Psalms · chapter 96 · verse 5
Psalm 96:5 in Kannada
ಜನಾಂಗಗಳ ದೇವರುಗಳೆಲ್ಲಾ ವಿಗ್ರಹಗಳಾಗಿವೆ; ಆದರೆ ಕರ್ತನು ಆಕಾಶಗಳನ್ನು ನಿರ್ಮಿಸಿ ದನು.
Janaangagala devarugalellaa vigrahagalaagive; aadare kartanu aakaashagalannu nirmisi danu.
Psalm 96:5 in English
- King James Version (KJV)
- For all the gods of the nations [are] idols: but the LORD made the heavens.
- World English Bible (WEB)
- For all the gods of the peoples are idols, but the LORD made the heavens.
- American Standard Version (ASV)
- For all the gods of the peoples are idols; But Jehovah made the heavens.
- Bible in Basic English (BBE)
- For all the gods of the nations are false gods; but the Lord made the heavens.
- Darby Translation (DBY)
- For all the gods of the peoples are idols; but Jehovah made the heavens.
- Webster's Bible (WBS)
- For all the gods of the nations [are] idols: but the LORD made the heavens.
- Young's Literal Translation (YLT)
- For all the gods of the peoples [are] nought, And Jehovah made the heavens.
Read in context
- 3ಅನ್ಯಜನಾಂಗದಲ್ಲಿ ಆತನ ಘನವನ್ನೂ ಎಲ್ಲಾ ಜನಾಂಗಗಳಲ್ಲಿ ಆತನ ಅದ್ಭುತಗಳನ್ನೂ ವಿವ ರಿಸಿರಿ.
- 4ಕರ್ತನು ದೊಡ್ಡವನೂ ಬಹಳವಾಗಿ ಸ್ತುತಿಸ ಲ್ಪಡತಕ್ಕವನೂ ಆಗಿದ್ದಾನೆ; ಆತನಿಗೇ ಭಯಪಡ ತಕ್ಕದ್ದು.
- 5ಜನಾಂಗಗಳ ದೇವರುಗಳೆಲ್ಲಾ ವಿಗ್ರಹಗಳಾಗಿವೆ; ಆದರೆ ಕರ್ತನು ಆಕಾಶಗಳನ್ನು ನಿರ್ಮಿಸಿ ದನು.
- 6ಘನವೂ ಪ್ರಭೆಯೂ ಆತನ ಮುಂದೆ ಅವೆ; ಬಲವೂ ಸೌಂದರ್ಯವೂ ಆತನ ಪರಿಶುದ್ಧ ಸ್ಥಳದಲ್ಲಿ ಅವೆ.
- 7ಓ ಜನಾಂಗಗಳೇ, ಕರ್ತನಿಗೆ ನೀವು ಘನವನ್ನೂ ಬಲವನ್ನೂ ಸಲ್ಲಿಸಿರಿ.
Cross references
- Psalm 115:15 ಕೀರ್ತನೆಗಳು 115:15ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದ ಕರ್ತನಿಂದ ನೀವು ಆಶೀರ್ವದಿಸಲ್ಪಟ್ಟವರು.
- Isaiah 42:5 ಯೆಶಾಯ 42:5ಆಕಾಶವನ್ನು ನಿರ್ಮಿಸಿ ಹಾಸಿದವನು ಭೂಮಿಯನ್ನು ಅದರಿಂದ ಉತ್ಪತ್ತಿ ಯನ್ನೂ ವಿಸ್ತರಿಸಿ, ಅದರ ಮೇಲಿರುವ ಜನರಿಗೆ ಶ್ವಾಸವನ್ನೂ ಸಂಚರಿಸುವವರಿಗೆ ಆತ್ಮವನ್ನು ಕೊಡು ತ್ತೇನೆಂದು ದೇವರಾದ ಕರ್ತನು ಹೇಳುತ್ತಾನೆ--
- 1 Corinthians 8:4 1 ಕೊರಿಂಥದವರಿಗೆ 8:4ವಿಗ್ರಹಗಳಿಗೆ ಸಮರ್ಪಣೆ ಮಾಡಿದವುಗಳನ್ನು ತಿನ್ನುವದರ ವಿಷ ಯದಲ್ಲಿ ನಾನು ಹೇಳುವದೇನಂದರೆ, ಜಗತ್ತಿನಲ್ಲಿ ವಿಗ್ರಹವು ಏನೂ ಅಲ್ಲವೆಂದೂ ಒಬ್ಬ ದೇವರಿದ್ದಾನೆ ಹೊರತು ಬೇರೆ ದೇವರಿಲ್ಲವೆಂದೂ ನಾವು ಬಲ್ಲೆವು.
