John · chapter 7 · verse 38
John 7:38 in Kannada
ನನ್ನ ಮೇಲೆ ನಂಬಿಕೆ ಇಡುವವನಿಗೆ ಬರಹವು ಹೇಳಿದ ಪ್ರಕಾರ ಆತನ ಹೊಟ್ಟೆಯೊಳಗಿಂದ ಜೀವ ಕರವಾದ ನೀರಿನ ಹೊಳೆಗಳು ಹರಿಯುವವು ಎಂದು ಕೂಗಿ ಹೇಳಿದನು.
Nanna mele nambike iduvavanige barahavu helida prakaara aatana hotteyolaginda jeeva karavaada neerina holegalu hariyuvavu endu koogi helidanu.
John 7:38 in English
- King James Version (KJV)
- He that believeth on me, as the scripture hath said, out of his belly shall flow rivers of living water.
- World English Bible (WEB)
- He who believes in me, as the Scripture has said, from within him will flow rivers of living water.”
- American Standard Version (ASV)
- He that believeth on me, as the scripture hath said, from within him shall flow rivers of living water.
- Bible in Basic English (BBE)
- He who has faith in me, out of his body, as the Writings have said, will come rivers of living water.
- Darby Translation (DBY)
- He that believes on me, as the scripture has said, out of his belly shall flow rivers of living water.
- Webster's Bible (WBS)
- He that believeth on me, as the scripture hath said, out of his belly shall flow rivers of living water.
- Young's Literal Translation (YLT)
- he who is believing in me, according as the Writing said, Rivers out of his belly shall flow of living water;'
Read in context
- 36ನೀವು ನನ್ನನ್ನು ಹುಡುಕುವಿರಿ, ಆದರೆ ನನ್ನನ್ನು ಕಾಣಲಾರಿರಿ; ನಾನಿರುವಲ್ಲಿಗೆ ನೀವು ಬರಲಾರಿರಿ ಎಂದು ಇವನು ಹೇಳಿರುವದು ಎಂಥಾ ಮಾತಾಗಿರಬಹುದು ಎಂದು ತಮ್ಮಲ್ಲಿ ಅಂದುಕೊಂಡರು.
- 37ಹಬ್ಬದ ಆ ಮಹಾದಿವಸವಾದ ಕಡೇ ದಿನದಲ್ಲಿ ಯೇಸು ನಿಂತುಕೊಂಡು--ಯಾವನಿಗಾದರೂ ನೀರಡಿಕೆ ಯಾಗಿದ್ದರೆ ಅವನು ನನ್ನ ಬಳಿಗೆ ಬಂದು ಕುಡಿಯಲಿ.
- 38ನನ್ನ ಮೇಲೆ ನಂಬಿಕೆ ಇಡುವವನಿಗೆ ಬರಹವು ಹೇಳಿದ ಪ್ರಕಾರ ಆತನ ಹೊಟ್ಟೆಯೊಳಗಿಂದ ಜೀವ ಕರವಾದ ನೀರಿನ ಹೊಳೆಗಳು ಹರಿಯುವವು ಎಂದು ಕೂಗಿ ಹೇಳಿದನು.
- 39(ಆದರೆ ಆತನು ತನ್ನಲ್ಲಿ ವಿಶ್ವಾಸವಿಡುವವರು ಹೊಂದಲಿರುವ ಆತ್ಮನನ್ನು ಕುರಿತು ಇದನ್ನು ಹೇಳಿದನು; ಯಾಕಂದರೆ ಯೇಸು ಇನ್ನೂ ಮಹಿಮೆಯನ್ನು ಹೊಂದಿರಲಿಲ್ಲವಾದ್ದರಿಂದ ಪವಿತ್ರಾ ತ್ಮನು ಇನ್ನೂ ಕೊಡಲ್ಪಟ್ಟಿರಲಿಲ್ಲ.)
