Romans · chapter 4 · verse 15
Romans 4:15 in Kannada
ನ್ಯಾಯಪ್ರಮಾಣವು ದೇವರ ಕೋಪಕ್ಕೆ ಗುರಿಮಾಡುವಂಥದ್ದು. ನ್ಯಾಯಪ್ರಮಾಣವಿಲ್ಲದ ಪಕ್ಷ ದಲ್ಲಿ ಆಜ್ಞಾತಿಕ್ರಮಣವೂ ಇಲ್ಲ;
Nyaayapramaanavu devara kopakke gurimaaduvanthaddu. Nyaayapramaanavillada paksha dalli aajnyaatikramanavoo illa;
Romans 4:15 in English
- King James Version (KJV)
- Because the law worketh wrath: for where no law is, [there is] no transgression.
- World English Bible (WEB)
- For the law produces wrath; for where there is no law, neither is there disobedience.
- American Standard Version (ASV)
- for the law worketh wrath; but where there is no law, neither is there transgression.
- Bible in Basic English (BBE)
- For the outcome of the law is wrath; but where there is no law it will not be broken.
- Darby Translation (DBY)
- For law works wrath; but where no law is neither [is there] transgression.
- Webster's Bible (WBS)
- Because the law worketh wrath: for where no law is, [there is] no transgression.
- Young's Literal Translation (YLT)
- for the law doth work wrath; for where law is not, neither [is] transgression.
Read in context
- 13ಅವನು ಲೋಕಕ್ಕೆ ಬಾಧ್ಯನಾಗುವನೆಂಬ ವಾಗ್ದಾ ನವು ಅಬ್ರಹಾಮನಿಗಾಗಲಿ ಅವನ ಸಂತತಿಯವರಿ ಗಾಗಲಿ ನ್ಯಾಯಪ್ರಮಾಣದಿಂದ ಆದದ್ದಲ್ಲ, ನಂಬಿಕೆ ಯಿಂದಾದ ನೀತಿಯಿಂದಲೇ ಆದದ್ದು.
- 14ನ್ಯಾಯ ಪ್ರಮಾಣವನ್ನನುಸರಿಸುವವರು ಬಾಧ್ಯರಾಗಿದ್ದರೆ ನಂಬಿ ಕೆಯು ವ್ಯರ್ಥವಾಯಿತು, ವಾಗ್ದಾನವೂ ನಿರರ್ಥಕ ವಾಯಿತು.
- 15ನ್ಯಾಯಪ್ರಮಾಣವು ದೇವರ ಕೋಪಕ್ಕೆ ಗುರಿಮಾಡುವಂಥದ್ದು. ನ್ಯಾಯಪ್ರಮಾಣವಿಲ್ಲದ ಪಕ್ಷ ದಲ್ಲಿ ಆಜ್ಞಾತಿಕ್ರಮಣವೂ ಇಲ್ಲ;
- 16ಆದಕಾರಣ ಕೃಪೆ ಯಿಂದಲೇ ದೊರೆಯುವ ಆ ಬಾಧ್ಯತೆಯು ನಂಬಿಕೆಯ ಮುಖಾಂತರ ಸಿಕ್ಕುತ್ತದೆ. ಹೀಗೆ ಆ ವಾಗ್ದಾನವು ಅಬ್ರಹಾ ಮನ ಸಂತತಿಯವರೆಲ್ಲರಿಗೂ ಅಂದರೆ ನ್ಯಾಯ ಪ್ರಮಾಣವನ್ನು ಆಧಾರ ಮಾಡಿಕೊಂಡವರಿಗೆ ಮಾತ್ರ ವಲ್ಲದೆ ನಮ್ಮೆಲ್ಲರಿಗೆ ತಂದೆಯಾಗಿರುವ ಅಬ್ರಹಾಮ ನಲ್ಲಿದ್ದಂಥ ನಂಬಿಕೆ
- 17(ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ತಂದೆ ಯಾಗಿ ನೇಮಿಸಿದ್ದೇನೆ ಎಂದು ಬರೆದಿರುವ ಪ್ರಕಾರ) ದೇವರು ಸತ್ತವರನ್ನು ಬದುಕಿಸುವವನಾಗಿಯೂ ಇಲ್ಲ ದ್ದನ್ನು ಇರುವದಾಗಿ ಕರೆಯುವವನಾಗಿಯೂ ಆಗಿದ್ದಾ ನೆಂದು ದೇವರ ಮುಂದೆ ಅಬ್ರಹಾಮನು ನಂಬಿದನು.
