Psalms · chapter 45 · verse 2
Psalm 45:2 in Kannada
ನೀನು ಮನುಷ್ಯರ ಮಕ್ಕಳಿಗಿಂತ ಅತಿ ಸುಂದರ ನಾಗಿದ್ದೀ; ನಿನ್ನ ತುಟಿಗಳಲ್ಲಿ ಕೃಪೆಯು ಹೊಯಿದದೆ; ಆದದರಿಂದ ದೇವರು ಎಂದೆಂದಿಗೂ ನಿನ್ನನ್ನು ಆಶೀ ರ್ವದಿಸಿದ್ದಾನೆ.
Neenu manushyara makkaliginta ati sundara naagiddee; ninna tutigalalli krupeyu hoyidade; aadadarinda devaru endendigoo ninnannu aashee rvadisiddaane.
Psalm 45:2 in English
- King James Version (KJV)
- Thou art fairer than the children of men: grace is poured into thy lips: therefore God hath blessed thee for ever.
- World English Bible (WEB)
- You are the most excellent of the sons of men. Grace has anointed your lips, therefore God has blessed you forever.
- American Standard Version (ASV)
- Thou art fairer than the children of men; Grace is poured into thy lips: Therefore God hath blessed thee for ever.
- Bible in Basic English (BBE)
- You are fairer than the children of men; grace is flowing through your lips; for this cause the blessing of God is with you for ever.
- Darby Translation (DBY)
- Thou art fairer than the sons of men; grace is poured into thy lips: therefore God hath blessed thee for ever.
- Webster's Bible (WBS)
- Thou art fairer than the children of men: grace is poured into thy lips: therefore God hath blessed thee for ever.
- Young's Literal Translation (YLT)
- Thou hast been beautified above the sons of men, Grace hath been poured into thy lips, Therefore hath God blessed thee to the age.
Read in context
- 1ನನ್ನ ಹೃದಯವು ಒಂದು ದಿವ್ಯ ವಿಷಯವನ್ನು ರಚಿಸುತ್ತಿರುವದು; ಅರಸನನ್ನು ಕುರಿತು ನಾನು ಮಾಡಿದವುಗಳನ್ನು ವಿವರಿಸುತ್ತೇನೆ; ನನ್ನ ನಾಲಿಗೆಯು ಬರೆಯುವವನ ಲೇಖನಿಯಂತೆ ಸಿದ್ಧವಾಗಿದೆ.
- 2ನೀನು ಮನುಷ್ಯರ ಮಕ್ಕಳಿಗಿಂತ ಅತಿ ಸುಂದರ ನಾಗಿದ್ದೀ; ನಿನ್ನ ತುಟಿಗಳಲ್ಲಿ ಕೃಪೆಯು ಹೊಯಿದದೆ; ಆದದರಿಂದ ದೇವರು ಎಂದೆಂದಿಗೂ ನಿನ್ನನ್ನು ಆಶೀ ರ್ವದಿಸಿದ್ದಾನೆ.
- 3ಓ ಪರಾಕ್ರಮಿಯೇ, ನಿನ್ನ ಮಹಿಮೆಯಿಂದಲೂ ಘನತೆಯಿಂದಲೂ ನಿನ್ನ ಕತ್ತಿಯನ್ನು ಸೊಂಟಕ್ಕೆ ಬಿಗಿ ದುಕೋ.
- 4ಸತ್ಯತೆ ಸಾತ್ವಿಕತೆ ನೀತಿಗೋಸ್ಕರವೂ ನಿನ್ನ ಘನತೆಯಿಂದ ಅಭಿವೃದ್ಧಿಹೊಂದಿ ಸವಾರಿಮಾಡು; ನಿನ್ನ ಬಲಗೈ ಭಯಂಕರವಾದವುಗಳನ್ನು ನಿನಗೆ ಕಲಿಸುವದು.
Cross references
- Luke 4:22 ಲೂಕನು 4:22ಎಲ್ಲರೂ ಆತನಿಗೆ ಸಾಕ್ಷಿಕೊಟ್ಟು ಆತನ ಬಾಯಿಂದ ಹೊರಟ ಕೃಪಾವಾಕ್ಯಗಳಿಗಾಗಿ ಆಶ್ಚರ್ಯಪಟ್ಟು-- ಈತನು ಯೋಸೇಫನ ಮಗನಲ್ಲವೇ ಅಂದರು.