- 40ಆದದರಿಂದ ಜನರಲ್ಲಿ ಅನೇಕರು ಈ ಮಾತನ್ನು ಕೇಳಿದಾಗ--ಈತನು ನಿಜವಾಗಿಯೂ ಆ ಪ್ರವಾದಿ ಯಾಗಿದ್ದಾನೆ ಅಂದರು.
Cross references
- John 4:14 ಯೋಹಾನನು 4:14ಆದರೆ ನಾನು ಕೊಡುವ ನೀರನ್ನು ಕುಡಿಯುವವನಿಗೆ ಎಂದಿಗೂ ನೀರ ಡಿಕೆಯಾಗುವದಿಲ್ಲ; ಯಾಕಂದರೆ ನಾನು ಅವನಿಗೆ ಕೊಡುವ ನೀರು ಅವನಲ್ಲಿ ನಿತ್ಯಜೀವಕ್ಕೆ ಉಕ್ಕುವ ನೀರಿನ ಬಾವಿಯಾಗಿರುವದು ಅಂದನು.
- Isaiah 44:3 ಯೆಶಾಯ 44:3ನಾನು ಬಾಯಾರಿ ದವನ ಮೇಲೆ ನೀರನ್ನು ಸುರಿಸುವೆನು; ಒಣನೆಲದ ಮೇಲೆ ಪ್ರವಾಹಗಳನ್ನು ಬರಮಾಡುವೆನು; ನಿನ್ನ ಸಂತಾನದವರಲ್ಲಿ ನನ್ನ ಆತ್ಮವನ್ನೂ ನಿನ್ನಿಂದ ಹುಟ್ಟು ವಂಥದ್ದರ ಮೇಲೆ ನನ್ನ ಆಶೀರ್ವಾದವನ್ನೂ ಸುರಿಸು ವೆನು.
- Isaiah 58:11 ಯೆಶಾಯ 58:11ಕರ್ತನು ನಿನ್ನನ್ನು ನಿತ್ಯವೂ ನಡಿಸುತ್ತಾ ಮಳೆಯಿಲ್ಲದ ಕಾಲದಲ್ಲಿ ನಿನ್ನ ಪ್ರಾಣವನ್ನು ತೃಪ್ತಿಗೊಳಿಸಿ ನಿನ್ನ ಎಲುಬುಗಳನ್ನು ಬಲಪಡಿಸುವನು ಮತ್ತು ನೀನು ನೀರು ಹಾಕಿದ ತೋಟದ ಹಾಗೆಯೂ ಮುಗಿಯದ ಜಲಬುಗ್ಗೆಯ ಹಾಗೆಯೂ ಇರುವಿ.
- Isaiah 12:3 ಯೆಶಾಯ 12:3ಆದದರಿಂದಲೇ ರಕ್ಷಣೆಯೆಂಬ ಬಾವಿಗಳಿಂದ ಆನಂದದೊಡನೆ ನೀವು ನೀರನ್ನು ಸೇದುವಿರಿ.
- John 4:10 ಯೋಹಾನನು 4:10ಯೇಸು ಪ್ರತ್ಯುತ್ತರವಾಗಿ ಆಕೆಗೆ--ದೇವರ ದಾನವೇನೆಂಬದೂ ಮತ್ತು--ನನಗೆ ಕುಡಿಯುವದಕ್ಕೆ ಕೊಡು ಎಂದು ನಿನ್ನನ್ನು ಕೇಳಿದಾತನು ಯಾರೆಂಬದೂ ನಿನಗೆ ತಿಳಿದಿದ್ದರೆ ನೀನು ಆತನನ್ನು ಕೇಳುತ್ತಿದ್ದಿ, ಆತನು ನಿನಗೆ ಜೀವಕರವಾದ ನೀರನ್ನು ಕೊಡುತ್ತಿದ್ದನು ಎಂದು ಹೇಳಿದನು.