- Jeremiah 10:11–12 ಯೆರೆಮೀಯ 10:11–12ನೀವು ಅವರಿಗೆ ಹೀಗೆ ಹೇಳಬೇಕು--ಆಕಾಶ ಗಳನ್ನೂ ಭೂಮಿಯನ್ನೂ ಸೃಷ್ಟಿಸದ ದೇವರುಗಳು ಭೂಮಿಯ ಮೇಲಿನಿಂದಲೂ ಈ ಆಕಾಶಗಳ ಕೆಳಗಿ ನಿಂದಲೂ ನಾಶವಾಗುವವು. ಆತನು ಭೂಮಿಯನ್ನು ತನ್ನ ಶಕ್ತಿಯಿಂದ ಉಂಟು ಮಾಡಿದನು, ಭೂಲೋಕವನ್ನು ತನ್ನ ಜ್ಞಾನದಿಂದ ಸ್ಥಾಪಿಸಿದನು, ಆಕಾಶಗಳನ್ನು ತನ್ನ ವಿವೇಕದಿಂದ ಹಾಸಿ ದನು;
- Jeremiah 10:3–5 ಯೆರೆಮೀಯ 10:3–5ಜನಗಳ ಪದ್ಧತಿಗಳು ವ್ಯರ್ಥ ವಾಗಿವೆ. ಹೇಗಂದರೆ ಅಡವಿಯಲ್ಲಿ ಒಬ್ಬನು ಮರವನ್ನು ಕಡಿಯುತ್ತಾನೆ; ಅದು ಕೊಡಲಿಯಿಂದ ಬಡಿಗೆಯವನ ಕೈ ಕೆಲಸವೇ ಬೆಳ್ಳಿಯಿಂದಲೂ ಬಂಗಾರದಿಂದಲೂ ಅದನ್ನು ಅಲಂಕರಿಸುತ್ತಾರೆ; ಮೊಳೆಗಳಿಂದಲೂ ಸುತ್ತಿಗೆ ಗಳಿಂದಲೂ ಚಲಿಸದ ಹಾಗೆ ಅದನ್ನು ಬಿಗಿಸುತ್ತಾರೆ. ಅವು ಖರ್ಜೂರ ಮರದಂತೆ ನೆಟ್ಟಗೆ ಇವೆ. ಅವು ಮಾತನಾಡುವದಿಲ್ಲ; ಅವುಗಳನ್ನು ಹೊತ್ತುಕೊಳ್ಳ ತಕ್ಕದ್ದು, ಅವು ನಡೆಯಲಾರವು. ಅವುಗಳಿಗೆ ಭಯ ಪಡಬೇಡಿರಿ. ಅವು ಕೆಟ್ಟದ್ದನ್ನು ಮಾಡಲಾರವು ಇಲ್ಲವೆ ಒಳ್ಳೇದು ಮಾಡುವದು ಸಹ ಅವುಗಳಲ್ಲಿಲ್ಲ.
