Romans · chapter 3 · verse 31
Romans 3:31 in Kannada
ಹಾಗಾದರೆ ನಂಬಿಕೆಯಿಂದ ನ್ಯಾಯಪ್ರಮಾಣವನ್ನು ನಿರರ್ಥಕ ಮಾಡುತ್ತೇವೋ? ಹಾಗೆ ಎಂದಿಗೂ ಅಲ್ಲ; ಹೌದು, ನಾವು ನ್ಯಾಯಪ್ರಮಾಣವನ್ನು ಸ್ಥಿರಪಡಿಸುತ್ತೇವೆ.
Haagaadare nambikeyinda nyaayapramaanavannu nirarthaka maaduttevo? Haage endigoo alla; haudu, naavu nyaayapramaanavannu sthirapadisutteve.
Romans 3:31 in English
- King James Version (KJV)
- Do we then make void the law through faith? God forbid: yea, we establish the law.
- World English Bible (WEB)
- Do we then nullify the law through faith? May it never be! No, we establish the law.
- American Standard Version (ASV)
- Do we then make the law of none effect through faith? God forbid: nay, we establish the law.
- Bible in Basic English (BBE)
- Do we, then, through faith make the law of no effect? in no way: but we make it clear that the law is important.
- Darby Translation (DBY)
- Do we then make void law by faith? Far be the thought: [no,] but we establish law.
- Webster's Bible (WBS)
- Do we then make void the law through faith? By no means: but we establish the law.
- Young's Literal Translation (YLT)
- Law then do we make useless through the faith? let it not be! yea, we do establish law.
Read in context
- 29ದೇವರು ಯೆಹೂದ್ಯರಿಗೆ ಮಾತ್ರ ದೇವರಾಗಿ ದ್ದಾನೋ? ಅನ್ಯಜನಗಳಿಗೆ ಸಹ ದೇವರಲ್ಲವೇ? ಹೌದು, ಆತನು ಅನ್ಯಜನರಿಗೆ ಸಹ ದೇವರಾಗಿದ್ದಾನೆ;
- 30ದೇವರು ಒಬ್ಬನೇ ಆಗಿರಲಾಗಿ ಆತನು ಸುನ್ನತಿಯವರನ್ನು ನೀತಿವಂತರೆಂದು ನಿರ್ಣಯಿಸು ವದಕ್ಕೆ ಅವರ ನಂಬಿಕೆಯಿಂದಲೇ. ಸುನ್ನತಿಯಿಲ್ಲ ದವರನ್ನು ಹಾಗೆಯೇ ನಿರ್ಣಯಿಸುವದು ನಂಬಿಕೆಯ ಮೂಲಕವೇ.ಹಾಗಾದರೆ ನಂಬಿಕೆಯಿಂದ ನ್ಯಾಯಪ್ರಮಾಣವನ್ನು ನಿರರ್ಥಕ ಮಾಡುತ್ತೇವೋ? ಹಾಗೆ ಎಂದಿಗೂ ಅಲ್ಲ; ಹೌದು, ನಾವು ನ್ಯಾಯಪ್ರಮಾಣವನ್ನು ಸ್ಥಿರಪಡಿಸುತ್ತೇವೆ.
- 31ಹಾಗಾದರೆ ನಂಬಿಕೆಯಿಂದ ನ್ಯಾಯಪ್ರಮಾಣವನ್ನು ನಿರರ್ಥಕ ಮಾಡುತ್ತೇವೋ? ಹಾಗೆ ಎಂದಿಗೂ ಅಲ್ಲ; ಹೌದು, ನಾವು ನ್ಯಾಯಪ್ರಮಾಣವನ್ನು ಸ್ಥಿರಪಡಿಸುತ್ತೇವೆ.
