Jeremiah · chapter 50 · verse 1
Jeremiah 50:1 in Kannada
ಬಾಬೆಲಿಗೆ ವಿರೋಧವಾಗಿಯೂ ಕಸ್ದೀಯರ ದೇಶಕ್ಕೆ ವಿರೋಧವಾಗಿಯೂ ಕರ್ತನು ಪ್ರವಾದಿಯಾದ ಯೆರೆವಿಾಯನ ಮೂಲಕ ಹೇಳಿಸಿದ ವಾಕ್ಯವು.
Baabelige virodhavaagiyoo kasdeeyara deshakke virodhavaagiyoo kartanu pravaadiyaada yereviాyana moolaka helisida vaakyavu.
Jeremiah 50:1 in English
- King James Version (KJV)
- The word that the LORD spake against Babylon [and] against the land of the Chaldeans by Jeremiah the prophet.
- World English Bible (WEB)
- The word that the LORD spoke concerning Babylon, concerning the land of the Chaldeans, by Jeremiah the prophet.
- American Standard Version (ASV)
- The word that Jehovah spake concerning Babylon, concerning the land of the Chaldeans, by Jeremiah the prophet.
- Bible in Basic English (BBE)
- The word which the Lord said about Babylon, about the land of the Chaldaeans, by Jeremiah the prophet.
- Darby Translation (DBY)
- The word that Jehovah spoke concerning Babylon, concerning the land of the Chaldeans, through Jeremiah the prophet.
- Webster's Bible (WBS)
- The word that the LORD spoke against Babylon [and] against the land of the Chaldeans by Jeremiah the prophet.
- Young's Literal Translation (YLT)
- The word that Jehovah hath spoken concerning Babylon, concerning the land of the Chaldeans, by the hand of Jeremiah the prophet:
Read in context
- 1ಬಾಬೆಲಿಗೆ ವಿರೋಧವಾಗಿಯೂ ಕಸ್ದೀಯರ ದೇಶಕ್ಕೆ ವಿರೋಧವಾಗಿಯೂ ಕರ್ತನು ಪ್ರವಾದಿಯಾದ ಯೆರೆವಿಾಯನ ಮೂಲಕ ಹೇಳಿಸಿದ ವಾಕ್ಯವು.
- 2ಜನಾಂಗಗಳಿಗೆ ತಿಳಿಸಿರಿ, ಸಾರಿರಿ; ಧ್ವಜವನ್ನೆತ್ತಿರಿ; ಸಾರಿರಿ, ಮರೆಮಾಡಬೇಡಿರಿ, ಬಾಬೆಲು ಹಿಡಿಯ ಲ್ಪಟ್ಟಳು, ಬೇಲ್ನಿಗೆ ನಾಚಿಕೆಯಾಯಿತು, ಮೆರೋದಾ ಕನು ತುಂಡು ತುಂಡಾಗಿ ಮುರಿದು ಹೋದನು, ಅವಳ ವಿಗ್ರಹಗಳಿಗೆ ನಾಚಿಕೆಯಾಯಿತು. ಅವಳ ವಿಗ್ರಹಗಳು ಮುರಿದು ಹೋದವೆಂದು ಹೇಳಿರಿ;
- 3ಉತ್ತರದಿಂದ ಅವಳ ವಿರೋಧವಾಗಿ ಜನಾಂಗವು ಬರುತ್ತದೆ; ಅದು ಅವಳ ದೇಶವನ್ನು ಹಾಳು ಮಾಡಿ ಬಿಡುವದು; ಅವಳಲ್ಲಿ ಯಾರೂ ವಾಸಿಸುವದಿಲ್ಲ; ಮನುಷ್ಯರೂ ಮೃಗಗಳೂ ಒಟ್ಟಾಗಿ ತೊಲಗಿಬಿಡುತ್ತಾರೆ, ಓಡಿಹೋಗುತ್ತಾರೆ.
Cross references
- Jeremiah 25:26–27 ಯೆರೆಮೀಯ 25:26–27ಹತ್ತಿರದ ಲ್ಲಿಯೂ ದೂರದಲ್ಲಿಯೂ ಒಬ್ಬರ ಬಳಿಯಲ್ಲಿ ಒಬ್ಬರಿ ರುವ ಉತ್ತರದಿಕ್ಕಿನ ಅರಸರೆಲ್ಲರಿಗೂ ಭೂಮಿಯ ಮೇಲ್ಭಾಗದಲ್ಲಿರುವಂಥ ಲೋಕದ ಎಲ್ಲಾ ರಾಜ್ಯ ಗಳಿಗೂ ಕುಡಿಸಿದೆನು; ಶೇಷಕಿನ ಅರಸನು ಅವರ ತರುವಾಯ ಕುಡಿಯುವನು. ಆದದರಿಂದ ನೀನು ಅವರಿಗೆ ಹೇಳಬೇಕಾದದ್ದೇನಂದರೆ--ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ --ನಾನು ನಿಮ್ಮ ಮಧ್ಯದಲ್ಲಿ ಕಳುಹಿಸುವ ಕತ್ತಿಯ ನಿಮಿತ್ತವೇ ಕುಡಿಯಿರಿ, ಮತ್ತರಾಗಿರಿ, ಕಾರಿರಿ, ಬೀಳಿರಿ, ಇನ್ನು ಮೇಲೆ ತಿರುಗಿ ಏಳದಿರ್ರಿ.
- Isaiah 13:1–3 ಯೆಶಾಯ 13:1–3ಆಮೋಚನ ಮಗನಾದ ಯೆಶಾಯನಿಗೆ ಬಾಬೆಲಿನ ವಿಷಯವಾಗಿ ಕಂಡುಬಂದ ದೈವೋಕ್ತಿ. ಅವರು(ಶತ್ರುಗಳು) ಬಂದು ಘನವಂತ ದ್ವಾರಗಳೊಳಗೆ ಹೋಗುವಂತೆ ಎತ್ತರವಾದ ಪರ್ವತದ ಮೇಲೆ ನೀವು ಧ್ವಜವನ್ನೆತ್ತಿ ಅವರಿಗೆ ನಿಮ್ಮ ಶಬ್ದವನ್ನು ಕೇಳಿಸುವಂತೆ ಜೋರಾಗಿ ಕೂಗಿ ಕರೆಯಿರಿ. ನಾನು ನನ್ನ ಪರಿಶುದ್ಧರಿಗೆ ಆಜ್ಞಾಪಿಸಿ ನನ್ನ ಮಹಿಮೆಯಲ್ಲಿ ಉಲ್ಲಾಸಿಸುವವರನ್ನೂ ಶೂರರನ್ನೂ ನನ್ನ ಕೋಪಕ್ಕೆ ಕರೆದಿದ್ದೇನೆ.