- Proverbs 10:11 ಜ್ಞಾನೋಕ್ತಿಗಳು 10:11ನೀತಿವಂತನ ಬಾಯಿ ಯು ಜೀವಕರವಾದ ಬಾವಿ; ದುಷ್ಟನ ಬಾಯನ್ನು ಬಲಾತ್ಕಾರವು ಮುಚ್ಚುತ್ತದೆ.
- Zechariah 14:8 ಜೆಕರ್ಯ 14:8ಆ ದಿನದಲ್ಲಿ ಆಗುವದೇನಂದರೆ, ಯೆರೂಸಲೇಮಿ ನೊಳಗಿದ್ದ ಜೀವಜಲಗಳು ಹೊರಡುವವು; ಅವುಗ ಳಲ್ಲಿ ಅರ್ಧ ಪೂರ್ವ ಸಮುದ್ರಕ್ಕೆ ಅರ್ಧ ಪಶ್ಚಿಮ ಸಮುದ್ರಕ್ಕೆ ಹೋಗುವವು; ಅದು ಬೇಸಿಗೆ ಕಾಲ ದಲ್ಲಿಯೂ ಚಳಿಗಾಲದಲ್ಲಿಯೂ ಇರುವದು.
- Proverbs 18:4 ಜ್ಞಾನೋಕ್ತಿಗಳು 18:4ಮನುಷ್ಯನ ಬಾಯಿಯ ಮಾತುಗಳು ಆಳವಾದ ನೀರಿನಂತೆಯೂ ಜ್ಞಾನದ ಬುಗ್ಗೆಯು ಹರಿಯುವ ತೊರೆಯಂತೆಯೂ ಇವೆ.
- Galatians 5:22–23 ಗಲಾತ್ಯದವರಿಗೆ 5:22–23ಆದರೆ ಆತ್ಮನ ಫಲವೇನಂದರೆ--ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ವಿನಯ ಸದ್ಗುಣ ನಂಬಿಕೆ ಸಾತ್ವಿಕತ್ವ ಮಿತವ್ಯಯ ಇಂಥ ವುಗಳೇ; ಇಂಥವುಗಳಿಗೆ ವಿರೋಧವಾಗಿ ನ್ಯಾಯ ಪ್ರಮಾಣವಿಲ್ಲ.
- Isaiah 59:21 ಯೆಶಾಯ 59:21ಕರ್ತನು ಹೇಳುವದೇ ನಂದರೆ--ನಾನಾದರೋ ಅವರ ಸಂಗಡ ಮಾಡುವ ಒಡಂಬಡಿಕೆ ಇದೇ--ನಿನ್ನ ಮೇಲಿರುವ ನನ್ನ ಆತ್ಮನೂ ನಾನು ನಿನ್ನ ಬಾಯಲ್ಲಿ ಇಟ್ಟಿರುವ ನನ್ನ ವಾಕ್ಯಗಳೂ ಇಂದಿನಿಂದ ಸದಾಕಾಲಕ್ಕೆ ನಿನ್ನ ಬಾಯಿಂದಲೂ ನಿನ್ನ ಸಂತಾನದ ಬಾಯಿಂದಲೂ ನಿನ್ನ ಸಂತತಿಯ ಸಂತಾ ನದ ಬಾಯಿಂದಲೂ ತೊಲಗುವದಿಲ್ಲವೆಂದು ಕರ್ತನು ಹೇಳುತ್ತಾನೆ.
