Ruth · chapter 4 · verse 14
Ruth 4:14 in Kannada
ಆಗ ಸ್ತ್ರೀಯರು ನೊವೊಮಿಗೆ ಹೇಳಿದ್ದೇನಂದರೆ--ಇಸ್ರಾಯೇಲಿನಲ್ಲಿ ಹೆಸರುಗೊಳ್ಳುವ ಸಂಬಂಧಿಕನು ನಿನಗೆ ಒಬ್ಬನಿಲ್ಲದ ಹಾಗೆ ಮಾಡದೆ ಇರುವ ಕರ್ತನು ಆಶೀರ್ವದಿಸಲ್ಪಡಲಿ.
Aaga streeyaru novomige heliddenandare--israayelinalli hesarugolluva sambandhikanu ninage obbanillada haage maadade iruva kartanu aasheervadisalpadali.
Ruth 4:14 in English
- King James Version (KJV)
- And the women said unto Naomi, Blessed [be] the LORD, which hath not left thee this day without a kinsman, that his name may be famous in Israel.
- World English Bible (WEB)
- The women said to Naomi, “Blessed be the LORD, who has not left you today without a near kinsman. Let his name be famous in Israel.
- American Standard Version (ASV)
- And the women said unto Naomi, Blessed be Jehovah, who hath not left thee this day without a near kinsman; and let his name be famous in Israel.
- Bible in Basic English (BBE)
- And the women said to Naomi, A blessing on the Lord, who has not let you be this day without a near relation, and may his name be great in Israel.
- Darby Translation (DBY)
- And the women said to Naomi, Blessed be Jehovah who hath not left thee this day without one that has the right of redemption, and may his name be famous in Israel!
- Webster's Bible (WBS)
- And the women said to Naomi, Blessed [be] the LORD, who hath not left thee this day without a kinsman, that his name may be famous in Israel.
- Young's Literal Translation (YLT)
- And the women say unto Naomi, 'Blessed [is] Jehovah who hath not let a redeemer cease to thee to-day, and his name is proclaimed in Israel,
Read in context
- 12ಈ ಹುಡುಗಿಯಿಂದ ಕರ್ತನು ನಿನಗೆ ಕೊಡುವ ಸಂತಾನದಿಂದ ನಿನ್ನ ಮನೆಯೂ ತಾಮರಳು ಯೂದ ನಿಗೆ ಹೆತ್ತ ಪೆರೆಚನ ಮನೆಯ ಹಾಗೆಯೇ ಆಗಲಿ ಅಂದರು.
- 13ಬೋವಜನು ರೂತಳನ್ನು ತೆಗೆದುಕೊಂಡನು; ಅವಳು ಅವನಿಗೆ ಹೆಂಡತಿಯಾದಳು. ಅವನು ಅವಳನ್ನು ಕೂಡಿದಾಗ ಕರ್ತನು ಅವಳಿಗೆ ಗರ್ಭ ತೆರೆದದ್ದರಿಂದ ಅವಳು ಮಗನನ್ನು ಹೆತ್ತಳು.
- 14ಆಗ ಸ್ತ್ರೀಯರು ನೊವೊಮಿಗೆ ಹೇಳಿದ್ದೇನಂದರೆ--ಇಸ್ರಾಯೇಲಿನಲ್ಲಿ ಹೆಸರುಗೊಳ್ಳುವ ಸಂಬಂಧಿಕನು ನಿನಗೆ ಒಬ್ಬನಿಲ್ಲದ ಹಾಗೆ ಮಾಡದೆ ಇರುವ ಕರ್ತನು ಆಶೀರ್ವದಿಸಲ್ಪಡಲಿ.
- 15ಅವನು ನಿನಗೆ ಪ್ರಾಣವನ್ನು ಪುನರ್ಜೀವಿಸುವವ ನಾಗಿಯೂ ನಿನ್ನ ವೃದ್ಧ ವಯಸ್ಸಿನಲ್ಲಿ ಸಂರಕ್ಷಿಸುವವ ನಾಗಿಯೂ ಇರುವನು. ಯಾಕಂದರೆ ನಿನ್ನನ್ನು ಪ್ರೀತಿ ಮಾಡುವ ಏಳು ಮಂದಿ ಮಕ್ಕಳಿಗಿಂತ ನಿನಗೆ ಉತ್ತಮ ಳಾಗಿರುವ ನಿನ್ನ ಸೊಸೆಯು ಅವನನ್ನು ಹೆತ್ತಳು ಅಂದರು.