Cross references
- Galatians 2:21 ಗಲಾತ್ಯದವರಿಗೆ 2:21ನಾನು ದೇವರ ಕೃಪೆಯನ್ನು ನಿರರ್ಥಕ ಮಾಡುವದಿಲ್ಲ. ನ್ಯಾಯಪ್ರಮಾಣದಿಂದ ನೀತಿಯುಂಟಾಗುವದಾದರೆ ಕ್ರಿಸ್ತನು ಮರಣವನ್ನು ಹೊಂದಿದ್ದು ವ್ಯರ್ಥವಾಯಿತು.
- Matthew 5:17 ಮತ್ತಾಯನು 5:17ನ್ಯಾಯಪ್ರಮಾಣವನ್ನಾಗಲೀ ಪ್ರವಾದನೆಗಳ ನ್ನಾಗಲೀ ಹಾಳುಮಾಡುವದಕ್ಕಾಗಿ ನಾನು ಬಂದೆ ನೆಂದು ನೆನಸಬೇಡಿರಿ, ಹಾಳುಮಾಡುವದಕ್ಕಾಗಿ ಅಲ್ಲ; ಆದರೆ ನೆರವೇರಿಸುವದಕ್ಕಾಗಿ ಬಂದೆನು.
- Romans 10:4 ರೋಮಾಪುರದವರಿಗೆ 10:4ನಂಬುವ ಪ್ರತಿಯೊಬ್ಬನು ನೀತಿವಂತನಾಗುವಂತೆ ಕ್ರಿಸ್ತನು ನ್ಯಾಯಪ್ರಮಾಣದ ಅಂತ್ಯವಾಗಿದ್ದಾನೆ.
- Romans 13:8–10 ರೋಮಾಪುರದವರಿಗೆ 13:8–10ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಋಣವೇ ಹೊರತು ಬೇರೆ ಯಾವ ಸಾಲವೂ ನಿಮಗೆ ಇರ ಬಾರದು. ಮತ್ತೊಬ್ಬರನ್ನು ಪ್ರೀತಿಸುವವನು ನ್ಯಾಯಪ್ರಮಾಣವನ್ನೆಲ್ಲಾ ನೆರವೇರಿಸಿದ್ದಾನೆ. ಹೇಗಂದರೆ ವ್ಯಭಿಚಾರ ಮಾಡಬಾರದು, ನರಹತ್ಯ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳ ಬಾರದು, ಆಶಿಸಬಾರದು ಈ ಮೊದಲಾದ ಎಲ್ಲಾ ಕಟ್ಟಳೆಗಳು--ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂಬ ಒಂದೇ ಮಾತಿನಲ್ಲಿ ಅಡಕವಾಗಿವೆ. ಪ್ರೀತಿಯು ತನ್ನ ನೆರೆಯವನಿಗೆ ಯಾವ ಕೇಡನ್ನೂ ಮಾಡುವದಿಲ್ಲ. ಆದಕಾರಣ ಪ್ರೀತಿ ಯಿಂದಲೇ ನ್ಯಾಯಪ್ರಮಾಣವು ನೆರವೇರುತ್ತದೆ.
- 1 Corinthians 9:21 1 ಕೊರಿಂಥದವರಿಗೆ 9:21(ನಾನು ದೇವರ ನ್ಯಾಯಪ್ರಮಾಣವಿಲ್ಲದವ ನಂತಲ್ಲ, ಕ್ರಿಸ್ತನ ನ್ಯಾಯಪ್ರಮಾಣಕ್ಕೆ ಒಳಗಾದವನೇ;) ನ್ಯಾಯಪ್ರಮಾಣವಿಲ್ಲದವರನ್ನು ಸಂಪಾದಿಸಿಕೊಳ್ಳು ವದಕ್ಕಾಗಿ ಅವರಿಗೆ ನ್ಯಾಯಪ್ರಮಾಣವಿಲ್ಲದವ ನಂತೆಯೂ ಆದೆನು.
