1 John · chapter 3 · verse 4
1 John 3:4 in Kannada
ಪಾಪಮಾಡುವವನು ನ್ಯಾಯಪ್ರಮಾಣವನ್ನು ವಿಾರುವವನಾಗಿದ್ದಾನೆ; ಯಾಕಂದರೆ ನ್ಯಾಯ ಪ್ರಮಾಣವನ್ನು ವಿಾರುವದೇ ಪಾಪ.
Paapamaaduvavanu nyaayapramaanavannu viాruvavanaagiddaane; yaakandare nyaaya pramaanavannu viాruvade paapa.
1 John 3:4 in English
- King James Version (KJV)
- Whosoever committeth sin transgresseth also the law: for sin is the transgression of the law.
- World English Bible (WEB)
- Everyone who sins also commits lawlessness. Sin is lawlessness.
- American Standard Version (ASV)
- Every one that doeth sin doeth also lawlessness; and sin is lawlessness.
- Bible in Basic English (BBE)
- Everyone who is a sinner goes against the law, for sin is going against the law.
- Darby Translation (DBY)
- Every one that practises sin practises also lawlessness; and sin is lawlessness.
- Webster's Bible (WBS)
- Whoever committeth sin transgresseth also the law; for sin is the transgression of the law.
- Young's Literal Translation (YLT)
- Every one who is doing the sin, the lawlessness also he doth do, and the sin is the lawlessness,
Read in context
- 2ಪ್ರಿಯರೇ, ನಾವು ಈಗ ದೇವರ ಪುತ್ರರಾಗಿದ್ದೇವೆ, ಮುಂದೆ ನಾವು ಏನಾಗುವೆವೋ ಅದು ಇನ್ನೂ ಪ್ರತ್ಯಕ್ಷವಾಗಲಿಲ್ಲ. ಆತನು ಪ್ರತ್ಯಕ್ಷ ನಾದಾಗ ನಾವು ಆತನ ಹಾಗಿರುವೆವೆಂದು ಬಲ್ಲೆವು; ಯಾಕಂದರೆ ನಾವು ಆತನನ್ನು ಆತನಿರುವ ಪ್ರಕಾರವೇ ನೋಡುವೆವು.
- 3ಆತನಲ್ಲಿ ಈ ನಿರೀಕ್ಷೆಯನ್ನು ಇಟ್ಟಿರುವ ಪ್ರತಿಯೊಬ್ಬನು ಆತನು ಶುದ್ಧನಾಗಿರುವಂತೆಯೇ ತನ್ನನ್ನು ಶುದ್ಧಮಾಡಿಕೊಳ್ಳುತ್ತಾನೆ.
- 4ಪಾಪಮಾಡುವವನು ನ್ಯಾಯಪ್ರಮಾಣವನ್ನು ವಿಾರುವವನಾಗಿದ್ದಾನೆ; ಯಾಕಂದರೆ ನ್ಯಾಯ ಪ್ರಮಾಣವನ್ನು ವಿಾರುವದೇ ಪಾಪ.
- 5ಪಾಪಗಳನ್ನು ನಿವಾರಣೆ ಮಾಡುವದಕ್ಕಾಗಿ ಆತನು ಪ್ರತ್ಯಕ್ಷನಾದ ನೆಂಬದು ನಿಮಗೆ ಗೊತ್ತಾಗಿದೆ; ಆತನಲ್ಲಿ ಪಾಪವಿಲ್ಲ.
- 6ಆತನಲ್ಲಿ ನೆಲೆಗೊಂಡಿರುವವನು ಪಾಪಮಾಡನು; ಪಾಪಮಾಡುವವನು ಆತನನ್ನು ಕಂಡವನೂ ಅಲ್ಲ, ತಿಳಿದವನೂ ಅಲ್ಲ.
Cross references
- 1 John 5:17 1 ಯೋಹಾನನು 5:17ಅನೀತಿಯೆಲ್ಲವೂ ಪಾಪವಾಗಿದೆ; ಆದರೂ ಮರಣಕರವಲ್ಲದ ಪಾಪವುಂಟು.
- Romans 3:20 ರೋಮಾಪುರದವರಿಗೆ 3:20ಆದದರಿಂದ ನ್ಯಾಯಪ್ರಮಾಣದ ಕ್ರಿಯೆಗಳಿಂದ ಯಾವನೂ ಆತನ ದೃಷ್ಟಿಯಲ್ಲಿ ನೀತಿವಂತನೆಂದು ನಿರ್ಣ ಯಿಸಲ್ಪಡುವದಿಲ್ಲ. ಯಾಕಂದರೆ ನ್ಯಾಯಪ್ರಮಾಣ ದಿಂದಲೇ ಪಾಪದ ಅರುಹು ಉಂಟಾಗುತ್ತದೆ.
- Romans 4:15 ರೋಮಾಪುರದವರಿಗೆ 4:15ನ್ಯಾಯಪ್ರಮಾಣವು ದೇವರ ಕೋಪಕ್ಕೆ ಗುರಿಮಾಡುವಂಥದ್ದು. ನ್ಯಾಯಪ್ರಮಾಣವಿಲ್ಲದ ಪಕ್ಷ ದಲ್ಲಿ ಆಜ್ಞಾತಿಕ್ರಮಣವೂ ಇಲ್ಲ;
- Numbers 15:31 ಅರಣ್ಯಕಾಂಡ 15:31ಅವನು ಕರ್ತನ ವಾಕ್ಯವನ್ನು ಅವಮಾನ ಮಾಡಿ ಆತನ ಆಜ್ಞೆಗಳನ್ನು ವಿಾರಿದ್ದರಿಂದ ಆ ಮನು ಷ್ಯನು ನಿಶ್ಚಯವಾಗಿ ತೆಗೆದುಹಾಕಲ್ಪಡಬೇಕು. ಅವನ ಅಕ್ರಮವು ಅವನ ಮೇಲಿರುವದು ಎಂದು ಹೇಳಿದನು.
- 1 John 3:8–9 1 ಯೋಹಾನನು 3:8–9ಪಾಪಮಾಡುವವನು ಸೈತಾನ ನಿಗೆ ಸಂಬಂಧಪಟ್ಟವನಾಗಿದ್ದಾನೆ; ಯಾಕಂದರೆ ಆದಿ ಯಿಂದಲೂ ಸೈತಾನನು ಪಾಪಮಾಡುವವನಾಗಿದ್ದಾನೆ. ಆದದರಿಂದ ದೇವಕುಮಾರನು ಸೈತಾನನ ಕೆಲಸಗಳನ್ನು ಲಯಮಾಡುವದಕ್ಕೋಸ್ಕರವೇ ಪ್ರತ್ಯಕ್ಷನಾದನು. ದೇವರಿಂದ ಹುಟ್ಟಿದವನು ಪಾಪಮಾಡನು; ಯಾಕಂದರೆ ಆತನ ಬೀಜವು ಅವನಲ್ಲಿ ನೆಲೆಗೊಂಡದೆ. ಅವನು ದೇವರಿಂದ ಹುಟ್ಟಿದ ಕಾರಣ ಪಾಪಮಾಡ ಲಾರನು.
- 2 Corinthians 12:21 2 ಕೊರಿಂಥದವರಿಗೆ 12:21ಇದಲ್ಲದೆ ನಾನು ತಿರಿಗಿ ಬಂದಾಗ ನಿಮ್ಮ ಮಧ್ಯದಲ್ಲಿ ನಾನು ಕುಂದಿಹೋಗು ವಂತೆ ನನ್ನ ದೇವರು ಮಾಡಾನೆಂತಲೂ ಅಶುದ್ಧತೆ ಹಾದರತನ ಬಂಡುತನಗಳನ್ನು ನಡಿಸಿ ಪಶ್ಚಾತ್ತಾಪ ಪಡದೆ ಆಗಲೇ ಪಾಪ ಮಾಡಿದ ಅನೇಕರ ವಿಷಯವಾಗಿ ನಾನು ವ್ಯಥೆಪಡಬೇಕಾದೀತೆಂತಲೂ ನನಗೆ ಭಯವುಂಟು.
