Romans · chapter 1 · verse 24
Romans 1:24 in Kannada
ಆದಕಾರಣ ತಮ್ಮ ಹೃದಯಗಳ ದುರಾಶೆಗಳ ಮೂಲಕ ತಮ್ಮ ಸ್ವಂತ ದೇಹಗಳನ್ನು ತಮ್ಮೊಳಗೆ ಅವ ಮಾನಪಡಿಸಿಕೊಳ್ಳುವಂತೆ ದೇವರು ಅವರನ್ನು ಅಶುದ್ಧ ತನಕ್ಕೆ ಒಪ್ಪಿಸಿದನು;
Aadakaarana tamma hrudayagala duraashegala moolaka tamma svanta dehagalannu tammolage ava maanapadisikolluvante devaru avarannu ashuddha tanakke oppisidanu;
Romans 1:24 in English
- King James Version (KJV)
- Wherefore God also gave them up to uncleanness through the lusts of their own hearts, to dishonour their own bodies between themselves:
- World English Bible (WEB)
- Therefore God also gave them up in the lusts of their hearts to uncleanness, that their bodies should be dishonored among themselves;
- American Standard Version (ASV)
- Wherefore God gave them up in the lusts of their hearts unto uncleanness, that their bodies should be dishonored among themselves:
- Bible in Basic English (BBE)
- For this reason God gave them up to the evil desires of their hearts, working shame in their bodies with one another:
- Darby Translation (DBY)
- Wherefore God gave them up [also] in the lusts of their hearts to uncleanness, to dishonour their bodies between themselves:
- Webster's Bible (WBS)
- Wherefore God also gave them up to uncleanness, through the lusts of their own hearts, to dishonor their own bodies between themselves:
- Young's Literal Translation (YLT)
- Wherefore also God did give them up, in the desires of their hearts, to uncleanness, to dishonour their bodies among themselves;
Read in context
- 22ತಾವು ಜ್ಞಾನಿಗಳೆಂದು ಹೇಳಿಕೊಂಡು ಹುಚ್ಚ ರಾದರು;
- 23ಲಯವಿಲ್ಲದ ದೇವರ ಮಹಿಮೆಯನ್ನು ಲಯವಾಗುವ ಮನುಷ್ಯ, ಪಕ್ಷಿ, ಪಶುಗಳ ಮತ್ತು ಹರಿದಾಡುವವುಗಳ ಪ್ರತಿಮೆಗೆ ಮಾರ್ಪಡಿಸಿದರು.
- 24ಆದಕಾರಣ ತಮ್ಮ ಹೃದಯಗಳ ದುರಾಶೆಗಳ ಮೂಲಕ ತಮ್ಮ ಸ್ವಂತ ದೇಹಗಳನ್ನು ತಮ್ಮೊಳಗೆ ಅವ ಮಾನಪಡಿಸಿಕೊಳ್ಳುವಂತೆ ದೇವರು ಅವರನ್ನು ಅಶುದ್ಧ ತನಕ್ಕೆ ಒಪ್ಪಿಸಿದನು;
- 25ಅವರು ದೇವರ ವಿಷಯವಾದ ಸತ್ಯವನ್ನು ಸುಳ್ಳಿಗೆ ಬದಲಾಯಿಸಿ ಸೃಷ್ಟಿಕರ್ತನಿಗಿಂತ ಹೆಚ್ಚಾಗಿ ಸೃಷ್ಟಿಯನ್ನೇ ಆರಾಧಿಸಿ ಸೇವಿಸಿದರು; ಆತನು (ಸೃಷ್ಟಿಕರ್ತನು) ಎಂದೆಂದಿಗೂ ಸ್ತುತಿ ಹೊಂದತಕ್ಕವನು. ಆಮೆನ್.
- 26ಈ ಕಾರಣದಿಂದ ದೇವರು ಅವರನ್ನು ತುಚ್ಛ ವಾದ ಮನೋಭಾವಗಳಿಗೆ ಒಪ್ಪಿಸಿಬಿಟ್ಟನು. ಹೇಗೆಂದರೆ ಅವರ ಹೆಂಗಸರು ಸಹ ಸ್ವಾಭಾವಿಕವಾದ ಭೋಗ ವನ್ನು ಸ್ವಭಾವ ವಿರುದ್ಧವಾದ ಭೋಗಕ್ಕೆ ಮಾರ್ಪಡಿ ಸಿದರು.
