Romans · chapter 15 · verse 31
Romans 15:31 in Kannada
ಯೂದಾಯದಲ್ಲಿ ನಂಬದವರಿಂದ ನನ್ನನ್ನು ತಪ್ಪಿಸಬೇಕೆಂತಲೂ ಯೆರೂಸಲೇಮಿಗೋಸ್ಕರ ನನ್ನ ಸೇವೆಯು ಆ ಪರಿಶುದ್ಧರಿಗೆ ಹಿತಕರವಾಗಿ ತೋರಬೇಕೆಂತಲೂ
Yoodaayadalli nambadavarinda nannannu tappisabekentaloo yeroosalemigoskara nanna seveyu aa parishuddharige hitakaravaagi torabekentaloo
Romans 15:31 in English
- King James Version (KJV)
- That I may be delivered from them that do not believe in Judaea; and that my service which [I have] for Jerusalem may be accepted of the saints;
- World English Bible (WEB)
- that I may be delivered from those who are disobedient in Judea, and that my service which I have for Jerusalem may be acceptable to the saints,
- American Standard Version (ASV)
- that I may be delivered from them that are disobedient in Judæa, and [that] my ministration which [I have] for Jerusalem may be acceptable to the saints;
- Bible in Basic English (BBE)
- So that I may be kept safe from those in Judaea who have not put themselves under the rule of God, and that the help which I am taking for Jerusalem may be pleasing to the saints;
- Darby Translation (DBY)
- that I may be saved from those that do not believe in Judaea; and that my ministry which [I have] for Jerusalem may be acceptable to the saints;
- Webster's Bible (WBS)
- That I may be delivered from them in Judea who do not believe; and that my service which [I have] for Jerusalem, may be acceptable to the saints;
- Young's Literal Translation (YLT)
- that I may be delivered from those not believing in Judea, and that my ministration, that [is] for Jerusalem, may become acceptable to the saints;
Read in context
- 29ಹೀಗೆ ನಾನು ನಿಮ್ಮ ಬಳಿಗೆ ಬಂದಾಗ ಕ್ರಿಸ್ತನ ಸುವಾರ್ತೆಯ ಆಶೀ ರ್ವಾದದ ಪರಿಪೂರ್ಣತೆಯಿಂದ ಬರುವೆನೆಂದು ನನಗೆ ನಿಶ್ಚಯವುಂಟು.
- 30ಸಹೋದರರೇ, ನೀವು ನನಗೋಸ್ಕರ ದೇವರ ಮುಂದೆ ಮಾಡುವ ಪ್ರಾರ್ಥನೆಗಳಲ್ಲಿ ನನ್ನೊಂದಿಗೆ ಹೋರಾಟದಿಂದ ವಿಜ್ಞಾಪಿಸಿಕೊಳ್ಳಬೇಕೆಂದು ಕರ್ತ ನಾದ ಯೇಸು ಕ್ರಿಸ್ತನ ನಿಮಿತ್ತವಾಗಿಯೂ ಪವಿತ್ರಾತ್ಮನ ಪ್ರೀತಿಯ ನಿಮಿತ್ತವಾಗಿಯೂ ನಿಮ್ಮನ್ನು ಬೇಡಿ ಕೊಳ್ಳುತ್ತೇನೆ.
- 31ಯೂದಾಯದಲ್ಲಿ ನಂಬದವರಿಂದ ನನ್ನನ್ನು ತಪ್ಪಿಸಬೇಕೆಂತಲೂ ಯೆರೂಸಲೇಮಿಗೋಸ್ಕರ ನನ್ನ ಸೇವೆಯು ಆ ಪರಿಶುದ್ಧರಿಗೆ ಹಿತಕರವಾಗಿ ತೋರಬೇಕೆಂತಲೂ
- 32ಹೀಗೆ ನಾನು ದೇವರ ಚಿತ್ತಾ ನುಸಾರ ಆನಂದವುಳ್ಳವನಾಗಿ ನಿಮ್ಮಲ್ಲಿಗೆ ಬಂದು ನಿಮ್ಮ ಸಂಗಡ ವಿಶ್ರಾಂತಿ ಹೊಂದುವಂತೆಯೂ ಪ್ರಾರ್ಥಿಸಿರಿ.ಶಾಂತಿದಾಯಕನಾದ ದೇವರು ನಿಮ್ಮೆಲ್ಲರೊಂದಿಗಿ ರಲಿ. ಆಮೆನ್.
