Song of Solomon · chapter 2 · verse 12
Song of Solomon 2:12 in Kannada
ಪುಷ್ಪಗಳು ಭೂಮಿಯ ಮೇಲೆ ಕಾಣಿಸುತ್ತವೆ; ಪಕ್ಷಿಗಳು ಹಾಡುವ ಕಾಲ ಬಂತು; ಬೆಳವಕ್ಕಿಯ ಸ್ವರವು ನಮ್ಮ ದೇಶದಲ್ಲಿ ಕೇಳಲ್ಪಡುತ್ತದೆ.
Pushpagalu bhoomiya mele kaanisuttave; pakshigalu haaduva kaala bantu; belavakkiya svaravu namma deshadalli kelalpaduttade.
Song of Solomon 2:12 in English
- King James Version (KJV)
- The flowers appear on the earth; the time of the singing [of birds] is come, and the voice of the turtle is heard in our land;
- World English Bible (WEB)
- The flowers appear on the earth. The time of the singing has come, and the voice of the turtledove is heard in our land.
- American Standard Version (ASV)
- The flowers appear on the earth; The time of the singing [of birds] is come, And the voice of the turtle-dove is heard in our land;
- Bible in Basic English (BBE)
- The flowers are come on the earth; the time of cutting the vines is come, and the voice of the dove is sounding in our land;
- Darby Translation (DBY)
- The flowers appear on the earth; The time of singing is come, And the voice of the turtle-dove is heard in our land;
- Webster's Bible (WBS)
- The flowers appear on the earth; the time of the singing [of birds] is come, and the voice of the turtle is heard in our land;
- Young's Literal Translation (YLT)
- The flowers have appeared in the earth, The time of the singing hath come, And the voice of the turtle was heard in our land,
Read in context
- 10ನನ್ನ ಪ್ರಿಯನು ಮಾತಾಡಿ--ಏಳು, ನನ್ನ ಪ್ರಿಯಳೇ, ನನ್ನ ಸುಂದರಿಯೇ, ಹೊರಟು ಬಾ.
- 11ಇಗೋ, ಚಳಿ ಗಾಲವು ಗತಿಸಿತು; ಮಳೆಯು ನಿಂತುಹೋಯಿತು;
- 12ಪುಷ್ಪಗಳು ಭೂಮಿಯ ಮೇಲೆ ಕಾಣಿಸುತ್ತವೆ; ಪಕ್ಷಿಗಳು ಹಾಡುವ ಕಾಲ ಬಂತು; ಬೆಳವಕ್ಕಿಯ ಸ್ವರವು ನಮ್ಮ ದೇಶದಲ್ಲಿ ಕೇಳಲ್ಪಡುತ್ತದೆ.
- 13ಅಂಜೂರದ ಗಿಡವು ಅದರ ಹೀಚುಗಳನ್ನು ಬಿಡುತ್ತದೆ. ದ್ರಾಕ್ಷೇ ಬಳ್ಳಿಗಳ ಹೂವು ಅದರ ಸುವಾಸನೆಯನ್ನು ಕೊಡು ತ್ತದೆ. ಏಳು, ನನ್ನ ಪ್ರಿಯಳೇ, ನನ್ನ ಸುಂದರಿಯೇ, ಹೊರಟು ಬಾ ಎಂಬದು.
- 14ಗುಪ್ತವಾದ ಹಂತಗ ಳಲ್ಲಿಯೂ ಕಲ್ಲು ಸಂದುಗಳ ಮರೆಯಲ್ಲಿಯೂ ಇರುವ ಓ ನನ್ನ ಪಾರಿವಾಳವೇ, ನಿನ್ನ ಮುಖವನ್ನು ನನಗೆ ತೋರ ಮಾಡು. ನಿನ್ನ ಸ್ವರವನ್ನು ಕೇಳಿಸು. ನಿನ್ನ ಸ್ವರವು ರಮ್ಯವಾಗಿಯೂ ನಿನ್ನ ಮುಖವು ಸೌಂದರ್ಯ ವಾಗಿಯೂ ಅದೆ.