- 16ನೊವೊಮಿಯು ಆ ಮಗುವನ್ನು ಎತ್ತಿ ತನ್ನ ಉಡಿಲಲ್ಲಿ ಇಟ್ಟುಕೊಂಡು ಅದಕ್ಕೆ ದಾದಿಯಾದಳು.
Cross references
- Genesis 12:2 ಆದಿಕಾಂಡ 12:2ನಾನು ನಿನ್ನನ್ನು ದೊಡ್ಡ ಜನಾಂಗವಾಗ ಮಾಡಿ ನಿನ್ನನ್ನು ಆಶೀರ್ವದಿಸಿ ನಿನ್ನ ಹೆಸರನ್ನು ದೊಡ್ಡ ದಾಗಿ ಮಾಡುವೆನು, ನೀನು ಆಶೀರ್ವಾದವಾಗಿರುವಿ.
- Luke 1:58 ಲೂಕನು 1:58ಆಗ ಕರ್ತನು ತನ್ನ ಮಹಾಕರುಣೆಯನ್ನು ಆಕೆಯ ಮೇಲೆ ತೋರಿಸಿದ್ದನ್ನು ಆಕೆಯ ನೆರೆಹೊರೆಯವರೂ ಬಂಧುಗಳೂ ಕೇಳಿ ಆಕೆಯ ಕೂಡ ಸಂತೋಷಪಟ್ಟರು.
- Matthew 1:5–20 ಮತ್ತಾಯನು 1:5–20ಸಲ್ಮೋನನಿಂದ ರಾಹಾಬಳಲ್ಲಿ ಬೋವಜನು ಹುಟ್ಟಿ ದನು; ಬೋವಜನಿಂದ ರೂತಳಲ್ಲಿ ಓಬೇದನು ಹುಟ್ಟಿದನು; ಓಬೇದನಿಂದ ಇಷಯನು ಹುಟ್ಟಿದನು; ಇಷಯನಿಂದ ಅರಸನಾದ ದಾವೀದನು ಹುಟ್ಟಿದನು. ಅರಸನಾದ ದಾವೀದನಿಂದ ಊರೀಯನ ಹೆಂಡತಿ ಯಾಗಿದ್ದವಳಲ್ಲಿ ಸೊಲೊಮೋನನು ಹುಟ್ಟಿದನು; ಸೊಲೊಮೋನನಿಂದ ರೆಹಬ್ಬಾಮನು ಹುಟ್ಟಿದನು; ರೆಹಬ್ಬಾಮನಿಂದ ಅಬೀಯನು ಹುಟ್ಟಿದನು; ಅಬೀಯನಿಂದ ಆಸನು ಹುಟ್ಟಿದನು; ಆಸನಿಂದ ಯೆಹೋಷಾಫಾಟನು ಹುಟ್ಟಿದನು; ಯೆಹೋಷಾ ಫಾಟನಿಂದ ಯೆಹೋರಾಮನು ಹುಟ್ಟಿದನು; ಯೆಹೋ ರಾಮನಿಂದ ಉಜ್ಜೀಯನು ಹುಟ್ಟಿದನು; ಉಜ್ಜೀಯ ನಿಂದ ಯೋತಾಮನು ಹುಟ್ಟಿದನು; ಯೋತಾಮನಿಂದ ಆಹಾಜನು ಹುಟ್ಟಿದನು; ಆಹಾಜನಿಂದ ಹಿಜ್ಕೀಯನು ಹುಟ್ಟಿದನು; ಹಿಜ್ಕೀಯನಿಂದ ಮನಸ್ಸೆಯು ಹುಟ್ಟಿದನು; ಮನಸ್ಸೆಯಿಂದ ಆಮೋನನು ಹುಟ್ಟಿದನು; ಆಮೋನನಿಂದ ಯೋಷೀಯನು ಹುಟ್ಟಿದನು; ಅವರು ಬಾಬೆಲಿಗೆ ಸೆರೆಯಾಗಿ ಒಯ್ಯಲ್ಪಟ್ಟ ಸಮಯದಲ್ಲಿ ಯೋಷೀಯನಿಂದ ಯೆಕೊನ್ಯನೂ ಅವನ ಸಹೋದರರೂ ಹುಟ್ಟಿದರು. ಅವರು ಬಾಬೆಲಿಗೆ ಬಂದ ಮೇಲೆ ಯೆಕೂನ್ಯ ನಿಂದ ಶೆಯಲ್ತಿಯೇಲನು