Cross references
- Psalm 81:11–12 ಕೀರ್ತನೆಗಳು 81:11–12ಆದರೆ ನನ್ನ ಜನರು ನನ್ನ ಸ್ವರವನ್ನು ಕೇಳಲಿಲ್ಲ; ಇಸ್ರಾಯೇಲು ನನ್ನ ಮೇಲೆ ಮನಸ್ಸಿಡಲಿಲ್ಲ. ಆದದರಿಂದ ಅವರ ಹೃದಯದ ದುರಾಶೆಗೆ ಅವರನ್ನು ನಾನು ಒಪ್ಪಿಸಿದೆನು; ಅವರು ತಮ್ಮ ಆಲೋಚನೆಗಳಲ್ಲಿ ನಡೆದುಕೊಂಡರು.
- Acts 7:42 ಅಪೊಸ್ತಲರ ಕೃತ್ಯಗಳು 7:42ಆದರೆ ದೇವರು ಅವರಿಗೆ ವಿಮುಖನಾಗಿ ಆಕಾಶದ ನಕ್ಷತ್ರಗಣ ವನ್ನು ಪೂಜಿಸುವದಕ್ಕೆ ಅವರನ್ನು ಒಪ್ಪಿಸಿಬಿಟ್ಟನು. ಪ್ರವಾದಿಗಳ ಗ್ರಂಥದಲ್ಲಿ ಬರೆದಿರುವದೇನಂದರೆ-- ಓ ಇಸ್ರಾಯೇಲ್ ಮನೆತನದವರೇ, ನೀವು ಅರಣ್ಯದಲ್ಲಿ ನಾಲ್ವತ್ತು ವರುಷ ಪ್ರಾಣಿಗಳನ್ನು ಕೊಂದು ಬಲಿಗಳನ್ನು ನನಗೆ ಅರ್ಪಿಸುತ್ತಿದ್ದಿರೆ
- Acts 14:16 ಅಪೊಸ್ತಲರ ಕೃತ್ಯಗಳು 14:16ಗತಿಸಿಹೋದ ಕಾಲಗಳಲ್ಲಿ ಆತನು ಎಲ್ಲಾ ಜನಾಂಗಗಳವರನ್ನು ತಮ್ಮ ಸ್ವಂತ ಮಾರ್ಗಗಳಲ್ಲಿ ನಡೆಯುವದಕ್ಕೆ ಬಿಟ್ಟುಬಿಟ್ಟನು;
- Matthew 15:14 ಮತ್ತಾಯನು 15:14ಅವರನ್ನು ಬಿಡಿರಿ; ಅವರು ಕುರುಡರನ್ನು ನಡಿಸುವ ಕುರುಡರು. ಕುರುಡನು ಕುರುಡನನ್ನು ನಡಿಸಿದರೆ ಇಬ್ಬರೂ ಕುಣಿಯೊಳಕ್ಕೆ ಬೀಳುವರು ಎಂದು ಹೇಳಿ ದನು.
- 2 Thessalonians 2:10–12 2 ಥೆಸಲೊನೀಕದವರಿಗೆ 2:10–12ದುರ್ನೀತಿಯ ಎಲ್ಲಾ ವಂಚನೆ ಯಿಂದಲೂ ಕೂಡಿ ನಾಶವಾಗುವವರಲ್ಲಿ ಸಂಭವಿಸು ವದು; ಅವರು ಪ್ರೀತಿಯ ಸತ್ಯವನ್ನು ಅಂಗೀಕರಿಸದ ಕಾರಣ ರಕ್ಷಣೆಯನ್ನು ಹೊಂದುವದಿಲ್ಲ. ಇದೇ ಕಾರಣದಿಂದ ದೇವರು ಬಲವಾದ ಭ್ರಮೆಯನ್ನು ಅವರಲ್ಲಿಗೆ ಕಳುಹಿಸಿ ಅವರು ಆ ಸುಳ್ಳನ್ನು ನಂಬುವಂತೆ ಮಾಡುತ್ತಾನೆ. ಸತ್ಯವನ್ನು ನಂಬದೆ ಅನೀತಿಯಲ್ಲಿ ಆನಂದಪಡುವವರೆಲ್ಲರೂ ಈ ಪ್ರಕಾರ ತೀರ್ಪಿಗೆ ಒಳಗಾಗುವರು.
