Song of Solomon · chapter 2 · verse 7
Song of Solomon 2:7 in Kannada
ಓ ಯೆರೂಸಲೇಮಿನ ಕುಮಾರ್ತೆಯರೇ, ನನ್ನ ಪ್ರಿಯನು ಮೆಚ್ಚುವ ವರೆಗೆ ನೀವು ಎಬ್ಬಿಸಬೇಡಿರಿ, ಇಲ್ಲವೆ ನನ್ನ ಪ್ರಿಯನನ್ನು ಎಚ್ಚರಿಸಬೇಡಿರಿ ಎಂದು ದುಪ್ಪಿಗಳಿಂದಲೂ ಅಡವಿಯ ಜಿಂಕೆಗಳಿಂದಲೂ ನಿಮಗೆ ಆಜ್ಞಾಪಿಸುತ್ತೇನೆ.
O yeroosalemina kumaarteyare, nanna priyanu mechchuva varege neevu ebbisabediri, illave nanna priyanannu echcharisabediri endu duppigalindaloo adaviya jinkegalindaloo nimage aajnyaapisuttene.
Song of Solomon 2:7 in English
- King James Version (KJV)
- I charge you, O ye daughters of Jerusalem, by the roes, and by the hinds of the field, that ye stir not up, nor awake [my] love, till he please.
- World English Bible (WEB)
- I adjure you, daughters of Jerusalem, by the roes, or by the hinds of the field, that you not stir up, nor awaken love, until it so desires.
- American Standard Version (ASV)
- I adjure you, O daughters of Jerusalem, By the roes, or by the hinds of the field, That ye stir not up, nor awake [my] love, Until he please.
- Bible in Basic English (BBE)
- I say to you, O daughters of Jerusalem, by the roes of the field, do not let love be moved till it is ready.
- Darby Translation (DBY)
- I charge you, daughters of Jerusalem, By the gazelles, or by the hinds of the field, That ye stir not up, nor awake [my] love, till he please.
- Webster's Bible (WBS)
- I charge you, O ye daughters of Jerusalem, by the roes, and by the hinds of the field, that ye stir not, nor awake [my] love, till he please.
- Young's Literal Translation (YLT)
- I have adjured you, daughters of Jerusalem, By the roes or by the hinds of the field, Stir not up nor wake the love till she please!
Read in context
- 5ದ್ರಾಕ್ಷೆಯ ಉಂಡಿಗಳಿಂದ ನನ್ನನ್ನು ಹಿಡಿದಿರು; ಸೇಬು ಹಣ್ಣುಗಳಿಂದ ನನ್ನನ್ನು ಆದರಿಸು; ಪ್ರೀತಿಯ ದೆಸೆಯಿಂದ ಅಸ್ವಸ್ಥಳಾಗಿದ್ದೇನೆ.
- 6ಅವನ ಎಡಗೈ ನನ್ನ ತಲೆಯ ಕೆಳಗದೆ; ಅವನ ಬಲಗೈ ನನ್ನನ್ನು ಅಪ್ಪಿ ಕೊಳ್ಳುತ್ತದೆ.
- 7ಓ ಯೆರೂಸಲೇಮಿನ ಕುಮಾರ್ತೆಯರೇ, ನನ್ನ ಪ್ರಿಯನು ಮೆಚ್ಚುವ ವರೆಗೆ ನೀವು ಎಬ್ಬಿಸಬೇಡಿರಿ, ಇಲ್ಲವೆ ನನ್ನ ಪ್ರಿಯನನ್ನು ಎಚ್ಚರಿಸಬೇಡಿರಿ ಎಂದು ದುಪ್ಪಿಗಳಿಂದಲೂ ಅಡವಿಯ ಜಿಂಕೆಗಳಿಂದಲೂ ನಿಮಗೆ ಆಜ್ಞಾಪಿಸುತ್ತೇನೆ.
- 8ನನ್ನ ಪ್ರಿಯನ ಸ್ವರವು! ಇಗೋ, ಅವನು ಪರ್ವತಗಳ ಮೇಲೆ ಹಾರುತ್ತಾ ಗುಡ್ಡಗಳ ಮೇಲೆ ನೆಗೆಯುತ್ತಾ ಬರುತ್ತಾನೆ.
- 9ನನ್ನ ಪ್ರಿಯನು ಜಿಂಕೆಯ ಹಾಗೆ ಇಲ್ಲವೆ ದುಪ್ಪಿಯ ಮರಿಯ ಹಾಗೆ ಇದ್ದಾನೆ. ಇಗೋ, ಅವನು ನಮ್ಮ ಗೋಡೆಯ ಹಿಂದೆ ನಿಂತು ಜಲಾಂತರಗಳಿಂದ ತನ್ನನ್ನು ತೋರಿಸಿ ಕಿಟಕಿಗಳಿಂದ ನೋಡುತ್ತಾನೆ.
