Psalms · chapter 94 · verse 5
Psalm 94:5 in Kannada
ಓ ಕರ್ತನೇ, ನಿನ್ನ ಜನರನ್ನು ತುಂಡುತುಂಡು ಮಾಡುತ್ತಾರೆ; ನಿನ್ನ ಸ್ವಾಸ್ಥ್ಯವನ್ನು ಬಾಧಿಸುತ್ತಾರೆ.
O kartane, ninna janarannu tundutundu maaduttaare; ninna svaasthyavannu baadhisuttaare.
Psalm 94:5 in English
- King James Version (KJV)
- They break in pieces thy people, O LORD, and afflict thine heritage.
- World English Bible (WEB)
- They break your people in pieces, LORD, and afflict your heritage.
- American Standard Version (ASV)
- They break in pieces thy people, O Jehovah, And afflict thy heritage.
- Bible in Basic English (BBE)
- Your people are crushed by them, O Lord, your heritage is troubled,
- Darby Translation (DBY)
- They crush thy people, O Jehovah, and afflict thine inheritance;
- Webster's Bible (WBS)
- They break in pieces thy people, O LORD, and afflict thy heritage.
- Young's Literal Translation (YLT)
- Thy people, O Jehovah, they bruise, And Thine inheritance they afflict.
Read in context
- 3ಕರ್ತನೇ, ದುಷ್ಟರು ಎಷ್ಟರ ವರೆಗೆ ದುಷ್ಟರು ಎಷ್ಟರ ವರೆಗೆ ಜಯಿಸುವರು?
- 4ಎಷ್ಟುಕಾಲ ಕಠಿಣ ವಾದವುಗಳನ್ನು ನುಡಿದು ಮಾತಾಡುತ್ತಾರೆ? ದುಷ್ಟತನ ಮಾಡುವವರೆಲ್ಲರು ಹೆಚ್ಚಿಸಿಕೊಳ್ಳುತ್ತಾರೆ;
- 5ಓ ಕರ್ತನೇ, ನಿನ್ನ ಜನರನ್ನು ತುಂಡುತುಂಡು ಮಾಡುತ್ತಾರೆ; ನಿನ್ನ ಸ್ವಾಸ್ಥ್ಯವನ್ನು ಬಾಧಿಸುತ್ತಾರೆ.
- 6ವಿಧವೆಯನ್ನೂ ಪರ ದೇಶಸ್ಥನನ್ನೂ ಅವರು ಕೊಲ್ಲುತ್ತಾರೆ; ದಿಕ್ಕಿಲ್ಲದವರನ್ನು ಹತಮಾಡುತ್ತಾರೆ.
- 7ಕರ್ತನು ನೋಡುವದಿಲ್ಲ; ಇಲ್ಲವೆ ಯಾಕೋಬನ ದೇವರು ಲಕ್ಷಿಸುವದಿಲ್ಲ ಅನ್ನುತ್ತಾರೆ.
Cross references
- Isaiah 3:15 ಯೆಶಾಯ 3:15ನೀವು ನನ್ನ ಪ್ರಜೆಯನ್ನು ಹೊಡೆದು ಚೂರು ಗಳನ್ನಾಗಿ ಮಾಡಿ ಬಡವರ ಮುಖಗಳನ್ನು ಹಿಂಡು ವದರ ಅರ್ಥವೇನು ಎಂದು ಸೈನ್ಯಗಳ ದೇವರಾದ ಕರ್ತನು ಹೇಳುತ್ತಾನೆ.
- Psalm 79:2–3 ಕೀರ್ತನೆಗಳು 79:2–3ನಿನ್ನ ಸೇವಕರ ಹೆಣಗಳನ್ನು ಆಕಾಶದ ಪಕ್ಷಿಗಳಿಗೂ ಪರಿಶುದ್ಧರ ಮಾಂಸ ವನ್ನು ಭೂಮಿಯ ಮೃಗಗಳಿಗೂ ಆಹಾರವಾಗಿ ಕೊಟ್ಟಿ ದ್ದಾರೆ. ಅವರ ರಕ್ತವನ್ನು ಯೆರೂಸಲೇಮಿನ ಸುತ್ತಲೂ ನೀರಿನ ಹಾಗೆ ಚೆಲ್ಲಿದ್ದಾರೆ; ಅವರನ್ನು ಹೂಣಿಡುವ ವನೊಬ್ಬನೂ ಇಲ್ಲ.
