Revelation · chapter 2 · verse 3
Revelation 2:3 in Kannada
ನೀನು ಸಹಿಸಿ ಕೊಂಡು ತಾಳ್ಮೆಯುಳ್ಳವನಾಗಿ ನನ್ನ ಹೆಸರಿನ ನಿಮಿತ್ತ ಪ್ರಯಾಸಪಟ್ಟು ಬೇಸರಗೊಳ್ಳಲಿಲ್ಲ.
Neenu sahisi kondu taalmeyullavanaagi nanna hesarina nimitta prayaasapattu besaragollalilla.
Revelation 2:3 in English
- King James Version (KJV)
- And hast borne, and hast patience, and for my name’s sake hast laboured, and hast not fainted.
- World English Bible (WEB)
- You have perseverance and have endured for my name’s sake, and have not grown weary.
- American Standard Version (ASV)
- and thou hast patience and didst bear for my name’s sake, and hast not grown weary.
- Bible in Basic English (BBE)
- And you have the power of waiting, and have undergone trouble because of my name, without weariness.
- Darby Translation (DBY)
- and endurest, and hast borne for my name's sake, and hast not wearied:
- Webster's Bible (WBS)
- And hast borne, and hast patience, and for my name's sake hast labored, and hast not fainted.
- Young's Literal Translation (YLT)
- and thou didst bear, and hast endurance, and because of my name hast toiled, and hast not been weary.
Read in context
- 1ಎಫೆಸದಲ್ಲಿರುವ ಸಭೆಯ ದೂತನಿಗೆ ಬರೆ: ಏಳು ನಕ್ಷತ್ರಗಳನ್ನು ತನ್ನ ಬಲಗೈಯಲ್ಲಿ ಹಿಡುಕೊಂಡು ಏಳು ಚಿನ್ನದ ದೀಪ ಸ್ತಂಭಗಳ ಮಧ್ಯದಲ್ಲಿ ತಿರುಗಾಡುವಾತನು ಈ ವಿಷಯಗಳನ್ನು ಹೇಳುತ್ತಾನೆ.
- 2ನಿನ್ನ ಕ್ರಿಯೆಗಳನ್ನೂ ಪ್ರಯಾಸವನ್ನೂ ತಾಳ್ಮೆಯನ್ನೂ ನಾನು ಬಲ್ಲೆನು; ನೀನು ದುಷ್ಟರನ್ನು ಸಹಿಸಲಾರಿ; ಅಪೊಸ್ತಲರಲ್ಲದಿದ್ದರೂ ತಮ್ಮನ್ನು ಅಪೊಸ್ತಲರೆಂದು ಹೇಳಿಕೊಳ್ಳುವವರನ್ನು, ನೀನು ಪರೀಕ್ಷಿಸಿ ಅವರನ್ನು ಸುಳ್ಳುಗಾರರೆಂದು ಕಂಡುಕೊಂಡಿ;
- 3ನೀನು ಸಹಿಸಿ ಕೊಂಡು ತಾಳ್ಮೆಯುಳ್ಳವನಾಗಿ ನನ್ನ ಹೆಸರಿನ ನಿಮಿತ್ತ ಪ್ರಯಾಸಪಟ್ಟು ಬೇಸರಗೊಳ್ಳಲಿಲ್ಲ.
- 4ಆದಾಗ್ಯೂ ನಿನ್ನಲ್ಲಿ ನನಗೆ ವಿರೋಧವಾದದ್ದು ಇದೆ. ಯಾಕಂದರೆ ನೀನು ನಿನ್ನ ಮೊದಲಿನ ಪ್ರೀತಿಯನ್ನು ಬಿಟ್ಟುಬಿಟ್ಟಿದ್ದೀ.
- 5ಆದದ ರಿಂದ ನೀನು ಎಲ್ಲಿಂದ ಬಿದ್ದಿದ್ದೀಯೋ ಅದನ್ನು ನಿನ್ನ ನೆನಪಿಗೆ ತಂದುಕೊಂಡು ಮಾನಸಾಂತರಪಡು. ನೀನು ಮೊದಲು ಮಾಡುತ್ತಿದ್ದ ಕ್ರಿಯೆಗಳನ್ನು ಮಾಡು. ನೀನು ಮಾನಸಾಂತರಪಡದೆ ಹೋದರೆ ನಾನು ನಿನ್ನ ಬಳಿಗೆ ಬೇಗನೆ ಬಂದು ನಿನ್ನ ದೀಪ ಸ್ತಂಭವನ್ನು ಅದರ ಸ್ಥಳದಿಂದ ತೆಗೆದುಹಾಕುವೆನು
Cross references
- Hebrews 10:36 ಇಬ್ರಿಯರಿಗೆ 10:36ದೇವರ ಚಿತ್ತವನ್ನು ನೆರವೇರಿಸಿದ ಮೇಲೆ ವಾಗ್ದಾನವನು ಹೊಂದುವಂತೆ ನಿಮಗೆ ತಾಳ್ಮೆಯು ಅವಶ್ಯವಾಗಿದೆ.
