Romans · chapter 3 · verse 22
Romans 3:22 in Kannada
ದೇವರಿಂದಾಗುವ ಆ ನೀತಿಯು ಯಾವ ದೆಂದರೆ ಯೇಸು ಕ್ರಿಸ್ತನನ್ನು ನಂಬುವದರಿಂದಲೇ. ನಂಬುವವರೆಲ್ಲರಿಗೆ ಮತ್ತು ಎಲ್ಲರ ಮೇಲೆಯೂ ದೊರ ಕುವಂಥದು. ಹೆಚ್ಚು ಕಡಿಮೆ ಏನೂ ಇಲ್ಲ;
Devarindaaguva aa neetiyu yaava dendare yesu kristanannu nambuvadarindale. Nambuvavarellarige mattu ellara meleyoo dora kuvanthadu. Hechchu kadime enoo illa;
Romans 3:22 in English
- King James Version (KJV)
- Even the righteousness of God [which is] by faith of Jesus Christ unto all and upon all them that believe: for there is no difference:
- World English Bible (WEB)
- even the righteousness of God through faith in Jesus Christ to all and on all those who believe. For there is no distinction,
- American Standard Version (ASV)
- even the righteousness of God through faith in Jesus Christ unto all them that believe; for there is no distinction;
- Bible in Basic English (BBE)
- That is, the righteousness of God through faith in Jesus Christ, to all those who have faith; and one man is not different from another,
- Darby Translation (DBY)
- righteousness of God by faith of Jesus Christ towards all, and upon all those who believe: for there is no difference;
- Webster's Bible (WBS)
- Even the righteousness of God, [which is] by faith of Jesus Christ to all, and upon all them that believe; for there is no difference:
- Young's Literal Translation (YLT)
- and the righteousness of God [is] through the faith of Jesus Christ to all, and upon all those believing, — for there is no difference,
Read in context
- 20ಆದದರಿಂದ ನ್ಯಾಯಪ್ರಮಾಣದ ಕ್ರಿಯೆಗಳಿಂದ ಯಾವನೂ ಆತನ ದೃಷ್ಟಿಯಲ್ಲಿ ನೀತಿವಂತನೆಂದು ನಿರ್ಣ ಯಿಸಲ್ಪಡುವದಿಲ್ಲ. ಯಾಕಂದರೆ ನ್ಯಾಯಪ್ರಮಾಣ ದಿಂದಲೇ ಪಾಪದ ಅರುಹು ಉಂಟಾಗುತ್ತದೆ.
- 21ಈಗಲಾದರೋ ದೇವರ ನೀತಿಯು ನ್ಯಾಯ ಪ್ರಮಾಣವಿಲ್ಲದೆ ಪ್ರಕಟವಾಗಿದೆ. ಅದು ನ್ಯಾಯ ಪ್ರಮಾಣದಿಂದಲೂ ಪ್ರವಾದಿಗಳಿಂದಲೂ ಸಾಕ್ಷಿಗೊಂ ಡಿದೆ.
- 22ದೇವರಿಂದಾಗುವ ಆ ನೀತಿಯು ಯಾವ ದೆಂದರೆ ಯೇಸು ಕ್ರಿಸ್ತನನ್ನು ನಂಬುವದರಿಂದಲೇ. ನಂಬುವವರೆಲ್ಲರಿಗೆ ಮತ್ತು ಎಲ್ಲರ ಮೇಲೆಯೂ ದೊರ ಕುವಂಥದು. ಹೆಚ್ಚು ಕಡಿಮೆ ಏನೂ ಇಲ್ಲ;
- 23ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಕಳೆದುಕೊಂಡಿ ದ್ದಾರೆ.
- 24ಅವರು ನೀತಿವಂತರೆಂದು ನಿರ್ಣಯ ಹೊಂದುವದು ಆತನ ಉಚಿತಾರ್ಥವಾದ ಕೃಪೆ ಯಿಂದಲೇ. ಇದು ಕ್ರಿಸ್ತ ಯೇಸುವಿನಿಂದಾದ ವಿಮೋ ಚನೆಯ ಮೂಲಕವಾಗಿ ಆಗುವದು.
