಿಯ ಸುಗ್ಗಿಯೂ ನೈಲಿನ ಬೆಳೆಯಿಂ ದಲೂ ಅದಕ್ಕೆ ಆದಾಯವಾಗಿತ್ತು. ಅನೇಕ ಜನಾಂಗ ಗಳಿಗೆ ವ್ಯಾಪಾರ ಸ್ಥಳವಾಗಿತ್ತು. ಚೀದೋನೇ, ನಾಚಿಕೆ ಪಡು, ಸಮುದ್ರವು, ಸಮುದ್ರದುರ್ಗವೂ--ನಾವು ಪ್ರಸವವೇದನೆ ಪಡುವದಿಲ್ಲ, ಹೆರುವದಿಲ್ಲ; ಇಲ್ಲವೆ ಮಕ್ಕಳನ್ನು ಬೆಳೆಸುವದಿಲ್ಲ ಕನ್ಯಾಸ್ತ್ರೀಯರನ್ನು ಸಾಕಿ ಸಲ ಹಲಿಲ್ಲ ಎಂದು ಹೇಳಿದೆಯಷ್ಟೆ. ಐಗುಪ್ತದ ಸುದ್ದಿಗೆ ಆದ ಹಾಗೆ ತೂರಿನ ಸುದ್ದಿಗೆ ಬಹಳ ವೇದನೆಪಡು ವರು. ತಾರ್ಷೀಷಿಗೆ ದಾಟಿಹೋಗಿರಿ, ದ್ವೀಪ ನಿವಾ ಸಿಗಳೇ ಗೋಳಾಡಿರಿ. ನಿಮ್ಮ ಉಲ್ಲಾಸದ ಪಟ್ಟಣವೂ ಪೂರ್ವಕಾಲದ ಹಳೆಯ ಸಂಪ್ರದಾಯದಿಂದ ಬಂದಿದ್ದೂ ಇದೆಯೋ? ಅವಳ ಸ್ವಂತ ಕಾಲುಗಳು ಅದನ್ನು ದೂರ ದೇಶದಲ್ಲಿ ನಿವಾಸಿಸುವದಕ್ಕೆ ತಕ್ಕೊಂಡು ಹೋ ಗುವವು. ಅದು ಕಿರೀಟದಾಯಕವಾದ ಪಟ್ಟಣವು ಅದರ ವರ್ತಕರಾದ ಪ್ರಭುಗಳು, ವ್ಯಾಪಾರಿಗಳು ಭೂಮಿಯಲ್ಲಿ ಘನವುಳ್ಳವರಾಗಿದ್ದಾರೆ. ಇಂಥ ತೂರಿಗೆ ವಿರುದ್ಧವಾಗಿ ಈ ಆಲೋಚನೆ ಮಾಡಿದವರು ಯಾರು? ಗರ್ವದ ಸಕಲ ವೈಭವವನ್ನು ಹೊಲಸು ಮಾಡಬೇ ಕೆಂತಲೂ ಭೂಮಿಯಲ್ಲಿ ಘನವುಳ್ಳವರೆಲ್ಲರನ್ನು ಅವ ಮಾನಪಡಿಸಬೇಕೆಂತಲೂ ಸೈನ್ಯಗಳ ಕರ್ತನೇ, ಹೀಗೆ ಸಂಕಲ್ಪಿಸಿದ್ದಾನೆ. ತಾರ್ಷೀಷಿನ ಮಗಳೇ, ನದಿಯಂತೆ ನಿನ್ನ ದೇಶದಲ್ಲಿ ಹಾದುಹೋಗು, ಅಲ್ಲಿ ಇನ್ನು ಬಲವು ಇರುವುದೇ ಇಲ್ಲ. ಆತನು ಸಮುದ್ರದ ಮೇಲೆ ತನ್ನ ಕೈಚಾಚಿ ರಾಜ್ಯಗಳನ್ನು ನಡುಗಿಸಿದ್ದಾನೆ; ಕರ್ತನು ವ್ಯಾಪಾರದ ಪಟ್ಟಣವನ್ನು (ಕಾನಾನ್) ಅದರ ದುರ್ಗ ಗಳನ್ನು ನಾಶಮಾಡಬೇಕೆಂದು ಆಜ್ಞಾಪಿಸಿದ್ದಾನೆ. ಆತನು ಹೇಳಿದ್ದೇನಂದರೆ--ಹಿಂಸೆಗೆ ಈಡಾದ ಕನ್ಯೆಯಂತಿರುವ ಚೀದೋನ್ ನಗರಿಯೇ, ಇನ್ನು ಮೇಲೆ ನಿನಗೆ ಹರ್ಷವೇ ಇಲ್ಲ; ಎದ್ದು ಕಿತ್ತೀಮಿಗೆ ಸಮುದ್ರದ ಮೇಲೆ ಹಾದುಹೋಗು ಅಲ್ಲಿಯೂ ನಿನಗೆ ವಿಶ್ರಾಂತಿ ಇರದು. ಇಗೋ, ಕಸ್ದೀಯರ ದೇಶವು! ಅಶ್ಶೂರರು ಅದನ್ನು ಅರಣ್ಯ ನಿವಾಸಿಗಳಿಗೆ ಈಡು ಮಾಡುವತನಕ ಈ ಜನರು ಇರಲಿಲ್ಲ. (ನಿರ್ನಾ ಮವಾಗಿರಲಿಲ್ಲ) ಅವರು ಗೋಪುರಗಳನ್ನೂ ಅದರ ಅರಮನೆಗಳನ್ನೂ ಕಟ್ಟಿಸಿಕೊಂಡು ಅದನ್ನು ಹಾಳು ಮಾಡಿದ್ದಾರೆ. ತಾರ್ಷೀಷಿನ ಹಡಗುಗಳೇ, ಗೋ ಳಾಡಿರಿ! ನಮ್ಮ ಆಶ್ರಯಸ್ಥಾನವು ಹಾಳಾಯಿತು. ಆ ದಿವಸದಲ್ಲಿ ಆಗುವದೇನಂದರೆ, ತೂರ್ ಪಟ್ಟಣವು ಒಬ್ಬ ಅರಸನ ದಿವಸಗಳ ಪ್ರಕಾರ ಎಪ್ಪತ್ತು ವರುಷಗಳ ತನಕ (ಮೂಲ ದಿನಗಳು) ಜ್ಞಾಪಕಕ್ಕೆ ಬಾರದೇ ಇರುವದು; ಎಪ್ಪತ್ತು ವರುಷಗಳ ಕೊನೆಯಲ್ಲಿ ತೂರ್ ಪಟ್ಟಣವು ಸೂಳೆಯರ ವಿಷಯವಾದ ಗೀತೆಯ ಹಾಗಾಗುವದು. ಮರೆತುಹೋದ ಸೂಳೆಯೇ, ಕಿನ್ನರಿಯನ್ನು ತಕ್ಕೋ, ಪಟ್ಟಣಗಳಲ್ಲಿ ಅಲೆಯುತ್ತಾ ನೀನು ನೆನಪಾಗುವ ಹಾಗೆ ಚೆನ್ನಾಗಿ ನುಡಿಸಿ ಬಹಳ ಗೀತೆಗಳನ್ನು ಹಾಡು (ಎಂಬದೇ). ಎಪ್ಪತ್ತು ವರುಷ ಗಳಾದ ಮೇಲೆ ಆಗುವದೇನಂದರೆ -- ಕರ್ತನು ತೂರನ್ನು ಪರಾಮರಿಸುವನು (ಹಿತ ತರುವನು). ಅದು ತನ್ನ ಆದಾಯಕ್ಕಾಗಿ ಹಿಂದಿರುಗಿ ಭೂಲೋಕ ದಲ್ಲಿರುವ ಎಲ್ಲಾ ರಾಜ್ಯಗಳ ಸಂಗಡ ಭೂಮಿಯ ಮೇಲೆ ಸೂಳೆತನ ಮಾಡುವದು.(ಆದರೆ) ಅವಳ ವ್ಯಾಪಾರವೂ ಆದಾಯವೂ ಬೊಕ್ಕಸದಲ್ಲಿ ಹಾಕದೆ ಇಲ್ಲವೆ ಇಟ್ಟುಕೊಳ್ಳದೆ ಕರ್ತನಿಗೆ ಪರಿಶುದ್ಧವಾಗು ವದು. ಅವಳ ವ್ಯಾಪಾರವು ಕರ್ತನ ಸನ್ನಿಧಾನದಲ್ಲಿ ವಾಸಿಸುವ ವರೆಗೆ ಬೇಕಾದಷ್ಟು ಅನ್ನವನ್ನೂ ಶ್ರೇಷ್ಠವಾದ ಉಡುಪನ್ನೂ ಒದಗಿಸಲು ಅನು ಕೂಲವಾಗುವದು. (ಆದರೆ) ಅವಳ ವ್ಯಾಪಾರವೂ ಆದಾಯವೂ ಬೊಕ್ಕಸದಲ್ಲಿ ಹಾಕದೆ ಇಲ್ಲವೆ ಇಟ್ಟುಕೊಳ್ಳದೆ ಕರ್ತನಿಗೆ ಪರಿಶುದ್ಧವಾಗು ವದು. ಅವಳ ವ್ಯಾಪಾರವು ಕರ್ತನ ಸನ್ನಿಧಾನದಲ್ಲಿ ವಾಸಿಸುವ ವರೆಗೆ ಬೇಕಾದಷ್ಟು ಅನ್ನವನ್ನೂ ಶ್ರೇಷ್ಠವಾದ ಉಡುಪನ್ನೂ ಒದಗಿಸಲು ಅನು ಕೂಲವಾಗುವದು.
- Daniel 4:30 ದಾನಿಯೇಲನು 4:30ಆಗ ಅರಸನು ಮಾತನಾಡಿ ಹೇಳಿದ್ದೇನಂದರೆ--ನಾನು ನನ್ನ ಪರಾಕ್ರಮದ ಬಲದಿಂದ ನನ್ನ ಮಹಿ ಮೆಯ ಕೀರ್ತಿಗಾಗಿ ಕಟ್ಟಿಸಿದ ಮಹಾಬಾಬೆಲು ಇದ ಲ್ಲವೇ ಅಂದನು.