Romans · chapter 12 · verse 15
Romans 12:15 in Kannada
ಸಂತೋಷಪಡುವವರ ಸಂಗಡ ಸಂತೋಷಪಡಿರಿ; ಅಳುವವರ ಸಂಗಡ ಅಳಿರಿ.
Santoshapaduvavara sangada santoshapadiri; aluvavara sangada aliri.
Romans 12:15 in English
- King James Version (KJV)
- Rejoice with them that do rejoice, and weep with them that weep.
- World English Bible (WEB)
- Rejoice with those who rejoice. Weep with those who weep.
- American Standard Version (ASV)
- Rejoice with them that rejoice; weep with them that weep.
- Bible in Basic English (BBE)
- Take part in the joy of those who are glad, and in the grief of those who are sorrowing.
- Darby Translation (DBY)
- Rejoice with those that rejoice, weep with those that weep.
- Webster's Bible (WBS)
- Rejoice with them that rejoice, and weep with them that weep.
- Young's Literal Translation (YLT)
- to rejoice with the rejoicing, and to weep with the weeping,
Read in context
- 13ಪರಿಶುದ್ಧರ ಕೊರತೆಯ ಪ್ರಕಾರ ಹಂಚಿರಿ; ಅತಿಥಿಸತ್ಕಾರವನ್ನು ಮಾಡಿರಿ.
- 14ನಿಮ್ಮನ್ನು ಹಿಂಸಿಸುವವರನ್ನು ಆಶೀರ್ವದಿಸಿರಿ; ಶಪಿಸದೆ ಆಶೀ ರ್ವದಿಸಿರಿ.
- 15ಸಂತೋಷಪಡುವವರ ಸಂಗಡ ಸಂತೋಷಪಡಿರಿ; ಅಳುವವರ ಸಂಗಡ ಅಳಿರಿ.
- 16ಒಬ್ಬರಿಗೊಬ್ಬರು ಒಂದೇ ಮನಸ್ಸುಳ್ಳುವರಾಗಿರ್ರಿ; ದೊಡ್ಡಸ್ತಿಕೆಗಳ ಮೇಲೆ ಮನಸ್ಸಿಡದೆ ದೀನರ ಸಂಗಡ ಬಳಿಕೆಯಾಗಿರ್ರಿ. ನಿಮ್ಮನ್ನು ನೀವೇ ಬುದ್ಧಿವಂತರೆಂದು ಭಾವಿಸಿಕೊಳ್ಳಬೇಡಿರಿ.
- 17ಯಾರಿಗೂ ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಬೇಡಿರಿ. ಎಲ್ಲರ ದೃಷ್ಟಿಯಲ್ಲಿ ಯಾವದು ಗೌರವ ವಾದದ್ದೋ ಅದನ್ನೇ ಮಾಡುವವರಾಗಿರ್ರಿ.
Cross references
- 1 Corinthians 12:26 1 ಕೊರಿಂಥದವರಿಗೆ 12:26ಒಂದು ಅಂಗಕ್ಕೆ ನೋವಾದರೆ ಎಲ್ಲಾ ಅಂಗಗಳಿಗೂ ನೋವಾಗುತ್ತದೆ; ಇಲ್ಲವೆ ಒಂದು ಅಂಗಕ್ಕೆ ಮರ್ಯಾದೆ ಬಂದರೆ ಎಲ್ಲಾ ಅಂಗಗಳಿಗೂ ಸಂತೋಷವಾಗುತ್ತದೆ.
- Hebrews 13:3 ಇಬ್ರಿಯರಿಗೆ 13:3ಸೆರೆಯವರ ಸಂಗಡ ನೀವೂ ಬಂಧಿಸಲ್ಪಟ್ಟವರೆಂದು ಅವರನ್ನು ಜ್ಞಾಪಕ ಮಾಡಿಕೊಳ್ಳಿರಿ. ನೀವು ಶರೀರದಲ್ಲಿರುವ ದರಿಂದ ಕಷ್ಟವನ್ನು ಅನುಭವಿಸುವವರನ್ನು ನೆನಸಿರಿ.
