Romans · chapter 3 · verse 24
Romans 3:24 in Kannada
ಅವರು ನೀತಿವಂತರೆಂದು ನಿರ್ಣಯ ಹೊಂದುವದು ಆತನ ಉಚಿತಾರ್ಥವಾದ ಕೃಪೆ ಯಿಂದಲೇ. ಇದು ಕ್ರಿಸ್ತ ಯೇಸುವಿನಿಂದಾದ ವಿಮೋ ಚನೆಯ ಮೂಲಕವಾಗಿ ಆಗುವದು.
Avaru neetivantarendu nirnaya honduvadu aatana uchitaarthavaada krupe yindale. Idu krista yesuvinindaada vimo chaneya moolakavaagi aaguvadu.
Romans 3:24 in English
- King James Version (KJV)
- Being justified freely by his grace through the redemption that is in Christ Jesus:
- World English Bible (WEB)
- being justified freely by his grace through the redemption that is in Christ Jesus,
- American Standard Version (ASV)
- being justified freely by his grace through the redemption that is in Christ Jesus:
- Bible in Basic English (BBE)
- And they may have righteousness put to their credit, freely, by his grace, through the salvation which is in Christ Jesus:
- Darby Translation (DBY)
- being justified freely by his grace through the redemption which [is] in Christ Jesus;
- Webster's Bible (WBS)
- Being justified freely by his grace, through the redemption that is in Jesus Christ:
- Young's Literal Translation (YLT)
- being declared righteous freely by His grace through the redemption that [is] in Christ Jesus,
Read in context
- 22ದೇವರಿಂದಾಗುವ ಆ ನೀತಿಯು ಯಾವ ದೆಂದರೆ ಯೇಸು ಕ್ರಿಸ್ತನನ್ನು ನಂಬುವದರಿಂದಲೇ. ನಂಬುವವರೆಲ್ಲರಿಗೆ ಮತ್ತು ಎಲ್ಲರ ಮೇಲೆಯೂ ದೊರ ಕುವಂಥದು. ಹೆಚ್ಚು ಕಡಿಮೆ ಏನೂ ಇಲ್ಲ;
- 23ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಕಳೆದುಕೊಂಡಿ ದ್ದಾರೆ.
- 24ಅವರು ನೀತಿವಂತರೆಂದು ನಿರ್ಣಯ ಹೊಂದುವದು ಆತನ ಉಚಿತಾರ್ಥವಾದ ಕೃಪೆ ಯಿಂದಲೇ. ಇದು ಕ್ರಿಸ್ತ ಯೇಸುವಿನಿಂದಾದ ವಿಮೋ ಚನೆಯ ಮೂಲಕವಾಗಿ ಆಗುವದು.
- 25ಈತನು ತನ್ನ ರಕ್ತದ ಮೂಲಕ ನಂಬಿಕೆಯಿದ್ದವರಿಗಾಗಿ ಪಾಪದ ಪ್ರಾಯಶ್ಚಿತ್ತವಾಗಿರಬೇಕೆಂದು ದೇವರು ಈತನನ್ನು ಮುಂದಿಟ್ಟನು. ದೇವರು ಹಿಂದಿನಕಾಲದ ಪಾಪಗಳನ್ನು ಸಹಿಸಿಕೊಂಡಿರಲಾಗಿ
- 26ತನ್ನ ನೀತಿಯನ್ನು ಈಗಿನ ಕಾಲದಲ್ಲಿ ಹೀಗೆ ತೋರಿಸಿ ತಾನು ನೀತಿವಂತನಾಗಿಯೂ ಯೇಸುವಿನಲ್ಲಿ ನಂಬಿಕೆಯಿಡುವವರನ್ನು ನೀತಿವಂತ ರೆಂದು ನಿರ್ಣಯಿಸುವವನಾಗಿಯೂ ಪ್ರಸಿದ್ಧಿಪಡಿಸಿ ಕೊಂಡನು.