Cross references
- Song of Solomon 3:5 ಪರಮಗೀತೆ 3:5ಯೆರೂಸಲೇಮಿನ ಕುಮಾರ್ತೆಯರೇ, ನನ್ನ ಪ್ರಿಯನು ಮೆಚ್ಚುವ ವರೆಗೆ ನೀವು ನನ್ನ ಪ್ರೀತಿಯನ್ನು ಎಬ್ಬಿಸಬೇಡಿರಿ, ಎಚ್ಚರಿಸಬೇಡಿರಿ ಎಂದು ಅಡವಿಯ ಜಿಂಕೆಗಳಿಂದಲೂ ದುಪ್ಪಿಗಳಿಂದಲೂ ನಿಮಗೆ ಆಜ್ಞಾಪಿಸುತ್ತೇನೆ.
- Song of Solomon 8:4 ಪರಮಗೀತೆ 8:4ಓ ಯೆರೂಸಲೇಮಿನ ಕುಮಾರ್ತೆಯರೇ, ನಿಮಗೆ ಆಜ್ಞಾಪಿಸುತ್ತೇನೆ--ನನ್ನ ಪ್ರಿಯನು ಮೆಚ್ಚುವ ವರೆಗೆ ನೀವು ಎಬ್ಬಿಸದೆಯೂ ನನ್ನ ಪ್ರೀತಿಯನ್ನು ಎಚ್ಚರಿ ಸದೆಯೂ ಇರ್ರಿ.
- Song of Solomon 1:5 ಪರಮಗೀತೆ 1:5ನಾನು ಕಪ್ಪಾದವಳು; ಆದರೂ ಓ ಯೆರೂಸ ಲೇಮಿನ ಕುಮಾರ್ತೆಯರೇ, ಕೆದಾರಿನ ಗುಡಾರಗಳ ಹಾಗೆಯೂ ಸೊಲೊಮೋನನ ತೆರೆಗಳ ಹಾಗೆಯೂ ಸುಂದರಿಯಾಗಿದ್ದೇನೆ.
- Song of Solomon 5:8–9 ಪರಮಗೀತೆ 5:8–9ನಿಮಗೆ ಆಣೆ ಇಡುತ್ತೇನೆ, ಓ ಯೆರೂಸಲೇಮಿನ ಕುಮಾರ್ತೆ ಯರೇ--ನೀವು ನನ್ನ ಪ್ರಿಯನನ್ನು ಕಂಡರೆ ನಾನು ಅನುರಾಗದಿಂದ ಅಸ್ವಸ್ಥಳಾಗಿದ್ದೇನೆಂದು ಅವನಿಗೆ ತಿಳಿಸಿರಿ. ಇತರ ಪ್ರಿಯನಿಗಿಂತ ನಿನ್ನ ಪ್ರಿಯನ ಅತಿಶಯ ವೇನು? ಸ್ತ್ರೀಯರಲ್ಲಿ ಅತಿ ಸುಂದರಿಯೇ, ನೀನು ನಮಗೆ ಹೀಗೆ ಆಣೆ ಇಡುವದಕ್ಕೆ ಇತರ ಪ್ರಿಯನಿಗಿಂತ ನಿನ್ನ ಪ್ರಿಯನ ಅತಿಶಯವೇನು?
- Proverbs 5:19 ಜ್ಞಾನೋಕ್ತಿಗಳು 5:19ಆಕೆಯು ಮನೋಹರವಾದ ಜಿಂಕೆಯಂತೆಯೂ ಅಂದವಾದ ಹೆಣ್ಣು ಜಿಂಕೆಯ ಹಾಗೆಯೂ ಇರಲಿ; ಆಕೆಯ ಸ್ತನಗಳು ನಿನ್ನನ್ನು ಯಾವಾಗಲೂ ತೃಪ್ತಿಪಡಿ ಸಲಿ; ಆಕೆಯ ಪ್ರೀತಿಯಿಂದ ನೀನು ಯಾವಾಗಲೂ ಆನಂದಪರವಶನಾಗು.
- Song of Solomon 5:16 ಪರಮಗೀತೆ 5:16ಯೆರೂಸಲೇಮಿನ ಕುಮಾರ್ತೆ ಯರೇ, ಅವನ ಬಾಯಿ ಬಹು ಮಧುರವಾಗಿದೆ; ಹೌದು, ಅವನು ಸರ್ವಾಂಗ ಸುಂದರನು. ಇವನೇ ನನ್ನ ಪ್ರಿಯನು, ಇವನೇ ನನ್ನ ಸ್ನೇಹಿತನು.
- Song of Solomon 2:9 ಪರಮಗೀತೆ 2:9ನನ್ನ ಪ್ರಿಯನು ಜಿಂಕೆಯ ಹಾಗೆ ಇಲ್ಲವೆ ದುಪ್ಪಿಯ ಮರಿಯ ಹಾಗೆ ಇದ್ದಾನೆ. ಇಗೋ, ಅವನು ನಮ್ಮ ಗೋಡೆಯ ಹಿಂದೆ ನಿಂತು ಜಲಾಂತರಗಳಿಂದ ತನ್ನನ್ನು ತೋರಿಸಿ ಕಿಟಕಿಗಳಿಂದ ನೋಡುತ್ತಾನೆ.