- 33ಶಾಂತಿದಾಯಕನಾದ ದೇವರು ನಿಮ್ಮೆಲ್ಲರೊಂದಿಗಿ ರಲಿ. ಆಮೆನ್.
Cross references
- 2 Thessalonians 3:2 2 ಥೆಸಲೊನೀಕದವರಿಗೆ 3:2ಮೂರ್ಖರಾದ ದುಷ್ಟಜನರ ಕೈಯಿಂದ ನಾವು ತಪ್ಪಿಸಲ್ಪಡುವ ಹಾಗೆಯೂ ಪ್ರಾರ್ಥಿಸಿರಿ; ಯಾಕಂದರೆ ಎಲ್ಲರಲ್ಲಿ ನಂಬಿಕೆ ಯಿಲ್ಲವಲ್ಲಾ.
- 2 Corinthians 8:4 2 ಕೊರಿಂಥದವರಿಗೆ 8:4ಪರಿಶುದ್ಧರಿಗೆ ದಾನ ಕೊಡುವ ಅನ್ಯೋನ್ಯತೆಯಲ್ಲಿ ತಾವು ಪಾಲುಗಾರ ರಾಗುವಂತೆ ನಮ್ಮನ್ನು ಬಹಳವಾಗಿ ಬೇಡಿಕೊಂಡರು.
- 2 Corinthians 9:1 2 ಕೊರಿಂಥದವರಿಗೆ 9:1ಪರಿಶುದ್ಧರಿಗೆ ಪರಿಚರ್ಯ ಮಾಡುವದನ್ನು ಕುರಿತು ನಿಮಗೆ ಬರೆಯುವದಕ್ಕೆ ನನಗೆ ಅವಶ್ಯವಿಲ್ಲ.
- Romans 15:25 ರೋಮಾಪುರದವರಿಗೆ 15:25ಆದರೆ ಈಗ ಪರಿಶುದ್ಧರಿಗೆ ಸೇವೆಮಾಡುವದಕ್ಕೋಸ್ಕರ ನಾನು ಯೆರೂಸಲೇಮಿಗೆ ಹೋಗುತ್ತೇನೆ.
- Acts 21:17–31 ಅಪೊಸ್ತಲರ ಕೃತ್ಯಗಳು 21:17–31ನಾವು ಯೆರೂಸಲೇಮಿಗೆ ಬಂದಾಗ ಸಹೋದ ರರು ನಮ್ಮನ್ನು ಸಂತೋಷದಿಂದ ಸೇರಿಸಿಕೊಂಡರು. ಮರುದಿನ ಪೌಲನು ನಮ್ಮ ಕೂಡ ಯಾಕೋಬನ ಬಳಿಗೆ ಬಂದನು; ಆಗ ಹಿರಿಯರೆಲ್ಲರೂ ಅಲ್ಲಿ ಕೂಡಿದ್ದರು. ಅವನು ಅವರನ್ನು ವಂದಿಸಿ ತನ್ನ ಸೇವೆಯ ಮೂಲಕ ದೇವರು ಪ್ರತ್ಯೇಕವಾಗಿ ಅನ್ಯ ಜನರಲ್ಲಿ ಎಂಥ ಕಾರ್ಯಗಳನ್ನು ಮಾಡಿಸಿದನೆಂದು ವಿವರಿಸಿದನು. ಅವರು ಅದನ್ನು ಕೇಳಿ ಕರ್ತನನ್ನು ಮಹಿಮೆಪಡಿಸಿ ಅವನಿಗೆ--ಸಹೋದರನೇ, ವಿಶ್ವಾಸಿ ಗಳಾದ ಯೆಹೂದ್ಯರು ಎಷ್ಟೋ ಸಾವಿರ ಮಂದಿ ಇದ್ದಾರೆಂಬದನ್ನು ನೀನು ನೋಡುತ್ತೀಯಲ್ಲಾ. ಅವರೆಲ್ಲರೂ ನ್ಯಾಯಪ್ರಮಾಣದ ವಿಷಯದಲ್ಲಿ ಅಭಿಮಾನವುಳ್ಳವರಾಗಿದ್ದಾರೆ. ಅವರು ತಮ್ಮ ಮಕ್ಕಳಿಗೆ ಸುನ್ನತಿ ಮಾಡಿಸಬಾರದೆಂದೂ ಆಚಾರಗಳ ಪ್ರಕಾರ ನಡೆಯಬಾರದೆಂದೂ ಹೇಳುತ್ತಾ ಮೋಶೆ ಬರೆದದ್ದನ್ನು ತ್ಯಜಿಸಬೇಕೆಂದು ಅನ್ಯಜನರಲ್ಲಿರುವ ಯೆಹೂದ್ಯರಿಗೆ ನೀನು ಬೋಧಿಸುತ್ತಿದ್ದೀ ಎಂಬದಾಗಿ ನಿನ್ನ ವಿಷಯದಲ್ಲಿ ಅವರು ಕೇಳಿದ್ದಾರೆ. ಆದದರಿಂದ ಏನು ಮಾಡಬೇಕು? ಸಮೂಹವು ಕೂಡಿಬರುವದು ಅವಶ್ಯವಾಗಿದೆ; ನೀನು ಇಲ್ಲಿಗೆ ಬಂದಿದ್ದೀ ಎಂದು ಅವರಿಗೆ ಗೊತ್ತಾಗುವದು. ಆದಕಾರಣ ನಾವು ನಿನಗೆ ಹೇಳುವದನ್ನು ಮಾಡು; ನಮ್ಮಲ್ಲಿ ಪ್ರಮಾಣ ಮಾಡಿದ ನಾಲ್ಕು ಮಂದಿ ಇದ್ದಾರೆ. ನೀನು ಅವರನ್ನು ಕರೆದುಕೊಂಡು ಹೋಗಿ ಅವರು ತಮ್ಮ ತಲೆಗಳನ್ನು ಬೋಳಿಸಿಕೊಳ್ಳುವಂತೆ ನೀನೂ ಅವ ರೊಂದಿಗೆ ನಿನ್ನನ್ನು ಶುದ್ಧಮಾಡಿಕೊಂಡು ಅವರಿ ಗೋಸ್ಕರ ವೆಚ್ಚಮಾಡು; ಆಗ ನಿನ್ನ ವಿಷಯವಾಗಿ ಅವರು ಕೇಳಿದವುಗಳು ಏನೂ ಅಲ್ಲವೆಂದೂ ನೀನು ಸಹ ಕ್ರಮವಾಗಿ ನಡೆಯುತ್ತಾ ನ್ಯಾಯಪ್ರಮಾಣ ನಂಬಿರುವ ಅನ್ಯಜನರ ವಿಷಯವಾದರೋ ವಿಗ್ರಹಕ್ಕೆ ನೈವೇದ್ಯ ಮಾಡಿದ್ದನ್ನೂ ರಕ್ತವನ್ನೂ ಕುತ್ತಿಗೆ ಹಿಸುಕಿ ಕೊಂದದ್ದನ್ನೂ ಹಾದರವನ್ನೂ ಬಿಟ್ಟು ದೂರವಾಗಿರಬೇಕೆಂಬದಾಗಿ ನಾವು ತೀರ್ಮಾನಿಸಿ ಬರೆದೆವೆಂದು ಹೇಳಿದರು. ಆಗ ಪೌಲನು ಆ ಮನುಷ್ಯರನ್ನು ಕರೆದು ಕೊಂಡು ಮರುದಿನ ಅವರೊಂದಿಗೆ ತನ್ನನ್ನು ಶುದ್ಧಮಾಡಿಕೊಂಡು ಅವರಲ್ಲಿ ಪ್ರತಿಯೊಬ್ಬನಿಗಾಗಿ ಅರ್ಪಣೆಯನ್ನು ಸಮರ್ಪಿಸುವ ವರೆಗೆ ಶುದ್ಧೀಕರಣದ ದಿವಸಗಳು ಪೂರೈಸಲ್ಪಟ್ಟವೆಂದು ಸೂಚಿಸುವಂತೆ ದೇವಾಲಯದಲ್ಲಿ ಪ್ರವೇಶಿಸಿದನು. ಆ ಏಳು ದಿವಸಗಳು ತುಂಬುತ್ತಿರುವಾಗ ಆಸ್ಯ ದಿಂದ ಬಂದಿದ್ದ ಯೆಹೂದ್ಯರು ಅವನನ್ನು ದೇವಾಲ ಯದಲ್ಲಿ ಕಂಡು ಜನರೆಲ್ಲರನ್ನು ಉದ್ರೇಕಿಸಿ ಅವನನ್ನು ಹಿಡಿದು-- ಇಸ್ರಾಯೇಲ್ ಜನರೇ, ಸಹಾಯ ಮಾಡಿರಿ; ಎಲ್ಲಾ ಕಡೆಯಲ್ಲಿ ಜನರಿಗೂ ಈ ನ್ಯಾಯ ಪ್ರಮಾಣಕ್ಕೂ ಈ ಸ್ಥಳಕ್ಕೂ ವಿರೋಧವಾಗಿ ಎಲ್ಲರಿಗೂ ಬೋಧಿಸುತ್ತಿದ್ದವನು ಈ ಮನುಷ್ಯನೇ; ಇದಲ್ಲದೆ ಗ್ರೀಕರನ್ನು ಸಹ ಈ ದೇವಾಲಯದೊಳಗೆ ಕರೆದು ಕೊಂಡು ಬಂದು ಈ ಪರಿಶುದ್ಧಸ್ಥಳವನ್ನು ಹೊಲೆ ಮಾಡಿದ್ದಾನೆ ಎಂದು ಕೂಗಿ (ಮುಂಚೆ ಎಫೆಸದವನಾದ ತ್ರೊಫಿಮನನ್ನು ಪೌಲನೊಂದಿಗೆ ಆ ಪಟ್ಟಣದಲ್ಲಿ ಅವರು ಕಂಡಿದ್ದರಿಂದ ಅವನನ್ನು ದೇವಾಲಯದೊಳಗೆ ಪೌಲನು ಕರೆದುಕೊಂಡು ಬಂದಿದ್ದನೆಂದು ಭಾವಿಸಿದರು). ಆಗ ಪಟ್ಟಣವೆಲ್ಲಾ ಕದಲಿಹೋಯಿತು. ಜನರು ಒಟ್ಟಾಗಿ ಓಡಿಬಂದು ಪೌಲನನ್ನು ಹಿಡಿದು ದೇವಾಲಯದ ಹೊರಗೆ ಎಳೆದುಕೊಂಡು ಬಂದ ಕೂಡಲೆ ಬಾಗಿಲುಗಳು ಮುಚ್ಚಲ್ಪಟ್ಟವು. ಅವರು ಅವನನ್ನು ಕೊಲ್ಲಬೇಕೆಂ ದಿದ್ದಾಗ ಯೆರೂಸಲೇಮಿನಲ್ಲೆಲ್ಲಾ ಗಲಭೆ ಆಯಿತೆಂದು ಪಟಾಲಮಿನ ಮುಖ್ಯ ನಾಯಕನಿಗೆ ವರದಿ ಬಂತು.
- Acts 25:2 ಅಪೊಸ್ತಲರ ಕೃತ್ಯಗಳು 25:2ಆಗ ಮಹಾ ಯಾಜಕನೂ ಯೆಹೂದ್ಯರಲ್ಲಿ ಮುಖ್ಯಸ್ಥರೂ ಪೌಲನಿಗೆ ವಿರೋಧವಾಗಿ ಅವನಿಗೆ ಫಿರಿಯಾದಿ ಹೇಳಿದರು.
- Acts 24:1–9 ಅಪೊಸ್ತಲರ ಕೃತ್ಯಗಳು 24:1–9ಐದು ದಿವಸಗಳಾದ ಮೇಲೆ ಮಹಾ ಯಾಜಕನಾದ ಅನನೀಯನು ಹಿರಿಯರೊಂದಿಗೂ ಒಬ್ಬಾನೊಬ್ಬ ವಾಕ್ಚಾತುರ್ಯನಾದ ತೆರ್ತುಲ್ಲ ನೆಂಬವನೊಂದಿಗೂ ಬಂದು ಪೌಲನಿಗೆ ವಿರೋಧ ವಾದದ್ದನ್ನು ಅಧಿಪತಿಗೆ ತಿಳಿಯಪಡಿಸಿದರು. ಪೌಲ ನನ್ನು ಕರೆಯಿಸಿದಾಗ ತೆರ್ತುಲ್ಲನು ಅವನ ಮೇಲೆ ತಪ್ಪು ಹೊರಿಸುವದಕ್ಕೆ ಪ್ರಾರಂಭಿಸಿ--ಮಹಾಗೌರವವುಳ್ಳ ಫೇಲಿಕ್ಸನೇ, ನಿನ್ನಿಂದ ನಾವು ಬಹು ನೆಮ್ಮದಿ ಯಾಗಿರುವದರಿಂದಲೂ ನಿನ್ನ ಪರಾಂಬರಿಕೆಯಿಂದ ಈ ಜನಾಂಗಕ್ಕೆ ಬಹು ಯೋಗ್ಯವಾದ ಕಾರ್ಯಗಳು ನಡೆಯುತ್ತಿರುವದರಿಂದಲೂ ನಾವು ಕೃತಜ್ಞತೆಯಿಂದ ಯಾವಾಗಲೂ ಎಲ್ಲಾ ಸ್ಥಳಗಳಲ್ಲಿಯೂ ಮನವರಿಕೆ ಮಾಡಿಕೊಳ್ಳುತ್ತೇವೆ. ಆದಾಗ್ಯೂ ನಾನು ನಿನ್ನನ್ನು ಹೆಚ್ಚು ಬೇಸರಗೊಳಿಸದಂತೆ ನಾವು ಹೇಳುವ ಕೆಲವು ಮಾತುಗಳನ್ನು ದಯದಿಂದ ನೀನು ಕೇಳಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ. ಯಾಕಂದರೆ ಇವನು ಉಪದ್ರವ ಕೊಡುವವನೂ ಪ್ರಪಂಚದ ಎಲ್ಲಾ ಕಡೆಗಳಲ್ಲಿರುವ ಎಲ್ಲಾ ಯೆಹೂದ್ಯರಲ್ಲಿ ದಂಗೆಯನ್ನು ಎಬ್ಬಿಸುವವನೂ ನಜರೇತಿನ ಪಂಗಡದವರ ಮುಖಂ ಡನೂ ಎಂದು ನಾವು ಕಂಡೆವು. ಇದಲ್ಲದೆ ದೇವಾ ಲಯವನ್ನು ಹೊಲೆ ಮಾಡುವದಕ್ಕೆ ಪ್ರಯತ್ನ ಮಾಡಿದ ಇವನನ್ನು ನಾವು ಹಿಡಿದುಕೊಂಡು ನಮ್ಮ ನ್ಯಾಯ ಪ್ರಮಾಣಕ್ಕನುಸಾರವಾಗಿ ವಿಚಾರಿಸಬೇಕೆಂದಿದ್ದೆವು. ಆದರೆ ಮುಖ್ಯನಾಯಕನಾದ ಲೂಸ್ಯನು ನಮ್ಮ ಬಳಿಗೆ ಬಂದು ಮಹಾ ಬಲಾತ್ಕಾರದಿಂದ ಅವನನ್ನು ನಮ್ಮ ಕೈಗಳಿಂದ ಬಿಡಿಸಿ, ನಾವು ಯಾವ ವಿಷಯಗಳಲ್ಲಿ ಅವನ ಮೇಲೆ ತಪ್ಪು ಹೊರಿಸುತ್ತೇವೋ ಅವೆಲ್ಲವುಗಳ ವಿಷಯವಾಗಿ ನೀನೇ ಸ್ವತಃ ಅವನನ್ನು ವಿಚಾರಿಸಿ ತಿಳುಕೊಳ್ಳುವಂತೆ ಅವನ ಮೇಲೆ ತಪ್ಪು ಹೊರಿಸು ವವರು ನಿನ್ನ ಬಳಿಗೆ ಬರಬೇಕೆಂದು ಅಪ್ಪಣೆ ಕೊಟ್ಟನು. ಅದೇ ಪ್ರಕಾರ ಇವೆಲ್ಲವುಗಳು ನಿಜವೆಂದು ಯೆಹೂ ದ್ಯರು ಸಹ ಸಮ್ಮತಿಸಿದರು ಅಂದನು.
- 2 Timothy 3:11 2 ತಿಮೊಥೆಯನಿಗೆ 3:11ಅಂತಿಯೋಕ್ಯ ಇಕೋನ್ಯ ಲುಸ್ತ್ರ ಎಂಬ ಪಟ್ಟಣಗಳಲ್ಲಿ ನನಗೆ ಸಂಭವಿಸಿದ ಹಿಂಸೆಗಳನ್ನೂ ಕಷ್ಟಾನುಭವಗಳನ್ನೂ ನಾನು ಎಂಥೆಂಥ ಹಿಂಸೆಗಳನ್ನು ಸಹಿಸಿಕೊಂಡೆನೆಂಬ ದನ್ನೂ ನೀನು ಪೂರ್ಣವಾಗಿ ತಿಳಿದವನಾಗಿದ್ದೀ. ಆದರೆ ಅವೆಲ್ಲವುಗಳೊಳಗಿಂದ ಕರ್ತನು ನನ್ನನ್ನು ಬಿಡಿಸಿದನು.
- 1 Thessalonians 2:15 1 ಥೆಸಲೊನೀಕದವರಿಗೆ 2:15ಆ ಯೆಹೂದ್ಯರು ಕರ್ತನಾದ ಯೇಸುವನ್ನು ಮತ್ತು ತಮ್ಮ ಸ್ವಂತ ಪ್ರವಾದಿಗಳನ್ನು ಕೊಂದರು; ನಮ್ಮನ್ನು ಹಿಂಸಿಸಿದರು; ಅವರು ದೇವರನ್ನು ಮೆಚ್ಚಿಸುವವರಲ್ಲ, ಎಲ್ಲಾ ಮನುಷ್ಯರಿಗೂ ವಿರೋಧಿಗಳಾಗಿದ್ದಾರೆ.
- 2 Timothy 4:17 2 ತಿಮೊಥೆಯನಿಗೆ 4:17ಆದರೆ ಕರ್ತನು ನನ್ನ ಬಳಿಯಲ್ಲಿ ನಿಂತು ನನ್ನನ್ನು ಬಲಪಡಿಸಿ ನನ್ನ ಮೂಲಕ ಸಾರಲ್ಪಡುವದು ಸಂಪೂರ್ಣವಾಗಿ ಗ್ರಹಿಕೆ ಯಾಗುವಂತೆಯೂ ಅನ್ಯಜನರೆಲ್ಲರೂ ಅದನ್ನು ಕೇಳುವಂತೆಯೂ ಮಾಡಿದನು; ಇದಲ್ಲದೆ ಆತನು ನನ್ನನ್ನು ಸಿಂಹದ ಬಾಯೊಳಗಿಂದ ತಪ್ಪಿಸಿದನು.
- Acts 25:24 ಅಪೊಸ್ತಲರ ಕೃತ್ಯಗಳು 25:24ಆಗ ಫೆಸ್ತನು--ಅರಸನಾದ ಅಗ್ರಿಪ್ಪನೇ, ಇಲ್ಲಿ ನಮ್ಮೊಂದಿಗೆ ಸೇರಿ ಬಂದಿರುವ ಎಲ್ಲಾ ಜನರೇ, ಇವನು ಇನ್ನು ಮೇಲೆ ಜೀವಿಸಬಾರದೆಂದು ಯೆರೂಸಲೇಮಿನಲ್ಲಿಯೂ ಇಲ್ಲಿಯೂ ಯಾವ ಮನುಷ್ಯನ ವಿಷಯವಾಗಿ ಯೆಹೂದ್ಯರ ಜನಸಮೂಹವೆಲ್ಲಾ ನನ್ನನ್ನು ಬೇಡಿ ಕೊಂಡಿತೋ ಇವನನ್ನು ನೀವು ನೋಡು
- Acts 23:12–24 ಅಪೊಸ್ತಲರ ಕೃತ್ಯಗಳು 23:12–24ಬೆಳಗಾದ ಮೇಲೆ ಯೆಹೂದ್ಯರಲ್ಲಿ ಕೆಲವರು ಒಗ್ಗಟ್ಟಾಗಿ ಕೂಡಿ ತಾವು ಪೌಲನನ್ನು ಕೊಲ್ಲುವ ತನಕ ಅನ್ನಪಾನಗಳನ್ನು ತೆಗೆದುಕೊಳ್ಳುವದಿಲ್ಲವೆಂದು ಹೇಳಿ ಶಪಥಮಾಡಿಕೊಂಡರು. ಈ ಒಳಸಂಚನ್ನು ಮಾಡಿ ದವರು ನಾಲ್ವತ್ತು ಮಂದಿಗಿಂತ ಹೆಚ್ಚಾಗಿದ್ದರು. ಅವರು