- Romans 8:4 ರೋಮಾಪುರದವರಿಗೆ 8:4ಹೀಗೆ ಶರೀರಕ್ಕನುಸಾರ ವಾಗಿ ನಡೆಯದೆ ಆತ್ಮನಿಗನುಸಾರವಾಗಿ ನಡೆಯುವವ ರಾದ ನಮ್ಮಲ್ಲಿ ನ್ಯಾಯಪ್ರಮಾಣದ ನೀತಿಯು ನೆರ ವೇರುವದು.
- Romans 7:7–14 ರೋಮಾಪುರದವರಿಗೆ 7:7–14ಹಾಗಾದರೆ ನಾವು ಏನು ಹೇಳೋಣ? ನ್ಯಾಯ ಪ್ರಮಾಣವು ಪಾಪವೋ? ಹಾಗೆ ಎಂದಿಗೂ ಅಲ್ಲ; ನ್ಯಾಯಪ್ರಮಾಣದಿಂದಲೇ ಹೊರತು ಪಾಪವೆಂಬದು ಏನೋ ನನಗೆ ಗೊತ್ತಿರಲಿಲ್ಲ. ಯಾಕಂದರೆ--ನೀನು ಆಶಿಸಬಾರದು ಎಂದು ನ್ಯಾಯಪ್ರಮಾಣವು ಹೇಳ ದಿದ್ದರೆ ದುರಾಶೆಯೆಂದರೆ ಏನೋ ನನಗೆ ತಿಳಿಯು ತ್ತಿರಲಿಲ್ಲ. ಆದರೆ ಪಾಪವು ಈ ಆಜ್ಞೆಯಿಂದ ಅನುಕೂಲ ಹೊಂದಿ ಸಕಲ ವಿಧವಾದ ದುರಾಶೆಯನ್ನು ನನ್ನಲ್ಲಿ ಹುಟ್ಟಿಸಿತು. ನ್ಯಾಯಪ್ರಮಾಣವು ಇಲ್ಲದಿರು ವಾಗ ಪಾಪವು ಸತ್ತದ್ದಾಗಿದೆ. ಮೊದಲು ನಾನು ನ್ಯಾಯಪ್ರಮಾಣವಿಲ್ಲದವನಾಗಿದ್ದು ಜೀವದಿಂದಿದ್ದೆನು. ಆಜ್ಞೆಯು ಬಂದಾಗ ಪಾಪವು ಪುನರ್ಜೀವವಾಗಿ ನಾನು ಸತ್ತೆನು. ಜೀವಿಸುವದಕ್ಕಾಗಿರುವ ಆಜ್ಞೆಯೇ ಮರಣಕ್ಕಾಯಿತೆಂದು ನಾನು ಕಂಡುಕೊಂಡೆನು. ಹೇಗಂದರೆ ಪಾಪವು ಆಜ್ಞೆಯಿಂದ ಅನುಕೂಲ ಹೊಂದಿ ನನ್ನನ್ನು ವಂಚಿಸಿ ಅದರ ಮೂಲಕವೇ ನನ್ನನು ಕೊಂದಿತು; ಹೀಗಿರಲಾಗಿ ನ್ಯಾಯಪ್ರಮಾಣವು ಪರಿ ಶುದ್ಧವಾದದ್ದು. ಆಜ್ಞೆಯು ಪರಿಶುದ್ಧವೂ ನ್ಯಾಯವೂ ಹಿತವೂ ಆಗಿರುವಂಥದ್ದು ಸರಿ. ಹಾಗಾದರೆ ಹಿತವಾದದ್ದು ನನಗೆ ಮರಣಕ್ಕೆ ಕಾರಣವಾಯಿತೋ? ಹಾಗೆ ಎಂದಿಗೂ ಅಲ್ಲ; ಆದರೆ ಪಾಪವು ಹಿತವಾದದ್ದರ ಮೂಲಕ ನನ್ನಲ್ಲಿ ಮರಣವನ್ನು ಉಂಟುಮಾಡಿದ್ದರಿಂದ ಅದು ಪಾಪವೇ ಎಂದು ಕಾಣಿಸಿಕೊಂಡಿತು. ಹೀಗೆ ಆಜ್ಞೆಯ ಮೂಲಕ ಪಾಪವು ಅತ್ಯಧಿಕವಾದ ಪಾಪವಾಗಿ ತೋರಿಬಂತು. ನ್ಯಾಯ ಪ್ರಮಾಣವು ಆತ್ಮೀಕವಾದದ್ದೆಂದು ನಾವು ಬಲ್ಲೆವು; ಆದರೆ ನಾನು ಶರೀರಾಧೀನನೂ ಪಾಪದ ಅಧೀನದಲ್ಲಿ ರುವದಕ್ಕೆ ಮಾರಲ್ಪಟ್ಟವನೂ ಆಗಿದ್ದೇನೆ.