- Romans 7:7–13 ರೋಮಾಪುರದವರಿಗೆ 7:7–13ಹಾಗಾದರೆ ನಾವು ಏನು ಹೇಳೋಣ? ನ್ಯಾಯ ಪ್ರಮಾಣವು ಪಾಪವೋ? ಹಾಗೆ ಎಂದಿಗೂ ಅಲ್ಲ; ನ್ಯಾಯಪ್ರಮಾಣದಿಂದಲೇ ಹೊರತು ಪಾಪವೆಂಬದು ಏನೋ ನನಗೆ ಗೊತ್ತಿರಲಿಲ್ಲ. ಯಾಕಂದರೆ--ನೀನು ಆಶಿಸಬಾರದು ಎಂದು ನ್ಯಾಯಪ್ರಮಾಣವು ಹೇಳ ದಿದ್ದರೆ ದುರಾಶೆಯೆಂದರೆ ಏನೋ ನನಗೆ ತಿಳಿಯು ತ್ತಿರಲಿಲ್ಲ. ಆದರೆ ಪಾಪವು ಈ ಆಜ್ಞೆಯಿಂದ ಅನುಕೂಲ ಹೊಂದಿ ಸಕಲ ವಿಧವಾದ ದುರಾಶೆಯನ್ನು ನನ್ನಲ್ಲಿ ಹುಟ್ಟಿಸಿತು. ನ್ಯಾಯಪ್ರಮಾಣವು ಇಲ್ಲದಿರು ವಾಗ ಪಾಪವು ಸತ್ತದ್ದಾಗಿದೆ. ಮೊದಲು ನಾನು ನ್ಯಾಯಪ್ರಮಾಣವಿಲ್ಲದವನಾಗಿದ್ದು ಜೀವದಿಂದಿದ್ದೆನು. ಆಜ್ಞೆಯು ಬಂದಾಗ ಪಾಪವು ಪುನರ್ಜೀವವಾಗಿ ನಾನು ಸತ್ತೆನು. ಜೀವಿಸುವದಕ್ಕಾಗಿರುವ ಆಜ್ಞೆಯೇ ಮರಣಕ್ಕಾಯಿತೆಂದು ನಾನು ಕಂಡುಕೊಂಡೆನು. ಹೇಗಂದರೆ ಪಾಪವು ಆಜ್ಞೆಯಿಂದ ಅನುಕೂಲ ಹೊಂದಿ ನನ್ನನ್ನು ವಂಚಿಸಿ ಅದರ ಮೂಲಕವೇ ನನ್ನನು ಕೊಂದಿತು; ಹೀಗಿರಲಾಗಿ ನ್ಯಾಯಪ್ರಮಾಣವು ಪರಿ ಶುದ್ಧವಾದದ್ದು. ಆಜ್ಞೆಯು ಪರಿಶುದ್ಧವೂ ನ್ಯಾಯವೂ ಹಿತವೂ ಆಗಿರುವಂಥದ್ದು ಸರಿ. ಹಾಗಾದರೆ ಹಿತವಾದದ್ದು ನನಗೆ ಮರಣಕ್ಕೆ ಕಾರಣವಾಯಿತೋ? ಹಾಗೆ ಎಂದಿಗೂ ಅಲ್ಲ; ಆದರೆ ಪಾಪವು ಹಿತವಾದದ್ದರ ಮೂಲಕ ನನ್ನಲ್ಲಿ ಮರಣವನ್ನು ಉಂಟುಮಾಡಿದ್ದರಿಂದ ಅದು ಪಾಪವೇ ಎಂದು ಕಾಣಿಸಿಕೊಂಡಿತು. ಹೀಗೆ ಆಜ್ಞೆಯ ಮೂಲಕ ಪಾಪವು ಅತ್ಯಧಿಕವಾದ ಪಾಪವಾಗಿ ತೋರಿಬಂತು.
- Daniel 9:11 ದಾನಿಯೇಲನು 9:11ಹೌದು, ಎಲ್ಲಾ ಇಸ್ರಾಯೇಲ್ಯರು ನಿನ್ನ ನ್ಯಾಯ ಪ್ರಮಾಣವನ್ನು ವಿಾರಿ ನಿನ್ನ ಸ್ವರಕ್ಕೆ ಕಿವಿಗೊಡದೆ ತೊಲಗಿದ್ದದರಿಂದ ಶಾಪವು ದೇವರ ಸೇವಕನಾದ ಮೋಶೆಯು ನ್ಯಾಯ ಪ್ರಮಾಣದಲ್ಲಿ ಬರೆದ ಆಣೆಯು, ಆತನಿಗೆ ವಿರುದ್ಧವಾಗಿ ನಾವು ಮಾಡಿದ ಪಾಪದ ನಿಮಿತ್ತ ನಮ್ಮ ಮೇಲೆ ಹೊಯ್ಯಲ್ಪಟ್ಟಿದೆ.