- Psalm 35:13–14 ಕೀರ್ತನೆಗಳು 35:13–14ನಾನಾ ದರೋ ಅವರು ಅಸ್ವಸ್ಥವಾದಾಗ, ಗೋಣೀ ತಟ್ಟು ಹೊದ್ದುಕೊಂಡು ನನ್ನ ಪ್ರಾಣವನ್ನು ಉಪವಾಸದಿಂದ ಕುಂದಿಸಿದೆನು; ನನ್ನ ಪ್ರಾರ್ಥನೆಯು ನನ್ನ ಎದೆಗೆ ತಿರುಗಿತು. ಅವನು ನನಗೆ ಸ್ನೇಹಿತನೂ ಇಲ್ಲವೆ ಸಹೋದರನೂ ಆದ ಹಾಗೆ ನಡೆದುಕೊಂಡೆನು; ತಾಯಿಗಾಗಿ ದುಃಖಪಡುವವನ ಹಾಗೆ ಭಾರವುಳ್ಳವ ನಾಗಿ ಬೊಗ್ಗಿಕೊಂಡೆನು.
- John 11:33–36 ಯೋಹಾನನು 11:33–36ಆಕೆಯು ಅಳುವದನ್ನು ಮತ್ತು ಆಕೆಯೊಂದಿಗೆ ಬಂದ ಯೆಹೂದ್ಯರು ಸಹ ಅಳುವದನ್ನು ಯೇಸು ನೋಡಿದಾಗ ಆತ್ಮದಲ್ಲಿ ಕಳವಳಪಟ್ಟು ಮೂಲ್ಗುತ್ತಾ-- ಅವನನ್ನು ಎಲ್ಲಿ ಇಟ್ಟಿದ್ದೀರಿ ಅಂದನು. ಅವರು ಆತನಿಗೆ--ಕರ್ತನೇ, ಬಂದು ನೋಡು ಅಂದರು. ಯೇಸು ಅತ್ತನು. ಆಗ ಯೆಹೂದ್ಯ ರು--ಇಗೋ, ಆತನು ಅವನನ್ನು ಎಷ್ಟು ಪ್ರೀತಿ ಮಾಡಿದನಲ್ಲಾ ಅಂದರು.
- Job 30:25 ಯೋಬನು 30:25ಕಷ್ಟದಲ್ಲಿ ಇದ್ದವನಿಗೋಸ್ಕರ ನಾನು ಅತ್ತೆನಲ್ಲವೋ? ದರಿದ್ರನಿ ಗೋಸ್ಕರ ನನ್ನ ಪ್ರಾಣವು ದುಃಖಪಡಲಿಲ್ಲವೋ?
- Luke 1:58 ಲೂಕನು 1:58ಆಗ ಕರ್ತನು ತನ್ನ ಮಹಾಕರುಣೆಯನ್ನು ಆಕೆಯ ಮೇಲೆ ತೋರಿಸಿದ್ದನ್ನು ಆಕೆಯ ನೆರೆಹೊರೆಯವರೂ ಬಂಧುಗಳೂ ಕೇಳಿ ಆಕೆಯ ಕೂಡ ಸಂತೋಷಪಟ್ಟರು.
- Philippians 2:17–18 ಫಿಲಿಪ್ಪಿಯವರಿಗೆ 2:17–18ಹೌದು, ನಿಮ್ಮ ನಂಬಿಕೆಯೆಂಬ ಯಜ್ಞವನ್ನು ಅರ್ಪಿಸುವ ಸೇವೆಯಲ್ಲಿ ನಾನೇ ಅರ್ಪಿತವಾಗ ಬೇಕಾದರೂ ನಾನು ಹರ್ಷಗೊಂಡು ನಿಮ್ಮೆಲ್ಲರ ಕೂಡ ಸಂತೋಷಿಸುವೆನು. ಈ ಕಾರಣಕ್ಕಾಗಿಯೇ ನೀವು ಆನಂದಿಸಿರಿ, ನನ್ನೊಂದಿಗೆ ಸಂತೊಷಪಡಿರಿ.
- Acts 11:23 ಅಪೊಸ್ತಲರ ಕೃತ್ಯಗಳು 11:23ಅವನು ಬಂದು ದೇವರ ಕೃಪೆಯನ್ನು ನೋಡಿ ಸಂತೋಷಪಟ್ಟು ದೃಢಮನಸ್ಸಿನಿಂದ ಕರ್ತನನ್ನು ಅಂಟಿ ಕೊಂಡಿರಬೇಕೆಂದು ಅವರೆಲ್ಲರನ್ನು ಪ್ರೇರೇಪಿಸಿದನು.
- Jeremiah 9:1 ಯೆರೆಮೀಯ 9:1ಅಯ್ಯೋ, ನನ್ನ ತಲೆ ನೀರಾಗಿಯೂ ನನ್ನ ಕಣ್ಣುಗಳು ಕಣ್ಣೀರಿನ ಬುಗ್ಗೆಯಾಗಿಯೂ ಇದ್ದರೆ ಒಳ್ಳೇದು! ಆಗ ನನ್ನ ಜನರ ಮಗಳ ಹತವಾದ ವರ ನಿಮಿತ್ತ ಹಗಲು ರಾತ್ರಿ ಅಳುವೆನು.