- Ezekiel 47:1–12 ಯೆಹೆಜ್ಕೇಲನು 47:1–12ಆಮೇಲೆ ಅವನು ನನ್ನನ್ನು ಮತ್ತೆ ಆಲಯದ ಬಾಗಲಿನ ಕಡೆಗೆ ಕರೆದುಕೊಂಡು ಹೋದನು. ಇಗೋ, ಆಲಯದ ಹೊಸ್ತಿಲಿನ ಕೆಳಗಿ ನಿಂದ ನೀರು ಹೊರಟು ಪೂರ್ವದ ಕಡೆಗೆ ನೀರು ಹರಿಯಿತು; ಆಲಯದ ಮುಂಭಾಗದಲ್ಲಿ ನೀರು ಇತ್ತು; ಆ ನೀರು ಬಲಪಾರ್ಶ್ವದಿಂದ ಯಜ್ಞವೇದಿಯ ದಕ್ಷಿಣದ ಕಡೆಗೆ ಹರಿಯಿತು. ಆ ಮೇಲೆ ಅವನು ನನ್ನನ್ನು ಬಾಗಲಿನ ಮಾರ್ಗವಾಗಿ ಉತ್ತರ ಕಡೆಗೆ ಕರೆದುಕೊಂಡು ಹೋಗಿ ನನ್ನನ್ನು ಹೊರಗಿನ ಬಾಗಲಿನ ವರೆಗೂ ಹೊರಗಿನ ಮಾರ್ಗವಾದ ಪೂರ್ವಕ್ಕೆ ಅಭಿಮುಖವಾದ ಮಾರ್ಗವನ್ನು ಸುತ್ತುವಂತೆ ಮಾಡಿದನು. ಇಗೋ, ಅಲ್ಲಿಯೂ ಬಲಗಡೆಯಲ್ಲಿಯೂ ನೀರು ಹರಿಯುತ್ತಿತ್ತು. ಕೈಯಲ್ಲಿ ನೂಲು ಇದ್ದ ಆ ಮನುಷ್ಯನು ಪೂರ್ವದ ಕಡೆಗೆ ಹೊರಟು ಸಾವಿರ ಮೊಳ ಅಳೆದ ಮೇಲೆ, ನನ್ನನ್ನು ನೀರಿನಿಂದ ದಾಟಿಸಿದನು; ಅಲ್ಲಿ ನೀರು ಹೆಜ್ಜೆ ಮುಳುಗುವಷ್ಟಿತ್ತು. 4 ಅವನು ಸಾವಿರ ಮೊಳಗಳನ್ನು ಅಳೆದ ಮೇಲೆ ನನ್ನನ್ನು ನೀರಿನಿಂದ ದಾಟಿಸಲು, ಆಗ ನೀರು ಮೊಣಕಾಲುಗಳ ತನಕ ಇತ್ತು; ಇನ್ನೂ ಸಾವಿರ ಅಳೆದು ನನ್ನನ್ನು ದಾಟಿಸಲಾಗಿ ನೀರು ಸೊಂಟದವರೆಗೂ ಇತ್ತು. ಇನ್ನೂ ಸಾವಿರ ಅಳೆದ ಮೇಲೆ ಅದು ನಾನು ದಾಟಲಾಗದಂತ ನದಿಯಾಗಿತ್ತು; ನೀರು ಹೆಚ್ಚಿ, ಈಜುವಷ್ಟಾಗಿ ದಾಟಲಾಗದಷ್ಟು ನದಿಯಾಗಿತ್ತು. ಅವನು ನನಗೆ ಹೇಳಿದ್ದೇನಂದರೆ, ಮನುಷ್ಯಪುತ್ರನೇ; ನೀನು ಇದನ್ನು ನೋಡಿದೆಯಾ ಎಂದು ನನ್ನನ್ನು ನಡೆಸಿಕೊಂಡು ಮತ್ತೆ ನದಿಯ ತೀರಕ್ಕೆ ಕರೆತಂದನು. ನಾನು ತಿರಿಗಿ ಬಂದಾಗ ಇಗೋ, ನದಿಯ ತೀರದಲ್ಲಿ ಆಕಡೆಯೂ ಈಕಡೆಯೂ ಅತಿ ಹೆಚ್ಚು