Cross references
- Isaiah 55:12 ಯೆಶಾಯ 55:12ನೀವು ಆನಂದದೊಡನೆ ಹೋಗುವಿರಿ ಸಮಾಧಾನದಿಂದ ನಡಿಸಲ್ಪಡುವಿರಿ; ಪರ್ವತಗಳು ಮತ್ತು ಗುಡ್ಡಗಳು ನಿಮ್ಮ ಮುಂದೆ ಹರ್ಷಧ್ವನಿಗೈಯುವವು. ಹೊಲದ ಮರಗಳೆಲ್ಲಾ ಚಪ್ಪಾಳೆ ಹೊಡೆಯುವವು.ಮುಳ್ಳಿಗೆ ಬದಲಾಗಿ ಫರ್ (ತುರಾಯಿ) ಮರವು ಮತ್ತು ದತ್ತೂರಿಗೆ ಬದಲಾಗಿ ಸುವಾಸನೆ ಬೀರುವ ಮರವು ಹುಟ್ಟುವವು; ಅದು ಕರ್ತನ ಹೆಸರಿಗಾಗಿ ಮತ್ತು ಶಾಶ್ವತವಾದ ಗುರುತಾಗಿ ಎಂದಿಗೂ ಅಳಿಯದಿರುವದು.
- Psalm 148:7–13 ಕೀರ್ತನೆಗಳು 148:7–13ಭೂಮಿಯಿಂದ ಕರ್ತನನ್ನು ಸ್ತುತಿಸಿರಿ; ಎಲ್ಲಾ ಅಗಾಧಗಳೇ, ಬೆಂಕಿಯೇ, ಕಲ್ಮಳೆಯೇ, ಹಿಮವೇ, ಹಬೆಯೇ, ಆತನ ವಾಕ್ಯವನ್ನು ಕೈಕೊಳ್ಳುವ ಬಿರು ಗಾಳಿಯೇ, ಬೆಟ್ಟಗಳೇ, ಎಲ್ಲಾ ಗುಡ್ಡಗಳೇ, ಹಣ್ಣಿನ ಮರಗಳೇ, ಎಲ್ಲಾ ದೇವದಾರುಗಳೇ, ಮೃಗಗಳೇ, ಎಲ್ಲಾ ಪಶುಗಳೇ, ಹರಿದಾಡುವ ಜೀವಜಂತುಗಳೇ ಹಾರುವ ಪಕ್ಷಿಗಳೇ, ಭೂರಾಜರೇ, ಎಲ್ಲಾ ಪ್ರಜೆ ಗಳೇ, ಪ್ರಧಾನರೇ, ಭೂಮಿಯ ಎಲ್ಲಾ ನ್ಯಾಯಾಧಿ ಪತಿಗಳೇ, ಪ್ರಾಯಸ್ಥರೇ, ಕನ್ಯೆಯರೇ, ಮಕ್ಕಳೇ, ಮುದುಕರೇ, ಕರ್ತನ ಹೆಸರನ್ನು ಸ್ತುತಿಸಿರಿ; ಆತನ ಹೆಸರು ಮಾತ್ರ ಶ್ರೇಷ್ಠವಾಗಿದೆ; ಆತನ ಮಹಿಮೆಯು ಭೂಮ್ಯಾಕಾಶಗಳ ಮೇಲೆ ಅದೆ.ಆತನು ತನ್ನ ಜನರ ಕೊಂಬನ್ನು ಮೇಲಕ್ಕೆತ್ತಿದ್ದಾನೆ; ಆತನ ಪರಿ ಶುದ್ಧರೆಲ್ಲರೂ ಇಸ್ರಾಯೇಲಿನ ಮಕ್ಕಳು, ಅಂದರೆ ಆತನಿಗೆ ಸವಿಾಪವಾದ ಜನರ ಸ್ತೋತ್ರವನ್ನು ಗೌರವಿ ಸುತ್ತಾನೆ; ಕರ್ತನನ್ನು ಸ್ತುತಿಸಿರಿ.