- Ephesians 4:18–19 ಎಫೆಸದವರಿಗೆ 4:18–19ಅವರ ಮನಸ್ಸು ಮೊಬ್ಬಾಗಿ ಹೋಗಿದೆ. ಅವರು ತಮ್ಮ ಹೃದಯದ ಕುರುಡುತನದ ನಿಮಿತ್ತದಿಂದಲೂ ತಮ್ಮಲ್ಲಿರುವ ಆಜ್ಞಾನದ ನಿಮಿತ್ತದಿಂದಲೂ ದೇವರಿಂದಾಗುವ ಜೀವಕ್ಕೆ ಅನ್ಯರಾಗಿದ್ದಾರೆ. ಅವರು ತಮ್ಮ ದುಸ್ಥಿತಿಗಾಗಿ ಸ್ವಲ್ಪವೂ ಚಿಂತಿಸದೆ ತಮ್ಮನ್ನು ಬಂಡುತನಕ್ಕೆ ಒಪ್ಪಿಸಿಕೊಟ್ಟು ಎಲ್ಲಾ ವಿಧವಾದ ಅಶುದ್ಧ ಕೃತ್ಯಗಳನ್ನು ಅತ್ಯಾಶೆಯಿಂದ ನಡಿಸುವವರಾಗಿದ್ದಾರೆ.
- Romans 1:26–28 ರೋಮಾಪುರದವರಿಗೆ 1:26–28ಈ ಕಾರಣದಿಂದ ದೇವರು ಅವರನ್ನು ತುಚ್ಛ ವಾದ ಮನೋಭಾವಗಳಿಗೆ ಒಪ್ಪಿಸಿಬಿಟ್ಟನು. ಹೇಗೆಂದರೆ ಅವರ ಹೆಂಗಸರು ಸಹ ಸ್ವಾಭಾವಿಕವಾದ ಭೋಗ ವನ್ನು ಸ್ವಭಾವ ವಿರುದ್ಧವಾದ ಭೋಗಕ್ಕೆ ಮಾರ್ಪಡಿ ಸಿದರು. ಅದರಂತೆ ಗಂಡಸರೂ ಸ್ವಾಭಾವಿಕ ಸ್ತ್ರೀ ಭೋಗವನ್ನು ಬಿಟ್ಟು ಒಬ್ಬರಮೇಲೊಬ್ಬರು ತಮ್ಮ ಕಾಮಾತುರದಿಂದ ತಾಪಪಡುತ್ತಾ ಗಂಡಸರ ಸಂಗಡ ಗಂಡಸರು ಅಯೋಗ್ಯವಾದದ್ದನ್ನು ಮಾಡುತ್ತಾ ತಮ್ಮ ತಪ್ಪಿಗೆ ತಕ್ಕ ಪ್ರತಿಫಲವನ್ನು ತಮ್ಮಲ್ಲಿ ಹೊಂದಿದರು. ಇದಲ್ಲದೆ ಅವರು ತಮ್ಮ ತಿಳುವಳಿಕೆಯಿಂದ ದೇವರನ್ನು ಸ್ಮರಿಸುವದಕ್ಕೆ ಮನಸ್ಸಿಲ್ಲದ ಕಾರಣ ದೇವರು ಅವರನ್ನು ಮಾಡಬಾರದವುಗಳನ್ನು ಮಾಡು ವಂತೆ ಅನಿಷ್ಟಭಾವಕ್ಕೆ ಒಪ್ಪಿಸಿದನು.
- Leviticus 18:22 ಯಾಜಕಕಾಂಡ 18:22ಸ್ತ್ರೀಯೊಂದಿಗೆ ಮಲಗಿಕೊಳ್ಳುವಂತೆ ಪುರು ಷನೊಂದಿಗೆ ಮಲಗಬಾರದು; ಅದು ಅಸಹ್ಯವಾದದ್ದು.
