Psalms · chapter 81 · verse 11
Psalm 81:11 in Kannada
ಆದರೆ ನನ್ನ ಜನರು ನನ್ನ ಸ್ವರವನ್ನು ಕೇಳಲಿಲ್ಲ; ಇಸ್ರಾಯೇಲು ನನ್ನ ಮೇಲೆ ಮನಸ್ಸಿಡಲಿಲ್ಲ.
Aadare nanna janaru nanna svaravannu kelalilla; israayelu nanna mele manassidalilla.
Psalm 81:11 in English
- King James Version (KJV)
- But my people would not hearken to my voice; and Israel would none of me.
- World English Bible (WEB)
- But my people didn’t listen to my voice. Israel desired none of me.
- American Standard Version (ASV)
- But my people hearkened not to my voice; And Israel would none of me.
- Bible in Basic English (BBE)
- But my people did not give ear to my voice; Israel would have nothing to do with me.
- Darby Translation (DBY)
- But my people hearkened not to my voice, and Israel would none of me.
- Webster's Bible (WBS)
- But my people would not hearken to my voice; and Israel would not obey me.
- Young's Literal Translation (YLT)
- But, My people hearkened not to My voice, And Israel hath not consented to Me.
Read in context
- 9ನಿನ್ನಲ್ಲಿ ಅನ್ಯದೇವರು ಇರಬಾರದು; ಪರ ದೇವರಿಗೆ ಅಡ್ಡಬೀಳಬಾರದು.
- 10ಐಗುಪ್ತದೇಶದಿಂದ ನಿನ್ನನ್ನು ಹೊರಗೆ ತಂದ ನಿನ್ನ ದೇವರಾದ ಕರ್ತನು ನಾನೇ; ನಿನ್ನ ಬಾಯನ್ನು ಅಗಲವಾಗಿ ತೆರೆ; ಆಗ ನಾನು ಅದನ್ನು ತುಂಬಿಸುವೆನು.
- 11ಆದರೆ ನನ್ನ ಜನರು ನನ್ನ ಸ್ವರವನ್ನು ಕೇಳಲಿಲ್ಲ; ಇಸ್ರಾಯೇಲು ನನ್ನ ಮೇಲೆ ಮನಸ್ಸಿಡಲಿಲ್ಲ.
- 12ಆದದರಿಂದ ಅವರ ಹೃದಯದ ದುರಾಶೆಗೆ ಅವರನ್ನು ನಾನು ಒಪ್ಪಿಸಿದೆನು; ಅವರು ತಮ್ಮ ಆಲೋಚನೆಗಳಲ್ಲಿ ನಡೆದುಕೊಂಡರು.
- 13ಹಾ, ನನ್ನ ಜನರು ನನ್ನ ಮಾತನ್ನು ಕೇಳಿ, ಇಸ್ರಾಯೇಲು ನನ್ನ ಮಾರ್ಗದಲ್ಲಿ ನಡೆದುಕೊಂಡರೆ,
Cross references
- Jeremiah 7:23–24 ಯೆರೆಮೀಯ 7:23–24ಆದರೆ ನಾನು ಅವರಿಗೆ--ನನ್ನ ಶಬ್ದಕ್ಕೆ ವಿಧೇಯರಾಗಿರಿ. ಆಗ ನಾನು ನಿಮ್ಮ ದೇವರಾಗಿರುವೆನು, ನೀವು ನನ್ನ ಜನರಾಗಿರುವಿರಿ; ನಿಮಗೆ ಒಳ್ಳೇದಾಗುವ ಹಾಗೆ ನಾನು ನಿಮಗೆ ಆಜ್ಞಾ ಪಿಸಿದ ಎಲ್ಲಾ ಮಾರ್ಗಗಳಲ್ಲಿ ನಡೆಯಿರಿ ಎಂದು ಆಜ್ಞಾ ಪಿಸಿ ಹೇಳಿದೆನು. ಆದರೆ ಅವರು ಕೇಳಲಿಲ್ಲ, ಇಲ್ಲವೆ ಕಿವಿಗೊಡಲಿಲ್ಲ; ಅವರು ತಮ್ಮ ದುಷ್ಟ ಹೃದಯದ ಆಲೋಚನೆಯ ಪ್ರಕಾರವೂ ಕಲ್ಪನೆಯ ಪ್ರಕಾರವೂ ನಡಕೊಂಡು ಮುಂದಕ್ಕೆ ಅಲ್ಲ, ಹಿಂದಕ್ಕೆ ಹೋದರು.
- Deuteronomy 32:18 ಧರ್ಮೋಪದೇಶಕಾಂಡ 32:18ನಿನ್ನನ್ನು ಹುಟ್ಟಿಸಿದ ಬಂಡೆಯನ್ನು ನೆನಸದೆ ನಿನ್ನನ್ನು ರೂಪಿಸಿದ ದೇವರನ್ನು ಮರೆತುಬಿಟ್ಟಿದ್ದಿ.
- Exodus 32:1 ವಿಮೋಚನಕಾಂಡ 32:1ಮೋಶೆಯು ಬೆಟ್ಟದಿಂದ ಇಳಿದುಬರುವದರಲ್ಲಿ ತಡವಾದದ್ದನ್ನು ಜನರು ನೋಡಿದಾಗ ಅವರು ಆರೋನನ ಬಳಿಗೆ ಕೂಡಿ ಬಂದು ಅವನಿಗೆ--ನೀನು ಎದ್ದು ನಮ್ಮ ಮುಂದೆ ಹೋಗುವ ದೇವರುಗಳನ್ನು ನಮಗಾಗಿ ಮಾಡು, ಐಗುಪ್ತದೇಶದೊಳಗಿಂದ ನಮ್ಮನ್ನು ಕರೆದುಕೊಂಡು ಬಂದ ಮನುಷ್ಯನಾದ ಈ ಮೋಶೆಗೆ ಏನಾಯಿತೋ ನಮಗೆ ತಿಳಿಯದು ಅಂದರು.
- Jeremiah 2:11–13 ಯೆರೆಮೀಯ 2:11–13ಜನಾಂ ಗವು ತಮ್ಮ ದೇವರುಗಳನ್ನು ಅವು ದೇವರುಗಳಲ್ಲದೆ ಇದ್ದಾಗ್ಯೂ ಬದಲು ಮಾಡಿದ್ದುಂಟೋ? ಆದರೆ ನನ್ನ ಜನರು ತಮ್ಮ ವೈಭವವನ್ನು ಪ್ರಯೋಜನವಿಲ್ಲದ್ದಕ್ಕೆ ಬದಲು ಮಾಡಿದ್ದಾರೆ. ಓ ಆಕಾಶಗಳೇ, ಇದಕ್ಕೆ ನೀವು ಆಶ್ಚರ್ಯಪಡಿರಿ, ಭಯಭ್ರಾಂತಿಗೊಳ್ಳಿರಿ, ತೀರ ಹಾಳಾಗಿರಿ ಎಂದು ಕರ್ತನು ಅನ್ನುತ್ತಾನೆ. ನನ್ನ ಜನರು ಎರಡು ದುಷ್ಕೃತ್ಯಗಳನ್ನು ಮಾಡಿದ್ದಾರೆ; ಜೀವವುಳ್ಳ ನೀರಿನ ಬುಗ್ಗೆಯಾಗಿರುವ ನನ್ನನ್ನು ಬಿಟ್ಟು ತಮಗೆ ತೊಟ್ಟಿಗಳನ್ನು ನೀರು ಹಿಡಿಯಲಾರದ ಒಡಕು ತೊಟ್ಟಿಗಳನ್ನು ಕೆತ್ತಿಕೊಂಡಿದ್ದಾರೆ.
- Zechariah 7:11 ಜೆಕರ್ಯ 7:11ಆದರೆ ಅವರು ಕೇಳುವದಕ್ಕೆ ನಿರಾಕರಿಸಿದರು. ಅವರು ಹೆಗಲನ್ನು ಹಿಂದೆ ಳೆದು ಕೇಳದ ಹಾಗೆ ತಮ್ಮ ಕಿವಿಗಳನ್ನು ಮಂದಮಾಡಿ ಕೊಂಡರು.
- Hebrews 10:29 ಇಬ್ರಿಯರಿಗೆ 10:29ಯಾವನು ದೇವ ಕುಮಾರನನ್ನು ತುಳಿದು ತನ್ನನ್ನು ಪವಿತ್ರಮಾಡಿದಂಥ ಒಡಂಬಡಿಕೆಯ ರಕ್ತವನ್ನು ಅಶುದ್ಧವೆಂದೆಣಿಸಿ ಕೃಪೆಯ ಆತ್ಮನನ್ನು ತಿರಸ್ಕಾರ ಮಾಡಿದ್ದಾನೋ ಅವನು ಇನ್ನೂ ಎಷ್ಟೋ ಕ್ರೂರವಾದ ದಂಡನೆಗೆ ಪಾತ್ರನಾಗಬೇಕೆಂಬ ದನ್ನು ಯೋಚಿಸಿರಿ.
- Proverbs 1:30 ಜ್ಞಾನೋಕ್ತಿಗಳು 1:30ನನ್ನ ಆಲೋಚನೆಯನ್ನು ಗಮನಿಸದೆ ಇದ್ದದಕ್ಕಾಗಿಯೂ ನನ್ನ ಗದರಿಕೆಯನ್ನೆಲ್ಲಾ ಅಸಡ್ಡೆ ಮಾಡಿದ್ದಕ್ಕಾಗಿಯೂ
- Deuteronomy 32:15 ಧರ್ಮೋಪದೇಶಕಾಂಡ 32:15ಆದರೆ ಯೆಶುರೂನು ಕೊಬ್ಬಿ ಒದ್ದನು, ನೀನು ಕೊಬ್ಬಿದವನಾಗಿ ಉಬ್ಬಿದಿ, ನೀನು ಕೊಬ್ಬಿನಿಂದ ಮುಚ್ಚ ಲ್ಪಟ್ಟಿ. ಅವನು ತನ್ನನ್ನು ಉಂಟುಮಾಡಿದ ದೇವರನ್ನು ತೊರೆದು ತನ್ನ ರಕ್ಷಣೆಯ ಬಂಡೆಯನ್ನು ಅಲಕ್ಷ್ಯ ಮಾಡಿದನು.
- Psalm 106:12–13 ಕೀರ್ತನೆಗಳು 106:12–13ಆಗ ಅವರು ಆತನ ಮಾತುಗಳನ್ನು ನಂಬಿ ಆತನ ಸ್ತೋತ್ರ ವನ್ನು ಹಾಡಿದರು. ಆತನ ಕೆಲಸಗಳನ್ನು ಬೇಗ ಮರೆತುಬಿಟ್ಟು ಆತನ ಆಲೋಚನೆಗೆ ಅವರು ಕಾದುಕೊಳ್ಳದೆ ಇದ್ದರು.