Cross references
- Romans 10:12 ರೋಮಾಪುರದವರಿಗೆ 10:12ಇದರಲ್ಲಿ ಯೆಹೂದ್ಯರಿಗೂ ಗ್ರೀಕರಿಗೂ ಹೆಚ್ಚು ಕಡಿಮೆ ಏನೂ ಇಲ್ಲ; ಎಲ್ಲರ ಮೇಲೆ ಕರ್ತನಾಗಿರುವ ಆತನೇ ತನ್ನನ್ನು ಬೇಡಿಕೊಳ್ಳು ವವರೆಲ್ಲರಿಗೆ ಐಶ್ವರ್ಯವಂತನಾಗಿದ್ದಾನೆ.
- Galatians 3:28 ಗಲಾತ್ಯದವರಿಗೆ 3:28ನೀವೆಲ್ಲರು ಕ್ರಿಸ್ತ ಯೇಸುವಿನಲ್ಲಿ ಒಂದೇ ಆಗಿರುವದರಿಂದ ಯೆಹೂದ್ಯನು ಗ್ರೀಕನು ಎಂದೂ ದಾಸನು ಸ್ವತಂತ್ರನು ಎಂದೂ ಗಂಡು ಹೆಣ್ಣು ಎಂದೂ ಭೇದವಿಲ್ಲ.ನೀವು ಕ್ರಿಸ್ತನವರಾಗಿದ್ದರೆ ಅಬ್ರಹಾಮನ ಸಂತತಿಯವರು ವಾಗ್ದಾನಕ್ಕನುಸಾರವಾಗಿ ಬಾಧ್ಯರೂ ಆಗಿದ್ದೀರಿ.
- Galatians 2:16 ಗಲಾತ್ಯದವರಿಗೆ 2:16ಆದರೆ ಯಾವನಾದರೂ ಯೇಸು ಕ್ರಿಸ್ತನ ಮೇಲಣ ನಂಬಿಕೆಯಿಂದಲೇ ಹೊರತು ನ್ಯಾಯ ಪ್ರಮಾಣದ ಕ್ರಿಯೆಗಳಿಂದ ನೀತಿವಂತನೆಂದು ನಿರ್ಣ ಯಿಸಲ್ಪಡುವದಿಲ್ಲವೆಂಬದು ನಮಗೆ ತಿಳಿದಿರುವದ ರಿಂದ ನಾವು ಸಹ ನ್ಯಾಯ ಪ್ರಮಾಣದ ಕ್ರಿಯೆ ಗಳಿಂದಲ್ಲ, ಆದರೆ ಕ್ರಿಸ್ತನ ಮೇಲಣ ನಂಬಿಕೆಯಿಂದಲೇ ನೀತಿವಂತರೆಂದು ನಿರ್ಣಯಿ
- Romans 8:1 ರೋಮಾಪುರದವರಿಗೆ 8:1ಆದದರಿಂದ ಕ್ರಿಸ್ತ ಯೇಸುವಿನಲ್ಲಿ ರುವವರಿಗೆ ಅಪರಾಧ ನಿರ್ಣಯವು ಈಗ ಇಲ್ಲವೇ ಇಲ್ಲ; ಇವರು ಶರೀರಕ್ಕನುಸಾರವಾಗಿ ಅಲ್ಲ, ಆತ್ಮನಿಗನುಸಾರವಾಗಿಯೇ ನಡೆಯುವವರಾಗಿದ್ದಾರೆ.
