Song of Solomon · chapter 3 · verse 2
Song of Solomon 3:2 in Kannada
ನಾನು ಈಗ ಎದ್ದು ಪಟ್ಟಣವನ್ನು ಸಂಚರಿಸಿ ಬೀದಿ ಗಳಲ್ಲಿಯೂ ಮಾರ್ಗಗಳಲ್ಲಿಯೂ ನನ್ನ ಪ್ರಾಣಪ್ರಿಯ ನನ್ನು ಹುಡುಕುವೆನು. ಅವನನ್ನು ಹುಡುಕಿ ಕಾಣದೆ ಹೋದೆನು.
Naanu eega eddu pattanavannu sancharisi beedi galalliyoo maargagalalliyoo nanna praanapriya nannu hudukuvenu. Avanannu huduki kaanade hodenu.
Song of Solomon 3:2 in English
- King James Version (KJV)
- I will rise now, and go about the city in the streets, and in the broad ways I will seek him whom my soul loveth: I sought him, but I found him not.
- World English Bible (WEB)
- I will get up now, and go about the city; in the streets and in the squares I will seek him whom my soul loves. I sought him, but I didn’t find him.
- American Standard Version (ASV)
- [I said], I will rise now, and go about the city; In the streets and in the broad ways I will seek him whom my soul loveth: I sought him, but I found him not.
- Bible in Basic English (BBE)
- I will get up now and go about the town, in the streets and in the wide ways I will go after him who is the love of my soul: I went after him, but I did not see him.
- Darby Translation (DBY)
- I will rise now, and go about the city; In the streets and in the broadways Will I seek him whom my soul loveth: I sought him, but I found him not.
- Webster's Bible (WBS)
- I will rise now, and go about the city in the streets, and in the broad ways I will seek him whom my soul loveth: I sought him, but I found him not.
- Young's Literal Translation (YLT)
- — Pray, let me rise, and go round the city, In the streets and in the broad places, I seek him whom my soul hath loved! — I sought him, and I found him not.
Read in context
- 1ರಾತ್ರಿಯಲ್ಲಿ ನನ್ನ ಹಾಸಿಗೆಯ ಮೇಲೆ ನನ್ನ ಪ್ರಾಣ ಪ್ರಿಯನನ್ನು ಹುಡುಕಿದೆನು; ಅವನನ್ನು ಹುಡುಕಿದೆನು, ಆದರೆ ಕಾಣದೆಹೋದೆನು.
- 2ನಾನು ಈಗ ಎದ್ದು ಪಟ್ಟಣವನ್ನು ಸಂಚರಿಸಿ ಬೀದಿ ಗಳಲ್ಲಿಯೂ ಮಾರ್ಗಗಳಲ್ಲಿಯೂ ನನ್ನ ಪ್ರಾಣಪ್ರಿಯ ನನ್ನು ಹುಡುಕುವೆನು. ಅವನನ್ನು ಹುಡುಕಿ ಕಾಣದೆ ಹೋದೆನು.
- 3ಪಟ್ಟಣವನ್ನು ಸಂಚರಿಸುವ ಕಾವಲು ಗಾರರು ನನ್ನನ್ನು ಕಂಡಾಗ--ನನ್ನ ಪ್ರಾಣಪ್ರಿಯ ನನ್ನು ನೀವು ಕಂಡಿರಾ ಅಂದೆನು.
- 4ನಾನು ಅವರನ್ನು ಬಿಟ್ಟು ಸ್ವಲ್ಪ ಆಚೆಗೆ ಹೋದ ತರುವಾಯ, ನನ್ನ ಪ್ರಾಣಪ್ರಿಯನನ್ನು ಕಂಡೆನು. ನಾನು ಅವನನ್ನು ಹಿಡುಕೊಂಡು ನನ್ನ ತಾಯಿಯ ಮನೆಗೂ ನನ್ನನ್ನು ಹೆತ್ತವಳ ಕೊಠಡಿಗೂ ಅವನನ್ನು ಕರತರುವ ವರೆಗೆ ಹೋಗಗೊಡಿಸಲಿಲ್ಲ.