Cross references
- Romans 5:13 ರೋಮಾಪುರದವರಿಗೆ 5:13(ನ್ಯಾಯಪ್ರಮಾಣವು ಕೊಡಲ್ಪಡುವ ತನಕ ಪಾಪವು ಲೋಕದಲ್ಲಿತ್ತು; ಆದರೆ ನ್ಯಾಯಪ್ರಮಾಣ ವಿಲ್ಲದಿರುವಾಗ ಪಾಪವು ಲೆಕ್ಕಕ್ಕೆ ಬರುವದಿಲ್ಲ.
- Galatians 3:10 ಗಲಾತ್ಯದವರಿಗೆ 3:10ನ್ಯಾಯ ಪ್ರಮಾಣದ ಕ್ರಿಯೆಗಳನ್ನು ಆಧಾರ ಮಾಡಿಕೊಳ್ಳುವವ ರೆಲ್ಲರೂ ಶಾಪಾಧೀನರಾಗಿದ್ದಾರೆ. ಹೇಗಂದರೆ, ನ್ಯಾಯ ಪ್ರಮಾಣದ ಗ್ರಂಥದೊಳಗೆ ಬರೆದಿರುವವುಗಳನ್ನೆಲ್ಲಾ ನಿತ್ಯವೂ ಕೈಕೊಳ್ಳದಿರುವ ಪ್ರತಿಯೊಬ್ಬನು ಶಾಪಗ್ರಸ್ತ ನೆಂದು ಬರೆದದೆ.
- 1 Corinthians 15:56 1 ಕೊರಿಂಥದವರಿಗೆ 15:56ಮರಣದ ಕೊಂಡಿ ಪಾಪವೇ; ಪಾಪದ ಬಲವು ನ್ಯಾಯಪ್ರಮಾಣವೇ.
- Romans 3:19–20 ರೋಮಾಪುರದವರಿಗೆ 3:19–20ಪ್ರತಿಯೊಂದು ಬಾಯಿ ಮುಚ್ಚಿ ಹೋಗುವಂತೆಯೂ ಲೋಕವೆಲ್ಲಾ ದೇವರ ಮುಂದೆ ದೋಷಿಯಾಗಿರುವಂತೆಯೂ ನ್ಯಾಯ ಪ್ರಮಾಣವು ಹೇಳುವವುಗಳನ್ನು ನ್ಯಾಯಪ್ರಮಾಣಕ್ಕೆ ಒಳಗಾದವರಿಗೆ ಹೇಳುತ್ತದೆಯೆಂದು ನಾವು ಬಲ್ಲೆವು. ಆದದರಿಂದ ನ್ಯಾಯಪ್ರಮಾಣದ ಕ್ರಿಯೆಗಳಿಂದ ಯಾವನೂ ಆತನ ದೃಷ್ಟಿಯಲ್ಲಿ ನೀತಿವಂತನೆಂದು ನಿರ್ಣ ಯಿಸಲ್ಪಡುವದಿಲ್ಲ. ಯಾಕಂದರೆ ನ್ಯಾಯಪ್ರಮಾಣ ದಿಂದಲೇ ಪಾಪದ ಅರುಹು ಉಂಟಾಗುತ್ತದೆ.