ಪ್ರಧಾನಯಾಜಕರ ಮತ್ತು ಹಿರಿಯರ ಬಳಿಗೆ ಬಂದು--ನಾವು ಪೌಲನನ್ನು ಕೊಲ್ಲುವ ತನಕ ಯಾವದನ್ನೂ ತಿನ್ನುವದಿಲ್ಲವೆಂದು ನಮಗೆ ನಾವೇ ದೊಡ್ಡ ಶಪಥವನ್ನು ಮಾಡಿಕೊಂಡಿದ್ದೇವೆ. ಆದ ಕಾರಣ ಈಗ ನೀವು ಪೌಲನ ವಿಷಯದಲ್ಲಿ ಇನ್ನೂ ಸಂಪೂರ್ಣವಾಗಿ ವಿಚಾರಿಸುವವರೋ ಎಂಬಂತೆ ಮುಖ್ಯನಾಯಕನು ಅವನನ್ನು ಮಾರನೆಯ ದಿನದಲ್ಲಿ ನಿಮ್ಮ ಬಳಿಗೆ ತರುವ ಹಾಗೆ ನೀವು ಆಲೋಚನಾ ಸಭೆಯೊಂದಿಗೆ ಅವನಿಗೆ ಸೂಚಿಸಿರಿ; ಅವನು ಹತ್ತಿರಕ್ಕೆ ಬರುವ ಮುಂಚೆಯೇ ನಾವು ಅವನನ್ನು ಕೊಲ್ಲುವದಕ್ಕೆ ಸಿದ ಹೀಗೆ ಅವರು ಹೊಂಚು ಹಾಕಿಕೊಂಡಿರುವದನ್ನು ಪೌಲನ ಸಹೋದರಿಯ ಮಗನು ಕೇಳಿ ಕೋಟೆಯೊಳಗೆ ಪ್ರವೇಶಿಸಿ ಪೌಲನಿಗೆ ತಿಳಿಸಿದನು. ಆಗ ಪೌಲನು ಶತಾಧಿಪತಿಗಳಲ್ಲಿ ಒಬ್ಬನನ್ನು ಕರೆದು--ಈ ಯೌವನಸ್ಥನನ್ನು ಮುಖ್ಯ ನಾಯಕನ ಬಳಿಗೆ ಕರಕೊಂಡು ಹೋಗು; ಅವನಿಗೆ ತಿಳಿಸಬೇಕಾದ ಒಂದು ವಿಷಯ ಇದೆ ಎಂದು ಹೇಳಿದನು. ಇದರಿಂದ ಆ ಶತಾಧಿಪತಿಯು ಅವನನ್ನು ಮುಖ್ಯ ನಾಯಕನ ಬಳಿಗೆ ಕರೆದುಕೊಂಡು ಬಂದು--ನಿನಗೆ ಹೇಳಬೇಕಾದ ಒಂದು ವಿಷಯವು ಈ ಯೌವನಸ್ಥನಿಗೆ ಇರುವದರಿಂದ ಸೆರೆಯವನಾದ ಪೌಲನು ನನ್ನನ್ನು ಕರೆದು ಇವನನ್ನು ನಿನ್ನ ಬಳಿಗೆ ಕರೆದುಕೊಂಡು ಬರುವಂತೆ ಬೇಡಿಕೊಂಡನು ಎಂದು ಹೇಳಿದನು. ಆಗ ಮುಖ್ಯ ನಾಯಕನು ಅವನ ಕೈಹಿಡಿದು ಒಂದು ಕಡೆಗೆ ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ--ನೀನು ನನಗೆ ಹೇಳಬೇಕಾದದ್ದು ಏನು ಎಂದು ಅವನನ್ನು ಕೇಳಿದನು. ಅದಕ್ಕೆ ಅವನು--ಪೌಲನ ವಿಷಯದಲ್ಲಿ ಯೆಹೂದ್ಯರು ಇನ್ನೂ ಸಂಪೂ ರ್ಣವಾಗಿ ವಿಚಾರಣೆ ಮಾಡುವವರೋ ಎಂಬಂತೆ ಅವನನ್ನು ನಾಳೆ ಆಲೋಚನಾಸಭೆಗೆ ತರುವದಕ್ಕಾಗಿ ಅವರು ನಿನ್ನನ್ನು ಬೇಡಿಕೊಳ್ಳುವದಕ್ಕೆ ಅಪೇಕ್ಷೆಪಟ್ಟು ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ ನೀನು ಅವರಿಗೆ ಒಪ್ಪಬೇಡ; ಅವನನ್ನು ಕೊಲ್ಲುವ ತನಕ ಅನ್ನಪಾನಗಳನ್ನು ತೆಗೆದುಕೊಳ್ಳುವದಿಲ್ಲವೆಂದು ಶಪಥ ವನ್ನು ಮಾಡಿಕೊಂಡವರಲ್ಲಿ ನಾಲ್ವತ್ತು ಮಂದಿಗಿಂತ ಹೆಚ್ಚಾದವರು ಅವನಿಗಾಗಿ ಕಾಯುತ್ತಿದ್ದಾರೆ; ಈಗ ಅವರು ನಿನ್ನ ಮಾತಿಗಾಗಿ ಎದುರು ನೋಡುತ್ತಾ ಸಿದ್ಧವಾಗಿದ್ದಾರೆ ಎಂದು ಹೇಳಿದ ಹೀಗೆ ಮುಖ್ಯ ನಾಯಕನು ಆ ಯೌವನಸ್ಥನನ್ನು ಕಳುಹಿಸಿಕೊಡು ವಾಗ--ನೀನು ಈ ವಿಷಯಗಳನ್ನು ನನಗೆ ವ್ಯಕ್ತಪಡಿ ಸಿದ್ದೀ ಎಂದು ಯಾರಿಗೂ ಹೇಳಬೇಡ ಎಂದು ಅವನಿಗೆ ಆಜ್ಞಾಪಿಸಿದನು. ಆಗ ಅವನು ಇಬ್ಬರು ಶತಾಧಿಪತಿ ಗಳನ್ನು ತನ್ನ ಬಳಿಗೆ ಕರೆದು--ರಾತ್ರಿ ಮೂರು ಘಂಟೆಗೆ ಕೈಸರೈಯಕ್ಕೆ ಹೋಗುವದಕ್ಕಾಗಿ ಇನ್ನೂರು ಮಂದಿ ಸೈನಿಕರನ್ನೂ ಎಪ್ಪತ್ತು ಮಂದಿ ಕುದುರೆ ಸವಾರರನೂ ಇನ್ನೂರು ಮಂದಿ ಭಲ್ಲೆಯವರನ್ನೂ ಸಿದ್ಧಮಾಡಿ, ಕುದುರೆಗಳನ್ನು ತಂದು ಪೌಲನನ್ನು ಹತ್ತಿಸಿ ಅಧಿಪತಿ ಯಾದ ಫೇಲಿಕ್ಸನ ಬಳಿಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗಬೇಕೆಂದು ಹೇಳಿದನು.
Original words (Greek)
- That · G2443ἵνα hína
- delivered · G4506ῥύομαι rhýomai
- from · G575ἀπό apó
- believe · G544ἀπειθέω apeithéō
- in · G1722ἐν en
- Judaea · G2449Ἰουδαία Ioudaía
- and · G2532καί kaí
- that · G2443ἵνα hína
- my · G3450μοῦ moû
- service · G1248διακονία diakonía
- which · G3588ὁ ho
- for · G1519εἰς eis
- Jerusalem · G2419Ἱερουσαλήμ Hierousalḗm
- be · G1096γίνομαι gínomai
- accepted · G2144εὐπρόσδεκτος euprósdektos
- saints · G40ἅγιος hágios