- Exodus 2:23–24 ವಿಮೋಚನಕಾಂಡ 2:23–24ಹೀಗಿರಲಾಗಿ ಬಹಳ ದಿನಗಳಾದ ಮೇಲೆ ಐಗುಪ್ತದ ಅರಸನು ಸತ್ತನು. ಇಸ್ರಾಯೇಲ್ ಮಕ್ಕಳು ದಾಸತ್ವದ ಕಾರಣದಿಂದ ನಿಟ್ಟುಸುರುಬಿಟ್ಟು ಕೂಗು ತ್ತಿದ್ದರು. ದಾಸತ್ವದ ನಿಮಿತ್ತವಾಗಿ ಅವರ ಕೂಗು ದೇವರ ಬಳಿಗೆ ಬಂತು. ದೇವರು ಅವರ ನರಳಾಟವನ್ನು ಕೇಳಿ ಅಬ್ರಹಾಮ ಇಸಾಕ ಯಾಕೋಬ ಇವರ ಸಂಗಡ ತಾನು ಮಾಡಿದ ಒಡಂಬಡಿಕೆಯನ್ನು ಜ್ಞಾಪಕಮಾಡಿ ಕೊಂಡನು.ಆಗ ದೇವರು ಇಸ್ರಾಯೇಲ್ ಮಕ್ಕಳನ್ನು ನೋಡಿ ಅವರಲ್ಲಿ ಲಕ್ಷ್ಯವಿಟ್ಟನು.
- Jeremiah 51:34 ಯೆರೆಮೀಯ 51:34ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ನನ್ನನ್ನು ನುಂಗಿಬಿಟ್ಟಿದ್ದಾನೆ; ಜಜ್ಜಿದ್ದಾನೆ; ಬರಿದಾದ ಪಾತ್ರೆಯಾಗಿ ಮಾಡಿದ್ದಾನೆ; ಘಟಸರ್ಪದ ಹಾಗೆ ನುಂಗಿಬಿಟ್ಟಿದ್ದಾನೆ; ನನ್ನ ರಮ್ಯವಾದವುಗಳಿಂದ ತನ್ನ ಹೊಟ್ಟೆ ತುಂಬಿಸಿದ್ದಾನೆ; ನನ್ನನ್ನು ತಳ್ಳಿಬಿಟ್ಟಿದ್ದಾನೆ.
- Revelation 17:6 ಪ್ರಕಟನೆ 17:6ಆ ಸ್ತ್ರೀಯು ಪರಿಶುದ್ದರ ರಕ್ತವನ್ನೂ ಯೇಸುವಿಗೋಸ್ಕರ ಸಾಕ್ಷಿಕೊಟ್ಟು ಹತರಾದವರ ರಕಆ ಸ್ತ್ರೀಯು ಪರಿಶುದ್ದರ ರಕ್ತವನ್ನೂ ಯೇಸುವಿಗೋಸ್ಕರ ಸಾಕ್ಷಿಕೊಟ್ಟು ಹತರಾದವರ ರಕ
- Jeremiah 50:11 ಯೆರೆಮೀಯ 50:11ನನ್ನ ಸ್ವಾಸ್ತ್ಯವನ್ನು ನಾಶಮಾಡಿದವರೇ, ನೀವು ಸಂತೋಷಿಸಿದ್ದರಿಂದಲೂ ಉಲ್ಲಾಸಿಸಿದ್ದರಿಂದಲೂ ಕೊಬ್ಬಿದ ಕಡಸಿನ ಹಾಗೆ ಗರ್ವಪಟ್ಟದ್ದರಿಂದಲೂ ಹೋರಿಗಳ ಹಾಗೆ ಹೂಂಕರಿಸಿದ್ದರಿಂದಲೂ
- Jeremiah 22:17 ಯೆರೆಮೀಯ 22:17ಆದರೆ ನಿನ್ನ ಕಣ್ಣುಗಳು ನಿನ್ನ ಹೃದಯವು ನಿನ್ನ ದುರ್ಲಾಭದ ಮೇಲೆ, ಅಪರಾಧವಿಲ್ಲದವನ ರಕ್ತ ಚೆಲ್ಲುವದರ ಮೇಲೆ ಮತ್ತು ಪೀಡೆಯನ್ನೂ ಬಲಾತ್ಕಾರವನ್ನೂ ಮಾಡುವದರ ಮೇಲೆಯೇ ಹೊರತು ಮತ್ತಾವದರ ಮೇಲೆಯೂ ಇರುವದಿಲ್ಲ.
