Revelation · chapter 22 · verse 1
Revelation 22:1 in Kannada
ಆಮೇಲೆ ಅವನು ಸ್ಫಟಿಕದಂತೆ ಸ್ವಚ್ಛವಾದ ಮತ್ತು ಶುದ್ಧವಾದ ಜೀವಜಲದ ನದಿ ಯನ್ನು ನನಗೆ ತೋರಿಸಿದನು; ಅದು ದೇವರ ಮತ್ತು ಕುರಿಮರಿಯಾದಾತನ ಸಿಂಹಾಸನದಿಂದ ಹೊರಡುವ ದಾಗಿತ್ತು.
Aamele avanu sphatikadante svachchhavaada mattu shuddhavaada jeevajalada nadi yannu nanage torisidanu; adu devara mattu kurimariyaadaatana sinhaasanadinda horaduva daagittu.
Revelation 22:1 in English
- King James Version (KJV)
- And he shewed me a pure river of water of life, clear as crystal, proceeding out of the throne of God and of the Lamb.
- World English Bible (WEB)
- He showed me a river of water of life, clear as crystal, proceeding out of the throne of God and of the Lamb,
- American Standard Version (ASV)
- And he showed me a river of water of life, bright as crystal, proceeding out of the throne of God and of the Lamb,
- Bible in Basic English (BBE)
- And I saw a river of water of life, clear as glass, coming out of the high seat of God and of the Lamb,
- Darby Translation (DBY)
- And he shewed me a river of water of life, bright as crystal, going out of the throne of God and of the Lamb.
- Webster's Bible (WBS)
- And he showed me a pure river of water of life, clear as crystal, proceeding out of the throne of God and of the Lamb.
- Young's Literal Translation (YLT)
- And he shewed me a pure river of water of life, bright as crystal, going forth out of the throne of God and of the Lamb:
Read in context
- 1ಆಮೇಲೆ ಅವನು ಸ್ಫಟಿಕದಂತೆ ಸ್ವಚ್ಛವಾದ ಮತ್ತು ಶುದ್ಧವಾದ ಜೀವಜಲದ ನದಿ ಯನ್ನು ನನಗೆ ತೋರಿಸಿದನು; ಅದು ದೇವರ ಮತ್ತು ಕುರಿಮರಿಯಾದಾತನ ಸಿಂಹಾಸನದಿಂದ ಹೊರಡುವ ದಾಗಿತ್ತು.
- 2ಅದರ ಬೀದಿಯ ಮಧ್ಯದಲ್ಲಿಯೂ ಆ ನದಿಯ ಉಭಯ ಪಾರ್ಶ್ವಗಳಲ್ಲಿಯೂ ಜೀವವೃಕ್ಷವಿತ್ತು; ಅದು ತಿಂಗಳು ತಿಂಗಳಿಗೆ ಫಲವನ್ನು ಫಲಿಸುತ್ತಾ ಹನ್ನೆರಡು ತರದ ಫಲಗಳನ್ನು ಕೊಡುತ್ತದೆ. ಆ ಮರದ ಎಲೆಗಳು ಜನಾಂಗದವರನ್ನು ವಾಸಿಮಾಡುವದಕ್ಕೆ ಇದ್ದವು.
- 3ಇನ್ನು ಮೇಲೆ ಶಾಪವೇನೂ ಇರುವದಿಲ್ಲ; ಅದರಲ್ಲಿ ದೇವರ ಮತ್ತು ಕುರಿಮರಿಯಾದಾತನ ಸಿಂಹಾಸನವಿರುವದು. ಆತನ ಸೇವಕರು ಆತನನ್ನು ಸೇವಿಸುವರು.
Cross references
- Revelation 7:17 ಪ್ರಕಟನೆ 7:17ಸಿಂಹಾಸನದ ಮಧ್ಯದಲ್ಲಿರುವ ಕುರಿಮರಿಯಾದಾತನು ಅವರನ್ನು ಮೇಯಿಸಿ ಜೀವ ಜಲದ ಒರತೆಗಳ ಬಳಿಗೆ ನಡಿಸುತ್ತಾನೆ; ಮತ್ತು ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು ಎಂದು ಹೇಳಿದನು.
- John 4:14 ಯೋಹಾನನು 4:14ಆದರೆ ನಾನು ಕೊಡುವ ನೀರನ್ನು ಕುಡಿಯುವವನಿಗೆ ಎಂದಿಗೂ ನೀರ ಡಿಕೆಯಾಗುವದಿಲ್ಲ; ಯಾಕಂದರೆ ನಾನು ಅವನಿಗೆ ಕೊಡುವ ನೀರು ಅವನಲ್ಲಿ ನಿತ್ಯಜೀವಕ್ಕೆ ಉಕ್ಕುವ ನೀರಿನ ಬಾವಿಯಾಗಿರುವದು ಅಂದನು.
