Psalms · chapter 99 · verse 2
Psalm 99:2 in Kannada
ಕರ್ತನು ಚೀಯೋನಿನಲ್ಲಿ ದೊಡ್ಡವನಾಗಿಯೂ ಎಲ್ಲಾ ಜನಗಳ ಮೇಲೆ ಉನ್ನತನಾಗಿಯೂ ಇದ್ದಾನೆ.
Kartanu cheeyoninalli doddavanaagiyoo ellaa janagala mele unnatanaagiyoo iddaane.
Psalm 99:2 in English
- King James Version (KJV)
- The LORD [is] great in Zion; and he [is] high above all the people.
- World English Bible (WEB)
- The LORD is great in Zion. He is high above all the peoples.
- American Standard Version (ASV)
- Jehovah is great in Zion; And he is high above all the peoples.
- Bible in Basic English (BBE)
- The Lord is great in Zion; he is high over all the nations.
- Darby Translation (DBY)
- Jehovah is great in Zion, and he is high above all the peoples.
- Webster's Bible (WBS)
- The LORD [is] great in Zion; and he [is] high above all people.
- Young's Literal Translation (YLT)
- Jehovah in Zion [is] great, And high He [is] over all the peoples.
Read in context
- 1ಕರ್ತನು ಆಳುತ್ತಾನೆ; ಜನಗಳು ನಡುಗಲಿ; ಆತನು ಕೆರೂಬಿಗಳ ಮಧ್ಯದಲ್ಲಿ ಕೂತಿ ದ್ದಾನೆ; ಭೂಮಿಯು ಕದಲಲಿ.
- 2ಕರ್ತನು ಚೀಯೋನಿನಲ್ಲಿ ದೊಡ್ಡವನಾಗಿಯೂ ಎಲ್ಲಾ ಜನಗಳ ಮೇಲೆ ಉನ್ನತನಾಗಿಯೂ ಇದ್ದಾನೆ.
- 3ನಿನ್ನ ಭಯಂಕರವಾದ ಹೆಸರನ್ನು ಅವರು ಕೊಂಡಾ ಡಲಿ; ಅದು ಪರಿಶುದ್ಧವಾದದ್ದೇ.
- 4ಅರಸನ ಬಲವು ನ್ಯಾಯವನ್ನು ಪ್ರೀತಿ ಮಾಡುತ್ತದೆ; ನೀನು ನೀತಿಯನ್ನು ಸ್ಥಿರಪಡಿಸುತ್ತೀ; ನ್ಯಾಯವನ್ನೂ ನೀತಿಯನ್ನೂ ಯಾಕೋ ಬಿನಲ್ಲಿ ನೀನು ಮಾಡಿದ್ದೀ.
Cross references
- Psalm 97:9 ಕೀರ್ತನೆಗಳು 97:9ಕರ್ತನೇ, ನೀನು ಸಮಸ್ತ ಭೂಮಿಯ ಮೇಲೆ ಮಹೋನ್ನತನಾಗಿದ್ದೀ; ಎಲ್ಲಾ ದೇವರುಗಳ ಮೇಲೆ ಬಹಳವಾಗಿ ಹೆಚ್ಚಿಸಲ್ಪಟ್ಟಿದ್ದೀ.
- Isaiah 14:32 ಯೆಶಾಯ 14:32ಆಗ ಜನಾಂಗಗಳ ದೂತರಿಗೆ ಯಾವ ಉತ್ತರವನ್ನು ಕೊಡ ಬೇಕೆಂದರೆ? ಕರ್ತನು ಚೀಯೋನನ್ನು ಸ್ಥಾಪಿಸಿದ್ದಾನೆ, ಆತನ ಜನರಲ್ಲಿನ ಬಡವರು ಅದನ್ನು ಆಶ್ರಯಿಸಿ ಕೊಳ್ಳುವರು ಎಂಬದೇ.