- Jeremiah 51:1–14 ಯೆರೆಮೀಯ 51:1–14ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಬಾಬೆಲಿಗೆ ವಿರೋಧವಾಗಿಯೂ ನನಗೆದುರಾಗಿ ಎದ್ದಿರುವವರ ಮಧ್ಯದಲ್ಲಿ ವಾಸಿಸುವ ವರಿಗೆ ವಿರೋಧವಾಗಿಯೂ ನಾಶಮಾಡುವ ಗಾಳಿ ಯನ್ನು ಎಬ್ಬಿಸುತ್ತೇನೆ. ಬಾಬೆಲಿಗೆ ತೂರುವವರನ್ನು ಕಳುಹಿಸುವೆನು; ಅವರು ಅದನ್ನು ತೂರಿ ಅದರ ದೇಶವನ್ನು ಬರಿದುಮಾಡುವರು; ದುರ್ದಿನದಲ್ಲಿ ಸುತ್ತಲಾಗಿ ಅದಕ್ಕೆ ವಿರೋಧವಾಗಿರುವರು. ಬಿಲ್ಲು ಬೊಗ್ಗಿಸುವವನಿಗೆ ವಿರೋಧವಾಗಿಯೂ ಕವಚದಲ್ಲಿ ತನ್ನನ್ನು ಹೆಚ್ಚಿಸಿ ಕೊಳ್ಳುವವನಿಗೆ ವಿರೋಧವಾಗಿಯೂ ಬಿಲ್ಲಿನವನು ತನ್ನ ಬಿಲ್ಲನ್ನು ಬೊಗ್ಗಿಸಲಿ; ಅದರ ಯೌವನಸ್ಥರನ್ನು ಕನಿಕರಿಸಬೇಡಿರಿ; ಅದರ ಸೈನ್ಯವನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡಿರಿ. ಈ ಪ್ರಕಾರ ಕಸ್ದೀಯರ ದೇಶದಲ್ಲಿ ಕೊಂದುಹಾಕಲ್ಪ ಟ್ಟವರೂ ಅದರ ಬೀದಿಗಳಲ್ಲಿ ತಿವಿಯಲ್ಪಟ್ಟವರೂ ಬೀಳುವರು. ಅವರ ದೇಶವು ಇಸ್ರಾಯೇಲಿನ ಪರಿಶುದ್ಧನಿಗೆ ವಿರೋಧವಾದ ಪಾಪದಿಂದ ತುಂಬಿದ್ದಾಗ್ಯೂ ಇಸ್ರಾಯೇಲಾದರೂ ಯೆಹೂದವಾದರೂ ತನ್ನ ದೇವರಾದ ಸೈನ್ಯಗಳ ಕರ್ತನಿಂದ ಬಿಡಲ್ಪಟ್ಟದ್ದಲ್ಲ. ಬಾಬೆಲಿನೊಳಗಿಂದ ಓಡಿಹೋಗಿರಿ, ಒಬ್ಬೊಬ್ಬನು ತನ್ನ ತನ್ನ ಪ್ರಾಣವನ್ನು ತಪ್ಪಿಸಿಕೊಳ್ಳಲಿ; ಅದರ ಅಕ್ರಮದಲ್ಲಿ ನಾಶವಾಗ ಬೇಡಿರಿ; ಇದು ಕರ್ತನ ಪ್ರತಿದಂಡನೆಯ ಕಾಲವು; ಆತನೇ ಅದಕ್ಕೆ ಮುಯ್ಯಿಗೆಮುಯ್ಯಿ ಕೊಡುತ್ತಾನೆ. ಬಾಬೆಲ್ ಕರ್ತನ ಕೈಯಲ್ಲಿ ಭೂಮಿಗೆಲ್ಲಾ ಅಮಲೇರಿ ಸಿದ ಚಿನ್ನದ ಪಾತ್ರೆಯಾಗಿತ್ತು; ಜನಾಂಗಗಳು ಅದರ ದ್ರಾಕ್ಷಾರಸವನ್ನು ಕುಡಿದವು; ಆದದರಿಂದ ಜನಾಂಗ ಗಳು ಹುಚ್ಚರಾದರು. ಇದ್ದಕ್ಕಿದ್ದ ಹಾಗೆ ಬಾಬೆಲ್ ಬಿದ್ದು ಮುರಿಯಲ್ಪಟ್ಟಿದೆ; ಅದರ ವಿಷಯ ಗೋಳಾ ಡಿರಿ; ಅದರ ನೋವಿಗೆ ತೈಲ ತಕ್ಕೊಳ್ಳಿರಿ; ಒಂದು ವೇಳೆ ವಾಸಿಯಾದೀತು. ನಾವು ಬಾಬೆಲನ್ನು ವಾಸಿಮಾಡುವದಕ್ಕಿದ್ದೆವು. ಆದರೆ ಅದು ವಾಸಿಯಾಗಲಿಲ್ಲ; ಅದನ್ನು ಬಿಡು, ನಮ್ಮ ಸ್ವಂತ ದೇಶಗಳಿಗೆ ಹೋಗೋಣ; ಅದರ ನ್ಯಾಯ ತೀರ್ವಿಕೆಯು ಆಕಾಶಗಳಿಗೆ ಮುಟ್ಟುತ್ತದೆ; ಆಕಾಶಗಳ ವರೆಗೂ ಏಳುತ್ತದೆ. ಕರ್ತನು ನಮ್ಮ ನೀತಿಯನ್ನು ಹೊರಗೆ ತಂದಿದ್ದಾನೆ; ಬನ್ನಿ, ನಮ್ಮ ದೇವರಾದ ಕರ್ತನ ಕ್ರಿಯೆಯನ್ನು, ಚೀಯೋನಿನಲ್ಲಿ ಸಾರಿ ಹೇಳೋಣ. ಬಾಣಗಳನ್ನು ಮೆರಗು ಮಾಡಿರಿ, ಡಾಲುಗಳನ್ನು ಕೂಡಿಸಿರಿ; ಕರ್ತನು ಮೇದ್ಯರ ಅರಸರ ಆತ್ಮವನ್ನು ಎಬ್ಬಿಸಿದ್ದಾನೆ; ಆತನ ಆಲೋಚನೆ ಬಾಬೆಲಿಗೆ ವಿರೋಧವಾಗಿ ಅದನ್ನು ನಾಶಮಾಡುವದಕ್ಕೆ ಇದೆ. ಇದು ಕರ್ತನ ಪ್ರತಿದಂಡ ನೆಯೂ ಆತನ ದೇವಾಲಯದ ಪ್ರತಿದಂಡನೆಯೂ ಆಗಿದೆ. ಬಾಬೆಲಿನ ಗೋಡೆಯ ಮೇಲೆ ಧ್ವಜವನ್ನೆತ್ತಿರಿ, ಪಹರೆ ಬಲಪಡಿಸಿರಿ, ಕಾವಲುಗಾರರನ್ನು ನಿಲ್ಲಿಸಿರಿ; ಹೊಂಚಿ ಕೊಳ್ಳುವವರನ್ನು ಸಿದ್ಧಮಾಡಿರಿ; ಕರ್ತನು ಬಾಬೆಲಿನ ನಿವಾಸಿಗಳಿಗೆ ವಿರೋಧವಾಗಿ ತಾನು ಹೇಳಿದ್ದನ್ನು ಯೋಚಿಸಿ ಮಾಡಿದ್ದಾನೆ. ಅನೇಕ ನೀರುಗಳ ಬಳಿಯಲ್ಲಿ ವಾಸವಾಗಿರುವವಳೇ, ಬಹಳ ದ್ರವ್ಯಗಳುಳ್ಳ ವಳೇ, ನಿನ್ನ ಅಂತ್ಯವೂ ನಿನ್ನ ದುರ್ಲಾಭದ ಅಳತೆಯೂ ಬಂತು. ಸೈನ್ಯಗಳ ಕರ್ತನು--ನಿಶ್ಚಯ ವಾಗಿ ನಾನು ಹುಳಗಳಿಂದಾದ ಹಾಗೆ ಮನುಷ್ಯರಿಂದ ನಿನ್ನನ್ನು ತುಂಬಿಸುತ್ತೇನೆಂದು ಅವರು ನಿನಗೆ ವಿರೋಧ ವಾಗಿ ಆರ್ಭಟವನ್ನು ಎತ್ತುವರೆಂದು ತನ್ನ ಮೇಲೆ ಆಣೆ ಇಟ್ಟುಕೊಂಡಿದ್ದಾನೆ.
- Jeremiah 27:7 ಯೆರೆಮೀಯ 27:7ಜನಾಂಗಗಳೆಲ್ಲಾ ಅವನಿಗೂ ಅವನ ಮಗನಿಗೂ ಅವನ ಮಗನ ಮಗನಿಗೂ ಅವನ ದೇಶಕ್ಕೆ ಕಾಲ ಸವಿಾಪಿಸುವ ವರೆಗೂ ಸೇವಿಸುವವು. ಆಮೇಲೆ ಬಹಳ ಜನಾಂಗಗಳೂ ದೊಡ್ಡ ಅರಸರೂ ಅವನಿಂದ ಸೇವೆ ಮಾಡಿಸಿಕೊಳ್ಳುವರು.
- 2 Peter 1:21 2 ಪೇತ್ರನು 1:21ಯಾಕಂದರೆ ಹಿಂದಿನ ಕಾಲದಲ್ಲಿ ಯಾವ ಪ್ರವಾದನೆಯೂ ಮನುಷ್ಯನ ಚಿತ್ತದಿಂದ ಬರಲಿಲ್ಲ; ಪರಿಶುದ್ಧರಾದ ದೇವಜನರು ಪವಿತ್ರಾತ್ಮ ಪ್ರೇರಿತರಾಗಿ ಮಾತನಾಡಿದರು.
- Acts 7:4 ಅಪೊಸ್ತಲರ ಕೃತ್ಯಗಳು 7:4ಆಗ ಅಬ್ರಹಾಮನು ಕಲ್ದೀಯರ ದೇಶದೊಳಗಿಂದ ಬಂದು ಖಾರಾನಿನಲ್ಲಿ ವಾಸಮಾಡಿದನು; ತನ್ನ ತಂದೆಯು ಸತ್ತಮೇಲೆ ಅವನು ಅಲ್ಲಿಂದ ಹೊರಟು ನೀವು ಈಗ ವಾಸವಾಗಿರುವ ಈ ದೇಶಕ್ಕೆ ಬಂದನು.
- Isaiah 21:1–10 ಯೆಶಾಯ 21:1–10ಸಮುದ್ರದ ಅಡವಿಯ ವಿಷಯವಾದ ದೈವೋಕ್ತಿ ದಕ್ಷಿಣ ಸೀಮೆಯಲ್ಲಿ ಬೀಸುವ ಬಿರುಗಾಳಿ ದಾಟಿಹೋಗುವಂತೆ ಅದು ಮರುಭೂಮಿ ಕಡೆಯಿಂದ ಭಯಂಕರವಾದ ದೇಶದಿಂದ ಬರುತ್ತದೆ. ಘೋರದರ್ಶನವು ನನಗೆ ತಿಳಿಯಬಂದಿದೆ. ಬಾಧ ಕನು ಬಾಧಿಸುತ್ತಿದ್ದಾನೆ. ಸೂರೆಗಾರನು ಸೂರೆಮಾಡು ತ್ತಿದ್ದಾನೆ. ಏಲಾಮೇ, ಏಳು ಮೇದ್ಯವೇ ಮುತ್ತಿಗೆ ಹಾಕು, ಅದರ ನಿಟ್ಟುಸಿರನ್ನೆಲ್ಲಾ ನಿಲ್ಲಿಸಿಬಿಟ್ಟಿದ್ದೇನೆ. ಆದ ದರಿಂದ ನನ್ನ ಸೊಂಟಗಳು ನೋವಿನಿಂದ ತುಂಬಿವೆ. ಹೆರುವವಳ ವೇದನೆಗಳಂತಿರುವ ವೇದನೆಗಳು ನನ್ನನ್ನು ಹಿಡಿದಿವೆ; ಕೇಳಕೂಡದ ಹಾಗೆ ಸಂಕಟಪಡುತ್ತೇನೆ, ನೋಡಕೂಡದ ಹಾಗೆ ಭ್ರಾಂತನಾಗಿದ್ದೇನೆ. ನನ್ನ ಹೃದಯವು (ಎದುರಿಸುತ್ತದೆ) ಗಾಬರಿಗೊಂಡಿದೆ, ನಡು ಗುವಿಕೆಯು ನನ್ನನ್ನು ಕಳವಳಗೊಳಿಸಿದೆ, ನನ್ನ ಆನಂ ದದ ರಾತ್ರಿಯನ್ನು ನನಗೆ ಭಯಭ್ರಾಂತಿಯಾಗಿ ಮಾಡಿದ್ದಾನೆ. ಮೇಜನ್ನು ಸಿದ್ಧಮಾಡು ಬುರುಜಿನ ಮೇಲೆ ಕಾವ ಲಿರು, ಉಣ್ಣು, ಕುಡಿ; ಪ್ರಭುಗಳೇ, ಏಳಿರಿ, ಗುರಾಣಿಗೆ ಎಣ್ಣೆಯನ್ನು ಬಳಿಯಿರಿ. ಕರ್ತನು ನನಗೆ ಹೇಳಿರುವ ದೇನಂದರೆ--ಹೋಗು, ಕಾವಲುಗಾರನನ್ನು ನೇಮಿಸು. ಅವನು ಕಂಡದ್ದನ್ನು ತಿಳಿಸಲಿ. ಅವನು ಜೋಡಿ ಜೋಡಿಯಾಗಿ ಬರುವ ರಥ ಸವಾರರ ಸಾಲನ್ನು ಕತ್ತೆಗಳ, ಒಂಟೆಗಳ, ರಥಗಳ ಸಾಲುಗಳನ್ನು ನೋಡಿ ದರೆ, ಬಹು ಗಮನದಿಂದ ಕಿವಿಗೊಟ್ಟು ಗಮನಿಸಲಿ ಎಂಬದೇ. ಬಳಿಕ ಅವನು ಸಿಂಹದಂತೆ ಕೂಗಿದ್ದೇ ನಂದರೆ, ನನ್ನ ಒಡೆಯನೇ, ನಾನು ಹಗಲೆಲ್ಲಾ ಕಾವ ಲಿನ ಬುರುಜಿನ ಮೇಲೆ ನಿಂತಿದ್ದೇನೆ. ರಾತ್ರಿಯೆಲ್ಲಾ ಕಾವಲಿನ ಕೆಲಸ ನನಗೆ ಬಿದ್ದಿದೆ. ಇಗೋ, ಸವಾರರು ಜೋಡಿ ಜೋಡಿಯಾಗಿ ಬರುತ್ತಾರೆ ಮತ್ತು ಪ್ರತ್ಯುತ್ತರ ವಾಗಿ--ಬಾಬೆಲ್ ಬಿತ್ತು, ಆದರೆ ಕೆತ್ತಿದ ದೇವತೆಗಳ ವಿಗ್ರಹಗಳನ್ನು ಮುರಿದು ನೆಲಸಮ ಮಾಡಿಬಿಟ್ಟರು ಎಂದು ಹೇಳಿದನು. ನಾನು ತುಳಿಯುವ ತೆನೆಯೇ, ನನ್ನ ಕಣದ ಧಾನ್ಯವೇ, ಇಸ್ರಾಯೇಲಿನ ದೇವರಾಗಿರುವ ಸೈನ್ಯಗಳ ಕರ್ತನಿಂದ ನಾನು ಕೇಳಿದ್ದನ್ನು ನಿಮಗೆ ತಿಳಿಸಿದ್ದೇನೆ.
- Job 1:17 ಯೋಬನು 1:17ಅವನು ಇನ್ನೂ ಮಾತ ನಾಡುತ್ತಿರಲು ಮತ್ತೊಬ್ಬನು ಬಂದು--ಕಸ್ದೀಯರು ಮೂರು ದಂಡುಗಳನ್ನು ಕಟ್ಟಿ, ಒಂಟೆಗಳ ಮೇಲೆ ಬಿದ್ದು, ಅವುಗಳನ್ನು ತಕ್ಕೊಂಡು ಸಂಹರಿಸಿದರು; ಹೌದು, ಸೇವಕರನ್ನು ಕತ್ತಿಯಿಂದ ಹೊಡೆದರು; ನಾನೊಬ್ಬನು ಮಾತ್ರ ನಿನಗೆ ತಿಳಿಸುವುದಕ್ಕೆ ತಪ್ಪಿಸಿ ಕೊಂಡೆನು ಅಂದನು.
- 2 Samuel 23:2 2 ಸಮುವೇಲನು 23:2ಕರ್ತನ ಆತ್ಮನು ನನ್ನಿಂದ ಮಾತನಾಡಿದನು; ಆತನ ವಾಕ್ಯವು ನನ್ನ ಬಾಯಿಯಲ್ಲಿತ್ತು.
- Isaiah 23:13 ಯೆಶಾಯ 23:13ಇಗೋ, ಕಸ್ದೀಯರ ದೇಶವು! ಅಶ್ಶೂರರು ಅದನ್ನು ಅರಣ್ಯ ನಿವಾಸಿಗಳಿಗೆ ಈಡು ಮಾಡುವತನಕ ಈ ಜನರು ಇರಲಿಲ್ಲ. (ನಿರ್ನಾ ಮವಾಗಿರಲಿಲ್ಲ) ಅವರು ಗೋಪುರಗಳನ್ನೂ ಅದರ ಅರಮನೆಗಳನ್ನೂ ಕಟ್ಟಿಸಿಕೊಂಡು ಅದನ್ನು ಹಾಳು ಮಾಡಿದ್ದಾರೆ.
