Psalms · chapter 98 · verse 6
Psalm 98:6 in Kannada
ತುತೂರಿಗಳಿಂದಲೂ ಹೌದು, ತುತೂರಿಯ ಶಬ್ಧ ದಿಂದಲೂ, ಅರಸನಾದ ಕರ್ತನ ಮುಂದೆ ಜಯಧ್ವನಿ ಮಾಡಿರಿ.
Tutoorigalindaloo haudu, tutooriya shabdha dindaloo, arasanaada kartana munde jayadhvani maadiri.
Psalm 98:6 in English
- King James Version (KJV)
- With trumpets and sound of cornet make a joyful noise before the LORD, the King.
- World English Bible (WEB)
- With trumpets and sound of the ram’s horn, make a joyful noise before the King, the LORD.
- American Standard Version (ASV)
- With trumpets and sound of cornet Make a joyful noise before the King, Jehovah.
- Bible in Basic English (BBE)
- With wind instruments and the sound of the horn, make a glad cry before the Lord, the King.
- Darby Translation (DBY)
- With trumpets and sound of cornet, make a joyful noise before the King, Jehovah.
- Webster's Bible (WBS)
- With trumpets and sound of cornet make a joyful noise before the LORD, the King.
- Young's Literal Translation (YLT)
- With trumpets, and voice of a cornet, Shout ye before the king Jehovah.
Read in context
- 4ಸಮಸ್ತ ಭೂಮಿಯೇ; ಕರ್ತನಿಗೆ ಉತ್ಸಾಹಧ್ವನಿ ಮಾಡಿರಿ, ಗಟ್ಟಿಯಾದ ಧ್ವನಿಯಿಂದ ಸಂತೋಷಿಸಿ ಕೀರ್ತಿಸಿರಿ.
- 5ಕರ್ತನಿಗೆ ಕಿನ್ನರಿಯಿಂದ, ಹೌದು, ಕಿನ್ನರಿ ಯಿಂದಲೂ ಕೀರ್ತನೆಯ ಸ್ವರದಿಂದಲೂ ಹಾಡಿರಿ.
- 6ತುತೂರಿಗಳಿಂದಲೂ ಹೌದು, ತುತೂರಿಯ ಶಬ್ಧ ದಿಂದಲೂ, ಅರಸನಾದ ಕರ್ತನ ಮುಂದೆ ಜಯಧ್ವನಿ ಮಾಡಿರಿ.
- 7ಸಮುದ್ರವೂ ಅದರ ಪರಿಪೂರ್ಣತೆಯೂ ಲೋಕ ವೂ ಅದರ ನಿವಾಸಿಗಳೂ ಘೋಷಿಸಲಿ.
- 8ಪ್ರವಾಹ ಗಳು ಕೈತಟ್ಟಲಿ; ಕರ್ತನ ಮುಂದೆ ಬೆಟ್ಟಗಳು ಕೂಡ ಉತ್ಸಾಹ ಧ್ವನಿಮಾಡಲಿ.ಆತನು ಭೂಮಿಗೆ ನ್ಯಾಯ ತೀರಿಸಲು ಬರುತ್ತಾನೆ. ಲೋಕಕ್ಕೆ ನೀತಿಯಿಂದಲೂ ಜನಗಳಿಗೆ ನ್ಯಾಯದಲ್ಲಿಯೂ ತೀರ್ಪು ಕೊಡುವನು.
Cross references
- Revelation 19:16 ಪ್ರಕಟನೆ 19:16ಆತನ ತೊಡೆಯ ಮೇಲೆಯೂ ವಸ್ತ್ರದ ಮೇಲೆಯೂ--ರಾಜಾ ಧಿರಾಜನೂ ಕರ್ತರ ಕರ್ತನೂ ಎಂಬ ಹೆಸರು ಬರೆದದೆ.
- 2 Chronicles 15:14 2 ಪೂರ್ವಕಾಲವೃತ್ತಾಂತ 15:14ಮಹಾಶಬ್ದದಿಂದಲೂ ಆರ್ಭಟ ದಿಂದಲೂ ತುತೂರಿಗಳ ಶಬ್ದದಿಂದಲೂ ಕೊಂಬು ಗಳ ಶಬ್ದದಿಂದಲೂ ಕರ್ತನ ಮುಂದೆ ಆಣೆಯಿಟ್ಟರು.