- Psalm 89:15 ಕೀರ್ತನೆಗಳು 89:15ಉತ್ಸಾಹ ಧ್ವನಿಯನ್ನು ತಿಳಿದ ಜನರು ಧನ್ಯರು; ಕರ್ತನೇ, ನಿನ್ನ ಮುಖದ ಬೆಳಕಿನಲ್ಲಿ ಅವರು ನಡೆದುಕೊಳ್ಳುವರು.
- Jeremiah 8:7 ಯೆರೆಮೀಯ 8:7ಹೌದು, ಆಕಾಶ ದಲ್ಲಿ ಬಕಪಕ್ಷಿಯು ತನ್ನ ನಿಯಮಿತ ಕಾಲಗಳನ್ನು ತಿಳಿ ಯುತ್ತದೆ; ಪಾರಿವಾಳವೂ ಬಾನಕ್ಕಿಯೂ ಕೊಕ್ಕರೆಯೂ ತಾವು ಬರತಕ್ಕ ಸಮಯವನ್ನು ಗಮನಿಸುತ್ತವೆ. ಆದರೆ ನನ್ನ ಜನರು ಕರ್ತನ ನ್ಯಾಯ ತೀರ್ಪನ್ನು ಅರಿಯರು.
- Colossians 3:16 ಕೊಲೊಸ್ಸೆಯವರಿಗೆ 3:16ಸಕಲ ಜ್ಞಾನದಲ್ಲಿ ಕ್ರಿಸ್ತನ ವಾಕ್ಯವು ನಿಮ್ಮಲ್ಲಿ ಸಮೃದ್ಧಿಯಾಗಿ ವಾಸಿಸಲಿ; ಒಬ್ಬರಿಗೊಬ್ಬರು ಉಪದೇಶಿಸುತ್ತಾ ಬುದ್ದಿ ಹೇಳುತ್ತಾ ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಆತ್ಮ ಸಂಬಂಧವಾದ ಹಾಡುಗಳಿಂದಲೂ ಕೃಪೆಯಿಂದ ನಿಮ್ಮ ಹೃದಯಗಳಲ್ಲಿ ಕರ್ತನಿಗೆ ಹಾಡುತ್ತಾ ಇರ್ರಿ.
- Psalm 40:1–3 ಕೀರ್ತನೆಗಳು 40:1–3ನಾನು ಕರ್ತನಿಗಾಗಿ ತಾಳ್ಮೆಯಿಂದ ಕಾದಿದ್ದೆನು; ಆತನು ಕಿವಿಗೊಟ್ಟು ನನ್ನ ಮೊರೆ ಯನ್ನು ಲಕ್ಷಿಸಿದನು. ಆತನು ನನ್ನನ್ನು ನಾಶನದ ಕುಣಿಯಿಂದಲೂ ಮತ್ತು ಬುರುದೆಯ ಕೆಸರಿನಿಂದಲೂ ಎತ್ತಿ ನನ್ನ ಪಾದಗಳನ್ನು ಬಂಡೆಯ ಮೇಲೆ ನಿಲ್ಲಿಸಿ ನನ್ನ ಹೆಜ್ಜೆಗಳನ್ನು ಸ್ಥಿರಪಡಿಸಿದನು. ನನ್ನ ಬಾಯಲ್ಲಿ ನೂತನ ಹಾಡನ್ನು ಇಟ್ಟಿದ್ದಾನೆ; ಅದು ನಮ್ಮ ದೇವರ ಸ್ತೋತ್ರವೇ; ಅನೇಕರು ಇದನ್ನು ನೋಡಿ ಭಯಪಟ್ಟು ಕರ್ತನಲ್ಲಿ ಭರವಸವಿಡುವರು.