- Habakkuk 2:5–20 ಹಬಕ್ಕೂಕ 2:5–20ಹೌದು, ಅವನು ದ್ರಾಕ್ಷಾರಸದಿಂದ ಉಲ್ಲಂಘಿಸು ತ್ತಾನೆ. ಅಹಂಕಾರದ ಮನುಷ್ಯನಾಗಿದ್ದಾನೆ; ಮನೆಯಲ್ಲಿ ಇರುವದಿಲ್ಲ; ಇವನು ಪಾತಾಳದ ಹಾಗೆ ತನ್ನ ಆಶೆಯನ್ನು ದೊಡ್ಡದಾಗಿ ಮಾಡಿಕೊಂಡು ಮರಣದ ಹಾಗಿದ್ದಾನೆ, ತೃಪ್ತಿಯಾಗುವದಿಲ್ಲ; ಎಲ್ಲಾ ಜನಾಂಗಗಳನ್ನು ತನಗಾಗಿ ಕೂಡಿಸುತ್ತಾನೆ; ಎಲ್ಲಾ ಜನಗಳನ್ನು ತನಗಾಗಿ ದೊಡ್ಡ ಗುಂಪನ್ನಾಗಿ ಮಾಡಿಕೊಳ್ಳುತ್ತಾನೆ. ಇವರೆಲ್ಲರು ಅವನ ಮೇಲೆ ಸಾಮ್ಯವನ್ನೂ ಹಾಸ್ಯದ ಸಾಮತಿಯನ್ನೂ ಎತ್ತಿ--ತನಗಲ್ಲದ್ದನ್ನು ಹೆಚ್ಚಿಸಿಕೊಳ್ಳು ವವನಿಗೆ ಅಯ್ಯೋ! ಅದು ಎಷ್ಟರ ವರೆಗೆ? ತಾನಾಗಿ ತನ್ನ ಮೇಲೆ ಗಟ್ಟಿ ಮಣ್ಣನ್ನು ಹೊತ್ತುಕೊಳ್ಳುವವನಿಗೆ ಅಯ್ಯೋ ಎಂದು ಹೇಳರೋ? ನಿನ್ನನ್ನು ಕಚ್ಚುವವರು ಕ್ಷಣಮಾತ್ರದಲ್ಲಿ ಏಳರೋ? ನಿನ್ನನ್ನು ಪೀಡಿಸುವವರು ಎಚ್ಚರವಾಗರೋ? ಆಗ ನೀನು ಅವರಿಗೆ ಸುಲಿಗೆ ಯಾಗುವಿ. ನೀನು ಅನೇಕ ಜನಾಂಗಗಳನ್ನು ಸೂರೆ ಮಾಡಿದ್ದರಿಂದ ಜನರಲ್ಲಿ ಉಳಿದವರೆಲ್ಲಾ ನಿನ್ನನ್ನು ಸೂರೆ ಮಾಡುವರು; ಮನುಷ್ಯರ ರಕ್ತಕ್ಕಾಗಿ ದೇಶ, ಪಟ್ಟಣ, ಅದರ ಎಲ್ಲಾ ನಿವಾಸಿಗಳ ಬಲಾತ್ಕಾರದ ನಿಮಿತ್ತವೇ. ತನ್ನ ಗೂಡನ್ನು ಉನ್ನತದಲ್ಲಿ ಇಡುವ ಹಾಗೆಯೂ ಕೇಡಿನ ಕೈಗೆ ತಪ್ಪಿಸಿಕೊಳ್ಳುವ ಹಾಗೆಯೂ ತನ್ನ ಮನೆ ಗೋಸ್ಕರ ದುರ್ಲಾಭವನ್ನು ಆಶಿಸುವವನಿಗೆ ಅಯ್ಯೋ! ಅನೇಕ ಜನಗಳನ್ನು ಕಡಿದುಬಿಡುವದರಿಂದ ನಿನ್ನ ಮನೆಗೆ ನಾಚಿಕೆಯನ್ನು ಯೋಚಿಸಿದ್ದೀ; ಸ್ವಂತ ಪ್ರಾಣಕ್ಕೆ ವಿರೋಧವಾಗಿ ಪಾಪಮಾಡಿದ್ದೀ. ಗೋಡೆಯೊಳ ಗಿಂದ ಕಲ್ಲು ಕೂಗುತ್ತದೆ. ಮರದ ತೊಲೆ ಅದಕ್ಕೆ ಉತ್ತರ ಕೊಡುತ್ತದೆ. ಊರನ್ನು ರಕ್ತದಿಂದ ಕಟ್ಟಿ, ಪಟ್ಟಣವನ್ನು ಅನ್ಯಾಯ ದಿಂದ ಸ್ಥಾಪಿಸುವವನಿಗೆ ಅಯ್ಯೋ! ಇಗೋ, ಇದು ಸೈನ್ಯಗಳ ಕರ್ತನಿಂದ ಅಲ್ಲವೋ? ಏನಂದರೆ, ಜನರು ಬೆಂಕಿಗೋಸ್ಕರ ಪರಿಶ್ರಮಪಟ್ಟ ವ್ಯರ್ಥಕ್ಕೋಸ್ಕರ ಆಯಾಸಪಡುವದೇ. ನೀರುಗಳು ಸಮುದ್ರವನ್ನು ಮುಚ್ಚುವ ಪ್ರಕಾರ ಭೂಮಿಯು ಕರ್ತನ ಮಹಿಮೆಯ ತಿಳುವಳಿಕೆಯಿಂದ ತುಂಬಿರುವದು. ತನ್ನ ನೆರೆಯವ ನಿಗೆ ಕುಡಿಯಕೊಟ್ಟು ನಿನ್ನ ಬುಟ್ಟಿಯನ್ನು ಹೊಯಿದು ಅವರ ಬೆತ್ತಲೆತನವನ್ನು ನೋಡುವ ಹಾಗೆ ಅಮಲೇರಿ ಸುವವನಿಗೆ ಅಯ್ಯೋ! ಘನತೆಗೆ ಬದಲಾಗಿ ನಿಂದೆ ಯಿಂದ ತುಂಬಿದ್ದೀ; ನೀನು ಸಹ ಕುಡಿದು ನಿನ್ನ ಮುಂದೊಗಲು ಮುಚ್ಚಲ್ಪಡದಿರಲಿ. ಕರ್ತನ ಬಲಗೈಯ ಪಾತ್ರೆ ನಿನ್ನ ಕಡೆಗೆ ತಿರುಗುವದು. ನಿನ್ನ ಘನತೆಯ ಮೇಲೆ ಕಾರುವಿಕೆಯೂ ಲಜ್ಜೆಯೂ ಇರುವದು. ಲೆಬನೋನಿನ ಹಿಂಸೆಯು ನಿನ್ನನ್ನು ಮುಚ್ಚುವದು; ಮೃಗಗಳ ಸೂರೆ ನಿನ್ನನ್ನು ಹೆದರಿಸುವದು; ಮನುಷ್ಯರ ರಕ್ತಕ್ಕಾಗಿ, ದೇಶ, ಪಟ್ಟಣ, ಅದರ ಎಲ್ಲಾ ನಿವಾಸಿಗಳ ಹಿಂಸೆಯು ನಿಮಿತ್ತವೇ. ಅದನ್ನು ಕೆತ್ತಿ ರೂಪಿಸಿದವನ ಕೆತ್ತಿದ ವಿಗ್ರಹದಿಂದ ಪ್ರಯೋಜನವೇನು? ಸುಳ್ಳನ್ನು ಬೋಧಿಸುವಂಥ, ಅದನ್ನು ರೂಪಿಸಿದವನು ಮೂಕ ಬೊಂಬೆಗಳನ್ನು ಮಾಡಿ ಅದರಲ್ಲಿ ನಂಬಿಕೆಯಿಡು ವಂಥ, ಎರಕದ ವಿಗ್ರಹದಿಂದ ಪ್ರಯೋಜನವೇನು? ಮರಕ್ಕೆ--ಎಚ್ಚರವಾಗು; ಮೂಕವಾದ ಕಲ್ಲಿಗೆ--ಎದ್ದು ಬೋಧಿಸಲಿ ಎಂದು ಹೇಳುವವನಿಗೆ ಅಯ್ಯೋ! ಇಗೋ, ಅದು ಬಂಗಾರದಿಂದಲೂ ಬೆಳ್ಳಿಯಿಂದಲೂ ಹೊದಿಸಲ್ಪಟ್ಟಿದೆ, ಆದರೆ ಅದರಲ್ಲಿ ಉಸಿರು ಎಷ್ಟು ಮಾತ್ರವೂ ಇಲ್ಲ.ಆದರೆ ಕರ್ತನು ತನ್ನ ಪರಿಶುದ್ಧ ಮಂದಿರದಲ್ಲಿ ಇದ್ದಾನೆ; ಆತನ ಮುಂದೆ ಭೂಮಿಯೆಲ್ಲಾ ಮೌನವಾಗಿರಲಿ. ಆದರೆ ಕರ್ತನು ತನ್ನ ಪರಿಶುದ್ಧ ಮಂದಿರದಲ್ಲಿ ಇದ್ದಾನೆ; ಆತನ ಮುಂದೆ ಭೂಮಿಯೆಲ್ಲಾ ಮೌನವಾಗಿರಲಿ.
- Revelation 18:1–24 ಪ್ರಕಟನೆ 18:1–24ಇವುಗಳಾದ ಮೇಲೆ ಮಹಾ ಅಧಿಕಾರವುಳ್ಳ ಮತ್ತೊಬ್ಬ ದೂತನು ಪರಲೋಕದಿಂದ ಇಳಿಯುವದನ್ನು ಕಂಡೆನು; ಅವನ ಪ್ರಭಾವದಿಂದ ಭೂಮಿಗೆ ಪ್ರಕಾಶವುಂಟಾಯಿತು. ಅವನು ಗಟ್ಟಿ ಯಾದ ಶಬ್ದದಿಂದ ಕೂಗುತ್ತಾ--ಮಹಾಬಾಬೆಲ್ ಬಿದ್ದಳು, ಬಿದ್ದಳು; ದೆವ್ವಗಳ ವಾಸಸ್ಥಾನವೂ ಅಶುದ್ಧಾತ್ಮಗಳ ಆಶ್ರಯವೂ ಅಪವಿತ್ರವಾಗಿಯೂ ಅಸಹ್ಯವಾಗಿಯೂ ಇರುವ ಸಕಲ ವಿಧವಾದ ಪಕ್ಷಿಗಳ ಪಂಜರವೂ ಆದಳು. ಎಲ್ಲಾ ಜನಾಂಗಗಳು ಅವಳ ಜಾರತ್ವವೆಂಬ ಕೋಪದ ದ್ರಾಕ್ಷಾರಸವನ್ನು ಕುಡಿದು ಮತ್ತರಾದರು; ಅವಳೊಂದಿಗೆ ಭೂರಾಜರು ಜಾರತ್ವ ಮಾಡಿದರು; ಅವಳ ಅತಿಶಯವಾದ ವೈಭವದಿಂದ ಭೂಲೋಕದ ವರ್ತಕರು ಐಶ್ವರ್ಯವಂತರಾದರು ಎಂದು ಹೇಳಿದನು. ಪರಲೋಕದಿಂದ ಮತ್ತೊಂದು ಶಬ್ದವನ್ನು ನಾನು ಕೇಳಿದೆನು; ಅದು--ನನ್ನ ಜನರೇ, ಅವಳಿಂದ ಹೊರಗೆ ಬನ್ನಿರಿ; ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗ ಬಾರದು; ಅವಳಿಗಾಗುವ ಉಪದ್ರವಗಳಿಗೆ ಗುರಿ ಯಾಗಬಾರದು. ಅವಳ ಪಾಪಗಳು ಆಕಾಶದ ವರೆಗೂ ಮುಟ್ಟಿವೆ. ದೇವರು ಅವಳ ದ್ರೋಹಗಳನ್ನು ಜ್ಞಾಪಿಸಿಕೊಂಡಿದ್ದಾನೆ. ನಿಮಗೆ ಅವಳು ಮಾಡಿದ ಪ್ರಕಾರ ನೀವು ಅವಳಿಗೆ ಪ್ರತೀಕಾರ ಮಾಡಿರಿ; ಅವಳ ಕೃತ್ಯಗಳಿಗೆ ಸರಿಯಾಗಿ ಅವಳಿಗೆ ಎರಡರಷ್ಟು