Cross references
- 1 Peter 1:18–19 1 ಪೇತ್ರನು 1:18–19ನಿಮ್ಮ ತಂದೆ ಗಳಿಂದ ಕಲಿತುಕೊಂಡ ಸಂಪ್ರದಾಯದ ವ್ಯರ್ಥವಾದ ನಡವಳಿಕೆಯಿಂದ ನಿಮಗೆ ಬಿಡುಗಡೆಯಾದದ್ದು ನಶಿಸಿ ಹೋಗುವ ಬೆಳ್ಳಿ ಬಂಗಾರದಿಂದಲ್ಲ; ಆದರೆ ಪೂರ್ಣಾಂಗವಾದ ನಿಷ್ಕಳಂಕ ಕುರಿಮರಿಯ ರಕ್ತ ದಿಂದಲೋ ಎಂಬಂತೆ ಕ್ರಿಸ್ತನ ಅಮೂಲ್ಯವಾದ ರಕ್ತದಿಂದಲೇ ಎಂದು ನೀವು ಬಲ್ಲಿರಲ್ಲವೇ.
- Titus 3:5–7 ತೀತನಿಗೆ 3:5–7ನಾವು ಮಾಡಿದ ನೀತಿಯ ಕ್ರಿಯೆ ಗಳಿಂದಲ್ಲ, ಆತನ ಕರುಣೆಯಿಂದಲೇ ಪುನರ್ಜನ್ಮದ ತೊಳೆಯುವಿಕೆಯಿಂದಲೂ ಪವಿತ್ರಾತ್ಮನು ನೂತನ ಸ್ವಭಾವವನ್ನುಂಟು ಮಾಡುವದರಿಂದಲೂ ಆತನು ನಮ್ಮನ್ನು ರಕ್ಷಿಸಿದನು. ಆತನು (ದೇವರು) ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ಮೂಲಕ ಆತನನ್ನು (ಪವಿತ್ರಾತ್ಮನನ್ನು) ನಮ್ಮ ಮೇಲೆ ಧಾರಾಳವಾಗಿ ಸುರಿಸಿ ದ್ದಾನೆ. ನಾವು ಹೀಗೆ ಆತನ ಕೃಪೆಯಿಂದ ನೀತಿವಂತ ರೆಂದು ನಿರ್ಣಯಿಸಲ್ಪಟ್ಟು ನಿತ್ಯಜೀವದ ನಿರೀಕ್ಷೆಗನು ಸಾರವಾಗಿ ಬಾಧ್ಯರಾದೆವು.
- Colossians 1:14 ಕೊಲೊಸ್ಸೆಯವರಿಗೆ 1:14ಆತನಲ್ಲಿ (ಆ ಕುಮಾರನಲ್ಲಿ) ಆತನ ರಕ್ತದ ಮೂಲಕ ನಮಗೆ ವಿಮೋಚನೆಯು ಅಂದರೆ ಪಾಪಪರಿಹಾರವು ಉಂಟಾಯಿತು.
- Ephesians 1:6–7 ಎಫೆಸದವರಿಗೆ 1:6–7ತನ್ನ ಕೃಪಾಮಹಿಮೆಯ ಸ್ತುತಿಗಾಗಿ ಆತನು ನಮ್ಮನ್ನು ಆ ಪ್ರಿಯನಲ್ಲಿ ಅಂಗೀಕರಿಸಿದ್ದಾನೆ. ಆತನ ಕೃಪಾ ಐಶ್ವರ್ಯ ಕ್ಕನುಸಾರವಾಗಿ ಆತನ ರಕ್ತದ ಮೂಲಕ ಆತನಲ್ಲಿ ನಮಗೆ ವಿಮೋಚನೆಯು ಅಂದರೆ ಪಾಪಗಳ ಕ್ಷಮಾ ಪಣೆಯು ಉಂಟಾಯಿತು.
- Titus 2:14 ತೀತನಿಗೆ 2:14ಆತನು ನಮ್ಮನ್ನು ಸಕಲ ದುಷ್ಟತನದಿಂದ ವಿಮೋಚಿಸುವದಕ್ಕೂ ಸತ್ಕ್ರಿಯೆಗಳಲ್ಲಿ ಆಸಕ್ತರಾದ ಅಸಮಾನ್ಯ ಜನರನ್ನು ತನಗಾಗಿ ಪರಿಶುದ್ಧ ಮಾಡುವದಕ್ಕೂ ನಮಗೋಸ್ಕರ ತನ್ನನ್ನು ತಾನೇ ಒಪ್ಪಿಸಿ ಕೊಟ್ಟನು.ಈ ಕಾರ್ಯಗಳ ವಿಷಯದಲ್ಲಿ ಮಾತನಾಡುತ್ತಾ ಎಚ್ಚರಿಸುತ್ತಾ ಪೂರ್ಣ ಅಧಿಕಾರದಿಂದ ಖಂಡಿಸುತ್ತಾ ಇರು. ಯಾರೂ ನಿನ್ನನ್ನು ತಿರಸ್ಕರಿಸದಿರಲಿ.
