Psalms · chapter 99 · verse 3
Psalm 99:3 in Kannada
ನಿನ್ನ ಭಯಂಕರವಾದ ಹೆಸರನ್ನು ಅವರು ಕೊಂಡಾ ಡಲಿ; ಅದು ಪರಿಶುದ್ಧವಾದದ್ದೇ.
Ninna bhayankaravaada hesarannu avaru kondaa dali; adu parishuddhavaadadde.
Psalm 99:3 in English
- King James Version (KJV)
- Let them praise thy great and terrible name; [for] it [is] holy.
- World English Bible (WEB)
- Let them praise your great and awesome name. He is Holy!
- American Standard Version (ASV)
- Let them praise thy great and terrible name: Holy is he.
- Bible in Basic English (BBE)
- Let them give praise to your name, for it is great and to be feared; holy is he.
- Darby Translation (DBY)
- They shall praise thy great and terrible name, — it is holy! —
- Webster's Bible (WBS)
- Let them praise thy great and terrible name; [for] it [is] holy.
- Young's Literal Translation (YLT)
- They praise Thy name, 'Great, and fearful, holy [it] is.'
Read in context
- 1ಕರ್ತನು ಆಳುತ್ತಾನೆ; ಜನಗಳು ನಡುಗಲಿ; ಆತನು ಕೆರೂಬಿಗಳ ಮಧ್ಯದಲ್ಲಿ ಕೂತಿ ದ್ದಾನೆ; ಭೂಮಿಯು ಕದಲಲಿ.
- 2ಕರ್ತನು ಚೀಯೋನಿನಲ್ಲಿ ದೊಡ್ಡವನಾಗಿಯೂ ಎಲ್ಲಾ ಜನಗಳ ಮೇಲೆ ಉನ್ನತನಾಗಿಯೂ ಇದ್ದಾನೆ.
- 3ನಿನ್ನ ಭಯಂಕರವಾದ ಹೆಸರನ್ನು ಅವರು ಕೊಂಡಾ ಡಲಿ; ಅದು ಪರಿಶುದ್ಧವಾದದ್ದೇ.
- 4ಅರಸನ ಬಲವು ನ್ಯಾಯವನ್ನು ಪ್ರೀತಿ ಮಾಡುತ್ತದೆ; ನೀನು ನೀತಿಯನ್ನು ಸ್ಥಿರಪಡಿಸುತ್ತೀ; ನ್ಯಾಯವನ್ನೂ ನೀತಿಯನ್ನೂ ಯಾಕೋ ಬಿನಲ್ಲಿ ನೀನು ಮಾಡಿದ್ದೀ.
- 5ನಮ್ಮ ದೇವರಾದ ಕರ್ತ ನನ್ನು ಉನ್ನತಪಡಿಸಿರಿ; ಆತನ ಪಾದ ಪೀಠದಲ್ಲಿ ಆರಾ ಧಿಸಿರಿ; ಆತನು ಪರಿಶುದ್ಧನೇ.
Cross references
- Isaiah 6:3 ಯೆಶಾಯ 6:3ಒಬ್ಬನು ಮತ್ತೊಬ್ಬನಿಗೆ--ಸೈನ್ಯಗಳ ಕರ್ತನು ಪರಿ ಶುದ್ಧನು, ಪರಿಶುದ್ಧನು, ಪರಿಶುದ್ಧನು, ಭೂಮಂಡಲ ವೆಲ್ಲಾ ಆತನ ಮಹಿಮೆಯಿಂದ ತುಂಬಿಯದೆ ಎಂದು ಕೂಗಿ ಹೇಳಿದನು.
