Matthew · chapter 5 · verse 17
Matthew 5:17 in Kannada
ನ್ಯಾಯಪ್ರಮಾಣವನ್ನಾಗಲೀ ಪ್ರವಾದನೆಗಳ ನ್ನಾಗಲೀ ಹಾಳುಮಾಡುವದಕ್ಕಾಗಿ ನಾನು ಬಂದೆ ನೆಂದು ನೆನಸಬೇಡಿರಿ, ಹಾಳುಮಾಡುವದಕ್ಕಾಗಿ ಅಲ್ಲ; ಆದರೆ ನೆರವೇರಿಸುವದಕ್ಕಾಗಿ ಬಂದೆನು.
Nyaayapramaanavannaagalee pravaadanegala nnaagalee haalumaaduvadakkaagi naanu bande nendu nenasabediri, haalumaaduvadakkaagi alla; aadare neraverisuvadakkaagi bandenu.
Matthew 5:17 in English
- King James Version (KJV)
- Think not that I am come to destroy the law, or the prophets: I am not come to destroy, but to fulfil.
- World English Bible (WEB)
- “Don’t think that I came to destroy the law or the prophets. I didn’t come to destroy, but to fulfill.
- American Standard Version (ASV)
- Think not that I came to destroy the law or the prophets: I came not to destroy, but to fulfil.
- Bible in Basic English (BBE)
- Let there be no thought that I have come to put an end to the law or the prophets. I have not come for destruction, but to make complete.
- Darby Translation (DBY)
- Think not that I am come to make void the law or the prophets; I am not come to make void, but to fulfil.
- Webster's Bible (WBS)
- Think not that I am come to destroy the law, or the prophets: I am not come to destroy, but to fulfill.
- Young's Literal Translation (YLT)
- 'Do not suppose that I came to throw down the law or the prophets — I did not come to throw down, but to fulfil;
Read in context
- 15ಇಲ್ಲವೆ ಮನುಷ್ಯರು ದೀಪವನ್ನು ಹೊತ್ತಿಸಿ ಕೊಳಗದೊಳಗೆ ಇಡದೆ ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರೆ. ಆಗ ಅದು ಮನೆಯಲ್ಲಿರುವವರೆಲ್ಲರಿಗೆ ಬೆಳಕು ಕೊಡುವದು.
- 16ಅದರಂತೆಯೇ ಜನರು ನಿಮ್ಮ ಒಳ್ಳೇ ಕ್ರಿಯೆಗಳನ್ನು ನೋಡಿ ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಮಹಿಮೆಪಡಿಸುವ ಹಾಗೆ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ.
- 17ನ್ಯಾಯಪ್ರಮಾಣವನ್ನಾಗಲೀ ಪ್ರವಾದನೆಗಳ ನ್ನಾಗಲೀ ಹಾಳುಮಾಡುವದಕ್ಕಾಗಿ ನಾನು ಬಂದೆ ನೆಂದು ನೆನಸಬೇಡಿರಿ, ಹಾಳುಮಾಡುವದಕ್ಕಾಗಿ ಅಲ್ಲ; ಆದರೆ ನೆರವೇರಿಸುವದಕ್ಕಾಗಿ ಬಂದೆನು.
- 18ಆಕಾಶವೂ ಭೂಮಿಯೂ ಗತಿಸಿ ಹೋಗುವ ತನಕ ಎಲ್ಲವೂ ನೆರವೇರದ ಹೊರತು ನ್ಯಾಯಪ್ರಮಾಣದಿಂದ ಒಂದು ಸೊನ್ನೆಯಾದರೂ ಒಂದು ಗುಡುಸಾದರೂ ಅಳಿದು ಹೋಗುವದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
- 19ಆದದರಿಂದ ಯಾವನಾದರೂ ಈ ಆಜ್ಞೆಗಳಲ್ಲಿ ಚಿಕ್ಕದಾದ ಒಂದನ್ನು ಮಾರಿ ಹಾಗೆಯೇ ಜನರಿಗೆ ಬೋಧಿಸಿದರೆ ಅವನು ಪರಲೋಕರಾಜ್ಯದಲ್ಲಿ ಅಲ್ಪನೆಂದು ಕರೆಯಲ್ಪಡುವನು; ಯಾವನಾದರೂ ಇವುಗಳನ್ನು ಕೈಕೊಂಡು ಬೋಧಿಸಿದರೆ ಅವನೇ ಪರಲೋಕ ರಾಜ್ಯದಲ್ಲಿ ದೊಡ್ಡವನೆಂದು ಕರೆಯಲ್ಪಡು ವನು.