- Song of Solomon 5:10–16 ಪರಮಗೀತೆ 5:10–16ನನ್ನ ಪ್ರಿಯನು ಬಿಳುಪೂ ಕೆಂಪೂ ಉಳ್ಳವನು; ಹತ್ತು ಸಾವಿರ ಜನರಲ್ಲಿ ಮೇಲಾದವನು. ಅವನ ತಲೆಯು ಅತಿ ಚೊಕ್ಕ ಬಂಗಾರದ ಹಾಗೆಯೂ ಅವನ ಕೂದಲು ಗುಂಗುರು ಕೂದಲೂ ಕಾಗೆಯ ಹಾಗೆ ಕಪ್ಪಾಗಿಯೂ ಅವೆ. ಅವನ ಕಣ್ಣುಗಳು ಯುಕ್ತವಾಗಿ ಇರಿಸಲ್ಪಟ್ಟು ಹಾಲಿನಿಂದ ತೊಳೆಯಲ್ಪಟ್ಟ ಜಲದ ಕಾಲಿವೆಗಳ ಬಳಿಯಲ್ಲಿರುವ ಪಾರಿವಾಳಗಳ ಕಣ್ಣುಗಳ ಹಾಗೆ ಅವೆ. ಅವನ ಕೆನ್ನೆಗಳು ಸುಗಂಧಮಡಿಯ ಹಾಗೆಯೂ ಸುವಾಸನೆಯ ಪುಷ್ಪಗಳ ಹಾಗೆಯೂ ಅವೆ. ಅವನ ತುಟಿಗಳು ತಾವರೆಗಳ ಹಾಗೆ ಸೋರುವ ಸುಗಂಧ ರಕ್ತಬೋಳವನ್ನು ಸುರಿಯುತ್ತವೆ. ಅವನ ಕೈಗಳು ಬೆರುಲ್ಲಗಳಿಂದ ಜೋಡಿಸಲ್ಪಟ್ಟ ಬಂಗಾರದ ಉಂಗುರಗಳಾಗಿವೆ. ಅವನ ಮೈ ನೀಲಗಳಿಂದ ಖಚಿಸ ಲ್ಪಟ್ಟ ಹೊಳೆಯುವ ದಂತದ ಹಾಗೆ ಅದೆ. ಅವನ ಕಾಲುಗಳು ಶುದ್ಧ ಬಂಗಾರದ ಗದ್ದಿಗೆಯ ಮೇಲೆ ಇರಿಸಿದ ಬಿಳೀ ಕಲ್ಲಿನ ಸ್ತಂಭಗಳ ಹಾಗೆ ಅವೆ. ಅವನ ಮುಖವು ಲೆಬನೋನಿನ ಹಾಗೆ ದೇವದಾರುಗಳ ಹಾಗೆ ಶ್ರೇಷ್ಠವಾಗಿದೆ.ಯೆರೂಸಲೇಮಿನ ಕುಮಾರ್ತೆ ಯರೇ, ಅವನ ಬಾಯಿ ಬಹು ಮಧುರವಾಗಿದೆ; ಹೌದು, ಅವನು ಸರ್ವಾಂಗ ಸುಂದರನು. ಇವನೇ ನನ್ನ ಪ್ರಿಯನು, ಇವನೇ ನನ್ನ ಸ್ನೇಹಿತನು. ಯೆರೂಸಲೇಮಿನ ಕುಮಾರ್ತೆ ಯರೇ, ಅವನ ಬಾಯಿ ಬಹು ಮಧುರವಾಗಿದೆ; ಹೌದು, ಅವನು ಸರ್ವಾಂಗ ಸುಂದರನು. ಇವನೇ ನನ್ನ ಪ್ರಿಯನು, ಇವನೇ ನನ್ನ ಸ್ನೇಹಿತನು.
- Psalm 21:6 ಕೀರ್ತನೆಗಳು 21:6ನೀನು ಎಂದೆಂದಿಗೂ ಅವನನ್ನು ಅಧಿಕವಾಗಿ ಆಶೀರ್ವಾದ ಮಾಡಿದ್ದೀ. ನಿನ್ನ ಮುಖದ ಮುಂದೆ ಅವನನ್ನು ಅಧಿಕ ವಾಗಿ ಸಂತೋಷಪಡುವಂತೆ ಮಾಡಿದ್ದೀ.