- Jeremiah 8:8–9 ಯೆರೆಮೀಯ 8:8–9ಹೀಗಿರಲು--ನಾವು ಜ್ಞಾನಿಗಳು, ಕರ್ತನ ನ್ಯಾಯ ಪ್ರಮಾಣವು ನಮ್ಮ ಸಂಗಡ ಇದೆ ಎಂದು ನೀವು ಹೇಳುವದು ಹೇಗೆ? ಇಗೋ, ನಿಶ್ಚಯವಾಗಿ ಆತನು ಅದನ್ನು ವ್ಯರ್ಥವಾಗಿ ಮಾಡಿದ್ದಾನೆ. ಶಾಸ್ತ್ರಿಗಳ ಲೇಖ ನಿಯು ವ್ಯರ್ಥವಾಗಿದೆ. ಜ್ಞಾನಿಗಳು ನಾಚಿಕೊಂಡಿ ದ್ದಾರೆ, ದಿಗಿಲುಪಟ್ಟು ಸಿಕ್ಕಿಕೊಂಡಿದ್ದಾರೆ; ಇಗೋ, ಕರ್ತನ ವಾಕ್ಯವನ್ನು ನಿರಾಕರಿಸಿದ್ದಾರೆ. ಹಾಗಾದರೆ ಅವರಲ್ಲಿ ಎಂಥಾ ಜ್ಞಾನವಿದೆ?
- Galatians 3:17–19 ಗಲಾತ್ಯದವರಿಗೆ 3:17–19ನಾನು ಹೇಳುವದೇನಂದರೆ, ದೇವರು ಕ್ರಿಸ್ತನಲ್ಲಿ ಮೊದಲು ಸ್ಥಿರಪಡಿಸಿದ ಒಡಂಬಡಿಕೆಯನ್ನು ನಾನೂರ ಮೂವತ್ತು ವರುಷಗಳ ಮೇಲೆ ಬಂದ ನ್ಯಾಯಪ್ರಮಾಣವು ರದ್ದು ಮಾಡಿ ಆ ವಾಗ್ದಾನವನ್ನು ವ್ಯರ್ಥಮಾಡುವದಿಲ್ಲ. ಆ ಬಾಧ್ಯತೆಯು ನ್ಯಾಯಪ್ರಮಾಣದಿಂದ ದೊರೆ ಯುವದಾದರೆ ಅದು ಇನ್ನು ವಾಗ್ದಾನದಿಂದ ದೊರೆಯು ವದಿಲ್ಲವೆಂದಾಯಿತು; ಆದರೆ ದೇವರು ಅದನ್ನು ಅಬ್ರಹಾಮನಿಗೆ ವಾಗ್ದಾನದ ಮೂಲಕವಾಗಿಯೇ ದಯಪಾಲಿಸಿದ್ದಾನೆ. ಹಾಗಾದರೆ ನ್ಯಾಯಪ್ರಮಾಣವು ಯಾತಕ್ಕೆ? ವಾಗ್ದಾನದ ಸಂತತಿಯಾದಾತನು ಬರುವತನಕ ದೇವರು ಇಂಥಿಂಥದ್ದು ಅಪರಾಧವೆಂದು ತೋರಿಸುವದಕ್ಕಾಗಿ ಅದನ್ನು ವಾಗ್ದಾನದ ತರುವಾಯ ನೇಮಿಸಿ ದೂತರ ಮುಖಾಂತರ ಒಬ್ಬ ಮಧ್ಯಸ್ಥನ ಕೈಯಲ್ಲಿ ಕೊಟ್ಟನು.