- Jeremiah 10:14–15 ಯೆರೆಮೀಯ 10:14–15ಪ್ರತಿ ಮನುಷ್ಯನು ತನ್ನ ಜ್ಞಾನದಲ್ಲಿ ಪಶುವಾಗಿದ್ದಾನೆ; ಎರಕ ಹೊಯ್ಯುವವರೆಲ್ಲಾ ಕೆತ್ತಿದ ವಿಗ್ರಹಕ್ಕೋಸ್ಕರ ನಾಚಿಕೆಪಡುತ್ತಾರೆ; ಅವರ ಎರಕ ವಿಗ್ರಹವು ಸುಳ್ಳಾದದ್ದು; ಅವುಗಳಲ್ಲಿ ಉಸಿರು ಇಲ್ಲ. ಅವು ವ್ಯರ್ಥವೇ, ತಪ್ಪಾದ ಕೆಲಸವೇ; ಅವು ವಿಚಾ ರಿಸಲ್ಪಡುವ ಕಾಲದಲ್ಲಿ ನಾಶವಾಗುವವು.
- Psalm 135:18 ಕೀರ್ತನೆಗಳು 135:18ಅವುಗಳನ್ನು ಮಾಡುವವರೂ ಅವುಗಳಲ್ಲಿ ಭರವಸ ವಿಡುವವರೆಲ್ಲರೂ ಅವುಗಳ ಹಾಗೆಯೇ ಇದ್ದಾರೆ.
- Acts 19:26 ಅಪೊಸ್ತಲರ ಕೃತ್ಯಗಳು 19:26ಆದರೆ ಕೈಯಿಂದ ಮಾಡಿದವುಗಳು ದೇವರುಗಳಲ್ಲವೆಂದು ಈ ಪೌಲನು ಹೇಳಿ ಎಫೆಸದಲ್ಲಿ ಮಾತ್ರವಲ್ಲದೆ ಸ್ವಲ್ಪ ಕಡಿಮೆ ಆಸ್ಯ ಸೀಮೆಯಲ್ಲೆಲ್ಲಾ ಬಹಳ ಜನರನ್ನು ಒಡಂಬಡಿಸಿ ತಿರುಗಿಸಿ ಬಿಟ್ಟಿದ್ದಾನೆಂಬದನ್ನು ನೀವು ನೋಡುತ್ತೀರಿ
- Isaiah 44:8–28 ಯೆಶಾಯ 44:8–28ಹೆದರಬೇಡಿರಿ ಇಲ್ಲವೆ ಭಯಪಡಬೇಡಿರಿ ನಾನು ಪೂರ್ವದಿಂದಲೂ ನಿಮಗೆ ಹೇಳಲಿಲ್ಲವೋ? ಅದನ್ನು ಪ್ರಕಟಿಸಲಿ ಲ್ಲವೋ? ಅಂತೂ ನೀವೇ ನನ್ನ ಸಾಕ್ಷಿಗಳು. ನಾನಲ್ಲದೆ ಇನ್ನೊಬ್ಬ ದೇವರು ಇದ್ದಾನೋ? ಹೌದು, ಇನ್ನು ಯಾವ ದೇವರೂ ಇಲ್ಲ, ಯಾರೂ ನನಗೆ ಗೊತ್ತಿಲ್ಲ. ಕೆತ್ತಿದ ವಿಗ್ರಹವನ್ನು ಮಾಡುವವರೆಲ್ಲರೂ ವ್ಯರ್ಥ ರೇ; ಅವರ ಮನೋರಂಜಕ ವಸ್ತುಗಳು ಯಾತಕ್ಕೂ ಬಾರವು; ಅವರು ನೋಡದೆ ಇಲ್ಲವೆ ತಿಳಿಯದೆ, ನಾಚಿಕೆಗೆ ಗುರಿಯಾಗುವಂತೆ ಅವುಗಳೇ ಅವರಿಗೆ ಸ್ವಂತ ಸಾಕ್ಷಿಗಳಾಗಿರುವವು. ದೇವರನ್ನು ರೂಪಿ ಸುವವರೂ ಇಲ್ಲವೆ ಕೆತ್ತಿದ ವ್ಯರ್ಥವಾದ ವಿಗ್ರಹವನ್ನು ಎರಕ ಹೊಯ್ಯುವವರು ಯಾರು? ಇಗೋ, ಅವನ ಸಂಗಡಿಗರೆಲ್ಲಾ ನಾಚಿಕೆಗೊಳಗಾಗುವರು; ಆ ಕೆಲಸ ದವರು ಮನುಷ್ಯ ಮಾತ್ರದವರೇ; ಅವರೆಲ್ಲರೂ ಒಟ್ಟುಗೂಡಿಕೊಂಡು ನಿಂತುಕೊಳ್ಳಲಿ, ಆದರೂ ಅವರು ಭಯಪಟ್ಟು ಒಟ್ಟಿಗೆ ಲಜ್ಜೆಪಡುವರು. ಕಮ್ಮಾ ರನು ಚಿಮಟದೊಂದಿಗೆ ಬೆಂಕಿಯಲ್ಲಿ ಕೆಲಸ ಮಾಡುತ್ತಾ ಚಮಟಿಗೆಯಿಂದ ಅದನ್ನು ಬಡಿದು ರೂಪಿಸಿ ತನ್ನ ತೋಳಿನ ಬಲದಿಂದ ಕೆಲಸ ಮಾಡುತ್ತಾನೆ; ಹೌದು, ಅವನು ಹಸಿದು ಬಲಹೀನನಾಗಿದ್ದರೂ ನೀರು ಕುಡಿ ಯದೆ ದಣಿಯುತ್ತಾನೆ. ಬಡಗಿಯು ನೂಲನ್ನು ಹಿಡಿದು ಗೆರೆ ಎಳೆದು ಬಾಚಿಯಿಂದ ಸಮಮಾಡಿ, ಕೈವಾರದಿಂದ ಗುರುತಿಸಿ, ಆಮೇಲೆ ಮನುಷ್ಯನ ಆಕಾ ರಕ್ಕೆ ತಂದು ಮನೆಯಲ್ಲಿ ವಾಸಿಸ ತಕ್ಕದ್ದಾಗಲೆಂದು ಮನುಷ್ಯನ ಅಂದದಂತೆ ರೂಪಿಸುವನು. ಅರಣ್ಯದ ಮಧ್ಯದಲ್ಲಿರುವ ಮರಗಳಲ್ಲಿ ದೇವದಾರುಗಳನ್ನು ಕಡಿದು; ತುರಾಯಿ, ಅಲ್ಲೊನ್, ಮತ್ತು ಓಕ್ಮರ ಗಳನ್ನು ತನ್ನ ಬಲಕ್ಕೋಸ್ಕರ ತೆಗೆದು ಕೊಳ್ಳುವನು. ಪೀತದಾರವನ್ನು ಅವನು ನೆಡಲು ಮಳೆಯು ಅದನ್ನು ಬೆಳೆಯಿಸುವದು. ಆಗ ಅದು ಮನುಷ್ಯರು ಉರಿಸು ವದಕ್ಕಾಗುವದು; ಅದರಿಂದ ಚಳಿಕಾಯಿಸಿಕೊಳ್ಳು ವನು, ಹೌದು, ಅದನ್ನು ಬೆಂಕಿ ಹಚ್ಚಿ ರೊಟ್ಟಿ ಸುಡು ವನು; ಹೌದು, ಅವನು ಒಂದು ದೇವರನ್ನು ಮಾಡಿ ಅದಕ್ಕೆ ನಮಸ್ಕರಿಸುವನು; ಅದರಲ್ಲಿ ಒಂದು ಕೆತ್ತಿದ ವಿಗ್ರಹವನ್ನು ಮಾಡಿ, ಅದಕ್ಕೆ ಅಡ್ಡಬಿಳುವನು. ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸುವನು; ಅದರ ಇನ್ನೊಂದು ಭಾಗದಲ್ಲಿ ಮಾಂಸವನ್ನು ಉಣ್ಣುವನು; ಮಾಂಸವನ್ನು ಸುಟ್ಟು ತೃಪ್ತಿಹೊಂದುವನು; ಹೌದು, ಅವನು ಚಳಿಕಾಯಿಸಿ ಕೊಳ್ಳುತ್ತಾ--ಆಹಾ! ಬೆಂಕಿ ಯನ್ನು ಕಂಡೆ, ಬೆಚ್ಚಗಾಯಿತು