- John 7:38–39 ಯೋಹಾನನು 7:38–39ನನ್ನ ಮೇಲೆ ನಂಬಿಕೆ ಇಡುವವನಿಗೆ ಬರಹವು ಹೇಳಿದ ಪ್ರಕಾರ ಆತನ ಹೊಟ್ಟೆಯೊಳಗಿಂದ ಜೀವ ಕರವಾದ ನೀರಿನ ಹೊಳೆಗಳು ಹರಿಯುವವು ಎಂದು ಕೂಗಿ ಹೇಳಿದನು. (ಆದರೆ ಆತನು ತನ್ನಲ್ಲಿ ವಿಶ್ವಾಸವಿಡುವವರು ಹೊಂದಲಿರುವ ಆತ್ಮನನ್ನು ಕುರಿತು ಇದನ್ನು ಹೇಳಿದನು; ಯಾಕಂದರೆ ಯೇಸು ಇನ್ನೂ ಮಹಿಮೆಯನ್ನು ಹೊಂದಿರಲಿಲ್ಲವಾದ್ದರಿಂದ ಪವಿತ್ರಾ ತ್ಮನು ಇನ್ನೂ ಕೊಡಲ್ಪಟ್ಟಿರಲಿಲ್ಲ.)
- Psalm 36:8–9 ಕೀರ್ತನೆಗಳು 36:8–9ನಿನ್ನ ಆಲಯದ ಪರಿಪೂರ್ಣತೆಯಿಂದ ಅವರು ಸಂತೃಪ್ತಿಯಾಗುವರು; ನಿನ್ನ ಸಂಭ್ರಮದ ನದಿಯಿಂದ ಅವರಿಗೆ ಕುಡಿಯ ಮಾಡುವಿ. ನಿನ್ನ ಬಳಿಯಲ್ಲಿ ಜೀವದ ಬುಗ್ಗೆ ಉಂಟು. ನಿನ್ನ ತೇಜಸ್ಸಿನ ಬೆಳಕನ್ನು ನೋಡುವೆವು.
- John 4:10–11 ಯೋಹಾನನು 4:10–11ಯೇಸು ಪ್ರತ್ಯುತ್ತರವಾಗಿ ಆಕೆಗೆ--ದೇವರ ದಾನವೇನೆಂಬದೂ ಮತ್ತು--ನನಗೆ ಕುಡಿಯುವದಕ್ಕೆ ಕೊಡು ಎಂದು ನಿನ್ನನ್ನು ಕೇಳಿದಾತನು ಯಾರೆಂಬದೂ ನಿನಗೆ ತಿಳಿದಿದ್ದರೆ ನೀನು ಆತನನ್ನು ಕೇಳುತ್ತಿದ್ದಿ, ಆತನು ನಿನಗೆ ಜೀವಕರವಾದ ನೀರನ್ನು ಕೊಡುತ್ತಿದ್ದನು ಎಂದು ಹೇಳಿದನು. ಆ ಸ್ತ್ರೀಯು ಆತನಿಗೆ--ಅಯ್ಯಾ, ಸೇದುವದಕ್ಕೆ ನಿನಗೆ ಏನೂ ಇಲ್ಲ ಮತ್ತು ಬಾವಿ ಅಳವಾಗಿದೆ; ಹೀಗಿರುವಲ್ಲಿ ಆ ಜೀವಕರವಾದ ನೀರು ನಿನಗೆ ಎಲ್ಲಿಂದ ಬಂತು?
- Revelation 21:6 ಪ್ರಕಟನೆ 21:6ಇದಲ್ಲದೆ ಆತನು ನನಗೆ--ಎಲ್ಲಾ ಮುಗಿಯಿತು. ನಾನು ಅಲ್ಫಾವೂ ಓಮೆಗವೂ ಆದಿಯೂ ಅಂತ್ಯವೂ ಆಗಿದ್ದೇನೆ. ದಾಹವುಳ್ಳವನಿಗೆ ಜೀವದ ನೀರಿನ ಬುಗ್ಗೆಯಿಂದ ನಾನು ನೀರನ್ನು ಉಚಿತವಾಗಿ ಕೊಡುವೆನು.