- John 7:46 ಯೋಹಾನನು 7:46ಅದಕ್ಕೆ ಅಧಿಕಾರಿಗಳು ಪ್ರತ್ಯುತ್ತರವಾಗಿ--ಈ ಮನುಷ್ಯನಂತೆ ಯಾವನೂ ಎಂದೂ ಮಾತನಾಡಲಿಲ್ಲ ಅಂದರು.
- Hebrews 7:26 ಇಬ್ರಿಯರಿಗೆ 7:26ಇಂಥವನೇ ನಮಗೆ ಬೇಕಾದ ಮಹಾ ಯಾಜಕನು. ಈತನು ಪರಿಶುದ್ಧನೂ ಕೇಡು ಮಾಡ ದವನೂ ನಿಷ್ಕಳಂಕನೂ ಪಾಪಿಗಳಲ್ಲಿ ಸೇರದೆ ಪ್ರತ್ಯೇಕವಾಗಿರುವಾತನು ಆಕಾಶಗಳಿಗಿಂತ ಉನ್ನತವಾಗಿ ಮಾಡಲ್ಪಟ್ಟಾತನೂ ಆಗಿದ್ದಾನೆ.
- John 1:14 ಯೋಹಾನನು 1:14ಇದಲ್ಲದೆ ಆ ವಾಕ್ಯವಾಗಿರುವಾತನು ಶರೀರಧಾರಿ ಯಾಗಿ ಕೃಪೆಯಿಂದಲೂ ಸತ್ಯದಿಂದಲೂ ತುಂಬಿ ನಮ್ಮ ಮಧ್ಯದಲ್ಲಿ ವಾಸಮಾಡಿದನು. (ತಂದೆಯಿಂದ ಹುಟ್ಟಿದ ಒಬ್ಬನೇ ಮಗನ ಮಹಿಮೆಯಂತೆ ನಾವು ಆತನ ಮಹಿಮೆಯನ್ನು ನೋಡಿದೆವು).
- Song of Solomon 2:3 ಪರಮಗೀತೆ 2:3ಅಡವಿಯ ಗಿಡಗಳಲ್ಲಿ ಸೇಬು ಮರ ಹೇಗೋ ಕುಮಾರರಲ್ಲಿ ನನ್ನ ಪ್ರಿಯನು ಹಾಗೆಯೇ. ನಾನು ಅವನ ನೆರಳಿನಲ್ಲಿ ಬಹು ಆನಂದವಾಗಿ ಕುಳಿತು ಕೊಂಡೆನು; ಅವನ ಫಲವು ನನ್ನ ರುಚಿಗೆ ಮಧುರ ವಾಗಿತ್ತು.
- Proverbs 22:11 ಜ್ಞಾನೋಕ್ತಿಗಳು 22:11ಹೃದಯ ಶುದ್ಧಿಯನ್ನು ಪ್ರೀತಿಸುವವನಿಗೆ ತನ್ನ ತುಟಿಗಳ ಕೃಪೆಗಾಗಿ ಅರಸನು ಅವನಿಗೆ ಸ್ನೇಹಿತ ನಾಗಿರುವನು.
- Psalm 72:17–19 ಕೀರ್ತನೆಗಳು 72:17–19ಆತನ ನಾಮವು ಎಂದೆಂದಿಗೂ ಇರುವದು; ಸೂರ್ಯನು ಇರುವವರೆಗೂ ಆತನ ಹೆಸರು ಇರು ವದು. ಮನುಷ್ಯರು ಆತನಲ್ಲಿ ಆಶೀರ್ವಾದ ಹೊಂದು ವರು. ಎಲ್ಲಾ ಜನಾಂಗಗಳು ಆತನನ್ನು ಭಾಗ್ಯವಂತ ನೆಂದು ಕರೆಯುವರು. ಒಬ್ಬನೇ ಅದ್ಭುತಗಳನ್ನು ಮಾಡುವ ಇಸ್ರಾಯೇಲಿನ ದೇವರಾಗಿರುವ ಕರ್ತನಾದ ದೇವರಿಗೆ ಸ್ತೋತ್ರವಾಗಲಿ. ಆತನ ಮಹಿಮೆಯುಳ್ಳ ಹೆಸರಿಗೆ ಎಂದೆಂದಿಗೂ ಸ್ತೋತ್ರವಾಗಲಿ; ಆತನ ಮಹಿ ಮೆಯು ಭೂಮಿಯನ್ನೆಲ್ಲಾ ತುಂಬಲಿ. ಆಮೆನ್. ಆಮೆನ್.ಇಷಯನ ಮಗನಾದ ದಾವೀದನ ಪ್ರಾರ್ಥನೆಗಳು ಮುಗಿದವೆ.