ಅಂದುಕೊಳ್ಳುವನು; ಅದರಲ್ಲಿ ಉಳಿದ ಭಾಗವನ್ನು ದೇವರನ್ನಾಗಿಯೂ ಕೆತ್ತಿದ ವಿಗ್ರಹವನ್ನಾಗಿಯೂ ಮಾಡಿ ಅದಕ್ಕೆ ಅಡ್ಡಬಿದ್ದು ನಮಸ್ಕರಿಸಿ--ನೀನೇ ನನ್ನ ದೇವರು, ನನ್ನನ್ನು ಕಾಪಾಡು ಎಂದು ಬೇಡಿಕೊಳ್ಳುವನು. ಅವರು ಏನೂ ತಿಳಿಯ ದವರು ಇಲ್ಲವೆ ಏನೂ ಗ್ರಹಿಸಲಾರದವರು; ಆತನು ಅವರ ಕಣ್ಣು ಕಾಣದಂತೆಯೂ ಹೃದಯಗಳು ಗ್ರಹಿಸ ದಂತೆಯೂ ಮುಚ್ಚಿ ಬಿಟ್ಟಿದ್ದಾನೆ. ನಾನು ಒಂದು ಭಾಗವನ್ನು ಬೆಂಕಿಯಲ್ಲಿ ಉರಿಸಿದೆನು; ಹೌದು, ಅದರ ಕೆಂಡದಲ್ಲಿ ರೊಟ್ಟಿಮಾಡಿ ಮಾಂಸವನ್ನು ಸುಟ್ಟು ತಿಂದೆ ನಲ್ಲಾ; ಮಿಕ್ಕಿದ್ದರಲ್ಲಿ ಅಸಹ್ಯವಾದದ್ದನ್ನು ಮಾಡಲೋ, ಮರದ ತುಂಡಿಗೆ ಅಡ್ಡಬೀಳಬಹುದೋ ಅಂದುಕೊಳ್ಳು ವಷ್ಟು ಜ್ಞಾನವಿವೇಕಗಳು ಯಾರಿಗೂ ಇಲ್ಲ, ಯಾರೂ ಇದನ್ನು ಮನಸ್ಸಿಗೆತಾರರು. ಅವನು ತಿನ್ನುವದು ಬೂದಿಯೇ; ಮೋಸಕ್ಕೊಳಗಾದ ಹೃದಯವು ಅವನಿಗೆ ದಾರಿ ತಪ್ಪಿಸಿದ ಕಾರಣ ನನ್ನ ಬಲಗೈಯಲ್ಲಿ ಸುಳ್ಳು ಇದೆಯಲ್ಲಾ ಎಂದು ಅಂದುಕೊಳ್ಳಲೂ ತನ್ನ ಪ್ರಾಣ ವನ್ನು ಕಾಪಾಡಿಕೊಳ್ಳಲೂ ಅವನಿಂದಾಗದು. ಓ ಯಾಕೋಬೇ, ಇಸ್ರಾಯೇಲೇ, ಈ ವಿಷಯ ಗಳನ್ನು ಜ್ಞಾಪಕದಲ್ಲಿಟ್ಟುಕೋ. ನೀನು ನನ್ನ ಸೇವಕ ನಾಗಿದ್ದೀ; ನಾನು ನಿನ್ನನ್ನು ನಿರ್ಮಿಸಿದೆನು. ನೀನು ನನ್ನ ಸೇವಕನು; ಓ ಇಸ್ರಾಯೇಲೇ, ನಾನು ನಿನ್ನನ್ನು ಮರೆತುಬಿಡೆನು. ನಾನು ನಿನ್ನ ದ್ರೋಹಗಳನ್ನು ಗಾಢವಾದ ಮೇಘದಂತೆ ಅಳಿಸಿಬಿಟ್ಟಿದ್ದೇನೆ; ನಿನ್ನ ಪಾಪಗಳನ್ನು ಮೋಡದಂತೆ ಹಾರಿಸಿದ್ದೇನೆ; ನನ್ನ ಕಡೆಗೆ ತಿರಿಗಿಕೋ, ನಾನು ನಿನ್ನನ್ನು ವಿಮೋಚಿಸಿದ್ದೇನೆ. ಓ ಆಕಾಶಗಳೇ, ಹಾಡಿರಿ; ಕರ್ತನು ತಾನೇ ಅದನ್ನು ಮಾಡಿದ್ದಾನೆ. ಭೂಮಿಯ ಅಧೋಭಾಗವೇ, ಆರ್ಭ ಟಿಸು; ಪರ್ವತಗಳೇ, ಓ ವನವೇ, ಅದರಲ್ಲಿರುವ ಎಲ್ಲಾ ಮರಗಳೇ, ಉತ್ಸಾಹ ಧ್ವನಿಮಾಡಿರಿ; ಯಾಕಂದರೆ ಕರ್ತನು ಯಾಕೋಬನ್ನು ವಿಮೋಚಿಸಿದ್ದಾನೆ. ಇಸ್ರಾ ಯೇಲಿನಲ್ಲಿ ತನ್ನನ್ನು ಮಹಿಮೆಪಡಿಸಿದ್ದಾನೆ. ನಿನ್ನನ್ನು ಗರ್ಭದಿಂದ ರೂಪಿಸಿದವನೂ ನಿನ್ನ ವಿಮೋಚಕನೂ ಆದ ಕರ್ತನು ಹೀಗನ್ನುತ್ತಾನೆ--ಎಲವನ್ನೂ ಉಂಟುಮಾಡಿದ ಕರ್ತನು ನಾನೇ. ನಾನೊ ಬ್ಬನೇ ಆಕಾಶವನ್ನು ವಿಸ್ತರಿಸಿ ಭೂಮಿಯನ್ನು ನಾನೇ ವಿಶಾಲವಾಗಿ ಹರಡಿದವನಾಗಿದ್ದೇನೆ. ಸುಳ್ಳುಗಾರರ ಗುರುತುಗಳನ್ನು ನಿರರ್ಥಕಮಾಡುವವನೂ ಕಣಿ ಹೇಳು ವವರನ್ನು ಹುಚ್ಚರನ್ನಾಗಿ ಮಾಡುವವನೂ ಜ್ಞಾನಿಗಳನ್ನು ಹಿಂದಕ್ಕೆ ತಳ್ಳಿ ಅವರ ತಿಳುವಳಿಕೆಯನ್ನು ಬುದ್ದಿಹೀನ ವಾಗ ಮಾಡುವವನೂ ತನ್ನ ಸೇವಕನ ಮಾತು ಗಳನ್ನು ಸ್ಥಾಪಿಸುವವನೂ ತನ್ನ ದೂತರ ಆಲೋ ಚನೆಯನ್ನು ಪೂರೈಸುವವನೂ ಯೆರೂಸಲೇಮಿಗೆ--ನೀನು ನಿವಾಸವಾಗುವಿ; ಯೆಹೂದಪಟ್ಟಣಗಳಿಗೆ--ಕಟ್ಟಲ್ಪಡುವಿ; ಅದರ ಹಾಳು ಸ್ಥಳಗಳನ್ನು ನೆಟ್ಟಗೆ ಮಾಡುವೆನು ಎಂದು ಅನ್ನುವವನೂ ಅಗಾಧಕ್ಕೆ-- ಒಣಗಿಹೋಗು; ನಿನ್ನ ನದಿಗಳನ್ನು ಒಣಗಿಸಿಬಿಡುವೆನು ಎಂದು ಅನ್ನುವವನೂಕೋರೆಷನ ವಿಷಯ ವಾಗಿ--ಅವನು ನನ್ನ ಕುರುಬನು; ನನ್ನ ಇಚ್ಛೆಯನ್ನೆಲ್ಲಾ ಪೂರೈಸುವವನೂ ಯೆರೂಸಲೇಮಿಗೆ--ನೀನು ಕಟ್ಟಲ್ಪ ಡುವಿ; ದೇವಾಲಯಕ್ಕೆ--ನಿನ್ನ ಅಸ್ತಿವಾರವು ಹಾಕಲ್ಪಡು ವದೆಂದು ಅನ್ನುವವನು ನಾನೇ. ಕೋರೆಷನ ವಿಷಯ ವಾಗಿ--ಅವನು ನನ್ನ ಕುರುಬನು; ನನ್ನ ಇಚ್ಛೆಯನ್ನೆಲ್ಲಾ ಪೂರೈಸುವವನೂ ಯೆರೂಸಲೇಮಿಗೆ--ನೀನು ಕಟ್ಟಲ್ಪ ಡುವಿ; ದೇವಾಲಯಕ್ಕೆ--ನಿನ್ನ ಅಸ್ತಿವಾರವು ಹಾಕಲ್ಪಡು ವದೆಂದು ಅನ್ನುವವನು ನಾನೇ.