- Jeremiah 51:20–23 ಯೆರೆಮೀಯ 51:20–23ನೀನು ನನ್ನ ಸುತ್ತಿಗೆಯೇ, ನನ್ನ ಯುದ್ಧದ ಆಯುಧಗಳೇ, ನಿನ್ನಿಂದ ಜನಾಂಗಗಳನ್ನು ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ರಾಜ್ಯಗಳನ್ನು ನಾಶಮಾಡುತ್ತೇನೆ; ನಿನ್ನಿಂದ ಕುದುರೆಯನ್ನೂ ಅದರ ಮೇಲೆ ಹತ್ತಿದವನನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ರಥವನ್ನೂ ಅದರಲ್ಲಿ ಸವಾರಿ ಮಾಡುವವನನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ. ನಿನ್ನಿಂದ ಗಂಡಸರನ್ನೂ ಹೆಂಗಸರನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ. ನಿನ್ನಿಂದ ಕುರುಬನನ್ನೂ ಅವನ ಮಂದೆಯನ್ನು ಚೂರು ಚೂರಾಗಿ ಒಡೆದು ಬಿಡುತ್ತೇನೆ. ನಿನ್ನಿಂದ ಹಿರಿಯರನ್ನೂ ಕಿರಿಯರನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ಯೌವನಸ್ಥನನ್ನೂ ಕನ್ನಿಕೆಯನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ಒಕ್ಕಲಿಗನನ್ನೂ ಅವನ ನೊಗದ ಎತ್ತುಗಳನ್ನೂ ಚೂರು ಚೂರಾಗಿ ಒಡೆದು ಬಿಡುತ್ತೇನೆ, ನಿನ್ನಿಂದ ಅಧಿಪತಿಗಳನ್ನೂ ಅಧಿಕಾರಿಗಳನ್ನೂ ಚೂರು ಚೂರಾಗಿ ಒಡೆದುಬಿಡು ತ್ತೇನೆ.
- Micah 3:2–3 ಮೀಕ 3:2–3ಒಳ್ಳೇದನ್ನು ಹಗೆಮಾಡಿ ಕೆಟ್ಟದ್ದನ್ನು ಪ್ರೀತಿಮಾಡುವವರೇ, ಅವರ ಮೇಲಿನಿಂದ ಅವರ ಚರ್ಮವನ್ನೂ ಅವರ ಎಲುಬುಗಳ ಮೇಲಿನಿಂದ ಅವರ ಮಾಂಸವನ್ನೂ ಕಿತ್ತುಕೊಳ್ಳು ವವರೇ, ನನ್ನ ಜನರ ಮಾಂಸವನ್ನು ತಿಂದು ಅವರ ಚರ್ಮವನ್ನು ಸುಲಿದು ಅವರ ಎಲುಬುಗಳನ್ನು ಮುರಿದು ಮಡಿಕೆಯಂತೆ ಅವರ ಮಾಂಸವನ್ನು ತುಂಡು ಮಾಡಿ ಕೊಪ್ಪರಿಗೆಯಲ್ಲಿ ಹಾಕುತ್ತೀರಿ.
- Psalm 74:19–20 ಕೀರ್ತನೆಗಳು 74:19–20ನಿನ್ನ ಬೆಳವಕ್ಕಿಯ ಪ್ರಾಣವನ್ನು ದುಷ್ಟರ ಸಮೂ ಹಕ್ಕೆ ಒಪ್ಪಿಸ ಬೇಡ; ನಿನ್ನ ದೀನರ ಸಭೆಯನ್ನು ಸದಾ ಕಾಲಕ್ಕೆ ಮರೆತುಬಿಡಬೇಡ. ಒಡಂಬಡಿಕೆಗೆ ಗೌರ ವವನ್ನು ಕೊಡು; ಭೂಮಿಯ ಕತ್ತಲಿನ ಸ್ಥಳಗಳು ಕ್ರೂರತನದ ನಿವಾಸಗಳಿಂದ ತುಂಬಿಯವೆ.
- Psalm 7:2 ಕೀರ್ತನೆಗಳು 7:2ಇಲ್ಲವಾದರೆ ಅವನು ನನ್ನ ಪ್ರಾಣವನ್ನು ಸಿಂಹದಂತೆ ಹರಿದು ತುಂಡು ತುಂಡು ಮಾಡುವನು.
- Psalm 14:4 ಕೀರ್ತನೆಗಳು 14:4ಕರ್ತನನ್ನು ಪ್ರಾರ್ಥಿಸದೆ ರೊಟ್ಟಿಯನ್ನೋ ಎಂಬಂತೆ ನನ್ನ ಜನರನ್ನು ತಿಂದು ಅಪರಾಧಮಾಡಿದವರಿಗೆ ತಿಳುವಳಿಕೆಯಿಲ್ಲವೋ?