- 1 Corinthians 6:18 1 ಕೊರಿಂಥದವರಿಗೆ 6:18ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ. ಮನುಷ್ಯರು ಮಾಡುವ ಇತರ ಪಾಪಕೃತ್ಯಗಳು ದೇಹಕ್ಕೆ ಹೊರತಾಗಿವೆ. ಆದರೆ ಜಾರತ್ವ ಮಾಡುವವನು ತನ್ನ ಸ್ವಂತ ದೇಹಕ್ಕೆ ವಿರೋಧವಾಗಿ ಪಾಪವನ್ನು ಮಾಡುತ್ತಾನೆ.
- 1 Corinthians 6:13 1 ಕೊರಿಂಥದವರಿಗೆ 6:13ಆಹಾರಪದಾರ್ಥಗಳು ಹೊಟ್ಟೆಗಾಗಿ, ಹೊಟ್ಟೆಯು ಆಹಾರಪದಾರ್ಥಗಳಿಗಾಗಿ ಇವೆ; ಆದರೆ ಅದನ್ನೂ ಅವುಗಳನ್ನೂ ದೇವರು ನಾಶಮಾಡುತ್ತಾನೆ; ಈಗ ದೇಹವು ಜಾರತ್ವಕ್ಕಾಗಿ ಅಲ್ಲ, ಆದರೆ ಕರ್ತನಿಗಾಗಿ ಇದೆ; ಕರ್ತನು ದೇಹಕ್ಕೋಸ್ಕರ ಇದ್ದಾನೆ.
- 1 Thessalonians 4:4 1 ಥೆಸಲೊನೀಕದವರಿಗೆ 4:4ನಿಮ್ಮಲ್ಲಿ ಪ್ರತಿಯೊಬ್ಬನು ಪವಿತ್ರತೆಯಿಂದಲೂ ಘನತೆ ಯಿಂದಲೂ ತನ್ನ ದೇಹವನ್ನು ಕಾಪಾಡಿಕೊಳ್ಳಲು ತಿಳಿಯಬೇಕು.
- Acts 17:29–30 ಅಪೊಸ್ತಲರ ಕೃತ್ಯಗಳು 17:29–30ನಾವು ದೇವರ ಸಂತಾನದವ ರಾಗಿದ್ದ ಮೇಲೆ ದೈವತ್ವವು ಮನುಷ್ಯನ ಶಿಲ್ಪ ವಿದ್ಯೆ ಯಿಂದಲೂ ಕಲ್ಪನೆಯಿಂದಲೂ ಕೆತ್ತಿರುವ ಚಿನ್ನ ಬೆಳ್ಳಿ ಕಲ್ಲಿಗೆ ಸಮಾನವೆಂದು ನಾವು ಭಾವಿಸಲೇಬಾರದು. ಈ ಅಜ್ಞಾನಕಾಲಗಳನ್ನು ದೇವರುಲಕ್ಷ್ಯಕ್ಕೆ ತರಲಿಲ್ಲ; ಈಗಲಾದರೋ ಆತನು ಎಲ್ಲಾ ಕಡೆಯಲ್ಲಿರುವ ಮನು ಷ್ಯರೆಲ್ಲರೂ ಮಾನಸಾಂತರಪಡಬೇಕೆಂದು ಅಪ್ಪಣೆ ಕೊಡುತ್ತಾನೆ.
Original words (Greek)
- Wherefore · G1352διό dió
- God · G2316θεός theós
- also · G2532καί kaí
- gave · G3860παραδίδωμι paradídōmi
- them · G846αὐτός autós
- up · G3860παραδίδωμι paradídōmi
- to · G1519εἰς eis
- uncleanness · G167ἀκαθαρσία akatharsía
- through · G1722ἐν en
- lusts · G1939ἐπιθυμία epithymía
- own · G846αὐτός autós
- hearts · G2588καρδία kardía
- dishonour · G818ἀτιμάζω atimázō
- own · G846αὐτός autós
- bodies · G4983σῶμα sōma
- between · G1722ἐν en
- themselves · G1438ἑαυτοῦ heautoû