- Romans 7:7–25 ರೋಮಾಪುರದವರಿಗೆ 7:7–25ಹಾಗಾದರೆ ನಾವು ಏನು ಹೇಳೋಣ? ನ್ಯಾಯ ಪ್ರಮಾಣವು ಪಾಪವೋ? ಹಾಗೆ ಎಂದಿಗೂ ಅಲ್ಲ; ನ್ಯಾಯಪ್ರಮಾಣದಿಂದಲೇ ಹೊರತು ಪಾಪವೆಂಬದು ಏನೋ ನನಗೆ ಗೊತ್ತಿರಲಿಲ್ಲ. ಯಾಕಂದರೆ--ನೀನು ಆಶಿಸಬಾರದು ಎಂದು ನ್ಯಾಯಪ್ರಮಾಣವು ಹೇಳ ದಿದ್ದರೆ ದುರಾಶೆಯೆಂದರೆ ಏನೋ ನನಗೆ ತಿಳಿಯು ತ್ತಿರಲಿಲ್ಲ. ಆದರೆ ಪಾಪವು ಈ ಆಜ್ಞೆಯಿಂದ ಅನುಕೂಲ ಹೊಂದಿ ಸಕಲ ವಿಧವಾದ ದುರಾಶೆಯನ್ನು ನನ್ನಲ್ಲಿ ಹುಟ್ಟಿಸಿತು. ನ್ಯಾಯಪ್ರಮಾಣವು ಇಲ್ಲದಿರು ವಾಗ ಪಾಪವು ಸತ್ತದ್ದಾಗಿದೆ. ಮೊದಲು ನಾನು ನ್ಯಾಯಪ್ರಮಾಣವಿಲ್ಲದವನಾಗಿದ್ದು ಜೀವದಿಂದಿದ್ದೆನು. ಆಜ್ಞೆಯು ಬಂದಾಗ ಪಾಪವು ಪುನರ್ಜೀವವಾಗಿ ನಾನು ಸತ್ತೆನು. ಜೀವಿಸುವದಕ್ಕಾಗಿರುವ ಆಜ್ಞೆಯೇ ಮರಣಕ್ಕಾಯಿತೆಂದು ನಾನು ಕಂಡುಕೊಂಡೆನು. ಹೇಗಂದರೆ ಪಾಪವು ಆಜ್ಞೆಯಿಂದ ಅನುಕೂಲ ಹೊಂದಿ ನನ್ನನ್ನು ವಂಚಿಸಿ ಅದರ ಮೂಲಕವೇ ನನ್ನನು ಕೊಂದಿತು; ಹೀಗಿರಲಾಗಿ ನ್ಯಾಯಪ್ರಮಾಣವು ಪರಿ ಶುದ್ಧವಾದದ್ದು. ಆಜ್ಞೆಯು ಪರಿಶುದ್ಧವೂ ನ್ಯಾಯವೂ ಹಿತವೂ ಆಗಿರುವಂಥದ್ದು ಸರಿ. ಹಾಗಾದರೆ ಹಿತವಾದದ್ದು ನನಗೆ ಮರಣಕ್ಕೆ ಕಾರಣವಾಯಿತೋ? ಹಾಗೆ ಎಂದಿಗೂ ಅಲ್ಲ; ಆದರೆ ಪಾಪವು ಹಿತವಾದದ್ದರ ಮೂಲಕ ನನ್ನಲ್ಲಿ ಮರಣವನ್ನು ಉಂಟುಮಾಡಿದ್ದರಿಂದ ಅದು ಪಾಪವೇ ಎಂದು ಕಾಣಿಸಿಕೊಂಡಿತು. ಹೀಗೆ ಆಜ್ಞೆಯ ಮೂಲಕ ಪಾಪವು ಅತ್ಯಧಿಕವಾದ ಪಾಪವಾಗಿ ತೋರಿಬಂತು. ನ್ಯಾಯ ಪ್ರಮಾಣವು ಆತ್ಮೀಕವಾದದ್ದೆಂದು ನಾವು ಬಲ್ಲೆವು; ಆದರೆ ನಾನು ಶರೀರಾಧೀನನೂ ಪಾಪದ ಅಧೀನದಲ್ಲಿ ರುವದಕ್ಕೆ ಮಾರಲ್ಪಟ್ಟವನೂ ಆಗಿದ್ದೇನೆ. ಹೇಗಂದರೆ ನಾನು ಮಾಡುವದನ್ನು ನಾನೇ ಒಪ್ಪುವದಿಲ್ಲ; ಯಾವದನ್ನು ಮಾಡಬೇಕೆಂದು ನಾನು ಇಚ್ಛಿಸುತ್ತೇನೋ ಅದನ್ನು ಮಾಡದೆ ನಾನು ವಿರೋಧಿಸುವದನ್ನು ಮಾಡುತ್ತೇನೆ. ಆದರೆ ನನಗೆ ಮನಸ್ಸಿಲ್ಲದ್ದನ್ನು ಮಾಡಿ ದರೆ ನ್ಯಾಯಪ್ರಮಾಣವು ಉತ್ತಮವಾದದ್ದೆಂದು ಒಪ್ಪಿ ಕೊಂಡ ಹಾಗಾಯಿತು. ಹೀಗಿರಲಾಗಿ ವಿರೋಧ ವಾದದ್ದನ್ನು ಮಾಡುವವನು ಇನ್ನು ನಾನಲ್ಲ; ನನ್ನಲ್ಲಿ ನೆಲೆಗೊಂಡಿರುವ ಪಾಪವೇ ಅದನ್ನು ಮಾಡುತ್ತದೆ. ಯಾಕಂದರೆ ನನ್ನಲ್ಲಿ ಅಂದರೆ ನನ್ನ ಶರೀರದಲ್ಲಿ ಒಳ್ಳೆಯದೇನೂ ವಾಸವಾಗಿಲ್ಲವೆಂದು ನನಗೆ ತಿಳಿದದೆ; ಒಳ್ಳೇದನ್ನು ಮಾಡುವದಕ್ಕೆ ನನಗೇನೋ ಮನಸ್ಸುಂಟು; ಆದರೆ ಅದನ್ನು ಮಾಡುವದು ನನ್ನಿಂದಾಗದು. ನಾನು ಇಚ್ಛಿಸುವ ಒಳ್ಳೇದನ್ನು ಮಾಡದೆ ಇಚ್ಛಿಸದಿರುವ ಕೆಟ್ಟ ದ್ದನ್ನೇ ಮಾಡುವವನಾಗಿದ್ದೇನೆ. 20ಇಚ್ಛಿಸದಿರುವದನ್ನು ನಾನು ಮಾಡಿದರೆ ಅದನ್ನು ಮಾಡಿದವನು ಇನ್ನು ನಾನಲ್ಲ. ನನ್ನಲ್ಲಿ ನೆಲೆಗೊಂಡಿರುವ ಪಾಪವೇ ಅದನ್ನು ಮಾಡಿತು. ಇಚ್ಛಿಸದಿರುವದನ್ನು ನಾನು ಮಾಡಿದರೆ ಅದನ್ನು ಮಾಡಿದವನು ಇನ್ನು ನಾನಲ್ಲ. ನನ್ನಲ್ಲಿ ನೆಲೆಗೊಂಡಿರುವ ಪಾಪವೇ ಅದನ್ನು ಮಾಡಿತು. ಹೀಗಿರಲಾಗಿ ಒಳ್ಳೆಯದನ್ನು ಮಾಡ ಲಿಚ್ಛಿಸುವ ನನಗೆ ಕೆಟ್ಟದ್ದಾಗಿರುವ ನಿಯಮವು ನನ್ನಲ್ಲಿ ಕಾಣಬರುತ್ತದೆ. ಹೀಗಿದ್ದಾಗ್ಯೂ ಒಳಮನುಷ್ಯನಿಗನು ಗುಣವಾಗಿ ದೇವರ ನಿಯಮದಲ್ಲಿ ಆನಂದಪಡುವವ ನಾಗಿದ್ದೇನೆ. ಆದರೆ ನನ್ನ ಅಂಗಗಳಲ್ಲಿ ಬೇರೊಂದು ನಿಯಮವುಂಟೆಂದು ನಾನು ನೋಡುತ್ತೇನೆ; ಅದು ನನ್ನ ಮನಸ್ಸಿನಲ್ಲಿರುವ ನಿಯಮಕ್ಕೆ ವಿರೋಧವಾಗಿ ಕಾದಾಡಿ ನನ್ನನ್ನು ಸೆರೆ ಹಿಡಿದು ನನ್ನ ಅಂಗಗಳಲ್ಲಿರುವ ಪಾಪದ ನಿಯಮಕ್ಕೆ ವಶಮಾಡುವಂಥದ್ದಾಗಿದೆ. ಅಯ್ಯೋ, ನಾನು ಎಂಥ ನಿರ್ಗತಿಕನಾದ ಮನುಷ್ಯನು! ಇಂಥ ಮರಣಕ್ಕೆ ಒಳಗಾದ ಈ ದೇಹ ದಿಂದ ನನ್ನನ್ನು ಬಿಡಿಸುವವನು ಯಾರು?ನಾನು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ ಮಾಡುತ್ತೇನೆ; ಹೀಗೆ ನನ್ನಷ್ಟಕ್ಕೆ ನಾನೇ ಮನಸ್ಸಿನಿಂದ ದೇವರ ನಿಯಮಕ್ಕೂ ಶರೀರದಿಂದ ಪಾಪವೆಂಬ ನಿಯಮಕ್ಕೂ ಆಳಾಗಿದ್ದೇನೆ. ನಾನು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ ಮಾಡುತ್ತೇನೆ; ಹೀಗೆ ನನ್ನಷ್ಟಕ್ಕೆ ನಾನೇ ಮನಸ್ಸಿನಿಂದ ದೇವರ ನಿಯಮಕ್ಕೂ ಶರೀರದಿಂದ ಪಾಪವೆಂಬ ನಿಯಮಕ್ಕೂ ಆಳಾಗಿದ್ದೇನೆ.