ಹುಟ್ಟಿದನು; ಶೆಯೆಲ್ತಿ ಯೇಲಿನಿಂದ ಜೆರುಬ್ಬಾಬೆಲನು ಹುಟ್ಟಿದನು; ಜೆರುಬ್ಬಾಬೆಲನಿಂದ ಅಬಿಹೂದನು ಹುಟ್ಟಿದನು; ಅಬಿಹೂದನಿಂದ ಎಲ್ಯಕೀಮನು ಹುಟ್ಟಿದನು; ಎಲ್ಯ ಕೀಮನಿಂದ ಅಜೋರನು ಹುಟ್ಟಿದನು; ಅಜೋರ ನಿಂದ ಸದೋಕನು ಹುಟ್ಟಿದನು; ಸದೋಕನಿಂದ ಅಖೀಮನು ಹುಟ್ಟಿದನು; ಅಖೀಮನಿಂದ ಎಲಿ ಹೂದನು ಹುಟ್ಟಿದನು; ಎಲಿಹೂದನಿಂದ ಎಲಿ ಯಾಜರನು ಹುಟ್ಟಿದನು; ಎಲಿಯಾಜರನಿಂದ ಮತ್ತಾನ ನು ಹುಟ್ಟಿದನು; ಮತ್ತಾನನಿಂದ ಯಾಕೋಬನು ಹುಟ್ಟಿದನು; ಕ್ರಿಸ್ತನೆಂದು ಕರೆಯಲ್ಪಟ್ಟ ಯೇಸು ಮರಿ ಯಳಲ್ಲಿ ಹುಟ್ಟಿದನು; ಆಕೆಯ ಗಂಡನಾದ ಯೋಸೇ ಫನು ಯಾಕೋಬನಿಂದ ಹುಟ್ಟಿದನು. ಹೀಗೆ ಅಬ್ರಹಾಮನಿಂದ ದಾವೀದನ ವರೆಗೆ ಒಟ್ಟು ಹದಿನಾಲ್ಕು ತಲೆಗಳು; ದಾವೀದನು ಮೊದಲು ಗೊಂಡು ಬಾಬೆಲಿಗೆ ಸೆರೆಹೋಗುವ ವರೆಗೆ ಹದಿ ನಾಲ್ಕು ತಲೆಗಳು; ಬಾಬೆಲಿಗೆ ಸೆರೆಹೋದಂದಿನಿಂದ ಕ್ರಿಸ್ತನ ವರೆಗೆ ಹದಿನಾಲ್ಕು ತಲೆಗಳು. ಯೇಸು ಕ್ರಿಸ್ತನ ಜನನವು ಹೀಗಾಯಿತು: ಆತನ ತಾಯಿಯಾದ ಮರಿಯಳನ್ನು ಯೋಸೇಫನಿಗೆ ನಿಶ್ಚಯ ಮಾಡಿದಾಗ ಅವರು ಕೂಡುವದಕ್ಕಿಂತ ಮುಂಚೆ ಆಕೆಯು ಪವಿತ್ರಾತ್ಮನಿಂದ ಗರ್ಭಿಣಿಯಾದದ್ದು ಕಂಡು ಬಂತು. ಆದರೆ ಆಕೆಯ ಗಂಡನಾದ ಯೋಸೇಫನು ನೀತಿವಂತನಾಗಿದ್ದು ಆಕೆಯನ್ನು ಬೈಲಿಗೆ ತರುವದಕ್ಕೆ ಮನಸ್ಸಿಲ್ಲದೆ ರಹಸ್ಯವಾಗಿ ಆಕೆಯನ್ನು ಬಿಟ್ಟುಬಿಡಬೇಕೆಂದು ಆಲೋಚಿಸುತ್ತಿದ್ದನು. ಅವನು ಇವುಗಳನ್ನು ಆಲೋಚನೆ ಮಾಡುತ್ತಿದ್ದಾಗ ಇಗೋ, ಕರ್ತನ ದೂತನು ಅವನಿಗೆ ಕನಸಿನಲ್ಲಿ ಕಾಣಿಸಿ ಕೊಂಡು-- ಯೋಸೇಫನೇ, ದಾವೀದನ ಕುಮಾರನೇ, ನಿನ್ನ ಹೆಂಡತಿಯಾದ ಮರಿಯಳನ್ನು ಸೇರಿಸಿಕೊಳ್ಳು ವದಕ್ಕೆ ಭಯಪಡಬೇಡ; ಯಾಕಂದರೆ ಆಕೆಯ ಗರ್ಭವು ಪವಿತ್ರಾತ್ಮನಿಂದಲೇ ಆಗಿದೆ.