- Psalm 50:2 ಕೀರ್ತನೆಗಳು 50:2ಸೌಂದರ್ಯದ ಪರಿಪೂರ್ಣತೆಯಾದ ಚೀಯೋನಿ ನಿಂದ ದೇವರು ಪ್ರಕಾಶಿಸಿದ್ದಾನೆ.
- James 4:6–7 ಯಾಕೋಬನು 4:6–7ಆತನು ಹೆಚ್ಚಾದ ಕೃಪೆಯನ್ನು ಕೊಡುತ್ತಾನೆ. ಆದದರಿಂದ--ದೇವರು ಅಹಂಕಾರಿಗಳನ್ನು ಎದುರಿಸು ತ್ತಾನೆ, ದೀನರಿಗಾದರೋ ಕೃಪೆಯನ್ನು ಅನುಗ್ರಹಿಸು ತ್ತಾನೆ ಎಂದು ಆತನು ಹೇಳುತ್ತಾನೆ. ಹೀಗಿರಲಾಗಿ ದೇವರಿಗೆ ಒಳಗಾಗಿರಿ. ಸೈತಾನನನ್ನು ಎದುರಿಸಿರಿ, ಆಗ ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು.
- Isaiah 12:6 ಯೆಶಾಯ 12:6ಚೀಯೋನಿನ ನಿವಾಸಿಗಳೇ, ಆರ್ಭಟಿಸಿ ಹರ್ಷಧ್ವನಿಯನ್ನು ಗೈಯಿರಿ; ಇಸ್ರಾಯೇಲಿನ ಪರಿಶು ದ್ಧನು ನಿನ್ನ ಮಧ್ಯದಲ್ಲಿ ಮಹತ್ವವುಳ್ಳವನಾಗಿದ್ದಾನೆ.
- Psalm 66:7 ಕೀರ್ತನೆಗಳು 66:7ಆತನು ತನ್ನ ಪರಾಕ್ರಮ ದಿಂದ ಎಂದೆಂದಿಗೂ ಆಳುವವನಾಗಿದ್ದಾನೆ; ಆತನ ಕಣ್ಣುಗಳು ಜನಾಂಗಗಳನ್ನು ದೃಷ್ಟಿಸುತ್ತವೆ; ಎದುರು ಬೀಳುವವರು ತಮ್ಮನ್ನು ತಾವೇ ಹೆಚ್ಚಿಸಿಕೊಳ್ಳದೆ ಇರಲಿ. ಸೆಲಾ.
- Psalm 48:1–3 ಕೀರ್ತನೆಗಳು 48:1–3ನಮ್ಮ ದೇವರ ಪಟ್ಟಣದಲ್ಲಿ ಆತನ ಪರಿಶುದ್ಧ ಪರ್ವತದಲ್ಲಿ ಕರ್ತನು ದೊಡ್ಡ ವನೂ ಬಹಳವಾಗಿ ಸ್ತುತಿಸಲ್ಪಡುವಾತನೂ ಆಗಿದ್ದಾನೆ. ಉತ್ತರದ ಪಾರ್ಶ್ವಗಳಲ್ಲಿ ದೊಡ್ಡ ಅರಸನ ಪಟ್ಟಣವಾದ ಚೀಯೋನ್ ಪರ್ವತವು ರಮಣೀಯವಾ ದದ್ದೂ ಎಲ್ಲಾ ಭೂಮಿಗೆ ಸಂತೋಷಕರವಾದದ್ದೂ ಆಗಿದೆ. ದೇವರು ಅದರ ಅರಮನೆಗಳಲ್ಲಿ ಆಶ್ರಯ ವೆಂದು ಗೊತ್ತಾಗಿದೆ.
- Psalm 113:4 ಕೀರ್ತನೆಗಳು 113:4ಕರ್ತನು ಎಲ್ಲಾ ಜನಾಂಗಗಳ ಮೇಲೆ ಉನ್ನತವಾದವನು; ಆತನ ಮಹಿಮೆಯು ಆಕಾ ಶಗಳ ಮೇಲೆ ಇದೆ.