- John 3:36 ಯೋಹಾನನು 3:36ಮಗನ ಮೇಲೆ ನಂಬಿಕೆಯಿಡುವವನಿಗೆ ನಿತ್ಯಜೀವ ಉಂಟು; ಯಾವನು ಮಗನನ್ನು ನಂಬುವದಿಲ್ಲವೋ ಅವನು ಜೀವವನ್ನು ಕಾಣುವದಿಲ್ಲ; ಆದರೆ ದೇವರ ಕೋಪವು ಅವನ ಮೇಲೆ ನೆಲೆಗೊಂಡಿದೆ ಅಂದನು.
- Galatians 3:19 ಗಲಾತ್ಯದವರಿಗೆ 3:19ಹಾಗಾದರೆ ನ್ಯಾಯಪ್ರಮಾಣವು ಯಾತಕ್ಕೆ? ವಾಗ್ದಾನದ ಸಂತತಿಯಾದಾತನು ಬರುವತನಕ ದೇವರು ಇಂಥಿಂಥದ್ದು ಅಪರಾಧವೆಂದು ತೋರಿಸುವದಕ್ಕಾಗಿ ಅದನ್ನು ವಾಗ್ದಾನದ ತರುವಾಯ ನೇಮಿಸಿ ದೂತರ ಮುಖಾಂತರ ಒಬ್ಬ ಮಧ್ಯಸ್ಥನ ಕೈಯಲ್ಲಿ ಕೊಟ್ಟನು.
- Ephesians 5:6 ಎಫೆಸದವರಿಗೆ 5:6ಹುರುಳಿಲ್ಲದ ಮಾತುಗಳಿಂದ ಯಾರೂ ನಿಮ್ಮನ್ನು ಮೋಸಗೊಳಿಸದಿರಲಿ. ಯಾಕಂದರೆ ಇಂಥವುಗಳಿಂದ ದೇವರ ಕೋಪವು ಆತನಿಗೆ ಅವಿಧೇಯರಾದ ಮಕ್ಕಳ ಮೇಲೆ ಬರುತ್ತದೆ.