Cross references
- Romans 10:4 ರೋಮಾಪುರದವರಿಗೆ 10:4ನಂಬುವ ಪ್ರತಿಯೊಬ್ಬನು ನೀತಿವಂತನಾಗುವಂತೆ ಕ್ರಿಸ್ತನು ನ್ಯಾಯಪ್ರಮಾಣದ ಅಂತ್ಯವಾಗಿದ್ದಾನೆ.
- Luke 16:17 ಲೂಕನು 16:17ನ್ಯಾಯಪ್ರಮಾಣದ ಒಂದು ಗುಡುಸಾದರೂ ಬಿದ್ದು ಹೋಗುವದಕ್ಕಿಂತ ಆಕಾಶವೂ ಭೂಮಿಯೂ ಅಳಿದು ಹೋಗುವದು ಸುಲಭ.
- Galatians 4:4–5 ಗಲಾತ್ಯದವರಿಗೆ 4:4–5ಆದರೆ ಕಾಲವು ಪರಿಪೂರ್ಣವಾದಾಗ ದೇವರು ತನ್ನ ಮಗನನ್ನು ಸ್ತ್ರೀಯಿಂದ ಹುಟ್ಟಿದವನನ್ನಾಗಿಯೂ ನ್ಯಾಯ ಪ್ರಮಾಣಕ್ಕೆ ಒಳಗಾದವನನ್ನಾಗಿಯೂ ಮಾಡಿ ಕಳುಹಿಸಿದ್ದಲ್ಲದೆ ನ್ಯಾಯಪ್ರಮಾಣಾಧೀನರನ್ನು ವಿಮೋಚಿಸುವದಕ್ಕೂ ನಾವು ದತ್ತುಪುತ್ರರ ಸ್ವೀಕಾರವನ್ನು ಹೊಂದುವಂತೆಯೂ ಕಳುಹಿಸಿಕೊಟ್ಟನು.
- Romans 3:31 ರೋಮಾಪುರದವರಿಗೆ 3:31ಹಾಗಾದರೆ ನಂಬಿಕೆಯಿಂದ ನ್ಯಾಯಪ್ರಮಾಣವನ್ನು ನಿರರ್ಥಕ ಮಾಡುತ್ತೇವೋ? ಹಾಗೆ ಎಂದಿಗೂ ಅಲ್ಲ; ಹೌದು, ನಾವು ನ್ಯಾಯಪ್ರಮಾಣವನ್ನು ಸ್ಥಿರಪಡಿಸುತ್ತೇವೆ.
- Romans 8:4 ರೋಮಾಪುರದವರಿಗೆ 8:4ಹೀಗೆ ಶರೀರಕ್ಕನುಸಾರ ವಾಗಿ ನಡೆಯದೆ ಆತ್ಮನಿಗನುಸಾರವಾಗಿ ನಡೆಯುವವ ರಾದ ನಮ್ಮಲ್ಲಿ ನ್ಯಾಯಪ್ರಮಾಣದ ನೀತಿಯು ನೆರ ವೇರುವದು.
- Isaiah 42:21 ಯೆಶಾಯ 42:21ಕರ್ತನು ಆತನ ನೀತಿಗೋಸ್ಕರ ಬಹಳವಾಗಿ ಮೆಚ್ಚುವನು, ಆತನು ನ್ಯಾಯಪ್ರಮಾಣವನ್ನು ಹೆಚ್ಚಿಸಿ ಘನಪಡಿಸುವನು.