- John 11:19 ಯೋಹಾನನು 11:19ಯೆಹೂದ್ಯರಲ್ಲಿ ಅನೇಕರು ಮಾರ್ಥಳನ್ನು ಮತ್ತು ಮರಿಯಳನ್ನು ಅವರ ಸಹೋ ದರನ ವಿಷಯವಾಗಿ ಆದರಿಸುವದಕ್ಕೆ ಬಂದಿದ್ದರು.
- Isaiah 66:10–14 ಯೆಶಾಯ 66:10–14ಯೆರೂಸಲೇಮಿನ ಸಂಗಡ ನೀವು ಸಂತೋಷಿ ಸಿರಿ, ಅವಳನ್ನು ಪ್ರೀತಿ ಮಾಡುವವರೆಲ್ಲರೇ, ಅವಳೊಂ ದಿಗೆ ಉಲ್ಲಾಸಪಡಿರಿ; ಅವಳಿಗೋಸ್ಕರ ದುಃಖಿಸಿದವ ರೆಲ್ಲರೇ, ಅವಳ ಸಂತೋಷಕ್ಕಾಗಿ ಆನಂದಪಡಿರಿ. ಅವಳ ಆದರಣೆಗಳ ಮೊಲೆ ಹೀರಿಕೊಂಡು ತೃಪ್ತಿ ಯಾಗುವ ಹಾಗೆ ಅವಳ ಸಮೃದ್ಧಿಯಾದ ವೈಭವ ದೊಂದಿಗೆ ಹಾಲನ್ನು ಕುಡಿದು ಆನಂದಗೊಳ್ಳಿರಿ. ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನದಿಯಂತೆ ಸಮಾಧಾನವನ್ನೂ ಹರಿಯುವ ಹಳ್ಳ ದಂತೆ ಜನಾಂಗಗಳ ವೈಭವವನ್ನೂ ಅವಳ ಕಡೆಗೆ ಬರಮಾಡುವೆನು; ಆಗ ನೀವು ಅವುಗಳನ್ನು ಹೀರಿ ಕೊಂಡು ಅವಳ ಪಕ್ಕೆಗಳಲ್ಲಿ ಹೊರಲ್ಪಡುವಿರಿ, ಅವಳ ಮೊಣಕಾಲುಗಳ ಮೇಲೆ ಆಡಿಸಲ್ಪಡುವಿರಿ, ಒಬ್ಬ ನನ್ನು ಅವನ ತಾಯಿ ಆದರಿಸುವ ಪ್ರಕಾರವೇ ನಾನು ನಿಮ್ಮನ್ನು ಆದರಿಸುವೆನು; ಯೆರೂಸಲೇಮಿನಲ್ಲಿ ಆದ ರಣೆ ಹೊಂದುವಿರಿ. ನೀವು ಅದನ್ನು ನೋಡುವಾಗ ನಿಮ್ಮ ಹೃದಯವು ಸಂತೋಷಿಸುವದು, ನಿಮ್ಮ ಎಲುಬು ಗಳು ಹಸಿರು ಪಲ್ಯದ ಹಾಗೆ ಚಿಗುರುವವು; ಕರ್ತನ ಕೈ ಆತನ ಸೇವಕನ ಕಡೆಗೂ ಆತನ ರೌದ್ರವು ಆತನ ಶತ್ರುಗಳ ಕಡೆಗೂ ಕಾಣಬರುವದು.
- 2 Corinthians 2:3 2 ಕೊರಿಂಥದವರಿಗೆ 2:3ನಾನು ಬಂದಾಗ ನನ್ನನು ಸಂತೋಷಪಡಿಸತಕ್ಕವರಿಂದ ದುಃಖ ಹೊಂದಬಾರ ದೆಂದೂ ನನ್ನ ಸಂತೋಷವು ನಿಮ್ಮೆಲ್ಲರ ಸಂತೋಷವೇ ಎಂದೂ ನಿಮ್ಮೆಲ್ಲರ ವಿಷಯದಲ್ಲಿ ನನಗೆ ಭರವಸ ವಿರುವದರಿಂದ ನಾನು ನಿಮಗೆ ಇದನ್ನು ಬರೆದಿದ್ದೇನೆ.