Revelation · chapter 22 · verse 20
Revelation 22:20 in Kannada
ಇವುಗಳನ್ನು ಸಾಕ್ಷೀಕರಿಸುವಾತನು--ಖಂಡಿತ ವಾಗಿ ನಾನು ಬೇಗ ಬರುತ್ತೇನೆ ಎಂದು ಹೇಳುತ್ತಾನೆ. ಆಮೆನ್. ಹಾಗೆಯೇ ಆಗಲಿ; ಕರ್ತನಾದ ಯೇಸುವೇ, ಬಾ.ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೆಲ್ಲರೊಂದಿಗೆ ಇರಲಿ. ಆಮೆನ್.
Ivugalannu saaksheekarisuvaatanu--khandita vaagi naanu bega baruttene endu heluttaane. Aamen. Haageye aagali; kartanaada yesuve, baa.namma kartanaada yesu kristana krupeyu nimmellarondige irali. Aamen.
Revelation 22:20 in English
- King James Version (KJV)
- He which testifieth these things saith, Surely I come quickly. Amen. Even so, come, Lord Jesus.
- World English Bible (WEB)
- He who testifies these things says, “Yes, I am coming soon.” Amen! Yes, come, Lord Jesus!
- American Standard Version (ASV)
- He who testifieth these things saith, Yea: I come quickly. Amen: come, Lord Jesus.
- Bible in Basic English (BBE)
- He who gives witness to these things says, Truly, I come quickly. Even so come, Lord Jesus.
- Darby Translation (DBY)
- He that testifies these things says, Yea, I come quickly. Amen; come, Lord Jesus.
- Webster's Bible (WBS)
- He who testifieth these things saith, Surely I come quickly: Amen. Even so, come, Lord Jesus.
- Young's Literal Translation (YLT)
- he saith — who is testifying these things — 'Yes, I come quickly!' Amen! Yes, be coming, Lord Jesus!
Read in context
- 18ಈ ಪುಸ್ತಕದ ಪ್ರವಾದನಾವಾಕ್ಯಗಳನ್ನು ಕೇಳುವ ಪ್ರತಿಯೊಬ್ಬನಿಗೆ ನಾನು ಹೇಳುವ ಸಾಕ್ಷಿ ಏನಂ ದರೆ--ಯಾವನಾದರೂ ಇವುಗಳಿಗೆ ಕೂಡಿಸಿದರೆ ದೇವರು ಅವನಿಗೆ ಈ ಪುಸ್ತಕದಲ್ಲಿ ಬರೆದಿರುವ ಉಪ ದ್ರವಗಳನ್ನು ಕೂಡಿಸುವನು.
- 19ಯಾವನಾದರೂ ಈ ಪ್ರವಾದನಾ ಪುಸ್ತಕದಲ್ಲಿರುವ ವಾಕ್ಯಗಳಿಂದ ತೆಗೆದು ಬಿಟ್ಟರೆ ಜೀವಗ್ರಂಥದಿಂದಲೂ ಪರಿಶುದ್ಧ ಪಟ್ಟಣ ದಿಂದಲೂ ಈ ಪುಸ್ತಕದಲ್ಲಿ ಬರೆದಿರುವವುಗಳಿಂದಲೂ ಅವನ ಪಾಲನ್ನು ದೇವರು ತೆಗೆದುಬಿಡುವನು.
- 20ಇವುಗಳನ್ನು ಸಾಕ್ಷೀಕರಿಸುವಾತನು--ಖಂಡಿತ ವಾಗಿ ನಾನು ಬೇಗ ಬರುತ್ತೇನೆ ಎಂದು ಹೇಳುತ್ತಾನೆ. ಆಮೆನ್. ಹಾಗೆಯೇ ಆಗಲಿ; ಕರ್ತನಾದ ಯೇಸುವೇ, ಬಾ.ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೆಲ್ಲರೊಂದಿಗೆ ಇರಲಿ. ಆಮೆನ್.
- 21ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೆಲ್ಲರೊಂದಿಗೆ ಇರಲಿ. ಆಮೆನ್.