- Genesis 1:1 ಆದಿಕಾಂಡ 1:1ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದನು.
- Psalm 115:3–8 ಕೀರ್ತನೆಗಳು 115:3–8ನಮ್ಮ ದೇವರು ಪರಲೋಕದಲ್ಲಿದ್ದಾನೆ; ತಾನು ಇಚ್ಚಿಸುವ ದನ್ನೆಲ್ಲಾ ಮಾಡುತ್ತಾನೆ. ಅವರ ವಿಗ್ರಹಗಳು ಬೆಳ್ಳಿಯೂ ಬಂಗಾರವೂ ಮನುಷ್ಯನ ಕೈಕೆಲಸವೂ ಆಗಿವೆ. ಅವುಗಳಿಗೆ ಬಾಯಿ ಉಂಟು; ಮಾತಾಡುವದಿಲ್ಲ; ಕಣ್ಣುಗಳುಂಟು; ನೋಡು ವದಿಲ್ಲ. ಕಿವಿಗಳುಂಟು; ಕೇಳುವದಿಲ್ಲ. ಮೂಗು ಉಂಟು; ಮೂಸುವದಿಲ್ಲ. ಕೈಗಳುಂಟು; ಮುಟ್ಟುವ ದಿಲ್ಲ. ಕಾಲುಗಳುಂಟು; ನಡೆಯುವದಿಲ್ಲ. ತಮ್ಮ ಗಂಟಲಿನಿಂದ ಮಾತನಾಡುವದಿಲ್ಲ, ಅವುಗಳನ್ನು ಮಾಡುವವರೂ ಅವುಗಳಲ್ಲಿ ಭರವಸವಿಡುವವ ರೆಲ್ಲರೂ ಅವುಗಳ ಹಾಗೆಯೇ ಇದ್ದಾರೆ.
- Isaiah 46:1–2 ಯೆಶಾಯ 46:1–2ಬೇಲ್(ದೇವತೆಯು)ಬೊಗ್ಗಿದೆ, ನೆಬೋ (ದೇವತೆಯು) ಕುಗ್ಗಿದೆ; ಅವರ ವಿಗ್ರಹಗಳು ಮೃಗಗಳ ಮತ್ತು ಪಶುಗಳ ಮೇಲೆ ಇದ್ದವು, ನೀವು ಹೊರುತ್ತಿದ್ದವುಗಳು ಭಾರವಾದ ಹೊರೆಯಾಗಿದ್ದವು. ಆಯಾಸವುಳ್ಳ ಮೃಗಗಳಿಗೆ ಅವು ಭಾರವಾದವು. ಒಟ್ಟಿಗೆ ಕುಗ್ಗಿ, ಬೊಗ್ಗಿವೆ. ತಮ್ಮ ಮೇಲೆ ಬಿದ್ದ ಭಾರವನ್ನು ಹೊತ್ತು ನಿರ್ವಹಿಸಲಾರದೆ ತಾವೇ ಸೆರೆಗೆ ಹೋದವು.