Revelation · chapter 3 · verse 15
Revelation 3:15 in Kannada
ನೀನು ತಣ್ಣಗೂ ಬೆಚ್ಚಗೂ ಅಲ್ಲದಿರುವ ನಿನ್ನ ಕ್ರಿಯೆಗಳನ್ನು ನಾನು ಬಲ್ಲೆನು; ನೀನು ತಣ್ಣಗಾಗಲಿ ಬೆಚ್ಚಗಾಗಲಿ ಇರಬೇಕೆಂಬದು ನನ್ನ ಇಷ್ಟವಾಗಿತ್ತು.
Neenu tannagoo bechchagoo alladiruva ninna kriyegalannu naanu ballenu; neenu tannagaagali bechchagaagali irabekembadu nanna ishtavaagittu.
Revelation 3:15 in English
- King James Version (KJV)
- I know thy works, that thou art neither cold nor hot: I would thou wert cold or hot.
- World English Bible (WEB)
- “I know your works, that you are neither cold nor hot. I wish you were cold or hot.
- American Standard Version (ASV)
- I know thy works, that thou art neither cold nor hot: I would thou wert cold or hot.
- Bible in Basic English (BBE)
- I have knowledge of your works, that you are not cold or warm: it would be better if you were cold or warm.
- Darby Translation (DBY)
- I know thy works, that thou art neither cold nor hot; I would thou wert cold or hot.
- Webster's Bible (WBS)
- I know thy works, that thou art neither cold nor hot: I would thou wert cold or hot.
- Young's Literal Translation (YLT)
- I have known thy works, that neither cold art thou nor hot; I would thou wert cold or hot.
Read in context
- 13ಆತ್ಮನು ಸಭೆಗಳಿಗೆ ಹೇಳುವದನ್ನು ಕಿವಿಯುಳ್ಳವನು ಕೇಳಲಿ.
- 14ಲವೊದಿಕೀಯದಲ್ಲಿರುವ ಸಭೆಯ ದೂತನಿಗೆ ಬರೆ: ಆಮೆನ್ ಎಂಬಾತನು ಮತ್ತು ನಂಬಿಗಸ್ತನೂ ಸತ್ಯಸಾಕ್ಷಿಯೂ ದೇವರ ಸೃಷ್ಟಿಯ ಆದಿಯೂ ಆಗಿರುವಾತನು ಹೇಳುವವುಗಳು ಯಾವವೆಂದರೆ,
- 15ನೀನು ತಣ್ಣಗೂ ಬೆಚ್ಚಗೂ ಅಲ್ಲದಿರುವ ನಿನ್ನ ಕ್ರಿಯೆಗಳನ್ನು ನಾನು ಬಲ್ಲೆನು; ನೀನು ತಣ್ಣಗಾಗಲಿ ಬೆಚ್ಚಗಾಗಲಿ ಇರಬೇಕೆಂಬದು ನನ್ನ ಇಷ್ಟವಾಗಿತ್ತು.
- 16ಆದರೆ ನೀನು ತಣ್ಣಗಾಗಲಿ ಇಲ್ಲವೆ ಬೆಚ್ಚಗಾಗಲಿ ಇಲ್ಲದೆ ಉಗುರು ಬೆಚ್ಚಗಿರುವದರಿಂದ ನಿನ್ನನ್ನು ನಾನು ನನ್ನ ಬಾಯೊಳಗಿಂದ ಕಾರುವೆನು.
- 17ನೀನು--ನಾನು ಐಶ್ವರ್ಯವಂತನು, ಧನವೃದ್ಧಿಯುಳ್ಳವನು, ಯಾವದರ ಲ್ಲಿಯೂ ಕೊರತೆಯಿಲ್ಲದವನು ಎಂದು ಹೇಳಿಕೊಳ್ಳುತ್ತೀ; ಆದರೆ ನೀನು ಕೇವಲ ನಿರ್ಗತಿಕನು, ದರಿದ್ರನು, ಬಡವನು, ಕುರುಡನು, ಬೆತ್ತಲೆಯಾದವನು ಆಗಿರುವ ದನ್ನು ತಿಳಿಯದೆ ಇದ್ದೀ.
Cross references
- Romans 12:11 ರೋಮಾಪುರದವರಿಗೆ 12:11ಸೇವೆಯಲ್ಲಿ ಅಲಸ್ಯವಾಗಿರಬೇಡಿರಿ, ಆತ್ಮದಲ್ಲಿ ಆಸಕ್ತರಾಗಿದ್ದು ಕರ್ತನನ್ನು ಸೇವಿಸುವವ ರಾಗಿರ್ರಿ.
- Matthew 6:24 ಮತ್ತಾಯನು 6:24ಯಾವ ಮನುಷ್ಯನೂ ಇಬ್ಬರು ಯಜಮಾನರಿಗೆ ಸೇವೆ ಮಾಡಲಾರನು; ಯಾಕಂದರೆ ಅವನು ಒಬ್ಬನನ್ನು ಹಗೆಮಾಡಿ ಇನ್ನೊಬ್ಬನನ್ನು ಪ್ರೀತಿಮಾಡುವನು; ಇಲ್ಲವಾದರೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬ ನನ್ನು ಅಸಡ್ಡೆ ಮಾಡುವನು. ನೀವು ದೇವರನ್ನೂ ಧನವನ್ನೂ ಸೇವಿಸಲಾರಿರಿ.
- 1 Kings 18:21 1 ಅರಸುಗಳು 18:21ಆಗ ಎಲೀಯನು ಸಕಲ ಜನರ ಬಳಿಗೆ ಬಂದು--ನೀವು ಎರಡು ಅಭಿಪ್ರಾಯಗಳ ಮಧ್ಯದಲ್ಲಿ ಎಷ್ಟರ ವರೆಗೂ ನಿಂತವರಾಗಿ ಇರುವಿರಿ. ಕರ್ತನು ದೇವರಾಗಿದ್ದರೆ ಆತನನ್ನು ಹಿಂಬಾಲಿಸಿರಿ; ಬಾಳನು ದೇವರಾಗಿದ್ದರೆ ಅವನನ್ನು ಹಿಂಬಾಲಿಸಿರಿ ಅಂದನು. ಜನರು ಅವನಿಗೆ ಒಂದು ಮಾತಾದರೂ ಹೇಳಲಿಲ್ಲ.
- James 1:8 ಯಾಕೋಬನು 1:8ಎರಡು ಮನಸ್ಸುಳ್ಳವನು ತನ್ನ ಮಾರ್ಗಗಳ ಲ್ಲೆಲ್ಲಾ ಚಂಚಲನಾಗಿದ್ದಾನೆ.
- Revelation 2:4 ಪ್ರಕಟನೆ 2:4ಆದಾಗ್ಯೂ ನಿನ್ನಲ್ಲಿ ನನಗೆ ವಿರೋಧವಾದದ್ದು ಇದೆ. ಯಾಕಂದರೆ ನೀನು ನಿನ್ನ ಮೊದಲಿನ ಪ್ರೀತಿಯನ್ನು ಬಿಟ್ಟುಬಿಟ್ಟಿದ್ದೀ.
- Psalm 81:11–13 ಕೀರ್ತನೆಗಳು 81:11–13ಆದರೆ ನನ್ನ ಜನರು ನನ್ನ ಸ್ವರವನ್ನು ಕೇಳಲಿಲ್ಲ; ಇಸ್ರಾಯೇಲು ನನ್ನ ಮೇಲೆ ಮನಸ್ಸಿಡಲಿಲ್ಲ. ಆದದರಿಂದ ಅವರ ಹೃದಯದ ದುರಾಶೆಗೆ ಅವರನ್ನು ನಾನು ಒಪ್ಪಿಸಿದೆನು; ಅವರು ತಮ್ಮ ಆಲೋಚನೆಗಳಲ್ಲಿ ನಡೆದುಕೊಂಡರು. ಹಾ, ನನ್ನ ಜನರು ನನ್ನ ಮಾತನ್ನು ಕೇಳಿ, ಇಸ್ರಾಯೇಲು ನನ್ನ ಮಾರ್ಗದಲ್ಲಿ ನಡೆದುಕೊಂಡರೆ,
- Matthew 24:12 ಮತ್ತಾಯನು 24:12ದುಷ್ಟತನ ಹೆಚ್ಚಾಗುವದರಿಂದ ಬಹಳ ಜನರ ಪ್ರೀತಿಯು ತಣ್ಣಗಾಗುವದು.