ಕೊಡಿರಿ. ಅವಳು ತುಂಬಿಸಿದ ಪಾತ್ರೆಯಲ್ಲಿ ಅವಳಿಗೆ ಎರಡರಷ್ಟು ತುಂಬಿಸಿರಿ. ಅವಳು ಎಷ್ಟರಮಟ್ಟಿಗೆ ತನ್ನನ್ನು ಘನಪಡಿಸಿ ಕೊಂಡು ವೈಭವದಲ್ಲಿ ಜೀವಿಸಿದ್ದಳೋ ಅಷ್ಟರಮಟ್ಟಿಗೆ ಅವಳಿಗೆ ಯಾತನೆಯನ್ನೂ ದುಃಖವನ್ನೂ ಕೊಡಿರಿ; ಯಾಕಂದರೆ ಅವಳು ತನ್ನ ಹೃದಯದಲ್ಲಿ--ನಾನು ರಾಣಿ ಯಾಗಿ ಕೂತುಕೊಂಡಿದ್ದೇನೆ, ನಾನು ವಿಧವೆಯಲ್ಲ, ದುಃಖವನ್ನು ಕಾಣುವದೇ ಇಲ್ಲ ಎಂದು ಹೇಳಿಕೊಳ್ಳು ಆದದರಿಂದ ಅವಳಿಗೆ ಮರಣ ದುಃಖ ಕ್ಷಾಮ ಎಂಬೀ ಉಪದ್ರವಗಳು ಒಂದೇ ದಿನದಲ್ಲಿ ಸಂಭವಿ ಸುವವು; ಅವಳು ಬೆಂಕಿಯಿಂದ ಸಂಪೂರ್ಣವಾಗಿ ಸುಟ್ಟುಹೋಗುವಳು. ಅವಳಿಗೆ ದಂಡನೆಯನ್ನು ವಿಧಿಸಿದ ದೇವರಾಗಿರುವ ಕರ್ತನು ಬಲಿಷ್ಠನಾಗಿದ್ದಾನೆ. ಅವಳೊಂದಿಗೆ ಜಾರತ್ವ ಮಾಡಿ ವೈಭವದಲ್ಲಿ ಬದುಕಿದ ಭೂರಾಜರು ಅವಳ ದಹನದ ಹೊಗೆಯನ್ನು ನೋಡು ವಾಗ ಅವಳಿಗಾಗಿ ಗೋಳಾಡುತ್ತಾ ಪ್ರಲಾಪಿಸುವರು. ಅವರು ದೂರದಲ್ಲಿ ನಿಂತು ಅವಳಿಗುಂಟಾದ ಯಾತ ನೆಯ ಭಯದಿಂದ--ಅಯ್ಯೋ, ಅಯ್ಯೋ, ಆ ಮಹಾಪಟ್ಟಣವಾದ ಬಾಬೆಲೇ, ಬಲಿಷ್ಠವಾದ ನಗ ರಿಯೇ, ಒಂದೇ ಗಳಿಗೆಯಲ್ಲಿ ನಿನಗೆ ತೀರ್ಪಾಯಿತಲ್ಲಾ ಎಂದು ಹೇಳುವರು. ಇದಲ್ಲದೆ ಭೂಲೋಕದ ವರ್ತಕರು ಅವಳ ನಿಮಿತ್ತವಾಗಿ ಅತ್ತು ಗೋಳಾಡುವರು. ಯಾಕಂದರೆ ಅವರ ಸರಕುಗಳನ್ನು ಅಂದರೆ ಚಿನ್ನ, ಬೆಳ್ಳಿ, ಅಮೂಲ್ಯವಾದ ಕಲ್ಲುಗಳು, ಮುತ್ತುಗಳು, ನಯವಾದ ನಾರುಮಡಿ, ಧೂಮ್ರವರ್ಣದ ವಸ್ತ್ರ, ರೇಶ್ಮೆ, ರಕ್ತಾಂಬರ, ಸಕಲ ವಿಧವಾದ ಅಗಿಲುಮರ, ಸಕಲ ವಿಧವಾದ ದಂತದ ಪಾತ್ರೆಗಳು, ಬಹು ಅಮೂಲ್ಯವಾದ ಮರ, ಹಿತ್ತಾಳೆ, ಸಕಲ ವಿಧವಾದ ಪಾತ್ರೆಗಳು, ಕಬ್ಬಿಣ, ಚಂದ್ರಕಾಂತ, ಲವಂಗ, ಚೆಕ್ಕೆ, ಧೂಪ, ಸುಗಂಧ ತೈಲ, ಸಾಂಬ್ರಾಣಿ, ದ್ರಾಕ್ಷಾರಸ, ಎಣ್ಣೆ, ನಯವಾದಹಿಟ್ಟು, ಗೋಧಿ, ದನಗಳು, ಕುರಿ ಗಳು, ಕುದುರೆಗಳು, ರಥಗಳು, ಗುಲಾಮರು, ಮನುಷ್ಯರ ಪ್ರಾಣಗಳು ಇವೇ ಮೊದಲಾದವುಗಳನ್ನು ಯಾರೂ ಎಂದೂ ಕೊಂಡುಕೊಳ್ಳುವರಿಲ್ಲ ಎಂದು ದುಃಖಿಸುವರು. ನಿನ್ನ ಜೀವವು ಅಪೇಕ್ಷಿಸಿದ ಹಣ್ಣು ಗಳು ನಿನ್ನನ್ನು ಬಿಟ್ಟು ಹೋದವು; ಸೊಗಸಾಗಿಯೂ ಶೋಭಾಯಮಾನವಾಗಿಯೂ ಇರುವವುಗಳೆಲ್ಲವೂ ನಿನ್ನನ್ನು ಬಿಟ್ಟು ಹೋದವು. ಅವು ಇನ್ನು ಮೇಲೆ ನಿನಗೆ ಸಿಕ್ಕುವದೇ ಇಲ್ಲ. ಅವಳಿಂದ ಐಶ್ವರ್ಯವಂತ ರಾದ ಈ ಸರಕುಗಳ ವರ್ತಕರು ಅವಳ ಯಾತನೆಗೆ ಭಯಪಟ್ಟು ದೂರದಲ್ಲಿ ನಿಂತು ಅಳುತ್ತಾ ಗೋಳಾ ಡುತ್ತಾ-- ಅಯ್ಯೋ, ಅಯ್ಯೋ, ಮಹಾನಗರಿಯೇ, ನಯವಾದ ನಾರುಮಡಿಯನ್ನೂ ಧೂಮ್ರವರ್ಣದ ವಸ್ತ್ರವನ್ನೂ ರಕ್ತಾಂಬರವನ್ನೂ ಧರಿಸಿಕೊಂಡು ಚಿನ್ನ ಅಮೂಲ್ಯವಾದ ಕಲ್ಲುಗಳು ಮುತ್ತುಗಳು ಇವುಗಳಿಂದ ಅಲಂಕರಿಸಲ್ಪಟ್ಟವಳೇ, ಅಷ್ಟು ದೊಡ್ಡ ಐಶ್ವರ್ಯವು ಒಂದೇ ಗಳಿಗೆಯಲ್ಲಿ ಇಲ್ಲದೆ ಹೋಯಿತಲ್ಲಾ ಅನ್ನುವರು. ಇದಲ್ಲದೆ ಹಡಗುಗಳ ಯಜಮಾನರೂ ಹಡಗುಗಳಲ್ಲಿ ಜೊತೆಯಾಗಿರುವವರೂ ನಾವಿಕರೂ ಸಮುದ್ರದ ಮೇಲೆ ವ್ಯಾಪಾರ ಮಾಡುವವರೆಲ್ಲರೂ ದೂರದಲ್ಲಿ ನಿಂತು ಅವಳ ದಹನದ ಹೊಗೆಯನ್ನು ನೋಡುತ್ತಾ--ಈ ಮಹಾ ಪಟ್ಟಣಕ್ಕೆ ಸಮಾನವಾದ ಪಟ್ಟಣವು ಯಾವದು ಎಂದು ಕೂಗಿ ಹೇಳಿದರು. ಆಗ ಅವರು ತಮ್ಮ ತಲೆಗಳ ಮೇಲೆ ಧೂಳನು ಹೊಯಿದುಕೊಂಡು ಕೂಗುತ್ತಾ ಅಳುತ್ತಾ, ಗೋಳಾ ಡುತ್ತಾ--ಅಯ್ಯೋ, ಅಯ್ಯೋ ಸಮುದ್ರದ ಮೇಲೆ ಹಡಗುಗಳಿದ್ದವರೆಲ್ಲರನ್ನು ತನ್ನ ಅಮೂಲ್ಯ ದ್ರವ್ಯ ಗಳಿಂದ ಐಶ್ವರ್ಯವಂತರನ್ನಾಗಿ ಮಾಡಿದ ಆ ಮಹಾ ನಗರಿಯು ಒಂದೇ ಗಳಿಗೆಯಲ್ಲಿ ಹಾಳಾದಳಲ್ಲಾ ಎಂದು ಪರಲೋಕವೇ, ಪರಿಶುದ್ಧರಾದ ಅಪೊಸ್ತಲರೇ, ಪ್ರವಾದಿಗಳೇ, ಅವಳ ವಿಷಯವಾಗಿ ಆನಂದಪಡಿರಿ. ಯಾಕಂದರೆ ನಿಮ್ಮ ನಿಮಿತ್ತವಾಗಿ ದೇವರು ಇವಳಿಗೆ ಪ್ರತಿ ದಂಡನೆಯನ್ನು ಮಾಡಿದನು ಎಂದು ಹೇಳಿತು. ಆಗ ಬಲಿಷ್ಠನಾದ ಒಬ್ಬ ದೂತನು ಬೀಸುವ ದೊಡ್ಡ ಕಲ್ಲಿನಂತಿರುವ ಒಂದು ಕಲ್ಲನ್ನು ಎತ್ತಿ ಸಮುದ್ರ ದೊಳಗೆ ಹಾಕಿ--ಮಹಾ ಪಟ್ಟಣವಾದ ಆ ಬಾಬೆಲು ಹೀಗೆಯೇ ಬಲಾತ್ಕಾರದಿಂದ ಕೆಡವಲ್ಲಟ್ಟು ಇನ್ನೆಂದಿಗೂ ಕಾಣಿಸುವದಿಲ್ಲ. ನಿನ್ನಲ್ಲಿ ವೀಣೆಗಾರರೂ ವಾದ್ಯ ಗಾರರೂ ಕೊಳಲೂದುವವರೂ ತುತೂರಿಯವರು ಮಾಡುವ ಧ್ವನಿಯೂ ಇನ್ನೆಂದಿಗೂ ಕೇಳಿಸುವದಿಲ್ಲ. ಯಾವ ವಿಧವಾದ ಕೈಗಾರಿಕೆಯನ್ನು ಮಾಡುವವರು ನಿಮ್ಮಲ್ಲಿ ಇನ್ನೆಂದಿಗೂ ಸಿಕ್ಕುವದಿಲ್ಲ; ಬೀಸುವ ಕಲ್ಲಿನ ಶಬ್ದವೂ ನಿನ್ನಲ್ಲಿ ಇನ್ನೆಂದಿಗೂ ಕೇಳಿಸುವದಿಲ್ಲ. ದೀಪದ ಬೆಳಕು ನಿನ್ನಲ್ಲಿ ಇನ್ನೆಂದಿಗೂ ಪ್ರಕಾಶಿಸು ವದಿಲ್ಲ. ವಧೂವರರ ಸ್ವರವು ನಿನ್ನಲ್ಲಿ ಇನ್ನೆಂದಿಗೂ ಕೇಳಿಸುವದಿಲ್ಲ; ನಿನ್ನ ವರ್ತಕರು ಭೂಮಿಯ ಪ್ರಧಾನ ರಾಗಿದ್ದದ್ದಲ್ಲದೆ ನಿನ್ನ ಮಾಟದಿಂದ ಎಲ್ಲಾ ಜನಾಂಗ ದವರು ಮೋಸ ಹೋದರು.ಪ್ರವಾದಿಗಳ, ಪರಿ ಶುದ್ಧರ ಮತ್ತು ಭೂಮಿಯ ಮೇಲೆ ಕೊಲ್ಲಲ್ಪಟ್ಟವರೆಲ್ಲರ ರಕ್ತವು ನಿನ್ನಲ್ಲಿ ಸಿಕ್ಕಿತು ಎಂದು ಹೇಳಿದನು. ಪ್ರವಾದಿಗಳ, ಪರಿ ಶುದ್ಧರ ಮತ್ತು ಭೂಮಿಯ ಮೇಲೆ ಕೊಲ್ಲಲ್ಪಟ್ಟವರೆಲ್ಲರ ರಕ್ತವು ನಿನ್ನಲ್ಲಿ ಸಿಕ್ಕಿತು ಎಂದು ಹೇಳಿದನು.