- Romans 15:9–13 ರೋಮಾಪುರದವರಿಗೆ 15:9–13ಈ ಕಾರಣದಿಂದ ನಾನು ಅನ್ಯಜನಗಳ ಮಧ್ಯದಲ್ಲಿ ನಿನ್ನನು ಅರಿಕೆ ಮಾಡಿ ನಿನ್ನ ನಾಮವನ್ನು ಸಂಕೀರ್ತಿಸುವೆನು ಎಂದು ಬರೆದಿರುವ ಪ್ರಕಾರ ಅನ್ಯಜನಗಳು ದೇವರ ಕರುಣೆಗಾಗಿ ಆತನನ್ನು ಮಹಿಮೆಪಡಿಸುವರು. ಆತನು ತಿರಿಗಿ--ಅನ್ಯಜನರೇ, ಆತನ ಜನರೊಂದಿಗೆ ಸಂತೋಷಿಸಿರಿ ಎಂದು ಹೇಳುತ್ತಾನೆ. ತಿರಿಗಿ--ಎಲ್ಲಾ ಅನ್ಯಜನರೇ, ಕರ್ತನನ್ನು ಸ್ತುತಿಸಿರಿ; ಎಲ್ಲಾ ಜನರೇ, ಆತನನ್ನು ಕೊಂಡಾಡಿರಿ ಅನ್ನುತ್ತಾನೆ. ತಿರಿಗಿ ಯೆಶಾಯನು--ಇಷಯನ ಅಂಕುರದವನು ಎದ್ದು ಅನ್ಯ ಜನಾಂಗಗಳ ಮೇಲೆ ಆಡಳಿತ ಮಾಡುವನು; ಅನ್ಯ ಜನರು ಆತನಲ್ಲಿ ನಂಬಿಕೆಯಿಡುವರು ಅಂದನು. ನಿರೀಕ್ಷೆಗೆ ಆಧಾರನಾದ ದೇವರು ಪವಿತ್ರಾತ್ಮನ ಬಲದಿಂದ ನೀವು ನಿರೀಕ್ಷೆಯಲ್ಲಿ ಅಭಿವೃದ್ಧಿ ಹೊಂದು ವಂತೆ ನಂಬಿಕೆಯಿಂದುಂಟಾದ ಸಂತೋಷ ಸಮಾಧಾನಗಳಿಂದ ನಿಮ್ಮನ್ನು ತುಂಬಿಸಲಿ.
- Ephesians 5:18–20 ಎಫೆಸದವರಿಗೆ 5:18–20ಮದ್ಯಪಾನ ಮಾಡಿ ಮತ್ತರಾಗಬೇಡಿರಿ, ಯಾಕಂದರೆ ಅದರಿಂದ ಪಟಿಂಗತನವು ಹುಟ್ಟುತ್ತದೆ. ಪವಿತ್ರಾತ್ಮನಿಂದ ತುಂಬಿದವರಾಗಿರ್ರಿ. ಕೀರ್ತನೆಗಳಿಂದಲೂ ಸಂಗೀತ ಗಳಿಂದಲೂ ಆತ್ಮಸಂಬಂಧವಾದ ಹಾಡುಗಳಿಂದಲೂ ನಿಮಗೆ ನೀವೇ ಮಾತನಾಡಿಕೊಳ್ಳುತ್ತಾ ನಿಮ್ಮ ಹೃದಯದಲ್ಲಿ ಕರ್ತನಿಗೆ ಗಾನಮಾಡುತ್ತಾ ಇಂಪಾಗಿ ಹಾಡುತ್ತಾ ಇರ್ರಿ. ಯಾವಾಗಲೂ ಎಲ್ಲಾ ಕಾರ್ಯಗಳಿ ಗೋಸ್ಕರ ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ತಂದೆಯಾದ ದೇವರಿಗೆ ಸ್ತೋತ್ರ ಮಾಡುತ್ತಾ ಇರ್ರಿ.
- Isaiah 42:10–12 ಯೆಶಾಯ 42:10–12ಸಮುದ್ರ ಪ್ರಯಾಣಿಕರೇ, ಸಕಲ ಜಲಚರಗಳೇ, ದ್ವೀಪಗಳೇ, ಅದರ ನಿವಾಸಿಗಳೇ, ಕರ್ತನಿಗೆ ಹೊಸ ಹಾಡನ್ನು ಹಾಡಿರಿ. ಭೂಮಿಯ ಕಟ್ಟಕಡೆಯಿಂದ ಆತನಿಗೆ ಸ್ತೋತ್ರ ಮಾಡಿರಿ. ಅರಣ್ಯವು ಅದರ ಪಟ್ಟಣಗಳು ಸ್ವರವೆತ್ತಲಿ; ಕೇದಾರ್ ಊರಿನ ನಿವಾಸಿಗಳು, ಬಂಡೆಯ ಪ್ರದೇಶದ ನಿವಾಸಿಗಳು ಹಾಡಲಿ; ಅವರು ಪರ್ವತದ ತುದಿಯಲ್ಲಿ ಕೂಗಲಿ, ಅವರು ಕರ್ತನಿಗೆ ಮಹಿಮೆಯನ್ನು ಕೊಡಲಿ ಆತನ ಸ್ತೋತ್ರವನ್ನು ದ್ವೀಪಗಳಲ್ಲಿ ಪ್ರಕಟಿಸಲಿ.