- Zechariah 14:8 ಜೆಕರ್ಯ 14:8ಆ ದಿನದಲ್ಲಿ ಆಗುವದೇನಂದರೆ, ಯೆರೂಸಲೇಮಿ ನೊಳಗಿದ್ದ ಜೀವಜಲಗಳು ಹೊರಡುವವು; ಅವುಗ ಳಲ್ಲಿ ಅರ್ಧ ಪೂರ್ವ ಸಮುದ್ರಕ್ಕೆ ಅರ್ಧ ಪಶ್ಚಿಮ ಸಮುದ್ರಕ್ಕೆ ಹೋಗುವವು; ಅದು ಬೇಸಿಗೆ ಕಾಲ ದಲ್ಲಿಯೂ ಚಳಿಗಾಲದಲ್ಲಿಯೂ ಇರುವದು.
- Psalm 46:4 ಕೀರ್ತನೆಗಳು 46:4ಒಂದು ನದಿ ಅದೆ; ಅದರ ಕಾಲುವೆಗಳು ದೇವರ ಪಟ್ಟಣವನ್ನೂ ಮಹೋನ್ನತನ ಗುಡಾರಗಳ ಪರಿಶುದ್ಧ ಸ್ಥಳವನ್ನೂ ಸಂತೋಷಪಡಿಸುತ್ತವೆ.
- Revelation 22:17 ಪ್ರಕಟನೆ 22:17ಆತ್ಮನೂ ಮದಲಗಿತ್ತಿಯೂ--ಬಾ, ಅನ್ನುತ್ತಾರೆ. ಕೇಳುವವನು--ಬಾ, ಅನ್ನಲಿ. ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಉಚಿತವಾಗಿ ತೆಗೆದುಕೊಳ್ಳಲಿ.
- Jeremiah 17:13 ಯೆರೆಮೀಯ 17:13ಇಸ್ರಾಯೇಲಿನ ನಿರೀಕ್ಷೆಯಾದ ಓ ಕರ್ತನೇ, ನಿನ್ನನ್ನು ತೊರೆದು ಬಿಟ್ಟವರೆಲ್ಲರು ನಾಚಿಕೆಗೆ ಒಳಗಾಗುವರು, ಜೀವವುಳ್ಳ ನೀರಿನ ಬುಗ್ಗೆಯಾದ ಕರ್ತನಿಂದ ತೊಲಗಿ ಹೋದವರು ದೂಳಿನಲ್ಲಿ ಬರೆಯಲ್ಪಡುವರು.
- Jeremiah 2:13 ಯೆರೆಮೀಯ 2:13ನನ್ನ ಜನರು ಎರಡು ದುಷ್ಕೃತ್ಯಗಳನ್ನು ಮಾಡಿದ್ದಾರೆ; ಜೀವವುಳ್ಳ ನೀರಿನ ಬುಗ್ಗೆಯಾಗಿರುವ ನನ್ನನ್ನು ಬಿಟ್ಟು ತಮಗೆ ತೊಟ್ಟಿಗಳನ್ನು ನೀರು ಹಿಡಿಯಲಾರದ ಒಡಕು ತೊಟ್ಟಿಗಳನ್ನು ಕೆತ್ತಿಕೊಂಡಿದ್ದಾರೆ.
- Ezekiel 47:1–9 ಯೆಹೆಜ್ಕೇಲನು 47:1–9ಆಮೇಲೆ ಅವನು ನನ್ನನ್ನು ಮತ್ತೆ ಆಲಯದ ಬಾಗಲಿನ ಕಡೆಗೆ ಕರೆದುಕೊಂಡು ಹೋದನು. ಇಗೋ, ಆಲಯದ ಹೊಸ್ತಿಲಿನ ಕೆಳಗಿ ನಿಂದ ನೀರು ಹೊರಟು ಪೂರ್ವದ ಕಡೆಗೆ ನೀರು ಹರಿಯಿತು; ಆಲಯದ ಮುಂಭಾಗದಲ್ಲಿ ನೀರು ಇತ್ತು; ಆ ನೀರು ಬಲಪಾರ್ಶ್ವದಿಂದ ಯಜ್ಞವೇದಿಯ ದಕ್ಷಿಣದ ಕಡೆಗೆ ಹರಿಯಿತು. ಆ ಮೇಲೆ ಅವನು ನನ್ನನ್ನು ಬಾಗಲಿನ ಮಾರ್ಗವಾಗಿ ಉತ್ತರ ಕಡೆಗೆ ಕರೆದುಕೊಂಡು ಹೋಗಿ ನನ್ನನ್ನು ಹೊರಗಿನ ಬಾಗಲಿನ ವರೆಗೂ ಹೊರಗಿನ ಮಾರ್ಗವಾದ ಪೂರ್ವಕ್ಕೆ ಅಭಿಮುಖವಾದ ಮಾರ್ಗವನ್ನು ಸುತ್ತುವಂತೆ ಮಾಡಿದನು. ಇಗೋ, ಅಲ್ಲಿಯೂ ಬಲಗಡೆಯಲ್ಲಿಯೂ ನೀರು ಹರಿಯುತ್ತಿತ್ತು. ಕೈಯಲ್ಲಿ ನೂಲು ಇದ್ದ ಆ ಮನುಷ್ಯನು ಪೂರ್ವದ ಕಡೆಗೆ ಹೊರಟು ಸಾವಿರ ಮೊಳ ಅಳೆದ ಮೇಲೆ, ನನ್ನನ್ನು ನೀರಿನಿಂದ ದಾಟಿಸಿದನು; ಅಲ್ಲಿ ನೀರು ಹೆಜ್ಜೆ ಮುಳುಗುವಷ್ಟಿತ್ತು. 