- Galatians 3:17–24 ಗಲಾತ್ಯದವರಿಗೆ 3:17–24ನಾನು ಹೇಳುವದೇನಂದರೆ, ದೇವರು ಕ್ರಿಸ್ತನಲ್ಲಿ ಮೊದಲು ಸ್ಥಿರಪಡಿಸಿದ ಒಡಂಬಡಿಕೆಯನ್ನು ನಾನೂರ ಮೂವತ್ತು ವರುಷಗಳ ಮೇಲೆ ಬಂದ ನ್ಯಾಯಪ್ರಮಾಣವು ರದ್ದು ಮಾಡಿ ಆ ವಾಗ್ದಾನವನ್ನು ವ್ಯರ್ಥಮಾಡುವದಿಲ್ಲ. ಆ ಬಾಧ್ಯತೆಯು ನ್ಯಾಯಪ್ರಮಾಣದಿಂದ ದೊರೆ ಯುವದಾದರೆ ಅದು ಇನ್ನು ವಾಗ್ದಾನದಿಂದ ದೊರೆಯು ವದಿಲ್ಲವೆಂದಾಯಿತು; ಆದರೆ ದೇವರು ಅದನ್ನು ಅಬ್ರಹಾಮನಿಗೆ ವಾಗ್ದಾನದ ಮೂಲಕವಾಗಿಯೇ ದಯಪಾಲಿಸಿದ್ದಾನೆ. ಹಾಗಾದರೆ ನ್ಯಾಯಪ್ರಮಾಣವು ಯಾತಕ್ಕೆ? ವಾಗ್ದಾನದ ಸಂತತಿಯಾದಾತನು ಬರುವತನಕ ದೇವರು ಇಂಥಿಂಥದ್ದು ಅಪರಾಧವೆಂದು ತೋರಿಸುವದಕ್ಕಾಗಿ ಅದನ್ನು ವಾಗ್ದಾನದ ತರುವಾಯ ನೇಮಿಸಿ ದೂತರ ಮುಖಾಂತರ ಒಬ್ಬ ಮಧ್ಯಸ್ಥನ ಕೈಯಲ್ಲಿ ಕೊಟ್ಟನು. ಮಧ್ಯಸ್ಥನು ಒಬ್ಬನ ಮಧ್ಯಸ್ಥನಲ್ಲ; ಆದರೆ ದೇವರು ಒಬ್ಬನೇ. ಹಾಗಾದರೆ ನ್ಯಾಯಪ್ರಮಾಣವು ದೇವರ ವಾಗ್ದಾನಗಳಿಗೆ ವಿರುದ್ಧವೋ? ಹಾಗೆ ಎಂದಿಗೂ ಹೇಳಬಾರದು; ಕೊಡಲ್ಪಟ್ಟಿದ್ದ ನ್ಯಾಯಪ್ರಮಾಣವು ಬದುಕಿಸುವದಕ್ಕೆ ಶಕ್ತಿಯುಳ್ಳದ್ದಾಗಿದ್ದರೆ ನಿಜವಾಗಿ ನ್ಯಾಯಪ್ರಮಾಣದಿಂದಲೇ ನೀತಿಯುಂಟಾಗುತ್ತಿತ್ತು. ಹಾಗಾದರೆ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡು ವದರಿಂದ ಉಂಟಾಗುವ ಆ ವಾಗ್ದಾನವು ನಂಬುವ ವರಿಗೇ ಕೊಡಲ್ಪಡುವಂತೆ ಎಲ್ಲರೂ ಪಾಪಕ್ಕೊಳ ಗಾಗಿದ್ದಾರೆಂದು ಬರಹವು ತೀರ್ಮಾನಿಸಿತು. ಆದರೆ ನಂಬಿಕೆ ಬರುವದಕ್ಕೆ ಮೊದಲು, ತರು ವಾಯ ಪ್ರಕಟವಾಗಲಿರುವ ಆ ನಂಬಿಕೆಗೆ ವಶವಾಗು ವದಕ್ಕಾಗಿ ನಾವು ನ್ಯಾಯಪ್ರಮಾಣದ ಅಧೀನದಲ್ಲಿ ಇರಿಸಲ್ಪಟ್ಟಿದ್ದೆವು. ನಾವು ನಂಬಿಕೆಯ ಮೂಲಕ ನೀತಿವಂತರೆಂದು ನಿರ್ಣಯಿಸಲ್ಪಡುವಂತೆ ನಮ್ಮನ್ನು ಕ್ರಿಸ್ತನ ಬಳಿಗೆ ತರುವದಕ್ಕಾಗಿ ನ್ಯಾಯಪ್ರಮಾಣವು ನಮ್ಮ ಉಪಾಧ್ಯಾಯನಂತಿತ್ತು.