- Ephesians 1:13–14 ಎಫೆಸದವರಿಗೆ 1:13–14ನಿಮ್ಮ ರಕ್ಷಣೆಯ ವಿಷಯವಾದ ಸುವಾರ್ತೆಯೆಂಬ ಸತ್ಯ ವಾಕ್ಯವನ್ನು ಕೇಳಿ ಕ್ರಿಸ್ತನಲ್ಲಿ ನಂಬಿಕೆಯಿಟ್ಟವರಾದ ನೀವು ಸಹ ವಾಗ್ದಾನ ಮಾಡಲ್ಪಟ್ಟ ಪವಿತ್ರಾತ್ಮನೆಂಬ ಮುದ್ರೆಯನ್ನು ಹೊಂದಿದಿರಿ. ಆತನ ಮಹಿಮೆಯ ಸ್ತುತಿಗೋಸ್ಕರ ಕೊಂಡುಕೊಂಡ ಸ್ವಾಸ್ಥ್ಯದವರಿಗೆ ವಿಮೋಚನೆಯಾ ಗುವ ತನಕ ಆತನು (ಪವಿತ್ರಾತ್ಮನು) ನಮ್ಮ ಬಾಧ್ಯತೆಗೆ ಸಂಚಕಾರನಾಗಿದ್ದಾನೆ.
- Hosea 14:5–7 ಹೋಶೇಯ 14:5–7ಇಸ್ರಾಯೇಲಿಗೆ ನಾನು ಮಂಜಿನ ಹಾಗೆ ಇರುವೆನು. ಅವನು ತಾವರೆಯ ಹಾಗೆ ಬೆಳೆಯುವನು; ತನ್ನ ಬೇರುಗಳನ್ನು ಲೆಬನೋನಿನ ಹಾಗೆ ಹರಡುವನು. ಅವನ ಕೊಂಬೆಗಳು ಹರಡಿಕೊಂಡು ಅವನ ಸೌಂದರ್ಯವು ಎಣ್ಣೆಯ ಮರಗಳ ಹಾಗೆಯೂ ಅವನ ಪರಿಮಳವು ಲೆಬನೋನಿನ ಹಾಗೆಯೂ ಇರುವದು. ಆತನ ನೆರಳಿನಲ್ಲಿ ವಾಸಿಸುವವರು ಹಿಂತಿರುಗುವರು; ಧಾನ್ಯದ ಹಾಗೆ ಉಜ್ಜೀವಿಸುವರು; ದ್ರಾಕ್ಷೆಯ ಬಳ್ಳಿಯ ಹಾಗೆ ಬೆಳೆಯು ವರು. ಅವನ ಸುವಾಸನೆಯು ಲೆಬನೋನಿನ ದ್ರಾಕ್ಷಾ ರಸದ ಹಾಗೆ ಇರುವದು.
- Song of Solomon 6:11 ಪರಮಗೀತೆ 6:11ತಗ್ಗಿನ ಫಲಗಳನ್ನು ನೋಡುವದಕ್ಕೂ ದ್ರಾಕ್ಷೇ ಬಳ್ಳಿಯು ಬೆಳೆದು? ದಾಳಿಂಬರ ಗಿಡಗಳು ಚಿಗುರಿ ವೆಯೋ ಎಂದು ನೋಡುವದಕ್ಕೂ ನಾನು ಬಾದಾ ಮಿಯ ತೋಟಕ್ಕೆ ಹೋದೆನು.