- Psalm 81:2–4 ಕೀರ್ತನೆಗಳು 81:2–4ಕೀರ್ತನೆಯನ್ನು ಎತ್ತಿರಿ; ದಮ್ಮಡಿಯನ್ನೂ ರಮ್ಯವಾದ ಕಿನ್ನರಿಯನ್ನೂ ವೀಣೆಯ ಸಂಗಡ ತನ್ನಿರಿ. ಅಮಾವಾಸ್ಯೆಯಲ್ಲಿಯೂ ನೇಮಕವಾದ ಪರಿಶುದ್ಧ ಹಬ್ಬದ ದಿವಸದಲ್ಲಿಯೂ ತುತೂರಿಯನ್ನು ಊದಿರಿ. ಅದು ಇಸ್ರಾಯೇಲಿಗೆ ಕಟ್ಟಳೆಯೇ; ಯಾಕೋಬನ ದೇವರ ನ್ಯಾಯಪ್ರಮಾಣವೇ;
- 1 Chronicles 15:28 1 ಪೂರ್ವಕಾಲವೃತ್ತಾಂತ 15:28ಸಮಸ್ತ ಇಸ್ರಾಯೇಲ್ಯರು ಆರ್ಭಟದಿಂದಲೂ ಕೊಂಬಿನ ಶಬ್ದದಿಂದಲೂ ತುತೂರಿಗಳಿಂದಲೂ ತಾಳ ಗಳಿಂದಲೂ ವೀಣೆಗಳನ್ನೂ ಕಿನ್ನರಿಗಳನ್ನೂ ಬಾರಿಸು ವದರಿಂದಲೂ ಕರ್ತನ ಒಡಂಬಡಿಕೆಯ ಮಂಜೂಷ ವನ್ನು ತಂದರು.ಕರ್ತನ ಒಡಂಬಡಿಕೆಯ ಮಂಜೂ ಷವು ದಾವೀದನ ಪಟ್ಟಣದಲ್ಲಿ ಸೇರಿದಾಗ ಏನಾಯಿ ತಂದರೆ, ಸೌಲನ ಮಗಳಾದ ವಿಾಕಳು ಕುಣಿಯುತ್ತಾ ಆಡುತ್ತಾ ಇರುವ ಅರಸನಾದ ದಾವೀದನನ್ನು ಕಿಟಿಕಿ ಯಿಂದ ನೋಡಿ ತನ್ನ ಹೃದಯದಲ್ಲಿ ಅವನನ್ನು ಹೀನೈಸಿದಳು.
- 2 Chronicles 29:27 2 ಪೂರ್ವಕಾಲವೃತ್ತಾಂತ 29:27ಹಿಜ್ಕೀಯನು ಬಲಿಪೀಠದ ಮೇಲೆ ದಹನಬಲಿ ಯನ್ನು ಅರ್ಪಿಸಲು ಹೇಳಿದನು. ದಹನಬಲಿಯನ್ನು ಅರ್ಪಿಸಲು ಆರಂಭಿಸಿದಾಗ ತುತೂರಿಗಳಿಂದಲೂ ಇಸ್ರಾಯೇಲಿನ ಅರಸನಾದ ದಾವೀದನ ವಾದ್ಯಗ ಳಿಂದಲೂ ಕರ್ತನ ಹಾಡು ಆರಂಭವಾಯಿತು.