Cross references
- Romans 13:11 ರೋಮಾಪುರದವರಿಗೆ 13:11ಈಗ ನಿದ್ರೆಯಿಂದ ಎಚ್ಚರವಾಗತಕ್ಕ ಕಾಲವೆಂದು ಅರಿತುಕೊಳ್ಳಿರಿ; ನಾವು ಮೊದಲು ನಂಬಿದ ಕಾಲದಲ್ಲಿ ಇದ್ದದ್ದಕ್ಕಿಂತ ಈಗ ನಮ್ಮ ರಕ್ಷಣೆಯು ಹತ್ತಿರವಾಯಿತು.
- Ephesians 5:14 ಎಫೆಸದವರಿಗೆ 5:14ಆದದರಿಂದ-- ನಿದ್ರೆ ಮಾಡುವವನೇ, ಎಚ್ಚರವಾಗು, ಸತ್ತವರಿಂದ ಎದ್ದೇಳು; ಕ್ರಿಸ್ತನು ನಿನಗೆ ಪ್ರಕಾಶಕೊಡುವನು ಎಂದು ಆತನು ಹೇಳುತ್ತಾನೆ.
- 1 Corinthians 15:34 1 ಕೊರಿಂಥದವರಿಗೆ 15:34ನೀತಿಗಾಗಿ ಎಚ್ಚರಗೊಳ್ಳಿರಿ, ಪಾಪಮಾಡಬೇಡಿರಿ; ಕೆಲವರಿಗೆ ದೇವರ ವಿಷಯವಾದ ಜ್ಞಾನವೇ ಇಲ್ಲ; ನಾನು ಇದನ್ನು ನಿಮಗೆ ನಾಚಿಕೆ ಪಡಿಸುವದಕ್ಕಾಗಿ ಹೇಳುತ್ತೇನೆ.
- Psalm 22:1–2 ಕೀರ್ತನೆಗಳು 22:1–2ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ? ನೀನು ಯಾಕೆ ನನಗೆ ಸಹಾಯ ಮಾಡದೆಯೂ ನನ್ನ ಕೂಗಿಗೆ ಕಿವಿ ಗೊಡದೆಯೂ ದೂರವಾಗಿದ್ದೀ. ಓ ನನ್ನ ದೇವರೇ, ಹಗಲಿನಲ್ಲಿ ಕರೆಯುತ್ತೇನೆ; ನೀನು ಉತ್ತರ ಕೊಡುವದಿಲ್ಲ; ರಾತ್ರಿಯಲ್ಲಿಯೂ ನಾನು ಮೌನವಾಗಿರು ವದಿಲ್ಲ.
- Song of Solomon 5:5 ಪರಮಗೀತೆ 5:5ನಾನು ನನ್ನ ಪ್ರಿಯನಿಗೆ ತೆರೆಯಲು ಎದ್ದಾಗ ಬೀಗದ ಹಿಡಿಗಳ ಮೇಲೆ ನನ್ನ ಕೈಗಳಿಂದ ರಕ್ತಬೋಳವೂ ನನ್ನ ಬೆರಳುಗಳಿಂದ ಸೋರುವ ಬೋಳವೂ ಸುರಿಯಿತು.
