Psalms · chapter 96 · verse 11
Psalm 96:11 in Kannada
ಆಕಾಶಗಳು ಸಂತೋಷಿಸಲಿ; ಭೂಮಿಯು ಉಲ್ಲಾಸಪಡಲಿ; ಸಮುದ್ರವೂ ಅದರ ಪರಿಪೂರ್ಣ ತೆಯೂ ಘೋಷಿಸಲಿ.
Aakaashagalu santoshisali; bhoomiyu ullaasapadali; samudravoo adara paripoorna teyoo ghoshisali.
Psalm 96:11 in English
- King James Version (KJV)
- Let the heavens rejoice, and let the earth be glad; let the sea roar, and the fulness thereof.
- World English Bible (WEB)
- Let the heavens be glad, and let the earth rejoice. Let the sea roar, and its fullness!
- American Standard Version (ASV)
- Let the heavens be glad, and let the earth rejoice; Let the sea roar, and the fulness thereof;
- Bible in Basic English (BBE)
- Let the heavens have joy and the earth be glad; let the sea be thundering with all its waters;
- Darby Translation (DBY)
- Let the heavens rejoice, and let the earth be glad; let the sea roar, and the fulness thereof;
- Webster's Bible (WBS)
- Let the heavens rejoice, and let the earth be glad; let the sea roar, and the fullness of it.
- Young's Literal Translation (YLT)
- The heavens joy, and the earth is joyful, The sea and its fulness roar.
Read in context
- 9ಪರಿಶುದ್ಧತ್ವದ ಸೌಂದರ್ಯದಿಂದ ಕರ್ತನನ್ನು ಆರಾಧಿಸಿರಿ; ಸಮಸ್ತ ಭೂಮಿಯೇ, ಆತನ ಮುಂದೆ ಭಯಪಡು,
- 10ಕರ್ತನು ಆಳುತ್ತಾನೆ; ಲೋಕವು ಸ್ಥಿರವಾಗಿದೆ, ಕದಲುವದಿಲ್ಲ. ಆತನು ಜನಗಳಿಗೆ ನೀತಿಯಲ್ಲಿ ನ್ಯಾಯತೀರಿಸುವನೆಂದು ಅನ್ಯಜನಾಂಗಗಳಲ್ಲಿ ಹೇಳಿರಿ.
- 11ಆಕಾಶಗಳು ಸಂತೋಷಿಸಲಿ; ಭೂಮಿಯು ಉಲ್ಲಾಸಪಡಲಿ; ಸಮುದ್ರವೂ ಅದರ ಪರಿಪೂರ್ಣ ತೆಯೂ ಘೋಷಿಸಲಿ.
- 12ಹೊಲವೂ ಅದರಲ್ಲಿರುವ ಸಮಸ್ತವೂ ಉತ್ಸಾಹಪಡಲಿ; ಅಡವಿಯ ಮರಗಳೆಲ್ಲಾ ಕರ್ತನ ಮುಂದೆಯೇ ಉತ್ಸಾಹಧ್ವನಿ ಮಾಡಲಿ.ಆತನು ಬರುತ್ತಾನೆ, ಭೂಮಿಗೆ ನ್ಯಾಯತೀರಿಸಲು ಬರುತ್ತಾನೆ; ಲೋಕಕ್ಕೆ ನೀತಿಯಿಂದಲೂ ಜನಗಳಿಗೆ ತನ್ನ ಸತ್ಯದಿಂದಲೂ ನ್ಯಾಯತೀರಿಸುವನು.
- 13ಆತನು ಬರುತ್ತಾನೆ, ಭೂಮಿಗೆ ನ್ಯಾಯತೀರಿಸಲು ಬರುತ್ತಾನೆ; ಲೋಕಕ್ಕೆ ನೀತಿಯಿಂದಲೂ ಜನಗಳಿಗೆ ತನ್ನ ಸತ್ಯದಿಂದಲೂ ನ್ಯಾಯತೀರಿಸುವನು.