- Hebrews 12:22–24 ಇಬ್ರಿಯರಿಗೆ 12:22–24ಆದರೆ ನೀವು ಚೀಯೋನ್ ಪರ್ವತಕ್ಕೂ ಜೀವಸ್ವರೂಪನಾದ ದೇವರ ಪಟ್ಟಣವಾಗಿರುವ ಪರಲೋಕದ ಯೆರೂಸಲೇಮಿಗೂ ಎಣಿಸಲಸಾಧ್ಯವಾದ ದೂತ ಗಣಗಳ ಬಳಿಗೂ ಪರ ಲೋಕದಲ್ಲಿ ಹೆಸರು ಬರೆಸಿಕೊಂಡಿರುವ ಸಾರ್ವತ್ರಿಕ ಸಂಘಕ್ಕೂ ಚೊಚ್ಚಲ ಮಕ್ಕಳ ಸಭೆಗೂ ಎಲ್ಲರಿಗೆ ನ್ಯಾಯಾ ಧಿಪತಿಯಾಗಿರುವ ದೇವರ ಬಳಿಗೂ ಸಿದ್ದಿಗೆ ಬಂದಿರುವ ನೀತಿವಂತರ ಆತ್ಮಗಳ ಬಳಿಗೂ ಹೊಸಒಡಂಬಡಿಕೆಗೆ ಮಧ್ಯಸ್ಥನಾಗಿರುವ ಯೇಸುವಿನ ಬಳಿಗೂ ಹೇಬೆಲನ ರಕ್ತಕ್ಕಿಂತ ಹಿತಕರವಾಗಿ ಮಾತನಾಡುವ ಪ್ರೋಕ್ಷಣ ರಕ್ತದ ಬಳಿಗೂ ಬಂದಿದ್ದೀರಿ.
- Revelation 14:1–5 ಪ್ರಕಟನೆ 14:1–5ಆಗ ಇಗೋ, ಕುರಿಮರಿಯಾದಾತನು ಚೀಯೋನ್ ಪರ್ವತದ ಮೇಲೆ ನಿಂತಿರು ವದನ್ನು ನಾನು ಕಂಡೆನು. ಆತನ ಜೊತೆಯಲ್ಲಿ ಒಂದು ಲಕ್ಷ ನಾಲ್ವತ್ತುನಾಲ್ಕು ಸಾವಿರ ಮಂದಿ ಇದ್ದರು; ಅವರ ಹಣೆಗಳ ಮೇಲೆ ಆತನ ತಂದೆಯ ಹೆಸರು ಬರೆಯ ಲ್ಪಟ್ಟಿತು. ಇದಲ್ಲದೆ ಪರಲೋಕದ ಕಡೆಯಿಂದ ಬಹಳ ನೀರುಗಳಂತೆಯೂ ಮಹಾಗುಡುಗಿನಂತೆಯೂ ಇದ್ದ ಶಬ್ದವನ್ನು ನಾನು ಕೇಳಿದೆನು. ತಮ್ಮ ವೀಣೆಗಳನ್ನು ಬಾರಿಸುತ್ತಿದ್ದ ವೀಣೆಗಾರರ ಸ್ವರವನ್ನೂ ನಾನು ಕೇಳಿದೆನು. ಅವರು ಸಿಂಹಾಸನದ ಮುಂದೆಯೂ ಆ ನಾಲ್ಕು ಜೀವಿಗಳ ಮತ್ತು ಹಿರಿಯರ ಮುಂದೆಯೂ ಹೊಸ ಹಾಡಿನಂತಿದ್ದ ಹಾಡನ್ನು ಅವರು ಹಾಡಿದರು. ಭೂ ಲೋಕದೊಳಗಿಂದ ವಿಮೋಚಿಸಲ್ಪಟ್ಟ ಆ ಲಕ್ಷದ ನಾಲ್ವತ್ತು ನಾಲ್ಕು ಸಾವಿರ ಜನರೇ ಹೊರತು ಬೇರೆ ಯಾರೂ ಆ ಹಾಡನ್ನು