- Psalm 43:2–5 ಕೀರ್ತನೆಗಳು 43:2–5ನೀನು ನನ್ನ ಬಲವಾದ ದೇವರಾಗಿದ್ದೀ; ಯಾಕೆ ನನ್ನನ್ನು ತಳ್ಳಿ ಬಿಟ್ಟಿದ್ದೀ? ಯಾಕೆ ನಾನು ಶತ್ರುವಿನ ಬಾಧೆಯಲ್ಲಿ ಇದ್ದು ದುಃಖದಲ್ಲಿ ನಡೆದುಕೊಳ್ಳಬೇಕು? ನಿನ್ನ ಬೆಳ ಕನ್ನೂ ಸತ್ಯವನ್ನೂ ಕಳುಹಿಸು; ಅವು ನನ್ನನ್ನು ನಡಿಸಿ ನಿನ್ನ ಪರಿಶುದ್ಧ ಪರ್ವತಕ್ಕೂ ಗುಡಾರಗಳಿಗೂ ನನ್ನನ್ನು ಬರಮಾಡಲಿ. ಆಗ ದೇವರ ಬಲಿಪೀಠದ ಬಳಿಗೂ ನನ್ನ ಅಧಿಕ ಸಂತೋಷವಾದ ದೇವರ ಬಳಿಗೂ ಬಂದು ಹೌದು, ಕಿನ್ನರಿಯಿಂದ, ನನ್ನ ದೇವರಾದ ಓ ದೇವರೇ, ನಿನ್ನನ್ನು ಕೊಂಡಾಡುವೆನು.ಓ ನನ್ನ ಪ್ರಾಣವೇ, ಕುಗ್ಗಿಹೋಗಿರುವದೇನು? ಯಾಕೆ ನನ್ನಲ್ಲಿ ವ್ಯಾಕುಲಪಡುತ್ತೀ? ದೇವರನ್ನು ನಿರೀಕ್ಷಿಸು. ನನ್ನ ಮುಖದ ಲಕ್ಷಣವೂ ನನ್ನ ದೇವರೂ ಆಗಿರುವಾತನನ್ನು ಇನ್ನೂ ಕೊಂಡಾಡುವೆನು. ಓ ನನ್ನ ಪ್ರಾಣವೇ, ಕುಗ್ಗಿಹೋಗಿರುವದೇನು? ಯಾಕೆ ನನ್ನಲ್ಲಿ ವ್ಯಾಕುಲಪಡುತ್ತೀ? ದೇವರನ್ನು ನಿರೀಕ್ಷಿಸು. ನನ್ನ ಮುಖದ ಲಕ್ಷಣವೂ ನನ್ನ ದೇವರೂ ಆಗಿರುವಾತನನ್ನು ಇನ್ನೂ ಕೊಂಡಾಡುವೆನು.
- Isaiah 64:7 ಯೆಶಾಯ 64:7ನಿನ್ನ ಹೆಸರನ್ನು ಕರೆಯುವವನೂ ನಿನ್ನನ್ನು ಹಿಡು ಕೊಳ್ಳುವದಕ್ಕೆ ತನ್ನನ್ನು ಪ್ರೇರಿಸಿಕೊಳ್ಳುವವನು ಒಬ್ಬನೂ ಇಲ್ಲ; ನಿನ್ನ ಮುಖವನ್ನು ನಮಗೆ ಮರೆಮಾಡಿದ್ದೀ; ನಮ್ಮ ಅಕ್ರಮಗಳಿಗಾಗಿ ನಮ್ಮನ್ನು ದಹಿಸಿಬಿಟ್ಟಿದ್ದೀ.