- Romans 5:1–11 ರೋಮಾಪುರದವರಿಗೆ 5:1–11ಹೀಗಿರಲಾಗಿ ನಾವು ನಂಬಿಕೆಯಿಂದ ನೀತಿವಂತರಾದ ಕಾರಣ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ನಮಗೆ ದೇವರೊಂದಿಗೆ ಸಮಾಧಾನ ಉಂಟಾಗಿದೆ. ಈಗ ನಾವು ನೆಲೆ ಗೊಂಡಿರುವ ಈ ಕೃಪೆಯಲ್ಲಿ ಆತನ ಮುಖಾಂತರವೇ ನಂಬಿಕೆಯಿಂದ ಪ್ರವೇಶವಾದದರಿಂದ ದೇವರ ಮಹಿ ಮೆಯ ನಿರೀಕ್ಷೆಯಲ್ಲಿ ಉಲ್ಲಾಸಿಸುತ್ತೇವೆ. ಇದು ಮಾತ್ರವಲ್ಲದೆ ನಮಗೆ ಉಂಟಾಗುವ ಉಪದ್ರವ ಗಳಲ್ಲಿಯೂ ಹೆಚ್ಚಳ ಪಡುತ್ತೇವೆ; ಉಪದ್ರವದಿಂದ ತಾಳ್ಮೆಯೂ ತಾಳ್ಮೆಯಿಂದ ಅನುಭವವೂ ಅನುಭವ ದಿಂದ ನಿರೀಕ್ಷೆಯೂ ಉಂಟಾಗುತ್ತವೆಂದು ಬಲ್ಲೆವು. ಈ ನಿರೀಕ್ಷೆಯು ನಾಚಿಕೆಪಡಿಸುವದಿಲ್ಲ; ನಮಗೆ ಕೊಡಲ್ಪಟ್ಟಿರುವ ಪವಿತ್ರಾತ್ಮನ ಮೂಲಕವಾಗಿ ದೇವರ ಪ್ರೀತಿಯು ನಮ್ಮ ಹೃದಯಗಳಲ್ಲಿ ಧಾರಾಳವಾಗಿ ಸುರಿದದೆ. ನಾವು ಅಶಕ್ತರಾಗಿದ್ದಾಗಲೇ ಕ್ರಿಸ್ತನು ನೇಮಿತ ಕಾಲ ದಲ್ಲಿ ಭಕ್ತಿಹೀನರಿಗೋಸ್ಕರ ಪ್ರಾಣಕೊಟ್ಟನು. ನೀತಿ ವಂತನಿಗೋಸ್ಕರ ಯಾರಾದರೂ ಪ್ರಾಣ ಕೊಡುವದು ಅಪರೂಪ, ಒಳ್ಳೆಯವರಿಗೋಸ್ಕರ ಪ್ರಾಣಕೊಡು ವದಕ್ಕೆ ಯಾವನಾದರೂ ಧೈರ್ಯಮಾಡಿದರೂ ಮಾಡಾನು. ಆದರೆ ನಾವು ಪಾಪಿಗಳಾಗಿದ್ದಾಗಲೂ ಕ್ರಿಸ್ತನು ನಮಗೋಸ್ಕರ ಪ್ರಾಣಕೊಟ್ಟದ್ದರಲ್ಲಿ ದೇವರು ನಮ್ಮ ಮೇಲೆ ತನಗಿರುವ ಪ್ರೀತಿಯನ್ನು ತೋರ್ಪಡಿಸಿದ್ದಾನೆ. ಈಗ ನಾವು ಆತನ ರಕ್ತದಿಂದ ನೀತಿವಂತ ರಾಗಿರಲಾಗಿ ಬರುವ ಕೋಪದಿಂದ ಆತನ ಮೂಲಕ ರಕ್ಷಿಸಲ್ಪಡುವದು ಮತ್ತೂ ನಿಶ್ಚಯವಲ್ಲವೇ. ವೈರಿ ಗಳಾಗಿದ್ದ ನಾವು ದೇವರ ಮಗನ ಮರಣದ ಮೂಲಕ ಆತನೊಂದಿಗೆ ಸಮಾಧಾನವಾಗಿದ್ದರೆ ಸಮಾಧಾನವಾದ ನಮಗೆ ಆತನ ಜೀವದಿಂದ ರಕ್ಷಣೆಯಾಗುವದು ಮತ್ತೂ ನಿಶ್ಚಯವಲ್ಲವೇ. ಇಷ್ಟು ಮಾತ್ರವಲ್ಲದೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ಈಗ ಸಮಾಧಾನ ಹೊಂದಿದವರಾಗಿ ಆತನ ಮುಖಾಂತರ ನಾವು ಸಹ ದೇವರಲ್ಲಿ ಹರ್ಷಗೊಳ್ಳುತ್ತೇವೆ.
- Colossians 3:11 ಕೊಲೊಸ್ಸೆಯವರಿಗೆ 3:11ಇದರಲ್ಲಿ ಗ್ರೀಕನು ಯೆಹೂದ್ಯನು ಎಂಬ ಭೇದವಿಲ್ಲ; ಸುನ್ನತಿ ಮಾಡಿಸಿ ಕೊಂಡವರು ಸುನ್ನತಿ ಮಾಡಿಸಿಕೊಳ್ಳದವರು ಎಂಬ ಭೇದವಿಲ್ಲ, ಮ್ಲೇಚ್ಛ ಹೂನರೆಂದಿಲ್ಲ; ದಾಸನು ಸ್ವತಂತ್ರನು ಎಂಬ ಭೇದವಿಲ್ಲ; ಆದರೆ ಕ್ರಿಸ್ತನೇ ಸಮಸ್ತರಲ್ಲಿಯೂ ಸಮಸ್ತವೂ ಆಗಿದ್ದಾನೆ.