- James 5:7–11 ಯಾಕೋಬನು 5:7–11ಸಹೋದರರೇ, ಕರ್ತನು ಬರುವ ತನಕ ದೀರ್ಘ ಶಾಂತಿಯಿಂದಿರ್ರಿ. ವ್ಯವಸಾಯಗಾರನನ್ನು ನೋಡಿರಿ; ಅವನು ಭೂಮಿಯ ಅಮೂಲ್ಯವಾದ ಫಲಕ್ಕಾಗಿ ಕಾದಿದ್ದು ಮುಂಗಾರು ಹಿಂಗಾರು ಮಳೆಗಳು ಬರುವ ತನಕ ದೀರ್ಘಶಾಂತಿಯಿಂದಿರುವನು. ನೀವೂ ದೀರ್ಘಶಾಂತಿಯಿಂದಿರ್ರಿ; ನಿಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳಿರಿ, ಯಾಕಂದರೆ ಕರ್ತನ ಪ್ರತ್ಯ ಕ್ಷತೆಯು ಹತ್ತಿರವಾಯಿತು. ಸಹೋದರರೇ, ನೀವು ಒಬ್ಬರನ್ನೊಬ್ಬರು ದ್ವೇಷಿಸಬೇಡಿರಿ; ನ್ಯಾಯವಿಚಾರಣೆಗೆ ಗುರಿಯಾದೀರಿ. ಅಗೋ, ನ್ಯಾಯಾಧಿಪತಿಯು ಬಾಗಲಿನ ಮುಂದೆಯೇ ನಿಂತಿದ್ದಾನೆ. ನನ್ನ ಸಹೋದರರೇ, ಬಾಧೆಯನ್ನು ತಾಳ್ಮೆಯಿಂದ ಸಹಿಸಿ ಕೊಳ್ಳುವ ವಿಷಯದಲ್ಲಿ ಕರ್ತನ ಹೆಸರಿನಿಂದ ಮಾತ ನಾಡಿದ ಪ್ರವಾದಿಗಳನ್ನೇ ಮಾದರಿ ಮಾಡಿಕೊಳ್ಳಿರಿ. ಇಗೋ, ತಾಳಿಕೊಳ್ಳುವವರನ್ನು ಧನ್ಯರೆಂದು ನಾವು ಎಣಿಸುತ್ತೇವಲ್ಲವೇ. ನೀವು ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ ಕರ್ತನು ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ನೋಡಿ ಕರ್ತನು ಬಹಳ ಕರುಣೆಯುಳ್ಳ ವನೂ ದಯಾಳುವೂ ಆಗಿದ್ದಾನೆಂದು ತಿಳಿದಿದ್ದೀರಷ್ಟೆ.
- Galatians 6:9 ಗಲಾತ್ಯದವರಿಗೆ 6:9ಒಳ್ಳೆದನ್ನು ಮಾಡುವದರಲ್ಲಿ ಬೇಸರ ಗೊಳ್ಳದೆ ಇರೋಣ. ಯಾಕಂದರೆ ನಾವು ಮನಗುಂದ ದಿದ್ದರೆ ತಕ್ಕ ಸಮಯದಲ್ಲಿ ಕೊಯ್ಯುವೆವು.
- Hebrews 12:1 ಇಬ್ರಿಯರಿಗೆ 12:1ಆದಕಾರಣ ಸಾಕ್ಷಿಯವರ ಇಷ್ಟು ದೊಡ್ಡ ಮೇಘವು ನಮ್ಮ ಸುತ್ತಲು ಇರುವದರಿಂದ ಎಲ್ಲಾ ಭಾರವನ್ನೂ ಸುಲಭವಾಗಿ ಮುತ್ತಿ ಕೊಳ್ಳುವ ಪಾಪವನ್ನೂ ನಾವು ತೆಗೆದಿಟ್ಟು
- James 1:3–4 ಯಾಕೋಬನು 1:3–4ನಿಮ್ಮ ನಂಬಿಕೆಗೆ ಆಗುವ ಪರಿಶೋಧನೆಯು ತಾಳ್ಮೆಯನ್ನುಂಟು ಮಾಡುತ್ತದೆಂದು ನೀವು ತಿಳಿಯಿರಿ. ಆ ತಾಳ್ಮೆಯು ಸಿದ್ದಿಗೆ ಬಂದಾಗ ನೀವು ಸಂಪೂರ್ಣರೂ ಸಿದ್ಧವಾದವರೂ ಯಾವದರ ಲ್ಲಿಯೂ ಕಡಿಮೆಯಿಲ್ಲದವರೂ ಆಗಿರುವಿರಿ.