Cross references
- Psalm 69:34 ಕೀರ್ತನೆಗಳು 69:34ಆಕಾಶವೂ ಭೂಮಿಯೂ ಸಮುದ್ರಗಳೂ ಅವುಗಳಲ್ಲಿ ಸಂಚರಿಸುವುದೆಲ್ಲವೂ ಆತನನ್ನು ಸ್ತುತಿಸಲಿ.
- Isaiah 49:13 ಯೆಶಾಯ 49:13ಆಕಾಶವೇ, ಹರ್ಷಿಸು; ಭೂಮಿಯೇ, ಉಲ್ಲಾಸಪಡು! ಪರ್ವತ ಗಳೇ ಹರ್ಷಧ್ವನಿಗೈಯಿರಿ. ಯಾಕಂದರೆ ಕರ್ತನು ತನ್ನ ಜನರನ್ನು ಆದರಿಸಿ, ಶ್ರಮೆಪಟ್ಟ ತನ್ನವರನ್ನು ಕರುಣಿಸುವನು.
- Psalm 97:1 ಕೀರ್ತನೆಗಳು 97:1ಕರ್ತನು ಆಳುತ್ತಾನೆ; ಭೂಮಿಯು ಉಲ್ಲಾಸಪಡಲಿ; ದ್ವೀಪಗಳ ಸಮೂಹವು ಸಂತೋ ಷಿಸಲಿ.
- Psalm 98:7–9 ಕೀರ್ತನೆಗಳು 98:7–9ಸಮುದ್ರವೂ ಅದರ ಪರಿಪೂರ್ಣತೆಯೂ ಲೋಕ ವೂ ಅದರ ನಿವಾಸಿಗಳೂ ಘೋಷಿಸಲಿ. ಪ್ರವಾಹ ಗಳು ಕೈತಟ್ಟಲಿ; ಕರ್ತನ ಮುಂದೆ ಬೆಟ್ಟಗಳು ಕೂಡ ಉತ್ಸಾಹ ಧ್ವನಿಮಾಡಲಿ.ಆತನು ಭೂಮಿಗೆ ನ್ಯಾಯ ತೀರಿಸಲು ಬರುತ್ತಾನೆ. ಲೋಕಕ್ಕೆ ನೀತಿಯಿಂದಲೂ ಜನಗಳಿಗೆ ನ್ಯಾಯದಲ್ಲಿಯೂ ತೀರ್ಪು ಕೊಡುವನು. ಆತನು ಭೂಮಿಗೆ ನ್ಯಾಯ ತೀರಿಸಲು ಬರುತ್ತಾನೆ. ಲೋಕಕ್ಕೆ ನೀತಿಯಿಂದಲೂ ಜನಗಳಿಗೆ ನ್ಯಾಯದಲ್ಲಿಯೂ ತೀರ್ಪು ಕೊಡುವನು.
- Psalm 148:1–4 ಕೀರ್ತನೆಗಳು 148:1–4ಕರ್ತನನ್ನು ನೀವು ಸ್ತುತಿಸಿರಿ, ಕರ್ತನನ್ನು ಆಕಾಶದಿಂದ ನೀವು ಸ್ತುತಿಸಿರಿ; ಉನ್ನತವಾದವುಗಳಲ್ಲಿ ಆತನನ್ನು ಸ್ತುತಿಸಿರಿ. ಆತನ ದೂತರೆಲ್ಲರೇ, ಆತನನ್ನು, ಸ್ತುತಿಸಿರಿ; ಆತನ ಎಲ್ಲಾ ಸೈನ್ಯಗಳೇ, ಆತನನ್ನು ಸ್ತುತಿಸಿರಿ; ಸೂರ್ಯ ಚಂದ್ರರೇ, ಆತನನ್ನು ಸ್ತುತಿಸಿರಿ; ಹೊಳೆಯುವ ನಕ್ಷತ್ರಗಳೇ, ಆತ ನನ್ನು ಸ್ತುತಿಸಿರಿ. ಆಕಾಶಗಳ ಆಕಾಶಗಳೇ, ಆಕಾಶಗಳ ಮೇಲೆ ಇರುವ ನೀರುಗಳೇ, ಆತನನ್ನು ಸ್ತುತಿಸಿರಿ.