- Ephesians 5:22–33 ಎಫೆಸದವರಿಗೆ 5:22–33ಸ್ತ್ರೀಯರೇ, ನೀವು ಕರ್ತನಿಗೆ ಹೇಗೋ ಹಾಗೆಯೇ ನಿಮ್ಮನಿಮ್ಮ ಗಂಡಂದಿರಿಗೆ ಅಧೀನರಾಗಿರ್ರಿ. ಕ್ರಿಸ್ತನು ಸಭೆಗೆ ತಲೆಯಾಗಿರುವ ಪ್ರಕಾರವೇ ಗಂಡನು ಹೆಂಡತಿಗೆ ತಲೆಯಾಗಿದ್ದಾನೆ. ಆತನು (ಕ್ರಿಸ್ತನು) ದೇಹಕ್ಕೆ ರಕ್ಷಕ ನಾಗಿದ್ದಾನೆ, ಆದದರಿಂದ ಸಭೆಯು ಕ್ರಿಸ್ತನಿಗೆ ಹೇಗೆ ಅಧೀನವಾಗಿದೆಯೋ ಹಾಗೆಯೇ ಸ್ತ್ರೀಯರು ತಮ್ಮತಮ್ಮ ಗಂಡಂದಿರಿಗೆ ಎಲ್ಲಾ ವಿಷಯಗಳಲ್ಲಿ ಅಧೀನ ರಾಗಿರಬೇಕು. ಪುರಷರೇ, ನೀವು ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ, ಯಾಕಂದರೆ ಕ್ರಿಸ್ತನು ಸಹ ಸಭೆಯನ್ನು ಪ್ರೀತಿಸಿ ಅದಕ್ಕಾಗಿ ತನ್ನನ್ನು ತಾನೇ ಒಪ್ಪಿಸಿಕೊಟ್ಟನು. ಆತನು ಅದನ್ನು ವಾಕ್ಯವೆಂಬ ನೀರಿನಿಂದ ತೊಳೆದು ಪ್ರತಿಷ್ಠಿಸಿ ಶುದ್ಧ ಮಾಡಿದ್ದಲ್ಲದೆ ಅದನ್ನು ಕಳಂಕ ಸುಕ್ಕು ಇಂಥಾದ್ದು ಯಾವದೂ ಇಲ್ಲದೆ ಪರಿಶುದ್ಧವೂ ದೋಷವಿಲ್ಲದ್ದೂ ಆಗಿರುವ ಮಹಿಮೆಯುಳ್ಳ ಸಭೆಯ ನ್ನಾಗಿ ತನಗೆ ತಾನೇ ಸಮರ್ಪಿಸಿಕೊಳ್ಳಬೇಕೆಂದಿದ್ದಾನೆ. ಹಾಗೆಯೇ ಪುರುಷರು ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೆ ಪ್ರೀತಿಸಿಕೊಳ್ಳುವನಾಗಿದ್ದಾನೆ. ಯಾರೂ ಎಂದೂ ಸ್ವಶರೀರವನ್ನು ಹಗೆಮಾಡಿದ್ದಿಲ್ಲ. ಆದರೆ ಅದನ್ನು ಪೋಷಿಸಿ ಸಂರಕ್ಷಿಸುವ ಪ್ರಕಾರ ಕರ್ತನು ಸಭೆಯನ್ನು ಪೋಷಿಸಿ ಸಂರಕ್ಷಿಸುವಾತನಾಗಿದ್ದಾನೆ. ನಾವು ಆತನ ದೇಹದ ಅಂಗಗಳೂ ಮಾಂಸವೂ ಎಲುಬುಗಳೂ ಆಗಿದ್ದೇವೆ. ಇದರ ನಿಮಿತ್ತದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿ ಯನ್ನು ಸೇರಿಕೊಳ್ಳುವನು; ಅವರಿಬ್ಬರೂ ಒಂದೇ ಶರೀರವಾಗಿರುವರು. ಇದೊಂದು ದೊಡ್ಡ ಮರ್ಮವೇ; ಆದರೆ ನಾನು ಕ್ರಿಸ್ತನ ವಿಷಯವಾಗಿಯೂ ಸಭೆಯ ವಿಷಯವಾಗಿಯೂ ಮಾತನಾಡುತ್ತೇನೆ.ಆದಾಗ್ಯೂ ನಿಮ್ಮಲ್ಲಿ ಪ್ರತಿ ಪುರುಷನು ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಬೇಕು; ಪ್ರತಿ ಸ್ತ್ರೀಯು ತನ್ನ ಗಂಡನನ್ನು ಗೌರವಿಸುವವಳಾಗಿ ನಡೆದುಕೊಳ್ಳಬೇಕು. ಆದಾಗ್ಯೂ ನಿಮ್ಮಲ್ಲಿ ಪ್ರತಿ ಪುರುಷನು ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಬೇಕು; ಪ್ರತಿ ಸ್ತ್ರೀಯು ತನ್ನ ಗಂಡನನ್ನು ಗೌರವಿಸುವವಳಾಗಿ ನಡೆದುಕೊಳ್ಳಬೇಕು.