- Psalm 77:7–10 ಕೀರ್ತನೆಗಳು 77:7–10ನಿರಂತರವಾಗಿ ಕರ್ತನು ತಳ್ಳಿಬಿಡುವನೋ? ಇನ್ನು ದಯೆತೋರದೆ ಇರುವನೋ? ಆತನ ಕೃಪೆಯು ಸದಾಕಾಲಕ್ಕೆ ನಿಂತು ಹೋಗುತ್ತದೋ? ನಿರಂತರಕ್ಕೂ ವಾಗ್ದಾನ ತಪ್ಪಿಹೋಗುತ್ತದೋ? ದೇವರು ಕರು ಣಿಸುವದನ್ನು ಮರೆತು ಬಿಟ್ಟಿದ್ದಾನೋ? ತನ್ನ ಅಂತಃ ಕರಣಗಳನ್ನು ಕೋಪದಿಂದ ಮುಚ್ಚಿಕೊಂಡಿದ್ದಾನೋ? ಸೆಲಾ. ಇದೇ ನನ್ನ ಬಲಹೀನತೆ ಎಂದು ನಾನು ಅಂದುಕೊಂಡೆನು. ಮಹೋನ್ನತನ ಬಲಗೈಯ ವರ್ಷ ಗಳನ್ನು ಜ್ಞಾಪಕಮಾಡಿಕೊಳ್ಳುವೆನು;
- Luke 14:21–23 ಲೂಕನು 14:21–23ಹೀಗೆ ಆ ಸೇವಕನು ಬಂದು ತನ್ನ ಯಜಮಾನನಿಗೆ ಈ ವಿಷಯಗಳನ್ನು ತಿಳಿಸಿದನು. ಆಗ ಆ ಮನೇಯಜಮಾನನು ಕೋಪಗೊಂಡು ತನ್ನ ಸೇವಕನಿಗೆ--ನೀನು ಬೇಗನೆ ಪಟ್ಟಣದ ಬೀದಿಗಳಿಗೂ ಸಂದುಗಳಿಗೂ ಹೋಗಿ ಬಡವರನ್ನೂ ಊನವಾದ ವರನ್ನೂ ಕುಂಟರನ್ನೂ ಕುರುಡರನ್ನೂ ಇಲ್ಲಿ ಒಳಗೆ ಕರಕೆ ಆಗ ಆ ಸೇವಕನು--ಒಡೆಯನೇ, ನೀನು ಅಪ್ಪಣೆಕೊಟ್ಟಂತೆ ಮಾಡಿದ್ದಾ ಯಿತು; ಇನ್ನೂ ಸ್ಥಳವದೆ ಅಂದನು. ಆಗ ಯಜ ಮಾನನು ಸೇವಕನಿಗೆ--ನೀನು ಬೀದಿಗಳಿಗೂ ಬೇಲಿಗಳ ಬಳಿಗೂ ಹೊರಟುಹೋಗಿ ನನ್ನ ಮನೆ ತುಂಬಿಕೊಳ್ಳುವಂತೆ ಒಳಗೆ ಬರಲು ಅವರನ್ನು ಬಲ ವಂತಮಾಡು;
- Proverbs 8:34 ಜ್ಞಾನೋಕ್ತಿಗಳು 8:34ನನ್ನ ದ್ವಾರಗಳ ಬಳಿಯಲ್ಲಿ ಪ್ರತಿದಿನ ಕಾಯುತ್ತಾ ನನ್ನ ಬಾಗಲುಗಳ ನಿಲುವು ಗಳಲ್ಲಿ ನಿರೀಕ್ಷಿಸುತ್ತಾ ನನ್ನ ಮಾತುಗಳನ್ನು ಕೇಳುವವನು ಧನ್ಯನು.
- John 1:6 ಯೋಹಾನನು 1:6ದೇವರಿಂದ ಕಳುಹಿ ಸಲ್ಪಟ್ಟ ಒಬ್ಬ ಮನುಷ್ಯನಿದ್ದನು; ಅವನ ಹೆಸರು ಯೋಹಾನನು.
- Proverbs 8:2–3 ಜ್ಞಾನೋಕ್ತಿಗಳು 8:2–3ಉನ್ನತ ಸ್ಥಳಗಳ ತುದಿಯ ಲ್ಲಿಯೂ ಹಾದಿಗಳ ಸ್ಥಳಗಳಲ್ಲಿಯೂ ಮಾರ್ಗದ ಲ್ಲಿಯೂ ನಿಂತುಕೊಳ್ಳುತ್ತದೆ. ದ್ವಾರಗಳ ಬಳಿಯ ಪಟ್ಟ ಣದ ಪ್ರವೇಶದಲ್ಲಿಯೂ ಒಳಗೆ ಬರುವ ಬಾಗಲು ಗಳಲ್ಲಿಯೂ ಆಕೆ ಕೂಗುವದೇನಂದರೆ--