- Isaiah 44:23 ಯೆಶಾಯ 44:23ಓ ಆಕಾಶಗಳೇ, ಹಾಡಿರಿ; ಕರ್ತನು ತಾನೇ ಅದನ್ನು ಮಾಡಿದ್ದಾನೆ. ಭೂಮಿಯ ಅಧೋಭಾಗವೇ, ಆರ್ಭ ಟಿಸು; ಪರ್ವತಗಳೇ, ಓ ವನವೇ, ಅದರಲ್ಲಿರುವ ಎಲ್ಲಾ ಮರಗಳೇ, ಉತ್ಸಾಹ ಧ್ವನಿಮಾಡಿರಿ; ಯಾಕಂದರೆ ಕರ್ತನು ಯಾಕೋಬನ್ನು ವಿಮೋಚಿಸಿದ್ದಾನೆ. ಇಸ್ರಾ ಯೇಲಿನಲ್ಲಿ ತನ್ನನ್ನು ಮಹಿಮೆಪಡಿಸಿದ್ದಾನೆ.
- Revelation 12:12 ಪ್ರಕಟನೆ 12:12ಆದದರಿಂದ ಪರಲೋಕಗಳೇ, ಅದರಲ್ಲಿ ವಾಸಮಾಡುವವರೇ, ಹರ್ಷಗೊಳ್ಳಿರಿ. ಭೂಮಿಯ ಮೇಲೆ ಮತ್ತು ಸಮುದ್ರದಲ್ಲಿ ಇರುವವರಿಗೆ ಅಯ್ಯೊ! ಯಾಕಂದರೆ ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದು ಬಂದಿದ್ದಾನೆ ಎಂಬದಾಗಿ ಹೇಳಿತು.
- Luke 15:10 ಲೂಕನು 15:10ಅದೇ ಪ್ರಕಾರ ಮಾನಸಾಂತರಪಡುವ ಒಬ್ಬ ಪಾಪಿಯ ವಿಷಯವಾಗಿ ದೇವದೂತರ ಮುಂದೆ ಸಂತೋಷವಾಗುವದೆಂದು ನಾನು ನಿಮಗೆ ಹೇಳುತ್ತೇನೆ ಅಂದನು.
- Revelation 19:1–7 ಪ್ರಕಟನೆ 19:1–7ಇವುಗಳಾದ ಮೇಲೆ ಪರಲೋಕದಲ್ಲಿ ಬಹಳ ಜನರ ಮಹಾ ಶಬ್ದವನ್ನು ನಾನು ಕೇಳಿದೆನು; ಅವರು--ಹಲ್ಲೆಲೂಯಾ; ನಮ್ಮ ದೇವ ರಾದ ಕರ್ತನಿಗೆ ರಕ್ಷಣೆಯೂ ಮಹಿಮೆಯೂ ಘನವೂ ಅಧಿಕಾರವೂ ಉಂಟಾದವು. ಆತನ ನ್ಯಾಯತೀರ್ಪು ಗಳು ಸತ್ಯವೂ ನೀತಿಯುಳ್ಳವುಗಳೂ ಆಗಿವೆ; ಯಾಕಂ ದರೆ ಜಾರತ್ವದಿಂದ ಭೂಲೋಕವನ್ನು ಕೆಡಿಸುತ್ತಿದ್ದ ಆ ಮಹಾಜಾರಸ್ತ್ರೀಗೆ ಆತನು ನ್ಯಾಯತೀರಿಸಿ ಆತನ ಸೇವಕರ ರಕ್ತಕ್ಕಾಗಿ ಅವಳಿಗೆ ಪ್ರತಿ ದಂಡನೆಯನ್ನು ಮಾಡಿದ್ದಾನೆ ಎಂದು ಹೇಳಿದರು. ತಿರಿಗಿ ಅವರು --ಹಲ್ಲೆಲೂಯಾ ಅಂದರು. ಅವಳ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರಿ ಹೋಗುತ್ತದೆ. ಆಗ ಇಪ್ಪತ್ತನಾಲ್ಕು ಮಂದಿ ಹಿರಿಯರೂ ಆ ನಾಲ್ಕು ಜೀವಿಗಳೂ--ಆಮೆನ್. ಹಲ್ಲೆಲೂಯಾ ಎಂದು ಹೇಳುತ್ತಾ ಸಿಂಹಾಸನದ ಮೇಲೆ ಕೂತಿದ್ದ ದೇವರ ಮುಂದೆ ಅಡ್ಡಬಿದ್ದು ಆರಾಧಿಸಿದರು. ಆಮೇಲೆ ಸಿಂಹಾಸನದ ಕಡೆಯಿಂದ ಬಂದ ಒಂದು ಶಬ್ದವು--ದೇವರ ಸೇವಕರೆಲ್ಲರೇ, ಆತನಿಗೆ ಭಯ ಪಡುವ ಹಿರಿಕಿರಿಯರೇ, ನಮ್ಮ ದೇವರನ್ನು ಕೊಂಡಾಡಿರಿ ಎಂದು ಹೇಳಿತು. ತರುವಾಯ ಜನರ ದೊಡ್ಡ ಗುಂಪಿನ ಶಬ್ದದಂತೆಯೂ ಬಹಳ ನೀರುಗಳ ಘೋಷದಂತೆಯೂ ಗಟ್ಟಿಯಾದ ಗುಡುಗುಗಳ ಶಬ್ದದಂತೆಯೂ ಇದ್ದ ಒಂದು ಶಬ್ದವನ್ನು ನಾನು ಕೇಳಿದೆನು; ಅದು--ಹಲ್ಲೆಲೂಯಾ, ಸರ್ವಶಕ್ತನಾಗಿರುವ ದೇವರಾದ ಕರ್ತನು ಆಳುತ್ತಾನೆ. ಸಂತೋಷಪಡೋಣ, ಹರ್ಷಗೊಳ್ಳೋಣ, ಆತ ನನ್ನು ಘನಪಡಿಸೋಣ; ಯಾಕಂದರೆ ಕುರಿಮರಿಯಾದಾ ತನ ವಿವಾಹವು ಬಂತು; ಆತನಿಗೆ ವಿವಾಹವಾಗುವ ಕನ್ಯೆಯು ತನ್ನನ್ನು ಸಿದ್ಧಮಾಡಿಕೊಂಡಿದ್ದಾಳೆ ಎಂದು ಹೇಳಿತು.
- Luke 2:13–14 ಲೂಕನು 2:13–14ಫಕ್ಕನೆ ಪರಲೋಕ ಸೈನ್ಯದ ಸಮೂಹವು ಆ ದೂತನ ಸಂಗಡ ಇದ್ದು ದೇವರನ್ನು ಕೊಂಡಾಡುತ್ತಾ-- ಮಹೋನ್ನತ ದಲ್ಲಿರುವ ದೇವರಿಗೆ ಮಹಿಮೆ, ಭೂಮಿಯ ಮೇಲೆ ಸಮಾಧಾನ, ಮನುಷ್ಯರ ಕಡೆಗೆ ದಯೆ ಎಂದು ಹೇಳಿದರು.
- Luke 2:10 ಲೂಕನು 2:10ಆದರೆ ದೂತನು ಅವರಿಗೆ--ಹೆದರಬೇಡಿರಿ; ಯಾಕಂದರೆ ಇಗೋ, ಎಲ್ಲಾ ಜನರಿಗೆ ಮಹಾ ಸಂತೋಷವನ್ನುಂಟು ಮಾಡುವ ಒಳ್ಳೇಸಮಾಚಾರ ವನ್ನು ನಾನು ನಿಮಗೆ ತಿಳಿಯಪಡಿಸುತ್ತೇನೆ.