- James 2:9–11 ಯಾಕೋಬನು 2:9–11ನೀವು ಪಕ್ಷಪಾತಿಗಳಾಗಿದ್ದರೆ ಪಾಪ ಮಾಡುವವರಾಗಿದ್ದು ಅಪ ರಾಧಿಗಳೆಂದು ನ್ಯಾಯಪ್ರಮಾಣದಿಂದ ಮನದಟ್ಟು ಮಾಡಲ್ಪಡುತ್ತೀರಿ. ಯಾಕಂದರೆ ಯಾವನಾದರೂ ನ್ಯಾಯಪ್ರಮಾಣವನ್ನೆಲ್ಲಾ ಕೈಕೊಂಡು ನಡೆದು ಒಂದೇ ಒಂದರಲ್ಲಿ ತಪ್ಪಿದರೆ ಅವನು ಎಲ್ಲಾ ವಿಷಯದಲ್ಲಿಯೂ ಅಪರಾಧಿಯಾಗುತ್ತಾನೆ. ವ್ಯಭಿಚಾರ ಮಾಡಬಾರ ದೆಂದು ಹೇಳಿದಾತನೇ--ನರಹತ್ಯ ಮಾಡಬಾರ ದೆಂತಲೂ ಹೇಳಿದನು. ಆದಕಾರಣ ನೀನು ವ್ಯಭಿಚಾರ ಮಾಡದೆ ಇದ್ದರೂ ನರಹತ್ಯ ಮಾಡಿದರೆ ನ್ಯಾಯ ಪ್ರಮಾಣವನ್ನು ವಿಾರಿದವನಾದಿ.
- 1 Samuel 15:24 1 ಸಮುವೇಲನು 15:24ಆಗ ಸೌಲನು ಸಮುವೇಲನಿಗೆ--ನಾನು ಕರ್ತನ ವಾಕ್ಯವನ್ನೂ ನಿನ್ನ ಮಾತುಗಳನ್ನೂ ವಿಾರಿ ಪಾಪಮಾಡಿದೆನು. ನಾನು ಜನರಿಗೆ ಭಯಪಟ್ಟು ಅವರ ಮಾತನ್ನು ಕೇಳಿದೆನು.
- 2 Chronicles 24:20 2 ಪೂರ್ವಕಾಲವೃತ್ತಾಂತ 24:20ಆಗ ದೇವರ ಆತ್ಮನು ಯಾಜಕನಾಗಿ ರುವ ಯೆಹೋಯಾದನ ಮಗನಾದ ಜೆಕರ್ಯನ ಮೇಲೆ ಬಂದನು. ಅವನು ಜನರೊಳಗೆ ಎತ್ತರವಾದ ಸ್ಥಳದಲ್ಲಿ ನಿಂತು ಅವರಿಗೆ--ನೀವು ವೃದ್ಧಿಹೊಂದ ಕೂಡದ ಹಾಗೆ ಕರ್ತನ ಆಜ್ಞೆಗಳನ್ನು ವಿಾರುವದೇನು? ನೀವು ಕರ್ತನನ್ನು ಬಿಟ್ಟದ್ದರಿಂದ ಆತನು ನಿಮ್ಮನ್ನು ಬಿಟ್ಟಿದ್ದಾನೆಂದು ಕರ್ತನು ಹೇಳುತ್ತಾನೆ ಅಂದನು.
- 1 Chronicles 10:13 1 ಪೂರ್ವಕಾಲವೃತ್ತಾಂತ 10:13ಹೀಗೆಯೇ ಸೌಲನು ಕರ್ತನಿಗೆ ವಿರೋಧವಾಗಿ ಮಾಡಿದ ತನ್ನ ಅಪರಾಧದ ನಿಮಿತ್ತ ಸತ್ತುಹೋದನು. ಅವನು ಕರ್ತನ ವಾಕ್ಯವನ್ನು ಕೈಕೊಳ್ಳದೆ,ಅದಕ್ಕೆ ವಿರೋಧವಾಗಿ ನಡೆದು ಕರ್ತನನ್ನು ವಿಚಾರಿಸದೆ ಯಕ್ಷಿ ಣಿಗಾರರನ್ನು ವಿಚಾರಿಸಲು ಅವರನ್ನು ಹುಡುಕಿದ್ದರಿಂದ ಕರ್ತನು ಅವನನ್ನು ಕೊಂದುಹಾಕಿ ರಾಜ್ಯವನ್ನು ಇಷ ಯನ ಮಗನಾದ ದಾವೀದನ ಕಡೆಗೆ ತಿರುಗಿಸಿದನು.