Song of Solomon · chapter 4 · verse 3
Song of Solomon 4:3 in Kannada
ನಿನ್ನ ತುಟಿಗಳು ಕೆಂಪು ದಾರದ ಹಾಗೆ ಅವೆ; ನಿನ್ನ ಮಾತು ರಮ್ಯವಾದದ್ದು; ನಿನ್ನ ಕೆನ್ನೆಯು ಮುಸುಕಿನೊಳಗೆ ವಿಭಾಗಿಸಿದ ದಾಳಿಂಬರ ಹಣ್ಣಿನ ಹಾಗೆ ಇದೆ.
Ninna tutigalu kempu daarada haage ave; ninna maatu ramyavaadaddu; ninna kenneyu musukinolage vibhaagisida daalimbara hannina haage ide.
Song of Solomon 4:3 in English
- King James Version (KJV)
- Thy lips [are] like a thread of scarlet, and thy speech [is] comely: thy temples [are] like a piece of a pomegranate within thy locks.
- World English Bible (WEB)
- Your lips are like scarlet thread. Your mouth is lovely. Your temples are like a piece of a pomegranate behind your veil.
- American Standard Version (ASV)
- Thy lips are like a thread of scarlet, And thy mouth is comely. Thy temples are like a piece of a pomegranate Behind thy veil.
- Bible in Basic English (BBE)
- Your red lips are like a bright thread, and your mouth is fair of form; the sides of your head are like pomegranate fruit under your veil.
- Darby Translation (DBY)
- Thy lips are like a thread of scarlet, And thy speech is comely; As a piece of a pomegranate are thy temples Behind thy veil.
- Webster's Bible (WBS)
- Thy lips [are] like a thread of scarlet, and thy speech [is] comely: thy temples [are] like a piece of pomegranate within thy locks.
- Young's Literal Translation (YLT)
- As a thread of scarlet [are] thy lips, And thy speech [is] comely, As the work of the pomegranate [is] thy temple behind thy veil,
Read in context
- 1ಇಗೋ, ನನ್ನ ಪ್ರಿಯಳೇ, ನೀನು ಸುಂದರಿಯು! ಇಗೋ, ನೀನು ಸುಂದರಿಯು! ನಿನ್ನ ಮುಸುಕಿನೊಳಗೆ ನಿನಗೆ ಪಾರಿವಾಳದ ಕಣ್ಣುಗ ಳಿವೆ. ನಿನ್ನ ಕೂದಲು ಗಿಲ್ಯಾದಿನ ಪರ್ವತದಲ್ಲಿ ಕಾಣ ಲ್ಪಡುವ ಮೇಕೆ ಮಂದೆಯ ಹಾಗೆ ಇದೆ.
- 2ನಿನ್ನ ಹಲ್ಲುಗಳು ತೊಳೆಯಲ್ಪಟ್ಟು ಮೇಲಕ್ಕೆ ಬರುವ ಉಣ್ಣೆ ಕತ್ತರಿಸಿದ ಕುರಿಮಂದೆಗೆ ಸಮಾನವಾಗಿವೆ; ಅವೆಲ್ಲಾ ಅವಳಿ ಜವಳಿ ಈಯುತ್ತವೆ; ಅವುಗಳಲ್ಲಿ ಒಂದೂ ಬಂಜೆಯಾಗಿರದು.
- 3ನಿನ್ನ ತುಟಿಗಳು ಕೆಂಪು ದಾರದ ಹಾಗೆ ಅವೆ; ನಿನ್ನ ಮಾತು ರಮ್ಯವಾದದ್ದು; ನಿನ್ನ ಕೆನ್ನೆಯು ಮುಸುಕಿನೊಳಗೆ ವಿಭಾಗಿಸಿದ ದಾಳಿಂಬರ ಹಣ್ಣಿನ ಹಾಗೆ ಇದೆ.
- 4ನಿನ್ನ ಕುತ್ತಿಗೆ ದಾವೀದನ ಆಯುಧ ಶಾಲೆಗೋಸ್ಕರ ಕಟ್ಟಿಸಲ್ಪಟ್ಟ ಬುರುಜಿನ ಹಾಗೆ ಇದೆ; ಅದರಲ್ಲಿ ಸಾವಿರ ಗುರಾಣಿಗಳು ತೂಗ ಹಾಕಿವೆ; ಅವುಗಳೆಲ್ಲಾ ಪರಾಕ್ರಮಶಾಲಿಗಳ ಡಾಲುಗಳು.
- 5ನಿನ್ನ ಎರಡು ಸ್ತನಗಳು ತಾವರೆ ಹೂವುಗಳಲ್ಲಿ ಮೇಯುವ ಅವಳಿ ಜವಳಿಯಾದ ಎರಡು ಜಿಂಕೆಯ ಮರಿಗಳ ಹಾಗೆ ಅವೆ.