- Isaiah 11:1–4 ಯೆಶಾಯ 11:1–4ಇಷಯನ ಬುಡದಿಂದ ಒಂದು ಕೊಂಬೆ ಒಡೆಯುವದು ಅದರ ಬೇರಿನಿಂದ ಕೊಂಬೆ ಯು ಬೆಳೆಯುವದು. ಅವನ ಮೇಲೆ ಜ್ಞಾನ ವಿವೇಕ ದಾಯಕ ಆತ್ಮ, ಆಲೋಚನಾ ಪರಾಕ್ರಮದ ಆತ್ಮ,ತಿಳುವಳಿಕೆಯ ಆತ್ಮ ಕರ್ತನ ಭಯದ ಆತ್ಮ, ಅಂತೂ ಕರ್ತನ ಆತ್ಮನು ನೆಲೆಯಾಗುವನು; ಕರ್ತನ ಭಯ ದಲ್ಲಿ ಅವನಿಗೆ ಸೂಕ್ಷ್ಮ ತಿಳುವಳಿಕೆಯು ಉಂಟಾ ಗುವದು; ಅವನು ಕಣ್ಣಿಗೆ ಕಂಡಂತೆ ತೀರ್ಪುಮಾಡು ವದಿಲ್ಲ, ಇಲ್ಲವೆ ತನ್ನ ಕಿವಿಗಳ ಕೇಳ್ವಿಕೆಯ ಪ್ರಕಾರ ತೀರ್ಪುಮಾಡನು; ಆದರೆ ಬಡವರಿಗೆ ನೀತಿಯಿಂದ ನ್ಯಾಯತೀರಿಸುವನು; ಭೂಮಿಯ ದೀನರಿಗೆ ನ್ಯಾಯ ವಾಗಿ ತೀರ್ಪುಮಾಡುವನು; ಭೂಮಿಯನ್ನು ತನ್ನ ಬಾಯಿಯ ಕೋಲಿನಿಂದ ಹೊಡೆಯುವನು, ತನ್ನ ತುಟಿಗಳ ಉಸಿರಿನಿಂದ ದುಷ್ಟರನ್ನು ಹತಮಾಡುವನು.
- Ruth 4:21–22 ರೂತಳು 4:21–22ನಹಶೋನನು ಸಲ್ಮೋನನನ್ನು ಪಡೆ ದನು; ಸಲ್ಮೋನನು ಬೋವಜನನ್ನು ಪಡೆದನು;ಬೋವಜನು ಓಬೇದನನ್ನು ಪಡೆದನು; ಓಬೇದನು ಇಷಯನನ್ನು ಪಡೆದನು; ಇಷಯನು ದಾವೀದನನ್ನು ಪಡೆದನು. ಬೋವಜನು ಓಬೇದನನ್ನು ಪಡೆದನು; ಓಬೇದನು ಇಷಯನನ್ನು ಪಡೆದನು; ಇಷಯನು ದಾವೀದನನ್ನು ಪಡೆದನು.
- 1 Corinthians 12:26 1 ಕೊರಿಂಥದವರಿಗೆ 12:26ಒಂದು ಅಂಗಕ್ಕೆ ನೋವಾದರೆ ಎಲ್ಲಾ ಅಂಗಗಳಿಗೂ ನೋವಾಗುತ್ತದೆ; ಇಲ್ಲವೆ ಒಂದು ಅಂಗಕ್ಕೆ ಮರ್ಯಾದೆ ಬಂದರೆ ಎಲ್ಲಾ ಅಂಗಗಳಿಗೂ ಸಂತೋಷವಾಗುತ್ತದೆ.