- Matthew 25:34 ಮತ್ತಾಯನು 25:34ಆಗ ಅರಸನು ತನ್ನ ಬಲಗಡೆಯಲ್ಲಿ ರುವವರಿಗೆ--ನನ್ನ ತಂದೆಯಿಂದ ಆಶೀರ್ವಾದ ಹೊಂದಿದವರೇ, ನೀವು ಬನ್ನಿರಿ; ಭೂಲೋಕಕ್ಕೆ ಅಸ್ತಿ ವಾರ ಹಾಕಿದಂದಿನಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಬಾಧ್ಯವಾಗಿ ಹೊಂದಿರಿ;
- Numbers 10:1–10 ಅರಣ್ಯಕಾಂಡ 10:1–10ಕರ್ತನು ಮೋಶೆಗೆ ಹೇಳಿದ್ದೇನೆಂದರೆ ಬೆಳ್ಳಿಯಿಂದ ಎರಡು ತುತೂರಿಗಳನ್ನು ಒಂದೇ ತುಂಡಿನಿಂದ ಮಾಡಿಸಿಕೋ; ಸಭೆಯನ್ನು ಕರೆಯುವದಕ್ಕಾಗಿಯೂ ಪಾಳೆಯಗಳ ಪ್ರಯಾಣಕ್ಕಾ ಗಿಯೂ ನೀನು ಅವುಗಳನ್ನು ಉಪಯೋಗಿಸಬೇಕು. ಅವುಗಳನ್ನು ಊದುವಾಗ ಸಭೆಯೆಲ್ಲಾ ಸಭೆಯ ಗುಡಾರದ ಬಾಗಲ ಬಳಿಯಲ್ಲಿರುವ ನಿನ್ನ ಬಳಿಗೆ ಕೂಡಿಬರಬೇಕು. ಒಂದರಿಂದ ಊದುವಾಗ ಮಾತ್ರ ಇಸ್ರಾಯೇಲಿನ ಸಹಸ್ರಗಳಿಗೆ ಮುಖ್ಯಸ್ಥರಾದ ಪ್ರಧಾ ನರು ನಿನ್ನ ಬಳಿಗೆ ಕೂಡಿಬರಬೇಕು. ನೀವು ಎಚ್ಚರಿಸು ವಂತೆ ಊದುವಾಗ ಪೂರ್ವದಲ್ಲಿ ಇರುವಂತ ಪಾಳೆಯ ಗಳು ಮುಂದೆ ಹೊರಡಬೇಕು. ನೀವು ಎರಡನೇ ಸಾರಿ ಎಚ್ಚರಿಸುವಂತೆ ಊದುವಾಗ ದಕ್ಷಿಣದಲ್ಲಿ ಇರು ವಂತ ಪಾಳೆಯಗಳು ಪ್ರಯಾಣಮಾಡಬೇಕು; ಅವರ ಪ್ರಯಾಣಕ್ಕೆ ಎಚ್ಚರಿಸುವಂತೆ ಊದಬೇಕು. ಸಭೆ ಯನ್ನು ಕೂಡಿಸುವಾಗ ನೀವು ಊದಬೇಕು. ಎಚ್ಚರಿಸು ವಂತೆ ಶಬ್ದಮಾಡಬೇಡಿರಿ. ಯಾಜಕರಾಗಿರುವ ಆರೋನನ ಕುಮಾರರು ತುತೂರಿಗಳನ್ನು ಊದಬೇಕು. ಇವು ನಿಮ್ಮ ಸಂತತಿಗಳಲ್ಲಿ ನಿಮಗೆ ನಿತ್ಯವಾದ ಕಟ್ಟಳೆಯಾಗಿರಬೇಕು. ನಿಮ್ಮ ದೇಶದಲ್ಲಿ ನಿಮ್ಮನ್ನು ಉಪದ್ರಪಡಿಸುವ ವೈರಿಗೆ ವಿರೋಧವಾಗಿ ಯುದ್ಧಕ್ಕೆ ಹೊರಡುವಾಗ ನೀವು ತುತೂರಿಗಳನ್ನು ಎಚ್ಚರಿಸುವಂತೆ ಊದಬೇಕು. ಆಗ ನಿಮ್ಮ ದೇವರಾದ ಕರ್ತನ ಸಮ್ಮುಖದಲ್ಲಿ ನೀವು ಜ್ಞಾಪಕ ಮಾಡಲ್ಪಟ್ಟು ನಿಮ್ಮ ಶತ್ರುಗಳಿಂದ ರಕ್ಷಿಸಲ್ಪಡುವಿರಿ. ನಿಮ್ಮ ಸಂತೋಷದ ದಿವಸದಲ್ಲಿಯೂ ಹಬ್ಬಗಳ ಲ್ಲಿಯೂ ತಿಂಗಳಿನ ಆರಂಭದಲ್ಲಿಯೂ ನಿಮ್ಮ ದಹನ ಬಲಿಗಳನ್ನು ನಿಮ್ಮ ಸಮಾಧಾನದ ಬಲಿಗಳನ್ನು ಅರ್ಪಿಸು ವಾಗ ಅವುಗಳನ್ನು ಊದಬೇಕು. ಅವು ನಿಮಗೆ ನಿಮ್ಮ ದೇವರ ಎದುರಿನಲ್ಲಿ ಜ್ಞಾಪಕವಾಗಿರುವವು. ನಿಮ್ಮ ದೇವರಾಗಿರುವ ಕರ್ತನು ನಾನೇ.