- James 2:8–12 ಯಾಕೋಬನು 2:8–12ಆದರೂ ಬರಹದ ಪ್ರಕಾರ--ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸ ಬೇಕೆಂಬ ರಾಜಾಜ್ಞೆಯನ್ನು ನೆರವೇರಿಸುವವರಾದರೆ ನೀವು ಒಳ್ಳೇದನ್ನು ಮಾಡುವವರಾಗಿರುವಿರಿ. ನೀವು ಪಕ್ಷಪಾತಿಗಳಾಗಿದ್ದರೆ ಪಾಪ ಮಾಡುವವರಾಗಿದ್ದು ಅಪ ರಾಧಿಗಳೆಂದು ನ್ಯಾಯಪ್ರಮಾಣದಿಂದ ಮನದಟ್ಟು ಮಾಡಲ್ಪಡುತ್ತೀರಿ. ಯಾಕಂದರೆ ಯಾವನಾದರೂ ನ್ಯಾಯಪ್ರಮಾಣವನ್ನೆಲ್ಲಾ ಕೈಕೊಂಡು ನಡೆದು ಒಂದೇ ಒಂದರಲ್ಲಿ ತಪ್ಪಿದರೆ ಅವನು ಎಲ್ಲಾ ವಿಷಯದಲ್ಲಿಯೂ ಅಪರಾಧಿಯಾಗುತ್ತಾನೆ. ವ್ಯಭಿಚಾರ ಮಾಡಬಾರ ದೆಂದು ಹೇಳಿದಾತನೇ--ನರಹತ್ಯ ಮಾಡಬಾರ ದೆಂತಲೂ ಹೇಳಿದನು. ಆದಕಾರಣ ನೀನು ವ್ಯಭಿಚಾರ ಮಾಡದೆ ಇದ್ದರೂ ನರಹತ್ಯ ಮಾಡಿದರೆ ನ್ಯಾಯ ಪ್ರಮಾಣವನ್ನು ವಿಾರಿದವನಾದಿ. ಬಿಡುಗಡೆಯ ನ್ನುಂಟು ಮಾಡುವ ನ್ಯಾಯಪ್ರಮಾಣದಿಂದ ಅವರು ತೀರ್ಪು ಹೊಂದುವವರಿಗೆ ತಕ್ಕಂತೆಯೇ ನೀವು ಮಾತನಾಡಿರಿ. ಹಾಗೆಯೇ ಮಾಡಿರಿ.
- Romans 4:14 ರೋಮಾಪುರದವರಿಗೆ 4:14ನ್ಯಾಯ ಪ್ರಮಾಣವನ್ನನುಸರಿಸುವವರು ಬಾಧ್ಯರಾಗಿದ್ದರೆ ನಂಬಿ ಕೆಯು ವ್ಯರ್ಥವಾಯಿತು, ವಾಗ್ದಾನವೂ ನಿರರ್ಥಕ ವಾಯಿತು.
- Psalm 119:126 ಕೀರ್ತನೆಗಳು 119:126ಕರ್ತನೆ, ಕೆಲಸಮಾಡುವದಕ್ಕೆ ಇದು ನಿನಗೆ ಸಮಯವಾಗಿದೆ; ಅವರು ನಿನ್ನ ನ್ಯಾಯಪ್ರಮಾಣವನ್ನು ನಿರರ್ಥಕ ಮಾಡಿ ದ್ದಾರೆ.