- Matthew 7:12 ಮತ್ತಾಯನು 7:12ಆದದರಿಂದ ಜನರು ನಿಮಗೆ ಏನೇನು ಮಾಡಬೇಕೆಂದು ನೀವು ಇಚ್ಛೈಸುವಿರೋ ಅವುಗಳನ್ನು ನೀವು ಸಹ ಅವರಿಗೆ ಹಾಗೆಯೇ ಮಾಡಿರಿ; ಯಾಕಂದರೆ ಇದೇ ನ್ಯಾಯಪ್ರಮಾಣದ ಮತ್ತು ಪ್ರವಾದಿಗಳ ತಾತ್ಪರ್ಯ.
- Psalm 40:6–8 ಕೀರ್ತನೆಗಳು 40:6–8ಯಜ್ಞದಲ್ಲಿಯೂ ಅರ್ಪಣೆಯಲ್ಲಿಯೂ ನೀನು ಇಷ್ಟ ಪಡಲಿಲ್ಲ; ದಹನಬಲಿಯನ್ನೂ ಪಾಪದಬಲಿಯನ್ನೂ ನೀನು ಕೇಳಲಿಲ್ಲ. ನನ್ನ ಕಿವಿಗಳನ್ನು ನೀನು ತೆರೆದಿ; ಆಗ ನಾನು--ಇಗೋ, ನಾನು ಇದ್ದೇನೆ; ಪುಸ್ತಕದ ಸುರುಳಿಯಲ್ಲಿ ನನ್ನನ್ನು ಕುರಿತು ಬರೆದದೆ. ಓ ನನ್ನ ದೇವರೇ ನಿನಗೆ ಮೆಚ್ಚಿಕೆಯಾದದ್ದನ್ನು ಮಾಡಲು ಸಂತೋಷಿಸುತ್ತೇನೆ; ನಿನ್ನ ನ್ಯಾಯ ಪ್ರಮಾಣವು ನನ್ನ ಅಂತರಂಗದಲ್ಲಿ ಅದೆ.
- Hebrews 10:3–12 ಇಬ್ರಿಯರಿಗೆ 10:3–12ಆದರೆ ಪ್ರತಿ ವರುಷವು ಆ ಯಜ್ಞಗಳಲ್ಲಿ ತಿರಿಗಿ ಪಾಪಗಳ ಜ್ಞಾಪಕವಾಗುವದುಂಟು. ಹೋರಿಗಳ ಮತ್ತು ಹೋತಗಳ ರಕ್ತವು ಪಾಪಗಳನ್ನು ತೆಗೆದು ಹಾಕುವದು ಅಸಾಧ್ಯವಾಗಿದೆ. ಆದದರಿಂದ ಆತನು ಭೂಲೋಕದೊಳಗೆ ಬರುವಾಗ--(ದೇವರೇ,) ಯಜ್ಞವೂ ಅರ್ಪಣೆಯೂ ನಿನಗೆ ಇಷ್ಟವಾಗಿರಲಿಲ್ಲ, ಆದರೆ ನನಗೆ ದೇಹವನ್ನು ಸಿದ್ಧಮಾಡಿಕೊಟ್ಟೀ; ದಹನ ಬಲಿಗಳಲ್ಲಿಯೂ ಪಾಪಪರಿಹಾರಕ ಯಜ್ಞಗಳಲ್ಲಿಯೂ ನೀನು ಸಂತೋಷಪಡಲಿಲ್ಲ; ಆಗ ನಾನು--ಇಗೋ, ಓ ದೇವರೇ, ಗ್ರಂಥದ ಸುರುಳಿಯಲ್ಲಿ ನನ್ನನ್ನು ಕುರಿತು ಬರೆದದೆ; ನಿನ್ನ ಚಿತ್ತವನ್ನು ನೇರವೇರಿಸುವದಕ್ಕೆ ಬಂದಿ ದ್ದೇನೆ ಎಂದು ಹೇಳಿದೆನು ಅನ್ನುತ್ತಾನೆ. ಆಮೇಲೆ ಆತನು--ನ್ಯಾಯಪ್ರಮಾಣದಂತೆ ಅರ್ಪಿಸಲ್ಪಡುವಂಥ ಯಜ್ಞವೂ ಅರ್ಪಣೆಯೂ ದಹನ ಬಲಿಗಳೂ ಪಾಪ ಕ್ಕಾಗಿ ಅರ್ಪಣೆಯೂ ನಿನಗೆ ಇಷ್ಟವಾಗಿರಲಿಲ್ಲ ಇಲ್ಲವೆ ಅವುಗಳಲ್ಲಿ ನಿನಗೆ ಸಂತೋಷವಿರಲಿಲ್ಲ ಎಂದು ಹೇಳಿ ದ್ದಾನೆ. ತರು ವಾಯ--ಇಗೋ, ಓ ದೇವರೇ, ನಿನ್ನ ಚಿತ್ತವನ್ನು ನೆರವೇರಿಸುವದಕ್ಕೆ ಬಂದಿದ್ದೇನೆ ಎಂತಲೂ ಹೇಳಿದ್ದಾನೆ. ಆತನು ಎರಡನೆಯದನ್ನು ಸ್ಥಾಪಿಸುವ ದಕ್ಕಾಗಿ ಮೊದಲನೆಯದನ್ನು ತೆಗೆದುಹಾಕುತ್ತಾನೆ. ಯೇಸು ಕ್ರಿಸ್ತನು ಒಂದೇ ಸಾರಿ ಎಂದೆಂದಿಗೂ ಅರ್ಪಿಸಿದ ತನ್ನ ದೇಹದ ಮೂಲಕ ಆತನ ಚಿತ್ತದಿಂದ ನಾವು ಶುದ್ಧರಾದೆವು. ಇದಲ್ಲದೆ ಪ್ರತಿ ಯಾಜಕನು ದಿನಾಲು ಸೇವೆ ಮಾಡುತ್ತಾ ಎಂದಿಗೂ ಪಾಪವನ್ನು ತೆಗೆದು ಹಾಕಲಾರ ದಂಥ ಒಂದೇ ವಿಧವಾದ ಯಜ್ಞಗಳನ್ನು ಪದೇ ಪದೇ ಅರ್ಪಿಸುತ್ತಾ ನಿಂತುಕೊಂಡಿರುವನು. ಆದರೆ ಈ ಮನುಷ್ಯನು ಪಾಪಗಳಿಗೋಸ್ಕರ ನಿರಂತರವಾದ ಒಂದೇ ಯಜ್ಞವನ್ನು ಅರ್ಪಿಸಿದ ಮೇಲೆ ದೇವರ ಬಲ ಗಡೆಯಲ್ಲಿ ಕೂತುಕೊಂಡನು.
- Colossians 2:16–17 ಕೊಲೊಸ್ಸೆಯವರಿಗೆ 2:16–17ಹೀಗಿರುವದರಿಂದ ಅನ್ನಪಾನಗಳ ವಿಷಯದಲ್ಲಿ ಯೂ ಪವಿತ್ರ ದಿನ ಅಮಾವಾಸ್ಯೆ ಸಬ್ಬತ್ತು ಎಂಬಿವುಗಳ ವಿಷಯದಲ್ಲಿಯೂ ನಿಮಗೆ ಯಾರೂ ತೀರ್ಪು ಮಾಡ ದಿರಲಿ. ಇವು ಬರಬೇಕಾಗಿದ್ದವುಗಳ ಛಾಯೆ ಯಾಗಿವೆ; ಆದರೆ ಶರೀರವು ಕ್ರಿಸ್ತನದೇ.
- Acts 6:13 ಅಪೊಸ್ತಲರ ಕೃತ್ಯಗಳು 6:13ಸುಳ್ಳು ಸಾಕ್ಷಿಗಳನ್ನು ನಿಲ್ಲಿಸ ಲಾಗಿ ಅವರು--ಈ ಮನುಷ್ಯನು ಈ ಪರಿಶುದ್ಧ ಸ್ಥಳಕ್ಕೂ ನ್ಯಾಯಪ್ರಮಾಣಕ್ಕೂ ವಿರುದ್ಧವಾಗಿ ದೂಷಣೆಯ ಮಾತುಗಳನ್ನಾಡುವದನ್ನು ನಿಲ್ಲಿಸುವದೇ ಇಲ್ಲ.