- Colossians 1:11 ಕೊಲೊಸ್ಸೆಯವರಿಗೆ 1:11ಆತನ ಮಹಿಮಾ ಶಕ್ತಿಯ ಪ್ರಕಾರ ಪರಿಪೂರ್ಣ ಬಲಹೊಂದಿ ಬಲಿಷರಾಗಿ ಆನಂದ ಪೂರ್ವಕವಾದ ತಾಳ್ಮೆಯನ್ನು ಮತ್ತು ದೀರ್ಘಶಾಂತಿಯನ್ನು ತೋರಿಸುವವರೂ
- Hebrews 6:12 ಇಬ್ರಿಯರಿಗೆ 6:12ಹೀಗೆ ನೀವು ಮೈಗಳ್ಳರಾಗಿರದೆ ನಂಬಿಕೆಯಿಂದಲೂ ತಾಳ್ಮೆ ಯಿಂದಲೂ ವಾಗ್ದಾನಗಳನ್ನು ಬಾಧ್ಯವಾಗಿ ಹೊಂದುವ ವರನ್ನು ಅನುಸರಿಸುವವರಾಗಿರುವಿರಿ.
- Hebrews 6:15 ಇಬ್ರಿಯರಿಗೆ 6:15ಹೀಗೆ ಅವನು ತಾಳ್ಮೆಯಿಂದ ಕಾದಿದ್ದು ವಾಗ್ದಾನವನ್ನು ಹೊಂದಿದನು.
- John 15:21 ಯೋಹಾನನು 15:21ಆದರೆ ಅವರು ನನ್ನನ್ನು ಕಳುಹಿಸಿದಾತನನ್ನು ತಿಳಿಯದಿರುವದರಿಂದ ನನ್ನ ಹೆಸ ರಿನ ನಿಮಿತ್ತ ಇವುಗಳನ್ನೆಲ್ಲಾ ನಿಮಗೆ ಮಾಡುವರು.
- 1 Timothy 4:10 1 ತಿಮೊಥೆಯನಿಗೆ 4:10ಆದದರಿಂದ ಇದಕ್ಕಾಗಿ ನಾವು ಕಷ್ಟಪಡುವವರೂ ನಿಂದೆಯನ್ನನುಭವಿಸುವವರೂ ಆಗಿದ್ದೇವೆ; ಯಾಕಂದರೆ ಎಲ್ಲಾ ಮನುಷ್ಯರಿಗೆ ವಿಶೇಷವಾಗಿ ನಂಬುವವರಿಗೆ ರಕ್ಷಕನಾಗಿರುವ ಜೀವವುಳ್ಳ ದೇವರನ್ನು ನಾವು ನಂಬಿ ದ್ದೇವೆ.
- Psalm 37:7 ಕೀರ್ತನೆಗಳು 37:7ಕರ್ತನಲ್ಲಿ ಶಾಂತವಾಗಿರು; ಮೌನವಾಗಿದ್ದು ಆತನಿಗಾಗಿ ಎದುರುನೋಡು; ತನ್ನ ಮಾರ್ಗದಲ್ಲಿ ಸಫಲ ವಾಗುವವನಿಗೋಸ್ಕರವೂ ಯುಕ್ತಿಗಳನ್ನು ನಡಿಸುವ ಮನುಷ್ಯರಿಗೋಸ್ಕರವೂ ಕೋಪಮಾಡಿಕೊಳ್ಳಬೇಡ.
- 2 Thessalonians 3:13 2 ಥೆಸಲೊನೀಕದವರಿಗೆ 3:13ಸಹೋ ದರರೇ, ನೀವಾದರೋ ಒಳ್ಳೆಯದನ್ನು ಮಾಡುವದರಲ್ಲಿ ಬೇಸರಗೊಳ್ಳಬೇಡಿರಿ.