Cross references
- Revelation 22:7 ಪ್ರಕಟನೆ 22:7ಇಗೋ, ನಾನು ಬೇಗನೆ ಬರುತ್ತೇನೆ. ಈ ಪುಸ್ತಕದಲ್ಲಿ ಬರೆದಿರುವ ಪ್ರವಾದನೆಗಳನ್ನು ಕಾಪಾಡುವವನು ಧನ್ಯನು ಎಂದು ಹೇಳಿದನು.
- Hebrews 9:28 ಇಬ್ರಿಯರಿಗೆ 9:28ಹಾಗೆಯೇ ಕ್ರಿಸ್ತನು ಬಹು ಜನರ ಪಾಪಗಳನ್ನು ಹೊತ್ತುಕೊಳ್ಳುವದಕ್ಕೋಸ್ಕರ ಒಂದೇ ಸಾರಿ ಸಮರ್ಪಿತ ನಾದನು. ತನ್ನನ್ನು ನಿರೀಕ್ಷಿಸಿ ಕೊಂಡಿರುವವರಿಗೆ ರಕ್ಷಣೆ ಯನ್ನುಂಟು ಮಾಡುವದಕ್ಕೋಸ್ಕರ ಪಾಪವಿಲ್ಲದವನಾಗಿ ಎರಡನೆಯ ಸಾರಿ ಕಾಣಿಸಿಕೊಳ್ಳುವನು.
- Revelation 22:12 ಪ್ರಕಟನೆ 22:12ಇಗೋ, ನಾನು ಬೇಗ ಬರುತ್ತೇನೆ; ನಾನು ಪ್ರತಿಯೊಬ್ಬನಿಗೆ ಅವನವನ ಕೆಲಸದ ಪ್ರಕಾರ ಕೊಡತಕ್ಕ ಪ್ರತಿಫಲವು ನನ್ನಲ್ಲಿದೆ.
- 2 Timothy 4:8 2 ತಿಮೊಥೆಯನಿಗೆ 4:8ಇನ್ನು ಮುಂದೆ ನನಗೋಸ್ಕರ ನೀತಿಯ ಕಿರೀಟವು ಇಡಲ್ಪಟ್ಟಿದೆ; ಅದನ್ನು ನೀತಿಯುಳ್ಳ ನ್ಯಾಯಾ ಧಿಪತಿಯಾದ ಕರ್ತನು ಆ ದಿನದಲ್ಲಿ ನನಗೆ ಕೊಡು ವನು; ನನಗೆ ಮಾತ್ರವಲ್ಲದೆ ಆತನ ಬರೋಣವನ್ನು ಪ್ರೀತಿಸುವವರೆಲ್ಲರಿಗೆ ಸಹ ಕೊಡುವನು.
- 1 Corinthians 16:22 1 ಕೊರಿಂಥದವರಿಗೆ 16:22ಯಾವನಾದರೂ ಕರ್ತನಾದ ಯೇಸು ಕ್ರಿಸ್ತನನ್ನು ಪ್ರೀತಿಸದಿದ್ದರೆ ಅವನು ಅನಾಥಿಮ (ಶಾಪಗ್ರಸ್ತನಾಗಲಿ;) ಮಾರನಾಥ (ನಮ್ಮ ಕರ್ತನು ಬರುತ್ತಾನೆ).
- Isaiah 25:9 ಯೆಶಾಯ 25:9ಆ ದಿನದಲ್ಲಿ (ಜನರು) ಹೇಳುವದೇನಂದರೆ--ಇಗೋ, ಈತನೇ ನಮ್ಮ ದೇವರು, ನಾವು ಈತನಿ ಗೋಸ್ಕರ ಕಾದಿದ್ದೇವೆ; ಈತನು ನಮ್ಮನ್ನು ರಕ್ಷಿಸುವನು. ಈತನೇ ಕರ್ತನು, ನಾವು ಈತನಿಗೋಸ್ಕರ ಕಾದಿ ದ್ದೇವೆ; ನಾವು ಈತನ ರಕ್ಷಣೆಯಲ್ಲಿ ಹರ್ಷಿಸಿ ಸಂತೋಷ ಪಡುವೆವು.
- Revelation 1:2 ಪ್ರಕಟನೆ 1:2ಯೋಹಾನನು ದೇವರ ವಾಕ್ಯದ ವಿಷಯವಾಗಿಯೂ ಯೇಸು ಕ್ರಿಸ್ತನ ವಿಷಯವಾಗಿಯೂ ತಾನು ಕಂಡದ್ದನ್ನೆಲ್ಲ ತಿಳಿಸುವವನಾಗಿ ಸಾಕ್ಷಿಕೊಟ್ಟನು.