- Romans 5:9 ರೋಮಾಪುರದವರಿಗೆ 5:9ಈಗ ನಾವು ಆತನ ರಕ್ತದಿಂದ ನೀತಿವಂತ ರಾಗಿರಲಾಗಿ ಬರುವ ಕೋಪದಿಂದ ಆತನ ಮೂಲಕ ರಕ್ಷಿಸಲ್ಪಡುವದು ಮತ್ತೂ ನಿಶ್ಚಯವಲ್ಲವೇ.
- Romans 4:16 ರೋಮಾಪುರದವರಿಗೆ 4:16ಆದಕಾರಣ ಕೃಪೆ ಯಿಂದಲೇ ದೊರೆಯುವ ಆ ಬಾಧ್ಯತೆಯು ನಂಬಿಕೆಯ ಮುಖಾಂತರ ಸಿಕ್ಕುತ್ತದೆ. ಹೀಗೆ ಆ ವಾಗ್ದಾನವು ಅಬ್ರಹಾ ಮನ ಸಂತತಿಯವರೆಲ್ಲರಿಗೂ ಅಂದರೆ ನ್ಯಾಯ ಪ್ರಮಾಣವನ್ನು ಆಧಾರ ಮಾಡಿಕೊಂಡವರಿಗೆ ಮಾತ್ರ ವಲ್ಲದೆ ನಮ್ಮೆಲ್ಲರಿಗೆ ತಂದೆಯಾಗಿರುವ ಅಬ್ರಹಾಮ ನಲ್ಲಿದ್ದಂಥ ನಂಬಿಕೆ
- 1 Corinthians 1:30 1 ಕೊರಿಂಥದವರಿಗೆ 1:30ಆದರೆ ನೀವು ಕ್ರಿಸ್ತ ಯೇಸುವಿನಲ್ಲಿ ರುವದು ಆತನಿಂದಲೇ; ಆತನು ನಮಗೆ ದೇವರ ಕಡೆಯಿಂದ ಜ್ಞಾನವು ನೀತಿ ಶುದ್ಧೀಕರಣ ವಿಮೋಚನೆ ಗಳಾಗಿ ಮಾಡಲ್ಪಟ್ಟಿದ್ದಾನೆ.ಹೆಚ್ಚಳ ಪಡುವವನು ಕರ್ತನಲ್ಲಿಯೇ ಹೆಚ್ಚಳಪಡಲಿ ಎಂದು ಬರೆಯಲ್ಪಟ್ಟಂತೆ ಆಯಿತು.
- Matthew 20:28 ಮತ್ತಾಯನು 20:28ಮನುಷ್ಯ ಕುಮಾರನು ಸಹ ಸೇವೆ ಮಾಡಿಸಿಕೊಳ್ಳುವದಕ್ಕಾಗಿ ಅಲ್ಲ, ಸೇವೆ ಮಾಡುವದಕ್ಕಾಗಿಯೂ ಅನೇಕರಿಗಾಗಿ ತನ್ನ ಪ್ರಾಣವನ್ನು ಈಡುಕೊಡುವದಕ್ಕಾಗಿಯೂ ಬಂದನು ಎಂದು ಹೇಳಿದನು.