4 ಅವನು ಸಾವಿರ ಮೊಳಗಳನ್ನು ಅಳೆದ ಮೇಲೆ ನನ್ನನ್ನು ನೀರಿನಿಂದ ದಾಟಿಸಲು, ಆಗ ನೀರು ಮೊಣಕಾಲುಗಳ ತನಕ ಇತ್ತು; ಇನ್ನೂ ಸಾವಿರ ಅಳೆದು ನನ್ನನ್ನು ದಾಟಿಸಲಾಗಿ ನೀರು ಸೊಂಟದವರೆಗೂ ಇತ್ತು. ಇನ್ನೂ ಸಾವಿರ ಅಳೆದ ಮೇಲೆ ಅದು ನಾನು ದಾಟಲಾಗದಂತ ನದಿಯಾಗಿತ್ತು; ನೀರು ಹೆಚ್ಚಿ, ಈಜುವಷ್ಟಾಗಿ ದಾಟಲಾಗದಷ್ಟು ನದಿಯಾಗಿತ್ತು. ಅವನು ನನಗೆ ಹೇಳಿದ್ದೇನಂದರೆ, ಮನುಷ್ಯಪುತ್ರನೇ; ನೀನು ಇದನ್ನು ನೋಡಿದೆಯಾ ಎಂದು ನನ್ನನ್ನು ನಡೆಸಿಕೊಂಡು ಮತ್ತೆ ನದಿಯ ತೀರಕ್ಕೆ ಕರೆತಂದನು. ನಾನು ತಿರಿಗಿ ಬಂದಾಗ ಇಗೋ, ನದಿಯ ತೀರದಲ್ಲಿ ಆಕಡೆಯೂ ಈಕಡೆಯೂ ಅತಿ ಹೆಚ್ಚು ಮರಗಳಿದ್ದವು. ಆಗ ಅವನು ಹೇಳಿದ್ದೇನಂದರೆ, ಈ ನೀರು ಪೂರ್ವ ಸೀಮೆಗೆ ಹೋಗಿ ಒಣಭೂಮಿಗೆ ಇಳಿದು ಸಮುದ್ರ ಸೇರುವವು; ಸಮುದ್ರ ಸೇರಿದ ಮೇಲೆ ಆ ನೀರು ಸಿಹಿಯಾಗುವದು. ಇದಲ್ಲದೆ ಆಗುವದೇನಂದರೆ, ಈ ದಿನ ಬರುವ ಎಲ್ಲಾ ಸ್ಥಳಗಳಲ್ಲಿ ಸಂಚರಿಸುವಂತ ಸಮಸ್ತ ಜೀವಿಗಳು ಬದುಕುವವು ಮತ್ತು ವಿಾನುಗಳು ಬಹು ದೊಡ್ಡ ಸಮೂಹವಾಗುವವು. ಈ ನೀರು ಅಲ್ಲಿಗೆ ಬರುವಾಗ ಅವು ಸ್ವಸ್ಥವಾಗುವವು; ಈ ನದಿಗಳು ಎಲ್ಲಿಗೆ ಬರುತ್ತವೋ ಅಲ್ಲಿ ಎಲ್ಲಾ ಬದುಕುವವು.
Original words (Greek)
- And · G2532καί kaí
- shewed · G1166δεικνύω deiknýō
- me · G3427μοί moí
- pure · G2513καθαρός katharós
- river · G4215ποταμός potamós
- water · G5204ὕδωρ hýdōr
- life · G2222ζωή zōḗ
- clear · G2986λαμπρός lamprós
- as · G5613ὡς hōs
- crystal · G2930κρύσταλλος krýstallos
- proceeding · G1607ἐκπορεύομαι ekporeúomai
- of · G1537ἐκ ek
- throne · G2362θρόνος thrónos
- God · G2316θεός theós
- and · G2532καί kaí
- Lamb · G721ἀρνίον arníon