- 2 Corinthians 3:7–9 2 ಕೊರಿಂಥದವರಿಗೆ 3:7–9ಆದರೆ ಮರಣದ ಸೇವೆಯು ಕಲ್ಲಿನ ಮೇಲೆ ಲಿಖಿತವಾದ ಅಕ್ಷರಗಳಲ್ಲಿದ್ದರೂ ಪ್ರಭಾವದಿಂದ ಕೂಡಿದ್ದಾಗಿತ್ತು; ಆ ಪ್ರಭಾವದಿಂದ ಮೋಶೆಯ ಮುಖಕ್ಕೆ ಬಂದ ಪ್ರಕಾಶವು ಕುಂದಿ ಹೋಗುವಂಥ ದ್ದಾಗಿದ್ದರೂ ಅದರ ನಿಮಿತ್ತ ಇಸ್ರಾಯೇಲ್ಯರು ಅವನ ಮುಖವನ್ನು ದೃಷ್ಟಿಸಿ ನೋಡಲಾರದೆ ಇದ್ದರು. ಹೀಗಿದ್ದ ಮೇಲೆ ಆತ್ಮ ಸಂಬಂಧವಾದ ಸೇವೆಯು ಎಷ್ಟೋ ಹೆಚ್ಚಾಗಿ ಪ್ರಭಾವದಿಂದಿರುವದಲ್ಲವೇ? ಅಪರಾಧ ನಿರ್ಣಯದ ಸೇವೆಯು ಪ್ರಭಾವದಿಂದಿರುವದಾದರೆ ನೀತಿಯ ಸೇವೆಯು ಎಷ್ಟೋ ಅಧಿಕವಾದ ಪ್ರಭಾವವುಳ್ಳದ್ದಾಗಿರಬೇಕು.
- 1 John 3:4 1 ಯೋಹಾನನು 3:4ಪಾಪಮಾಡುವವನು ನ್ಯಾಯಪ್ರಮಾಣವನ್ನು ವಿಾರುವವನಾಗಿದ್ದಾನೆ; ಯಾಕಂದರೆ ನ್ಯಾಯ ಪ್ರಮಾಣವನ್ನು ವಿಾರುವದೇ ಪಾಪ.
- Romans 2:12–13 ರೋಮಾಪುರದವರಿಗೆ 2:12–13ನ್ಯಾಯ ಪ್ರಮಾಣವಿಲ್ಲದೆ ಪಾಪ ಮಾಡಿದವರೆಲ್ಲರೂ ನ್ಯಾಯ ಪ್ರಮಾಣವಿಲ್ಲದೆ ನಾಶವಾಗುವರು; ನ್ಯಾಯಪ್ರಮಾಣ ವುಳ್ಳವರಾಗಿದ್ದು ಪಾಪ ಮಾಡಿದವರು ನ್ಯಾಯಪ್ರಮಾ ಣದಿಂದಲೇ ತೀರ್ಪು ಹೊಂದುವರು. (ನ್ಯಾಯ ಪ್ರಮಾಣವನ್ನು ಕೇಳುವವರು ದೇವರ ಸನ್ನಿಧಿಯಲಿ ನೀತಿವಂತರಾಗುವದಿಲ್ಲ; ನ್ಯಾಯಪ್ರಮಾಣವನ್ನು ಕೈ ಕೊಂಡು ನಡೆಯುವವರೇ ನೀತಿವಂತರೆಂದು ಎಣಿಸ ಲ್ಪಡುವರು.
- Acts 17:30–31 ಅಪೊಸ್ತಲರ ಕೃತ್ಯಗಳು 17:30–31ಈ ಅಜ್ಞಾನಕಾಲಗಳನ್ನು ದೇವರುಲಕ್ಷ್ಯಕ್ಕೆ ತರಲಿಲ್ಲ; ಈಗಲಾದರೋ ಆತನು ಎಲ್ಲಾ ಕಡೆಯಲ್ಲಿರುವ ಮನು ಷ್ಯರೆಲ್ಲರೂ ಮಾನಸಾಂತರಪಡಬೇಕೆಂದು ಅಪ್ಪಣೆ ಕೊಡುತ್ತಾನೆ. ಯಾಕಂದರೆ ಆತನು ನಿಷ್ಕರ್ಷೆಮಾಡಿದ ಪುರುಷನ ಕೈಯಿಂದ ನೀತಿಗನುಸಾರವಾಗಿ ಭೂಲೋಕದ ನ್ಯಾಯವಿಚಾರಣೆ ಮಾಡುವದಕ್ಕೆ ಒಂದು ದಿವಸ ವನ್ನು ನೇಮಕ ಮಾಡಿದ್ದಾನೆ. ಆತನನ್ನು ಸತ್ತವರೊಳ ಗಿಂದ ಎಬ್ಬಿಸಿದ್ದರಿಂದ ಇದಕ್ಕೆ ಎಲ್ಲರಿಗೂ ಆಧಾರ ಕೊಟ್ಟಿದ್ದಾನೆ ಅಂದನು.