Cross references
- Song of Solomon 6:7 ಪರಮಗೀತೆ 6:7ನಿನ್ನ ಕೆನ್ನೆಗಳು ನಿನ್ನ ಮುಸುಕಿನ ಕೆಳಗೆ ವಿಭಾಗಿಸಿದ ದಾಳಿಂಬರ ಹಣ್ಣಿನ ಹಾಗೆ ಅವೆ.
- Song of Solomon 5:16 ಪರಮಗೀತೆ 5:16ಯೆರೂಸಲೇಮಿನ ಕುಮಾರ್ತೆ ಯರೇ, ಅವನ ಬಾಯಿ ಬಹು ಮಧುರವಾಗಿದೆ; ಹೌದು, ಅವನು ಸರ್ವಾಂಗ ಸುಂದರನು. ಇವನೇ ನನ್ನ ಪ್ರಿಯನು, ಇವನೇ ನನ್ನ ಸ್ನೇಹಿತನು.
- Joshua 2:18 ಯೆಹೋಶುವ 2:18ಇಗೋ, ನಾವು ದೇಶ ದಲ್ಲಿ ಪ್ರವೇಶಿಸುವಾಗ ನೀನು ನಮ್ಮನ್ನು ಕಿಟಿಕಿಯಿಂದ ಇಳಿಯಬಿಟ್ಟ ಈ ಕೆಂಪು ನೂಲಿನ ದಾರವನ್ನು ಕಟ್ಟಿ ನಿನ್ನ ತಂದೆತಾಯಿಯನ್ನೂ ಸಹೋದರರನ್ನೂ ನಿನ್ನ ತಂದೆಯ ಮನೆಯವರೆಲ್ಲರನ್ನೂ ನಿನ್ನ ಮನೆಯಲ್ಲಿ ಕೂಡಿಸಿಕೊಳ್ಳಬೇಕು.
- Song of Solomon 5:13 ಪರಮಗೀತೆ 5:13ಅವನ ಕೆನ್ನೆಗಳು ಸುಗಂಧಮಡಿಯ ಹಾಗೆಯೂ ಸುವಾಸನೆಯ ಪುಷ್ಪಗಳ ಹಾಗೆಯೂ ಅವೆ. ಅವನ ತುಟಿಗಳು ತಾವರೆಗಳ ಹಾಗೆ ಸೋರುವ ಸುಗಂಧ ರಕ್ತಬೋಳವನ್ನು ಸುರಿಯುತ್ತವೆ.
- Proverbs 16:21–24 ಜ್ಞಾನೋಕ್ತಿಗಳು 16:21–24ಹೃದಯದಲ್ಲಿ ಜ್ಞಾನ ವಂತರು ಜಾಣರೆಂದು ಕರೆಯಲ್ಪಡುವರು; ತುಟಿಗಳ ಮಧುರವು ಜ್ಞಾನವನ್ನು ಹೆಚ್ಚಿಸುತ್ತದೆ. ವಿವೇಕಿಗೆ ವಿವೇಕವೇ ಜೀವದ ಬುಗ್ಗೆ. ಬುದ್ಧಿಹೀನರ ಬೋಧ ನೆಯು ಮೂರ್ಖತನ. ಜ್ಞಾನಿಯ ಹೃದಯವು ಬಾಯಿಗೆ ಬೋಧಿಸಿ ತನ್ನ ತುಟಿಗಳಿಗೆ ಜ್ಞಾನವನ್ನು ಹೆಚ್ಚಿಸುತ್ತದೆ. ಮನೋಹರವಾದ ಮಾತುಗಳು ಜೇನು ತುಪ್ಪದಂತೆ ಪ್ರಾಣಕ್ಕೆ ಮಧುರವೂ ಎಲುಬು ಗಳಿಗೆ ಕ್ಷೇಮವೂ ಆಗಿವೆ.