- Galatians 3:6–9 ಗಲಾತ್ಯದವರಿಗೆ 3:6–9ಅಬ್ರಹಾಮನು ಸಹದೇವ ರನ್ನು ನಂಬಿದನು, ಆ ನಂಬಿಕೆಯು ಅವನಿಗೆ ನೀತಿ ಯೆಂದು ಎಣಿಸಲ್ಪಟ್ಟಿತು. ಆದದರಿಂದ ನಂಬುವವರೇ ಅಬ್ರಹಾಮನ ಮಕ್ಕಳೆಂದು ನೀವು ತಿಳಿದುಕೊಳ್ಳಿರಿ. ದೇವರು ಅನ್ಯಜನರನ್ನು ನಂಬಿಕೆಯ ಮೂಲಕ ವಾಗಿಯೇ ನೀತಿವಂತರೆಂದು ನಿರ್ಣಯಿಸುವನೆಂಬ ದಾಗಿ ಬರಹವು ಮೊದಲೇ ಕಂಡು ಅಬ್ರಹಾಮ ನಿಗೆ--ನಿನ್ನ ಮೂಲಕ ಎಲ್ಲಾ ಜನಾಂಗಗಳವರಿಗೆ ಆಶೀರ್ವಾದವುಂಟಾಗುವದೆಂಬ ಸುವಾರ್ತೆಯನ್ನು ಮುಂಚಿತವಾಗಿಯೇ ಸಾರಿತು ಎಂಬದೇ. ಹೀಗಿರಲಾಗಿ ನಂಬುವವರು ನಂಬಿಕೆಯಿಟ್ಟ ಅಬ್ರಹಾಮನೊಂದಿಗೆ ಆಶೀರ್ವಾದವನ್ನು ಹೊಂದುತ್ತಾರೆ.
- Philippians 3:9 ಫಿಲಿಪ್ಪಿಯವರಿಗೆ 3:9ನಾನು ಕ್ರಿಸ್ತನಲ್ಲಿರುವ ವನಾಗಿ ಕಾಣಿಸಿಕೊಳ್ಳಬೇಕೆಂದು ನ್ಯಾಯಪ್ರಮಾಣ ದಿಂದಾಗುವ ಸ್ವನೀತಿಯನ್ನಾಶ್ರಯಿಸದೆ ಆತನನ್ನು ನಂಬು ವದರಿಂದ ದೊರಕುವಂಥ ಅಂದರೆ ನಂಬಿಕೆಯ ಆಧಾರ ದಿಂದ ದೇವರು ಕೊಡುವಂಥ ನೀತಿಯನ್ನೇ ಹೊಂದಿ ದ್ದೇನೆ.
- Matthew 22:11–12 ಮತ್ತಾಯನು 22:11–12ತರುವಾಯ ಅರಸನು ಅತಿಥಿಗಳನ್ನು ನೋಡುವದಕ್ಕಾಗಿ ಒಳಗೆ ಬಂದು ಮದುವೆಯ ಉಡು ಪಿಲ್ಲದೆ ಇದ್ದ ಒಬ್ಬ ಮನುಷ್ಯನನ್ನು ಅಲ್ಲಿ ಕಂಡನು. ಅವನು ಆ ಮನುಷ್ಯನಿಗೆ--ಸ್ನೇಹಿತನೇ, ಮದುವೆಯ ಉಡುಪಿಲ್ಲದೆ ನೀನು ಒಳಗೆ ಹೇಗೆ ಬಂದಿ ಎಂದು ಕೇಳಲು ಅವನು ಸುಮ್ಮನಿದ್ದನು.