- Psalm 34:1–3 ಕೀರ್ತನೆಗಳು 34:1–3ನಾನು ಎಲ್ಲಾ ಕಾಲಗಳಲ್ಲಿ ಕರ್ತನನ್ನು ಸ್ತುತಿಸುವೆನು; ಆತನ ಸ್ತೋತ್ರವು ಯಾವಾ ಗಲೂ ನನ್ನ ಬಾಯಲ್ಲಿ ಇರುವದು. ನನ್ನ ಪ್ರಾಣವು ಕರ್ತನಲ್ಲಿ ಹೊಗಳಿಕೊಳ್ಳುವದು; ಇದನ್ನು ದೀನರು ಕೇಳಿ ಸಂತೋಷಪಡುವರು. ನನ್ನ ಸಂಗಡ ಕರ್ತ ನನ್ನು ಘನಪಡಿಸಿರಿ. ನಾವು ಒಟ್ಟಾಗಿ ಆತನ ಹೆಸ ರನ್ನು ಘನಪಡಿಸೋಣ.
- 2 Thessalonians 1:3 2 ಥೆಸಲೊನೀಕದವರಿಗೆ 1:3ಸಹೋದರರೇ, ನಾವು ಯಾವಾಗಲೂ ನಿಮ್ಮ ವಿಷಯದಲ್ಲಿ ದೇವರಿಗೆ ಕೃತಜ್ಞತಾಸ್ತುತಿ ಮಾಡುವದಕ್ಕೆ ಬದ್ಧರಾಗಿದ್ದೇವೆ. ಹಾಗೆ ಮಾಡುವದು ಯೋಗ್ಯ; ಯಾಕಂದರೆ ನಿಮ್ಮ ನಂಬಿಕೆಯು ಬಹಳ ಅಭಿವೃದ್ಧಿ ಹೊಂದುತ್ತಾ ಪರಸ್ಪರವಾದ ಪ್ರೀತಿಯು ನಿಮ್ಮೆಲ್ಲ ರಲ್ಲಿಯೂ ಹೆಚ್ಚುತ್ತಾ ಬರುತ್ತದೆ.
- Romans 12:15 ರೋಮಾಪುರದವರಿಗೆ 12:15ಸಂತೋಷಪಡುವವರ ಸಂಗಡ ಸಂತೋಷಪಡಿರಿ; ಅಳುವವರ ಸಂಗಡ ಅಳಿರಿ.
- Psalm 103:1–2 ಕೀರ್ತನೆಗಳು 103:1–2ಓ ನನ್ನ ಮನವೇ, ಕರ್ತನನ್ನೂ ನನ್ನ ಎಲ್ಲಾ ಅಂತರಂಗವೇ, ಆತನ ಪರಿಶುದ್ಧವಾದ ಹೆಸರನ್ನೂ ಸ್ತುತಿಸು. ಓ ನನ್ನ ಮನವೇ, ಕರ್ತನನ್ನು ಸ್ತುತಿಸು. ಆತನ ಉಪಕಾರಗಳಲ್ಲಿ ಒಂದನ್ನೂ ಮರೆತುಬಿಡಬೇಡ.
- Genesis 24:27 ಆದಿಕಾಂಡ 24:27ನನ್ನ ಯಜಮಾನನಾದ ಅಬ್ರಹಾಮನ ಕರ್ತನಾದ ದೇವರು ಸ್ತುತಿಹೊಂದಲಿ; ಆತನು ನನ್ನ ಯಜಮಾನನನ್ನು ಅನಾಥನನ್ನಾಗಿ ಬಿಡದೆ ತನ್ನ ಕೃಪೆಯನ್ನೂ ಸತ್ಯವನ್ನೂ ತೋರಿಸಿದ್ದಾನೆ. ನಾನು ಮಾರ್ಗದಲ್ಲಿರುವಾಗ ಕರ್ತನು ನನ್ನನ್ನು ನನ್ನ ಯಜಮಾನನ ಸಹೋದರನ ಮನೆಗೆ ನಡಿಸಿದ್ದಾನೆ ಅಂದನು.
- 1 Thessalonians 5:18 1 ಥೆಸಲೊನೀಕದವರಿಗೆ 5:18ಎಲ್ಲಾದರಲ್ಲಿಯೂ ಕೃತಜ್ಞತಾ ಸ್ತುತಿ ಮಾಡಿರಿ; ಯಾಕಂದರೆ ಇದೇ ನಿಮ್ಮ ವಿಷಯ ವಾಗಿ ಕ್ರಿಸ್ತ ಯೇಸುವಿನಲ್ಲಿರುವ ದೇವರ ಚಿತ್ತವಾಗಿದೆ.