- Colossians 3:16–17 ಕೊಲೊಸ್ಸೆಯವರಿಗೆ 3:16–17ಸಕಲ ಜ್ಞಾನದಲ್ಲಿ ಕ್ರಿಸ್ತನ ವಾಕ್ಯವು ನಿಮ್ಮಲ್ಲಿ ಸಮೃದ್ಧಿಯಾಗಿ ವಾಸಿಸಲಿ; ಒಬ್ಬರಿಗೊಬ್ಬರು ಉಪದೇಶಿಸುತ್ತಾ ಬುದ್ದಿ ಹೇಳುತ್ತಾ ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಆತ್ಮ ಸಂಬಂಧವಾದ ಹಾಡುಗಳಿಂದಲೂ ಕೃಪೆಯಿಂದ ನಿಮ್ಮ ಹೃದಯಗಳಲ್ಲಿ ಕರ್ತನಿಗೆ ಹಾಡುತ್ತಾ ಇರ್ರಿ. ನೀವು ಮಾತಿನಿಂದಾಗಲಿ ಕ್ರಿಯೆಯಿಂದಾಗಲಿ ಏನು ಮಾಡಿದರೂ ಅದೆಲ್ಲವನ್ನು ಕರ್ತನಾದ ಯೇಸುವಿನ ಹೆಸರಿನಲ್ಲಿಯೇ ಮಾಡಿರಿ. ಆತನ ಮೂಲಕ ತಂದೆ ಯಾದ ದೇವರಿಗೆ ಕೃತಜ್ಞತಾಸ್ತುತಿಯನ್ನು ಸಲ್ಲಿಸಿರಿ.
- Numbers 19:6 ಅರಣ್ಯಕಾಂಡ 19:6ಯಾಜ ಕನು ದೇವದಾರು ಕಟ್ಟಿಗೆಯನ್ನೂ ಹಿಸ್ಸೋಪನ್ನೂ ರಕ್ತವರ್ಣವನ್ನೂ ತಕ್ಕೊಂಡು ಹಸುವಿನ ದಹನದಲ್ಲಿ ಹಾಕಬೇಕು.
- Ephesians 4:29 ಎಫೆಸದವರಿಗೆ 4:29ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತೂ ಹೊರಡಬಾರದು; ಆದರೆ ಭಕ್ತಿಯನ್ನು ವೃದ್ಧಿ ಮಾಡುವಂಥ ಒಳ್ಳೆಮಾತು ಇದ್ದರೆ ಕೇಳುವವರ ಹಿತ ಕ್ಕಾಗಿ ಅದನ್ನು ಆಡಿರಿ.
- Genesis 32:10 ಆದಿಕಾಂಡ 32:10ನೀನು ನಿನ್ನ ದಾಸನಿಗೆ ತೋರಿಸಿದ ಎಲ್ಲಾ ಕರುಣೆಗಳಿಗೂ ಎಲ್ಲಾ ಸತ್ಯಕ್ಕೂ ಅಯೋಗ್ಯನಾಗಿದ್ದೇನೆ. ಯಾಕಂದರೆ ನಾನು ಮೊದಲು ಈ ಯೊರ್ದನ್ ಹೊಳೆಯನ್ನು ದಾಟಿದಾಗ ನನಗೆ ಕೋಲು ಮಾತ್ರವೇ ಇತ್ತು; ಈಗ ಎರಡು ಗುಂಪುಗಳುಳ್ಳವನಾದೆನು.
- Matthew 12:35 ಮತ್ತಾಯನು 12:35ಒಳ್ಳೇಮನುಷ್ಯನು ಹೃದಯದ ಒಳ್ಳೇಬೊಕ್ಕಸದಿಂದ ಒಳ್ಳೆಯವುಗಳನ್ನು ಹೊರಗೆ ತರುತ್ತಾನೆ; ಮತ್ತು ಕೆಟ್ಟಮನುಷ್ಯನು ಕೆಟ್ಟಬೊಕ್ಕಸದಿಂದ ಕೆಟ್ಟವುಗಳನ್ನು ಹೊರಗೆ ತರುತ್ತಾನೆ.
- Psalm 45:2 ಕೀರ್ತನೆಗಳು 45:2ನೀನು ಮನುಷ್ಯರ ಮಕ್ಕಳಿಗಿಂತ ಅತಿ ಸುಂದರ ನಾಗಿದ್ದೀ; ನಿನ್ನ ತುಟಿಗಳಲ್ಲಿ ಕೃಪೆಯು ಹೊಯಿದದೆ; ಆದದರಿಂದ ದೇವರು ಎಂದೆಂದಿಗೂ ನಿನ್ನನ್ನು ಆಶೀ ರ್ವದಿಸಿದ್ದಾನೆ.
- Numbers 4:8 ಅರಣ್ಯಕಾಂಡ 4:8ಅವೆ ಲ್ಲವುಗಳ ಮೇಲೆ ಕಡುಗೆಂಪಾದ ವಸ್ತ್ರವನ್ನು ಹಾಸಿ ಅದನ್ನು ಕಡಲು ಹಂದಿಯ ಚರ್ಮಗಳ ಹೊದಿಕೆಯಿಂದ ಹೊದಿಸಿ ಅದರ ಕೋಲುಗಳನ್ನು ಇಡಬೇಕು.