- Revelation 22:10 ಪ್ರಕಟನೆ 22:10ಇದಲ್ಲದೆ ಅವನು ನನಗೆ--ಈ ಪುಸ್ತಕದಲ್ಲಿರುವ ಪ್ರವಾದನೆಯ ಹೇಳಿಕೆಗಳಿಗೆ ಮುದ್ರೆಹಾಕಬೇಡ; ಯಾಕಂದರೆ ಸಮಯವು ಸವಿಾಪವಾಗಿದೆ.
- Revelation 22:18 ಪ್ರಕಟನೆ 22:18ಈ ಪುಸ್ತಕದ ಪ್ರವಾದನಾವಾಕ್ಯಗಳನ್ನು ಕೇಳುವ ಪ್ರತಿಯೊಬ್ಬನಿಗೆ ನಾನು ಹೇಳುವ ಸಾಕ್ಷಿ ಏನಂ ದರೆ--ಯಾವನಾದರೂ ಇವುಗಳಿಗೆ ಕೂಡಿಸಿದರೆ ದೇವರು ಅವನಿಗೆ ಈ ಪುಸ್ತಕದಲ್ಲಿ ಬರೆದಿರುವ ಉಪ ದ್ರವಗಳನ್ನು ಕೂಡಿಸುವನು.
- John 21:25 ಯೋಹಾನನು 21:25ಇದಲ್ಲದೆ ಯೇಸು ಮಾಡಿದವುಗಳು ಬಹಳ ಉಂಟು; ಅವುಗಳನ್ನು ಒಂದೊಂದಾಗಿ ಬರೆಯುವ ದಾದರೆ ಬರೆಯಬೇಕಾದ ಪುಸ್ತಕಗಳನ್ನು ಲೋಕವೇ ಹಿಡಿಸಲಾರದೆ ಹೋದೀತೆಂದು ನಾನು ನೆನಸುತ್ತೇನೆ. ಆಮೆನ್.
- 2 Peter 3:12–14 2 ಪೇತ್ರನು 3:12–14ದೇವರ ದಿನದ ಪ್ರತ್ಯಕ್ಷತೆಯನ್ನು ಎದುರು ನೋಡುತ್ತಾ ಆತುರಪಡುವ ಆ ದಿನದಲ್ಲಿ ಆಕಾಶಗಳು ಬೆಂಕಿ ಹತ್ತಿ ಲಯವಾಗಿ ಹೋಗುವವು, ಅತಿ ಉಷ್ಣದಿಂದ ಪಂಚಭೂತಗಳು ಉರಿದು ಕರಗಿ ಹೋಗುವವಲ್ಲವೇ? ಆದಾಗ್ಯೂ ನಾವು ಆತನ ವಾಗ್ದಾನದ ಪ್ರಕಾರ ನೂತನ ಆಕಾಶ ಗಳನ್ನೂ ನೂತನ ಭೂಮಿಯನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು. ಆದಕಾರಣ ಪ್ರಿಯರೇ, ನೀವು ಇಂಥವುಗಳನ್ನು ಎದುರು ನೋಡುವವರಾಗಿರುವದರಿಂದ ಸಮಾಧಾನ ದಲ್ಲಿದ್ದು ನಿರ್ಮಲರಾಗಿಯೂ ನಿರ್ದೋಷಿಗಳಾಗಿಯೂ ಆತನಿಗೆ ಕಾಣಿಸಿಕೊಳ್ಳುವಂತೆ ಜಾಗ್ರತೆಯುಳ್ಳವ ರಾಗಿರ್ರಿ.
- Revelation 1:18 ಪ್ರಕಟನೆ 1:18ಸತ್ತವನಾದೆನು,ಈಗ ಬದುಕುವವನಾಗಿದ್ದೇನೆ. ಇಗೋ, ನಾನು ಎಂದೆಂ ದಿಗೂ ಬದುಕುವವನಾಗಿದ್ದೇನೆ. ಆಮೆನ್. ನರಕದ ಮತ್ತು ಮರಣದ ಬೀಗದ ಕೈಗಳೂ ನನ್ನಲ್ಲಿ ಅವೆ.