- 2 Chronicles 5:12–13 2 ಪೂರ್ವಕಾಲವೃತ್ತಾಂತ 5:12–13ಯಾಜಕರು ಪರಿಶುದ್ಧ ಸ್ಥಳದಿಂದ ಹೊರ ಟಾಗ ಸಂಗೀತಗಾರರಾಗಿರುವ ಲೇವಿಯರೂ ಆಸಾಫ್, ಹೇಮಾನ್, ಯೆದೂತೂನ್ ಇವರೆಲ್ಲರೂ ಅವರ ಮಕ್ಕಳೂ ಸಹೋದರರೂ ನಾರು ಮಡಿಯನ್ನು ಧರಿಸಿ ಕೊಂಡು ತಾಳ ವೀಣೆ ಕಿನ್ನರಿಗಳನ್ನು ಹಿಡಿದು ಬಲಿ ಪೀಠದ ಮೂಡಣ ಪಾರ್ಶ್ವದಲ್ಲಿ ನಿಂತುಕೊಂಡರು; ಅವರ ಸಂಗಡ ನೂರ ಇಪ್ಪತ್ತು ಮಂದಿ ಯಾಜಕರು ತುತೂರಿಗಳನ್ನು ಊದುತ್ತಾ ಇದ್ದರು. ತುತೂರಿ ಊದುವವರೂ ಸಂಗೀತಗಾರರೂ ಕರ್ತನನ್ನು ಕೊಂಡಾ ಡುತ್ತಾ ಹೊಗಳುತ್ತಾ ಏಕವಾಗಿ ಒಂದೇ ಶಬ್ದ ಮಾಡಿ ದಾಗ ತುತೂರಿ ತಾಳ ಮೊದಲಾದ ಗೀತ ವಾದ್ಯಗಳಿಂದ ತಮ್ಮ ಶಬ್ದವನ್ನೆತ್ತಿ--ಆತನು ಒಳ್ಳೆಯವನೆಂದೂ ಆತನ ಕೃಪೆಯು ಯುಗಯುಗಕ್ಕೂ ಇರುವದೆಂದೂ ಕರ್ತನನ್ನು ಕೀರ್ತಿಸುವಾಗ ಕರ್ತನ ಆಲಯವು ಮೇಘದಿಂದ ತುಂಬಲ್ಪಟ್ಟಿತು.ಮೇಘದ ನಿಮಿತ್ತ ಯಾಜಕರು ಸೇವೆ ಗಾಗಿ ನಿಲ್ಲಲಾರದೆ ಇದ್ದರು; ಕರ್ತನ ಮಹಿಮೆಯು ದೇವರ ಆಲಯವನ್ನು ತುಂಬಿತ್ತು.
- Psalm 47:5–7 ಕೀರ್ತನೆಗಳು 47:5–7ದೇವರು ಮಹಾಧ್ವನಿಯಿಂದ, ಕರ್ತನು ತುತೂ ರಿಯ ಶಬ್ದದಿಂದ, ಮೇಲೆ ಹೋಗಿದ್ದಾನೆ. ದೇವರಿಗೆ ಸ್ತುತಿಗಳನ್ನು ಹಾಡಿರಿ, ಸ್ತುತಿಗಳನ್ನು ಹಾಡಿರಿ; ನಮ್ಮ ಅರಸನಿಗೆ ಸ್ತುತಿಗಳನ್ನು ಹಾಡಿರಿ, ಸ್ತುತಿಗಳನ್ನು ಹಾಡಿರಿ; ದೇವರು ಭೂಮಿಗೆಲ್ಲಾ ಅರಸನು; ತಿಳುವಳಿಕೆಯಿಂದ ಸ್ತುತಿಗಳನ್ನು ಹಾಡಿರಿ.