- Revelation 1:13–18 ಪ್ರಕಟನೆ 1:13–18ಆ ಏಳು ದೀಪಸ್ತಂಭಗಳ ಮಧ್ಯದಲ್ಲಿ ಮನುಷ್ಯಕುಮಾರನಂತಿದ್ದಾತನನ್ನು ಕಂಡೆನು. ಆತನು ಪಾದದವರೆಗೆ ಇರುವ ನಿಲುವಂಗಿಯನ್ನು ತೊಟ್ಟು ಚಿನ್ನದ ಪಟ್ಟಿಯನ್ನು ಎದೆಗೆ ಕಟ್ಟಿಕೊಂಡಿದ್ದನು. ಆತನ ತಲೆ ಮತ್ತು ಕೂದಲು ಬಿಳೀ ಉಣ್ಣೆಯಂತೆಯೂ ಹಿಮದಂತೆಯೂ ಬೆಳ್ಳಗಿತ್ತು. ಆತನ ಕಣ್ಣುಗಳು ಬೆಂಕಿಯ ಉರಿಯಂತೆ ಇದ್ದವು. ಆತನ ಪಾದಗಳು ಕುಲುಮೆ ಯಲ್ಲಿ ಕಾಯಿಸಿದ ಶುದ್ಧವಾದ ತಾಮ್ರದಂತೆಯೂ ಆತನ ಧ್ವನಿಯು ಜಲಪ್ರವಾಹದ ಘೋಷದಂತೆಯೂ ಇದ್ದವು. ಆತನ ಬಲಗೈಯಲ್ಲಿ ಏಳು ನಕ್ಷತ್ರಗಳಿದ್ದವು; ಆತನ ಬಾಯೊಳಗಿಂದ ಹದವಾದ ಇಬ್ಬಾಯಿ ಕತ್ತಿಯು ಹೊರಟಿತು. ಆತನ ಮುಖವು ಸೂರ್ಯನು ತನ್ನ ಬಲದಲ್ಲಿ ಪ್ರಕಾಶಿಸುವಂತಿತ್ತು. ನಾನು ಆತನನ್ನು ಕಂಡಾಗ ಸತ್ತವನ ಹಾಗೆ ಆತನ ಪಾದಗಳ ಮುಂದೆ ಬಿದ್ದೆನು. ಆತನು ತನ್ನ ಬಲಗೈಯನ್ನು ನನ್ನ ಮೇಲಿಟ್ಟು--ಹೆದರಬೇಡ, ನಾನು ಮೊದಲನೆಯ ವನೂ ಕಡೆಯವನೂ ಆಗಿದ್ದೇನೆ. ಸತ್ತವನಾದೆನು,ಈಗ ಬದುಕುವವನಾಗಿದ್ದೇನೆ. ಇಗೋ, ನಾನು ಎಂದೆಂ ದಿಗೂ ಬದುಕುವವನಾಗಿದ್ದೇನೆ. ಆಮೆನ್. ನರಕದ ಮತ್ತು ಮರಣದ ಬೀಗದ ಕೈಗಳೂ ನನ್ನಲ್ಲಿ ಅವೆ.
- Matthew 17:2 ಮತ್ತಾಯನು 17:2ಅಲ್ಲಿ ಆತನು ಅವರ ಮುಂದೆ ರೂಪಾಂತರ ಗೊಂಡನು. ಆತನ ಮುಖವು ಸೂರ್ಯನಂತೆ ಪ್ರಕಾಶಿಸಿತು; ಮತ್ತು ಆತನ ಉಡುಪು ಬೆಳಕಿನಂತೆ ಬೆಳ್ಳಗಿತ್ತು.
- Zechariah 9:17 ಜೆಕರ್ಯ 9:17ಆತನ ಒಳ್ಳೇತನವು ಎಷ್ಟೋ ದೊಡ್ಡದು; ಆತನ ಸೌಂದರ್ಯವು ಎಷ್ಟು ಮಹತ್ತಾ ದದ್ದು! ಧಾನ್ಯವು ಯೌವನಸ್ಥರನ್ನೂ ದ್ರಾಕ್ಷಾರಸವು ಯುವತಿಯರನ್ನೂ ಹರ್ಷಗೊಳಿಸುವವು.