ಕಲಿಯಲಾರರು. ಸ್ತ್ರೀಯ ರೊಂದಿಗೆ ಮಲಿನರಾಗದವರು ಇವರೇ. ಯಾಕಂದರೆ ಇವರು ಕನ್ನಿಕೆಯರು. ಕುರಿಮರಿಯಾದಾತನು ಎಲ್ಲಿಗೆ ಹೋದರೂ ಆತನ ಹಿಂದೆ ಹೋಗುವವರು ಇವರೇ. ದೇವರಿಗೂ ಕುರಿಮರಿಯಾದಾತನಿಗೂ ಪ್ರಥಮ ಫಲ ವಾಗಿರುವ ಇವರು ಮನುಷ್ಯರೊಳಗಿಂದ ವಿಮೋಚಿಸ ಲ್ಪಟ್ಟವರು. ಇವರ ಬಾಯಲ್ಲಿ ವಂಚನೆ ಸಿಕ್ಕಲಿಲ್ಲ; ಯಾಕಂದರೆ ಇವರು ದೇವರ ಸಿಂಹಾಸನದ ಮುಂದೆ ನಿರ್ದೋಷಿಗಳಾಗಿದ್ದಾರೆ.
- Daniel 4:34–35 ದಾನಿಯೇಲನು 4:34–35ಆ ಕೊನೆಯ ದಿನಗಳಲ್ಲಿ ನೆಬೂಕದ್ನೆಚ್ಚರನಾದ ನಾನು ನನ್ನ ಕಣ್ಣುಗಳನ್ನು ಪರ ಲೋಕದ ಕಡೆಗೆ ಎತ್ತಿದೆನು; ನನ್ನ ತಿಳುವಳಿಕೆ ನನಗೆ ತಿರುಗಿ ಬಂತು; ಆಗ ನಾನು ಮಹೋನ್ನತನನ್ನು ಸ್ತುತಿಸಿ ನಿರಂತರವಾಗಿ ಜೀವಿಸುವಾತನೂ ನಿತ್ಯವಾದ ಆಳ್ವಿಕೆ ಯನ್ನು ಆಳುವಾತನನ್ನು ತಲತಲಾಂತರಗಳ ವರೆಗೂ ರಾಜ್ಯ ಉಳ್ಳಾತನನ್ನು ಹೊಗಳಿ ಘನಪಡಿಸಿದೆನು. ಭೂ ನಿವಾಸಿಗಳೆಲ್ಲರೂ ಏನೂ ಇಲ್ಲದ ಹಾಗೆ ಎಣಿಸಲ್ಪಟ್ಟಿ ದ್ದಾರೆ; ಆತನು ಪರಲೋಕದ ಸೈನ್ಯದಲ್ಲಿಯೂ ಭೂ ನಿವಾಸಿಗಳಲ್ಲಿಯೂ ತನ್ನ ಚಿತ್ತದ ಪ್ರಕಾರವೇ ಮಾಡು ತ್ತಾನೆ. ಯಾರೂ ಆತನ ಹಸ್ತವನ್ನು ಹಿಂತೆಗೆಯಲಾರರು; ನೀನು ಏನು ಮಾಡುತ್ತಿರುವಿ ಎಂದು ಆತನಿಗೆ ಯಾರೂ ಕೇಳಲಾರರು.
- Psalm 76:1–2 ಕೀರ್ತನೆಗಳು 76:1–2ದೇವರು ಯೆಹೂದದಲ್ಲಿ ಪ್ರಸಿದ್ಧವಾಗಿದ್ದಾನೆ; ಇಸ್ರಾಯೇಲಿನಲ್ಲಿ ಆತನ ಹೆಸರು ದೊಡ್ಡದಾಗಿದೆ. ಸಾಲೇಮಿನಲ್ಲಿ ಆತನ ಗುಡಾರವೂ ಚೀಯೋನಿನಲ್ಲಿ ಆತನ ವಾಸಸ್ಥಾನವೂ ಉಂಟು.