- Zephaniah 1:5–6 ಚೆಫನ್ಯ 1:5–6ಮಾಳಿಗೆಗಳ ಮೇಲೆ ಆಕಾಶದ ಸೈನ್ಯವನ್ನು ಆರಾಧಿಸುವವರನ್ನೂ ಕರ್ತನ ಮೇಲೆಯೂ ಮಲ್ಕಾಮನ ಮೇಲೆಯೂ ಆಣೆ ಇಟ್ಟುಕೊಳ್ಳುವವರನ್ನೂ ಕರ್ತನ ಕಡೆಯಿಂದ ಹಿಂತಿ ರುಗಿದವರನ್ನೂ ಕರ್ತನನ್ನು ಹುಡುಕದೆಯೂ ವಿಚಾರಿಸ ದೆಯೂ ಇರುವವರನ್ನೂ ಕಡಿದುಬಿಡುವೆನು.
- Proverbs 23:26 ಜ್ಞಾನೋಕ್ತಿಗಳು 23:26ನನ್ನ ಮಗನೇ, ನಿನ್ನ ಹೃದಯ ವನ್ನು ನನಗೆ ಕೊಡು; ನನ್ನ ಮಾರ್ಗಗಳನ್ನು ನಿನ್ನ ಕಣ್ಣುಗಳು ದೃಷ್ಟಿಯಿಟ್ಟು ನೋಡಲಿ.
- 2 Corinthians 12:20 2 ಕೊರಿಂಥದವರಿಗೆ 12:20ನಾನು ಬಂದಾಗ ಒಂದು ವೇಳೆ ನೀವು ನನ್ನ ಇಷ್ಟದ ಪ್ರಕಾರ ಇರುವದಿಲ್ಲವೇನೋ, ನಾನು ನಿಮ್ಮ ಇಷ್ಟದ ಪ್ರಕಾರ ತೋರುವದಿಲ್ಲವೇನೋ, ಒಂದು ವೇಳೆ ನಿಮ್ಮಲ್ಲಿ ವಾಗ್ವಾದಗಳು ಹೊಟ್ಟೆಕಿಚ್ಚು ಕೋಪ ಜಗಳ ಚಾಡಿ ಹೇಳುವದು ಕಿವಿಯೂದುವದು ಉಬ್ಬಿಕೊಳ್ಳುವದು ಕಲಹ ಎಬ್ಬಿಸುವದು ಇವುಗಳು ಕಾಣಬಇದಲ್ಲದೆ ನಾನು ತಿರಿಗಿ ಬಂದಾಗ ನಿಮ್ಮ ಮಧ್ಯದಲ್ಲಿ ನಾನು ಕುಂದಿಹೋಗು ವಂತೆ ನನ್ನ ದೇವರು ಮಾಡಾನೆಂತಲೂ ಅಶುದ್ಧತೆ ಹಾದರತನ ಬಂಡುತನಗಳನ್ನು ನಡಿಸಿ ಪಶ್ಚಾತ್ತಾಪ ಪಡದೆ ಆಗಲೇ ಪಾಪ ಮಾಡಿದ ಅನೇಕರ ವಿಷಯವಾಗಿ ನಾನು ವ್ಯಥೆಪಡಬೇಕಾದೀತೆಂತಲೂ ನನಗೆ ಭಯವುಂಟು.
- Philippians 1:9 ಫಿಲಿಪ್ಪಿಯವರಿಗೆ 1:9ನಿಮ್ಮ ಪ್ರೀತಿಯು ಹೆಚ್ಚುತ್ತಾ ಹೆಚ್ಚುತ್ತಾ ನೀವು ಜ್ಞಾನ ಮತ್ತು ಪೂರ್ಣ ವಿವೇಕಗಳಿಂದ ಕೂಡಿದವರಾಗಿರಬೇಕೆಂತಲೂ
- 1 Peter 1:22 1 ಪೇತ್ರನು 1:22ನೀವು ಆತ್ಮನ ಮೂಲಕ ಸತ್ಯಕ್ಕೆ ವಿಧೇಯರಾಗಿದ್ದು ನಿಮ್ಮ ಆತ್ಮಗಳನ್ನು ಶುದ್ಧಮಾಡಿಕೊಂಡದ್ದರಿಂದ ನಿಷ್ಕಪಟ ವಾದ ಸಹೋದರ ಸ್ನೇಹವುಳ್ಳವರಾಗಿರತಕ್ಕದ್ದು. ಹೀಗಿರ ಲಾಗಿ ಒಬ್ಬರನ್ನೊಬ್ಬರು ಶುದ್ಧವಾದ ಹೃದಯದಿಂದಲೂ ಆಸಕ್ತಿಯಿಂದಲೂ ಪ್ರೀತಿಸಿರಿ.