- Romans 4:20–22 ರೋಮಾಪುರದವರಿಗೆ 4:20–22ದೇವರು ಮಾಡಿದ ವಾಗ್ದಾನದ ವಿಷಯದಲ್ಲಿ ಅವನು ಅಪನಂಬಿಕೆಯಿಂದ ಚಂಚಲಚಿತ್ತನಾಗಲಿಲ್ಲ; ಆದರೆ ದೇವರನ್ನು ಘನಪಡಿಸುವವನಾಗಿ ದೃಢನಂಬಿಕೆಯುಳ್ಳ ವನಾದನು. ಆತನು ತನ್ನ ವಾಗ್ದಾನವನ್ನು ನೆರವೇರಿ ಸುವದಕ್ಕೆ ಸಮರ್ಥನೆಂದು ಪೂರಾ ಭರವಸವಿಟ್ಟನು. ಆದದರಿಂದ ಆ ನಂಬಿಕೆಯು ಅವನ ಲೆಕ್ಕಕ್ಕೆ ನೀತಿ ಯೆಂದು ಎಣಿಸಲ್ಪಟ್ಟಿತು.
- Romans 2:1 ರೋಮಾಪುರದವರಿಗೆ 2:1ಆದದರಿಂದ ಓ ಮನುಷ್ಯನೇ, ತೀರ್ಪು ಮಾಡುವ ನೀನು ಯಾವನಾಗಿದ್ದರೂ ನೆವವಿಲ್ಲದವನಾಗಿದ್ದೀ; ಹೇಗೆಂದರೆ ಬೇರೊಬ್ಬನಿಗೆ ತೀರ್ಪು ಮಾಡುವ ನೀನು ಅಂಥವುಗಳನ್ನೇ ಮಾಡುವವ ನಾದ್ದರಿಂದ ನಿನ್ನಷ್ಟಕ್ಕೆ ನೀನೇ ತೀರ್ಪು ಮಾಡಿಕೊಂಡ ಹಾಗಾಯಿತು.
- Isaiah 61:10 ಯೆಶಾಯ 61:10ನಾನು ಕರ್ತನಲ್ಲಿ ಬಹಳವಾಗಿ ಸಂತೋಷಿ ಸುವೆನು; ನನ್ನ ಪ್ರಾಣವು ನನ್ನ ದೇವರಲ್ಲಿ ಉಲ್ಲಾಸ ಪಡುವದು; ಯಾಕಂದರೆ ಮದಲಿಂಗನು ಸೌಂದರ್ಯ ವಾಗಿ ತನ್ನನ್ನು ಶೃಂಗರಿಸುವ ಹಾಗೆಯೂ ಮದಲ ಗಿತ್ತಿಯು ಆಭರಣಗಳಿಂದ ತನ್ನನ್ನು ಅಲಂಕರಿಸುವ ಹಾಗೆಯೂ ಆತನು ರಕ್ಷಣೆಯ ವಸ್ತ್ರಗಳನ್ನು ನನಗೆ ತೊಡಿಸಿದ್ದಾನೆ, ನೀತಿಯ ನಿಲುವಂಗಿಯನ್ನು ನನಗೆ ಧರಿಸುವಂತೆ ಮಾಡಿದ್ದಾನೆ.ಭೂಮಿಯು ತನ್ನ ಮೊಳಕೆಯನ್ನು ಹೇಗೆ ಹೊರಡಿಸುವದೋ ತೋಟವು ತನ್ನಲ್ಲಿ ಬಿತ್ತಿದ್ದನ್ನು ಹೇಗೆ ಮೊಳಿಸುವದೋ ಹಾಗೆಯೇ ದೇವರಾದ ಕರ್ತನ ನೀತಿಯನ್ನೂ ಸ್ತೋತ್ರವನ್ನೂ ಎಲ್ಲಾ ಜನಾಂಗಗಳ ಮುಂದೆ ಮೊಳೆಯಿಸುವನು.
Original words (Greek)
- Even · G1161δέ dé
- righteousness · G1343δικαιοσύνη dikaiosýnē
- God · G2316θεός theós
- by · G1223διά diá
- faith · G4102πίστις pístis
- Jesus · G2424Ἰησοῦς Iēsoûs
- Christ · G5547Χριστός Christós
- unto · G1519εἰς eis
- all · G3956πᾶς pâs
- and · G2532καί kaí
- upon · G1909ἐπί epí
- all · G3956πᾶς pâs
- believe · G4100πιστεύω pisteúō
- for · G1063γάρ gár
- is · G2076ἐστί estí
- no · G3756οὐ ou
- difference · G1293διαστολή diastolḗ