- Deuteronomy 28:58 ಧರ್ಮೋಪದೇಶಕಾಂಡ 28:58ನಿನ್ನ ದೇವರಾದ ಕರ್ತನೆಂಬ ಈ ಘನವುಳ್ಳ ಭಯಂಕರವಾದ ಹೆಸರಿಗೆ ಭಯಪಡಬೇಕೆಂದು ಈ ಪುಸ್ತಕದಲ್ಲಿ ಬರೆದಿರುವ ಈ ನ್ಯಾಯಪ್ರಮಾಣದ ಮಾತುಗಳನ್ನು ಕಾಪಾಡದೆ, ಕೈಕೊಳ್ಳದೆ ಹೋದರೆ
- Revelation 15:3–4 ಪ್ರಕಟನೆ 15:3–4ಅವರು ದೇವರ ಸೇವಕನಾದ ಮೋಶೆಯ ಹಾಡನ್ನೂ ಕುರಿಮರಿಯಾದಾತನ ಹಾಡನ್ನೂ ಹಾಡುತ್ತಾ--ಸರ್ವಶಕ್ತನಾಗಿರುವ ದೇವ ರಾದ ಕರ್ತನೇ, ನಿನ್ನ ಕ್ರಿಯೆಗಳು ಮಹತ್ತಾದವುಗಳೂ ಆಶ್ಚರ್ಯಕರವಾದವುಗಳೂ ಆಗಿವೆ; ಪರಿಶುದ್ಧರ ಅರಸನೇ, ನಿನ್ನ ಮಾರ್ಗಗಳು ನ್ಯಾಯವೂ ಸತ್ಯವೂ ಆಗಿವೆ. ಓ ಕರ್ತನೇ, ನಿನಗೆ ಭಯಪಡದವರೂ ನಿನ್ನ ನಾಮವನ್ನು ಮಹಿಮೆಪಡಿಸದವರೂ ಯಾರಿ ದ್ದಾರೆ? ಯಾಕಂದರೆ ನೀನೊಬ್ಬನೇ ಪರಿಶುದ್ಧನು; ನಿನ್ನ ತೀರ್ಪುಗಳು ಪ್ರಕಟವಾದದ್ದರಿಂದ ಎಲ್ಲಾ ಜನಾಂಗ ಗಳು ಬಂದು ನಿನ್ನ ಸನ್ನಿಧಾನದಲ್ಲಿ ಆರಾಧಿಸುವರು ಎಂದು ಹೇಳಿದರು.
- Psalm 111:9 ಕೀರ್ತನೆಗಳು 111:9ತನ್ನ ಜನರಿಗೆ ವಿಮೋಚನೆಯನ್ನು ಕಳುಹಿ ಸಿದನು; ಯುಗಯುಗಕ್ಕೂ ತನ್ನ ಒಡಂಬಡಿಕೆಯನ್ನು ಆಜ್ಞಾಪಿಸಿದನು; ಆತನ ಹೆಸರು ಪರಿಶುದ್ಧವೂ ಘನವೂ ಆಗಿದೆ.ಕರ್ತನ ಭಯವು ಜ್ಞಾನದ ಮೂಲವು; ಆತನ ಆಜ್ಞೆಗಳನ್ನು ಕೈಕೊಳ್ಳುವವರಿಗೆ ತಿಳುವಳಿಕೆಯಿದೆ; ಆತನ ಸ್ತೋತ್ರವು ಎಂದೆಂದಿಗೂ ನಿಲ್ಲುತ್ತದೆ.
- Psalm 66:3 ಕೀರ್ತನೆಗಳು 66:3ದೇವರಿಗೆ--ನಿನ್ನ ಕೆಲಸಗಳಿಂದ ನೀನು ಎಷ್ಟು ಭಯಂಕರನಾಗಿದ್ದೀ ಎಂದು ಹೇಳಿರಿ. ನಿನ್ನ ಮಹಾಬಲದ ನಿಮಿತ್ತ ನಿನ್ನ ಶತ್ರುಗಳು ತಾವೇ ನಿನಗೆ ಅಧೀನರಾಗುವರು;
- Deuteronomy 7:21 ಧರ್ಮೋಪದೇಶಕಾಂಡ 7:21ಅವರಿಗೆ ಹೆದರಬೇಡ, ನಿನ್ನ ದೇವರಾದ ಕರ್ತನು ಭಯಂಕರನಾದ ದೊಡ್ಡ ದೇವರಾಗಿ ನಿನ್ನ ಮಧ್ಯದಲ್ಲಿದ್ದಾನೆ.