ಮರಗಳಿದ್ದವು. ಆಗ ಅವನು ಹೇಳಿದ್ದೇನಂದರೆ, ಈ ನೀರು ಪೂರ್ವ ಸೀಮೆಗೆ ಹೋಗಿ ಒಣಭೂಮಿಗೆ ಇಳಿದು ಸಮುದ್ರ ಸೇರುವವು; ಸಮುದ್ರ ಸೇರಿದ ಮೇಲೆ ಆ ನೀರು ಸಿಹಿಯಾಗುವದು. ಇದಲ್ಲದೆ ಆಗುವದೇನಂದರೆ, ಈ ದಿನ ಬರುವ ಎಲ್ಲಾ ಸ್ಥಳಗಳಲ್ಲಿ ಸಂಚರಿಸುವಂತ ಸಮಸ್ತ ಜೀವಿಗಳು ಬದುಕುವವು ಮತ್ತು ವಿಾನುಗಳು ಬಹು ದೊಡ್ಡ ಸಮೂಹವಾಗುವವು. ಈ ನೀರು ಅಲ್ಲಿಗೆ ಬರುವಾಗ ಅವು ಸ್ವಸ್ಥವಾಗುವವು; ಈ ನದಿಗಳು ಎಲ್ಲಿಗೆ ಬರುತ್ತವೋ ಅಲ್ಲಿ ಎಲ್ಲಾ ಬದುಕುವವು. ಏನ್ಗೆದಿ ಮೊದಲುಗೊಂಡು ಏನ್ಎಗ್ಲಯಿಮಿನ ವರೆಗೂ ವಿಾನುಗಾರರು ಅದರ ಬಳಿಯಲ್ಲಿ ನಿಲ್ಲುವರು. ಅಲ್ಲಿ ಬಲೆಹಾಸುವ ಸ್ಥಳಗಳಿರುವವು. ಅದರ ವಿಾನು ಗಳು ಮಹಾಸಮುದ್ರದ ವಿಾನುಗಳಾಗಿ ಜಾತ್ಯಾನುಸಾರ ವಾಗಿ ಬಹಳವಾಗಿರುವವು, ಆದರೆ ಅದರ ಕೆಸರಾದ ಸ್ಥಳಗಳು, ಕೊಳಚೆಗಳು, ಸ್ವಸ್ಥವಾಗುವದಿಲ್ಲ, ಅವು ಉಪ್ಪಿಗೆ ಒಪ್ಪಿಸಲ್ಪಡುವವು. ನದಿಯ ಬಳಿ ಅದರ ತೀರದಲ್ಲಿ ಆ ಕಡೆಯೂ ಈ ಕಡೆಯೂ ಆಹಾರಕ್ಕಾಗಿ ಎಲ್ಲಾ ಮರಗಳು ಬೆಳೆಯುವವು, ಅವುಗಳ ಎಲೆಗಳು ಬಾಡುವದಿಲ್ಲ ಹಣ್ಣು ಮುಗಿದು ಹೋಗುವದಿಲ್ಲ. ಅವು ತಿಂಗಳುಗಳ ಪ್ರಕಾರ ಹೊಸ ಫಲಗಳನ್ನು ಫಲಿಸು ವವು; ಅವುಗಳ ನೀರು ಪರಿಶುದ್ಧ ಸ್ಥಳದಿಂದ ಹೊರಟು ಬಂದದ್ದು, ಅವುಗಳ ಹಣ್ಣುಗಳು ಆಹಾರಕ್ಕೂ ಎಲೆಗಳು ಔಷಧಕ್ಕೂ ಆಗುವವು.
- Job 32:18–19 ಯೋಬನು 32:18–19ವಿಷಯಗಳಿಂದ ನಾನು ತುಂಬಿದ್ದೇನೆ: ನನ್ನೊಳಗಿನ ಆತ್ಮವು ನನ್ನನ್ನು ಇರಿಕಿಸುತ್ತದೆ. ಇಗೋ, ನನ್ನ ಹೊಟ್ಟೆಯು ತೆರೆಯಲ್ಪಡದ ದ್ರಾಕ್ಷಾರಸದ ಹಾಗೆಯೂ ಒಡೆದು ಹೋಗುವ ಹೊಸ ಬುದ್ದಲಿಗಳ ಹಾಗೆಯೂ ಅದೆ.