- Ephesians 2:7–10 ಎಫೆಸದವರಿಗೆ 2:7–10ಹೀಗೆ ಕ್ರಿಸ್ತ ಯೇಸುವಿನ ಲ್ಲಿರುವ ಕರುಣೆಯ ಮೂಲಕ ತನ್ನ ಅಪಾರವಾದ ಕೃಪಾತಿಶಯವನ್ನು ಮುಂದಣ ಯುಗಗಳಲ್ಲಿ ನಮಗೆ ತೋರಿಸಬೇಕೆಂದಿದ್ದನು. ನಂಬಿಕೆಯ ಮೂಲಕ ಕೃಪೆ ಯಿಂದಲೇ ನೀವು ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, ಅದು ದೇವರ ದಾನವೇ. ಅದು ಕ್ರಿಯೆಗಳಿಂದ ಉಂಟಾದದ್ದಲ್ಲ; ಆದದರಿಂದ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದ ವಿಲ್ಲ. ದೇವರು ಮುಂದಾಗಿ ನೇಮಿಸಿದ ಸತ್ಕ್ರಿಯೆ ಗಳಲ್ಲಿ ನಾವು ನಡೆಯುವಂತೆ ಕ್ರಿಸ್ತ ಯೇಸುವಿನಲ್ಲಿ ಸೃಷ್ಟಿಸಲ್ಪಟ್ಟವರಾದ ನಾವು ಆತನ ಕೆಲಸವಾಗಿದ್ದೇವೆ.
- 1 Corinthians 6:11 1 ಕೊರಿಂಥದವರಿಗೆ 6:11ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ; ಆದರೂ ಕರ್ತನಾದ ಯೇಸುವಿನ ಹೆಸರಿನಲ್ಲಿಯೂ ನಮ್ಮ ದೇವರ ಆತ್ಮನಲ್ಲಿಯೂ ತೊಳೆಯಲ್ಪಟ್ಟಿರಿ; ಶುದ್ಧೀಕರಿಸಲ್ಪಟ್ಟಿರಿ ಮತ್ತು ನೀತಿವಂತರೆಂಬ ನಿರ್ಣಯವನ್ನು ಹೊಂದಿದಿರಿ.
- Romans 5:16–19 ರೋಮಾಪುರದವರಿಗೆ 5:16–19ಇದಲ್ಲದೆ ಪಾಪಮಾಡಿದ ಆ ಒಬ್ಬನಿಂದಲೇ ಬಂದಂತೆ ಈ ದಾನವು ಬರಲಿಲ್ಲ; ಯಾಕಂದರೆ ಒಬ್ಬ ಮನುಷ್ಯನ ಅಪರಾಧದ ದೆಸೆಯಿಂದಲೇ ತೀರ್ಪು ಉಂಟಾಯಿತು. ಆದರೆ ಉಚಿತವಾದ ದಾನವು ಅನೇಕರ ಅಪರಾಧಗಳ ಕಾರಣದಿಂದ ಉಂಟಾಗಿ ನಿರ್ಣಯಿಸುವಂಥದ್ದಾಗಿದೆ. ಒಬ್ಬನ ಅಪರಾಧದಿಂದ ಮರಣವು ಉಂಟಾಗಿ ಆ ಒಬ್ಬನ ದೆಸೆಯಿಂದಲೇ ಆಳಿದ್ದರೆ ಕೃಪೆಯನ್ನೂ ನೀತಿಯ ದಾನವನ್ನೂ ಹೇರಳವಾಗಿ ಹೊಂದಿದವರು ಯೇಸು ಕ್ರಿಸ್ತನೆಂಬ ಈ ಒಬ್ಬನ ಮೂಲಕ ಜೀವದಲ್ಲಿ ಆಳುವದು ಮತ್ತೂ ನಿಶ್ಚಯವಲ್ಲವೇ). ಹೀಗಿರಲಾಗಿ ಒಬ್ಬನ ಅಪರಾಧದಿಂದಲೇ ಎಲ್ಲಾ ಮನುಷ್ಯರಿಗೆ ಅಪರಾಧ ನಿರ್ಣಯವು ಹೇಗೆ ಬಂತೋ ಹಾಗೆಯೇ ಒಬ್ಬನ ನೀತಿಯಿಂದಲೇ ಉಚಿತಾರ್ಥವಾದ ದಾನವು ಎಲ್ಲಾ ಮನುಷ್ಯರಿಗೆ ಜೀವದ ನೀತಿ ನಿರ್ಣಯಕ್ಕಾಗಿ ಬಂದಿತು. ಒಬ್ಬ ಮನುಷ್ಯನ ಅವಿಧೇಯತ್ವದಿಂದ ಅನೇಕರು ಹೇಗೆ ಪಾಪಿಗಳಾ ದರೋ ಹಾಗೆಯೇ ಒಬ್ಬನ ವಿಧೇಯತ್ವದಿಂದ ಅನೇಕರು ನೀತಿವಂತರಾಗುವರು.