- Revelation 4:8 ಪ್ರಕಟನೆ 4:8ಆ ನಾಲ್ಕು ಜೀವಿಗಳೊಳಗೆ ಒಂದೊಂದಕ್ಕೆ ಆರಾರು ರೆಕ್ಕೆಗಳಿದ್ದವು; ಅವುಗಳಿಗೆ ತುಂಬಾ ಕಣ್ಣುಗಳಿದ್ದವು; ಆ ಜೀವಿಗಳು ಹಗಲಿರುಳು ವಿಶ್ರಮಿಸಿಕೊಳ್ಳದೆ-- ಇದ್ದಾತನು ಇರುವಾತನೂ ಬರುವಾತನೂ ಸರ್ವಶಕ್ತ ನಾಗಿರುವ ದೇವರಾದ ಕರ್ತನು ಪರಿಶುದ್ಧನು ಪರಿ ಶುದ್ಧನು ಪರಿಶುದ್ಧನು ಎಂದು ಹೇ
- John 17:11 ಯೋಹಾನನು 17:11ಇನ್ನು ಮೇಲೆ ನಾನು ಲೋಕದಲ್ಲಿ ಇರುವದಿಲ್ಲ; ಆದರೆ ಇವರು ಲೋಕದಲ್ಲಿದ್ದಾರೆ; ನಾನು ನಿನ್ನ ಬಳಿಗೆ ಬರುತ್ತೇನೆ. ಪರಿಶುದ್ಧನಾದ ತಂದೆಯೇ, ನಾವು ಒಂದಾಗಿರುವ ಹಾಗೆಯೇ ಅವರು ಸಹ ಒಂದಾಗಿರುವಂತೆ ನೀನು ನನಗೆ ಕೊಟ್ಟಿರುವವರನ್ನು ನಿನ್ನ ಸ್ವಂತ ಹೆಸರಿನಲ್ಲಿ ಕಾಪಾಡು.
- Nehemiah 1:5 ನೆಹೆಮೀಯ 1:5ಓ ಪರಲೋ ಕದ ದೇವರಾದ ಕರ್ತನೇ, ನಿನ್ನನ್ನು ಪ್ರೀತಿಮಾಡಿ ನಿನ್ನ ಆಜ್ಞೆಗಳನ್ನು ಕೈಕೊಳ್ಳುವವರಿಗೆ ಒಡಂಬಡಿಕೆಯನ್ನೂ ಕೃಪೆಯನ್ನೂ ಕೈಕೊಳ್ಳುವವನಾದ ಮತ್ತು ಭಯಂಕರವುಳ್ಳ ದೇವರೇ,
- Psalm 145:17 ಕೀರ್ತನೆಗಳು 145:17ಕರ್ತನು ತನ್ನ ಎಲ್ಲಾ ಮಾರ್ಗಗಳಲ್ಲಿ ನೀತಿವಂತನೂ ತನ್ನ ಎಲ್ಲಾ ಕೆಲಸಗಳಲ್ಲಿ ಪರಿಶುದ್ಧನೂ ಆಗಿದ್ದಾನೆ.
- Nehemiah 4:14 ನೆಹೆಮೀಯ 4:14ನಾನು ನೋಡಿದ ತರುವಾಯ ಎದ್ದು ಶ್ರೇಷ್ಠರಿಗೂ ಅಧಿಕಾರ ಸ್ಥರಿಗೂ ಇತರ ಜನರಿಗೂ--ನೀವು ಅವರಿಗೋಸ್ಕರ ಭಯಪಡಬೇಡಿರಿ; ದೊಡ್ಡವನಾಗಿಯೂ ಭಯಂಕರ ನಾಗಿಯೂ ಇರುವ ಕರ್ತನನ್ನು ಜ್ಞಾಪಕಮಾಡಿ ಕೊಂಡು ನಿಮ್ಮ ಸಹೋದರರಿಗೋಸ್ಕರ, ಕುಮಾರ, ಕುಮಾರ್ತೆಯರಿಗೋಸ್ಕರ, ಹೆಂಡತಿಯರಿಗೋಸ್ಕರ, ನಿಮ್ಮ ಮನೆಗಳಿಗೋಸ್ಕರ ಯುದ್ಧಮಾಡಿರಿ ಅಂದೆನು.
- Joshua 24:19 ಯೆಹೋಶುವ 24:19ಅದಕ್ಕೆ ಯೆಹೋ ಶುವನು ಜನರಿಗೆ--ನೀವು ಕರ್ತನನ್ನು ಸೇವಿಸಲಾರಿರಿ; ಯಾಕಂದರೆ ಆತನು ಪರಿಶುದ್ಧನಾದ ದೇವರು, ರೋಷ ವುಳ್ಳ ದೇವರು; ಆತನು ನಿಮ್ಮ ದ್ರೋಹಗಳನ್ನೂ ಪಾಪಗಳನ್ನೂ ಮನ್ನಿಸನು.